Koha-Library-Management-System/C3/Import-MARC-to-Koha/Kannada

From Script | Spoken-Tutorial
Revision as of 10:55, 9 April 2019 by Sandhya.np14 (Talk | contribs)

Jump to: navigation, search
Time Narration
00:01 Import MARC file into Koha ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ನಾವು: KOHA ದಲ್ಲಿ MARC ಫೈಲ್ ಅನ್ನು ಇಂಪೋರ್ಟ್ ಮಾಡಲು ಮತ್ತು ಇಂಪೋರ್ಟ್ ಮಾಡಲಾದ ಡೇಟಾಅನ್ನು OPAC ನಲ್ಲಿ ಹುಡುಕಲು ಕಲಿಯುವೆವು.
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04 ,

00:28 Koha ಆವೃತ್ತಿ 16.05 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ.
00:36 ನಿಮ್ಮ ಆಯ್ಕೆಯ ಬೇರೆ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು.
00:41 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು - ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು.
00:47 ಇದನ್ನು ಅಭ್ಯಾಸ ಮಾಡಲು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.

ಮತ್ತು, ನೀವು Koha ದಲ್ಲಿ, Admin ಆಕ್ಸೆಸ್ ಅನ್ನು ಸಹ ಹೊಂದಿರಬೇಕು.

00:58 ಇಲ್ಲದಿದ್ದಲ್ಲಿ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ.
01:05 'ಕೋಹಾ' ದಲ್ಲಿ 'ರೆಕಾರ್ಡ್' ಗಳನ್ನು ಇಂಪೋರ್ಟ್ ಮಾಡುವುದನ್ನು ಈ ಎರಡು ಹಂತಗಳಲ್ಲಿ ಮಾಡಲಾಗುತ್ತದೆ:

Stage MARC records for import ಹಾಗೂ Manage staged records.

01:18 ಮೊದಲು ನಮ್ಮ Superlibrarian ಆಕ್ಸೆಸ್ ನೊಂದಿಗೆ, Koha ದಲ್ಲಿ ಲಾಗ್-ಇನ್ ಮಾಡೋಣ.
01:24 Home ಪೇಜ್ ನಲ್ಲಿ, Tools ಮೇಲೆ ಕ್ಲಿಕ್ ಮಾಡಿ.
01:28 ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. Catalog ವಿಭಾಗದ ಕೆಳಗೆ, Stage MARC records for import ನ ಮೇಲೆ ಕ್ಲಿಕ್ ಮಾಡಿ.
01:40 Stage MARC records for import ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
01:46 Stage records into the reservoir ಎಂಬ ವಿಭಾಗಕ್ಕೆ ಹೋಗಿ.
01:51 ಇಲ್ಲಿ, Select the file to stage ನ ಬದಿಯಲ್ಲಿರುವ Browse... ಮೇಲೆ ಕ್ಲಿಕ್ ಮಾಡಿ.
01:58 File Upload ಎಂಬ ವಿಂಡೋ ತೆರೆದುಕೊಳ್ಳುತ್ತದೆ. ನಂತರ Downloads ಫೋಲ್ಡರ್ ಗೆ ಹೋಗಿ.
02:06 ಇಲ್ಲಿ, TestData.mrc ಎಂಬ ಫೈಲ್ ಅನ್ನು ಗುರುತಿಸಿ.
02:12 ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ, ನಾವು TestData.mrc ಫೈಲ್ ಅನ್ನು ಕ್ರಿಯೇಟ್ ಮಾಡಿದ್ದೆವು ಎಂದು ನೆನಪಿಸಿಕೊಳ್ಳಿ.
02:20 ಈಗಾಗಲೇ ಆಯ್ಕೆ ಆಗಿರದಿದ್ದರೆ, TestData.mrc ಫೈಲ್ ಅನ್ನು ಆಯ್ಕೆಮಾಡಿ.

ಮತ್ತು, ಪೇಜ್ ನ ಕೆಳಗಿರುವ Open ಬಟನ್ ಮೇಲೆ ಕ್ಲಿಕ್ ಮಾಡಿ.

02:32 ಇದೇ ಪೇಜ್ ನಲ್ಲಿ, Browse ಟ್ಯಾಬ್ ನ ಬದಿಯಲ್ಲಿ, TestData.mrc ಎಂದು ಫೈಲ್ ನ ಹೆಸರನ್ನು ನೀವು ನೋಡುವಿರಿ.
02:43 ಈಗ, ಪೇಜ್ ನ ಕೆಳಗಿರುವ Upload file ಬಟನ್ ಮೇಲೆ ಕ್ಲಿಕ್ ಮಾಡಿ.
02:49 ಕಂದು ಬಣ್ಣದಲ್ಲಿ Upload progress ಬಾರ್ ಅನ್ನು ನೀವು ನೋಡುವಿರಿ.
02:55 ಅಪ್ಲೋಡ್ 100% ಪೂರ್ಣಗೊಂಡ ನಂತರ, ಕೆಲವು ವಿವರಗಳನ್ನು ತುಂಬಲು ನಮಗೆ ಸೂಚಿಸಲಾಗಿದೆ.
03:03 ಮೊದಲು, Comments about this file ಗಾಗಿ ಫೀಲ್ಡ್ ಅನ್ನು ತುಂಬಿ.
03:09 ಕೋಹಾದಲ್ಲಿ ಅಪ್ಲೋಡ್ ಮಾಡಿದ ಫೈಲ್ ಅನ್ನು ಗುರುತಿಸಲು ಇದು ಉಪಯುಕ್ತವಾಗಿದೆ.
03:14 ನಾನು Book Data ಎಂದು ನಮೂದಿಸುವೆನು.
03:18 ನಂತರ Record type ಇದೆ. ಇಲ್ಲಿ ಕೋಹಾ, ಡೀಫಾಲ್ಟ್ ಆಗಿ, Bibliographic ಅನ್ನು ಆಯ್ಕೆಮಾಡುತ್ತದೆ.
03:26 ಹೀಗೆಯೇ, Character encoding ಗಾಗಿ ಕೋಹಾ, ಡೀಫಾಲ್ಟ್ ಆಗಿ, UTF-8 (Default) ಅನ್ನು ಆಯ್ಕೆಮಾಡುತ್ತದೆ.
03:35 ಆಮೇಲೆ, Look for existing records in catalog? ಎಂಬ ವಿಭಾಗಕ್ಕೆ ಬನ್ನಿ.
03:41 ಈ ವಿಭಾಗದ ಕೆಳಗೆ, Record matching rule: ಗೆ ಹೋಗಿ.

ಕೋಹಾ, ಡೀಫಾಲ್ಟ್ ಆಗಿ, Do not look for matching records ಅನ್ನು ಆಯ್ಕೆಮಾಡುತ್ತದೆ.

03:51 ನೀವು ಈಗಿರುವ ರೆಕಾರ್ಡ್ ಗಳನ್ನು ಹೊಂದಿಸಲು (match) ಬಯಸಿದರೆ, ಡ್ರಾಪ್-ಡೌನ್ ನಿಂದ ಇನ್ನೊಂದು ಆಯ್ಕೆಯನ್ನು, ಎಂದರೆ ISBN/ISSN number ಅನ್ನು ಆರಿಸಿಕೊಳ್ಳಿ.
04:04 ಈಗ ನಾವು Action if matching record found ಗೆ ಬರುತ್ತೇವೆ.
04:09 ಕೋಹಾ, ಡೀಫಾಲ್ಟ್ ಆಗಿ, Replace existing record with incoming record ಅನ್ನು ಆಯ್ಕೆಮಾಡುತ್ತದೆ.
04:16 ನಂತರ Action if no match is found ಬರುತ್ತದೆ. ಕೋಹಾ, ಡೀಫಾಲ್ಟ್ ಆಗಿ, Add incoming record ಅನ್ನು ಆಯ್ಕೆಮಾಡುತ್ತದೆ.
04:25 ಆಮೇಲೆ, ನಾವು Check for embedded item record data? ಎಂಬ ವಿಭಾಗಕ್ಕೆ ಬರುತ್ತೇವೆ.

ಇಲ್ಲಿ Yes ಮತ್ತು No ಎಂಬ ಎರಡು ಆಯ್ಕೆಗಳು ಇವೆ.

04:37 ಕೋಹಾ, ಡೀಫಾಲ್ಟ್ ಆಗಿ Yes ಅನ್ನು ಆಯ್ಕೆಮಾಡುತ್ತದೆ.
04:41 ಕೋಹಾ, How to process items ಗಾಗಿ, Always add items ಅನ್ನು ಡೀಫಾಲ್ಟ್ ಆಗಿ ಆಯ್ಕೆಮಾಡುತ್ತದೆ.
04:48 ಇಲ್ಲಿ ಬೇರೆ ಆಯ್ಕೆಗಳು ಸಹ ಇವೆ. ನಿಮ್ಮ ಆದ್ಯತೆಯ ಪ್ರಕಾರ, ಇವುಗಳಲ್ಲಿ ಯಾವುದನ್ನಾದರೂ ನೀವು ಆಯ್ಕೆ ಮಾಡಬಹುದು.
04:56 ಪೇಜ್ ನ ಕೆಳಗಿರುವ Stage for import ಬಟನ್ ಮೇಲೆ ಕ್ಲಿಕ್ ಮಾಡಿ.

ನೀವು “Job progress” ಅನ್ನು ನೀಲಿ ಬಣ್ಣದ ಪಟ್ಟಿಯಲ್ಲಿ ನೋಡುವಿರಿ.

05:06 progress 100% ಪೂರ್ಣಗೊಂಡಾಗ, Stage MARC records for import ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
05:17 ನಮ್ಮ 'ಎಕ್ಸೆಲ್ ಶೀಟ್' ನಲ್ಲಿದ್ದ ಡೇಟಾವನ್ನು ಈಗ ನಾವು ಯಶಸ್ವಿಯಾಗಿ ಇಂಪೋರ್ಟ್ ಮಾಡಿದ್ದೇವೆ ಎಂಬುದನ್ನು ಗಮನಿಸಿ.
05:25 ಇದು ಕೆಳಗಿನ ವಿವರಗಳನ್ನು ಹೊಂದಿದೆ.
05:28 ಗಮನಿಸಿ, ನಿಮ್ಮ .mrc (ಡಾಟ್ ಎಮ್ ಆರ್ ಸಿ) ಡೇಟಾ ಪ್ರಕಾರ, ನೀವು ನಿಮ್ಮ 'ಕೊಹಾ ಇಂಟರ್ಫೇಸ್' ನಲ್ಲಿ ಬೇರೆ ವ್ಯಾಲ್ಯೂಅನ್ನು ನೋಡುವಿರಿ.
05:36 ಇದೇ ಪೇಜ್ ನಲ್ಲಿ, ಶೀರ್ಷಿಕೆಯ ಮೇಲೆ, ನೀವು ಈ ಎರಡು ಆಯ್ಕೆಗಳನ್ನು ನೋಡುತ್ತೀರಿ:

Stage MARC records ಮತ್ತುManage staged records.

05:48 ಗಮನಿಸಿ: ನಾನು Excel ಫೈಲ್, ಎಂದರೆ TestData ಅನ್ನು ಈಗಾಗಲೇ ಇಂಪೋರ್ಟ್ ಮಾಡಿರುವುದರಿಂದ, Stage MARC records ಮೇಲೆ ಕ್ಲಿಕ್ ಮಾಡುವುದಿಲ್ಲ.
06:00 ನಿಮಗೆ ಬೇರಾವುದೇ ಫೈಲ್ ಅನ್ನು ಇಂಪೋರ್ಟ್ ಮಾಡಬೇಕಾಗಿದ್ದರೆ, ಆಗ Stage MARC records ಮೇಲೆ ಕ್ಲಿಕ್ ಮಾಡಿ ಮತ್ತು ಮೊದಲು ಹೇಳಿದ ಹಂತಗಳನ್ನು ಅನುಸರಿಸಿ.
06:11 ನಂತರ, ನಾವು ಇಂಪೋರ್ಟ್ ಮಾಡಲಾದ ದಾಖಲೆಗಳನ್ನು KOHA Catalog ನಲ್ಲಿ ನಿರ್ವಹಿಸಬೇಕು. ಆದ್ದರಿಂದ, Manage staged records ಮೇಲೆ ಕ್ಲಿಕ್ ಮಾಡಿ.
06:22 Manage staged MARC records › Batch 6 ಎಂಬ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ.
06:30 'ಕೋಹಾ', ಈ ಪೇಜ್ ನಲ್ಲಿ, ಇಲ್ಲಿ ತೋರಿಸಿರುವ ವ್ಯಾಲ್ಯೂ ಗಳೊಂದಿಗೆ ಕೆಳಗಿನ ಫೀಲ್ಡ್ ಗಳನ್ನು ತುಂಬುತ್ತದೆ.
06:37 ಮತ್ತು, ಕೆಳಗಿನ ಫೀಲ್ಡ್ ಗಳಿಗಾಗಿ ಡ್ರಾಪ್-ಡೌನ್ ನಿಂದ ಈ ನಮೂದುಗಳನ್ನು ಡೀಫಾಲ್ಟ್ ಆಗಿ ಆಯ್ಕೆಮಾಡುತ್ತದೆ.
06:45 ಆದರೆ, ನಿಮ್ಮ ಅವಶ್ಯಕತೆಗೆ ಅನುಗುಣವಾಗಿ, ನೀವು ಈ ನಮೂದುಗಳನ್ನು ಅವುಗಳ ಡ್ರಾಪ್-ಡೌನ್ ಗಳಿಂದ ಬದಲಾಯಿಸಬಹುದು.
06:52 ಆಮೇಲೆ, Apply different matching rules ಎಂಬ ಬಟನ್ ಇದೆ.
06:57 ಡೇಟಾಬೇಸ್ ನಲ್ಲಿರುವ ರೆಕಾರ್ಡ್ ಗಳ ನಕಲು ಉಂಟಾಗುವುದನ್ನು ತಪ್ಪಿಸಲು ನೀವು ಈ ಬಟನ್ ಮೇಲೆ ಕ್ಲಿಕ್ ಮಾಡಬಹುದು. ನಾನು ಈ ಬಟನ್ ಅನ್ನು ಬಿಟ್ಟು ಮುಂದೆ ಹೋಗುತ್ತೇನೆ.
07:09 ಈಗ, Add new bibliographic records into this framework ಅನ್ನು ಗುರುತಿಸಿ.

ಮತ್ತು, ನಾನು ಡ್ರಾಪ್-ಡೌನ್ ನಿಂದ BOOKS ಅನ್ನು ಆಯ್ಕೆಮಾಡುವೆನು.

07:20 ಮತ್ತೆ, ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೀವು ಆಯ್ಕೆ ಮಾಡಬಹುದು.
07:25 ಈಗ, ನಾನು Import this batch into the catalog ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡುವೆನು.
07:32 ಆದರೆ ಕ್ಲಿಕ್ ಮಾಡುವ ಮೊದಲು Citation ಎಂಬ ವಿಭಾಗವನ್ನು ನೋಡುವೆವು.
07:37 ದಯವಿಟ್ಟು ಈ ನಿರ್ದಿಷ್ಟ ಸಂಖ್ಯೆಗಳನ್ನು ಗಮನಿಸಿ.

ಎಕ್ಸೆಲ್ ನಿಂದ ನಾವು ಇಂಪೋರ್ಟ್ ಮಾಡಿದ ವಿವರಗಳೊಂದಿಗೆ, ನೀವು ಬೇರೆ ಸಂಖ್ಯೆಯನ್ನು ನೋಡುತ್ತೀರಿ ಎಂಬುದನ್ನು ಗಮನಿಸಿ.

07:48 ಈಗ, Import this batch into the catalog ಎಂಬ ಬಟನ್ ಮೇಲೆ ಕ್ಲಿಕ್ ಮಾಡುವೆವು.
07:55 ನಾವು ಹಾಗೆ ಮಾಡುವಾಗ, Job progress bar ಕಾಣಿಸಿಕೊಳ್ಳುತ್ತದೆ.
08:00 ಪ್ರೊಗ್ರೆಸ್ 100% ಪೂರ್ಣಗೊಂಡಾಗ, Manage staged MARC records › Batch 6 ಎಂಬ ಶೀರ್ಷಿಕೆಯ ಒಂದು ಹೊಸ ಪೇಜ್,
08:06 ಮೊದಲು ನಮೂದಿಸಲಾದ ಈ ಕೆಳಗಿನ ವಿವರಗಳೊಂದಿಗೆ ತೆರೆದುಕೊಳ್ಳುತ್ತದೆ.
08:16 ನಿಮ್ಮ ಇಂಪೋರ್ಟ್ ಅನ್ನು undo ಮಾಡಲು ಸಾಧ್ಯವಿದೆ. ಒಂದು ವೇಳೆ, ಇಂಪೋರ್ಟ್ ಮಾಡಿಕೊಂಡ ಡೇಟಾದಲ್ಲಿ ತಪ್ಪು ಇದ್ದರೆ, ಅದನ್ನು ಸರಿಪಡಿಸಲು ಕೆಳಗಿನಂತೆ ಮಾಡಿ.
08:27 ವಿಭಾಗದ ಕೆಳಗಿರುವ Undo import into catalog ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
08:34 ನಾನು ಇಲ್ಲಿ ಕ್ಲಿಕ್ ಮಾಡುವುದಿಲ್ಲ.
08:37 ನಂತರ Completed import of records ಇದೆ.
08:42 ಸೇರಿಸಲಾದ, ಅಪ್ಡೇಟ್ ಮಾಡಲಾದ ಹಾಗೂ ಇನ್ನಿತರ ರೆಕಾರ್ಡ್ ಗಳ ವಿವರಗಳನ್ನು ಇಲ್ಲಿ ನೀವು ನೋಡುತ್ತೀರಿ.
08:49 ನಂತರ, ಇಂಪೋರ್ಟ್ ಮಾಡಲಾದ ವಿವರಗಳೊಂದಿಗೆ Citation ಎಂಬ ವಿಭಾಗವನ್ನು ನೀವು ನೋಡುತ್ತೀರಿ.
08:56 ಇಂಪೋರ್ಟ್ ಮಾಡುವುದು ಪೂರ್ಣಗೊಂಡ ನಂತರ, ಹೊಸ Record ಗೆ (ರೆಕಾರ್ಡ್) ಒಂದು ಲಿಂಕ್ ಕಾಣಿಸಿಕೊಳ್ಳುತ್ತದೆ.
09:02 ಇಂಪೋರ್ಟ್ ಮಾಡಿಕೊಂಡ ಪ್ರತಿಯೊಂದು Citation ನ ಬಲಭಾಗದಲ್ಲಿ, ಇದು ಗೋಚರಿಸುತ್ತದೆ.
09:08 ಈಗ, 'ಕ್ಯಾಟಲಾಗ್' ನಲ್ಲಿ ಶೀರ್ಷಿಕೆಗಳನ್ನು ಸೇರಿಸಲಾಗಿದೆಯೇ/ಇಲ್ಲವೇ ಎಂದು ನಾವು ಖಚಿತಪಡಿಸುತ್ತೇವೆ.
09:15 ಹಾಗೆ ಮಾಡಲು, ಅದೇ ಪೇಜ್ ನ ಮೇಲ್ಭಾಗದಲ್ಲಿ, Search the catalog ಎಂಬ ಫೀಲ್ಡ್ ಅನ್ನು ಗುರುತಿಸಿ.
09:22 ಕೋಹಾದಲ್ಲಿ ರೆಕಾರ್ಡ್ ಗಳ ಇಂಪೋರ್ಟ್ ಗಳನ್ನು ಖಚಿತಪಡಿಸಲು, ನಾನು ಈಗ ಒಂದು ಸಣ್ಣ ಪರೀಕ್ಷೆಯನ್ನು ಮಾಡುತ್ತೇನೆ.
09:29 ಇದಕ್ಕಾಗಿ, Citation ವಿಭಾಗದಲ್ಲಿ ಇಂಪೋರ್ಟ್ ಮಾಡಿಕೊಂಡ 'ರೆಕಾರ್ಡ್' ನಿಂದ, ಶೀರ್ಷಿಕೆಗಳಲ್ಲಿ ಒಂದನ್ನು ನಾನು ಟೈಪ್ ಮಾಡುತ್ತೇವೆ.
09:37 ನಂತರ, ಫೀಲ್ಡ್ ನ ಬಲಭಾಗದಲ್ಲಿರುವ Submit ಬಟನ್ ಮೇಲೆ ಕ್ಲಿಕ್ ಮಾಡಿ.
09:43 Inorganic chemistry Housecroft, Catherine E. ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
09:50 ಹುಡುಕಲಾದ Title ಫಲಿತಾಂಶವನ್ನು ಕೋಹಾ ತೋರಿಸುತ್ತದೆ. ಇದು ರೆಕಾರ್ಡ್ ಗಳನ್ನು ಸರಿಯಾಗಿ ಇಂಪೋರ್ಟ್ ಮಾಡಲಾಗಿದೆ ಎಂದು ಧೃಡಪಡಿಸುತ್ತದೆ.
09:58 ಇದರೊಂದಿಗೆ, ನಾವು Koha ದಲ್ಲಿ MARC ಅನ್ನು ಇಂಪೋರ್ಟ್ ಮಾಡುವುದನ್ನು ಪೂರ್ಣಗೊಳಿಸಿದ್ದೇವೆ.
10:04 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:

MARC ಫೈಲ್ ಅನ್ನು KOHA ದಲ್ಲಿ ಇಂಪೋರ್ಟ್ ಮಾಡಲು ಮತ್ತು OPAC ನಲ್ಲಿ ಇಂಪೋರ್ಟ್ ಮಾಡಲಾದ ಡೇಟಾ ಅನ್ನು ಹುಡುಕಲು ಕಲಿತಿದ್ದೇವೆ.

10:17 ಅಸೈನ್ಮೆಂಟ್ ಗಾಗಿ -

ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ಮಾರ್ಪಡಿಸಲಾದ MARC ನ 10 ರೆಕಾರ್ಡ್ ಗಳನ್ನು ಬಳಸಿ. ಮತ್ತು, ಅವುಗಳನ್ನು ಕೋಹಾ ದಲ್ಲಿ ಇಂಪೋರ್ಟ್ ಮಾಡಿಕೊಳ್ಳಿ.

10:29 ಸೂಚನೆ: ದಯವಿಟ್ಟು Conversion of Excel data to Marc 21 format ಎಂಬ ಟ್ಯುಟೋರಿಯಲ್ ಅನ್ನು ನೋಡಿ.
10:37 ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
10:45 ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
10:56 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
10:59 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ. ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.
11:10 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14