Difference between revisions of "LibreOffice-Suite-Base/C2/Create-queries-using-Design-View/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:00 || ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗ...")
 
 
Line 316: Line 316:
 
|-
 
|-
 
||10:10
 
||10:10
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ---------- .
+
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
ಧನ್ಯವಾದಗಳು.
 
|-
 
|-
 
|}
 
|}

Latest revision as of 18:05, 24 March 2020

Time Narration
00:00 ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನಾವು,
00:06 'ಡಿಸೈನ್ ವ್ಯೂ' ಅನ್ನು ಬಳಸಿ 'ಕ್ವೆರಿ' ರಚಿಸಲು,
00:10 'ಕ್ವೆರಿ ಡಿಸೈನ್' ವಿಂಡೋ ಗೆ ಟೇಬಲ್ ಗಳನ್ನು ಸೇರಿಸಲು,
00:13 'ಫೀಲ್ಡ್'ಗಳನ್ನು ಆಯ್ಕೆಮಾಡಲು, 'ಏಲಿಯಸ್'ಗಳನ್ನು ರೂಪಿಸಲು,

ವರ್ಗೀಕರಿಸುವ ಕ್ರಮವನ್ನು ರೂಪಿಸಲು ಮತ್ತು 'ಕ್ವೆರಿ' ಗಾಗಿ ಸರ್ಚ್ ಮಾಡುವ ಬಗೆಯನ್ನು ಒದಗಿಸಲು ಕಲಿಯಲಿದ್ದೇವೆ.

00:23 ಇದಕ್ಕಾಗಿ, ನಮ್ಮ ಪರಿಚಿತ 'Library' ಡೇಟಾಬೇಸ್ನ ಉದಾಹರಣೆಯನ್ನು ನಾವು ತೆಗೆದುಕೊಳ್ಳೋಣ.
00:29 ಈ 'Library' ಡೇಟಾಬೇಸ್ ನಲ್ಲಿ, ನಾವು ಪುಸ್ತಕಗಳು ಮತ್ತು ಸದಸ್ಯರ ಬಗ್ಗೆ ಮಾಹಿತಿಯನ್ನು ಶೇಖರಿಸಿದ್ದೇವೆ.
00:37 ಅಲ್ಲದೆ, ಸದಸ್ಯರಿಗೆ ನೀಡಿರುವ ಪುಸ್ತಕಗಳನ್ನು ಟ್ರ್ಯಾಕ್ ಮಾಡಲು, ನಾವು ಒಂದು 'table' ಅನ್ನು ಸಹ ಹೊಂದಿದ್ದೇವೆ.
00:45 ಸದಸ್ಯರಿಗೆ ನೀಡಿರುವ ಎಲ್ಲಾ ಪುಸ್ತಕಗಳನ್ನು ಪಟ್ಟಿ ಮಾಡಲು ನಾವು ಈಗ ಒಂದು ಹೊಸ 'ಕ್ವೆರಿ' ಯನ್ನು ರಚಿಸಲಿದ್ದೇವೆ.
00:54 ಅಂದರೆ, ಸದಸ್ಯರಿಗೆ ನೀಡಿರುವ ಪುಸ್ತಕಗಳ 'history' ಯನ್ನು ನಾವು ರಚಿಸೋಣ.
01:03 ನಾವು 'Library' ಡೇಟಾಬೇಸ್ ಅನ್ನು ತೆರೆಯೋಣ.
01:07 ಎಡ ಪ್ಯಾನಲ್ ನಲ್ಲಿರುವ 'Queries' ಐಕಾನ್ ಮೇಲೆ ಕ್ಲಿಕ್ ಮಾಡೋಣ.
01:13 ಬಲ ಪ್ಯಾನೆಲ್ ನಲ್ಲಿ, ನಾವು ‘Create Query in Design view’ ಮೇಲೆ ಕ್ಲಿಕ್ ಮಾಡುವೆವು. ಈಗ ನಾವು ಒಂದು ಹೊಸ ವಿಂಡೋಅನ್ನು ನೋಡುತ್ತೇವೆ. ಇದನ್ನು 'Query Design' ವಿಂಡೋ ಎಂದು ಸಹ ಕರೆಯಲಾಗುತ್ತದೆ.
01:28 ಮೇಲ್ಗಡೆ, 'Add Table or Query' ಎಂಬ ಒಂದು ಸಣ್ಣ ಪಾಪ್ – ಅಪ್ ವಿಂಡೋವನ್ನು ಸಹ ನಾವು ನೋಡಬಹುದು.
01:39 ಇಲ್ಲಿಯೇ ನಾವು ಕ್ವೆರಿಗಾಗಿ ಡೇಟಾದ ಮೂಲವನ್ನು (source) ಹೇಳಲಿದ್ದೇವೆ.
01:46 ಸದಸ್ಯರಿಗೆ ಕೊಡಲಾದ ಪುಸ್ತಕಗಳ 'history' ರಚಿಸಲು, ನಮ್ಮ ಕ್ವೆರಿ ಗಾಗಿ ನಮಗೆ ಈ ಮೂರು ಟೇಬಲ್ ಗಳ ಅಗತ್ಯವಿದೆ.
01:57 ನಾವು ಲಿಸ್ಟ್ ನಲ್ಲಿರುವ 'Books' ಟೇಬಲ್ ಮೇಲೆ ಕ್ಲಿಕ್ ಮಾಡಿ, ನಂತರ ಪಾಪ್–ಅಪ್ ವಿಂಡೋನಲ್ಲಿ ಬಲಕ್ಕೆ ಇರುವ 'Add' ಬಟನ್ ಮೇಲೆ ಕ್ಲಿಕ್ ಮಾಡಿ ಇದನ್ನು ಮಾಡುವೆವು.
02:11 ಇದೇ ರೀತಿ ನಾವು 'BooksIssued' ಟೇಬಲ್ ಮತ್ತು 'Members' ಟೇಬಲ್ ಗಳನ್ನು ಸೇರಿಸುವೆವು. <pause>
02:19 “ಕ್ವೆರಿ ಡಿಸೈನ್” ವಿಂಡೋದ ಹಿನ್ನೆಲೆಯಲ್ಲಿ ಮೂರು ಟೇಬಲ್ ಗಳು ಕಾಣಿಸುತ್ತಿರುವುದನ್ನು ನಾವೀಗ ನೋಡಬಹುದು.
02:26 ನಾವೀಗ ಪಾಪ್ – ಅಪ್ ವಿಂಡೋ ಅನ್ನು ಮುಚ್ಚೋಣ.
02:31 ಇದು 'Query design ' ವಿಂಡೋಅನ್ನು ಮುಂದೆ ತರುತ್ತದೆ.
02:39 ಈ ಮೂರು ಟೇಬಲ್ ಗಳು, ವಿಂಡೋದ ಮೇಲಿನ ಅರ್ಧ ಭಾಗದಲ್ಲಿ ಇರುವುದನ್ನು ಗಮನಿಸಿ.
02:46 ಇಲ್ಲಿ, ಈ ಟೇಬಲ್ ಗಳ ನಡುವೆ ಒಂದಷ್ಟು ಸ್ಥಳಾವಕಾಶವನ್ನು ನೀಡೋಣ.
02:53 ನಾವೀಗ 'Members' ಟೇಬಲ್ ಅನ್ನು ಕ್ಲಿಕ್ ಮಾಡಿ, ಬಲತುದಿಗೆ, ಎಳೆದು ತರೋಣ (ಡ್ರಾಗ್ ಮತ್ತು ಡ್ರಾಪ್).
03:01 ನಂತರ 'BooksIssued' ಟೇಬಲ್ ಅನ್ನು ಕ್ಲಿಕ್ ಮಾಡಿ, ಮಧ್ಯದಲ್ಲಿ ಎಳೆದು ತರೋಣ,
03:11 ಈಗ, ಈ ಟೇಬಲ್ ಗಳನ್ನು ಸೇರಿಸುವ ಗೆರೆಗಳನ್ನು ನಾವು ನೋಡಬಹುದು. ಇವು ಈ ಹಿಂದೆ ನಾವು ನಿರ್ಧರಿಸಿದ್ದ 'relationships' ಆಗಿವೆ.
03:23 'relationship' ವಿವರಗಳನ್ನು ನೋಡಲು ನಾವು ಈ ಗೆರೆಗಳ ಮೇಲೆ ಡಬಲ್–ಕ್ಲಿಕ್ ಮಾಡಬಹುದು.
03:30 ಈಗ ನಾವು, 'Query design' ವಿಂಡೋದ ಕೆಳಗಿನ ಅರ್ಧ ಭಾಗವನ್ನು ನೋಡೋಣ.
03:37 ಇಲ್ಲಿ 'cell' ಗಳ ಅನೇಕ ಸಾಲು (row) ಗಳಿವೆ. ನಾವು ಕ್ವೆರಿಯನ್ನು ರಚಿಸುವಾಗ ಇವುಗಳನ್ನು ತುಂಬಲಿದ್ದೇವೆ.
03:48 ಮೊದಲಿಗೆ, ನಾವು 'Field' ಕಾಲಂ ಅನ್ನು ಪರೀಕ್ಷಿಸಲಿದ್ದೇವೆ.
03:53 ಇದು ಫಲಿತಾಂಶದ ಸೆಟ್ ನಲ್ಲಿ ನಾವು ಡಿಸ್ಪ್ಲೇ ಮಾಡಬೇಕಾದ ಫೀಲ್ಡ್ ಗಳನ್ನು ಸೂಚಿಸಲು ಇರುತ್ತದೆ.
04:01 ಇದನ್ನು ಮಾಡಲು, ವಿಂಡೋದ ಮೇಲಿನ ಅರ್ಧದಲ್ಲಿಯ 'Books' ಟೇಬಲ್ ನಲ್ಲಿ 'Title' ಫೀಲ್ಡ್ ಮೇಲೆ,
04:12 ನಂತರ 'Members' ಟೇಬಲ್ ನಲ್ಲಿಯ 'Name' ಫೀಲ್ಡ್,
04:17 ತದನಂತರ, 'BooksIssued' ಟೇಬಲ್ ನಲ್ಲಿ 'Issue Date' ಫೀಲ್ಡ್,
04:24 ನಂತರ, 'Return date, actual return date' ಮತ್ತು ಕೊನೆಯಲ್ಲಿ 'checked in' ಫೀಲ್ಡ್ ಡಬಲ್-ಕ್ಲಿಕ್ ಮಾಡುವೆವು.
04:34 ವಿಂಡೋದ ಕೆಳಗಿನ ಅರ್ಧದಲ್ಲಿಯ ಈ ಫೀಲ್ಡ್ ಗಳು ಮೊದಲ ರೋ ನಲ್ಲಿ
04:44 ಮತ್ತು ಅವುಗಳಿಗೆ ಸಂಬಂಧಿಸಿದ 'ಟೇಬಲ್' ಗಳ ಹೆಸರುಗಳು ಮೂರನೇ ರೋ ನಲ್ಲಿ ಇರುವುದನ್ನು ಗಮನಿಸಿ.
04:50 ನಂತರ, ಎರಡನೇ ರೋ ನಲ್ಲಿಯ 'Alias' ಅನ್ನು ನೋಡೋಣ.
04:57 ಇಲ್ಲಿ ನಾವು ಆಯ್ದ ಫೀಲ್ಡ್ ಗಳಿಗೆ ವಿವರಣಾತ್ಮಕ ಹೆಸರುಗಳನ್ನು ನಮೂದಿಸಬಹುದು.
05:04 ಹೀಗೆ, ಚಿತ್ರದಲ್ಲಿ ತೋರಿಸಿರುವಂತೆ ನಾವು ಏಲಿಯಸ್ ಗಳನ್ನು ಟೈಪ್ ಮಾಡೋಣ. <pause>
05:11 ಹೀಗೆ ನಾವು ಏಲಿಯಸ್ ಗಳ ಕೆಲಸ ಮುಗಿಸಿದ್ದೇವೆ.
05:15 ನಂತರ, ನಾವು 'Sort' ಎಂಬ ರೋ ಅನ್ನು ನೋಡೋಣ.
05:21 ಇಲ್ಲಿ ನಾವು 'result set' ನ ಅನುಕ್ರಮವನ್ನು ಸೂಚಿಸಬಹುದು.
05:26 ನಮಗೆ ವಿತರಿಸಿದ ಪುಸ್ತಕಗಳ 'history' ಬೇಕಿರುವುದರಿಂದ, ನಾವಿದನ್ನು ಕಾಲಾನುಕ್ರಮದಲ್ಲಿ ಹೊಂದಿಸಲಿದ್ದೇವೆ.
05:34 ಅಂದರೆ, ನಾವು 'result set' ಅನ್ನು ಏರಿಕೆ ಕ್ರಮದಲ್ಲಿ 'Issue Date' ಮೂಲಕ ಹೊಂದಿಸಲಿದ್ದೇವೆ.
05:43 ಇದಕ್ಕಾಗಿ, ನಾವು 'Sort' ರೋ ನಲ್ಲಿ 'Issuedate' ಫೀಲ್ಡ್ ನ ಅಡಿಯಲ್ಲಿ ಖಾಲಿ ಇರುವ 'cell' ನಲ್ಲಿ ಕ್ಲಿಕ್ ಮಾಡುವೆವು. ಮತ್ತು 'Ascending' ಮೇಲೆ ಕ್ಲಿಕ್ ಮಾಡೋಣ.
05:56 ಸರಿ, ಮುಂದಿನ ರೋ ‘Visible’ ನತ್ತ ಹೋಗೋಣ.
06:02 ಇಲ್ಲಿ, ನಾವು ಆಯ್ಕೆಮಾಡಿದ ಫೀಲ್ಡ್ ಗಳ ಗೋಚರತೆಯನ್ನು, ಅವುಗಳನ್ನು ಚೆಕ್ ಅಥವಾ ಅನ್-ಚೆಕ್ ಮಾಡುವ ಮೂಲಕ ನಿರ್ಧರಿಸೋಣ.
06:11 ಡಿಫಾಲ್ಟ್ ಆಗಿ, ಅವೆಲ್ಲವೂ ಚೆಕ್ ಆಗಿರುವುದನ್ನು ಗಮನಿಸಿ.
06:17 ನಂತರ, ನಾವು ‘Function’ ರೋ ಅನ್ನು ನೋಡುವೆವು. ಜಟಿಲವಾದ ಕ್ವೆರಿಗಳನ್ನು ರಚಿಸಲು ಇದನ್ನು ಬಳಸಲಾಗುತ್ತದೆ. ಸದ್ಯಕ್ಕೆ ನಾವಿದನ್ನು ಇಲ್ಲಿಯೇ ಬಿಟ್ಟು
06:27 ‘Criterion’ ರೋ ಗೆ ಹೋಗೋಣ.
06:32 ಇಲ್ಲಿ ನಾವು result set ಅನ್ನು ಸರಳ ಅಥವಾ ಜಟಿಲ ಮಾನದಂಡಗಳ ಸೆಟ್ ಗೆ ಸೀಮಿತಗೊಳಿಸಬಹುದು.
06:40 ಉದಾಹರಣೆಗೆ, ವಿತರಿಸಲಾದ ಆದರೆ ಸದಸ್ಯರು ಹಿಂದಿರುಗಿಸದೇ ಇರುವ ಪುಸ್ತಕಗಳಿಗಾಗಿ ಮಾತ್ರ ನಾವು 'ಕ್ವೆರಿ' ಮಾಡಬಹುದು.
06:49 ಅಂದರೆ, ಚೆಕ್-ಇನ್ ಆಗದೇ ಇರುವ ಪುಸ್ತಕಗಳು ಮಾತ್ರ.
06:54 ನಾವು ಈ ರೋ ನಲ್ಲಿ 'CheckedIn' ಫೀಲ್ಡ್ ನ ಅಡಿಯಲ್ಲಿ, ಖಾಲಿ 'cell' ಮೇಲೆ ಕ್ಲಿಕ್ ಮಾಡೋಣ ಮತ್ತು ‘Equals Zero’ ಎಂದು ಟೈಪ್ ಮಾಡೋಣ.
07:06 ಆಯಿತು. ಈ ಕ್ವೆರಿಯನ್ನು ನಾವೀಗ 'ರನ್' ಮಾಡೋಣ.
07:10 ನಾವು ಕೀಬೋರ್ಡ್ ಶಾರ್ಟ್ಕಟ್ 'F5' ಬಳಸಬಹುದು ಅಥವಾ ವಿಂಡೋದ ಮೇಲ್ಗಡೆ ಇರುವ 'Edit' ಮೆನ್ಯು ಮೇಲೆ ಕ್ಲಿಕ್ ಮಾಡಬಹುದು.

ನಂತರ ಕೆಳಗಡೆ 'Run Query' ಮೇಲೆ ಕ್ಲಿಕ್ ಮಾಡೋಣ.

07:27 ವಿಂಡೋದ ಮೇಲಿನ ಅರ್ಧಭಾಗದಲ್ಲಿ ನಿಮಗೆ ಸ್ವಲ್ಪ ಡೇಟಾ ಕಾಣುತ್ತಿದೆಯೇ?
07:32 ಇವು ನಿಮ್ಮ ಕ್ವೆರಿಯ ಫಲಿತಾಂಶಗಳಾಗಿವೆ.
07:36 ಗಮನಿಸಿ- ಸದಸ್ಯರಿಗೆ ನೀಡಿದ ಪುಸ್ತಕಗಳ 'history' ಯನ್ನು ಇಲ್ಲಿ ನಾವು ನೋಡಬಹುದು. ಇವುಗಳನ್ನು 'Issue Date' ಮೂಲಕ ಹೊಂದಿಸಲಾಗಿದೆ. ಅಲ್ಲದೇ, ಯಾವುದೇ ಪುಸ್ತಕವು ಚೆಕ್-ಇನ್ ಆಗಿಲ್ಲ.
07:51 ನಾವೀಗ ಕೆಳಗಿನ ‘ಕ್ವೆರಿ ಡಿಸೈನ್ ಏರಿಯಾ’ಕ್ಕೆ ಹೋಗಿ, ಅದನ್ನು ನಮಗೆ ಬೇಕಾದಂತೆ ಬದಲಾಯಿಸಬಹುದು.
08:00 ಉದಾಹರಣೆಗೆ, 'Checked In' ಮಾನದಂಡವನ್ನು ತೆಗೆದು ಬಿಡೋಣ. <pause>
08:07 ಈಗ 'F5' ಇನ್ನೊಮ್ಮೆ ಒತ್ತಿ ಕ್ವೆರಿಯನ್ನು 'ರನ್' ಮಾಡೋಣ.
08:15 ಈ ಬಾರಿ ನಾವು, ಕ್ವೆರಿಯು ಹಿಂದಿರುಗಿಸಿದ ಡೇಟಾದ ದೀರ್ಘ ಪಟ್ಟಿಯನ್ನು ನೋಡಬಹುದು.
08:23 ನಂತರ, 'Control, S' ಒತ್ತಿ ಈ ಕ್ವೆರಿಯನ್ನು 'ಸೇವ್' ಮಾಡೋಣ. ಇದು ಒಂದು ಸಣ್ಣ ಪಾಪ್-ಅಪ್ ವಿಂಡೋಅನ್ನು ತೆರೆಯುತ್ತದೆ.
08:34 ಇಲ್ಲಿ ನಮ್ಮ ಕ್ವೆರಿಗೆ ಒಂದು ವಿವರಣಾತ್ಮಕ ಹೆಸರನ್ನು ನೀಡೋಣ.
08:38 ‘History of Books Issued to Members’ ಎಂದು ಟೈಪ್ ಮಾಡೋಣ.
08:46 'OK' ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಈ ವಿಂಡೋವನ್ನು ಮುಚ್ಚೋಣ.
08:52 ಸೇವ್ ಮಾಡಿರುವ ಈ ಕ್ವೆರಿಯನ್ನು, ಮುಖ್ಯ Base ವಿಂಡೋ ದಲ್ಲಿ ಅದರ ಹೆಸರಿನ ಮೇಲೆ ಡಬಲ್-ಕ್ಲಿಕ್ ಮಾಡಿ ತೆರೆಯಬಹುದು.
09:01 ಹೀಗೆ, ನಾವು 'ಡಿಸೈನ್ ವ್ಯೂ' ಅನ್ನು ಬಳಸಿ ಕ್ವೆರಿಯನ್ನು ಯಶಸ್ವಿಯಾಗಿ ರಚಿಸಿದ್ದೇವೆ.
09:09 ಇಲ್ಲೊಂದು ಅಸೈನ್ಮೆಂಟ್ ಇದೆ:
09:12 ನಿಶಾ ಶರ್ಮ ಎಂಬ ಸದಸ್ಯರಿಗೆ ಕೊಟ್ಟಿರುವ ಪುಸ್ತಕಗಳ ಪಟ್ಟಿಯನ್ನು ಪಡೆಯಿರಿ. ಈ ಪಟ್ಟಿಯು 'Issue date' ಪ್ರಕಾರ ಕಾಲಾನುಕ್ರಮದಲ್ಲಿ ಇರಬೇಕು.
09:24 ಇಲ್ಲಿಗೆ ನಾವು, ‘ಲಿಬರ್ ಆಫಿಸ್ ಬೇಸ್’ ನಲ್ಲಿ Creating queries in Design View, ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
09:31 ಸಂಕ್ಷಿಪ್ತವಾಗಿ, ನಾವು ಡಿಸೈನ್ ವ್ಯೂ ಬಳಸಿ,
09:33 ಕ್ವೆರಿಯನ್ನು ರಚಿಸಲು, ‘ಕ್ವೆರಿ ಡಿಸೈನ್ ವಿಂಡೋ’ಗೆ ಟೇಬಲ್ ಗಳನ್ನು ಸೇರಿಸಲು, ಫೀಲ್ಡ್ ಗಳನ್ನು ಆರಿಸಲು,
09:41 ಏಲಿಯಸ್ ಗಳನ್ನು ನಿರೂಪಿಸಲು, ವರ್ಗೀಕರಣದ ಕ್ರಮವನ್ನು ರೂಪಿಸಲು ಮತ್ತು ಕ್ವೆರಿಗಾಗಿ ಸರ್ಚ್ ಬಗೆಯನ್ನು ಒದಗಿಸಲು ಕಲಿತೆವು.
09:49 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD

ಮೂಲಕ ಭಾರತ ಸರ್ಕಾರದ ನೆರವು ಪಡೆದಿದೆ. ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org. ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.

10:10 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14