Koha-Library-Management-System/C3/Convert-Excel-to-MARC/Kannada

From Script | Spoken-Tutorial
Revision as of 16:38, 17 April 2019 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Conversion of Excel data to Marc 21 format ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನಾವು, 64-bit Windows ಮಷಿನ್ ನಲ್ಲಿ Excel ಡೇಟಾ ಅನ್ನು Marc 21 format ಗೆ ಪರಿವರ್ತಿಸಲು ಕಲಿಯುವೆವು.
00:19 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Windows 10 Pro ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ.

00:29 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು.
00:35 ಮುಂದುವರಿಯುವ ಮುನ್ನ, ನಿಮ್ಮ ಮಷಿನ್ ನಲ್ಲಿ ಈ ಕೆಳಗಿನವುಗಳು ಇರುವುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ -

Windows 10, 8 ಅಥವಾ 7 ಮತ್ತು

00:45 ಯಾವುದೇ ವೆಬ್-ಬ್ರೌಸರ್.

ಉದಾಹರಣೆಗೆ: Internet Explorer, Firefox ಅಥವಾ Google Chrome.

00:53 ಹಿಂದೆ ಇದೇ ಸರಣಿಯಲ್ಲಿ, ನಾವು MarcEdit 7 ಅನ್ನು Desktop ನಲ್ಲಿ ಇನ್ಸ್ಟಾಲ್ ಮಾಡಿದ್ದೆವು.
01:00 ಇದೇ MarcEdit 7 ಐಕಾನ್ ಮೇಲೆ ಡಬಲ್-ಕ್ಲಿಕ್ ಮಾಡುವುದರ ಮೂಲಕ ಅದನ್ನು ಓಪನ್ ಮಾಡಿ.
01:07 MarcEdit 7.0.250 By Terry Reese ಎಂಬ ಒಂದು ವಿಂಡೋ ತೆರೆದುಕೊಳ್ಳುತ್ತದೆ.
01:15 Export Tab Delimited Text ಎಂಬ ಟ್ಯಾಬ್ ಅನ್ನು ಗುರುತಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
01:21 Source File ಫೀಲ್ಡ್ ನ ಕೆಳಗೆ, ಫೋಲ್ಡರ್ ನ ಐಕಾನ್ ಅನ್ನು ಗುರುತಿಸಿ.
01:27 'ಸೋರ್ಸ್ ಫೈಲ್', ಒಂದು 'ಎಕ್ಸೆಲ್ ಫೈಲ್' ಆಗಿದ್ದು ನಾವು ಇದನ್ನು .mrk ಫಾರ್ಮ್ಯಾಟ್ ಗೆ ಪರಿವರ್ತಿಸುತ್ತಿದ್ದೇವೆ.
01:34 ಫೋಲ್ಡರ್ ನ ಈ ಐಕಾನ್ ಮೇಲೆ ಕ್ಲಿಕ್ ಮಾಡಿ. ಮತ್ತುFile name ನ ಫೀಲ್ಡ್ ನಲ್ಲಿ, Excel ಫೈಲ್ ಗಾಗಿ ಬ್ರೌಸ್ ಮಾಡಿ.
01:42 File name ನ ಬದಿಯಲ್ಲಿರುವ ಡ್ರಾಪ್-ಡೌನ್ ಮೇಲೆ ಕ್ಲಿಕ್ ಮಾಡಿ.
01:46 ಒಂದುವೇಳೆ, ನಿಮ್ಮದು Microsoft Excel 97/2000/XP/2003 (.xls) ಆಗಿದ್ದರೆ, ಆಗ Excel File(*.xls) ಫಾರ್ಮ್ಯಾಟ್ ಅನ್ನು ಆರಿಸಿಕೊಳ್ಳಿ.
02:03 ನಿಮ್ಮದು Microsoft Excel 2007/2010/2013 XML(.xlsx) ಆಗಿದ್ದರೆ, ಆಗ Excel File(*.xlsx) ಫಾರ್ಮ್ಯಾಟ್ ಅನ್ನು ಆರಿಸಿಕೊಳ್ಳಿ.
02:21 ನನ್ನದು .(dot)xlsx ಫೈಲ್ ಆಗಿದ್ದರಿಂದ, ನಾನು Excel XML File(*.xlsx) ಅನ್ನು ಆಯ್ಕೆಮಾಡುತ್ತೇನೆ.
02:32 ಆಮೇಲೆ, ಎಡಭಾಗದಲ್ಲಿರುವ ಫೋಲ್ಡರ್ ಗಳಿಗೆ ಹೋಗಿ. ಮತ್ತು ನಿಮ್ಮ Excel file ಅನ್ನು ಸೇವ್ ಮಾಡಿರುವ ಫೋಲ್ಡರ್ ಅನ್ನು ಆಯ್ಕೆಮಾಡಿ.
02:40 ನಾನು Downloads ಅನ್ನು ಆರಿಸಿದ್ದೇನೆ. ಏಕೆಂದರೆ ನನ್ನ 'ಎಕ್ಸೆಲ್ ಫೈಲ್' ಅನ್ನು ಅಲ್ಲಿ ಸೇವ್ ಮಾಡಿದ್ದೇನೆ.
02:47 ಹೀಗಾಗಿ, Downloads ಫೋಲ್ಡರ್ ನಿಂದ, ನಾನು TestData.xlsx ಅನ್ನು ಆಯ್ಕೆಮಾಡಿದ್ದೇನೆ.
02:55 TestData.xlsx ಫೈಲ್ ಅನ್ನು ಆಯ್ಕೆಮಾಡಿದಾಗ, ಅದು File name ಫೀಲ್ಡ್ ನಲ್ಲಿ ಕಾಣಿಸಿಕೊಳ್ಳುತ್ತದೆ.
03:04 ಈಗ, ವಿಂಡೋದ ಕೆಳಗಿರುವ Open ಬಟನ್ ಮೇಲೆ ಕ್ಲಿಕ್ ಮಾಡಿ.
03:09 ಇದೇ ವಿಂಡೋ, C:\Users\spoken\Downloads\TestData.xlsx ಎಂಬ Source File ನೊಂದಿಗೆ (ಸೋರ್ಸ್ ಫೈಲ್) ಮತ್ತೆ ತೆರೆದುಕೊಳ್ಳುತ್ತದೆ.
03:21 ಈಗ, Output Fileನ ಬದಿಯಲ್ಲಿರುವ ಫೋಲ್ಡರ್ ಐಕಾನ್ ಮೇಲೆ ಕ್ಲಿಕ್ ಮಾಡಿ.
03:27 ಹೀಗೆ ಮಾಡಿದಾಗ, Save File ಎಂಬ ವಿಂಡೋ ತೆರೆದುಕೊಳ್ಳುತ್ತದೆ. ಇದು ನಮಗೆ File name ಅನ್ನು ತುಂಬಲು ಸೂಚಿಸುತ್ತದೆ.
03:34 ಇದೇ ವಿಂಡೋದಲ್ಲಿ, ಎಡಬದಿಯಲ್ಲಿರುವ Downloads ಫೋಲ್ಡರ್ ಮೇಲೆ ನಾನು ಕ್ಲಿಕ್ ಮಾಡುವೆನು.

ಮತ್ತು, File name: ಅನ್ನು TestData ಎಂದು ಟೈಪ್ ಮಾಡುವೆನು.

03:46 ಈಗ ಪೇಜ್ ನ ಕೆಳಗಿರುವ Save ಬಟನ್ ಮೇಲೆ ಕ್ಲಿಕ್ ಮಾಡಿ.
03:51 ಇದೇ ವಿಂಡೋ ಮತ್ತೆ ಕಾಣಿಸಿಕೊಳ್ಳುತ್ತದೆ.

Output file ಫೀಲ್ಡ್, ಹೀಗೆ ತೋರಿಸುತ್ತದೆ: C:\Users\spoken\Downloads\TestData.mrk.

04:06 ಗಮನಿಸಿ: MarcEdit 7 ನಿಂದ, Excel Sheet Name: Sheet1 ತಂತಾನೇ ಆಯ್ಕೆಗೊಳ್ಳುತ್ತದೆ.

ಆದಾಗ್ಯೂ, ಈ 'ಶೀಟ್' ನ ಹೆಸರನ್ನು ಎಡಿಟ್ ಮಾಡಬಹುದು.

04:20 Options ವಿಭಾಗದ ಕೆಳಗೆ, UTF-8 Encoded ಚೆಕ್-ಬಾಕ್ಸ್, ಡೀಫಾಲ್ಟ್ ಆಗಿ MarcEdit 7 ನಿಂದ ಆಯ್ಕೆಯಾಗಿದೆ.
04:32 ಇದೇ ವಿಂಡೋದ ಬಲಬದಿಯಲ್ಲಿರುವ Next ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
04:37 ಮತ್ತೊಮ್ಮೆ ಒಂದು ಹೊಸ ವಿಂಡೋ, MarcEdit Delimited Text Translator ತೆರೆದುಕೊಳ್ಳುತ್ತದೆ.

ತಲೆಬರಹವು Data Snapshot ಎಂದು ಹೇಳುತ್ತದೆ.

04:48 ಎಕ್ಸೆಲ್ ಫೈಲ್ ನಲ್ಲಿ ಮಾಡಿದ ನಮೂದುಗಳ ಪ್ರಕಾರ, ಈ ವಿಂಡೋ ಎಲ್ಲಾ ಫೀಲ್ಡ್ ವಿವರಗಳನ್ನು ಹೊಂದಿರುತ್ತದೆ.
04:55 ನಾವು 0 ಯಿಂದ 8 ಮತ್ತು ಅದಕ್ಕಿಂತ ಹೆಚ್ಚು ಫೀಲ್ಡ್ ಗಳನ್ನು, ಅವುಗಳಿಗೆ ಸರಿಹೊಂದುವ ವ್ಯಾಲ್ಯೂಗಳೊಂದಿಗೆ ನೋಡುವೆವು.
05:03 ಉದಾಹರಣೆಗೆ- Field 0 , ನನ್ನ ಮಷಿನ್ ನಲ್ಲಿ 978-3-319-47238-6 (ISBN) ವ್ಯಾಲ್ಯೂವನ್ನು ಹೊಂದಿದೆ.
05:17 ನಿಮ್ಮ ಎಕ್ಸೆಲ್ ಶೀಟ್ ಪ್ರಕಾರ, ನೀವು ಬೇರೆ ವ್ಯಾಲ್ಯೂವನ್ನು ನೋಡಬಹುದು.
05:22 DataSnapshot ವಿಭಾಗದ ಕೆಳಗೆ, Settings ವಿಭಾಗವನ್ನು ಗುರುತಿಸಿ.
05:28 Select ಟ್ಯಾಬ್ ಗೆ ಹೋಗಿ ಮತ್ತು ಡ್ರಾಪ್-ಡೌನ್ ನಿಂದ Field 0 ಅನ್ನು ಆಯ್ಕೆಮಾಡಿ.
05:35 ಇದರೊಂದಿಗೆ ನಾವು, 'ಎಕ್ಸೆಲ್ ಡೇಟಾ' ದ ಮ್ಯಾಪಿಂಗ್ ಅನ್ನು 'ಕೋಹಾ ಮಾರ್ಕ್ ಟ್ಯಾಗ್' ಗಳ ಜೊತೆಗೆ ಮಾಡುತ್ತೇವೆ.
05:43 ನೆನಪಿಡಿ, ನೀವು Map To: ಮತ್ತುIndicators ಅನ್ನು ಕಸ್ಟಮೈಜ್ ಮಾಡಬಹುದು.
05:49 ಆದಾಗ್ಯೂ, 'ಫೀಲ್ಡ್ಸ್' ಮತ್ತು 'ಸಬ್-ಫೀಲ್ಡ್ ಕೋಡ್ಸ್', 'ಕೋಹಾ ಮಾರ್ಕ್ ಟ್ಯಾಗ್' ನ ಪ್ರಕಾರ ಇರುವುದು ಮುಖ್ಯವಾಗಿದೆ.
05:58 MARC Tags ಬಗ್ಗೆ ಹೆಚ್ಚಿನ ಮಾಹಿತಿಗಾಗಿ, Library of Congress ನ ಅಧಿಕೃತ ಸೈಟ್ ನ ಲಿಂಕ್ ಗೆ ಭೆಟ್ಟಿ ಕೊಡಿ.
06:07 ಬ್ರೌಸರ್ ನಲ್ಲಿ, ಈ URL ಅನ್ನು ಟೈಪ್ ಮಾಡಿ ಮತ್ತು search ಮೇಲೆ ಕ್ಲಿಕ್ ಮಾಡಿ.
06:15 ನೆನಪಿಸಿಕೊಳ್ಳಿ, Map To: ಫೀಲ್ಡ್ ನಲ್ಲಿ ನಮೂದಿಸಲಾದ ವ್ಯಾಲ್ಯೂಗಳನ್ನು, ಈ ಸರಣಿಯ ಹಿಂದಿನ ಒಂದು ಟ್ಯುಟೋರಿಯಲ್ ನಿಂದ ಉಲ್ಲೇಖಿಸಲಾಗಿದೆ (ರೆಫರ್).
06:24 ನಾನು Map To: ಫೀಲ್ಡ್ ನಲ್ಲಿ, 020$a ಎಂದು ನಮೂದಿಸುವೆನು.
06:31 ಈ ಸರಣಿಯು ನಿಮ್ಮ 'ಎಕ್ಸೆಲ್ ಡೇಟಾ' ಪ್ರಕಾರ ಬದಲಾಗುತ್ತದೆ.
06:36 ನಾನು Indicators: ಮತ್ತು Term. Punctuation: ಗಳನ್ನು ಇದ್ದ ಹಾಗೇ ಇಡುತ್ತೇನೆ.
06:42 ಆದಾಗ್ಯೂ, Koha MARC Tags ನಿರ್ದೇಶನದ ಪ್ರಕಾರ ನೀವು ಈ ಫೀಲ್ಡ್ ಗಳನ್ನು ತುಂಬಬಹುದು.
06:49 ನಂತರ Constant Data ಗಾಗಿ ಚೆಕ್-ಬಾಕ್ಸ್ ಇದೆ.
06:54 ಗೊತ್ತುಮಾಡಲಾದ ಟೆಕ್ಸ್ಟ್-ಡಾಕ್ಯುಮೆಂಟ್ ನಲ್ಲಿ, ಪ್ರತಿಯೊಂದು ನಮೂದಿಗಾಗಿ ಡೇಟಾ ಫೀಲ್ಡ್ ನಲ್ಲಿ ನೀವು ಅದೇ ಮಾಹಿತಿಯನ್ನು ಮ್ಯಾಪ್ ಮಾಡಲು ಬಯಸಿದರೆ, ಇದನ್ನು ಕ್ಲಿಕ್ ಮಾಡಿ.
07:04 ಇದೇ ಸಬ್-ಫೀಲ್ಡ್ ಅನ್ನು ನಿಮಗೆ ಪುನಃ ಮಾಡಬೇಕಿದ್ದರೆ Repeatable subfield ಅನ್ನು ಕ್ಲಿಕ್ ಮಾಡಿ.
07:10 ನಂತರ, Add Argument ಬಟನ್ ಮೇಲೆ ಕ್ಲಿಕ್ ಮಾಡಿ.
07:15 ಹೀಗೆ ಮಾಡಿದಾಗ, Arguments ವಿಭಾಗದ ಕೆಳಗೆ, ಫೀಲ್ಡ್ ನಲ್ಲಿ ವ್ಯಾಲ್ಯೂ 0 020$a 0 ಕಾಣಿಸಿಕೊಳ್ಳುತ್ತದೆ.
07:25 ಹೀಗೆಯೇ, ನಾವು ಉಳಿದ ಎಲ್ಲಾ ಫೀಲ್ಡ್ ಗಳನ್ನು ಮ್ಯಾಪ್ ಮಾಡೋಣ.
07:30 Settings ವಿಭಾಗದ ಕೆಳಗೆ, Select ಗೆ ಹೋಗಿ. ಡ್ರಾಪ್-ಡೌನ್ ನಿಂದ Field 1 ಅನ್ನು ಆಯ್ಕೆಮಾಡಿ.
07:39 Map To ದ ಫೀಲ್ಡ್ ನಲ್ಲಿ, 080$a ಎಂದು ಟೈಪ್ ಮಾಡಿ.
07:46 ಈಗ Add Argument ಬಟನ್ ಮೇಲೆ ಕ್ಲಿಕ್ ಮಾಡಿ.
07:50 ಹೀಗೆ ಮಾಡಿದಾಗ, Arguments ವಿಭಾಗದ ಕೆಳಗೆ, ಫೀಲ್ಡ್ ನಲ್ಲಿ ವ್ಯಾಲ್ಯೂ 1 080$a 0 ಎಂದು ಕಾಣಿಸುತ್ತದೆ.
08:01 Select ಟ್ಯಾಬ್ ನ ಕೆಳಗೆ, ಡ್ರಾಪ್-ಡೌನ್ ನಿಂದ, Field 2 ಅನ್ನು ಆಯ್ಕೆಮಾಡಿ.
08:07 Map To ದ ಫೀಲ್ಡ್ ನಲ್ಲಿ, 100$a ಎಂದು ಟೈಪ್ ಮಾಡಿ.
08:13 Indicators ನ ಫೀಲ್ಡ್ ನಲ್ಲಿ, 1 ಎಂದು ಟೈಪ್ ಮಾಡಿ.
08:17 ಗಮನಿಸಿ, 1 ಇದು tag 100 ನ ಮೊದಲನೆಯ ಇಂಡಿಕೇಟರ್ ಆಗಿದೆ. ಮತ್ತು ಇದು “ಸಬ್-ಫೀಲ್ಡ್ ‘a’” ಗಾಗಿ Surname ಅನ್ನು ಪ್ರತಿನಿಧಿಸುತ್ತದೆ.
08:28 ಹೀಗೆಯೇ, Select ನ ಕೆಳಗೆ, ಡ್ರಾಪ್-ಡೌನ್ ನಲ್ಲಿ ತೋರಿಸಿದ ಹಾಗೆ Field 13 ರ ವರೆಗೆ ಎಲ್ಲಾ ಫೀಲ್ಡ್ ಗಳ ಮ್ಯಾಪಿಂಗ್ ಅನ್ನು ಪೂರ್ಣಗೊಳಿಸಿ.
08:39 ಪ್ರತಿಯೊಂದು ಫೀಲ್ಡ್ ನ ಹತ್ತಿರವಿರುವ ಮೇಲ್ಮುಖ ಮತ್ತು ಕೆಳಮುಖವಿರುವ ಬಾಣಗಳನ್ನು ಗಮನಿಸಿ.
08:44 ಕಾಣಿಸಿಕೊಳ್ಳುವ ವ್ಯಾಲ್ಯೂಗಳ ಅನುಕ್ರಮವನ್ನು ಬದಲಾಯಿಸಲು ನೀವು ಇವುಗಳನ್ನು ಬಳಸಬಹುದು.
08:50 Arguments ವಿಭಾಗದ ಕೆಳಗೆ, ವಿವಿಧ ಸಬ್-ಫೀಲ್ಡ್ ಗಳಲ್ಲಿ ಸಾಮಾನ್ಯವಾಗಿರುವ ಟ್ಯಾಗ್ ಗಳನ್ನು ಜೋಡಿಸಬೇಕು.
08:58 ಅದಕ್ಕಾಗಿ, ಹೀಗೆ ಮಾಡಿ- ಸಾಮಾನ್ಯವಾಗಿರುವ ಟ್ಯಾಗ್ ಗಳನ್ನು ಆಯ್ಕೆಮಾಡಿ.

ಉದಾಹರಣೆಗೆ- 245$a ಮತ್ತು 245$c.

09:09 ನಂತರ, ಸಾಮಾನ್ಯವಾಗಿರುವ ಟ್ಯಾಗ್ ಗಳ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ನಿಂದ Join Items ಅನ್ನು ಆಯ್ಕೆಮಾಡಿ.
09:17 ಇದು ಒಂದೇ ಬಗೆಯ ಫೀಲ್ಡ್ ಗಳ ಗುಂಪನ್ನು ರಚಿಸುತ್ತದೆ.
09:23 ಗಮನಿಸಿ: ಆಯ್ಕೆಮಾಡಲಾದ ಟ್ಯಾಗ್ ಗಳ ಮೊದಲು * (asterisk ಚಿಹ್ನೆ) ಗೋಚರಿಸುವುದು.
09:29 * ಆಸ್ಟೆರಿಸ್ಕ್ ಚಿಹ್ನೆಯು (asterisk symbol), ಸಾಮಾನ್ಯವಾಗಿರುವ ಟ್ಯಾಗ್ ಗಳನ್ನು ಈಗ ಜೋಡಿಸಲಾಗಿದೆ ಎಂದು ಸೂಚಿಸುತ್ತದೆ.
09:35 ಪರ್ಯಾಯವಾಗಿ, Arguments ಗಾಗಿ ಒದಗಿಸಿದ ಫೀಲ್ಡ್ ಗಳಲ್ಲಿ, 0 ರಿಂದ 13 ರವರೆಗಿನ ಆಯಾ ಫೀಲ್ಡ್ ಗಳ ವ್ಯಾಲ್ಯೂಗಳನ್ನು ಇಂಪೋರ್ಟ್ ಮಾಡಲು, Auto Generate ಟ್ಯಾಬ್ ಅನ್ನು ಕ್ಲಿಕ್ ಮಾಡುವ ಮೂಲಕ ಫೀಲ್ಡ್ ಗಳ ಮ್ಯಾಪಿಂಗ್ ಅನ್ನು ನೀವು ಮಾಡಬಹುದು.
09:52 ಆದಾಗ್ಯೂ, ನಾನು ಮ್ಯಾಪಿಂಗ್ ಅನ್ನು ಕೈಯಾರೆ (manually) ಮಾಡಿದ್ದೇನೆ. ಹೀಗಾಗಿ, ನಾನು Auto Generate ಆಯ್ಕೆಯನ್ನು ಕ್ಲಿಕ್ ಮಾಡುವುದಿಲ್ಲ.
09:59 ನಂತರ, ನಾವು ನಾಲ್ಕು ಆಯ್ಕೆಗಳನ್ನು ನೋಡುತ್ತೇವೆ.
10:02 ಮೊದಲನೆಯದು Save Template ಆಗಿದೆ.
10:06 ನಂತರದ ಬಳಕೆಗಾಗಿ, ನಿಮಗೆ ಇದೇ ಮ್ಯಾಪಿಂಗ್ ಅನ್ನು ಸೇವ್ ಮಾಡಬೇಕಾಗಿದ್ದರೆ, ಇದನ್ನು ಬಳಸಿ.
10:12 ಒಂದುವೇಳೆ, ಡೇಟಾ ಪರಿವರ್ತನೆಯಲ್ಲಿ ನಿಮಗೆ ಯಾವುದೇ ಸಮಸ್ಯೆ ಎದುರಾದರೆ, ಆಗ ಸೇವ್ ಮಾಡಲಾದ 'ಟೆಂಪ್ಲೇಟ್' ಅನ್ನು ಬಳಸಲಾಗುತ್ತದೆ.
10:20 ನಾವು Save Template ಆಯ್ಕೆಯನ್ನು ಆರಿಸಿಕೊಂಡರೆ, ಆಗ ಅದನ್ನು ಹೆಸರಿಸಲು ಮತ್ತು ಅದನ್ನು ಸೇವ್ ಮಾಡಲು ಒಂದು ಡಿರೆಕ್ಟರಿಯನ್ನು ಸೂಚಿಸಲು ನಮಗೆ ಹೇಳಲಾಗುವುದು.
10:31 ಇದು .mrd file ಎಂದು ಸೇವ್ ಆಗುವುದು.
10:36 ಅಗತ್ಯವಿದ್ದಾಗ, ವಿಂಡೋದ ಬಲಭಾಗದಲ್ಲಿರುವ “Load Template” ಅನ್ನು ಕ್ಲಿಕ್ ಮಾಡುವ ಮೂಲಕ, ಈ ಟೆಂಪ್ಲೇಟ್ ಅನ್ನು ಆಕ್ಸೆಸ್ ಮಾಡಿ.
10:44 ಎರಡನೆಯ ಆಯ್ಕೆ Sort Fields ಆಗಿದೆ.
10:48 ಮೂರನೆಯ ಆಯ್ಕೆ Calculate common nonfiling data ಆಗಿದೆ.
10:54 ನಾಲ್ಕನೆಯ ಆಯ್ಕೆ Ignore Header Row ಆಗಿದೆ.
10:58 ನೀವು 'ಎಕ್ಸೆಲ್ ಶೀಟ್' ನಲ್ಲಿ ಹೆಡರ್ ಅನ್ನು ಹೊಂದಿದ್ದರೆ ಮತ್ತು ನಿಮಗೆ ಹೆಡಿಂಗ್ ಗಳನ್ನು ನಿರ್ಲಕ್ಷಿಸಬೇಕಾದರೆ ಇಲ್ಲಿ ಕ್ಲಿಕ್ ಮಾಡಿ.
11:05 ಇವುಗಳಲ್ಲಿ, Sort Fields ಮತ್ತು Calculate common nonfiling data ಗಳು MarcEdit 7 ನಿಂದ ತಂತಾನೇ ಆಯ್ಕೆಯಾಗುತ್ತವೆ.
11:15 ನಾನು ಅವುಗಳನ್ನು ಈಗ ಇದ್ದ ಹಾಗೇ ಇಡುತ್ತೇನೆ.
11:18 ಈಗ, ನಾನು Save Template ಮತ್ತು Ignore Header Row ಗಳಿಗಾಗಿ ಚೆಕ್-ಬಾಕ್ಸ್ ಅನ್ನು ಗುರುತು ಮಾಡುವೆನು.
11:26 ನಂತರ, ಪೇಜ್ ನ ಮೇಲಿನ ಬಲಮೂಲೆಯಲ್ಲಿರುವ Finish ಟ್ಯಾಬ್ ಅನ್ನು ಗುರುತಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
11:34 ಹೀಗೆ ಮಾಡಿದಾಗ, File name ಅನ್ನು ತುಂಬಲು ನಮಗೆ ಸೂಚಿಸುತ್ತಿರುವ Save File ಎಂಬ ವಿಂಡೋ ತೆರೆದುಕೊಳ್ಳುತ್ತದೆ.
11:41 ಇದೇ ವಿಂಡೋದಲ್ಲಿ, ನಾನು ಎಡಭಾಗದಲ್ಲಿರುವ Downloads ಎಂಬ ಫೋಲ್ಡರ್ ಮೇಲೆ ಕ್ಲಿಕ್ ಮಾಡುವೆನು.
11:48 ಮತ್ತು, File name ನ ಫೀಲ್ಡ್ ನಲ್ಲಿ, ನಾನು TestData ಎಂದು ಟೈಪ್ ಮಾಡುತ್ತೇನೆ.
11:54 ಈಗ, ಪೇಜ್ ನ ಕೆಳಗಿರುವ Save ಬಟನ್ ಮೇಲೆ ಕ್ಲಿಕ್ ಮಾಡಿ.
11:59 Process has been finished. Records saved to:

C:\Users\Spoken\Download\TestData.mrk ಎಂಬ ಮೆಸೇಜ್ ನೊಂದಿಗೆ ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.

12:14 ಈ ಡೈಲಾಗ್-ಬಾಕ್ಸ್ ಕೆಳಗಿರುವ Ok ಬಟನ್ ಮೇಲೆ ಕ್ಲಿಕ್ ಮಾಡಿ.
12:19 ಇದರೊಂದಿಗೆ, .mrk file ಅನ್ನು ನಿರ್ದೇಶಿಸಿದ ಲೊಕೇಶನ್ ನಲ್ಲಿ, ಎಂದರೆ Downloads ಫೋಲ್ಡರ್ ನಲ್ಲಿ ಯಶಸ್ವಿಯಾಗಿ ಸೇವ್ ಮಾಡಲಾಗಿದೆ.
12:29 ಒಂದು ಹೊಸ ಪೇಜ್ MarcEdit 7.0.250 By Terry Reese ತೆರೆದುಕೊಳ್ಳುತ್ತದೆ.

MarcEditor ಐಕಾನ್ ಅನ್ನು ಗುರುತಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.

12:42 MarcEditor ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.

ಮೇನ್ ಮೆನ್ಯುನಲ್ಲಿ File ಮೇಲೆ ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ನಿಂದ Open ಅನ್ನು ಆಯ್ಕೆಮಾಡಿ.

12:55 TestData.mrk ಫೈಲ್ ಅನ್ನು ತೋರಿಸುತ್ತಿರುವ Open File ಎಂಬ ಒಂದು ವಿಂಡೋ ತೆರೆದುಕೊಳ್ಳುತ್ತದೆ.
13:02 TestData.mrk ಫೈಲ್ ಅನ್ನು ಕ್ಲಿಕ್ ಮಾಡಿ, ಆಯ್ಕೆಮಾಡಿ.
13:07 File name ಫೀಲ್ಡ್ ನಲ್ಲಿ ಇದು ಕಾಣಿಸುತ್ತದೆ.
13:11 ಈಗ ವಿಂಡೋದ ಕೆಳಗಿರುವ Open ಮೇಲೆ ಕ್ಲಿಕ್ ಮಾಡಿ.
13:16 ಎಲ್ಲ ವಿವರಗಳೊಂದಿಗೆ, MarcEditor: TestData.mrk ಎಂಬ ಇನ್ನೊಂದು ವಿಂಡೋ ತೆರೆದುಕೊಳ್ಳುತ್ತದೆ.
13:24 ಇದೇ ವಿಂಡೋದಲ್ಲಿ, ಮೇನ್ ಮೆನ್ಯೂ ನಿಂದ, File ಮೇಲೆ ಕ್ಲಿಕ್ ಮಾಡಿ.
13:29 ಈಗ, ಡ್ರಾಪ್-ಡೌನ್ ನಿಂದ Compile File into MARC ಅನ್ನು ಆಯ್ಕೆಮಾಡಿ.
13:35 ಇನ್ನೊಂದು ಹೊಸ ವಿಂಡೋ Save File ತೆರೆದುಕೊಳ್ಳುತ್ತದೆ.
13:39 ಇಲ್ಲಿ, File Name: ಅನ್ನು ಗುರುತಿಸಿ ಮತ್ತು ಫೀಲ್ಡ್ ನಲ್ಲಿ ಸೂಕ್ತವಾದ ಹೆಸರನ್ನು ಟೈಪ್ ಮಾಡಿ.
13:46 ನಾನು TestData ಎಂದು ಟೈಪ್ ಮಾಡುವೆನು.
13:50 ಕೋಹಾ, ಡೀಫಾಲ್ಟ್ ಆಗಿ Save as type: ಫೀಲ್ಡ್ ನಲ್ಲಿ, MARC Files (*.mrc) ಅನ್ನು ಆಯ್ಕೆಮಾಡುತ್ತದೆ.
14:00 ಈಗ, ವಿಂಡೋದ ಕೆಳಗೆ ಇರುವ Save ಬಟನ್ ಮೇಲೆ ಕ್ಲಿಕ್ ಮಾಡಿ.
14:06 ಹೀಗೆ ಮಾಡಿದಾಗ, ಅದೇ ವಿಂಡೋದ ಕೆಳಭಾಗದಲ್ಲಿ 5 records processed in 0.166228 seconds ಎಂದು ನೀವು ನೋಡುತ್ತೀರಿ.
14:19 ಏಕೆಂದರೆ, ನಾನು 5 ರೆಕಾರ್ಡ್ ಗಳನ್ನು ಮಾತ್ರ ಇಂಪೋರ್ಟ್ ಮಾಡಿದ್ದೇನೆ. ನಿಮ್ಮ ಡೇಟಾದ ಪ್ರಕಾರ, ನೀವು ಬೇರೊಂದು ರೆಕಾರ್ಡ್ ಗಳ ಸಂಖ್ಯೆಯನ್ನು ಮತ್ತು ಪ್ರೊಸೆಸ್ ಸಮಯವನ್ನು ನೋಡುತ್ತೀರಿ.
14:29 ಇಲ್ಲಿಗೆ, ನಮ್ಮ ಲೈಬ್ರರಿಯ Excel ಡೇಟಾ ಅನ್ನು ನಾವು Marc 21 format ಗೆ ಯಶಸ್ವಿಯಾಗಿ ಪರಿವರ್ತಿಸಿದ್ದೇವೆ.
14:37 Marc 21 format , ಕೋಹಾದಲ್ಲಿ ಡೇಟಾವನ್ನು ಕ್ಯಾಟಲಾಗ್ ಮಾಡಲು ಮತ್ತು ಇಂಪೋರ್ಟ್ ಮಾಡಿಕೊಳ್ಳಲು, ಬಳಸುವ ಸ್ಟ್ಯಾಂಡರ್ಡ್ ಫಾರ್ಮ್ಯಾಟ್ ಆಗಿದೆ.
14:46 ಈಗ, ಈ ವಿಂಡೋಅನ್ನು ಮುಚ್ಚಿ. ಹೀಗೆ ಮಾಡಲು, ಮೇಲಿನ ಬಲಮೂಲೆಗೆ ಹೋಗಿ ಮತ್ತು Close ಬಟನ್ ಮೇಲೆ ಕ್ಲಿಕ್ ಮಾಡಿ.
14:55 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು 64-bit Windows ಮಷಿನ್ ನಲ್ಲಿ, Excel data ಅನ್ನು Marc 21 format ಗೆ ಪರಿವರ್ತಿಸಲು ಕಲಿತಿದ್ದೇವೆ.
15:08 ಒಂದು ಅಸೈನ್ಮೆಂಟ್:

Excel ನಲ್ಲಿ, 10 ರೆಕಾರ್ಡ್ ಗಳ ಒಂದು ಲಿಸ್ಟ್ ಅನ್ನು ತಯಾರಿಸಿ. ಮತ್ತು, MarcEdit 7ಅನ್ನು ಬಳಸಿ ಆ ರೆಕಾರ್ಡ್ ಗಳನ್ನು MARC ಗೆ ಪರಿವರ್ತಿಸಿ.

15:20 ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
15:27 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
15:35 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
15:39 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.
15:45 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.
15:50 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14