Java/C3/Exception-Handling/Kannada

From Script | Spoken-Tutorial
Revision as of 20:37, 20 May 2020 by Sandhya.np14 (Talk | contribs)

Jump to: navigation, search
Time Narration
00:01 Exception Handling ಕುರಿತ ಸ್ಪೋಕನ್‌ ಟ್ಯುಟೋರಿಯಲ್‌ಗೆ ಸ್ವಾಗತ.
00:06 ಈ ಟ್ಯುಟೋರಿಯಲ್‌ನಲ್ಲಿ ನಾವು:

ಎಕ್ಸೆಪ್ಶನ್‌ ಅಂದರೇನು, Checked ಮತ್ತು unchecked ಎಕ್ಸೆಪ್ಶನ್ಸ್‌, try-catch ಬ್ಲಾಕ್‌ ಬಳಸಿ ಎಕ್ಸೆಪ್ಶನ್‌ ಗಳನ್ನು ನಿರ್ವಹಿಸುವುದು ಮತ್ತು finally ಬ್ಲಾಕ್‌ ಇವುಗಳ ಬಗ್ಗೆ ಕಲಿಯಲಿದ್ದೇವೆ.

00:20 ಇಲ್ಲಿ ನಾವು ಉಬಂಟು 16.04 OS, JDK 1 .8 ಮತ್ತು Eclipse 4.3.1 ಇವುಗಳನ್ನು ಬಳಸುತ್ತಿದ್ದೇವೆ.
00:32 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಜಾವಾ ಮತ್ತು Eclipse IDE ಯ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು.
00:39 ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ.
00:45 ಎಕ್ಸೆಪ್ಶನ್‌ ಎನ್ನುವುದು ಅನಿರೀಕ್ಷಿತ ಘಟನೆಯಾಗಿದ್ದು, ಪ್ರೋಗ್ರಾಂ ನ ಎಕ್ಸಿಕ್ಯೂಶನ್ ವೇಳೆ ಇದು ಉಂಟಾಗುತ್ತದೆ.
00:52 ಇದು ಪ್ರೋಗ್ರಾಂನ ಸಾಮಾನ್ಯ ಕಾರ್ಯಕ್ಕೆ ಅಡ್ಡಿ ಉಂಟು ಮಾಡುತ್ತದೆ ಮತ್ತು ಅಸಾಧಾರಣವಾಗಿ ಕೊನೆಗೊಳ್ಳುತ್ತದೆ.
01:00 ಅವುಗಳು ಆಗುವುದನ್ನು ಆಧರಿಸಿ, ಎಕ್ಸೆಪ್ಶನ್‌ ಗಳನ್ನು unchecked ಮತ್ತು checked ಎಕ್ಸೆಪ್ಶನ್‌ಗಳೆಂದು ವರ್ಗೀಕರಿಸಲಾಗುತ್ತದೆ.
01:08 ನಾವೀಗ eclipse ತೆರೆದು ExceptionDemo ಎನ್ನುವ ಹೊಸ ಪ್ರಾಜೆಕ್ಟ್‌ ಅನ್ನು ರಚಿಸಲಿದ್ದೇವೆ.
01:16 ಈ ಪ್ರಾಜೆಕ್ಟ್‌ ಒಳಗೆ, Exception Handling ಅನ್ನು ತೋರಿಸಿ ಕೊಡಲು ಅಗತ್ಯವಿರುವ ಕ್ಲಾಸುಗಳನ್ನು ರಚಿಸುವೆವು.
01:24 Marks ಎನ್ನುವ ಹೊಸ ಕ್ಲಾಸ್‌ ಅನ್ನು ನಾವು ರಚಿಸುವೆವು.
01:28 ಈಗ Marks ಕ್ಲಾಸನ್ನು ಪ್ರತಿನಿಧಿಸಲು ಈ ಕೋಡ್‌ ಅನ್ನು ಟೈಪ್‌ ಮಾಡಿ.
01:34 ಈ ಪ್ರೋಗ್ರಾಂ, Marks ಎಂಬ ಅರೇಯಲ್ಲಿ ಸ್ಟೋರ್ ಮಾಡಲಾದ 5 ವಿದ್ಯಾರ್ಥಿಗಳ ಅಂಕಗಳನ್ನು ಪ್ರಿಂಟ್ ಮಾಡುತ್ತದೆ.
01:41 ಈಗ ಪ್ರೋಗ್ರಾಂ ಅನ್ನು ರನ್‌ ಮಾಡಿ ಮತ್ತು ಔಟ್ಪುಟ್‌ ಅನ್ನು ನೋಡೋಣ.
01:45 ಅರೇ ಯಲ್ಲಿರುವ ವ್ಯಾಲ್ಯೂಗಳು ಪ್ರಿಂಟ್‌ ಆಗುತ್ತಿರುವುದನ್ನು ನಾವು ಕಾಣಬಹುದು.
01:50 ಇಲ್ಲಿ ಇರದೇ ಇರುವ ಅರೇ ಎಲಿಮೆಂಟ್‌ ಅನ್ನು ನಾವು ಆಕ್ಸೆಸ್‌ ಮಾಡಲು ಪ್ರಯತ್ನಿಸಿದರೆ ಏನಾಗುತ್ತದೆ ಎಂದು ನೋಡೋಣ.
01:57 ಈಗ ಈ ಕೋಡ್‌ ಅನ್ನು ಟೈಪ್‌ ಮಾಡಿ.
02:00 ನಮ್ಮ ಅರೇ ಯಲ್ಲಿ 5 ಎಲಿಮೆಂಟ್‌ಗಳು ಮಾತ್ರ ಇವೆ ಎಂದು ನಮಗೆ ತಿಳಿದಿದೆ.
02:04 ಆದರೆ ಈ ಸ್ಟೇಟ್ಮೆಂಟ್‌ ನಲ್ಲಿ, ನಾವು index 50 ಯಲ್ಲಿರುವ ಎಲಿಮೆಂಟ್ ಅನ್ನು ಆಕ್ಸೆಸ್ ಮಾಡಲು ಯತ್ನಿಸುತ್ತಿದ್ದೇವೆ. ಅದು ಇಲ್ಲಿ ಇಲ್ಲ.
02:12 ಈ ಪ್ರೋಗ್ರಾಂ ಅನ್ನು ನಾವೀಗ ರನ್‌ ಮಾಡೋಣ.
02:15 ಈ ಪ್ರೋಗ್ರಾಂ, 7 ನೇ ಸಾಲಿನಲ್ಲಿ “ArrayIndexOutOfBoundsException“ ಎಂಬ ಎರರ್ ಮೆಸೇಜ್ ನೊಂದಿಗೆ ಕೊನೆಗೊಳ್ಳುತ್ತದೆ.
02:25 ಈ ಎರರ್ ಸಂದೇಶವು, ಎಕ್ಸೆಪ್ಶನ್‌ ನ ವಿಧ, ಇದು ಎಲ್ಲಿ ಆಗಿದೆ ಮತ್ತು ಎಕ್ಸೆಪ್ಶನ್‌ ನ ಇತರ ವಿವರಗಳನ್ನು ಸೂಚಿಸುತ್ತದೆ.
02:35 ಎರರ್‌ ನ ನಂತರ ಪ್ರೋಗ್ರಾಂ ನಿಂತುಹೋಗಿದೆ. ಆದ್ದರಿಂದ print ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗಿಲ್ಲ.
02:42 ಇದು Unchecked ಎಕ್ಸೆಪ್ಶನ್‌ ನ ಉದಾಹರಣೆಯಾಗಿದೆ.
02:46 Unchecked ಎಕ್ಸೆಪ್ಶನ್‌ ಗಳನ್ನು ರನ್-ಟೈಮ್ ಎಕ್ಸೆಪ್ಶನ್‌ ಎನ್ನುತ್ತೇವೆ. ಏಕೆಂದರೆ ಇದನ್ನು ಎಕ್ಸಿಕ್ಯೂಶನ್ ವೇಳೆಯಲ್ಲಿ ಮಾತ್ರ ಪರೀಕ್ಷಿಸಲಾಗುತ್ತದೆ.
02:54 ಸಂಖ್ಯೆಯೊಂದನ್ನು ಸೊನ್ನೆಯಿಂದ ಭಾಗಿಸುವುದು ಮತ್ತು ಇಲ್ಲದಿರುವ ಅರೇ ಎಲಿಮೆಂಟ್‌ ಅನ್ನು ಆಕ್ಸೆಸ್‌ ಮಾಡುವುದು ಮುಂತಾದ ಪ್ರೋಗ್ರಾಮಿಂಗ್‌ ಬಗ್ ಗಳು ಹಾಗೂ ಲಾಜಿಕಲ್‌ ಎರರ್‌ಗಳನ್ನು ಇವು ನಿರ್ವಹಿಸುತ್ತವೆ.
03:07 ಈಗ try catch ಬ್ಲಾಕ್‌ ಅನ್ನು ಬಳಸಿ, ಎಕ್ಸೆಪ್ಶನ್‌ ಅನ್ನು ಹೇಗೆ ನಿರ್ವಹಿಸುವುದೆಂದು ಕಲಿಯೋಣ.
03:13 try ಬ್ಲಾಕ್‌ನ ಒಳಗೆ ಇರುವ ಕೋಡ್‌ನ ಈ ಭಾಗವು, ಒಂದು ಎಕ್ಸೆಪ್ಶನ್‌ ಅನ್ನು ತೋರಿಸಬಹುದು.
03:19 ಇದಕ್ಕೆ ಸಂಬಂಧಿತ catch ಬ್ಲಾಕ್‌, ಅಬ್ಜೆಕ್ಟ್‌ e ಯಲ್ಲಿ ಎಕ್ಸೆಪ್ಶನ್ ನ ವಿವರಗಳನ್ನು ಪಡೆಯಬಹುದು.
03:26 catch ಬ್ಲಾಕ್‌ನ ಒಳಗೆ, ಎರರ್ ಸಂದೇಶಗಳನ್ನು ತೋರಿಸಲು ಅಥವಾ ಎರರ್ ಅನ್ನು ಸರಿಪಡಿಸಲು ನಾವು ಕೋಡ್‌ ಅನ್ನು ಬರೆಯಬಹುದು.
03:34 ನಾವೀಗ eclipse ಗೆ ಬದಲಾಯಿಸೋಣ.
03:37 ಮೊದಲಿಗೆ, ಈ ರೀತಿಯ ಎಕ್ಸೆಪ್ಶನ್‌ ಉಂಟು ಮಾಡಿರುವ ಕೋಡ್‌ನ ಸುತ್ತ try ಬ್ಲಾಕ್‌ ಒಂದನ್ನು ಸೇರಿಸೋಣ.
03:44 ನಾವೀಗ ಅನುರೂಪವಾದ catch ಬ್ಲಾಕ್‌ ಅನ್ನು ಸೇರಿಸೋಣ.
03:48 ಇದಕ್ಕಾಗಿ ಈ ಕೋಡ್‌ ಅನ್ನು ಟೈಪ್‌ ಮಾಡಿ.
03:51 ನಾವಿಲ್ಲಿ ಕಸ್ಟಮ್‌ ಮೆಸೇಜ್‌ “Array Overflow Exception occurred” ಅನ್ನು ಪ್ರಿಂಟ್‌ ಮಾಡಲಿದ್ದೇವೆ.
03:57 ಬ್ರ್ಯಾಕೆಟ್ಸ್ ಒಳಗೆ ನಾವು ArrayIndexOutOfBoundsException ನ ಒಂದು ಇನ್ಸ್ಟೆನ್ಸ್ ಅನ್ನು ತಯಾರಿಸಿದ್ದೇವೆ.
04:05 ಹೀಗಾಗಿ ಈ ಬ್ಲಾಕ್‌, ArrayIndexOutOfBoundsException ವಿಧದ ಎಕ್ಸೆಪ್ಶನ್ ಗಳನ್ನು ಕಂಡುಹಿಡಿಯಬಹುದು.
04:11 ನಾವೀಗ ಪ್ರೋಗ್ರಾಂ ಅನ್ನು ರನ್‌ ಮಾಡೋಣ.
04:14 ಎರರ್ ಮೆಸೇಜ್ ಪ್ರಿಂಟ್‌ ಆಗುವುದನ್ನು ನಾವು ನೋಡಬಹುದು.
04:18 ಆದರೆ ಈ ಬಾರಿ marks ಅರೇ ಯನ್ನು ಪ್ರಿಂಟ್ ಮಾಡುವುದು ಸಹ ಎಕ್ಸಿಕ್ಯೂಟ್ ಮಾಡಲಾಗಿದೆ.
04:24 ಈ ರೀತಿ ನಾವು ಎಕ್ಸೆಪ್ಶನ್‌ ಗಳನ್ನು ನಿರ್ವಹಿಸಬಹುದು.
04:27 ಈಗ, ಅನೇಕ catch ಬ್ಲಾಕ್‌ಗಳನ್ನು ಹೇಗೆ ಬಳಸಬಹುದೆಂದು ನೋಡೋಣ.
04:32 ಒಂದು ಬ್ಲಾಕ್‌, ಬೇರೆ ಬೇರೆ ಪ್ರಕಾರದ ಎಕ್ಸೆಪ್ಶನ್‌ ಗಳನ್ನು ತೋರಿಸಿದಾಗ ನಾವು ಅವುಗಳನ್ನು ಬಳಸಬಹುದು.
04:38 try ಬ್ಲಾಕ್‌ ಒಳಗೆ ಈ ಕೋಡ್‌ ಅನ್ನು ಟೈಪ್‌ ಮಾಡಿ.
04:42 ಈ ಕೋಡ್‌ನ ಸಾಲು ಅರೇ ಎಲಿಮೆಂಟ್‌ ಅನ್ನು ಸೊನ್ನೆಯಿಂದ ಭಾಗಿಸುತ್ತದೆ. ಏಕೆಂದರೆ a ಯ ವ್ಯಾಲ್ಯೂ ಸೊನ್ನೆ ಆಗಿದೆ.
04:49 ಆದ್ದರಿಂದ, ಮೊದಲಿಗೆ ArithmeticException ಅನ್ನು ತೋರಿಸಲಾಗುತ್ತದೆ.
04:53 ArithmeticException ನಿರ್ವಹಿಸಲು, ಇನ್ನೊಂದು catch ಬ್ಲಾಕ್‌ ಅನ್ನು ಸೇರಿಸೋಣ.
04:58 ಇದಕ್ಕಾಗಿ ಇಲ್ಲಿರುವ catch ಬ್ಲಾಕ್‌ನ ನಂತರ ಈ ಕೋಡ್‌ ಅನ್ನು ಟೈಪ್‌ ಮಾಡಿ.
05:03 ನಾವೀಗ ಇನ್ನೊಮ್ಮೆ ಪ್ರೋಗ್ರಾಂ ಅನ್ನು ರನ್‌ ಮಾಡೋಣ.
05:06 ಈ ಬಾರಿ "Arithmetic Exception occurred" ಎಂಬ ಎರರ್‌ ಸಂದೇಶವು ಪ್ರಿಂಟ್‌ ಆಗುತ್ತದೆ. ಇದನ್ನು ಮೊದಲೇ ಪತ್ತೆ ಮಾಡಲಾಗಿದೆ.
05:13 try catch ಬ್ಲಾಕ್‌ ನ ಹೊರಗಿನ ಕೋಡ್‌ನ ಉಳಿದ ಭಾಗವು ಎಕ್ಸಿಕ್ಯೂಟ್ ಆಗುತ್ತದೆ.
05:19 ನಂತರ checked ಎಕ್ಸೆಪ್ಶನ್‌ ಗಳ ಕುರಿತು ನೋಡೋಣ.
05:23 checked ಎಕ್ಸೆಪ್ಶನ್‌ ಗಳನ್ನು ಕಂಪೈಲ್ ಟೈಂನಲ್ಲಿ ಪರೀಕ್ಷಿಸಲಾಗುತ್ತದೆ.
05:27 ಹೀಗಾಗಿ ಪ್ರೋಗ್ರಾಂ ಅನ್ನು ರನ್‌ ಮಾಡುವ ಮೊದಲೇ ಇವುಗಳನ್ನು ನಿರ್ವಹಿಸಬೇಕು.
05:31 ಉದಾಹರಣೆಗೆ: ಇಲ್ಲದಿರುವ ಫೈಲ್ ಒಂದನ್ನು ಆಕ್ಸೆಸ್ ಮಾಡುವುದು ಅಥವಾ ನೆಟ್ವರ್ಕ್ ಡೌನ್ ಆಗಿರುವಾಗ ನೆಟ್ವರ್ಕ್ ಸಿಸ್ಟಂ ಅನ್ನು ಆಕ್ಸೆಸ್ ಮಾಡುವುದು.
05:41 ಈಗ Eclipse ಗೆ ಬದಲಾಯಿಸೋಣ ಮತ್ತು ಹೊಸ ಕ್ಲಾಸ್ MarksFile ಅನ್ನು ರಚಿಸೋಣ.
05:47 ಇಲ್ಲಿ main() ಮೆಥಡ್ ಅನ್ನು ಸೇರಿಸೋಣ.
05:50 ನಾವೀಗ ಕಂಪ್ಯೂಟರ್ ನಲ್ಲಿರುವ ಫೈಲ್ ಒಂದನ್ನು ಓದಬೇಕು (ರೀಡ್).
05:54 ಇದಕ್ಕಾಗಿ ಈ ಕೋಡ್ ಅನ್ನು ಟೈಪ್ ಮಾಡಿ.
05:57 ಇಲ್ಲಿ FileReader ಅಬ್ಜೆಕ್ಟ್ fr ಅನ್ನು null ಆಗಿ ಇನಿಶಿಯಲೈಸ್ ಮಾಡಲಾಗಿದೆ.
06:03 FileReader ಅಬ್ಜೆಕ್ಟ್ ಅನ್ನು, ಒಂದು ನಿರ್ದಿಷ್ಟ ಫೈಲ್ ಅನ್ನು ಆಕ್ಸೆಸ್ ಮತ್ತು ರೀಡ್ ಮಾಡಲು ಬಳಸಲಾಗುತ್ತದೆ.
06:08 Eclipse ಒಂದು ಎರರ್ ತೋರಿಸುತ್ತದೆ.
06:11 ಈ ಎರರ್ ಸರಿಪಡಿಸಲು, ಅದರ ಮೇಲೆ ಕ್ಲಿಕ್ ಮಾಡಿ ಮತ್ತು import FileReader java dot io ಮೇಲೆ ಡಬಲ್ ಕ್ಲಿಕ್ ಮಾಡಿ.
06:19 FileReader ಕ್ಲಾಸ್ ಅನ್ನು java dot io package ನಿಂದ ಇಂಪೋರ್ಟ್ ಮಾಡಲಾಗುತ್ತದೆ.
06:25 ಮುಂದಿನ ಟ್ಯುಟೋರಿಯಲ್ನಲ್ಲಿ ನಾವು package ಮತ್ತು ಇದರ ಬಳಕೆಯ ಕುರಿತು ವಿವರವಾಗಿ ಕಲಿಯಲಿದ್ದೇವೆ.
06:31 Home ಫೋಲ್ಡರ್ನಲ್ಲಿರುವ Marks ಎಂಬ ಫೈಲ್ ಅನ್ನು fr ಗೆ ಆಕ್ಸೆಸ್ ಮಾಡಲು ಅವಕಾಶ ನೀಡಲು, ಈ ಕೋಡ್ ಅನ್ನು ಟೈಪ್ ಮಾಡಿ.
06:40 ಇಲ್ಲಿ ತೋರಿಸಿರುವ ಪಾಥ್ ಅನ್ನು, ನಿಮ್ಮ ಸಿಸ್ಟಂನ Home ಫೋಲ್ಡರ್ನಲ್ಲಿ ಇರುವ ಪಾಥ್ ನಿಂದ ಬದಲಾಯಿಸಬೇಕು.
06:46 ಈಗ ಎರರ್ ಕಾಣಿಸಿಕೊಳ್ಳುತ್ತದೆ. ಕೋಡ್ನ ಈ ಸಾಲು FileNotFoundException ಎಂದು ಹೇಳಬಹುದೆಂದು ಇದು ಸೂಚಿಸುತ್ತದೆ.
06:55 error ಮೇಲೆ ಕ್ಲಿಕ್ ಮಾಡಿ ಮತ್ತು Surround with try/catch ಮೇಲೆ ಡಬಲ್ ಕ್ಲಿಕ್ ಮಾಡಿ.
07:00 ಈ ಎರರ್ ಸರಿಪಡಿಸಲು ಎಕ್ಲಿಪ್ಸ್ ಸ್ವಯಂಚಾಲಿತವಾಗಿ try catch ಅನ್ನು ಸೇರಿಸುವುದನ್ನು ನಾವು ನೋಡಬಹುದು.
07:08 ಹೀಗಾಗಿ ಇದು checked ಎಕ್ಸೆಪ್ಶನ್ ಆಗಿದೆ ಎಂಬುದನ್ನು ನಾವು ಅಂದುಕೊಳ್ಳಬಹುದು.
07:12 ನಂತರ, finally ಬ್ಲಾಕ್ ಅನ್ನು ಬಳಸುವ ಕುರಿತು ನೋಡೋಣ.
07:16 ಈ ಕೋಡ್ ಅನ್ನು ಟೈಪ್ ಮಾಡಿ.
07:18 finally ಬ್ಲಾಕ್ ಸಾಮಾನ್ಯವಾಗಿ try-catch ಬ್ಲಾಕ್ ಅನ್ನು ಅನುಸರಿಸುತ್ತದೆ.
07:22 ಎಕ್ಸೆಪ್ಶನ್ ಇದ್ದರೂ, ಇಲ್ಲದಿದ್ದರೂ, ಈ ಬ್ಲಾಕ್ನ ಒಳಗೆ ಇರುವ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಇದು ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಹೊಂದಿದೆ.
07:32 ನಾವೀಗ finally ಬ್ಲಾಕ್ ಒಳಗೆ, ಫೈಲ್ ರೆಫರನ್ಸ್ ಅನ್ನು ಮುಚ್ಚೋಣ.
07:37 ಇದಕ್ಕಾಗಿ fr dot close ಎಂದು ಟೈಪ್ ಮಾಡಿ.
07:40 ಈಗ Eclipse, IOException ಒಂದನ್ನು ತೋರಿಸಲಿದೆ ಎಂದು ಇದು ಸೂಚಿಸುತ್ತದೆ.
07:45 ಹೀಗಾಗಿ error ಮೇಲೆ ಕ್ಲಿಕ್ ಮಾಡಿ ಮತ್ತು Surround with try/catch ಮೇಲೆ ಡಬಲ್ ಕ್ಲಿಕ್ ಮಾಡಿ.
07:51 ಈಗ ಪ್ರೋಗ್ರಾಂ ಅನ್ನು ರನ್ ಮಾಡೋಣ.
07:54 ನಾವೀಗ FileNotFoundException ಸಂದೇಶವು ಪ್ರಿಂಟ್ ಆಗಿರುವುದನ್ನು ನೋಡಬಹುದು.
07:59 ಏಕೆಂದರೆ, ನಮ್ಮ Home ಫೋಲ್ಡರ್ ನಲ್ಲಿ, ನಾವು Marks ಹೆಸರಿನ ಫೈಲ್ ಹೊಂದಿಲ್ಲ.
08:04 fr ಇನ್ನೂ null ವ್ಯಾಲ್ಯೂವನ್ನು ರೆಫರ್ ಮಾಡುತ್ತಿರುವುದರಿಂದ ನಾವು NullPointerException ಅನ್ನು ನೋಡಬಹುದು.
08:12 ಆದರೆ finally ಬ್ಲಾಕ್ ಒಳಗೆ, print ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗುವುದನ್ನು ಸಹ ನಾವು ನೋಡಬಹುದು.
08:18 ನಾವೀಗ Marks ಟೆಕ್ಸ್ಟ್ ಫೈಲ್ ಅನ್ನು ನಮ್ಮ Home ಫೋಲ್ಡರ್ ನಲ್ಲಿ ರಚಿಸೋಣ.
08:23 ನೀವು Windows ನ ಬಳಕೆದಾರರು ಆಗಿದ್ದರೆ, ಟೆಕ್ಸ್ಟ್ ಫೈಲ್ ಒಂದನ್ನು ನಿಮ್ಮ ಲೋಕಲ್ ಡ್ರೈವ್ ನಲ್ಲಿ ರಚಿಸಿ ಮತ್ತು ಇದರ ಪಾಥ್ ಅನ್ನು ಹೇಳಿ.
08:29 ಉದಾಹರಣೆಗೆ ಇದನ್ನು D:\\Marks.txt ಆಗಿ ಸೂಚಿಸಬಹುದು.
08:37 ನಾವೀಗ ಪ್ರೋಗ್ರಾಂ ಅನ್ನು ಇನ್ನೊಮ್ಮೆ ರನ್ ಮಾಡೋಣ.
08:40 ಒಮ್ಮೆ Marks ಫೈಲ್ ಅನ್ನು ರಚಿಸಿದ ನಂತರ ಯಾವುದೇ ಎಕ್ಸೆಪ್ಶನ್ ಗಳು ಇರುವುದಿಲ್ಲ ಎಂದು ನಾವು ದೃಢಪಡಿಸಬಹುದು.
08:46 ಮತ್ತು “Inside finally block” ಪ್ರಿಂಟ್ ಆಗುತ್ತದೆ.
08:50 ಕ್ಲೀನ್-ಅಪ್ ಆಪರೇಶನ್, ಅಂದರೆ FileReader ಅಬ್ಜೆಕ್ಟ್ fr ಅನ್ನು ಮುಚ್ಚುವುದನ್ನು ಸಹ ಯಶಸ್ವಿಯಾಗಿ ಎಕ್ಸಿಕ್ಯೂಟ್ ಮಾಡಲಾಗಿದೆ.
08:58 ನಾವೀಗ ಈ ಟ್ಯುಟೋರಿಯಲ್ನ ಕೊನೆಗೆ ಬಂದಿದ್ದೇವೆ.
09:02 ಸಂಕ್ಷಿಪ್ತವಾಗಿ,
09:04 ಈ ಟ್ಯುಟೋರಿಯಲ್ ನಲ್ಲಿ ನಾವು:

ಎಕ್ಸೆಪ್ಶನ್ ಎಂದರೇನು, Checked ಮತ್ತು Unchecked ಎಕ್ಸೆಪ್ಶನ್ ಗಳು, try-catch ಬ್ಲಾಕ್ ಬಳಸಿ ಎಕ್ಸೆಪ್ಶನ್ ಗಳನ್ನು ನಿರ್ವಹಿಸುವುದು ಮತ್ತು finally ಬ್ಲಾಕ್ ಇವುಗಳ ಬಗ್ಗೆ ಕಲಿತೆವು.

09:17 ಅಸೈನ್ಮೆಂಟ್ ಗಾಗಿ, NullPointerException ಎನ್ನುವ ರನ್-ಟೈಮ್ ಎಕ್ಸೆಪ್ಷನ್ ಕುರಿತು ಕಲಿಯಿರಿ.
09:24 ಈ ಟ್ಯುಟೋರಿಯಲ್ನ Assignment ಲಿಂಕ್ನಲ್ಲಿ ಒದಗಿಸಿರುವ Demo.java ಎಂಬ ಹೆಸರಿನ ಜಾವಾ ಪ್ರೋಗ್ರಾಂ ಅನ್ನು ಅನುಸರಿಸಿ.
09:31 ನೀವು ಈ ಪ್ರೋಗ್ರಾಂ ಅನ್ನು ರನ್ ಮಾಡುವಾಗ ಎಕ್ಸೆಪ್ಶನ್ ಅನ್ನು ತೋರಿಸಲಾಗುತ್ತದೆ.
09:35 ಎಕ್ಸೆಪ್ಶನ್ ಗೆ ಕಾರಣವಾದ ಕೋಡ್ ಅನ್ನು ಗುರುತಿಸಿ.
09:40 try-catch ಬ್ಲಾಕ್ ಬಳಸಿ ಇದನ್ನು ಸರಿಪಡಿಸಿ.
09:43 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
09:52 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
10:04 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
10:15 ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
10:23 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ..

Contributors and Content Editors

Sandhya.np14