Difference between revisions of "LibreOffice-Suite-Base/C2/Enter-and-update-data-in-a-form/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- |00:02 | ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ...")
 
 
Line 239: Line 239:
 
|-
 
|-
 
|09:44
 
|09:44
| ಈ ಸ್ಕ್ರಿಪ್ಟ್ ನ ಅನುವಾದಕ ಮಂಗಳೂರಿನಿಂದ  ಮೆಲ್ವಿನ್ ಮತ್ತು ಧ್ವನಿ ---------- .
+
| ಈ ಸ್ಕ್ರಿಪ್ಟ್ ನ ಅನುವಾದಕ ಮಂಗಳೂರಿನಿಂದ  ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
ಧನ್ಯವಾದಗಳು.
 
|-
 
|-

Latest revision as of 17:40, 24 March 2020

Time Narration
00:02 ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
00:09 ʻಫಾರ್ಮ್ʼ ನಲ್ಲಿ ಡೇಟಾ ನಮೂದಿಸಲು ಮತ್ತು ಅಪ್ಡೇಟ್ ಮಾಡಲು ಕಲಿಯುವೆವು.
00:12 ಕಳೆದ ಟ್ಯುಟೋರಿಯಲ್ ನಲ್ಲಿ ನಾವು, ಫಾರ್ಮ್ ಗೆ ʻಫಾರ್ಮ್ ಕಂಟ್ರೋಲ್ಸ್ʼ ಸೇರಿಸುವುದನ್ನು ಕಲಿತೆವು.
00:19 ಈ ಟ್ಯುಟೋರಿಯಲ್ ನಲ್ಲಿ, ನಾವು ಫಾರ್ಮ್ ಅನ್ನು ಬಳಸಿ ಡೇಟಾವನ್ನು ನಮೂದಿಸಲು ಮತ್ತು ಅಪ್ಡೇಟ್ ಮಾಡಲು ಕಲಿಯೋಣ.
00:27 ಇದನ್ನು ಮಾಡುವ ಮೊದಲು, ನಮ್ಮ ಫಾರ್ಮ್ ಡಿಸೈನ್ ಗೆ ಇನ್ನೂ ಮೂರು ಮಾರ್ಪಾಡುಗಳನ್ನು ಮಾಡೋಣ.
00:36 'LibreOffice Base' ಪ್ರೋಗ್ರಾಂ ಈಗಾಗಲೇ ತೆರೆದಿರದಿದ್ದಲ್ಲಿ ಅದನ್ನು ನಾವು ಮೊದಲಿಗೆ ತೆರೆಯೋಣ.
00:51 ಮತ್ತು ನಮ್ಮ 'Library database' ಅನ್ನು
00:54 'File' ಮೆನು ಅಡಿಯಲ್ಲಿ 'Open' ಅನ್ನು ಕ್ಲಿಕ್ ಮಾಡಿ ತೆರೆಯೋಣ.
00:58 ನಾವೀಗ Library database ನಲ್ಲಿದ್ದೇವೆ.
01:02 ಮತ್ತು, ನಾವೀಗ 'Books Issued to Members' ಫಾರ್ಮ್ ತೆರೆಯುವೆವು.
01:07 ಇದನ್ನು ಮಾಡಲು, ಎಡ ಪ್ಯಾನೆಲ್ ನಲ್ಲಿ 'Forms' ಐಕಾನ್ ಮೇಲೆ ಕ್ಲಿಕ್ ಮಾಡೋಣ. ನಂತರ ಬಲ ಪ್ಯಾನೆಲ್ ನಲ್ಲಿ 'Books Issued to Members' ಫಾರ್ಮ್ ಮೇಲೆ ರೈಟ್-ಕ್ಲಿಕ್ ಮಾಡೋಣ.
01:20 ನಂತರ 'Edit' ಮೇಲೆ ಕ್ಲಿಕ್ ಮಾಡೋಣ.
01:24 ನಾವೀಗ 'Form Design' ವಿಂಡೋದಲ್ಲಿದ್ದೇವೆ.
01:28 ಇಲ್ಲಿ, ಫಾರ್ಮ್ ಚಿಕ್ಕದು ಹಾಗೂ ಚೊಕ್ಕಾಗಿ ಕಾಣುವಂತೆ ರಿಸೈಜ್ ಮಾಡೋಣ.
01:36 ಇದಕ್ಕಾಗಿ, ನಮ್ಮ 'ಫಾರ್ಮ್' ವಿಂಡೋದ ಎತ್ತರ ಮತ್ತು ಉದ್ದವನ್ನು ಕಡಿಮೆ ಮಾಡೋಣ.
01:43 ಫಾರ್ಮ್ ವಿಂಡೋದ ಮೇಲ್ಭಾಗ ಮತ್ತು ಬದಿಗಳಲ್ಲಿ ಕ್ಲಿಕ್, ಡ್ರ್ಯಾಗ್ ಮತ್ತು ಡ್ರಾಪ್ ಮಾಡುವ ಮೂಲಕ ನಾವಿದನ್ನು ಮಾಡಲಿದ್ದೇವೆ.
01:51 ನಂತರ, ನಮ್ಮ ಫಾರ್ಮ್ ನಲ್ಲಿ ಶೀರ್ಷಿಕೆಯ ಫಾಂಟ್ ಅನ್ನು ಬದಲಾಯಿಸೋಣ.
01:57 ಮೇಲ್ತುದಿಯಲ್ಲಿರುವ 'Formatting toolbar' ನಲ್ಲಿ ಫಾಂಟ್ ಅನ್ನು 'Arial Black', Size 12 ಕ್ಕೆ ಬದಲಾಯಿಸೋಣ.
02:12 ಕೊನೆಯಲ್ಲಿ, 'ಫಾರ್ಮ್ ಕಂಟ್ರೋಲ್ಸ್' ನ 'Tab Order' ಅನ್ನು ನೋಡೋಣ.
02:19 ಫಾರ್ಮ್ ಕಂಟ್ರೋಲ್ಸ್ ನಲ್ಲಿ, ಕೀಬೋರ್ಡ್ ಟ್ಯಾಬ್ ಕೀಗಳನ್ನು ಬಳಸಿ, ನಿರ್ದಿಷ್ಟ ಕ್ರಮದಲ್ಲಿ ನ್ಯಾವಿಗೇಟ್ ಮಾಡಲು ಇದು ನಮಗೆ ಸಹಾಯ ಮಾಡುತ್ತದೆ.
02:29 ಉದಾಹರಣೆಗೆ, ಮೇಲ್ತುದಿಯಿಂದ ಕೆಳತುದಿಯವರೆಗೆ.
02:33 ಇದನ್ನು ಟ್ಯಾಬ್ ಆರ್ಡರ್ ಎಂದು ಕರೆಯಲಾಗುತ್ತದೆ.
02:37 'Base', ಫಾರ್ಮ್ ನಲ್ಲಿ ಫಾರ್ಮ್ ಕಂಟ್ರೋಲ್ಸ್ ನ ಟ್ಯಾಬ್ ಆರ್ಡರ್ ಅನ್ನು ಮೇಲ್ತುದಿಯಿಂದ ಕೆಳತುದಿಯವರೆಗೆ ತಂತಾನೆ ಸೆಟ್ ಮಾಡುತ್ತದೆ.
02:47 ಆದರೆ ಒಂದಷ್ಟು ಟೆಕ್ಸ್ಟ್ ಬಾಕ್ಸ್ ಗಳನ್ನು ತೆಗೆದು, ಎರಡು ಹೊಸ ಲಿಸ್ಟ್ ಬಾಕ್ಸ್ ಗಳು ಮತ್ತು ನಾಲ್ಕು 'ಬಟನ್' ಗಳನ್ನು ಸೇರಿಸಿರುವುದರಿಂದ, ನಾವು ಟ್ಯಾಬ್ ಆರ್ಡರ್ ಅನ್ನು ಅಸ್ತವ್ಯಸ್ತಗೊಳಿಸಿರಬಹುದು.
03:00 ಆದ್ದರಿಂದ ಇದನ್ನು ನಾವು ಈಗಲೆ ಸರಿಪಡಿಸೋಣ.
03:05 ಸಾಮಾನ್ಯವಾಗಿ ವಿಂಡೋದ ಕೆಳಭಾಗದಲ್ಲಿ ಕಂಡುಬರುವ 'Form Design' ಟೂಲ್ ಬಾರ್ ನಲ್ಲಿ, ನಾವು ಐಕಾನ್ ಗಳನ್ನು ಬ್ರೌಸ್ ಮಾಡುವೆವು.
03:16 ಮತ್ತು ಟೂಲ್- ಟಿಪ್, 'Activation order' ಎಂದು ಹೇಳುತ್ತಿರುವ ಐಕಾನ್ ಅನ್ನು ನೋಡುವೆವು.
03:25 ಈ ಐಕಾನ್ ಮೇಲೆ ಕ್ಲಿಕ್ ಮಾಡೋಣ.
03:29 ಈಗ, 'Tab Order' ಎಂಬ ಶೀರ್ಷಿಕೆಯ ಒಂದು ಸಣ್ಣ ಪಾಪ್-ಅಪ್ ವಿಂಡೋ ಅನ್ನು ನಾವು ಕಾಣುತ್ತೇವೆ.
03:38 ಈ ಫಾರ್ಮ್ ಕಂಟ್ರೋಲ್ಸ್ ಅನ್ನು ವ್ಯವಸ್ಥೆಗೊಳಿಸಲು, ನಾವು ಈ ಐಟಂಗಳನ್ನು ಕ್ಲಿಕ್, ಡ್ರ್ಯಾಗ್ ಮತ್ತು ಡ್ರಾಪ್ ಮಾಡಬಹುದು.
03:46 ಅಥವಾ, ನಾವು 'Move up' ಅಥವಾ 'Move down' ಬಟನ್ ಗಳನ್ನು ಬಳಸಬಹುದು.
03:52 ಹೀಗೆ, ಈ ಚಿತ್ರದಲ್ಲಿ ತೋರಿಸಿದಂತೆ ಟ್ಯಾಬ್-ಆರ್ಡರ್ ಅನ್ನು ವ್ಯವಸ್ಥೆಗೊಳಿಸೋಣ. <pause>
04:04 ನಮ್ಮ ಕೆಲಸ ಮುಗಿಯಿತು. ಈಗ, ಈ ಬದಲಾವಣೆಗಳನ್ನು 'ಸೇವ್' ಮಾಡಲು 'OK' ಬಟನ್ ಮೇಲೆ ಕ್ಲಿಕ್ ಮಾಡೋಣ.
04:12 ಸರಿ, ಈಗ 'Control S' ಒತ್ತಿ, ನಮ್ಮ ಫಾರ್ಮ್ ಅನ್ನು ಸೇವ್ ಮಾಡೋಣ.
04:19 ನಂತರ ನಾವು 'ಫಾರ್ಮ್' ವಿಂಡೋ ಅನ್ನು ಮುಚ್ಚೋಣ.
04:24 ಇಲ್ಲಿಗೆ ನಮ್ಮ ಫಾರ್ಮ್ ಡಿಸೈನ್ ಕೆಲಸ ಮುಗಿಯಿತು.
04:29 ಈಗ, ನಮ್ಮ ಫಾರ್ಮ್ ಅನ್ನು ಪರೀಕ್ಷಿಸೋಣ.
04:33 ಮೇನ್ Base ವಿಂಡೋದಲ್ಲಿ, 'Books Issued to Members' ಫಾರ್ಮ್ ಮೇಲೆ ಡಬಲ್- ಕ್ಲಿಕ್ ಮಾಡಿ ಅದನ್ನು ತೆರೆಯೋಣ.
04:42 ಈಗ ಫಾರ್ಮ್, ಡೇಟಾ-ಎಂಟ್ರಿ ಮೋಡ್ ನಲ್ಲಿ ತೆರೆದಿದೆ.
04:47 'Form to track Books issued to Members' ಎಂದು ಹೇಳುವ ಶೀರ್ಷಿಕೆಯನ್ನು ಗಮನಿಸಿ.
04:54 ಮತ್ತು ಇಲ್ಲಿ, 'book Ids' ಮತ್ತು 'member Ids' ಬದಲಿಗೆ ನಾವು ‘book title’ ಮತ್ತು ‘member name’ ಅನ್ನು ಕಾಣಬಹುದು.
05:03 ಇದು 'Books Issued' ಟೇಬಲ್ ನ ಮೊದಲ ರೆಕಾರ್ಡ್ ಆಗಿದೆ; 'Book title' ಗಾಗಿ, 'An Autobiography' ಅನ್ನು ಮತ್ತು
05:15 'Member name' ಗಾಗಿ, 'Nisha Sharma' ಅನ್ನು ಹೈಲೈಟ್ ಮಾಡಿರುವುದನ್ನು ನಾವು ಕಾಣಬಹುದು.
05:21 ಮತ್ತು ಉಳಿದ ಫೀಲ್ಡ್ ಗಳನ್ನು ಸಹ ನಾವು ನೋಡಬಹುದು.
05:25 ನಾವೀಗ ಕೆಳಭಾಗದಲ್ಲಿ ಇರುವ 'Form Navigation' ಟೂಲ್ ಬಾರ್ ಐಕಾನ್ ಗಳನ್ನು ಬಳಸಿ ಎಲ್ಲಾ ರೆಕಾರ್ಡ್ ಗಳನ್ನು ನೋಡಬಹುದು.
05:45 ಈಗ ಎರಡನೇ 'ರೆಕಾರ್ಡ್' ಗೆ ಹೋಗೋಣ.
05:49 ಇಲ್ಲಿ ಸದಸ್ಯ ಜೇಕಬ್ ರಾಬಿನ್ 'Macbeth' ಎಂಬ ಪುಸ್ತಕವನ್ನು ಪಡೆದಿದ್ದಾರೆ ಎಂದು ನಾವು ನೋಡಬಹುದು. ಅವರೀಗ ಈ ಪುಸ್ತಕವನ್ನು ಹಿಂದಿರುಗಿಸುತ್ತಿದ್ದಾರೆ ಎಂದು ಭಾವಿಸೋಣ.
06:01 ಈಗ, ಈ ಮಾಹಿತಿಯನ್ನು ಈ ರೆಕಾರ್ಡ್ ನಲ್ಲಿ ಅಪ್ಡೇಟ್ ಮಾಡೋಣ.
06:07 ಇದಕ್ಕಾಗಿ ನಾವು, ನಿಜವಾದ ವಾಪಸಾತಿ ದಿನಾಂಕವನ್ನು ಟೈಪ್ ಮಾಡುತ್ತೇವೆ, ಉದಾಹರಣೆಗೆ - 7/7/11
06:17 ಮತ್ತು 'Checked In' ಫೀಲ್ಡ್ ಅನ್ನು ಗುರುತು ಹಾಕುತ್ತೇವೆ.
06:21 ಈ ಮಾಹಿತಿಯನ್ನು 'ಸೇವ್' ಮಾಡಲು, ನಾವು ಇಲ್ಲಿ ಇಟ್ಟಿರುವ 'Save Record' ಬಟನ್ ಅನ್ನು ಒತ್ತುತ್ತೇವೆ.
06:30 ಈ ಬಟನ್ ಈಗ ಮಂಕಾಗಿರುವುದನ್ನು ಗಮನಿಸಿ. ಅಂದರೆ ಇದನ್ನು ಈಗ ನಿಷ್ಕ್ರಿಯಗೊಳಿಸಲಾಗಿದೆ.
06:38 ಆದರೆ ನಾವು ಈ ರೆಕಾರ್ಡ್ ಅನ್ನು ಮತ್ತೆ 'ಎಡಿಟ್' ಮಾಡಿದಾಗ, ಈ ಬಟನ್ ಮತ್ತೆ ಸಕ್ರಿಯ (ಎನೇಬಲ್) ಆಗುತ್ತದೆ.
06:45 ಸರಿ, ನಾವೀಗ 'Undo changes' ಬಟನ್ ಅನ್ನು ಪರೀಕ್ಷಿಸೋಣ.
06:50 ಇದಕ್ಕಾಗಿ, 'Book Title - Conquest of Self' ಮೇಲೆ ಕ್ಲಿಕ್ ಮಾಡಿ. ನಂತರ 'Actual Return Date' ಫೀಲ್ಡ್ ನಲ್ಲಿ 5/7/11 ಎಂದು ಟೈಪ್ ಮಾಡಿ, ನಾವು ರೆಕಾರ್ಡ್ ಅನ್ನು ಎಡಿಟ್ ಮಾಡೋಣ.
07:06 'Save record' ಬಟನ್ ಮತ್ತು 'Undo changes' ಬಟನ್ ಗಳೆರಡೂ ಬಳಕೆಗಾಗಿ ಎನೇಬಲ್ ಆಗಿರುವುದನ್ನು ಗಮನಿಸಿ.
07:15 ನಾವು, ಈಗ 'Undo Changes' ಬಟನ್ ಮೇಲೆ ಕ್ಲಿಕ್ ಮಾಡಿ, ಏನಾಗುತ್ತದೆ ಎಂಬುದನ್ನು ನೋಡೋಣ.
07:22 ನಾವು ಕೊನೆಗೆ ಮಾಡಿದ ಬದಲಾವಣೆಗಳನ್ನು ಅನ್-ಡು ಮಾಡಲಾಗಿದೆ. 'Conquest of Self' ಬದಲಿಗೆ 'Macbeth' ಹೈಲೈಟ್ ಆಗಿದ್ದು, 'Actual return date' 7/7/11 ಆಗಿರುವುದನ್ನು ಗಮನಿಸಿ.
07:37 ನಾವೀಗ 'Delete Record' ಬಟನ್ ಮೇಲೆ ಕ್ಲಿಕ್ ಮಾಡೋಣ. ಅಂದರೆ ನಾವೀಗ ಈ ಎರಡನೇ ರೆಕಾರ್ಡ್ ಅನ್ನು ಡಿಲೀಟ್ ಮಾಡಲು ಯತ್ನಿಸುತ್ತಿದ್ದೇವೆ.
07:47 ಡಿಲೀಟ್ ಗಳ ಬಗ್ಗೆ 'Base' ಜಾಗರೂಕವಾಗಿದೆ. ಹೀಗಾಗಿ ನಮ್ಮನ್ನು ಎಚ್ಚರಿಸಿ ಅದು ದೃಢೀಕರಣವನ್ನು ಕೇಳುತ್ತದೆ.
07:55 ಸದ್ಯಕ್ಕೆ, ನಾವು 'Yes' ಬಟನ್ ಮೇಲೆ ಕ್ಲಿಕ್ ಮಾಡೋಣ.
08:02 ನಿಜವಾಗಿಯೂ 'ರೆಕಾರ್ಡ್' ಡಿಲೀಟ್ ಆಗಿದೆ, ಸ್ಕ್ರೀನ್ ನಿಂದ ಕಾಣೆಯಾಗಿದೆ ಮತ್ತು ಇದರ ಜಾಗದಲ್ಲಿ ಮುಂದಿನ ರೆಕಾರ್ಡ್ ಅನ್ನು ನಾವು ನೋಡಬಹುದು.
08:13 ಕೊನೆಯದಾಗಿ, ಫಾರ್ಮ್ ನಲ್ಲಿ ಕೊನೆಯ ಬಟನ್ ಆಗಿರುವ 'New record' ಮೇಲೆ ಕ್ಲಿಕ್ ಮಾಡಿ ಒಂದು ಹೊಸ ರೆಕಾರ್ಡ್ ಅನ್ನು ಸೇರಿಸೋಣ.
08:22 ಕೆಲವು ವ್ಯಾಲ್ಯೂಗಳನ್ನು ಟೈಪ್ ಮಾಡೋಣ.
08:26 'Issue-Id' ತಂತಾನೆ ಉಂಟಾಗುವ ಫೀಲ್ಡ್ ಆಗಿರುವುದರಿಂದ ನಾವು ಅದನ್ನು ಬಿಟ್ಟು ಬಿಡುತ್ತೇವೆ.
08:33 ಹಾಗೂ ಇಲ್ಲಿ, ಚಿತ್ರದಲ್ಲಿ ತೋರಿಸಿರುವಂತೆ ಡೇಟಾವನ್ನು ಸೇರಿಸುತ್ತೇವೆ.
08:42 ನಮೂದುಗಳನ್ನು ಸೇವ್ ಮಾಡಲು, 'Save Record' ಬಟನ್ ಮೇಲೆ ಕ್ಲಿಕ್ ಮಾಡಿ.
08:47 ಇದು ಹೀಗಿದೆ ನೋಡಿ. ಡೇಟಾವನ್ನು ನಮೂದಿಸಿ ಮತ್ತು ಅಪ್ಡೇಟ್ ಮಾಡಿ ನಾವು 'ಫಾರ್ಮ್' ಅನ್ನು ಪರೀಕ್ಷಿಸಿದ್ದೇವೆ.
08:54 ಇಲ್ಲೊಂದು ಅಸೈನ್ಮೆಂಟ್ ಇದೆ – ಸದಸ್ಯರ ಮಾಹಿತಿಯನ್ನು ತೋರಿಸಲು 'form' ಒಂದನ್ನು ತಯಾರಿಸಿ.
09:00 ಫಾರ್ಮ್ ಚಿಕ್ಕದು ಹಾಗೂ ಚೊಕ್ಕದಾಗಿ ಇರುವಂತೆ ಮಾಡಿ.
09:03 ಫಾಂಟ್ ಅನ್ನು 'bold' ಮಾಡಿ.
09:07 'Save' ಮತ್ತು 'New record' ಬಟನ್ ಗಳನ್ನು ಸೇರಿಸಿ.
09:10 ಇಲ್ಲಿಗೆ ನಾವು Form Data in LibreOffice Base ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
09:17 ಸಂಕ್ಷಿಪ್ತವಾಗಿ, ನಾವು 'ಫಾರ್ಮ್' ನಲ್ಲಿ:
09:20 ಡೇಟಾವನ್ನು ನಮೂದಿಸಲು ಮತ್ತು ಅಪ್ಡೇಟ್ ಮಾಡಲು ಕಲಿತೆವು.
09:23 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ‘ಟಾಕ್ ಟು ಎ ಟೀಚರ್’ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
09:34 ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org.

ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.

09:44 ಈ ಸ್ಕ್ರಿಪ್ಟ್ ನ ಅನುವಾದಕ ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14