Koha-Library-Management-System/C3/Installation-of-MarcEditor/Kannada

From Script | Spoken-Tutorial
Jump to: navigation, search
Time Narration
00:01 Installation of MarcEditor on Windows ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ, ನಾವು 64-bit Windows ಮಷಿನ್ ನಲ್ಲಿ MarcEditor ಅನ್ನು ಇನ್ಸ್ಟಾಲ್ ಮಾಡಲು ಕಲಿಯುವೆವು.
00:16 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Windows 10 Pro Operating System ಮತ್ತು

Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ.

00:27 ಈ ಟ್ಯುಟೋರಿಯಲ್, ಲೈಬ್ರರಿ ಸಿಬ್ಬಂದಿಗೆ ಬಹಳ ಉಪಯುಕ್ತವಾಗಿದೆ.
00:32 ಮುಂದುವರಿಯುವ ಮುನ್ನ, ನಿಮ್ಮ ಮಷಿನ್ ನಲ್ಲಿ ಈ ಕೆಳಗಿನವುಗಳು ಇರುವುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ. -

Windows 10, 8 ಅಥವಾ 7 ಮತ್ತು

00:43 ಯಾವುದೇ ವೆಬ್-ಬ್ರೌಸರ್.

ಉದಾಹರಣೆಗೆ: Internet Explorer, Firefox ಅಥವಾ Google Chrome.

00:51 ಈಗ ಅಸ್ತಿತ್ವದಲ್ಲಿರುವ ನಿಮ್ಮ ಲೈಬ್ರರಿಯಲ್ಲಿ, ನೀವು ಲೈಬ್ರರಿಯ ದಾಖಲೆಗಳನ್ನು 'ಎಕ್ಸೆಲ್ ಸ್ಪ್ರೆಡ್-ಶೀಟ್' ನಲ್ಲಿ ಹೊಂದಿರಬಹುದು.
00:58 ಮತ್ತು, ನಿಮ್ಮ ಲೈಬ್ರರಿಯು ಈಗ Koha Library Management System ಗೆ ಸ್ಥಳಾಂತರವಾಗುತ್ತಿದೆ.
01:05 ಆದ್ದರಿಂದ, ಎಲ್ಲಾ ದಾಖಲೆಗಳನ್ನು 'ಎಕ್ಸೆಲ್' ನಿಂದ 'MARC' ಫಾರ್ಮ್ಯಾಟ್ ಗೆ ಪರಿವರ್ತಿಸಬೇಕು.
01:12 'ಎಕ್ಸೆಲ್ ಸ್ಪ್ರೆಡ್-ಶೀಟ್' ನಲ್ಲಿನ ದಾಖಲೆಗಳನ್ನು ಮೊದಲು MARC ಫಾರ್ಮ್ಯಾಟ್ ಗೆ ಪರಿವರ್ತಿಸಬೇಕು. ನಂತರ 'ಕೋಹಾ' ದಲ್ಲಿ ಇಂಪೋರ್ಟ್ ಮಾಡಿಕೊಳ್ಳಬೇಕು. ಇದನ್ನು ತಿಳಿದಿರುವುದು ಬಹಳ ಮುಖ್ಯವಾಗಿದೆ.
01:26 ಏಕೆಂದರೆ, 'ಎಕ್ಸೆಲ್ ' ಫಾರ್ಮ್ಯಾಟ್ ನಲ್ಲಿರುವ ಡೇಟಾವನ್ನು ನೇರವಾಗಿ ಇಂಪೋರ್ಟ್ ಮಾಡಿಕೊಳ್ಳಲು ಕೋಹಾ ಗೆ ಅವಕಾಶವಿಲ್ಲ.
01:35 ನಾವು ಈಗ ಆರಂಭಿಸೋಣ.
01:37 Excel ಡೇಟಾವನ್ನು MARC ಫೈಲ್ ಆಗಿ ಎಂದರೆ (dot) mrc ಫಾರ್ಮ್ಯಾಟ್ ಗೆ ಪರಿವರ್ತಿಸಲು, ನಾವು MarcEdit ಸಾಫ್ಟ್ವೇರ್ ಅನ್ನು ಬಳಸುವವರಿದ್ದೇವೆ.
01:48 ಈ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಲು, ಬ್ರೌಸರ್ ಗೆ ಹೋಗಿ ಮತ್ತು ಈ URL ಅನ್ನು ಟೈಪ್ ಮಾಡಿ.
01:55 Downloads ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
02:00 Current Development ನ ಅಡಿಯಲ್ಲಿ, MarcEdit 7.0.x/MacOS 3.0.x ಗೆ ಹೋಗಿ.

Windows 64-bit download ಅನ್ನು ಗುರುತಿಸಿ.

02:17 ಆದಾಗ್ಯೂ, ನಿಮ್ಮ ಹತ್ತಿರ 32-bit ಮಷಿನ್ ಇದ್ದರೆ, ಆಗ ನೀವು Windows 32-bit download ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
02:26 ನಿಮ್ಮ ಮಷಿನ್ 32-bit ಅಥವಾ 64-bit ಆಗಿದೆಯೇ ಎಂದು ಪರಿಶೀಲಿಸಲು, ಮಷಿನ್ ನ ಕೆಳಗಿನ ಎಡಮೂಲೆಗೆ ಹೋಗಿ.
02:35 Start ಐಕಾನ್ ಮೇಲೆ ಕ್ಲಿಕ್ ಮಾಡಿ.
02:38 ಮೇಲ್ಗಡೆ ಸ್ಕ್ರೋಲ್ ಮಾಡಿ ಮತ್ತು Settings ಮೇಲೆ ಕ್ಲಿಕ್ ಮಾಡಿ.
02:43 ಈ ಐಕಾನ್ ಗಳಿಂದ, System- Display, notifications, apps, power ಗಳ ಮೇಲೆ ಕ್ಲಿಕ್ ಮಾಡಿ.
02:51 ಇದು ಎಡಭಾಗದಲ್ಲಿ ಕೆಲವು ಆಯ್ಕೆಗಳೊಂದಿಗೆ ಮತ್ತೊಂದು ವಿಂಡೋವನ್ನು ತೆರೆಯುತ್ತದೆ.
02:56 About ಎಂಬ ಟ್ಯಾಬ್ ಅನ್ನು ಗುರುತಿಸಿ ಮತ್ತು ಅದನ್ನು ಕ್ಲಿಕ್ ಮಾಡಿ.
03:00 ಇದೇ ಪೇಜ್ ನಲ್ಲಿ, ಬಲಗಡೆಯಲ್ಲಿ, PC ಎಂಬ ವಿಭಾಗದ ಅಡಿಯಲ್ಲಿ, System type ಅನ್ನು ಗುರುತಿಸಿ.
03:08 ನಿಮ್ಮ ಮಷಿನ್ ನ 'ಆಪರೇಟಿಂಗ್ ಸಿಸ್ಟಂ' ನ ವಿವರಗಳನ್ನು ತೋರಿಸಲಾಗುವುದು.
03:13 ನನ್ನ ಮಷಿನ್ ಗಾಗಿ, ಇದು 64-bit operating system, x64-based processor ಎಂದು ಹೇಳುತ್ತದೆ.
03:21 ವಿವರಗಳನ್ನು ಓದಿದ ನಂತರ, ವಿಂಡೋಅನ್ನು ಕ್ಲೋಸ್ ಮಾಡಿ.
03:25 ಹೀಗೆ ಮಾಡಲು, ಮೇಲಿನ ಬಲಮೂಲೆಗೆ ಹೋಗಿ ಮತ್ತು ಕ್ರಾಸ್ ಗುರುತಿನ ಮೇಲೆ ಕ್ಲಿಕ್ ಮಾಡಿ.
03:31 ನಾವು ಮತ್ತೆ ಅದೇ Downloads ಪೇಜ್ ಗೆ ಹಿಂತಿರುಗುತ್ತೇವೆ,
03:36 ನನ್ನ ಮಷಿನ್ 64-bit ಇರುವುದರಿಂದ, ನಾನು 64-bit download ಮೇಲೆ ಕ್ಲಿಕ್ ಮಾಡುವೆನು.
03:42 64-bit download ಎಂಬ ಶೀರ್ಷಿಕೆಯ ಇನ್ನೊಂದು ಹೊಸ ವಿಂಡೋ, ಎರಡು ವಿಭಾಗಗಳೊಂದಿಗೆ ತೆರೆದುಕೊಳ್ಳುತ್ತದೆ -

Non-Administrator ಮತ್ತು

Administrator.

03:53 ಆಮೇಲೆ, ನಾನು Administrator ವಿಭಾಗದ ಕೆಳಗೆ, Download MarcEdit 7 ಲಿಂಕ್ ಮೇಲೆ ಕ್ಲಿಕ್ ಮಾಡುವೆನು.
04:02 ಏಕೆಂದರೆ, ನಾನು ನನ್ನ ಲೈಬ್ರರಿಯ ಗೊತ್ತುಪಡಿಸಿದ Koha administrator ಆಗಿದ್ದೇನೆ.
04:09 MarcEdit_Setup64Admin.msi ಎಂಬ ಒಂದು ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ.
04:16 ನಾವು ಇಲ್ಲಿ 2 ಆಯ್ಕೆಗಳನ್ನು ನೋಡಬಹುದು -

Save File ಮತ್ತು

Cancel.

04:22 ಕೆಳಗೆ ಇರುವ Save File ಬಟನ್ ಮೇಲೆ ಕ್ಲಿಕ್ ಮಾಡಿ.
04:26 ಹಾಗೆ ಮಾಡಿದ ನಂತರ, ನಿಮ್ಮ ಮಷಿನ್ ನ Downloads ಫೋಲ್ಡರ್ ಗೆ ಹೋಗಿ.
04:31 ಇಲ್ಲಿ, MarcEdit_Setup64Admin.msi ಫೈಲ್, ಸೇವ್ ಆಗಿರುವುದನ್ನು ನೀವು ನೋಡಬಹುದು.
04:40 ಈಗ, ಸೇವ್ ಮಾಡಿದ ಫೈಲ್ ಮೇಲೆ ರೈಟ್-ಕ್ಲಿಕ್ ಮಾಡಿ. ಮತ್ತು ಇಲ್ಲಿ ಕಾಣಿಸುತ್ತಿರುವ ಆಯ್ಕೆಗಳಿಂದ Install ಮೇಲೆ ಕ್ಲಿಕ್ ಮಾಡಿ.
04:48 User Account Control ಡೈಲಾಗ್-ಬಾಕ್ಸ್ ನಲ್ಲಿ, Yes ಮೇಲೆ ಕ್ಲಿಕ್ ಮಾಡಿ.
04:56 Welcome to the MarcEdit 7 Setup Wizard ಎಂಬ ಹೆಸರಿನ ಇನ್ನೊಂದು ವಿಂಡೋ ಕಾಣಿಸಿಕೊಳ್ಳುತ್ತದೆ.
05:04 ಪೇಜ್ ನ ಕೆಳಗಡೆ ಇರುವ Next ಬಟನ್ ಮೇಲೆ ಕ್ಲಿಕ್ ಮಾಡಿ.
05:08 License Agreement ಎಂಬ ಟೈಟಲ್ ನೊಂದಿಗೆ, ಇನ್ನೊಂದು ಹೊಸ ವಿಂಡೋ ಕಾಣಿಸಿಕೊಳ್ಳುತ್ತದೆ.
05:14 License Agreement ಅನ್ನು ಎಚ್ಚರಿಕೆಯಿಂದ ಓದಿ.
05:18 ಮತ್ತು, I do not agree ಹಾಗೂ I agree ಈ ಎರಡು ಆಯ್ಕೆಗಳಿಂದ, I Agree ರೇಡಿಯೊ- ಬಟನ್ ಮೇಲೆ ಕ್ಲಿಕ್ ಮಾಡಿ.
05:28 ನಂತರ, ವಿಂಡೋದ ಕೆಳಗಡೆ ಇರುವ Next ಬಟನ್ ಮೇಲೆ ಕ್ಲಿಕ್ ಮಾಡಿ.
05:33 Select Installation Folder ಎಂಬ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ.
05:39 ಇನ್ಸ್ಟಾಲ್ ಮಾಡಿದ ಸಾಫ್ಟ್ವೇರ್ ಅನ್ನು, ಸೇವ್ ಮಾಡುವ ಫೋಲ್ಡರ್ ನ 'ಪಾಥ್' ಅನ್ನು ಇದು ತೋರಿಸುತ್ತದೆ.
05:45 ಪರ್ಯಾಯವಾಗಿ, ನೀವು ಈ ಸಾಫ್ಟ್ವೇರ್ ಅನ್ನು ನಿಮ್ಮ ಆಯ್ಕೆಯ ಬೇರೆ ಫೋಲ್ಡರ್ ನಲ್ಲಿ ಇನ್ಸ್ಟಾಲ್ ಮಾಡಬಹುದು.

Folder ಫೀಲ್ಡ್ ನಲ್ಲಿ, ಅಗತ್ಯವಿರುವ 'ಪಾಥ್' ಅನ್ನು ಟೈಪ್ ಮಾಡುವ ಮೂಲಕ ಅದನ್ನು ಮಾಡಿ.

05:56 ನೀವು Browse ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ಬೇಕಾದ path ಅನ್ನು ಸಹ ಆಯ್ಕೆಮಾಡಬಹುದು.
06:03 ಆದಾಗ್ಯೂ, ನಾನು Folder ಫೀಲ್ಡ್ ನಲ್ಲಿ, ಫೋಲ್ಡರ್ ಪಾಥ್ ಅನ್ನು ಹಾಗೇ ಇಡುತ್ತೇನೆ.
06:09 ಈಗ ವಿಂಡೋದ ಕೆಳಗಡೆ, Next ಬಟನ್ ಮೇಲೆ ಕ್ಲಿಕ್ ಮಾಡಿ.
06:14 ಇನ್ನೊಂದು ಹೊಸ ವಿಂಡೋ, Confirm Installation ತೆರೆದುಕೊಳ್ಳುತ್ತದೆ.
06:19 ಈಗ ಇದೇ ವಿಂಡೋದ ಕೆಳಗಡೆ, Next ಬಟನ್ ಮೇಲೆ ಕ್ಲಿಕ್ ಮಾಡಿ.
06:25 Installing MarcEdit 7 ವಿಂಡೋ ತೆರೆದುಕೊಳ್ಳುತ್ತದೆ.
06:30 ಇದಾದ ನಂತರ, ನಾವು ಒಂದು ಸಕ್ಸೆಸ್ ಮೆಸೇಜ್ ವಿಂಡೋವನ್ನು ನೋಡುತ್ತೇವೆ.

ಇದು - Installation Complete.

MarcEdit 7 has been successfully installed ಎಂದು ಹೇಳುತ್ತದೆ.

06:42 ಈ ವಿಂಡೋದಿಂದ ಹೊರಬರಲು, Close ಬಟನ್ ಮೇಲೆ ಕ್ಲಿಕ್ ಮಾಡಿ.
06:47 ಒಂದು ವಿಂಡೋ, MarcEdit 7.0.250 By Terry Reese ಟೈಟಲ್ ನೊಂದಿಗೆ ತೆರೆದುಕೊಳ್ಳುತ್ತದೆ.
06:56 ಈಗ, ತೆರೆದಿದ್ದ ಎಲ್ಲಾ ವಿಂಡೋಗಳನ್ನು ಮಿನಿಮೈಜ್ ಮಾಡಿ.
07:01 ಡೆಸ್ಕ್ಟಾಪ್ ನಲ್ಲಿ, ಒಂದು ಶಾರ್ಟ್ಕಟ್ ಅನ್ನು ರಚಿಸಲಾಗಿದೆ ಎಂದು ನೀವು ನೋಡುವಿರಿ.
07:06 ಇದರೊಂದಿಗೆ, ನಾವು MarcEditor ಅನ್ನು 64-bit Windows ಮಷಿನ್ ನ ಡೆಸ್ಕ್ಟಾಪ್ (Desktop) ಮೇಲೆ ಯಶಸ್ವಿಯಾಗಿ ಇನ್ಸ್ಟಾಲ್ ಮಾಡಿದ್ದೇವೆ.
07:14 ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
07:22 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
07:32 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
07:36 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.

ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.

07:48 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14