Difference between revisions of "LibreOffice-Suite-Base/C2/Add-List-Box-form-control-to-a-form/Kannada"

From Script | Spoken-Tutorial
Jump to: navigation, search
 
Line 210: Line 210:
 
|-
 
|-
 
||08:08
 
||08:08
||ಈ ಸ್ಕ್ರಿಪ್ಟ್ ನ ಅನುವಾದಕ ಮೆಲ್ವಿನ್, ಮಂಗಳೂರು ಮತ್ತು ಧ್ವನಿ ---------- .
+
||ಈ ಸ್ಕ್ರಿಪ್ಟ್ ನ ಅನುವಾದಕ ಮೆಲ್ವಿನ್, ಮಂಗಳೂರು ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
ಧನ್ಯವಾದಗಳು.
 
|-
 
|-

Latest revision as of 10:25, 7 April 2020

Time Narration
00:03 ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು ಫಾರ್ಮ್ ಗೆ List Box form control ಅನ್ನು ಸೇರಿಸುವುದರ ಬಗ್ಗೆ ಕಲಿಯುವೆವು.
00:14 ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು, ‘ಲಿಬರ್ ಆಫಿಸ್ ಬೇಸ್’ ಅನ್ನು ಬಳಸಿ ಫಾರ್ಮ್ ಅನ್ನು ಮಾರ್ಪಡಿಸಲು ಕಲಿತೆವು.
00:20 ಕಳೆದ ಟ್ಯುಟೋರಿಯಲ್ ನಲ್ಲಿ ರಚಿಸಿ, ಮಾರ್ಪಡಿಸಲು ಶುರು ಮಾಡಿದ್ದ ಫಾರ್ಮ್ ನ ಈ ಇಮೇಜ್ ಅನ್ನು ಸಹ ನಾವು ನೋಡಿದೆವು.
00:34 ವಿನ್ಯಾಸವನ್ನು ನಾವು ಪೂರ್ಣಗೊಳಿಸಿದ ನಂತರ, ನಮ್ಮ ಫಾರ್ಮ್ ಈ ರೀತಿ ಕಾಣುತ್ತದೆ.
00:45 ಗಮನಿಸಿ: ನಾವು ಇಲ್ಲಿ Books Issued ಟೇಬಲ್ ನಲ್ಲಿ, ಮೊದಲನೆಯ ರೆಕಾರ್ಡ್ ಅನ್ನು ನೋಡುತ್ತಿದ್ದೇವೆ.
00:52 ಹಾಗೂ ‘book Ids’ ಮತ್ತು ‘member Ids’ ಗಳ ಬದಲಾಗಿ, ನಿಜವಾದ ‘book titles’ ಮತ್ತು ‘member names’ ಗಳೊಂದಿಗೆ ಲಿಸ್ಟ್-ಬಾಕ್ಸ್ ಗಳನ್ನು ನೋಡುತ್ತಿದ್ದೇವೆ.
01:01 ರೆಕಾರ್ಡ್ ಅನ್ನು ಸೇವ್ ಮಾಡುವುದು, ಬದಲಾವಣೆಗಳನ್ನು ಅನ್-ಡು ಮಾಡುವುದು ಇತ್ಯಾದಿ ಕ್ರಿಯೆಗಳಿಗಾಗಿ ಇಲ್ಲಿ ಕೆಳಗಡೆ ಕೆಲವು ಪುಶ್- ಬಟನ್ ಗಳಿವೆ.
01:11 ನಾವು ಈ ಟ್ಯುಟೋರಿಯಲ್ ನಲ್ಲಿ, ನಮ್ಮ ಫಾರ್ಮ್ ಗೆ List box form control ಅನ್ನು ಸೇರಿಸುವುದನ್ನು ಕಲಿಯಲಿದ್ದೇವೆ.
01:20 ‘ಲಿಬರ್ ಆಫಿಸ್ ಬೇಸ್’ ಪ್ರೋಗ್ರಾಂ ಅನ್ನು ಈಗಾಗಲೇ ತೆರೆದಿರದಿದ್ದರೆ, ನಾವು ಅದನ್ನು ಆರಂಭಿಸೋಣ.
01:32 ನಮ್ಮ Library ಡೇಟಾಬೇಸ್ ಅನ್ನು ತೆರೆಯೋಣ.
01:35 ಒಂದುವೇಳೆ ಬೇಸ್ ಈಗಾಗಲೇ ತೆರೆದಿದ್ದಲ್ಲಿ, ನಾವು ಇಲ್ಲಿ File ಮೆನುವಿನ ಅಡಿಯಲ್ಲಿ Open ಅನ್ನು ಕ್ಲಿಕ್ ಮಾಡಿ
01:45 ಅಥವಾ File ಮೆನುವಿನ ಅಡಿಯಲ್ಲಿ Recent Documents ಅನ್ನು ಕ್ಲಿಕ್ ಮಾಡುವ ಮೂಲಕ Library ಡೇಟಾಬೇಸ್ ಅನ್ನು ತೆರೆಯಬಹುದು.
01:50 ನಾವೀಗ Library ಡೇಟಾಬೇಸ್ ನಲ್ಲಿ ಇದ್ದೇವೆ.
01:54 ನಾವು ಕಳೆದ ಟ್ಯುಟೋರಿಯಲ್ ನಲ್ಲಿ, ರಚಿಸಿದ 'Books Issued to Members' ಎಂಬ ಫಾರ್ಮ್ ಅನ್ನು ತೆರೆಯೋಣ.
02:01 ಇದನ್ನು ಮಾಡಲು, ನಾವು ಎಡ ಪ್ಯಾನಲ್ ನಲ್ಲಿರುವ Forms ಐಕಾನ್ ಮೇಲೆ ಕ್ಲಿಕ್ ಮಾಡೋಣ.
02:07 ಬಲ ಪ್ಯಾನಲ್ ನಲ್ಲಿರುವ 'Books Issued to Members' ಫಾರ್ಮ್ ಮೇಲೆ ರೈಟ್ ಕ್ಲಿಕ್ ಮಾಡಿ. ನಂತರ edit ಮೇಲೆ ಕ್ಲಿಕ್ ಮಾಡೋಣ.
02:17 ನಾವೀಗ Form Design ವಿಂಡೋದಲ್ಲಿದ್ದೇವೆ.
02:21 ನಾವು ಮೊದಲಿಗೆ 'Book Title' ಲೇಬಲ್ ಅನ್ನು ನೋಡೋಣ.
02:25 ಗಮನಿಸಿ, ಇಲ್ಲಿರುವ ಟೆಕ್ಸ್ಟ್-ಬಾಕ್ಸ್ ಕೇವಲ BookId ಸಂಖ್ಯೆಗಳನ್ನಷ್ಟೇ ಪ್ರದರ್ಶಿಸುತ್ತದೆ. ಇವು ನಮಗೆ ಅಷ್ಟೊಂದು ಚೆನ್ನಾಗಿ ಕಾಣುವುದಿಲ್ಲ.
02:33 ನಮಗೆ books titles ಗಳೇ ಸರಿಯಾಗಿವೆ.
02:37 ಈ title ಗಳನ್ನು ಪ್ರದರ್ಶಿಸಲು, ಬೇಸ್ ಕೆಲವು ವಿಧಾನಗಳನ್ನು ಹೊಂದಿದೆ. List box form control ಅನ್ನು ಬಳಸುವುದು ಇವುಗಳಲ್ಲಿ ಒಂದು ವಿಧಾನವಾಗಿದೆ.
02:48 ಇದು ಹೇಗೆ ಎನ್ನುವುದನ್ನು ನೋಡೋಣ.
02:51 ಇದಕ್ಕಾಗಿ ಮೊದಲಿಗೆ Book Title ಲೇಬಲ್ ನ ಪಕ್ಕದಲ್ಲಿರುವ ಟೆಕ್ಸ್ಟ್ ಬಾಕ್ಸ್ ಅನ್ನು ತೆಗೆದುಬಿಡೋಣ.
02:59 ನಾವು ಟೆಕ್ಸ್ಟ್-ಬಾಕ್ಸ್ ಮೇಲೆ ಕ್ಲಿಕ್ ಮಾಡಿದಾಗ, ಪರಿಚಿತ ಗ್ರೀನ್ ಬಾಕ್ಸ್ ಗಳೊಂದಿಗೆ ಇದನ್ನು ಆಯ್ಕೆಮಾಡಲಾಗುತ್ತದೆ.
03:09 ನಂತರ ರೈಟ್-ಕ್ಲಿಕ್ ಮಾಡಿ, ಕೆಳಗೆ Cut ಮೇಲೆ ಕ್ಲಿಕ್ ಮಾಡಿ.
03:16 ನೋಡಿ, ನಾವು ಟೆಕ್ಸ್ಟ್-ಬಾಕ್ಸ್ ಅನ್ನು ತೆಗೆದುಬಿಟ್ಟಿದ್ದೇವೆ.
03:20 ನಾವೀಗ ಇಲ್ಲಿ List box form control ಅನ್ನು ಇಡುವೆವು.
03:26 ಇದನ್ನು Form Controls ಟೂಲ್ ಬಾರ್ ನಲ್ಲಿ ಆಕ್ಸೆಸ್ ಮಾಡಬಹುದು.
03:31 View ಮೆನು ಬಳಸಿ, Form Controls ಮೇಲೆ ಕ್ಲಿಕ್ ಮಾಡಿ ನಾವು ಇದನ್ನು ಮೇಲಕ್ಕೆ ತರಬಹುದು.
03:39 ಗಮನಿಸಿ, ಬೇಸ್ ನಮಗೆ ಸಾಕಷ್ಟು form controls ಗಳನ್ನು ಒದಗಿಸುತ್ತದೆ; ಟೂಲ್ ಗಳ ಬಗ್ಗೆ ಮಾಹಿತಿಯನ್ನು ಪಡೆಯಲು ನಾವು ನಮ್ಮ ಕರ್ಸರ್ ಅನ್ನು ಈ ಐಕಾನ್ ಗಳ ಮೇಲೆ ಇಡೋಣ.
04:01 ಈಗ ನಮ್ಮ list box ಐಕಾನ್ ಅನ್ನು ನೋಡೋಣ.
04:04 ಇಲ್ಲಿದೆ ನೋಡಿ, ಈ ಐಕಾನ್ ಮೇಲೆ ಒಮ್ಮೆ ಕ್ಲಿಕ್ ಮಾಡೋಣ.
04:11 ಮೌಸ್ ಪಾಯಿಂಟರ್ ಅನ್ನು ಫಾರ್ಮ್ ಮೇಲೆ ಸರಿಸೋಣ; ಇದು ತೆಳುವಾದ ಅಧಿಕ ಚಿಹ್ನೆಯಾಗಿ ಬದಲಾಗಿರುವುದನ್ನು ಗಮನಿಸಿ.
04:21 ನಾವೀಗ ನಮ್ಮ ಫಾರ್ಮ್ ನಲ್ಲಿ 'ಲಿಸ್ಟ್ ಬಾಕ್ಸ್ ಫಾರ್ಮ್ ಕಂಟ್ರೋಲ್' ಅನ್ನು ಡ್ರಾ ಮಾಡಬಹುದು.
04:26 ಹೀಗೆ ಮಾಡಲು, ನಮ್ಮ ಫಾರ್ಮ್ ನಲ್ಲಿ ಇದನ್ನು ಈ ರೀತಿ ಕ್ಲಿಕ್, ಡ್ರಾಗ್ ಮತ್ತು ಡ್ರಾಪ್ ಮಾಡುವೆವು.
04:34 ಈ ಹಿಂದೆ ನಾವು ಟೆಕ್ಸ್ಟ್-ಬಾಕ್ಸ್ ಅನ್ನು ತೆಗೆದುಹಾಕಿದ ಜಾಗದಲ್ಲಿ ಇದನ್ನು ಇಡೋಣ.
04:39 Form design ವಿಂಡೋದಲ್ಲಿ, 'List Box Wizard' ಎಂಬ ಹೊಸ ವಿಜಾರ್ಡ್ ಕಾಣುತ್ತಿರುವುದನ್ನು ಗಮನಿಸಿ.
04:48 ಈಗ ಈ ವಿಜಾರ್ಡ್, ಲಿಸ್ಟ್ ಬಾಕ್ಸ್ ಅನ್ನು Book title ಲೇಬಲ್ ಗೆ ಸೇರಿಸಲು ನಮಗೆ ಸಹಾಯಮಾಡುವುದು.
04:56 ಇದು ಹೇಗೆ ಎನ್ನುವುದನ್ನು ನೋಡೋಣ.
04:58 ಈ ವಿಜಾರ್ಡ್ ನಲ್ಲಿ, ನಾವು book titles ಅನ್ನು ಪಡೆಯಬಹುದಾದ ಟೇಬಲ್ ಅನ್ನು ಮೊದಲಿಗೆ ಆರಿಸೋಣ.
05:07 ನಾವು ಲಿಸ್ಟ್ ನಿಂದ Books table ಅನ್ನು ಆರಿಸಿಕೊಂಡು Next ಬಟನ್ ಮೇಲೆ ಕ್ಲಿಕ್ ಮಾಡುವೆವು.
05:15 ಈಗ, List box ನಲ್ಲಿ ತೋರಿಸಲಾಗುವ ಫೀಲ್ಡ್ ಅನ್ನು ಈ ವಿಂಡೋದಲ್ಲಿ ನಾವು ಆರಿಸಬೇಕು.
05:24 book titles ಅನ್ನು Title ಫೀಲ್ಡ್ ನಲ್ಲಿ ಇಡಲಾಗಿದೆ ಎಂಬುದು ನಮಗೆ ತಿಳಿದಿದೆ.
05:29 ಈಗ ನಾವು ಮುಂದಿನ ಹಂತದತ್ತ ಸಾಗೋಣ.
05:32 ಈ ಕೊನೆಯ ವಿಂಡೋದಲ್ಲಿಯೇ ನಾವು ಚಮತ್ಕಾರವನ್ನು ಮಾಡಲಿದ್ದೇವೆ.
05:37 ಸಂಬಂಧಿತ ಟೇಬಲ್ ಗಳು ಮತ್ತು ಫೀಲ್ಡ್ ಗಳನ್ನು ನಾವು ಜೋಡಿಸಲಿದ್ದೇವೆ.
05:41 ಫೀಲ್ಡ್ ಹೆಸರುಗಳನ್ನು ಗಮನಿಸಿ. ಎಡಗಡೆಯಲ್ಲಿರುವ 'Fields in the Value table', ‘books Issued’ ಟೇಬಲ್ ನಲ್ಲಿರುವ ಫೀಲ್ಡ್ ಗಳಾಗಿವೆ.
05:52 ಮತ್ತು ಬಲಗಡೆಯಲ್ಲಿರುವ 'Fields in the list table', Books ಟೇಬಲ್ ನಲ್ಲಿರುವ ಫೀಲ್ಡ್ ಗಳಾಗಿವೆ.
05:59 books ಟೇಬಲ್ ನಲ್ಲಿರುವ book id ಯು ಕೀ ಫೀಲ್ಡ್ ಆಗಿದೆ ಹಾಗೂ ಇದನ್ನು Books Issued table ನಲ್ಲಿ ತೋರಿಸಲಾಗಿದೆ ಎಂದು ಸಹ ತಿಳಿದಿದ್ದೇವೆ.
06:10 'Field from the value table' ಎಂಬ ಎಡಬದಿಯ ಪಟ್ಟಿಯಲ್ಲಿರುವ Book id ಮೇಲೆ ನಾವು ಕ್ಲಿಕ್ ಮಾಡೋಣ.
06:19 ನಂತರ, 'Field from the list table' ಎಂಬ ಬಲಗಡೆಯ ಪಟ್ಟಿಯಲ್ಲಿರುವ Book id ಮೇಲೆ ಕ್ಲಿಕ್ ಮಾಡೋಣ.
06:29 ಈ ವಿಜಾರ್ಡ್ ಅನ್ನು ಮುಚ್ಚಲು Finish ಬಟನ್ ಮೇಲೆ ಕ್ಲಿಕ್ ಮಾಡಿ.
06:34 ನೋಡಿ, ನಾವು ಸಂಬಂಧಿತ ಟೇಬಲ್ ಗಳು ಮತ್ತು ಫೀಲ್ಡ್ ಗಳನ್ನು ಸೇರಿಸಿದ್ದೇವೆ.
06:40 ಈಗ ಬೇಸ್, ಈ List box ನಲ್ಲಿ ಎಲ್ಲಾ Book titles ಅನ್ನು ತಂತಾನೇ ಪ್ರದರ್ಶಿಸಲಿದೆ.
06:46 ನಾವೀಗ ಫಾರ್ಮ್ ಅನ್ನು ಸೇವ್ ಮಾಡೋಣ.
06:49 ಹಾಗೂ ಈ ವಿಂಡೋವನ್ನು ಮುಚ್ಚೋಣ.
06:52 ಬೇಸ್ ಟ್ಯುಟೋರಿಯಲ್ ನ ಮುಂದಿನ ಭಾಗದಲ್ಲಿ, ಉಳಿದ ಫಾರ್ಮ್ ಕಂಟ್ರೋಲ್ಸ್ ಅನ್ನು ನಮ್ಮ ಫಾರ್ಮ್ ಗೆ ಸೇರಿಸುವೆವು.
07:00 ನಮ್ಮ ಕೆಲಸ ಪೂರ್ಣಗೊಂಡ ನಂತರ, ಫಾರ್ಮ್ ಹೀಗೆ ಕಾಣುವುದು.
07:06 ಇಲ್ಲಿ ಒಂದು ಅಸೈನ್ ಮೆಂಟ್ ಇದೆ.
07:08 ಅಷ್ಟು ಅನುಕೂಲವಲ್ಲದ member Ids ಗೆ ಬದಲಾಗಿ, member names ಅನ್ನು ಪಟ್ಟಿಮಾಡಲು ಎರಡನೇ ಲಿಸ್ಟ್ ಬಾಕ್ಸ್ ಅನ್ನು ಸೇರಿಸಿ.
07:17 ಲಿಸ್ಟ್ ಬಾಕ್ಸ್ ಅನ್ನು ಇರಿಸುವ ಬಗ್ಗೆ ಈಗ ಚಿಂತಿಸಬೇಡಿ. ಹೀಗೆ, Member name ಲೇಬಲ್ ನ ಎಡಗಡೆಗೆ ಇದನ್ನು ಎಳೆಯಿರಿ.
07:27 ಮುಂದಿನ ಟ್ಯುಟೋರಿಯಲ್ ನಲ್ಲಿ, ನಾವು ಇದನ್ನು Member Name ನ ಪಕ್ಕದಲ್ಲಿ ಮತ್ತೆ ಸರಿಯಾಗಿ ಇರಿಸುವೆವು.
07:34 ಇಲ್ಲಿಗೆ ನಾವು ‘ಲಿಬರ್ ಆಫಿಸ್ ಬೇಸ್’ ನಲ್ಲಿ, ‘ಲಿಸ್ಟ್ ಬಾಕ್ಸ್ ಕಂಟ್ರೋಲ್’ ಕುರಿತ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
07:40 ಸಂಕ್ಷಿಪ್ತವಾಗಿ, ಫಾರ್ಮ್ ನಲ್ಲಿ ‘ ಲಿಸ್ಟ್ ಬಾಕ್ಸ್ ಫಾರ್ಮ್ ಕಂಟ್ರೋಲ್’ ಅನ್ನು ಸೇರಿಸುವುದನ್ನು ನಾವು ಕಲಿತೆವು.
07:47 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ‘ಟಾಕ್ ಟು ಎ ಟೀಚರ್’ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
07:58 ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು:

http://spoken-tutorial.org.

08:04 ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.
08:08 ಈ ಸ್ಕ್ರಿಪ್ಟ್ ನ ಅನುವಾದಕ ಮೆಲ್ವಿನ್, ಮಂಗಳೂರು ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14