LaTeX-Old-Version/C2/Report-Writing/Kannada

From Script | Spoken-Tutorial
Revision as of 17:50, 27 November 2012 by Sneha (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search

LATEX REPORT WRITING

Latex ಬಳಸಿ Report ಬರೆಯುವ Tutorialಗೆ ತಮಗೆಲ್ಲರಿಗೂ ಸ್ವಾಗತ. . ಈ screen ನ ಮೇಲೆ ಮೂರು windows ಇರುವುದನ್ನು ಗಮನಿಸಿ. Source file editorನಲ್ಲಿದೆ. ನಾನು Emacs Editorನ್ನು ಬಳಸುತ್ತಿದ್ದೇನೆ. Tutorialನಲ್ಲಿ Source fileನ್ನು compile ಮಾಡಿ PDF fileನ್ನು ರೂಪಿಸುತ್ತಿದ್ದೇನೆ. ಈ PDF fileನ್ನು PDF Readerನಲ್ಲಿ ನೋಡುತ್ತಿದ್ದೇನೆ. ನಾನು Skim ಎಂಬ PDF readerನ್ನು macrosನಲ್ಲಿ ಬಳಸುತ್ತಿದ್ದೇನೆ. ಈ reader ಅತ್ಯಂತ ಹೊಸ fileನ್ನು load ಮಾಡುತ್ತದೆ. ನೀವು documentನ್ನು latexನಲ್ಲಿ ರಚಿಸುವಾಗ ಈ ರೀತಿಯೇ windowsನ್ನು ಬಳಸಬೇಕೆಂಬ ನಿಯಮವಿಲ್ಲ. ನಿಮ್ಮ ಇಷ್ಟ ಬಂದ ಹಾಗೆ editor ಮತ್ತು PDF readerನ್ನು ಬಳಸಬಹುದು. Latex.ನ್ನು ಬಳಸುವ ರೀತಿ Linux ಮತ್ತು Unix ನಲ್ಲಿ ಒಂದೇ ರೀತಿಯಾಗಿರುತ್ತದೆ. ಆದರೆ, windowsನಲ್ಲಿ ಸ್ವಲ್ಪ ಬದಲಾವಣೆ ಇರುತ್ತದೆ. Source file ಎಲ್ಲಾ Operating Systemಗಳಲ್ಲಿ ಒಂದೇ ರೀತಿಯಾಗಿರುತ್ತದೆ. ಇದರ ಪರಿಣಾಮವಾಗಿ Linuxನಲ್ಲಿರುವ Source fileನ್ನು windowsನಲ್ಲಿ ಬಳಸಬಹುದು. ಈ spoken tutorialನ ಸರಣಿಯಲ್ಲಿ ಮೂರನೆಯದು Compiling. ಇದರಲ್ಲಿ Latexನ Introductionಇದೆ. ನಿಮಗೆ ಗೊತ್ತಿಲ್ಲದಿದ್ದರೆ ಇದನ್ನು ನೋಡಬಹುದು.

ನಾನು ಇಲ್ಲಿ text sizeನ್ನು 12 pt.ಗೆ ಮತ್ತು Article Classನ್ನು ಬಳಸುತ್ತಿದ್ದೇನೆ. Titleನ ವಿಭಾಗ, ಉಪ-ವಿಭಾಗ, ಉಪ-ಉಪವಿಭಾಗಗಳನ್ನು ನಿರ್ಧರಿಸಿದ್ದೇನೆ. ಇದರ ಪ್ರತಿಯೊಂದರ ಪ್ರಮಾಣವು ಅದಕ್ಕನುಗುಣವಾಗಿ Outputನಲ್ಲಿ ಕಾಣಿಸುತ್ತದೆ. ಇದರ ಮತ್ತೊಂದು ವಿಶಿಷ್ಟ ಲಕ್ಷಣ Source Fileನಲ್ಲಿ ಎಷ್ಟೆ blank lineಗಳಿದ್ದರೂ Outputನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಾನು ಇಲ್ಲಿ ಕೆಲವು blank lineಗಳನ್ನು ಸೇರಿಸಿ compile ಮಾಡಿ ನೋಡುತ್ತೇನೆ. ಆದರೆ Outputನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ನಂತರ ಇದರ ಮೊದಲಿನ ಸ್ಥಿತಿಗೆ ಇಡುತ್ತೇನೆ.

Title textನ size automatic ಆಗಿ ರಚನೆಯಾಗುತ್ತದೆ. ಉದಾ:- Sub-section ಸ್ವಲ್ಪ ಚಿಕ್ಕದಾಗಿ ಮತ್ತು Sub-subsection ಇದಕ್ಕಿಂತಲೂ ಚಿಕ್ಕದಾಗಿ ರಚನೆಯಾಗುತ್ತದೆ. ನಾನು text sizeನ್ನು ಬದಲಾಯಿಸಿದರೂ ಇದರ ಲಕ್ಷಣ ಹಾಗೆಯೇ ಇರುತ್ತದೆ. ನಾನು textನ್ನು 11 pt.ಗೆ ಇಟ್ಟು compile ಮಾಡಿ ನೋಡುತ್ತೇನೆ. ಆದರೆ ಒಟ್ಟಾರೆ size ಚಿಕ್ಕದಾದರೂ ಅದರ ಗುಣ ಲಕ್ಷಣದಲ್ಲಿ ಯಾವುದೇ ಬದಲಾವಣೆಯಾಗಿರುವುದಿಲ್ಲ. ನಂತರ ಇದರ ಮೊದಲಿನ ಸ್ಥಿತಿಗೆ ತರುತ್ತೇನೆ.

ಇದರ ಮತ್ತೊಂದು ವಿಶಿಷ್ಟ ಲಕ್ಷಣ, ಇದರ Automatic Section numbering. ಉದಾ :- ನಾನು ಇಲ್ಲಿ ಹೊಸ sectionನ್ನು ಸೇರಿಸಿ compile ಮಾಡಿ ನೋಡಿದರೆ ಇದರ ಸ್ಥಳಕ್ಕೆ ಸರಿಯಾಗಿ ನಂಬರ್ ಬರುತ್ತದೆ. ಒಟ್ಟಾರೆ, spacing, size, ವೈಶಿಷ್ಟ್ಯ, bold letter ಎಲ್ಲವನ್ನೂ Latexನಲ್ಲಿ automatic ಆಗಿ ತೆಗೆದುಕೊಳ್ಳುತ್ತದೆ.

ಈಗ Table of Contents ರಚಿಸುವ ಬಗ್ಗೆ ತಿಳಿಸುತ್ತೇನೆ. ಮೊದಲು report.toc ಎಂಬ file systemನಲ್ಲಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. report.toc ಎಂಬ source fileನಲ್ಲಿ Table of Contents ಎಂಬ ಪದವನ್ನು ಸೇರಿಸುತ್ತೇನೆ. ನಂತರ save ಮಾಡಿ compile ಮಾಡಿ ನೋಡುತ್ತೇನೆ. ಇಲ್ಲಿ ಈ ಪದವನ್ನು ಬಿಟ್ಟು ಬೇರೇನು ಕಾಣಿಸುವುದಿಲ್ಲ. ಈಗ ನಮಗೆ report.toc ಎಂಬ file ಇದೆ.

Title ವಿಭಾಗಗಳನ್ನು ಈ Toc fileಗೆ ಸೇರಿಸಿ ನೋಡೋಣಾ. Okay, re-compile ಮಾಡುತ್ತೇನೆ. ಈ ಮಾಹಿತಿಯನ್ನು ಮತ್ತೆ compile ಮಾಡುವಾಗ ಬಳಸುತ್ತೇನೆ. ಇಲ್ಲಿ re-compile ಮಾಡಿ ಏನಾಗುತ್ತದೆ ನೋಡೋಣಾ. ಗಮನಿಸಿ, ಎಲ್ಲಾ fileಗಳು ಅದರ page ನಂಬರಿನ ಜೊತೆಯಲ್ಲಿ ತೋರಿಸುತ್ತದೆ. ಇಲ್ಲಿ Page No.1 .tocನಲ್ಲಿದೆ. ಈ document ಒಂದೆ ಬಹು pageಗಳನ್ನು ಹೊಂದಿರುತ್ತದೆ. ಈ ಎರಡು compilation fileನ ಬದಲಾವಣೆಯಲ್ಲಿ ಅನ್ವಯಿಸುತ್ತದೆ.

ನಾನು ಇಲ್ಲಿ ಮತ್ತೊಂದು ಹೊಸ title modified sectionನಲ್ಲಿ ಸೇರಿಸುತ್ತೇನೆ. compile ಮಾಡಿ ನೋಡೋಣಾ. ಇದು documentನಲ್ಲಿ ಬದಲಾವಣೆ ಆಗಿದೆ. ಆದರೆ contentsನಲ್ಲಿ ಇನ್ನು ಬದಲಾವಣೆ ಆಗಬೇಕಾದರೆ ಇದನ್ನು ಮತ್ತೆ re-compile ಮಾಡಿ ಈ ತೊಂದರೆಯನ್ನು ಸರಿಪಡಿಸಬಹುದು. ಈಗ Table of Contentsನ ಸ್ಥಳವನ್ನು ಬದಲಾವಣೆ ಮಾಡಿ ನೋಡೋಣಾ. ಹೀಗೆ ಮಾಡಿ compile ಮಾಡಿದಾಗ Toc ಕೊನೆಗೆ ಬಂದಿರುವುದನ್ನು ಗಮನಿಸಬಹುದು. ನಂತರ ಮೊದಲಿನ ಸ್ಥಿತಿಗೆ ಇಡೋಣಾ.

ಈಗ ಈ documentಗೆ ಒಂದು Title ಕೊಡೋಣಾ. ಇದನ್ನು Document class author ನಂತರ ಇಡುತ್ತೇನೆ ಮತ್ತು ಇಲ್ಲಿ ಹೊಸ ಲೈನನ್ನು ಸೇರಿಸಿ dateನ ಸ್ಥಳದಲ್ಲಿ document ತಯಾರಿಸಿದ ದಿನಾಂಕವನ್ನು ತೋರಿಸುತ್ತದೆ. ನಂತರ compile ಮಾಡಿ ನೋಡುತ್ತೇನೆ. ಆದರೆ outputನಲ್ಲಿ ಯಾವುದೆ ಬದಲಾವಣೆಯಾಗಿರುವುದಿಲ್ಲ. ಕಾರಣವಿಷ್ಟೆ, ನಾನು ಈ documentಗೆ ಏನು ಮಾಡಬೇಕು ಎಂದು ಹೇಳಿಲ್ಲ. ನಂತರ make title ಎಂಬ commandನ್ನು ಸೇರಿಸಿ compile ಮಾಡಿದರೆ outputನಲ್ಲಿ ಬರುತ್ತದೆ.

ಈಗ Document Class – Articleನಿಂದ reportಗೆ ಬದಲಾಯಿಸಿ compile ಮಾಡಿ ನೋಡೋಣಾ. ಇಲ್ಲಿ title ಒಂದು page ತುಂಬಾ ಬಂದಿದೆ ಮತ್ತು ಇದರ contents ಹೊಸ pageನಲ್ಲಿ ಆರಂಭವಾಗಿದೆ ಹಾಗೂ titleಗೆ page number ಇರುವುದಿಲ್ಲ. Reportಗೆ chapter ಅಗತ್ಯವಿರುತ್ತದೆ ಆದರೆ ನಾನು ಇನ್ನು ಯಾವುದೇ chapter ಹಾಕಿರುವುದಿಲ್ಲ. ಹಾಗಾಗಿ ಇದರ ಸಂಖ್ಯೆ zero ಆಗಿದೆ. ಈ ಉಪ-ಉಪವಿಭಾಗ ನಂಬರ್ ಜೊತೆಯಲ್ಲಿ ಯಾವುದೆ ಸಂಬಂಧವಿರುವುದಿಲ್ಲ ಮತ್ತು content ಮಾಹಿತಿಯೂ ಕೂಡ ಸರಿಯಾಗಿರುವುದಿಲ್ಲ. ಇದು ಇನ್ನು ಹಳೆಯ ನಂಬರನ್ನೇ ತೋರಿಸುತ್ತದೆ. ಇದನ್ನು re-compile ಮಾಡಿ ಸರಿಪಡಿಸಬಹುದು. ಈಗ ಇದರಲ್ಲಿ ಹೊಸ ನಂಬರ್ ಬಂದಿದೆ, ಇಲ್ಲಿ ಹೊಸ chapter ಪ್ರಾರಂಭಿಸೋಣಾ.

ಮೊದಲನೆ chapter ಎಂದು ಹೆಸರಿಟ್ಟು ಎರಡು ಬಾರಿ compile ಮಾಡಿ ನೋಡೋಣಾ. Contentsನಲ್ಲಿ ಯಾವುದೆ ಬದಲಾವಣೆಯೂ ಇಲ್ಲ ಮತ್ತು ಇತರೆ ಅಂಶಗಳು ಕೂಡ ಕಾಣೆಯಾಗಿದೆ. ಕಾರಣವಿಷ್ಟೆ Chapter command ಹೊಸ pageನ್ನು ತೋರಿಸಿದೆ. ಮುಂದಿನ pageಗೆ ಹೋಗಿ ಇದನ್ನು ಖಾತರಿಪಡಿಸಿಕೊಳ್ಳೋಣಾ. ಈ ಹೊಸ pageನಲ್ಲಿ chapter ಕಾಣಿಸುತ್ತದೆ ಮತ್ತು ಅದರಲ್ಲಿ ಹೋಗಿ ನೋಡಿದರೆ ಮತ್ತೊಮ್ಮೆ ಹೊಸ Chapter ಮಾಹಿತಿಯೂ ಇದರ Contentsನಲ್ಲಿ ಕಾಣಿಸುತ್ತದೆ.

ನಿಮಗೆ appendix ತೋಗಿಸಬೇಕಾದರೆ appendix command ಸೇರಿಸಿ. ನಾನು ಇಲ್ಲಿ ಮೊದಲನೆ Chapterನಲ್ಲಿ appendix ಸೇರಿಸುತ್ತೇನೆ, ನಂತರ ಎರಡು ಬಾರಿ compile ಮಾಡುತ್ತೇನೆ. ಇಲ್ಲಿ First Chapter ಬಂದಿರುವುದನ್ನು ನೋಡಬಹುದು ಮತ್ತೆ ಹಿಂದೆ ಹೋಗಿ ನೋಡಿದಾಗ appendix ಹೊಸ pageನಲ್ಲಿ ಬಂದಿರುವುದನ್ನು ಗಮನಿಸಬಹುದು. ಇಲ್ಲಿ ಒಟ್ಟು ಪುಟಗಳ ಸಂಖ್ಯೆ 4ಕ್ಕೆ ಬಂದಿದೆ ಮತ್ತು ಇಲ್ಲಿ appendix ಎಂಬ ಪದವನ್ನು ನೋಡಬಹುದು ಮತ್ತೆ ಹೊಸ Chapter ಸೇರಿಸಿ compile ಮಾಡಿದರೆ ಪುಟದ ಸಂಖ್ಯೆ 5ಕ್ಕೆ ಹೋಗುತ್ತದೆ ಎರಡು ಬಾರಿ compile ಮಾಡಿದರೆ Contents ಸರಿಯಾಗಿ ಕಾಣುತ್ತದೆ.

Report Classನಿಂದ ಮತ್ತೆ Article Classಗೆ ಬದಲಾಯಿಸಿದರೆ ಏನಾಗುತ್ತದೆ ಎಂಬುದನ್ನು ನೋಡೋಣ. ಇಲ್ಲಿ compile ಮಾಡಿ ನೋಡೋಣ. Latexನಲ್ಲಿ ಸ್ವಲ್ಪ error ತೋರಿಸುತ್ತದೆ. ಈ ರೀತಿ stop ಆದಾಗ ಇದನ್ನು ಸರಿಪಡಿಸಲು ಎರಡು ವಿಧಾನಗಳಿವೆ. ಮೊದಲನೆಯದು X type ಮಾಡಿ ಹೊರಗಡೆ (out) ಆಗುವುದು. ಸಾಮಾನ್ಯವಾಗಿ PDF file ಮೊದಲಿನ ಪುಟಗಳನ್ನು ಒಳಗೊಂಡಿರುತ್ತದೆ. ಆದರೆ ಈ ಸಂದರ್ಭದಲ್ಲಿ ಯಾವುದೆ page number ತೋರಿಸುವುದಿಲ್ಲ. ತಕ್ಷಣವೆ source fileಗೆ ಹೋಗಿ errorನ್ನು ಸರಿಪಡಿಸಿ ಮುಂದೆ ಹೋಗಬೇಕು. ಹೊಸಬರು ನಿರಂತರವಾಗಿ compile ಮಾಡಿದರೆ error ಕಂಡುಹಿಡಿಯುವುದು ತುಂಬ ಸುಲಭ. ಕೆಲವು ಸಂದರ್ಭಗಳಲ್ಲಿ ತಪ್ಪುಗಳಿಂದ latex pack ಆಗುತ್ತದೆ. Documents ಹಾಗಾಗಿ ಕೊನೆಗೊಳ್ಳುತ್ತದೆ ಮತ್ತು open environment close ಆಗುತ್ತದೆ. End document ನಂತರ ಬರುವ ಯಾವುದೆ ಅಂಶಗಳಿಗೆ latexನಲ್ಲಿ ಯಾವುದೆ ತೊಂದರೆ ಇಲ್ಲ ಮತ್ತು ಈ ಭಾಗವನ್ನು ಬದಲಾಯಿಸುವ ಅಗತ್ಯವಿರುವುದಿಲ್ಲ. ಮಧ್ಯವರ್ತಿ end documentನಲ್ಲಿ ತೆಗೆದುಹಾಕಬಹುದು ಮತ್ತೆ latexನಲ್ಲಿ errorಗಳನ್ನು ತೋರಿಸಿದಾಗ ಅದನ್ನು ನಿರ್ಲಕ್ಷಿಸಿ enter press ಮಾಡಿ ಮುಂದೆ ಹೋಗಬಹುದು. ನಾನು ಹೀಗೆ ಮಾಡಿದಾಗ ಏನಾಯಿತು ಅಂದರೆ, ಇದರಲ್ಲಿ ಎರಡು ಪುಟಗಳಿವೆ. ಮೊದಲನೆ ಪುಟದಲ್ಲಿ ಮಾಹಿತಿಯೂ ವ್ಯವಸ್ಥಿತವಾಗಿಲ್ಲ. ಇದರಲ್ಲಿ chapter ಇದೆ. ಇದನ್ನು ತೆಗೆದುಹಾಕಿ ಎರಡು ಬಾರಿ compile ಮಾಡಿದರೆ ಮತ್ತೆ error ತೋರಿಸುತ್ತದೆ. Table of Contentsನಲ್ಲಿಯೂ chapter ಇದೆ. ಇದನ್ನು ಕೂಡ ಸರಿಪಡಿಸೋಣಾ. ಈಗ ಯಾವುದೆ error ಇಲ್ಲದೆ ಎಲ್ಲವೂ ಒಂದೆ ಪುಟದಲ್ಲಿ ಬಂದಿದೆ ಮತ್ತು Contents ಕೂಡ ಸರಿಯಾಗಿದೆ.

ನೀವು ನಿರ್ಭಯವಾಗಿ source fileನಲ್ಲಿ ಬದಲಾವಣೆ ಮಾಡಬಹುದು. ಉದಾಹರಣೆಗೆ :- Main text, Appendix ಹಾಗೂ report styleನಲ್ಲಿ ಹೊಸ ವಿಭಾಗ, ಹೊಸ ಉಪ-ಉಪವಿಭಾಗ ಸೇರಿಸಬೇಕಾದರೆ, ಈ Tutorialನಲ್ಲಿ ಕೊಟ್ಟಿರುವ commandಗಳನ್ನು ನಿಮಗೆ ಆತ್ಮವಿಶ್ವಾಸ ಬರುವವರೆಗೂ ಇದನ್ನು ಅಭ್ಯಾಸ ಮಾಡಿ. ನೀವು source fileನಲ್ಲಿ ಮಾಡಿದ ಪ್ರತಿಯೊಂದು ಬದಲಾವಣೆಯೂ compile ಆಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಹೊಸಬರಿಗೆ ಈ ನಿಯಮ ಪಾಲಿಸದಿದ್ದರೆ ತೊಂದರೆಗೆ ಒಳಗಾಗುವುದು ಸಹಜ. Latex engineಗೆ ಸಂಬಂಧಪಟ್ಟುದಾಗಿ Emacsನಲ್ಲಿ ತೋರಿಸುವ textನ size, color ಇತರೆ ಮುಖ್ಯವಲ್ಲ. ಈ source file ಸರಿಯಾಗಿ ಇರಬೇಕು. ಇದು ಹೇಗೆ ರಚಿಸಲಾಯಿತು ಎಂಬುದು ಮುಖ್ಯವಲ್ಲ.

ಇಲ್ಲಿಗೆ ಈ Tutorialಗೆ ಮುಕ್ತಾಯ. ಮಂಜುನಾಯ್ಕ, ಸಿಡಿಇಇಪಿ, ಐಐಟಿ, ಮುಂಬೈ

Contributors and Content Editors

Nancyvarkey, Sneha