Difference between revisions of "Java/C3/Java-Interfaces/Kannada"

From Script | Spoken-Tutorial
Jump to: navigation, search
(Created page with "(This script is translated by Melvin & uploaded by Sandhya on 4th April 2020) (outline & script to be corrected yet) {| border=1 ||'''Time''' || '''Narration''' |- ||00:01 ||...")
 
Line 1: Line 1:
(This script is translated by Melvin & uploaded by Sandhya on 4th April 2020) (outline & script to be corrected yet)
 
 
{| border=1
 
{| border=1
 
||'''Time'''
 
||'''Time'''
Line 6: Line 5:
 
|-
 
|-
 
||00:01
 
||00:01
|| ಜಾವಾ ಇಂಟರ್‌ ಫೇಸ್‌ ಗಳ ಕುರಿತ ಸ್ಪೋಕನ್‌ ಟ್ಯುಟೋರಿಯಲ್‌ ಗೆ ಸ್ವಾಗತ
+
|| ಜಾವಾ ಇಂಟರ್‌ಫೇಸ್‌ ಗಳ ಕುರಿತ ಸ್ಪೋಕನ್‌ ಟ್ಯುಟೋರಿಯಲ್‌ ಗೆ ಸ್ವಾಗತ
  
 
|-
 
|-
 
||00:05
 
||00:05
|| ಈ ಟ್ಯುಟೋರಿಯಲ್‌ ನಲ್ಲಿ ನಾವು, ಇಂಟರ್‌ ಫೇಸ್‌ ಒಂದನ್ನು ರಚಿಸುವ ಕುರಿತು ಮತ್ತು,
+
|| ಈ ಟ್ಯುಟೋರಿಯಲ್‌ ನಲ್ಲಿ ನಾವು, ಇಂಟರ್‌ಫೇಸ್‌ ಒಂದನ್ನು ರಚಿಸುವ ಕುರಿತು ಮತ್ತು,
  
 
|-
 
|-
Line 406: Line 405:
 
||10:15
 
||10:15
 
|| ಅಂತಿಮವಾಗಿ,ಈ ಫಲಿತಾಂಶಗಳನ್ನು ದೃಢೀಕರಿಸಲು ಮೇನ್ ಮೆಥಡ್ ಹೊಂದಿರುವ ಡೆಮೋ ಕ್ಲಾಸ್ ಒಂದನ್ನು ರಚಿಸಿ.
 
|| ಅಂತಿಮವಾಗಿ,ಈ ಫಲಿತಾಂಶಗಳನ್ನು ದೃಢೀಕರಿಸಲು ಮೇನ್ ಮೆಥಡ್ ಹೊಂದಿರುವ ಡೆಮೋ ಕ್ಲಾಸ್ ಒಂದನ್ನು ರಚಿಸಿ.
 
+
|-
 
||10:21
 
||10:21
 
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
 
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.

Revision as of 16:53, 4 April 2020

Time Narration
00:01 ಜಾವಾ ಇಂಟರ್‌ಫೇಸ್‌ ಗಳ ಕುರಿತ ಸ್ಪೋಕನ್‌ ಟ್ಯುಟೋರಿಯಲ್‌ ಗೆ ಸ್ವಾಗತ
00:05 ಈ ಟ್ಯುಟೋರಿಯಲ್‌ ನಲ್ಲಿ ನಾವು, ಇಂಟರ್‌ಫೇಸ್‌ ಒಂದನ್ನು ರಚಿಸುವ ಕುರಿತು ಮತ್ತು,
00:10 ಇಂಪ್ಲೆಮೆಂಟೇಶನ್‌ ಕ್ಲಾಸುಗಳ ರಚನೆ ಮತ್ತು ಇಂಟರ್‌ ಫೇಸ್‌ ನ ಬಳಕೆಯನ್ನು ಕಲಿಯಲಿದ್ದೇವೆ.
00:16 ಈ ಟ್ಯುಟೋರಿಯಲ್ ಗಾಗಿ ನಾನು:

ಉಬಂಟು 12.04 ಜೆ.ಡಿ.ಕೆ 1.7 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇನೆ

00:28 ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
00:36 ನೀವು ಜಾವಾದಲ್ಲಿ ಸಬ್ ಕ್ಲಾಸಿಂಗ್ ಮತ್ತು ಅಬ್ಸ್ಟ್ರಾಕ್ಟ್ ಕ್ಲಾಸುಗಳ ಜ್ಞಾನವನ್ನು ಸಹ ಹೊಂದಿರಬೇಕು
00:42 ಇಲ್ಲದಿದ್ದಲ್ಲಿ ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗೆ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್‌ಗೆ ಭೇಟಿ ನೀಡಿ.
00:48 ಮೊದಲಿಗೆ ನಾವು ಇಂಟರ್ ಫೇಸ್ ಏನೆಂಬುದನ್ನು ಅರಿತುಕೊಳ್ಳೋಣ.
00:52 ಇಂಟರ್‌ ಫೇಸ್‌ ಒಂದು ಅಬ್ಸ್ಟ್ರಾಕ್ಟ್‌ ಮೆಥಡ್‌ ಗಳ ಮತ್ತು ಸ್ಟಾಟಿಕ್‌ ಡೇಟಾ ಮೆಂಬರ್‌ ಗಳ ಗಣವನ್ನು ಹೊಂದಿರುತ್ತದೆ.
00:58 ಇದು ಬಾಡಿ ಇಲ್ಲದ ಮೆಥಡ್‌ ಗಳ ಗಣದ ಸಿಗ್ನೇಚರ್‌ ಗಳನ್ನು ನಿರೂಪಿಸುತ್ತದೆ.
01:04 ಇದನ್ನು interface ಕೀವರ್ಡ್ ಬಳಸಿ ಘೋಷಿಸಲಾಗುತ್ತದೆ.
01:08 ನಾವೀಗ ಎಕ್ಲಿಪ್ಸ್‌ ನತ್ತ ಸಾಗಲಿದ್ದೇವೆ ಮತ್ತು InterfaceDemo ಎಂಬ ಹೊಸ ಪ್ರಾಜೆಕ್ಟ್ ಅನ್ನು ರಚಿಸಲಿದ್ದೇವೆ.
01:15 ಇಲ್ಲಿ, ಇಂಟರ್‌ ಫೇಸ್‌ ಗಳ ಬಳಕೆಯನ್ನು ತೋರಿಸಲು, ಅಗತ್ಯವಿರುವ ಕ್ಲಾಸುಗಳು ಮತ್ತು ಇಂಟರ್‌ ಫೇಸ್‌ ಅನ್ನು ರಚಿಸಲಿದ್ದೇವೆ.
01:24 src ಫೋಲ್ಡರ್‌ ಮೇಲೆ ರೈಟ್‌ ಕ್ಲಿಕ್‌ ಮಾಡಿ ಮತ್ತು New > Interface ಮೇಲೆ ಕ್ಲಿಕ್ ಮಾಡಿ.
01:30 ಹೆಸರನ್ನು Animal ಎಂಬುದಾಗಿ ಟೈಪ್‌ ಮಾಡಿ ಮತ್ತು Enter ಒತ್ತಿ.
01:34 ಇಂಟರ್‌ ಫೇಸ್‌ ಅನ್ನು ನಿರೂಪಿಸಲು ʻʻinterface'’ ಕೀವರ್ಡ್‌ ಅನ್ನು ಬಳಸಲಾಗಿದೆ ಎಂಬುದನ್ನು ಗಮನಿಸಿ.
01:39 ಈಗ, ಸ್ಕ್ರೀನ್‌ ನಲ್ಲಿ ತೋರಿಸಿರುವಂತೆ ಕೋಡ್‌ ಅನ್ನು ಟೈಪ್‌ ಮಾಡಿ.
01:43 ಇಲ್ಲಿ ಇಂಟರ್‌ ಫೇಸ್‌ ನ ಹೆಸರು Animal ಆಗಿದೆ.
01:46 ಇದು talk(), see() ಮತ್ತು move() ಎಂಬ ಮೂರು ಅಬ್ಸ್ಟ್ರಾಕ್ಟ್ ಮೆಥಡ್ ಗಳನ್ನು ಹೊಂದಿದೆ.
01:52 ಇಂಟರ್‌ ಫೇಸ್‌ ನಲ್ಲಿನ ಈ ಎಲ್ಲಾ ಮೆಥಡ್‌ ಗಳು ಅಂತರ್ಗತವಾಗಿ ಪಬ್ಲಿಕ್‌ ಮತ್ತು ಅಬ್ಸ್ಟ್ರಾಕ್ಟ್‌ ಆಗಿವೆ.
01:59 ಇಂಟರ್‌ ಫೇಸ್‌ ಒಂದು ಕಾನ್ಸ್ಟಂಟ್‌ ವೇರಿಯೇಬಲ್‌ ಘೋಷಣೆಗಳನ್ನು ಹೊಂದಿರುತ್ತದೆ.
02:04 ಇಲ್ಲಿ, ಕಾನ್ಸ್ಟಂಟ್‌ ಸ್ಟ್ಟಿಂಗ್‌ ಮೌಲ್ಯ “Mammal” ಅನ್ನು ವೇರಿಯೇಬಲ್ “type1” ಗೆ ಅಸೈನ್ ಮಾಡಲಾಗಿದೆ.
02:12 ಮತ್ತು “Reptiles” ಅನ್ನು ವೇರಿಯೇಬಲ್ “type2” ಗೆ ಅಸೈನ್ ಮಾಡಲಾಗಿದೆ.
02:16 ಇಂಟರ್‌ ಫೇಸ್‌ ಒಂದರಲ್ಲಿ ನಿರೂಪಿಸಲಾದ ಎಲ್ಲಾ ಕಾನ್ಸ್ಟಂಟ್‌ ಮೌಲ್ಯಗಳು ಅಂತರ್ಗತವಾಗಿ ಪಬ್ಲಿಕ್‌, ಸ್ಟಾಟಿಕ್‌ ಮತ್ತು ಫೈನಲ್‌ ಆಗಿವೆ.
02:25 ನಂತರ ನಾವು ಇಂಟರ್ ಫೇಸ್ ಗಾಗಿ ಉದಾಹರಣೆಯೊಂದಿಗೆ ಇಂಪ್ಲೆಮೆಂಟೇಷನ್ ಕ್ಲಾಸ್ ನೋಡಲಿದ್ದೇವೆ.
02:32 ಇಲ್ಲಿ ಹ್ಯೂಮನ್ ಎಂಬುದು ಕ್ಲಾಸ್ ಆಗಿದ್ದು ಅನಿಮಲ್ ಇಂಟರ್ ಫೇಸ್ ಅನ್ನು ಕಾರ್ಯಗತಗೊಳಿಸುತ್ತದೆ.
02:38 ಹೀಗೆ, talk(), see() ಮತ್ತು move() ಮೆಥಡ್ ಗಳಿಗಾಗಿ ಇದು ಕಾರ್ಯಗತಗೊಳಿಸುವಿಕೆಯನ್ನು ಒದಗಿಸಬೇಕು.
02:45 ಕ್ಲಾಸ್ ಒಂದು ಅನೇಕ ಇಂಟರ್ ಫೇಸ್ ಗಳನ್ನು ಕಾರ್ಯಗತಗೊಳಿಸಬಲ್ಲದು.
02:49 ಉದಾಹರಣೆಯಲ್ಲಿ ತೋರಿಸಿರುವಂತೆ, ಹ್ಯೂಮನ್ ಕ್ಲಾಸ್ ಎನ್ನುವುದು ಅನಿಮಲ್ ಮತ್ತು ಆಕ್ಷನ್ ಎಂಬ ಎರಡು ಇಂಟರ್ ಫೇಸ್ ಗಳನ್ನು ಕಾರ್ಯಗತಗೊಳಿಸುತ್ತದೆ.
02:57 ವಿಭಿನ್ನ ಇಂಟರ್ ಫೇಸ್ ಗಳನ್ನು ಗುರುತಿಸಲು ಸಿಂಟ್ಯಾಕ್ಸ್ ನಲ್ಲಿ ಕೊಮಾ ಅಪರೇಟರ್ ಅನ್ನು ಬಳಸಿರುವುದನ್ನು ಗಮನಿಸಿ.
03:04 ಈಗ ಈ ಕ್ಲಾಸ್, ಅನಿಮಲ್ ಮತ್ತು ಆಕ್ಷನ್ ಇಂಟರ್ ಫೇಸ್ ಗಳೆರಡರಲ್ಲೂ ಎಲ್ಲಾ ಅಬ್ಸ್ಟ್ರಾಕ್ಟ್ ಮೆಥಡ್ ಗಳಿಗೆ ಕಾರ್ಯಗತಗೊಳಿಸುವಿಕೆಯನ್ನು ಒದಗಿಸಬೇಕು.
03:13 ಇಲ್ಲಿರುವ ಚಿತ್ರವು ಒಂದು ಇಂಪ್ಲೆಮೆಂಟ್ ರಿಲೇಶನ್ ಅನ್ನು ಪ್ರತಿನಿಧಿಸುತ್ತದೆ.
03:18 ಅನಿಮಲ್ ಕ್ಲಾಸ್ ಇಲ್ಲಿ ಇಂಟರ್ ಫೇಸ್ ಆಗಿದೆ.
03:22 ಹ್ಯೂಮನ್ ಮತ್ತು ಸ್ನೇಕ್ ಕ್ಲಾಸುಗಳು ಎರಡು ಇಂಪ್ಲೆಮೆಂಟೇಷನ್ ಕ್ಲಾಸುಗಳಾಗಿವೆ.
03:28 ಹ್ಯೂಮನ್ ಕ್ಲಾಸು, talk(), see() ಮತ್ತು move() ಮೆಥಡ್ ಗಳಿಗಾಗಿ ತನ್ನದೇ ಆದ ಬೇರೆ ಬೇರೆ ಕಾರ್ಯಗತಗೊಳಿಸುವಿಕೆಗಳನ್ನು ಒದಗಿಸುತ್ತದೆ.
03:36 ಮತ್ತು, ಸ್ನೇಕ್ ಕ್ಲಾಸು, talk(), see() ಮತ್ತು move() ಮೆಥಡ್ ಗಳಿಗಾಗಿ ತನ್ನದೇ ಆದ ಬೇರೆ ಬೇರೆ ಕಾರ್ಯಗತಗೊಳಿಸುವಿಕೆಗಳನ್ನು ಒದಗಿಸುತ್ತದೆ.
03:45 ನಾವೀಗ ಒಂದು ಮಾದರಿ ಪ್ರೋಗ್ರಾಂನೊಂದಿಗೆ ಇಂಟರ್ ಫೇಸ್ ಗಳ ಬಳಕೆಯನ್ನು ತಿಳಿದುಕೊಳ್ಳೋಣ.
03:50 default package ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಹ್ಯೂಮನ್ ಎನ್ನುವ ಕ್ಲಾಸನ್ನು ರಚಿಸಿ.
03:56 ಈಗ, ಅನಿಮಲ್ ನ ಇಂಪ್ಲೆಮೆಂಟೇಷನ್ ಕ್ಲಾಸನ್ನು ಮಾಡಲು ಹೀಗೆ ಟೈಪ್ ಮಾಡಿ: implements Animal.
04:04 ನಾವೀಗ ಎಕ್ಲಿಪ್ಸ್ ಐ.ಡಿ.ಇ ಯಲ್ಲಿ ಎರರ್ (ದೋಷ) ಅನ್ನು ನೋಡಬಹುದು.
04:09 ಅನಿಮಲ್ ಇಂಟರ್ ಫೇಸ್ ಗೆ ಇಂಪ್ಲೆಮೆಂಟೇಷನ್ ಒಂದನ್ನು ಒದಗಿಸಬೇಕು ಎಂಬುದನ್ನು ಈ ಎರರ್ ಸೂಚಿಸುತ್ತದೆ.
04:15 ಈ ಎರರ್ ಅನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ನಾವು ನೋಡೋಣ.
04:19 ಈಗ talk(), see() ಮತ್ತು move() ವಿಧಾನಗಳನ್ನು ನಿರೂಪಿಸೋಣ.
04:23 ಇದಕ್ಕಾಗಿ ಹೀಗೆ ಟೈಪ್ ಮಾಡಿ: public void talk( ) ಸುರುಳಿಯಾಕಾರದ ಆವರಣ ಚಿಹ್ನೆಯೊಳಗೆ System.out.println ಮತ್ತು ಉದ್ಧರಣ ಚಿಹ್ನೆಗಳೊಳೊಗೆ "I am a human and I belong to" ಎಂದು ಟೈಪ್ ಮಾಡಿ.
04:37 ನಾವೀಗ ಅನಿಮಲ್ ಇಂಟರ್ ಫೇಸ್ ನಲ್ಲಿ ಘೋಷಿಸಿರುವ ಸ್ಟಾಟಿಕ್, ಫೈನಲ್ ವೇರಿಯೇಬಲ್ ಟೈಪ್1 ನ ಮೌಲ್ಯವನ್ನು ಬಳಸಬಹುದು.
04:45 ಈ ಉದ್ದೇಶಕ್ಕಾಗಿ + Animal.type1+ ಹಾಗೂ ಆವರಣ ಚಿಹ್ನೆಗಳೊಳಗೆ "family" ಅಲ್ಪವಿರಾಮ ಚಿಹ್ನೆ ಎಂದು ಟೈಪ್ ಮಾಡಿ.
04:54 ನಾವೀಗ see() ವಿಧಾನವನ್ನು ಕಾರ್ಯಗತಗೊಳಿಸೋಣ.
04:57 ಇದಕ್ಕಾಗಿ ಹೀಗೆ ಟೈಪ್ ಮಾಡಿ: public void see( ) ಮತ್ತು ಸುರುಳಿಯಾಕಾರದ ಆವರಣ ಚಿಹ್ನೆಗಳೊಳಗೆ System.out.println ಮತ್ತು ಉದ್ಧರಣ ಚಿಹ್ನೆಗಳೊಳಗೆ "I can see all colors" ಅಲ್ಪವಿರಾಮ ಟೈಪ್ ಮಾಡಿ.
05:11 ನಾವು move() ವಿಧಾನವನ್ನು ಸಹ ನಿರೂಪಿಸಬೇಕು.
05:14 ಈಗ ಹೀಗೆ ಟೈಪ್ ಮಾಡಿ : public void move( ) ಸುರುಳಿಯಾಕಾರದ ಆವರಣ ಚಿಹ್ನೆಗಳೊಳಗೆ System.out.println ಮತ್ತು ಉದ್ಧರಣ ಚಿಹ್ನೆಗಳೊಳಗೆ "I move by walking" ಅರ್ಧವಿರಾಮ ಚಿಹ್ನೆ ಟೈಪ್ ಮಾಡಿ.
05:29 ಈ ಎಲ್ಲಾ ಮೆಥಡ್ ಗಳನ್ನು ಕಾರ್ಯಗತಗೊಳಿಸಿದ ನಂತರ ಎರರ್ ನಾಪತ್ತೆಯಾಗುತ್ತದೆ ಎಂಬುದನ್ನು ಗಮನಿಸಿ.
05:34 ಮುಂದೆ, ಸ್ನೇಕ್ ಕ್ಲಾಸನ್ನು ಹೇಗೆ ನಿರೂಪಿಸಬಹುದು ಎಂದು ನೋಡೋಣ.
05:38 ನಾನು ಈಗಲೇ ನನ್ನ ಪ್ರಾಜೆಕ್ಟ್ ನಲ್ಲಿ ರಚಿಸಿದ್ದೇನೆ.
05:42 ನಿಮ್ಮ ಪ್ರಾಜೆಕ್ಟ್ ನಲ್ಲಿ ದಯವಿಟ್ಟು ಸ್ನೇಕ್ ಕ್ಲಾಸ್ ಅನ್ನು ರಚಿಸಿ ಮತ್ತು ಸ್ಕ್ರೀನ್ ನಲ್ಲಿ ತೋರಿಸಿರುವ ಕೋಡ್ ಅನ್ನು ಟೈಪ್ ಮಾಡಿ.
05:49 ನಾವೀಗ ಕೋಡ್ ಅನ್ನು ನೋಡೋಣ.
05:52 ಅನಿಮಲ್ ಇಂಟರ್ ಫೇಸ್ ನ ಎಲ್ಲಾ ಮೆಥಡ್ ಗಳಾದ talk(), see() ಮತ್ತು move() ಗಳನ್ನು ಈ ಕ್ಲಾಸ್ ಒಳಗೆ ಕಾರ್ಯಗತಗೊಳಿಸಿರುವುದನ್ನು ನಾವು ನೋಡಬಹುದು.
06:01 ಇಲ್ಲಿ talk() ವಿಧಾನವು “I am a snake and I belong to” ಎಂಬುದಾಗಿ ಪ್ರಿಂಟ್ (ಮುದ್ರಿಸು) ಮಾಡುತ್ತದೆ.
06:07 ನಂತರ Animal.type2 ನ ಮೌಲ್ಯವನ್ನು ಮತ್ತು ನಂತರ “family” ಯನ್ನು ಪ್ರಿಂಟ್ ಮಾಡಬೇಕು.
06:13 ಇಲ್ಲಿ see() ವಿಧಾನವು “I can see only in black and white” ಎಂಬುದಾಗಿ ಪ್ರಿಂಟ್ ಮಾಡುತ್ತದೆ.
06:19 move() ವಿಧಾನವು "I move by crawling" ಅನ್ನು ಪ್ರಿಂಟ್ ಮಾಡುತ್ತದೆ.
06:23 talk(), see() ಮತ್ತು move() ಮೆಥಡ್ ಗಳು ಮುಂತಾದುವುಗಳ ತನ್ನದೇ ಆದ ಕಾರ್ಯಗತಗೊಳಿಸುವಿಕೆಗಳನ್ನು ಹ್ಯೂಮನ್ ಕ್ಲಾಸ್ ಹೊಂದಿರುವುದನ್ನು ಗಮನಿಸಿ.
06:31 ಮತ್ತು talk(), see() ಮತ್ತು move()() ಮೆಥಡ್ ಗಳು ಮುಂತಾದುವುಗಳ ತನ್ನದೇ ಆದ ಕಾರ್ಯಗತಗೊಳಿಸುವಿಕೆಗಳನ್ನು ಸ್ನೇಕ್ ಕ್ಲಾಸ್ ಹೊಂದಿರುವುದನ್ನು ಗಮನಿಸಿ.
06:39 ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು new > class ಮೇಲೆ ಕ್ಲಿಕ್ ಮಾಡಿ, ನಂತರ ಹೆಸರನ್ನು Demo ಎಂಬುದಾಗಿ ಟೈಪ್ ಮಾಡಿ.
06:47 ಈ ಕ್ಲಾಸ್ ಒಳಗೆ ನಾವು ಮೇನ್ ಮೆಥಡ್ ಹೊಂದಲಿದ್ದೇವೆ.
06:51 ಇದಕ್ಕಾಗಿ main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ರಚಿಸಲು ctrl+space ಒತ್ತಿ.
06:58 ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಇಲ್ಲಿ ನೀಡಿರುವ ಕೋಡ್ ಅನ್ನು ಟೈಪ್ ಮಾಡಿ.
07:01 ಈ ಸಾಲಿನಲ್ಲಿ ನಾವು ಅನಿಮಲ್ ಇಂಟರ್ ಫೇಸ್ ಬಳಸಿ ಹ್ಯೂಮನ್ ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ (ದೃಷ್ಟಾಂತೀಕರಿಸು) ಮಾಡುತ್ತೇವೆ.
07:07 ಇದನ್ನು Animal h equals new Human(); ಎಂದು ಪ್ರತಿನಿಧಿಸಲಾಗುತ್ತದೆ.
07:14 ಈಗ ನಾವು ಅಬ್ಜೆಕ್ಟ್ ಅನ್ನು h.talk(); h.see(); h.move(); ಆಗಿ ಬಳಸಿ ವಿವಿಧ ವಿಧಾನಗಳನ್ನು ಇನ್ವೋಕ್ (ಜಾರಿ) ಮಾಡಬಹುದು.
07:26 ನಂತರ, ಅನಿಮಲ್ ಇಂಟರ್ ಫೇಸ್ ಬಳಸಿ ನಾವು ಸ್ನೇಕ್ ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡುತ್ತೇವೆ.
07:31 ನಾವೀಗ ಇಲ್ಲಿ ತೋರಿಸಿರುವಂತೆ ಈ ಅಬ್ಜೆಕ್ಟ್ ಅನ್ನು ಬಳಸಿ ನಾವು ಬೇರೆ ಬೇರೆ ವಿಧಾನಗಳನ್ನು ಇನ್ವೋಕ್ ಮಾಡಬಹುದು.
07:38 ಈ ಡೆಮೋ ಪ್ರೋಗ್ರಾಂ ಅನ್ನು ನಾವು ರನ್ ಮಾಡೋಣ.
07:41 ಇದಕ್ಕಾಗಿ ಕ್ಲಾಸ್ Demo ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Run as > Java Application ಆರಿಸಿ.
07:48 ಈಗ ನಾವು ಔಟ್ಪುಟ್ ನೋಡಬಹುದು.
07:52 ಇವುಗಳನ್ನು, human class object h ಬಳಸಿ ಇನ್ವೋಕ್ ಮಾಡಿದ talk(), see() ಮತ್ತು move() ವಿಧಾನಗಳ ಮೂಲಕ ಪ್ರಿಂಟ್ ಮಾಡಬಹುದು.
08:00 ಇವುಗಳನ್ನು, Snake class object s ಬಳಸಿ ಇನ್ವೋಕ್ ಮಾಡಿದ talk(), see() ಮತ್ತು move() ವಿಧಾನಗಳ ಮೂಲಕ ಪ್ರಿಂಟ್ ಮಾಡಬಹುದು.
08:08 ನಾವೀಗ ಇಂಟರ್ ಫೇಸ್ ಮತ್ತು ಅಬ್ಸ್ಟ್ರಾಕ್ಟ್ ಕ್ಲಾಸ್ ನಡುವಿನ ವ್ಯತ್ಯಾಸಗಳನ್ನು ತಿಳಿಯೋಣ.
08:14 ಇಂಟರ್ ಫೇಸ್ ನ ಎಲ್ಲಾ ವಿಧಾನಗಳು ಅಬ್ಸ್ಟ್ರಾಕ್ಟ್ ಆಗಿರಬೇಕು.
08:18 ಇಂಟರ್ ಫೇಸ್ ಒಳಗೆ ಯಾವುದೇ ಕನ್ಸ್ಟ್ರಕ್ಟರ್ ಗಳು, ಕಾಂಕ್ರೀಟ್ ಮೆಥಡ್ ಗಳು,
08:23 ಸ್ಟಾಟಿಕ್ ಮೆಥಡ್ ಗಳು ಮತ್ತು ಮೇನ್ ಮೆಥಡ್ ಇರಬಾರದು.
08:28 ಆದರೆ ಅಬ್ಸ್ಟ್ರಾಕ್ಟ್ ಮೆಥಡ್ ಇವೆಲ್ಲವುಗಳನ್ನು ತನ್ನೊಳಗೆ ಹೊಂದಿರಬಹುದು.
08:32 ಇಂಟರ್ ಫೇಸ್ ನ ವೇರಿಯೇಬಲ್ ಗಳು ಸ್ಟಾಟಿಕ್ ಮತ್ತು ಫೈನಲ್ ಆಗಿರಬೇಕು.
08:38 ಅಬ್ಸ್ಟ್ರಾಕ್ಟ್ ಕ್ಲಾಸಿಗೆ ಇಂತಹ ಯಾವುದೇ ನಿರ್ಬಂಧಗಳು ಇಲ್ಲ.
08:43 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ತಲುಪಿದ್ದೇವೆ. ಈಗ ಸಂಕ್ಷೇಪಿಸೋಣ.
08:48 ಈ ಟ್ಯುಟೋರಿಯಲ್ ನಲ್ಲಿ ನಾವು: ಇಂಟರ್ ಫೇಸ್ ರಚಿಸಲು,
08:53 ಇಂಪ್ಲೆಮೆಂಟೇಶನ್ ಕ್ಲಾಸ್ ರಚಿಸಲು ಮತ್ತು
08:56 ಇಂಟರ್ ಫೇಸ್ ಗಳ ಬಳಕೆ ಬಗ್ಗೆ ಕಲಿತೆವು.
08:59 ಅಸೈನ್ಮೆಂಟ್ ಆಗಿ, brake() ಮತ್ತು run() ವಿಧಾನಗಳನ್ನು ಹೊಂದಿರುವ ಇಂಟರ್ ಫೇಸ್ ವೆಹಿಕಲ್ ಅನ್ನು ರಚಿಸಿ.
09:07 fill(String type,int quantity), pay(int quantity,int price) ವಿಧಾನಗಳನ್ನು ಹೊಂದಿರುವ ಇನ್ನೊಂದು ಇಂಟರ್ ಫೇಸ್ ಫ್ಯುಯೆಲ್ ಅನ್ನು ರಚಿಸಿ.
09:19 ವೆಹಿಕಲ್ ಮತ್ತು ಫ್ಯುಯೆಲ್ ಇವೆರಡೂ ಇಂಟರ್ ಫೇಸ್ ಗಳನ್ನು ಕಾರ್ಯಗತಗೊಳಿಸುವ ಸಬ್ ಕ್ಲಾಸ್ ಕಾರ್ ಅನ್ನು ರಚಿಸಿ.
09:26 ಇಲ್ಲಿ ಬ್ರೇಕ್ ವಿಧಾನವು "Car Applies Power brake" ಎಂದು ಪ್ರಿಂಟ್ ಮಾಡಬೇಕು.
09:30 ಮತ್ತು ರನ್ ವಿಧಾನವು "Car is running on 4 wheels" ಎಂದು ಪ್ರಿಂಟ್ ಮಾಡಬೇಕು.
09:35 ಇದೇ ರೀತಿ, fill() ವಿಧಾನವು, ತುಂಬಿದ ಇಂಧನದ ಪ್ರಕಾರ ಮತ್ತು ಪ್ರಮಾಣವನ್ನು ಪ್ರಿಂಟ್ ಮಾಡಬಹುದು.
09:41 ಉದಾಹರಣೆಗೆ: 10 Litres of petrol.
09:44 pay() ವಿಧಾನವನ್ನು, ಪಾವತಿಸಬೇಕಾದ ಬೆಲೆಯನ್ನು ಪ್ರಿಂಟ್ ಮಾಡಲು ಬಳಸಬಹುದು. ಉದಾಹರಣೆಗೆ: Pay Rs. 640
09:53 ವೆಹಿಕಲ್ ಮತ್ತು ಫ್ಯುಯೆಲ್ ಇವೆರಡೂ ಇಂಟರ್ ಫೇಸ್ ಗಳನ್ನು ಕಾರ್ಯಗತಗೊಳಿಸುವ ಇನ್ನೊಂದು ಸಬ್ ಕ್ಲಾಸ್ ಬೈಕ್ ಅನ್ನು ರಚಿಸಿ.
10:00 ಇಲ್ಲಿ ಬ್ರೇಕ್ ವಿಧಾನವು "Bike Applies hand brake" ಎಂದು ಪ್ರಿಂಟ್ ಮಾಡಬಹುದು.
10:05 ಮತ್ತು ರನ್ ವಿಧಾನವು “Bike is running on 2 wheels” ಎಂದು ಪ್ರಿಂಟ್ ಮಾಡಬಹುದು.
10:10 ನಂತರ, ಈ ಹಿಂದೆ ವಿವರಿಸಿರುವಂತೆ fill() ಮತ್ತು pay() ವಿಧಾನಗಳನ್ನು ಕಾರ್ಯಗತಗೊಳಿಸಿ.
10:15 ಅಂತಿಮವಾಗಿ,ಈ ಫಲಿತಾಂಶಗಳನ್ನು ದೃಢೀಕರಿಸಲು ಮೇನ್ ಮೆಥಡ್ ಹೊಂದಿರುವ ಡೆಮೋ ಕ್ಲಾಸ್ ಒಂದನ್ನು ರಚಿಸಿ.
10:21 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
10:29 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
10:38 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
10:41 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
10:48 ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
10:52 ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
11:01 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14