Difference between revisions of "Koha-Library-Management-System/C3/Copy-cataloging-using-Z39.50/Kannada"

From Script | Spoken-Tutorial
Jump to: navigation, search
 
Line 297: Line 297:
 
|09:52
 
|09:52
 
| '''Results''' ಎಂಬ ಇನ್ನೊಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. ಇದು -
 
| '''Results''' ಎಂಬ ಇನ್ನೊಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. ಇದು -
'''Server''', '''Title''', '''Author''', '''Date''', '''Edition''', '''ISBN''', '''LCCN''', '''MARC '''and '''Card''' ಎಂಬ ಶೀರ್ಷಿಕೆಗಳೊಂದಿಗೆ ವಿವರಗಳನ್ನು ತೋರಿಸುತ್ತದೆ.
+
'''Server''', '''Title''', '''Author''', '''Date''', '''Edition''', '''ISBN''', '''LCCN''', '''MARC '''ಮತ್ತು '''Card''' ಎಂಬ ಶೀರ್ಷಿಕೆಗಳೊಂದಿಗೆ ವಿವರಗಳನ್ನು ತೋರಿಸುತ್ತದೆ.
  
 
|-
 
|-

Latest revision as of 15:49, 30 April 2019

Time
Narration
00:01 Copy Cataloging using Z39.50 ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನಾವು, Z39.50ಅನ್ನು ಬಳಸಿ catalog ನಲ್ಲಿ ರೆಕಾರ್ಡ್ ಗಳನ್ನು ಹೇಗೆ ಸೇರಿಸುವುದೆಂದು ಕಲಿಯುವೆವು.
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux operating system 16.04

00:28 ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ.
00:33 ನೀವು ಇಂಟರ್ನೆಟ್ ಗೆ ಸಂಪರ್ಕ ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
00:38 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು- ಲೈಬ್ರರಿ ಸೈನ್ಸ್,
00:45 'ಕ್ಯಾಟಲಾಗಿಂಗ್ ಸ್ಟ್ಯಾಂಡರ್ಡ್' ಗಳು, AACR2 ಮತ್ತು MARC21 ಇವುಗಳನ್ನು ತಿಳಿದಿರಬೇಕು.
00:54 ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.
01:00 ಮತ್ತು, Koha ದಲ್ಲಿ Admin ಆಕ್ಸೆಸ್ ಅನ್ನು ಸಹ ನೀವು ಹೊಂದಿರಬೇಕು.
01:05 ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ.
01:13 Z39.50 ಎಂದರೇನು?
01:18 Z39.50 - ಇದು, ರಿಮೋಟ್ ಕಂಪ್ಯೂಟರ್ ಡೇಟಾಬೇಸ್ ಗಳಿಂದ ಮಾಹಿತಿಯನ್ನು ಹುಡುಕುವ ಮತ್ತು ಪುನಃ ಪಡೆದುಕೊಳ್ಳುವ client–server protocol ಆಗಿದೆ.

ಸಂಕ್ಷಿಪ್ತವಾಗಿ, ಇದು ಕ್ಯಾಟಲಾಗಿಂಗ್ ಅನ್ನು ನಕಲು ಮಾಡಲು ಬಳಸುವ ಒಂದು ಸಾಧನವಾಗಿದೆ.

01:37 ಈಗ ಆರಂಭಿಸೋಣ.

ಮೊದಲು ನಾನು Koha ಇಂಟರ್ಫೇಸ್ ಗೆ ಬದಲಾಯಿಸುತ್ತೇನೆ ಮತ್ತು Superlibrarian, Bella ಎಂದು ಲಾಗ್-ಇನ್ ಮಾಡುತ್ತೇನೆ.

01:47 Koha Home ಪೇಜ್ ನಲ್ಲಿ, Koha administration ಮೇಲೆ ಕ್ಲಿಕ್ ಮಾಡಿ.
01:53 ಈ ಪೇಜ್ ನಲ್ಲಿ, ಕೆಳಗೆ ಸ್ಕ್ರೋಲ್ ಮಾಡಿ ಮತ್ತು Additional parameters ಅನ್ನು ಗುರುತಿಸಿ.
01:59 ಆಮೇಲೆ, Z39.50/SRU servers ಮೇಲೆ ಕ್ಲಿಕ್ ಮಾಡಿ.
02:07 Z39.50/SRU servers administration ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
02:16 ಇಲ್ಲಿ, +New Z39.50 server ಮತ್ತು+New SRU server ಎಂಬ ಎರಡು ಟ್ಯಾಬ್ ಗಳಿವೆ.
02:26 +New Z39.50 server ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
02:32 New Z39.50 server ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
02:40 ಗಮನಿಸಿ target Z39.50 Server ಅನ್ನು ಸೇರಿಸಲು, ನಾವು ಟಾರ್ಗೆಟ್ ಸರ್ವರ್ ನ ವಿವರಗಳನ್ನು ತಿಳಿದಿರಬೇಕು.
02:51 ನಿಮಗೆ Z39.50 server ನ ಯಾವುದೇ ವಿವರಗಳು ತಿಳಿದಿರದಿದ್ದರೆ, ಈ URL ನಲ್ಲಿ ನೀವು Z39.50 servers ನ ಲಿಸ್ಟ್ ಅನ್ನು ನೋಡಬಹುದು.
03:05 IRSpy ಎಂಬ ಪೇಜ್ ತೆರೆದುಕೊಳ್ಳುತ್ತದೆ. ಇದು ಕೆಲವು ವಿವರಗಳನ್ನು ತುಂಬಲು ನಮಗೆ ಸೂಚಿಸುತ್ತಿದೆ.
03:12 ಈಗ ಆರಂಭಿಸೋಣ.
03:14 (Anywhere) ಫೀಲ್ಡ್ ಅನ್ನು ಖಾಲಿ ಬಿಡಿ.
03:18 Name ಗಾಗಿ, ನಾನು Library of Congress ಎಂದು ಟೈಪ್ ಮಾಡುವೆನು.
03:23 ಏಕೆಂದರೆ, ಇದು ದೊಡ್ಡ ಲೈಬ್ರರಿಗಳಲ್ಲಿ ಒಂದಾಗಿದೆ ಮತ್ತು ಗ್ರಂಥಸೂಚಿಯ ದೊಡ್ಡ ಡೇಟಾವನ್ನು ಹೊಂದಿದೆ.
03:31 ಆಮೇಲೆ, Country ಯ ಫೀಲ್ಡ್ ನಲ್ಲಿ, ಡ್ರಾಪ್-ಡೌನ್ ನಿಂದ United States ಅನ್ನು ಆಯ್ಕೆಮಾಡಿ.
03:38 Protocol ಗಾಗಿ, ಡ್ರಾಪ್-ಡೌನ್ ನಿಂದ Z39.50 ಅನ್ನು ಆಯ್ಕೆಮಾಡಿ.
03:46 ನಿಮ್ಮ ಅವಶ್ಯಕತೆಗಳ ಪ್ರಕಾರ, ನೀವು ಉಳಿದ ವಿವರಗಳನ್ನು ತುಂಬಬಹುದು.
03:51 ನಂತರ ಪೇಜ್ ನ ಕೆಳಗಿರುವ Search ಬಟನ್ ಮೇಲೆ ಕ್ಲಿಕ್ ಮಾಡಿ.
03:57 ಹುಡುಕಾಟದ ಫಲಿತಾಂಶಗಳೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
04:01 9 ಲೈಬ್ರರಿಗಳ ಪಟ್ಟಿಯನ್ನು, ಈಕೆಳಗಿನ ಶೀರ್ಷಿಕೆಗಳ ಅಡಿಯಲ್ಲಿ ಪ್ರದರ್ಶಿಸಲಾಗಿದೆ -

Title,

Host Connection Reliability,

Host,

Port ಮತ್ತು

DB.

04:16 Koha ದಲ್ಲಿ, New Z39.50 server ನಲ್ಲಿ ವಿವರಗಳನ್ನು ತುಂಬಲು ಈ ವಿವರಗಳನ್ನು ಬಳಸಲಾಗುತ್ತದೆ.
04:26 ಗಮನಿಸಿ: 10 ಕ್ಕಿಂತ ಹೆಚ್ಚು ಲೈಬ್ರರಿಗಳು ಇರುವ ಬೇರೆ ಲಿಸ್ಟ್ ಅನ್ನು ನೀವು ನೋಡಬಹುದು.
04:32 ನೆನಪಿಡಿ, ಯಾವುದೇ ಟಾರ್ಗೆಟ್ Z39.50 server ಅನ್ನು ಸೇರಿಸುವ ಮೊದಲು, ದಯವಿಟ್ಟು Host Connection Reliability ಯನ್ನು ಖಚಿತಪಡಿಸಿಕೊಳ್ಳಿ.
04:43 ನಾನು Title : Library of Congress ಮೇಲೆ ಕ್ಲಿಕ್ ಮಾಡುವೆನು.
04:48 Library of Congress ಎಂಬ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
04:54 ಸ್ವಲ್ಪ ಸಮಯದ ನಂತರ ನಮಗೆ ಈ ಪೇಜ್ ನಲ್ಲಿಯ ವಿವರಗಳು ಬೇಕಾಗುವುದು. ಆದ್ದರಿಂದ ಈ ಪೇಜ್ ಅನ್ನು ತೆರೆದಿಡಿ.
05:01 ಈಗ, ನಾವು New Z39.50 server ಪೇಜ್ ಗೆ ಹಿಂತಿರುಗಿ ಹೋಗೋಣ. ಇದನ್ನು ಈ ಟ್ಯುಟೋರಿಯಲ್ ನಲ್ಲಿ ನಾವು ಮೊದಲು ತೆರೆದು ಇಟ್ಟಿದ್ದೆವು.
05:12 ಈ ಪೇಜ್ ನಲ್ಲಿ, ಅವಶ್ಯಕ ವಿವರಗಳನ್ನು ತುಂಬಲು ಪ್ರಾರಂಭಿಸೋಣ.
05:17 ಈ ವಿವರಗಳು ನಾವು ತೆರೆದಿಟ್ಟ Library of Congress ಪೇಜ್ ನಲ್ಲಿವೆ.
05:23 ಹೀಗಾಗಿ ನಾವು ಇದನ್ನು ಆರಂಭಿಸೋಣ.
05:25 New Z39.50 server ಪೇಜ್ ನಲ್ಲಿ, Server name ಗಾಗಿ, Library of Congress ಎಂದು ಟೈಪ್ ಮಾಡಿ.
05:34 ಈ ವಿವರವು Library of Congress ಪೇಜ್ ನಲ್ಲಿ Name ಎಂಬ ವಿಭಾಗದಿಂದ ಇದೆ.
05:41 ನಾನು New Z39.50 server ಪೇಜ್ ನಲ್ಲಿ, ಬೇರೆ ಕೆಲವು ವಿವರಗಳನ್ನು ತುಂಬಿದ್ದೇನೆ. ಇವುಗಳನ್ನು ನಾನು Library of Congress ಪೇಜ್ ನಿಂದ ಪಡೆದಿದ್ದೇನೆ.
05:54 ನೀವು ವೀಡಿಯೊವನ್ನು ನಿಲ್ಲಿಸಬಹುದು ಮತ್ತು ನಿಮ್ಮ ಅವಶ್ಯಕತೆಯ ಪ್ರಕಾರ ವಿವರಗಳನ್ನು ತುಂಬಬಹುದು.
06:01 ದಯವಿಟ್ಟು ಗಮನಿಸಿ, ಕೆಂಪು ಬಣ್ಣದಲ್ಲಿ ಗುರುತಿಸಲಾದ ಫೀಲ್ಡ್ ಗಳು ಕಡ್ಡಾಯವಾಗಿವೆ.
06:06 ನಂತರ, ನಾವು Preselected (searched by default) ಎಂಬ ಚೆಕ್-ಬಾಕ್ಸ್ ಅನ್ನು ನೋಡುತ್ತೇವೆ.
06:12 ನೀವು ಈ ನಿರ್ದಿಷ್ಟ ಲೈಬ್ರರಿಯ ಡೇಟಾಬೇಸ್ ಅನ್ನು ಯಾವಾಗಲೂ ಡೀಫಾಲ್ಟ್ ಆಗಿ ಹುಡುಕಬೇಕೆಂದು ಬಯಸಿದರೆ, ಇದನ್ನು ಕ್ಲಿಕ್ ಮಾಡಿ. ನಾನು ಅದನ್ನು ಚೆಕ್ ಮಾಡದೆ ಹಾಗೇ ಬಿಡುತ್ತೇನೆ.
06:23 ಈಗ ನಾವು Rank (display order) ನ ಫೀಲ್ಡ್ ಗೆ ಬರುತ್ತೇವೆ.

ನೀವು ಲೈಬ್ರರಿಗಳ ಲಿಸ್ಟ್ ನಲ್ಲಿ ಎಲ್ಲಕ್ಕಿಂತ ಮೊದಲು ಈ ಲೈಬ್ರರಿಯನ್ನು ಲಿಸ್ಟ್ ಮಾಡಲು ಬಯಸಿದರೆ, ಆಗ ಇಲ್ಲಿ 1 ಅನ್ನು ನಮೂದಿಸಿ.

06:37 ಗಮನಿಸಿ: ನೀವು ಅನೇಕ 'z39.50 ಟಾರ್ಗೆಟ್' ಗಳನ್ನು ಸೇರಿಸಲು ಬಯಸಿದರೆ, ನೀವು ಶ್ರೇಣಿಯ ಪ್ರಕಾರ ಅವುಗಳನ್ನು ಹೊಂದಿಸಬಹುದು.
06:47 Syntax ಗಾಗಿ, ಡ್ರಾಪ್-ಡೌನ್ ನಿಂದ ನಾನು MARC21/USMARC ಅನ್ನು ಆಯ್ಕೆಮಾಡುವೆನು.

ನಿಮ್ಮ ಅವಶ್ಯಕತೆಗೆ ಅನುಗುಣವಾಗಿ, ನೀವು ಯಾವುದೇ ಸಿಂಟ್ಯಾಕ್ಸ್ ಅನ್ನು ಆಯ್ಕೆ ಮಾಡಬಹುದು.

07:00 Encoding ಗಾಗಿ, ಕೋಹಾ ಡೀಫಾಲ್ಟ್ ಆಗಿ utf8 ಅನ್ನು ಆಯ್ಕೆಮಾಡುತ್ತದೆ. ನಾನು ಅದನ್ನು ಇದ್ದಂತೆಯೇ ಇಡುತ್ತೇನೆ.
07:08 ಆದರೆ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ, ನೀವು ಬೇರೆ ಯಾವುದೇ ವ್ಯಾಲ್ಯೂವನ್ನು ಆಯ್ಕೆ ಮಾಡಬಹುದು.
07:14 ನಂತರ Time out (0 its like not set) ಇದೆ.
07:20 ಇಲ್ಲಿ, ಫಲಿತಾಂಶಗಳು ಕಾಣಿಸಿಕೊಳ್ಳಲು ನೀವು ನಿರೀಕ್ಷಿಸಲು ಬಯಸುವ ಸೆಕೆಂಡುಗಳ ಸಂಖ್ಯೆಯನ್ನು ಟೈಪ್ ಮಾಡಿ.

240ಅನ್ನು ನಮೂದಿಸುತ್ತೇನೆ.

07:32 Record type ಗಾಗಿ, ಕೋಹಾ ಡೀಫಾಲ್ಟ್ ಆಗಿ, Bibliographicಅನ್ನು ತಾನೇ ಆಯ್ಕೆಮಾಡುತ್ತದೆ.

ಹಾಗೆ ಮಾಡಿದಾಗ, ಪ್ರತಿ ದಾಖಲೆಯು 'ಬಿಬ್ಲಿಯೋಗ್ರಾಫಿಕ್' ವಿವರವನ್ನು ಹೊಂದಿರುತ್ತದೆ.

07:44 ಎಲ್ಲ ವಿವರಗಳನ್ನು ತುಂಬಿದ ನಂತರ, ಪೇಜ್ ನ ಕೆಳಗಿರುವ Save ಬಟನ್ ಮೇಲೆ ಕ್ಲಿಕ್ ಮಾಡಿ.
07:51 Z39.50/SRU servers administration . ಎಂಬ ಪೇಜ್ ಮತ್ತೆ ತೆರೆದುಕೊಳ್ಳುತ್ತದೆ.
08:00 ಈ ಪೇಜ್ ನಲ್ಲಿ, ವಿಭಿನ್ನ ಶೀರ್ಷಿಕೆಗಳ ಅಡಿಯಲ್ಲಿ ಸೇರಿಸಲಾದ ವಿವರಗಳನ್ನು ನಾವು ನೋಡಬಹುದು.
08:06 ಈಗ, ಈ ಲೈಬ್ರರಿಯಿಂದ ದಾಖಲೆಗಳನ್ನು ಹುಡುಕಲು,Koha home ಪೇಜ್ ಗೆ ಹೋಗಿ. ಮತ್ತು Cataloging ಮೇಲೆ ಕ್ಲಿಕ್ ಮಾಡಿ.
08:16 +New record ಮತ್ತು

New from Z39.50/SRU ಎಂಬ ಎರಡು ಆಯ್ಕೆಗಳೊಂದಿಗೆ, ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.

08:29 New from Z39.50/SRU ಗೆ ಹೋಗಿ ಮತ್ತು ಡ್ರಾಪ್-ಡೌನ್ ನಿಂದ BOOKS ಅನ್ನು ಆಯ್ಕೆಮಾಡಿ.
08:40 Z39.50/SRU search ಎಂಬ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ.
08:48 ಪೇಜ್ ನ ಬಲತುದಿಯಲ್ಲಿ Search targets ಎಂಬ ಫೀಲ್ಡ್ ಅನ್ನು ಗುರುತಿಸಿ.
08:54 ಮೊದಲು ಈ ಟ್ಯುಟೋರಿಯಲ್ ನಲ್ಲಿ ನಾವು ಸೇರಿಸಿದ್ದ Z39.50 target ಅನ್ನು, ಎಂದರೆ, LIBRARY OF CONGRESS ಅನ್ನು ಇಲ್ಲಿ ನೀವು ನೋಡಬಹುದು.
09:07 ಈಗ, LIBRARY OF CONGRESS ನ ಬದಿಯಲ್ಲಿರುವ ಚೆಕ್-ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
09:14 ಇದೇ ಪೇಜ್ ನ ಎಡಭಾಗದಲ್ಲಿ, ವಿವಿಧ ಫೀಲ್ಡ್ ಗಳೊಂದಿಗೆ Z39.50/SRU search ಇದೆ.
09:25 ಈ ಫೀಲ್ಡ್ ಗಳಲ್ಲಿ Title ಅನ್ನು ಗುರುತಿಸಿ ಮತ್ತು Clinical Microbiology ಎಂದು ಟೈಪ್ ಮಾಡಿ.
09:33 ನಿಮಗೆ ಬೇಕಾದರೆ, ಉಳಿದ ಫೀಲ್ಡ್ ಗಳನ್ನು ನೀವು ತುಂಬಬಹುದು. ನಾನು ಅವುಗಳನ್ನು ಖಾಲಿಯಾಗಿ ಬಿಡುತ್ತೇನೆ.
09:40 ಈಗ ಪೇಜ್ ನ ಕೆಳಗಿರುವ Search ಬಟನ್ ಮೇಲೆ ಕ್ಲಿಕ್ ಮಾಡಿ.
09:46 ಆದಾಗ್ಯೂ, ಕ್ಲಿಕ್ ಮಾಡುವ ಮೊದಲು, ನೀವು ಇಂಟರ್ನೆಟ್ ಗೆ ಸಂಪರ್ಕ ಹೊಂದಿದ್ದೀರಿ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.
09:52 Results ಎಂಬ ಇನ್ನೊಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. ಇದು -

Server, Title, Author, Date, Edition, ISBN, LCCN, MARC ಮತ್ತು Card ಎಂಬ ಶೀರ್ಷಿಕೆಗಳೊಂದಿಗೆ ವಿವರಗಳನ್ನು ತೋರಿಸುತ್ತದೆ.

10:11 ಈಗ, ಪೇಜ್ ನ ಬಲತುದಿಗೆ ಹೋಗಿ ಮತ್ತು Import ಎಂಬ ಫೀಲ್ಡ್ ಅನ್ನು ಗುರುತಿಸಿ.
10:18 Title: Clinical Microbiology ಫೀಲ್ಡ್ ಗಾಗಿ, ನಾನು Import ಮೇಲೆ ಕ್ಲಿಕ್ ಮಾಡುವೆನು.
10:25 ನಿಮ್ಮ ಅವಶ್ಯಕತೆಯ ಪ್ರಕಾರ, ಬೇರೆ ಯಾವುದೇ Title ಗಾಗಿ, ನೀವು Import ಮೇಲೆ ಕ್ಲಿಕ್ ಮಾಡಬಹುದು.
10:32 Import ಅನ್ನು ಕ್ಲಿಕ್ ಮಾಡಿದಾಗ, Add MARC record ಎಂಬ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ.
10:39 'ಲೈಬ್ರರಿ ಆಫ್ ಕಾಂಗ್ರೆಸ್' ಡೇಟಾಬೇಸ್ ನಿಂದ ಇಂಪೋರ್ಟ್ ಮಾಡಲಾದ ಕೆಲವು ಟ್ಯಾಗ್ ಗಳನ್ನು ನೀವು ನೋಡುತ್ತೀರಿ.
10:47 ಆದರೆ ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ, ಆಯಾ ಟ್ಯಾಗ್ ಗಳಿಗಾಗಿ ಖಾಲಿ ಫೀಲ್ಡ್ ಗಳನ್ನು ನೀವು ತುಂಬಬೇಕು.
10:55 ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ, ಈ ಪೇಜ್ ನ ವಿವರಗಳನ್ನು ನಾವು ತುಂಬಿದ್ದೇವೆ ಎಂದು ನೆನಪಿಸಿಕೊಳ್ಳಿ.
11:02 ವೀಡಿಯೊವನ್ನು ನಿಲ್ಲಿಸಿ ಮತ್ತು ವಿವರಗಳನ್ನು ತುಂಬಿ.
11:06 ವಿವರಗಳನ್ನು ತುಂಬಿದ ನಂತರ, ಪೇಜ್ ನ ಮೇಲ್ತುದಿಯಲ್ಲಿರುವ Save ಬಟನ್ ಮೇಲೆ ಕ್ಲಿಕ್ ಮಾಡಿ.
11:13 Items for Clinical microbiology by Ross, Philip W. ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
11:22 ಈಗ, ಪೇಜ್ ನ ಕೆಳಭಾಗದಲ್ಲಿರುವ Add item ಬಟನ್ ಮೇಲೆ ಕ್ಲಿಕ್ ಮಾಡಿ.
11:28 Items for Clinical microbiology by Ross, Philip W. ಎಂಬ ಪೇಜ್ ತೆರೆದುಕೊಳ್ಳುತ್ತದೆ.
11:36 ಇದರೊಂದಿಗೆ, ನಾವು Library of Congress ನಿಂದ, Clinical microbiology ಎಂಬ ಪುಸ್ತಕದ ವಿವರಗಳನ್ನು Koha ದಲ್ಲಿ ಯಶಸ್ವಿಯಾಗಿ ಇಂಪೋರ್ಟ್ ಮಾಡಿಕೊಂಡಿದ್ದೇವೆ.
11:48 ಸಂಕ್ಷಿಪ್ತವಾಗಿ,
11:50 ಈ ಟ್ಯುಟೋರಿಯಲ್ ನಲ್ಲಿ ನಾವು, Z39.50. ಅನ್ನು ಬಳಸಿ Catalog ನಲ್ಲಿ ರೆಕಾರ್ಡ್ ಗಳನ್ನು ಹೇಗೆ ಸೇರಿಸುವುದೆಂದು ಕಲಿತಿದ್ದೇವೆ.
12:00 ಅಸೈನ್ಮೆಂಟ್ –

Z39.50 ಅನ್ನು ಬಳಸಿ, ಒಂದು ಸೀರಿಯಲ್ ನ ರೆಕಾರ್ಡ್ ಗಳನ್ನು Catalog ನಲ್ಲಿ ಸೇರಿಸಿ.

12:10 ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
12:18 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.

12:28 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
12:32 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.

ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.

12:45 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14