Koha-Library-Management-System/C2/How-to-create-a-library/Kannada

From Script | Spoken-Tutorial
Revision as of 07:07, 7 March 2019 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:01 How to create a Library in Koha ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, library ಮತ್ತು Group ಗಳನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ಕಲಿಯುವೆವು.
00:16 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux Operating System 16.04

00:24 ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ.
00:29 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು.
00:35 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.
00:41 ಮತ್ತು, Koha ದಲ್ಲಿ ನೀವು Admin ಆಕ್ಸೆಸ್ ಅನ್ನು (access) ಹೊಂದಿರಬೇಕು.
00:46 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ.
00:53 ಈಗ ನಾವು ಆರಂಭಿಸೋಣ. ನನ್ನ ಸಿಸ್ಟಂನಲ್ಲಿ, ಈಗಾಗಲೇ Koha ಅನ್ನು ಇನ್ಸ್ಟಾಲ್ ಮಾಡಿದ್ದೇನೆ.
00:59 Koha ಇಂಟರ್ಫೇಸ್ ಗೆ ನಾನು ಬದಲಾಯಿಸುತ್ತೇನೆ.
01:03 ಇನ್ಸ್ಟಾಲ್ಲೇಶನ್ ಸಮಯದಲ್ಲಿ ಕೊಟ್ಟಿರುವ username ಮತ್ತು password ಗಳನ್ನು ಬಳಸಿ Koha ದಲ್ಲಿ ಲಾಗ್-ಇನ್ ಮಾಡಿ.
01:10 ನನ್ನ ಸಿಸ್ಟಂನಲ್ಲಿ, ನಾನು Username ಅನ್ನು koha underscore library ಎಂದು ಕೊಟ್ಟಿದ್ದೇನೆ.
01:17 ಈಗ, conf.xml ಫೈಲ್ ನಿಂದ ಪಡೆದ ಪಾಸ್ವರ್ಡ್ ಅನ್ನು ಟೈಪ್ ಮಾಡಿ.
01:25 Koha ಮೇನ್ ಪೇಜ್ ತೆರೆದುಕೊಳ್ಳುತ್ತದೆ.
01:27 ಗಮನಿಸಿ, Koha ಅನ್ನು ಸೆಟ್-ಅಪ್ ಮಾಡುವಾಗ - ನಾವು ಕೋಹಾದಲ್ಲಿ ಕ್ರಿಯೇಟ್ ಮಾಡುವ ಪ್ರತಿಯೊಂದು Branch library ಯ ವಿವರಗಳನ್ನು ಸೇರಿಸಬೇಕು.
01:38 ನಂತರ ಈ ಡೇಟಾಅನ್ನು ಕೋಹಾದ ಹಲವಾರು ಏರಿಯಾಗಳಲ್ಲಿ ಬಳಸಲಾಗುವುದು.
01:43 ಈಗ, ನಾವು ಒಂದು ಹೊಸ 'ಲೈಬ್ರರಿ'ಯನ್ನು ಸೇರಿಸೋಣ.
01:47 Koha ಇಂಟರ್ಫೇಸ್ ಗೆ ಹಿಂದಿರುಗಿ.
01:50 Home ಗೆ ಹೋಗಿ ಮತ್ತು Koha Administration ಮೇಲೆ ಕ್ಲಿಕ್ ಮಾಡಿ.
01:56 Basic parameters ಎಂಬ ವಿಭಾಗವನ್ನು ಗುರುತಿಸಿ.
02:00 Libraries and groups ಮೇಲೆ ಕ್ಲಿಕ್ ಮಾಡಿ.
02:04 ಒಂದು ಹೊಸ 'ಲೈಬ್ರರಿ'ಯನ್ನು ಸೇರಿಸಲು, '+ New Library' ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
02:10 ನಾವು groups ವಿಭಾಗವನ್ನು ಸಧ್ಯಕ್ಕೆ ಹಾಗೇ ಬಿಡುವೆವು.
02:15 ಈ ಪೇಜ್ ನಲ್ಲಿ, ಕೆಂಪು ಬಣ್ಣದಲ್ಲಿ ಗುರುತಿಸಲಾದ ಎಲ್ಲಾ ಫೀಲ್ಡ್ ಗಳು ಕಡ್ಡಾಯವಾಗಿವೆ ಎಂಬುದನ್ನು ಗಮನಿಸಿ.
02:21 ನಾನು ಇಲ್ಲಿ ಮಾಡಿದಂತೆ, ನಿಮ್ಮ ಲೈಬ್ರರಿಗಾಗಿ Library code ಹಾಗೂ Name ಫೀಲ್ಡ್ ಗಳನ್ನು ತುಂಬಿ.
02:29 ಗಮನಿಸಬೇಕಾದ ಕೆಲವು ಮುಖ್ಯ ವಿಷಯಗಳು - Library code ನಲ್ಲಿ ಸ್ಪೇಸ್ ಇರಬಾರದು.
02:36 ಮತ್ತು, ಇದು 10 ಅಕ್ಷರಗಳಿಗಿಂತ ಕಡಿಮೆ ಇರಬೇಕು.
02:40 'ಡೇಟಾಬೇಸ್' ನಲ್ಲಿ, ಈ ಕೋಡ್ ಅನ್ನು ಏಕಮಾತ್ರ ಗುರುತಿನಂತೆ ಬಳಸಲಾಗುತ್ತದೆ.
02:46 ಮುಂದಿನ ವಿಭಾಗದಲ್ಲಿ, Address, phone number ಗಳಂತಹ ನಮ್ಮ ಲೈಬ್ರರಿಯ ಸಂಪರ್ಕದ ವಿವರಗಳನ್ನು ನಾವು ತುಂಬಬೇಕು.
02:58 ಇಲ್ಲಿ ತೋರಿಸಿರುವಂತೆ ನಾನು ವಿವರಗಳನ್ನು ತುಂಬಿದ್ದೇನೆ.
03:01 ಇಲ್ಲಿ ಪಟ್ಟಿ ಮಾಡಿದ ಯಾವುದೇ 'ಫೀಲ್ಡ್' ಗಾಗಿ ನಿಮ್ಮ ಹತ್ತಿರ ಮಾಹಿತಿ ಇರದಿದ್ದರೆ, ಅದನ್ನು ಖಾಲಿ ಬಿಟ್ಟುಬಿಡಿ.
03:08 ಹೀಗೆಯೇ, ಈ ಪೇಜ್ ನಲ್ಲಿ ನಿಮ್ಮ ಲೈಬ್ರರಿಯ ವಿವರಗಳನ್ನು ಭರ್ತಿ ಮಾಡಿ.
03:13 ನಿಮ್ಮ ಲೈಬ್ರರಿಗಾಗಿ ನಂತರ ಕಸ್ಟಮ್ ಪ್ರಕಟಣೆಗಳನ್ನು ಮಾಡಲು, address ಹಾಗೂ phone ವಿವರಗಳನ್ನು ಬಳಸಬಹುದು.
03:20 ಸದಸ್ಯರು ಲೈಬ್ರರಿಯನ್ನು ಸಂಪರ್ಕಿಸಲು ಬಯಸಿದಾಗ, ಅವರು ಸಹ ಈ ವಿವರಗಳನ್ನು ಬಳಸಬಹುದು.
03:26 Email id ಫೀಲ್ಡ್ ಕಡ್ಡಾಯವಾಗಿಲ್ಲ ಎಂದು ನೀವು ನೋಡಬಹುದು.
03:31 ಆದಾಗ್ಯೂ, ನೀವು ರಚಿಸುವ ಲೈಬ್ರರಿಗಾಗಿ email id ಯನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ.
03:38 email id ಯಿಂದ, ಸದಸ್ಯರಿಗೆ ನೋಟಿಸ್ ಗಳು ಹೋಗುತ್ತವೆ ಮತ್ತು ಅವರಿಂದ ಬರುತ್ತವೆ.
03:45 Gmail id ಯನ್ನು ಮೇಲ್ ಕಳುಹಿಸಲು ಮತ್ತು / ಅಥವಾ ಮೇಲ್ ಪಡೆಯಲು ಸುಲಭವಾಗಿ ಕಾನ್ಫಿಗರ್ ಮಾಡಬಹುದು. ಆದ್ದರಿಂದ ಇದು ಸೂಕ್ತವಾಗಿದೆ.
03:54 Email id ಫೀಲ್ಡ್ ನ ಕೆಳಗೆ, Reply-To ಮತ್ತು Return-Path ಫೀಲ್ಡ್ ಗಳಿವೆ.
04:01 ಸೂಚನೆಗಳ ಎಲ್ಲಾ ಪ್ರತ್ಯುತ್ತರಗಳಿಗಾಗಿ ನೀವು ಇನ್ನೊಂದು ಡೀಫಾಲ್ಟ್ 'ಇಮೇಲ್ ಅಡ್ರೆಸ್ ' ಅನ್ನು ಸೂಚಿಸಲು ಬಯಸಿದರೆ, ನೀವು ಅದನ್ನು ಇಲ್ಲಿ ಮಾಡಬಹುದು.
04:11 ನಾನು Reply-To email id ಅನ್ನು stlibreoffice@gmail.com ಎಂದು ಸೇರಿಸುವೆನು.
04:20 ಇದನ್ನು ಖಾಲಿ ಬಿಟ್ಟರೆ, ಆಗ ಎಲ್ಲಾ ಪ್ರತ್ಯುತ್ತರಗಳು (reply) ಮೇಲೆ ಕೊಟ್ಟಿರುವ 'ಇಮೇಲ್ ಐಡಿ' ಗೆ ಹೋಗುತ್ತವೆ.
04:27 ಈಗ Return-Path- ಈ ಇಮೇಲ್-ಅಡ್ರೆಸ್ ಗೆ, ಎಲ್ಲಾ ಬೌನ್ಸ್ ಆದ ಮೆಸೇಜ್ ಗಳು ಹೋಗುತ್ತವೆ.
04:34 ಇದನ್ನು ಖಾಲಿ ಬಿಟ್ಟರೆ, ಆಗ ಎಲ್ಲಾ ಬೌನ್ಸ್ ಆದ ಮೆಸೇಜ್ ಗಳು ಮೇಲೆ ಕೊಟ್ಟಿರುವ 'ಇಮೇಲ್ ಐಡಿ' ಗೆ ಹೋಗುತ್ತವೆ.
04:42 ಆದ್ದರಿಂದ, ಮೂರು ವಿಭಿನ್ನ 'ಇಮೇಲ್ ಐಡಿ' ಗಳನ್ನು-
04:48 Email id ,
04:50 Reply-To ಹಾಗೂ
04:52 Return-Path ಗಳಿಗಾಗಿ ಬಳಸಬಹುದು.
04:55 ಆದಾಗ್ಯೂ, ಕೇವಲ ಒಂದೇ ಒಂದು 'ಇಮೇಲ್ ಐಡಿ' ಅನ್ನು ಮಾತ್ರ ಒದಗಿಸಿದರೆ, Koha ಅದನ್ನು ಮೂರು ಫೀಲ್ಡ್ ಗಳಿಗೂ ಬಳಸುತ್ತದೆ.
05:04 ನಂತರ, ನಾನು ಇಲ್ಲಿ ಮಾಡಿದಂತೆ, ಫೀಲ್ಡ್ ನಲ್ಲಿ ನಿಮ್ಮ ಲೈಬ್ರರಿಯ URL ಅನ್ನು ಉಲ್ಲೇಖಿಸಿ.
05:10 URL ಫೀಲ್ಡ್ ಅನ್ನು ತುಂಬಿದ ಮೇಲೆ, OPACನಲ್ಲಿ ಆ ನಿರ್ದಿಷ್ಟ ಲೈಬ್ರರಿಯ ಹೆಸರನ್ನು 'ಹೋಲ್ಡಿಂಗ್ಸ್ ಟೇಬಲ್' ನಲ್ಲಿ ಲಿಂಕ್ ಮಾಡಲಾಗುವುದು.
05:18 ಇದರ ನಂತರ, ನಾವು OPAC info ಅನ್ನು ತುಂಬಬೇಕು.
05:23 ಇದು, ನಿಮ್ಮ ಲೈಬ್ರರಿಯ ಬಗ್ಗೆ ನೀವು ಮಾಹಿತಿಯನ್ನು ಕೊಡಬೇಕಾದ ಸ್ಥಳವಾಗಿದೆ.
05:28 ನಾನು ಇಲ್ಲಿ ನನ್ನ ಲೈಬ್ರರಿಯ ಬಗ್ಗೆ ಸ್ವಲ್ಪ ಮಾಹಿತಿಯನ್ನು ಕೊಟ್ಟಿದ್ದೇನೆ.
05:33 holdings table ನಲ್ಲಿ, ಲೈಬ್ರರಿಯ ಹೆಸರಿನ ಮೇಲೆ ನಾವು ಕರ್ಸರ್ ಅನ್ನು ಸರಿಸುವಾಗ ಈ ಮಾಹಿತಿಯು OPAC ನಲ್ಲಿ ಕಾಣಿಸುತ್ತದೆ.
05:41 ಈ ಫೀಲ್ಡ್ ನಲ್ಲಿ, ಒಂದು ನಿರ್ದಿಷ್ಟವಾದ ಬ್ರ್ಯಾಂಚ್ ಲೈಬ್ರರಿಗಾಗಿ URL ಅನ್ನು ಹಾಕಿದರೆ, ಆಗ ಪುಸ್ತಕವು ಲಭ್ಯವಿರುವ ಬ್ರ್ಯಾಂಚ್ ಲೈಬ್ರರಿಯನ್ನು OPAC ನಮಗೆ ತಿಳಿಸುತ್ತದೆ.
05:52 'ಹೈಪರ್ ಲಿಂಕ್ ಅಡ್ರೆಸ್' ಮಾಹಿತಿಯನ್ನು ಪಡೆಯಲು, ಮೌಸ್ ಅನ್ನು ಲಿಂಕ್ ನ ಮೇಲೆ ನಡೆದಾಡಿಸಿ.
05:58 ಪುಸ್ತಕವನ್ನು ಕೊಡಬಹುದಾದ ನಿರ್ದಿಷ್ಟ branch ಲೈಬ್ರರಿಯ ವಿಳಾಸವನ್ನು ಇದು ಕೊಡುವುದು.
06:05 ನಾವು Koha ಇಂಟರ್ಫೇಸ್ ಗೆ ಹಿಂದಿರುಗೋಣ.
06:09 ನಂತರ ಇಲ್ಲಿ IP address ಇದೆ.
06:12 ನೀವು Koha admin access ಅನ್ನು ಒಂದು ನಿರ್ದಿಷ್ಟ IP address ಗೆ ನಿರ್ಬಂಧಿಸಲು ಬಯಸಿದರೆ, ನೀವು ಆ IP ಯನ್ನು ಇಲ್ಲಿ ಸೂಚಿಸಬಹುದು.
06:22 ಇಲ್ಲದಿದ್ದರೆ, ನೀವು ಅದನ್ನು ಖಾಲಿ ಬಿಡಬಹುದು.
06:25 ನಾನು ಇದನ್ನು ಖಾಲಿ ಬಿಡುತ್ತೇನೆ.
06:28 ಕೊನೆಯದಾಗಿ, ನಾವು Notes ಫೀಲ್ಡ್ ಅನ್ನು ಹೊಂದಿದ್ದೇವೆ.
06:32 ನಂತರ ರೆಫರೆನ್ಸ್ ಮಾಡಲು, ಇಲ್ಲಿ ನೀವು ಯಾವುದೇ ಟಿಪ್ಪಣಿಗಳನ್ನು ಭರ್ತಿ ಮಾಡಬಹುದು.
06:37 OPAC ನಲ್ಲಿ ಇವುಗಳನ್ನು ಪ್ರದರ್ಶಿಸಲಾಗುವುದಿಲ್ಲ.
06:40 ಎಲ್ಲ ವಿವರಗಳನ್ನು ನಮೂದಿಸಿದ ನಂತರ, Submit ಬಟನ್ ಮೇಲೆ ಕ್ಲಿಕ್ ಮಾಡಿ.
06:46 ಹೊಸದಾಗಿ ಸೇರಿಸಲಾದ ಲೈಬ್ರರಿಯ ಹೆಸರು Libraries ಪೇಜ್ ನಲ್ಲಿ ಕಾಣಿಸಿಕೊಳ್ಳುತ್ತದೆ.
06:51 ಇಲ್ಲಿ, ಇದು Spoken Tutorial Library ಆಗಿದೆ.
06:55 ಈಗ, Group Library ಆಯ್ಕೆಯನ್ನು ಯಾವಾಗ ಬಳಸಬೇಕು ಎಂಬುದನ್ನು ನಾವು ನೋಡೋಣ.
07:00 ನಿಮಗೆ ಒಂದು ಹೊಸ group ಅನ್ನು ಸೇರಿಸಬೇಕಾಗಿದ್ದರೆ, '+ New Group' ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
07:07 ನೀವು ಕೆಲವು ಬ್ರ್ಯಾಂಚ್ ಲೈಬ್ರರಿಗಳನ್ನು ಹೊಂದಿದ್ದೀರಿ ಎಂದುಕೊಳ್ಳಿ. ಉದಾ - ರಸಾಯನಶಾಸ್ತ್ರ ಲೈಬ್ರರಿ, ಭೌತಶಾಸ್ತ್ರ ಲೈಬ್ರರಿ ಮತ್ತು ಜೀವಶಾಸ್ತ್ರ ಲೈಬ್ರರಿ. ಮತ್ತು, ನೀವು ಅವುಗಳನ್ನು ಗ್ರುಪ್ ಮಾಡಬೇಕು ಎಂದು ಬಯಸುತ್ತೀರಿ.
07:19 ಇಂತಹ ಸನ್ನಿವೇಶದಲ್ಲಿ, Group Library ಎಂಬ ಆಯ್ಕೆಯನ್ನು ಬಳಸಿ.
07:24 ಈ ಗ್ರುಪ್ ಅನ್ನು Science library ಎಂದು ಹೆಸರಿಸಿ. ಇದು ಮೇನ್ ಲೈಬ್ರರಿಯ ಅಡಿಯಲ್ಲಿ ಬರುತ್ತದೆ.
07:31 ಹೋಲಿಕೆ ಮತ್ತು / ಅಥವಾ ಅಂತಹುದೇ ಗುಣಲಕ್ಷಣಗಳ ಆಧಾರದ ಮೇಲೆ, ಗ್ರುಪ್ ಗಳನ್ನು ಮಾಡಬಹುದು.
07:40 ನಿಮ್ಮ ಈ ಸೆಶನ್ ನಿಂದ Database administrative user ಎಂದು ಲಾಗ್-ಔಟ್ ಮಾಡಿ.
07:45 ಹೀಗೆ ಮಾಡಲು, ಮೇಲಿನ ಬಲ ಮೂಲೆಗೆ ಹೋಗಿ ಮತ್ತು No Library Set ಮೇಲೆ ಕ್ಲಿಕ್ ಮಾಡಿ.
07:52 ಡ್ರಾಪ್-ಡೌನ್ ನಿಂದ, Log out ಮೇಲೆ ಕ್ಲಿಕ್ ಮಾಡಿ.
07:57 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
08:01 ಸಂಕ್ಷಿಪ್ತವಾಗಿ,
08:03 ಈ ಟ್ಯುಟೋರಿಯಲ್ ನಲ್ಲಿ ನಾವು, library ಯನ್ನು ಮತ್ತು ಒಂದು ಹೊಸ Group ಅನ್ನು ಕ್ರಿಯೇಟ್ ಮಾಡಲು ಕಲಿತಿದ್ದೇವೆ.
08:11 ಒಂದು ಅಸೈನ್ಮೆಂಟ್- ಒಂದು ಹೊಸ ಲೈಬ್ರರಿ ಯನ್ನು ಮತ್ತು ಒಂದು ಹೊಸ group ಅನ್ನು ಕ್ರಿಯೇಟ್ ಮಾಡಿ.
08:17 ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
08:25 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
08:35 Forum for specific questions:

ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನೀವು ಪ್ರಶ್ನೆಗಳನ್ನು ಹೊಂದಿದ್ದೀರಾ?

08:42 ದಯವಿಟ್ಟು ಈ ಸೈಟ್ ಗೆ ಭೇಟಿ ನೀಡಿ. ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಗಳನ್ನು ಆಯ್ಕೆಮಾಡಿ.
08:49 ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
08:51 ನಮ್ಮ ತಂಡದಿಂದ ಯಾರಾದರೂ ಅವುಗಳಿಗೆ ಉತ್ತರಿಸುತ್ತಾರೆ.
08:55 Forum for specific questions:
08:58 'ಸ್ಪೋಕನ್ ಟ್ಯುಟೋರಿಯಲ್ ಫೋರಮ್', ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗಾಗಿ ಇರುತ್ತದೆ.
09:03 ದಯವಿಟ್ಟು ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಅಲ್ಲಿ ಪೋಸ್ಟ್ ಮಾಡಬೇಡಿ.
09:08 ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.
09:11 ಕಡಿಮೆ ಗೊಂದಲವಿದ್ದಾಗ, ನಾವು ಈ ಚರ್ಚೆಗಳನ್ನು ವಿವರಣೆಗಾಗಿ ಬಳಸಬಹುದು.
09:17 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.
09:23 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.
09:28 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14