Koha-Library-Management-System/C2/Catalog-Serials/Kannada

From Script | Spoken-Tutorial
Revision as of 12:41, 24 April 2019 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 How to catalog Serial subscriptions ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, ಸೀರಿಯಲ್ ಸಬ್ಸ್ಕ್ರಿಪ್ಶನ್ ಗಳನ್ನು (subscription) ಹೇಗೆ ಕ್ಯಾಟಲಾಗ್ (ಪುಸ್ತಕದ ಪಟ್ಟಿ) ಮಾಡುವುದೆಂದು ಕಲಿಯುವೆವು.
00:14 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux Operating System 16.04 ಮತ್ತು

Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ.

00:27 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು.
00:33 ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.

ಮತ್ತು, Koha ದಲ್ಲಿ Admin ಆಕ್ಸೆಸ್ ಅನ್ನು ಸಹ ನೀವು ಹೊಂದಿರಬೇಕು.

00:44 ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ.
00:50 ಆರಂಭಿಸುವ ಮೊದಲು, Serials ಮೊಡ್ಯೂಲ್ ಎಂದರೆ ಏನು ಎಂದು ನಾವು ತಿಳಿದುಕೊಳ್ಳೋಣ.
00:56 Serials ಮೊಡ್ಯೂಲ್ ಅನ್ನು -

ಕಾಲಕಾಲಕ್ಕೆ ಪ್ರಕಟಿಸಲಾಗುವ ಜರ್ನಲ್ ಗಳು,

01:03 ಮ್ಯಾಗಝೀನ್ ಗಳು (Magazines) ಮತ್ತು ನಿಯತಕಾಲಿಕಗಳ (Periodicals) ಚಂದಾದಾರಿಕೆಯನ್ನು ನಿರ್ವಹಿಸಲು ಬಳಸಲಾಗುತ್ತದೆ.
01:10 ಈ ವಿವರಣೆಯಲ್ಲಿ, ನಾನು -

Indian Journal of Microbiology ಎಂಬ ಶೀರ್ಷಿಕೆಯ

01:19 Volume-57,

Number- 1,

ತ್ರೈಮಾಸಿಕ ಪ್ರಕಟಣೆ - Jan ಯಿಂದ March 2017 ರ ವರೆಗಿನ ಒಂದು ಸೀರಿಯಲ್ ಪಬ್ಲಿಕೇಶನ್ ಅನ್ನು ಕ್ಯಾಟಲಾಗ್ ಮಾಡುತ್ತಿದ್ದೇನೆ.

01:30 ಇದನ್ನು ಮಾಡಲು, Superlibrarian Username ಮತ್ತು ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡಿ.
01:36 Home ಪೇಜ್ ನಲ್ಲಿ, Cataloging ಮೇಲೆ ಕ್ಲಿಕ್ ಮಾಡಿ.
01:41 ಆಮೇಲೆ plus New record ಮೇಲೆ ಕ್ಲಿಕ್ ಮಾಡಿ.

ಡ್ರಾಪ್-ಡೌನ್ ನಿಂದ, Serials ಅನ್ನು ಆಯ್ಕೆಮಾಡಿ.

01:49 Add MARC record ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
01:54 ಈಗ ನಾವು ಕೆಳಗಿನ ವಿವರಗಳನ್ನು ಭರ್ತಿ ಮಾಡೋಣ.
01:58 ಈ ಪೇಜ್ ನಲ್ಲಿ, ಕೆಲವು ಕಡ್ಡಾಯವಾದ ಫೀಲ್ಡ್ ಗಳಿವೆ ಎಂದು ಗಮನಿಸಿ.
02:03 'ಕೋಹಾ', ಕೆಲವು ಕಡ್ಡಾಯವಾದ ಫೀಲ್ಡ್ ಗಳಿಗೆ ತಾನೇ ವ್ಯಾಲ್ಯೂಗಳನ್ನು ಕೊಡುತ್ತದೆ.
02:09 0 ರಿಂದ 9 ರ ವರೆಗಿನ ಟ್ಯಾಬ್ ಗಳ ಶ್ರೇಣಿಯಲ್ಲಿ, ನಾವು ಟ್ಯಾಬ್ zero ದೊಂದಿಗೆ ಆರಂಭಿಸುವೆವು.
02:16 000, LEADER ಫೀಲ್ಡ್ ನಲ್ಲಿ ಕ್ಲಿಕ್ ಮಾಡಿ. ಡೀಫಾಲ್ಟ್ ಆಗಿ, Koha ಈ ವ್ಯಾಲ್ಯೂಅನ್ನು ತೋರಿಸುತ್ತದೆ.
02:26 ಆಮೇಲೆ, 005 DATE AND TIME OF LATEST TRANSACTION ಫೀಲ್ಡ್ ನಲ್ಲಿ ಕ್ಲಿಕ್ ಮಾಡಿ.
02:35 ಕೋಹಾ, ನನ್ನ ಮಷಿನ್ ನಲ್ಲಿ ಈ ವ್ಯಾಲ್ಯೂಅನ್ನು ತಾನೇ ಕೊಡುತ್ತದೆ.
02:40 ನಿಮ್ಮ ಇಂಟರ್ಫೇಸ್ ನಲ್ಲಿ ನೀವು ಬೇರೆ ವ್ಯಾಲ್ಯೂಅನ್ನು ನೋಡುವಿರಿ.
02:44 006 ಮತ್ತು 007 ಗಳ ಫೀಲ್ಡ್ ಗಳನ್ನು ನಾನು ಹಾಗೇ ಬಿಡುತ್ತೇನೆ.
02:50 008 FIXED-LENGTH DATA ELEMENTS--GENERAL INFORMATION ಅನ್ನು ಕ್ಲಿಕ್ ಮಾಡಿದಾಗ, Koha ಈ ವ್ಯಾಲ್ಯೂಅನ್ನು ತಾನೇ ಕೊಡುತ್ತದೆ.
03:01 ನಂತರ, 022 ISSN ಎಂಬ ಟ್ಯಾಬ್ ಗೆ ಹೋಗಿ.
03:06 022 question mark ಪಕ್ಕದಲ್ಲಿಯ ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.
03:12 ಗಮನಿಸಿ: ನೀವು ಪ್ರಶ್ನಾರ್ಥಕ ಚಿಹ್ನೆಯ ( ? ) ಮೇಲೆ ಕ್ಲಿಕ್ ಮಾಡಿದಾಗ, ಟ್ಯಾಗ್ 022 ಗಾಗಿ, ಸಂಪೂರ್ಣ MARC 21 Bibliographic ಫಾರ್ಮ್ಯಾಟ್ ತೆರೆದುಕೊಳ್ಳುತ್ತದೆ.
03:24 ಇಲ್ಲಿ, ಈ ಎರಡೂ indicator ಗಳನ್ನು (ಇಂಡಿಕೇಟರ್) ವಿವರಿಸಿಲ್ಲ.
03:28 ಈಗ ನಾವು ಕೋಹಾ ಇಂಟರ್ಫೇಸ್ ಗೆ ಹಿಂದಿರುಗೋಣ.
03:32 ನಾನು ಈ ಎರಡು ಖಾಲಿ ಬಾಕ್ಸ್ ಗಳನ್ನು ಹಾಗೇ ಬಿಡುತ್ತೇನೆ.
03:36 ನಂತರ, ‘a’ International Standard Serial Number ಎಂಬ ಸಬ್-ಫೀಲ್ಡ್ ಅನ್ನು ಗುರುತಿಸಿ.
03:43 ಎಂಟು ಅಂಕಿಗಳ ಜರ್ನಲ್ ISSN ಅನ್ನು ನಮೂದಿಸಿ.
03:49 ಆದಾಗ್ಯೂ, ನೀವು ಕ್ಯಾಟಲಾಗ್ ಗೆ ಆಯ್ಕೆಮಾಡಿರುವ ಜರ್ನಲ್ ನ ISSN ಅನ್ನು ಸೇರಿಸಬೇಕು.
03:55 ಉಳಿದ ಫೀಲ್ಡ್ ಗಳನ್ನು ಹಾಗೇ ಬಿಟ್ಟುಬಿಡುತ್ತೇನೆ.
03:57 ನಿಮ್ಮ ಲೈಬ್ರರಿಯ ಅವಶ್ಯಕತೆಗಳ ಪ್ರಕಾರ, ಈ ಫೀಲ್ಡ್ ಗಳನ್ನು ಭರ್ತಿ ಮಾಡುವುದನ್ನು ನೀವು ಪರಿಗಣಿಸಬಹುದು.
04:04 ನಂತರ, 040 CATALOGING SOURCE ಎಂಬ ಟ್ಯಾಬ್ ಗೆ ಹೋಗಿ.

040 ? (ಪ್ರಶ್ನಾರ್ಥಕ ಚಿಹ್ನೆಯ) ಪಕ್ಕದಲ್ಲಿಯ ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.

04:14 ಇಲ್ಲಿ, ಈ ಎರಡೂ ಇಂಡಿಕೇಟರ್ ಗಳನ್ನು ವಿವರಿಸಿಲ್ಲ.
04:18 ಹೀಗಾಗಿ, ನಾನು ಈ ಎರಡೂ ಖಾಲಿ ಬಾಕ್ಸ್ ಗಳನ್ನು ಇದ್ದ ಹಾಗೇ ಇಡುತ್ತೇನೆ.
04:23 c, Transcribing agency ಎಂಬ ಸಬ್-ಫೀಲ್ಡ್ ಗೆ ಹೋಗಿ.
04:28 ಇಲ್ಲಿ Institute/University ಅಥವಾ Department ನ ಹೆಸರನ್ನು ಟೈಪ್ ಮಾಡಿ.
04:34 ನಾನು IIT Bombay ಎಂದು ಟೈಪ್ ಮಾಡುವೆನು.
04:37 ಈಗ 082 DEWEY DECIMAL CLASSIFICATION NUMBER ಎಂಬ ಟ್ಯಾಬ್ ಗೆ ಬನ್ನಿ.
04:44 a’, Classification number ಎಂಬ ಸಬ್-ಫೀಲ್ಡ್ ನಲ್ಲಿ, 660.62 ಎಂದು ನಮೂದಿಸಿ.
04:52 ಆಮೇಲೆ, ಮೇಲ್ತುದಿಗೆ ಹೋಗಿ ಮತ್ತು 0 ಯಿಂದ 9 ಟ್ಯಾಬ್ ಗಳಲ್ಲಿ, ಟ್ಯಾಬ್ 2 ಮೇಲೆ ಕ್ಲಿಕ್ ಮಾಡಿ.
05:01 ನಂತರ, 245 TITLE STATEMENT: ಎಂಬ ಟ್ಯಾಬ್ ಗೆ ಹೋಗಿ.
05:07 245 ? ಪಕ್ಕದಲ್ಲಿ ಈ ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.

ಮೊದಲೇ ಹೇಳಿದಂತೆ, ನೀವು ಪ್ರಶ್ನಾರ್ಥಕ ಚಿಹ್ನೆಯ ( ? ) ಮೇಲೆ ಕ್ಲಿಕ್ ಮಾಡಿದಾಗ,

05:17 ಆಯಾ ಟ್ಯಾಗ್ ಗಾಗಿ, ಸಂಪೂರ್ಣ MARC 21 Bibliographic format ತೆರೆದುಕೊಳ್ಳುತ್ತದೆ.
05:24 ನಾವು ಮತ್ತೆ 'ಕೋಹಾ ಇಂಟರ್ಫೇಸ್' ಗೆ ಹಿಂತಿರುಗೋಣ.
05:28 ಈಗ, ಮೊದಲನೆಯ ಖಾಲಿ ಬಾಕ್ಸ್ ನಲ್ಲಿ 0 ಎಂದು ಟೈಪ್ ಮಾಡಿ. ಗಮನಿಸಿ: 0- ಇದು No added Entry ಗಾಗಿ ಇಂಡಿಕೇಟರ್ ಆಗಿದೆ.
05:37 ಎರಡನೆಯ ಖಾಲಿ ಬಾಕ್ಸ್ ನಲ್ಲಿಯೂ 0 ಎಂದು ಟೈಪ್ ಮಾಡಿ.
05:41 2ನೆಯ ಇಂಡಿಕೇಟರ್, ಒಂದು non-filing (ನಾನ್-ಫೈಲಿಂಗ್) ಅಕ್ಷರವನ್ನು ಪ್ರತಿನಿಧಿಸುತ್ತದೆ.
05:46 ನಾನು 0 ಅನ್ನು ನಮೂದಿಸಿದ್ದೇನೆ. ಏಕೆಂದರೆ, ಈ TITLE ನ ಅಡಿಯಲ್ಲಿ, non- filing ಅಕ್ಷರವು ಇಲ್ಲ.
05:54 a’ Title ಎಂಬ ಸಬ್-ಫೀಲ್ಡ್ ನಲ್ಲಿ, ಹೀಗೆ ಟೈಪ್ ಮಾಡಿ: Indian Journal of Microbiology.
06:01 ನಿಮ್ಮ ಜರ್ನಲ್ ನ ಶೀರ್ಷಿಕೆಯನ್ನು ನೀವು ಇಲ್ಲಿ ಟೈಪ್ ಮಾಡಬಹುದು.
06:05 ಈಗ, 260 PUBLICATION, DISTRIBUTION, ETC ಗೆ ಹೋಗಿ.
06:11 260? (260 ಪ್ರಶ್ನಾರ್ಥಕ ಚಿಹ್ನೆಯ) ಪಕ್ಕದಲ್ಲಿ ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.
06:17 ಇದಕ್ಕಾಗಿ ಎರಡೂ ಇಂಡಿಕೇಟರ್ ಗಳನ್ನು ವಿವರಿಸಿಲ್ಲ. ಹೀಗಾಗಿ, ನಾನು ಈ ಎರಡು ಖಾಲಿ ಬಾಕ್ಸ್ ಗಳನ್ನು ಇದ್ದ ಹಾಗೇ ಇಡುತ್ತೇನೆ.
06:26 ಈಗ, ನನ್ನ ಪುಸ್ತಕದ ವಿವರಗಳನ್ನು ನಾನು ತುಂಬುತ್ತೇನೆ. ನಿಮ್ಮ ಪುಸ್ತಕದ ವಿವರಗಳನ್ನು ನೀವು ಟೈಪ್ ಮಾಡಬಹುದು.
06:34 a’ Place of publication, distribution, etc., ಎಂಬ ಸಬ್-ಫೀಲ್ಡ್ ನಲ್ಲಿ, New Delhi ಎಂದು ನಮೂದಿಸಿ.
06:42 b’ Name of publisher, distributor, etc. ಎಂಬ ಸಬ್-ಫೀಲ್ಡ್ ನಲ್ಲಿ, Springer ಎಂದು ನಮೂದಿಸಿ.
06:50 c’ Date of publication, distribution, etc. ಎಂಬ ಸಬ್-ಫೀಲ್ಡ್ ನಲ್ಲಿ 2017 ಎಂದು ನಮೂದಿಸಿ.
07:00 ಈಗ, ಮತ್ತೊಮ್ಮೆ ಮೇಲ್ತುದಿಗೆ ಹೋಗಿ. ಮತ್ತು, 0 ಯಿಂದ 9 ಟ್ಯಾಬ್ ಗಳಲ್ಲಿ 3 ನೇ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
07:07 ಈಗ 300 PHYSICAL DESCRIPTION ಗೆ ಹೋಗಿ.
07:12 300? (300 ಪ್ರಶ್ನಾರ್ಥಕ ಚಿಹ್ನೆ) ಪಕ್ಕದಲ್ಲಿ, ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.
07:19 ಇದಕ್ಕಾಗಿ ಎರಡೂ ಇಂಡಿಕೇಟರ್ ಗಳನ್ನು ವಿವರಿಸಿಲ್ಲ. ಹೀಗಾಗಿ, ನಾನು ಈ ಎರಡು ಖಾಲಿ ಬಾಕ್ಸ್ ಗಳನ್ನು ಇದ್ದ ಹಾಗೇ ಇಡುತ್ತೇನೆ.
07:27 ‘a’ Extent ಸಬ್-ಫೀಲ್ಡ್ ನಲ್ಲಿ, ನಾನು 11 v ಎಂದು ಟೈಪ್ ಮಾಡುವೆನು.
07:33 ಗಮನಿಸಿ: 11 v ಯ ನಂತರ ನಾನು ಈ ಜರ್ನಲ್ ಗೆ ಚಂದಾದಾರನಾಗಿದ್ದೇನೆ.
07:39 ಆದ್ದರಿಂದ, ನಿಮ್ಮ ಜರ್ನಲ್ ನ ಪ್ರಕಾರ ನೀವು ನಮೂದಿಸಬೇಕು.
07:43 ಈಗ, 310 CURRENT PUBLICATION FREQUENCY ಗೆ ಹೋಗಿ.
07:49 310? ಪಕ್ಕದಲ್ಲಿ, ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.
07:55 ಇದಕ್ಕಾಗಿ ಎರಡೂ ಇಂಡಿಕೇಟರ್ ಗಳನ್ನು ವಿವರಿಸಿಲ್ಲ. ಹೀಗಾಗಿ, ನಾನು ಈ ಎರಡು ಖಾಲಿ ಬಾಕ್ಸ್ ಗಳನ್ನು ಇದ್ದ ಹಾಗೇ ಇಡುತ್ತೇನೆ.
08:03 ಟ್ಯಾಗ್ ಅನ್ನು ವಿಸ್ತರಿಸಲು CURRENT PUBLICATION FREQUENCY ಮೇಲೆ ಕ್ಲಿಕ್ ಮಾಡಿ. ಇದರಿಂದ ನಾವು ಸಬ್-ಫೀಲ್ಡ್ ಗಳನ್ನು ತುಂಬಬಹುದು.
08:12 ‘a’ Current publication frequency ಎಂಬ ಸಬ್-ಫೀಲ್ಡ್ ನಲ್ಲಿ, ನಾನು Quarterly ಎಂದು ಟೈಪ್ ಮಾಡುವೆನು.
08:22 ಏಕೆಂದರೆ, ನನ್ನ ಜರ್ನಲ್ ತ್ರೈಮಾಸಿಕ ಸೀರಿಯಲ್ ಆಗಿದೆ.
08:27 ನಿಮ್ಮದು ವಿಭಿನ್ನವಾಗಿದ್ದರೆ, ಉದಾ: ಮಾಸಿಕ, ದ್ವಿ-ಮಾಸಿಕ ಇತ್ಯಾದಿ, ಅದಕ್ಕೆ ಅನುಗುಣವಾಗಿ ತುಂಬಿರಿ.
08:34 ಆಮೇಲೆ, ಮತ್ತೊಮ್ಮೆ ಮೇಲ್ತುದಿಗೆ ಹೋಗಿ. ಮತ್ತು 0 ಯಿಂದ 9 ಟ್ಯಾಬ್ ಗಳಲ್ಲಿ 6 ರ ಮೇಲೆ ಕ್ಲಿಕ್ ಮಾಡಿ.
08:41 650 SUBJECT ADDED ENTRY--TOPICAL TERM ಎಂಬ ಫೀಲ್ಡ್ ಅನ್ನು ಗುರುತಿಸಿ.
08:47 650 ಪ್ರಶ್ನಾರ್ಥಕ ಚಿಹ್ನೆಯ ಪಕ್ಕದಲ್ಲಿ, ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.

ಮೊದಲನೆಯ ಖಾಲಿ ಬಾಕ್ಸ್ ನಲ್ಲಿ, 1 ಎಂದು ಟೈಪ್ ಮಾಡಿ.

08:55 Primary (Level of subject) ಗಾಗಿ 1 ಇಂಡಿಕೇಟರ್ ಆಗಿದೆ ಎಂದು ಗಮನಿಸಿ.
09:00 ಎರಡನೆಯ ಖಾಲಿ ಬಾಕ್ಸ್ ನಲ್ಲಿ, 0 ಅನ್ನು ಟೈಪ್ ಮಾಡಿ.
09:04 Library of Congress Subject Headings (Thesaurus) ಗಾಗಿ, 0 ಇಂಡಿಕೇಟರ್ ಆಗಿದೆ ಎಂದು ಗಮನಿಸಿ.
09:11 ನಂತರ ‘a’ Topical term or geographic name as entry element. ಎಂಬ ಸಬ್-ಫೀಲ್ಡ್ ಬರುತ್ತದೆ.
09:19 ಇಲ್ಲಿ, ನಾನು subject heading ಅನ್ನು Microbiology ಎಂದು ಟೈಪ್ ಮಾಡುವೆನು.
09:24 ನಿಮ್ಮ 'ಬುಕ್' ಅಥವಾ 'ಸೀರಿಯಲ್' ಗೆ ಸೂಕ್ತವಾದ subject heading ಅನ್ನು ನೀವು ಟೈಪ್ ಮಾಡಬೇಕು.
09:31 ಒಂದು ವೇಳೆ, ಒಂದಕ್ಕಿಂತ ಹೆಚ್ಚು ಕೀವರ್ಡ್ ಗಳನ್ನು ಸೇರಿಸಬೇಕಾಗಿದ್ದರೆ, ಆಗ ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ವಿವರಿಸಿದಂತೆ Repeat this Tag ಎಂಬ ಸಣ್ಣ ಬಟನ್ ಮೇಲೆ ಕ್ಲಿಕ್ ಮಾಡಿ.
09:42 ಟ್ಯಾಬ್ 650 ಯ ನಕಲು ಕಾಣಿಸಿಕೊಳ್ಳುತ್ತದೆ.
09:47 ಮತ್ತೊಮ್ಮೆ ಮೇಲ್ತುದಿಗೆ ಹೋಗಿ. ಮತ್ತು, 0 ಯಿಂದ 9 ಟ್ಯಾಬ್ ಗಳಲ್ಲಿ 7 ರ ಮೇಲೆ ಕ್ಲಿಕ್ ಮಾಡಿ.
09:54 ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, 700 ADDED ENTRY--PERSONAL NAME ಎಂಬ ಟ್ಯಾಬ್ ಗೆ ಹೋಗಿ.
10:03 700 ? (ಪ್ರಶ್ನಾರ್ಥಕ ಚಿಹ್ನೆಯ) ಪಕ್ಕದಲ್ಲಿ, ಎರಡು ಖಾಲಿ ಬಾಕ್ಸ್ ಗಳನ್ನು ಗುರುತಿಸಿ.

ಮೊದಲನೆಯ ಖಾಲಿ ಬಾಕ್ಸ್ ನಲ್ಲಿ, 1 ಎಂದು ಟೈಪ್ ಮಾಡಿ.

10:13 ಗಮನಿಸಿ: 1, Surname ಗಾಗಿ ಇಂಡಿಕೇಟರ್ ಆಗಿದೆ.
10:18 2ನೆಯ ಇಂಡಿಕೇಟರ್ ಅನ್ನು MARC 21 ವಿವರಿಸಿಲ್ಲ. ಆದ್ದರಿಂದ, ನಾನು ಅದನ್ನು ಖಾಲಿ ಬಿಡುತ್ತೇನೆ.
10:26 ಟ್ಯಾಗ್ ಅನ್ನು ವಿಸ್ತರಿಸಲು ADDED ENTRY--PERSONAL NAME ಮೇಲೆ ಕ್ಲಿಕ್ ಮಾಡಿ. ಇದರಿಂದ ನಾವು ಸಬ್-ಫೀಲ್ಡ್ ಗಳನ್ನು ತುಂಬಬಹುದು.
10:35 ‘a' Personal name, ಎಂಬ ಸಬ್-ಫೀಲ್ಡ್ ನಲ್ಲಿ, ಸಂಪಾದಕರ (editor) ಹೆಸರನ್ನು ನಮೂದಿಸಿ.
10:41 ನಿಮ್ಮ ಪುಸ್ತಕ ಅಥವಾ ಸೀರಿಯಲ್ ನ ಸಂಪಾದಕರ ಹೆಸರನ್ನು ನೀವು ಟೈಪ್ ಮಾಡಬೇಕು.
10:47 ಮೊದಲು surname, ನಂತರ ಅಲ್ಪವಿರಾಮ ಚಿಹ್ನೆ, ಆಮೇಲೆ ಮೊದಲ ಹೆಸರನ್ನು ಬರೆಯಲು ನೆನಪಿಡಿ.
10:54 ಕೊನೆಯದಾಗಿ, 0 ಯಿಂದ 9 ಟ್ಯಾಬ್ ಗಳಲ್ಲಿ, ಟ್ಯಾಬ್ 9 ರ ಮೇಲೆ ಕ್ಲಿಕ್ ಮಾಡಿ.
11:00 942 ADDED ENTRY ELEMENTS (KOHA) ಗೆ ಹೋಗಿ.
11:06 ‘c’: Koha item type, ಎಂಬ ಸಬ್-ಫೀಲ್ಡ್ ಗೆ ಹೋಗಿ. ಡ್ರಾಪ್-ಡೌನ್ ನಿಂದ Serial ಅನ್ನು ಆಯ್ಕೆಮಾಡಿ.
11:15 ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಪೇಜ್ ನ ಎಡಮೂಲೆಯಲ್ಲಿರುವ Save ಮೇಲೆ ಕ್ಲಿಕ್ ಮಾಡಿ.
11:22 ನಾನು ಕೊಟ್ಟ ಶೀರ್ಷಿಕೆಯೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
11:26 ನನ್ನ ಇಂಟರ್ಫೇಸ್ ನಲ್ಲಿ, ಇದು Items for Indian Journal of Microbiology ಎಂದಿದೆ.
11:33 ನಂತರ, Add item ಗಾಗಿ-

Date acquired , Source of acquisition,

11:45 Cost, normal purchase price, Barcode, Cost, replacement price etc. ಗಳಂತಹ ವಿವರಗಳನ್ನು ತುಂಬಲು ನಮಗೆ ಸೂಚಿಸಲಾಗುವುದು.
11:54 ನಾನು ನನ್ನ ಲೈಬ್ರರಿಗೆ ಅನುಗುಣವಾದ ಕೆಲವು ವಿವರಗಳನ್ನು ತುಂಬಿದ್ದೇನೆ.
11:58 ನೀವು ವೀಡಿಯೊವನ್ನು ತಾತ್ಕಾಲಿಕವಾಗಿ ನಿಲ್ಲಿಸಿ (pause), ನಿಮ್ಮ ಲೈಬ್ರರಿಯ ಬಗ್ಗೆ ವಿವರಗಳನ್ನು ತುಂಬಬಹುದು.
12:04 ದಿನಾಂಕವನ್ನು ತಂತಾನೇ ಆಯ್ಕೆಮಾಡಲು, Date acquired ಎಂಬ ಫೀಲ್ಡ್ ನಲ್ಲಿ ಕ್ಲಿಕ್ ಮಾಡಿ. ಆದಾಗ್ಯೂ, ದಿನಾಂಕವನ್ನು ಎಡಿಟ್ ಮಾಡಬಹುದು ಎಂದು ಗಮನಿಸಿ.
12:15 ಯಾವುದೇ ನಿರ್ದಿಷ್ಟ ಫೀಲ್ಡ್ ಗಾಗಿ ನೀವು ಮಾಹಿತಿಯನ್ನು ಹೊಂದಿರದಿದ್ದರೆ, ಅದನ್ನು ಹಾಗೇ ಖಾಲಿ ಬಿಡಿ.
12:21 ಡೀಫಾಲ್ಟ್ ಆಗಿ, ಕೋಹಾ - Permanent location,
12:29 Current location, Full call number ಮತ್ತು Koha item type ಗಳಿಗಾಗಿ ವಿವರಗಳನ್ನು ತುಂಬುತ್ತದೆ ಎಂಬುದನ್ನು ನೆನಪಿಡಿ.
12:37 ಇದರ ಜೊತೆಗೆ, ನೀವು ಪೇಜ್ ನ ಕೆಳಗಿರುವ - Add & Duplicate,
12:43 Add multiple copies of this item ಎಂಬ ಬಟನ್ ಗಳನ್ನು ಕ್ಲಿಕ್ ಮಾಡಬಹುದು.
12:49 ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ಪೇಜ್ ನ ಕೆಳಭಾಗದಲ್ಲಿರುವ Add item ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
12:56 ನಮೂದಿಸಲಾದ ಜರ್ನಲ್ ನ ವಿವರಗಳೊಂದಿಗೆ, Items for Indian Journal of Microbiology ಎಂಬ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
13:05 ಇದರೊಂದಿಗೆ, ನಾವು Indian Journal of Microbiology by Kalia, V.C. ಎಂಬ ಶೀರ್ಷಿಕೆಯ ಜರ್ನಲ್ ನ ದಾಖಲೆಗಳನ್ನು
13:15 ಲೈಬ್ರರಿಯ Biology ವಿಭಾಗಕ್ಕಾಗಿ, ಸೂಕ್ತವಾದ ವಿವರಗಳೊಂದಿಗೆ ಕ್ಯಾಟಲಾಗ್ ಮಾಡಿದ್ದೇವೆ.
13:20 ಈಗ, Koha ದಿಂದ ನೀವು ಲಾಗ್-ಔಟ್ ಮಾಡಬಹುದು.
13:23 Koha ಇಂಟರ್ಫೇಸ್ ನ ಮೇಲಿನ ಬಲಮೂಲೆಗೆ ಹೋಗಿ.
13:28 Spoken Tutorial Library ಮೇಲೆ ಕ್ಲಿಕ್ ಮಾಡಿ. ಮತ್ತು, ಡ್ರಾಪ್-ಡೌನ್ ನಿಂದ Log out ಅನ್ನು ಆಯ್ಕೆಮಾಡಿ.
13:35 ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
13:38 ಸಂಕ್ಷಿಪ್ತವಾಗಿ,

ಈ ಟ್ಯುಟೋರಿಯಲ್ ನಲ್ಲಿ ನಾವು, ಸೀರಿಯಲ್ ಸಬ್ಸ್ಕ್ರಿಪ್ಶನ್ ಗಳನ್ನು (subscription) ಹೇಗೆ ಕ್ಯಾಟಲಾಗ್ ಮಾಡುವುದೆಂದು ಕಲಿತಿದ್ದೇವೆ.

13:48 ಅಸೈನ್ಮೆಂಟ್ –Journal of Molecular Biology ಯನ್ನು ಕ್ಯಾಟಲಾಗ್ ಮಾಡಿ.
13:54 ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
14:01 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.
14:07 ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
14:11 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
14:15 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.
14:22 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.
14:27 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14