Difference between revisions of "Jmol-Application/C3/Crystal-Structure-and-Unit-Cell/Kannada"

From Script | Spoken-Tutorial
Jump to: navigation, search
Line 97: Line 97:
 
| 'Search' ಪೇಜ್ ಗೆ ಹಿಂದಿರುಗಿ.
 
| 'Search' ಪೇಜ್ ಗೆ ಹಿಂದಿರುಗಿ.
 
|-
 
|-
| 02:59
+
| 02:49
 
| 'COD ID' ಯನ್ನು ಬಳಸಿ ನಾವು 'ಕ್ರಿಸ್ಟಲ್ ಸ್ಟ್ರಕ್ಚರ್' ಗಾಗಿ ಸರ್ಚ್ ಮಾಡಬಹುದು.  
 
| 'COD ID' ಯನ್ನು ಬಳಸಿ ನಾವು 'ಕ್ರಿಸ್ಟಲ್ ಸ್ಟ್ರಕ್ಚರ್' ಗಾಗಿ ಸರ್ಚ್ ಮಾಡಬಹುದು.  
 
|-
 
|-
|02:54
+
| 02:54
 
| 'OpenBabel Fastsearch'' ಅಥವಾ ಟೆಕ್ಸ್ಟ್-ಬಾಕ್ಸ್ ನಲ್ಲಿ ರಸಾಯನಿಕ ಅಥವಾ ಖನಿಜದ ಹೆಸರನ್ನು ಟೈಪ್ ಮಾಡಿ.  
 
| 'OpenBabel Fastsearch'' ಅಥವಾ ಟೆಕ್ಸ್ಟ್-ಬಾಕ್ಸ್ ನಲ್ಲಿ ರಸಾಯನಿಕ ಅಥವಾ ಖನಿಜದ ಹೆಸರನ್ನು ಟೈಪ್ ಮಾಡಿ.  
 
|-
 
|-

Revision as of 15:38, 19 September 2017

Time
Narration
00:01 Jmol ನಲ್ಲಿ Crystal Structure and unit cell (ಕ್ರಿಸ್ಟಲ್ ಸ್ಟ್ರಕ್ಚರ್ ಆಂಡ್ ಯುನಿಟ್ ಸೆಲ್) ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ನಾವು: * 'Crystallography Open Database' ನಿಂದ (ಕ್ರಿಸ್ಟಲೋಗ್ರಫಿ ಓಪನ್ ಡೇಟಾಬೇಸ್), 'CIF' ಅರ್ಥಾತ್ 'Crystallographic Information File' ಅನ್ನು (ಕ್ರಿಸ್ಟಲೋಗ್ರಾಫಿಕ್ ಇನ್ಫರ್ಮೇಶನ್ ಫೈಲ್) ಡೌನ್ಲೋಡ್ ಮಾಡಲು,
00:17 * ಜೆ-ಮೊಲ್ ನಲ್ಲಿ 'CIF' ಅನ್ನು ಓಪನ್ ಮಾಡಲು
00:20 * ಜೆ-ಮೊಲ್ ಪ್ಯಾನೆಲ್ ನ ಮೇಲೆ 'ಯುನಿಟ್ ಸೆಲ್' ಮತ್ತು 'ಯುನಿಟ್ ಸೆಲ್ ಪ್ಯಾರಾಮೀಟರ್' ಗಳನ್ನು ಡಿಸ್ಪ್ಲೇ ಮಾಡಲು
00:25 * ಮತ್ತು ವಿವಿಧ 'ಕ್ರಿಸ್ಟಲ್ ಸಿಸ್ಟಂ'ಗಳ 'ಕ್ರಿಸ್ಟಲ್ ಸ್ಟ್ರಕ್ಚರ್' ಗಳನ್ನು ಡಿಸ್ಪ್ಲೇ ಮಾಡಲು ಕಲಿಯುವೆವು. ಉದಾಹರಣೆಗೆ - 'Cubic' (ಕ್ಯೂಬಿಕ್), 'Hexagonal ' (ಹೆಕ್ಸಾಗೊನಲ್) ಮತ್ತು ' Rhombohedral' (ರೊಂಬೊಹೆಡ್ರಲ್).
00:34 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಹೈಸ್ಕೂಲ್ ಮಟ್ಟದ ರಸಾಯನಶಾಸ್ತ್ರವು ತಿಳಿದಿರಬೇಕು
00:39 ಹಾಗೂ ಜೆ-ಮೊಲ್ ವಿಂಡೋದ ಆಪರೇಶನ್ ಗಳ ಪರಿಚಯವಿರಬೇಕು.
00:42 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
00:48 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: * Ubuntu Operating System (ಉಬಂಟು ಆಪರೇಟಿಂಗ್ ಸಿಸ್ಟಂ) ಆವೃತ್ತಿ 14.04
00:54 * Jmol ಆವೃತ್ತಿ 12.2.32
00:57 * Java ಆವೃತ್ತಿ 7 ಮತ್ತು
01:01 * Mozilla Firefox ಬ್ರೌಸರ್ 35.0 ಇವುಗಳನ್ನು ನಾನು ಬಳಸುತ್ತಿದ್ದೇನೆ.
01:04 'ಕ್ರಿಸ್ಟಲ್ ಸ್ಟ್ರಕ್ಚರ್' ಗಳನ್ನು ಏಳು 'ಕ್ರಿಸ್ಟಲ್ ಸಿಸ್ಟಂ' ಗಳಲ್ಲಿ ವಿಂಗಡಿಸಲಾಗಿದೆ.
01:08 ಈ ಟೇಬಲ್, 'ಕ್ರಿಸ್ಟಲ್ ಸಿಸ್ಟಂ'ಗಳ ಲಿಸ್ಟ್ ಅನ್ನು ಮತ್ತು ಅವುಗಳಿಗೆ ಅನುಗುಣವಾದ 'ಲ್ಯಾಟಿಸ್ ಪ್ಯಾರಾಮೀಟರ್' (lattice parameters) ಗಳನ್ನು ತೋರಿಸುತ್ತದೆ.
01:14 ವಿವಿಧ ಸಂಯುಕ್ತಗಳ (compound) ಮತ್ತು ಖನಿಜಗಳ (mineral) 'ಕ್ರಿಸ್ಟಲ್' ಗಳಿಗಾಗಿ ಉದಾಹರಣೆಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ.
01:20 ನಾವು ಜೆ-ಮೊಲ್ ಪ್ಯಾನೆಲ್ ನ ಮೇಲೆ, 'ಸೋಡಿಯಂ ಕ್ಲೋರೈಡ್, ಗ್ರಾಫೈಟ್ ಹಾಗೂ ಕ್ಯಾಲ್ಸೈಟ್ (Calcite)' ಗಳ 'ಕ್ರಿಸ್ಟಲ್ ಸ್ಟ್ರಕ್ಚರ್' ಗಳನ್ನು ಡಿಸ್ಪ್ಲೇ ಮಾಡುವೆವು.
01:27 'ಕ್ರಿಸ್ಟಲ್ ಸ್ಟ್ರಕ್ಚರ್' ಗಳನ್ನು ಜೆ-ಮೊಲ್ ಪ್ಯಾನೆಲ್ ನ ಮೇಲೆ ಡಿಸ್ಪ್ಲೇ ಮಾಡಲು,
01:31 ನಾವು ಪ್ರತ್ಯೇಕ ಕ್ರಿಸ್ಟಲ್ ನ 'Crystallographic Information File' ಅನ್ನು ಡೌನ್ಲೋಡ್ ಮಾಡುವುದು ಅವಶ್ಯಕವಾಗಿದೆ.
01:37 'CIF'- ಇದು 'ಕ್ರಿಸ್ಟಲೋಗ್ರಾಫಿಕ್' (crystallographic) ಮಾಹಿತಿಯನ್ನು ನಿರೂಪಿಸಲು ಇರುವ ಒಂದು ಸ್ಟ್ಯಾಂಡರ್ಡ್ ಟೆಕ್ಸ್ಟ್-ಫೈಲ್ ಫಾರ್ಮ್ಯಾಟ್ ಆಗಿದೆ.
01:43 'CIF' ಫಾರ್ಮ್ಯಾಟ್, '.cif' ಎಂಬ 'ಫೈಲ್ ಎಕ್ಸ್ಟೆನ್ಶನ್' ಅನ್ನು ಹೊಂದಿದೆ.
01:48 'Crystallography Open Database' (ಕ್ರಿಸ್ಟಲೋಗ್ರಫಿ ಓಪನ್ ಡೇಟಾಬೇಸ್) - ಇದು ಒಂದು ಓಪನ್ ಆಕ್ಸೆಸ್ (open-access) ಡೇಟಾಬೇಸ್ ಆಗಿದೆ.
01:53 'COD' ವೆಬ್ಸೈಟ್ ನಲ್ಲಿ, ಡೌನ್ಲೋಡ್ ಮಾಡಲು ಸಾಧ್ಯವಿರುವ 'CIF' ಗಳು ಲಭ್ಯವಿರುತ್ತವೆ.
01:58 ಇಲ್ಲಿ ಕೊಟ್ಟಿರುವ ಲಿಂಕ್ ನ ಮೂಲಕ ಈ ವೆಬ್ಸೈಟನ್ನು ನೋಡಬಹುದು.
02:03 ನಾವು 'COD' ಡೇಟಾಬೇಸ್ ವೆಬ್ಸೈಟ್ ಅನ್ನು ಓಪನ್ ಮಾಡಿ, ಕೆಲವು 'CIF' ಫೈಲ್ ಗಳನ್ನು ಡೌನ್ಲೋಡ್ ಮಾಡೋಣ.
02:10 ಇಲ್ಲಿ, ನಾನು 'COD' ವೆಬ್ಸೈಟ್ ಅನ್ನು ಓಪನ್ ಮಾಡಿದ್ದೇನೆ.
02:13 ಪೇಜ್ ನ ಎಡಭಾಗದಲ್ಲಿ, ಮಾಹಿತಿಯನ್ನು ವಿವಿಧ ಶೀರ್ಷಿಕೆಗಳ ಅಡಿಯಲ್ಲಿ ವಿಭಾಗಿಸಲಾಗಿದೆ.
02:19 'Accessing COD Data' ಎಂಬ ಶೀರ್ಷಿಕೆಯ ಅಡಿಯಲ್ಲಿ, 'Browse', 'Search' ಗಳಂತಹ ಉಪ-ಶೀರ್ಷಿಕೆಗಳು ಇರುತ್ತವೆ.
02:27 'Search' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
02:31 'Search' ಪೇಜ್ ನ ಮೇಲೆ, 'CIF' ಫೈಲ್ ಗಳನ್ನು ಹುಡುಕಲು ನಾವು ಅನೇಕ ಆಯ್ಕೆಗಳನ್ನು ನೋಡುತ್ತೇವೆ.
02:36 'hints and tips' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ. 'search' ಆಯ್ಕೆಗಳನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಬಹುದೆಂಬ ಮಾಹಿತಿಯನ್ನು ಹೊಂದಿರುವ ಒಂದು ಪೇಜ್ ತೆರೆದುಕೊಳ್ಳುತ್ತದೆ.
02:46 'Search' ಪೇಜ್ ಗೆ ಹಿಂದಿರುಗಿ.
02:49 'COD ID' ಯನ್ನು ಬಳಸಿ ನಾವು 'ಕ್ರಿಸ್ಟಲ್ ಸ್ಟ್ರಕ್ಚರ್' ಗಾಗಿ ಸರ್ಚ್ ಮಾಡಬಹುದು.
02:54 'OpenBabel Fastsearch ಅಥವಾ ಟೆಕ್ಸ್ಟ್-ಬಾಕ್ಸ್ ನಲ್ಲಿ ರಸಾಯನಿಕ ಅಥವಾ ಖನಿಜದ ಹೆಸರನ್ನು ಟೈಪ್ ಮಾಡಿ.
03:01 ಉದಾಹರಣೆಗೆ, ಸೋಡಿಯಂ ಕ್ಲೋರೈಡ್ ನ 'CIF' ಫೈಲ್ ಗಾಗಿ ಸರ್ಚ್ ಮಾಡಲು:
03:06 ಟೆಕ್ಸ್ಟ್ ಬಾಕ್ಸ್ ನಲ್ಲಿ “Halite” ಎಂದು ಟೈಪ್ ಮಾಡಿ. ಇದು ಸೋಡಿಯಂ ಕ್ಲೋರೈಡ್ ನ ಮಿನರಲ್ ನ ಹೆಸರು ಆಗಿದೆ.
03:12 ಕೆಳಗೆ, 'elements' ಎಂಬ ಬಾಕ್ಸ್ ಗೆ ಸ್ಕ್ರೋಲ್ ಮಾಡಿ.
03:15 ಸೋಡಿಯಂ ನ ಸಿಂಬಲ್ ಆಗಿರುವ Na ಹಾಗೂ ಕ್ಲೋರೈಡ್ ಗಾಗಿ Cl ಅನ್ನು ಟೈಪ್ ಮಾಡಿ.
03:20 'Number of distinct elements.. ' ಎಂಬ ಬಾಕ್ಸ್ ಗೆ ಸ್ಕ್ರೋಲ್-ಡೌನ್ ಮಾಡಿ.
03:24 ಇಲ್ಲಿ, ಕನಿಷ್ಠ (min) ಮತ್ತು ಗರಿಷ್ಠ (max) ಎಲಿಮೆಂಟ್ ಗಳನ್ನು ಟೈಪ್ ಮಾಡಲು ನಮಗೆ ಒಂದು ಆಯ್ಕೆಯಿದೆ.
03:29 ನಿಮಗೆ ಕೇವಲ ಎರಡು ಎಲಿಮೆಂಟ್ ಗಳೊಂದಿಗೆ ‘ಕ್ರಿಸ್ಟಲ್ ಸ್ಟ್ರಕ್ಚರ್’ ಬೇಕಾಗಿದ್ದರೆ , ಅರ್ಥಾತ್, 'Sodium' (ಸೋಡಿಯಂ) ಹಾಗೂ 'Chloride' (ಕ್ಲೋರೈಡ್), 'minimum' ಬಾಕ್ಸ್ ನಲ್ಲಿ '2' ಎಂದು ಟೈಪ್ ಮಾಡಿ.
03:37 'Send' ಬಟನ್ ನ ಮೇಲೆ ಕ್ಲಿಕ್ ಮಾಡಿ.
03:40 ಸೋಡಿಯಂ ಕ್ಲೋರೈಡ್ ಗಾಗಿ ‘ಕ್ರಿಸ್ಟಲ್ ಸ್ಟ್ರಕ್ಚರ್’ ಡೇಟಾ ಫೈಲ್ ಗಳೊಂದಿಗೆ ಒಂದು ವೆಬ್-ಪೇಜ್ ತೆರೆದುಕೊಳ್ಳುತ್ತದೆ.
03:45 'COD ID' ಯ ಮೇಲೆ ರೈಟ್-ಕ್ಲಿಕ್ ಮಾಡಿ ಹಾಗೂ “open the link in a new tab” ನ ಮೇಲೆ ಕ್ಲಿಕ್ ಮಾಡಿ.
03:51 ಈ ಪೇಜ್, ನಿರ್ದಿಷ್ಟ ‘ಕ್ರಿಸ್ಟಲ್ ಸ್ಟ್ರಕ್ಚರ್’ನ ಬಗ್ಗೆ ವಿವರವಾದ ಮಾಹಿತಿಯನ್ನು ಹೊಂದಿದೆ.
03:57 ಡೇಟಾಬೇಸ್ ವೆಬ್-ಪೇಜ್ ಗೆ ಹಿಂದಿರುಗಿ.
04:00 ಪೇಜ್ ನ ಬಲಭಾಗದಲ್ಲಿರುವ “archive of CIF files” ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
04:08 ಸ್ಕ್ರೀನ್ ನ ಮೇಲೆ ಒಂದು ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. 'Open with' ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ. 'OK' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
04:17 ಸೋಡಿಯಂ ಕ್ಲೋರೈಡ್ ಕ್ರಿಸ್ಟಲ್ ಗಾಗಿ ಅನೇಕ 'CIF' ಫೈಲ್ ಗಳನ್ನು ಹೊಂದಿರುವ ಒಂದು ಫೋಲ್ಡರ್, ಸ್ಕ್ರೀನ್ ನ ಮೇಲೆ ತೆರೆದುಕೊಳ್ಳುತ್ತದೆ.
04:23 ನಿಮಗೆ ಡೌನ್ಲೋಡ್ ಮಾಡಬೇಕಾಗಿರುವ ಫೈಲ್ ಗಳ ಮೇಲೆ ಕ್ಲಿಕ್ ಮಾಡಿ ಅವುಗಳನ್ನು ಆಯ್ಕೆಮಾಡಿ.
04:28 ಟೂಲ್-ಬಾರ್ ನಲ್ಲಿರುವ “Extract” ಬಟನ್ ನ ಮೇಲೆ ಕ್ಲಿಕ್ ಮಾಡಿ.
04:32 ನಿಮ್ಮ ಸಿಸ್ಟಂನಲ್ಲಿ, ಅನುಕೂಲಕರ ಸ್ಥಳದಲ್ಲಿ ಫೈಲ್ ಗಳನ್ನು ಸೇವ್ ಮಾಡಿ.
04:37 'Extract' ನ ಮೇಲೆ ಕ್ಲಿಕ್ ಮಾಡಿ. ವಿಂಡೋಅನ್ನು ಮುಚ್ಚಿ.
04:41 'Search' ಪೇಜ್ ಗೆ ಹಿಂದಿರುಗಿ.
04:43 ಈಗ, 'ಗ್ರಾಫೈಟ್' ಹಾಗೂ 'ಕ್ಯಾಲ್ಸೈಟ್' ಗಳಿಗಾಗಿ ಹಿಂದೆ ಬಳಸಿದ ವಿಧಾನವನ್ನೇ ಬಳಸಿ 'CIF' ಫೈಲ್ ಗಳನ್ನು ಡೌನ್ಲೋಡ್ ಮಾಡಿ.
04:51 ನಾವು ಈಗ ಜೆ-ಮೊಲ್ ನಲ್ಲಿ, ಸೋಡಿಯಂ ಕ್ಲೋರೈಡ್ ನ 'CIF' ಫೈಲನ್ನು ಓಪನ್ ಮಾಡುವೆವು.
04:55 ಇಲ್ಲಿ, ನಾನು ಜೆ-ಮೊಲ್ ವಿಂಡೋಅನ್ನು ಓಪನ್ ಮಾಡಿದ್ದೇನೆ.
04:59 ಟೂಲ್-ಬಾರ್ ನಲ್ಲಿಯ “Open a file” ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
05:03 'COD' ಡೇಟಾಬೇಸ್ ನಿಂದ ನಾವು ಡೌನ್ಲೋಡ್ ಮಾಡಿರುವ ಸೋಡಿಯಂ ಕ್ಲೋರೈಡ್ ನ 'CIF' ಫೈಲ್ ಇರುವಲ್ಲಿಗೆ ಹೋಗಿ.
05:12 'Open' ನ ಮೇಲೆ ಕ್ಲಿಕ್ ಮಾಡಿ.
05:14 ಸೋಡಿಯಂ ಕ್ಲೋರೈಡ್ ಕ್ರಿಸ್ಟಲ್ ನ 'ಯುನಿಟ್ ಸೆಲ್', ಸ್ಕ್ರೀನ್ ನ ಮೇಲೆ ತೆರೆದುಕೊಳ್ಳುತ್ತದೆ.
05:19 ಒಂದು ಕ್ರಿಸ್ಟಲ್ ನಲ್ಲಿ, 'ಯುನಿಟ್ ಸೆಲ್' ಎಲ್ಲಕ್ಕಿಂತ ಚಿಕ್ಕದಾದ ಪುನರಾವರ್ತಿಸುವ ' ಯುನಿಟ್' (ಘಟಕ) ಆಗಿದೆ.
05:23 '3' ಆಯಾಮಗಳಲ್ಲಿ ಈ 'ಯುನಿಟ್ ಸೆಲ್' ಗಳ ಪೇರಿಸುವಿಕೆಯು, ಕ್ರಿಸ್ಟಲ್ ಸ್ಟ್ರಕ್ಚರ್’ ನ (dimensions) ತಳಹದಿಯನ್ನು ರೂಪಿಸುವುದು.
05:29 ಜೆ-ಮೊಲ್ ಪ್ಯಾನೆಲ್ ಗೆ ಹಿಂದಿರುಗೋಣ.
05:32 'ಯುನಿಟ್ ಸೆಲ್' ಗಾಗಿ ಸಂಬಂಧಿತ ಡೇಟಾಅನ್ನು ಪ್ಯಾನೆಲ್ ನ ಎಡಭಾಗದಲ್ಲಿ ಪ್ರದರ್ಶಿಸಲಾಗುವುದು.
05:37 ಇದು ಸ್ಪೇಸ್ ಗ್ರೂಪ್ (space group) ವರ್ಗೀಕರಣದೊಂದಿಗೆ ಆರಂಭವಾಗುತ್ತದೆ.
05:41 ಸೋಡಿಯಂ ಕ್ಲೋರೈಡ್, 'ಕ್ಯೂಬಿಕ್ ಲ್ಯಾಟಿಸ್ ಸಿಸ್ಟಂ'ಗೆ (cubic lattice system) ಸೇರಿದೆ. ಆದ್ದರಿಂದ, 'a', 'b' ಹಾಗೂ 'c' ವೆಕ್ಟರ್ ಗಳು ಸಮವಾಗಿರುತ್ತವೆ.
05:50 ಅಲ್ಫಾ, ಬೀಟಾ ಹಾಗೂ ಗಾಮಾ ಕೋನಗಳು 90 ಅಂಶಗಳಿರುತ್ತವೆ.
05:55 ಪಾಪ್-ಅಪ್ ಮೆನ್ಯುಅನ್ನು ಓಪನ್ ಮಾಡಲು ರೈಟ್-ಕ್ಲಿಕ್ ಮಾಡಿ.
05:59 ಕೆಳಗೆ, 'Symmetry' ಎಂಬ ಆಯ್ಕೆಗೆ ಸ್ಕ್ರೋಲ್ ಮಾಡಿ.
06:01 ಸಬ್-ಮೆನ್ಯುನಲ್ಲಿ, ಸಿಮೆಟ್ರೀ ಎಲಿಮೆಂಟ್ ಗಳನ್ನು ಡಿಸ್ಪ್ಲೇ ಮಾಡಲು ನಾವು ಆಯ್ಕೆಗಳನ್ನು ಹೊಂದಿದ್ದೇವೆ.
06:05 ಸಬ್-ಮೆನ್ಯುನಲ್ಲಿಯ ಆಯ್ಕೆಗಳನ್ನು ಬಳಸಿಕೊಂಡು ನಾವು ಯುನಿಟ್ ಸೆಲ್ ಗಳ ಬ್ಲಾಕ್ ಗಳನ್ನು ಸಹ ಡಿಸ್ಪ್ಲೇ ಮಾಡಬಹುದು.
06:10 ಉದಾಹರಣೆಗೆ, 'Reload {1 1 1}' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:15 ಪ್ಯಾನೆಲ್ ನ ಮೇಲೆ, 'ಫೇಸ್ ಸೆಂಟರ್ ಕ್ಯೂಬಿಕ್ ಲ್ಯಾಟಿಸ್' ಅನ್ನು (face center cubic lattice) ತೋರಿಸುತ್ತಿರುವ ಒಂದು ಯುನಿಟ್ ಸೆಲ್ ಬ್ಲಾಕ್ ಇದೆ.
06:21 ಡಿಸ್ಪ್ಲೇಯನ್ನು ಬದಲಾಯಿಸಲು : ಪಾಪ್-ಅಪ್ ಮೆನ್ಯುಅನ್ನು ಓಪನ್ ಮಾಡಿ. ಕೆಳಗೆ, 'Style' ಎಂಬಲ್ಲಿಗೆ ಸ್ಕ್ರೋಲ್ ಮಾಡಿ. ಆಮೇಲೆ 'Scheme' ಮತ್ತು ಆನಂತರ 'CPK Spacefill' ಗಳ ಮೇಲೆ ಕ್ಲಿಕ್ ಮಾಡಿ.
06:29 ಇಲ್ಲಿ ಪ್ಯಾನೆಲ್ ನ ಮೇಲೆ, ‘ಕ್ರಿಸ್ಟಲ್ ಸ್ಟ್ರಕ್ಚರ್’, 'CPK' ಡಿಸ್ಪ್ಲೇಯಲ್ಲಿ ಇರುತ್ತದೆ.
06:34 ಮತ್ತೊಮ್ಮೆ ಪಾಪ್-ಅಪ್ ಮೆನ್ಯುಅನ್ನು ಓಪನ್ ಮಾಡಿ. ಕೆಳಗೆ 'symmetry' ಎಂಬಲ್ಲಿಗೆ ಸ್ಕ್ರೋಲ್ ಮಾಡಿ. ಮತ್ತು 'Reload {4 4 4 6 6 6 1}' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:44 ಈ ಆಯ್ಕೆಯು, ಜೆ-ಮೊಲ್ ಪ್ಯಾನೆಲ್ ನ ಮೇಲೆ 27 ಸೆಲ್ ಬ್ಲಾಕ್ ಅನ್ನು ಲೋಡ್ ಮಾಡುತ್ತದೆ.
06:49 ಪಾಪ್-ಅಪ್ ಮೆನ್ಯುಅನ್ನು ತೆರೆದು, 'symmetry' ಎಂಬಲ್ಲಿಗೆ ಹೋಗಿ. 'Reload {1 1 1}' ಎಂಬ ಆಯ್ಕೆಗೆ ಹಿಂದಿರುಗಿ.
06:56 ಸಿಮೆಟ್ರಿ ಎಲಿಮೆಂಟ್ ಗಳನ್ನು ಪ್ರದರ್ಶಿಸಲು, ಇನ್ನೊಮ್ಮೆ ಪಾಪ್-ಅಪ್ ಮೆನ್ಯುಅನ್ನು ತೆರೆಯಿರಿ.
07:00 ಕೆಳಗೆ, ಸಬ್-ಮೆನ್ಯು ನಲ್ಲಿ 'Symmetry' ಎಂಬಲ್ಲಿಗೆ ಸ್ಕ್ರೋಲ್ ಮಾಡಿ. ಮತ್ತು 'mirrorplane (x z y)' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
07:08 ಪ್ಯಾನೆಲ್ ನ ಮೇಲೆ, ಕ್ಯೂಬಿಕ್ ಲ್ಯಾಟಿಸ್ ನೊಂದಿಗೆ 'mirrorplane (x z y)' ಅನ್ನು ಪ್ರದರ್ಶಿಸಲಾಗಿದೆ.
07:16 ಈಗ ನಾವು ಹೆಕ್ಸಾಗೋನಲ್ ಕ್ರಿಸ್ಟಲ್ ಸಿಸ್ಟಂಗೆ ಸೇರಿರುವ 'ಗ್ರಾಫೈಟ್' ಗಾಗಿ, CIF ಫೈಲನ್ನು ಲೋಡ್ ಮಾಡೋಣ.
07:22 ಈ ಮೊದಲು ತೋರಿಸಿದಂತೆ, ಪ್ಯಾನೆಲ್ ನ ಮೇಲೆ ಗ್ರಾಫೈಟ್ ಗಾಗಿ 'CIF' ಫೈಲ್ ಅನ್ನು ಲೋಡ್ ಮಾಡಲು 'Open a file' ಎಂಬ ಆಯ್ಕೆಯನ್ನು ಬಳಸಿ.
07:29 'ಗ್ರಾಫೈಟ್' ಗಾಗಿ ಯೂನಿಟ್ ಸೆಲ್, ಪ್ಯಾನೆಲ್ ನ ಮೇಲೆ ತೆರೆದುಕೊಳ್ಳುತ್ತದೆ.
07:33 ಯೂನಿಟ್ ಸೆಲ್ ಪ್ಯಾರಾಮೀಟರ್ ಗಳನ್ನು ಗಮನಿಸಿ:
07:35 ವೆಕ್ಟರ್ 'a', ವೆಕ್ಟರ್ 'b' ಗೆ ಸಮನಾಗಿದೆ. ಆದರೆ ವೆಕ್ಟರ್ 'c' ಗೆ ಸಮನಾಗಿಲ್ಲ.
07:40 'ಅಲ್ಫಾ' ಹಾಗೂ 'ಬೀಟಾ' ಕೋನಗಳು 90 ಅಂಶಗಳಿದ್ದು 'ಗಾಮಾ' 120 ಅಂಶಗಳು ಇರುತ್ತದೆ.
07:47 ಪಾಪ್-ಅಪ್ ಮೆನ್ಯು ಅನ್ನು ತೆರೆಯಿರಿ. ಕೆಳಗೆ, 'Symmetry' ಎಂಬಲ್ಲಿಗೆ ಸ್ಕ್ರೋಲ್ ಮಾಡಿ ಮತ್ತು 'Reload {444 666 1}' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
07:56 ಪರಮಾಣುಗಳ 'ಹೆಕ್ಸಾಗೊನಲ್ ಲ್ಯಾಟೀಸ್' ವ್ಯವಸ್ಥೆಯನ್ನು ಸ್ಕ್ರೀನ್ ನ ಮೇಲೆ ತೋರಿಸಲಾಗಿದೆ.
08:01 ಡಿಸ್ಪ್ಲೇಯನ್ನು ಬದಲಾಯಿಸಲು: ಪಾಪ್-ಅಪ್ ಮೆನ್ಯುಅನ್ನು ತೆರೆಯಿರಿ, ಕ್ರಮವಾಗಿ 'Style' >> 'scheme' >> 'Wireframe' ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ.
08:10 ಹೀಗೆಯೇ, ನಾನು ಪ್ಯಾನೆಲ್ ನ ಮೇಲೆ ಕ್ಯಾಲ್ಸೈಟ್ ಮಿನರಲ್ ನ ಒಂದು 'CIF' ಫೈಲನ್ನು ತೆರೆದಿದ್ದೇನೆ.
08:16 'ಕ್ಯಾಲ್ಸೈಟ್', 'rhombohedral' (ರೊಂಬೊಹೆಡ್ರಲ್) ಎಂಬ ಕ್ರಿಸ್ಟಲ್ ಸಿಸ್ಟಂಗೆ ಸೇರಿದೆ.
08:20 ನೀವು ಯಾವುದೇ ಕ್ರಿಸ್ಟಲ್ ಸಿಸ್ಟಂನ 'CIF' ಅನ್ನು ತೆರೆಯಬಹುದು ಹಾಗೂ ಸ್ಟ್ರಕ್ಚರ್ ಅನ್ನು ಮತ್ತು symmetry ಆಯ್ಕೆಗಳನ್ನು ನೋಡಬಹುದು.
08:27 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: * 'ಕ್ರಿಸ್ಟಲೋಗ್ರಫಿ ಓಪನ್ ಡೇಟಾಬೇಸ್' ನಿಂದ 'CIF' ಅನ್ನು ಡೌನ್ಲೋಡ್ ಮಾಡಲು
08:35 * ಜೆ-ಮೊಲ್ ನಲ್ಲಿ 'CIF' ಅನ್ನು ಓಪನ್ ಮಾಡಲು
08:38 * ಯೂನಿಟ್ ಸೆಲ್ ಹಾಗೂ ಯೂನಿಟ್ ಸೆಲ್ ಪ್ಯಾರಾಮೀಟರ್ ಗಳನ್ನು ಪ್ರದರ್ಶಿಸಲು ಮತ್ತು
08:41 * ಸೋಡಿಯಂ ಕ್ಲೋರೈಡ್, ಗ್ರಾಫೈಟ್ ಮತ್ತು ಕ್ಯಾಲ್ಸೈಟ್ ಗಳ ‘ಕ್ರಿಸ್ಟಲ್ ಸ್ಟ್ರಕ್ಚರ್’ಗಳನ್ನು ಪ್ರದರ್ಶಿಸಲು ಕಲಿತಿದ್ದೇವೆ.
08:47 ಒಂದು ಅಸೈನ್ಮೆಂಟ್:

ಕ್ವಾರ್ಟ್ಸ್ ಕ್ರಿಸ್ಟಲ್ ಗಾಗಿ (quartz crystal), 'COD' ಡೇಟಾಬೇಸ್ ನಿಂದ 'CIF'ಅನ್ನು ಡೌನ್ಲೋಡ್ ಮಾಡಿ.

08:53 ಜೆ-ಮೊಲ್ ಪ್ಯಾನೆಲ್ ನ ಮೇಲೆ ಯೂನಿಟ್ ಸೆಲ್ ಅನ್ನು ಪ್ರದರ್ಶಿಸಿ ಮತ್ತು 'symmetry' (ಸಿಮೆಟ್ರಿ) ಆಯ್ಕೆಗಳನ್ನು ಕಲಿತುಕೊಳ್ಳಿ.
08:59 ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
09:02 ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:06 ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಹಾಗೂ ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
09:12 ಸ್ಪೋಕನ್ ಟ್ಯುಟೊರಿಯಲ್ ಪ್ರೊಜೆಕ್ಟ್, NMEICT-MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ.
09:18 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..

ವಂದನೆಗಳು.

Contributors and Content Editors

Glorianandihal, Sandhya.np14