Difference between revisions of "Java/C3/Exception-Handling/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:01 || ಎಕ್ಸೆಪ್ಶನ್‌ ಹ್ಯಾಂಡ್ಲಿಂಗ್‌ ಕುರಿತ ಸ್ಪೋಕನ್‌...")
 
Line 14: Line 14:
 
||00:20
 
||00:20
 
|| ಇಲ್ಲಿ ನಾವು ಉಬಂಟು 16.04 ಒ.ಎಸ್, ಜೆ.ಡಿ.ಕೆ 1.8 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇವೆ.
 
|| ಇಲ್ಲಿ ನಾವು ಉಬಂಟು 16.04 ಒ.ಎಸ್, ಜೆ.ಡಿ.ಕೆ 1.8 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇವೆ.
 
  
 
|-
 
|-
Line 23: Line 22:
 
||00:39
 
||00:39
 
|| ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ.
 
|| ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ.
 
  
 
|-
 
|-

Revision as of 18:26, 5 April 2020

Time Narration
00:01 ಎಕ್ಸೆಪ್ಶನ್‌ ಹ್ಯಾಂಡ್ಲಿಂಗ್‌ ಕುರಿತ ಸ್ಪೋಕನ್‌ ಟ್ಯುಟೋರಿಯಲ್‌ಗೆ ಸ್ವಾಗತ.
00:06 ಈ ಟ್ಯುಟೋರಿಯಲ್‌ನಲ್ಲಿ ನಾವು ಎಕ್ಸೆಪ್ಶನ್‌ ಚೆಕ್ಡ್‌ ಮತ್ತು ಅನ್‌ಚೆಕ್ಡ್‌ ಎಕ್ಸೆಪ್ಶನ್ಸ್‌ ಅಂದರೇನು, ಟ್ರೈ-ಕ್ಯಾಚ್‌ ಬ್ಲಾಕ್‌ ಮತ್ತು ಫೈನಲಿ ಬ್ಲಾಕ್‌ ಬಳಸಿ ಎಕ್ಸೆಪ್ಶನ್‌ಗಳನ್ನು ನಿರ್ವಹಿಸುವುದನ್ನು ಕಲಿಯಲಿದ್ದೇವೆ.
00:20 ಇಲ್ಲಿ ನಾವು ಉಬಂಟು 16.04 ಒ.ಎಸ್, ಜೆ.ಡಿ.ಕೆ 1.8 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇವೆ.
00:32 ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
00:39 ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ.
00:45 ಎಕ್ಸೆಪ್ಶನ್‌ ಎನ್ನುವುದು ಅನಿರೀಕ್ಷಿತ ಘಟನೆಯಾಗಿದ್ದು, ಪ್ರೋಗ್ರಾಂ ಒಂದನ್ನು ಕಾರ್ಯಗತಗೊಳಿಸುವಾಗ ಇದು ಉಂಟಾಗುತ್ತದೆ.
00:52 ಇದು ಪ್ರೋಗ್ರಾಂನ ಸಾಮಾನ್ಯ ಕಾರ್ಯಕ್ಕೆ ಅಡ್ಡಿ ಉಂಟು ಮಾಡುತ್ತದೆ ಮತ್ತು ಅಸಾಮಾನ್ಯ ಮುಕ್ತಾಯದಲ್ಲಿ ಪರ್ಯವಸನಗೊಳ್ಳುತ್ತದೆ.
01:00 ಅವುಗಳ ಸಂಭವವನ್ನು ಆಧರಿಸಿ, ಎಕ್ಸೆಪ್ಶನ್‌ಗಳನ್ನು ಅನ್‌ಚೆಕ್ಡ್‌ ಎಕ್ಸೆಪ್ಶನ್‌ಗಳು ಮತ್ತು ಚೆಕ್ಡ್‌ ಎಕ್ಸೆಪ್ಶನ್‌ಗಳೆಂದು ವರ್ಗೀಕರಿಸಲಾಗಿದೆ.
01:08 ನಾವೀಗ ಎಕ್ಲಿಪ್ಸ್‌ ತೆರೆಯಲಿದ್ದೇವೆ ಮತ್ತು ExceptionDemo ಎನ್ನುವ ಹೊಸ ಪ್ರಾಜೆಕ್ಟ್‌ ತೆರೆಯಲಿದ್ದೇವೆ.
01:16 ಈ ಪ್ರಾಜೆಕ್ಟ್‌ ಒಳಗೆ, ಎಕ್ಸೆಪ್ಶನ್‌ ಹ್ಯಾಂಡ್ಲಿಂಗ್‌ ಅನ್ನು ತೋರಿಸಿ ಕೊಡಲು ಅಗತ್ಯ ಕ್ಲಾಸುಗಳನ್ನು ನಾವು ರಚಿಸಲಿದ್ದೇವೆ.
01:24 ನಾವು Marks ಎನ್ನುವ ಹೊಸ ಕ್ಲಾಸ್‌ ಅನ್ನು ರಚಿಸಲಿದ್ದೇವೆ.
01:28 ಈಗ Marks ಕ್ಲಾಸನ್ನು ಪ್ರತಿನಿಧಿಸಲು ಈ ಕೋಡ್‌ ಅನ್ನು ಟೈಪ್‌ ಮಾಡಿ.
01:34 ಈ ಪ್ರೋಗ್ರಾಂ, Marks ಅರೇಯಲ್ಲಿ ಶೇಖರಿಸಲಾಗಿರುವ 5 ವಿದ್ಯಾರ್ಥಿಗಳ ಅಂಕಗಳನ್ನು ಪ್ರಿಂಟ್ (ಮುದ್ರಿಸು) ಮಾಡುತ್ತದೆ.
01:41 ಈಗ ಪ್ರೋಗ್ರಾಂ ಅನ್ನು ರನ್‌ ಮಾಡೋಣ ಮತ್ತು ಔಟ್ಪುಟ್‌ ಅನ್ನು ದೃಢೀಕರಿಸೋಣ.
01:45 ಅರೇಯಲ್ಲಿರುವ ಮೌಲ್ಯಗಳು ಪ್ರಿಂಟ್‌ ಆಗುತ್ತಿರುವುದನ್ನು ನಾವು ಕಾಣಬಹುದು.
01:50 ಇದೇವೇಳೆ, ಅಸ್ತಿತ್ವದಲ್ಲಿರದ ಅರೇ ಎಲಿಮೆಂಟ್‌ ಅನ್ನು ಆಕ್ಸೆಸ್‌ ಮಾಡಲು ನಾವು ಪ್ರಯತ್ನಿಸಿದರೆ ಏನಾಗುತ್ತದೆ ಎಂಬುದನ್ನು ನಾವೀಗ ಪರಿಶೀಲಿಸೋಣ.
01:57 ಈಗ ಈ ಕೋಡ್‌ ಅನ್ನು ಟೈಪ್‌ ಮಾಡಿ.
02:00 ನಮ್ಮ ಅರೇಯಲ್ಲಿ 5 ಎಲಿಮೆಂಟ್‌ಗಳು ಮಾತ್ರ ಇವೆ ಎಂಬುದು ನಮಗೆ ತಿಳಿದಿದೆ.
02:04 ಆದರೆ ಈ ಸ್ಟೇಟ್ಮೆಂಟ್‌ನಲ್ಲಿ, ನಾವು ಅಸ್ತಿತ್ವದಲ್ಲಿರದ index 50 ಎಲಿಮೆಂಟ್ನಲ್ಲಿ ಆಕ್ಸೆಸ್ ಮಾಡಲು ಯತ್ನಿಸುತ್ತಿದ್ದೇವೆ.
02:12 ಈ ಪ್ರೋಗ್ರಾಂ ಅನ್ನು ನಾವೀಗ ರನ್‌ ಮಾಡೋಣ.
02:15 ಈ ಪ್ರೋಗ್ರಾಂ, ಸಾಲು ಸಂಖ್ಯೆ 7ರಲ್ಲಿ “ArrayIndexOutOfBoundsException“ ಎಂಬ ಎರರ್ (ದೋಷ) ಸಂದೇಶದೊಂದಿಗೆ ಕೊನೆಗೊಳ್ಳುವುದನ್ನು ನಾವು ನೋಡಬಹುದು.
02:25 ಈ ಎರರ್ ಸಂದೇಶವು, ಎಕ್ಸೆಪ್ಶನ್‌ನ ವಿಧ, ಎಲ್ಲಿ ಇದು ಉಂಟಾಯಿತು ಮತ್ತು ಇತರ ವಿವರಗಳು ಮುಂತಾದ ಎಕ್ಸೆಪ್ಶನ್‌ನ ವಿವರಗಳನ್ನು ಸೂಚಿಸುತ್ತದೆ.
02:35 ಎರರ್‌ನ ನಂತರ ಪ್ರೋಗ್ರಾಂ ನಿಂತು ಹೋಗಿರುವುದರಿಂದ ಪ್ರಿಂಟ್‌ ಸ್ಟೇಟ್ಮೆಂಟ್‌ ಎಕ್ಸಿಕ್ಯೂಟ್ (ಕಾರ್ಯಗತ) ಆಗಿಲ್ಲ ಎಂಬುದನ್ನು ಗಮನಿಸಿ.
02:42 ಇದು ಅನ್‌ಚೆಕ್ಡ್‌ ಎಕ್ಸೆಪ್ಶನ್‌ನ ಉದಾಹರಣೆಯಾಗಿದೆ.
02:46 ಅನ್‌ಚೆಕ್ಡ್‌ ಎಕ್ಸೆಪ್ಶನ್‌ಗಳನ್ನು ರನ್‌ಟೈಂ ಎಕ್ಸೆಪ್ಶನ್‌ ಎಂದು ಕರೆಯಲಾಗುತ್ತದೆ, ಏಕೆಂದರೆ ಇದನ್ನು ಕಾರ್ಯಗತಗೊಳಿಸುವ ವೇಳೆ ಮಾತ್ರವೇ ಪರೀಕ್ಷಿಸಲಾಗುತ್ತದೆ.
02:54 ಪ್ರೋಗ್ರಾಮಿಂಗ್‌ ಎರರ್‌ಗಳು ಮತ್ತು ಸಂಖ್ಯೆಯೊಂದನ್ನು ಸೊನ್ನೆಯಿಂದ ಭಾಗಿಸುವುದು ಮತ್ತು ಅಸ್ತಿತ್ವದಲ್ಲಿರದ ಅರೇ ಎಲಿಮೆಂಟ್‌ ಅನ್ನು ಆಕ್ಸೆಸ್‌ ಮಾಡುವುದು ಮುಂತಾದ ಲಾಜಿಕಲ್‌ ಎರರ್‌ಗಳನ್ನು ಇವು ನಿರ್ವಹಿಸುತ್ತವೆ.
03:07 ಈಗ ಟ್ರೈ ಕ್ಯಾಚ್‌ ಬ್ಲಾಕ್‌ ಬಳಸಿ ಎಕ್ಸೆಪ್ಶನ್‌ ಒಂದನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಕಲಿಯೋಣ.
03:13 ಟ್ರೈ ಬ್ಲಾಕ್‌ನ ಒಳಗೆ ಇರುವ ಕೋಡ್‌ನ ಈ ಭಾಗವು ಒಂದು ಎಕ್ಸೆಪ್ಶನ್‌ ಅನ್ನು ಗಮನಕ್ಕೆ ತರಬಹುದು.
03:19 ಅನುರೂಪವಾದ ಕ್ಯಾಚ್‌ ಬ್ಲಾಕ್‌, ಅಬ್ಜೆಕ್ಟ್‌ e ಯಲ್ಲಿ ಎಕ್ಸೆಪ್ಶನ್ನ ವಿವರಗಳನ್ನು ಪಡೆಯಬಹುದು.
03:26 ಕ್ಯಾಚ್‌ ಬ್ಲಾಕ್‌ನ ಒಳಗೆ, ಎರರ್ದ ಸಂದೇಶಗಳನ್ನು ತೋರಿಸಲು ಅಥವಾ ಎರರ್ವನ್ನು ಸರಿಪಡಿಸಿಕೊಳ್ಳಲು ನಾವು ಕೋಡ್‌ ಅನ್ನು ಬರೆಯಬಹುದು.
03:34 ನಾವೀಗ ಎಕ್ಲಿಪ್ಸ್ ನತ್ತ ಸಾಗೋಣ.
03:37 ಮೊದಲಿಗೆ, ಈ ರೀತಿಯ ಎಕ್ಸೆಪ್ಶನ್‌ ಉಂಟು ಮಾಡಿರುವ ಕೋಡ್‌ನ ಸುತ್ತ ಟ್ರೈ ಬ್ಲಾಕ್‌ ಒಂದನ್ನು ಸೇರಿಸೋಣ.
03:44 ನಾವೀಗ ಅನುರೂಪವಾದ ಕ್ಯಾಚ್‌ ಬ್ಲಾಕ್‌ ಅನ್ನು ಸೇರಿಸೋಣ.
03:48 ಇದಕ್ಕಾಗಿ ಈ ಕೋಡ್‌ ಅನ್ನು ಟೈಪ್‌ ಮಾಡಿ.
03:51 ನಾವಿಲ್ಲಿ ಕಸ್ಟಮ್‌ ಮೆಸ್ಸೆಜ್‌ “Array Overflow Exception occurred” ಅನ್ನು ಪ್ರಿಂಟ್‌ ಮಾಡಲಿದ್ದೇವೆ.
03:57 ಆವರಣ ಚಿಹ್ನೆಯ ಒಳಗೆ ನಾವು ArrayIndexOutOfBoundsException ನ ಇನ್ಸ್ಟೆನ್ಸ್ (ದೃಷ್ಟಾಂತ) ರಚಿಸಿದ್ದೇವೆ.
04:05 ಹೀಗಾಗಿ ಈ ಬ್ಲಾಕ್‌, ArrayIndexOutOfBoundsException ಪ್ರಕಾರದ ಎಕ್ಸೆಪ್ಶನ್ಗಳನ್ನು ಪತ್ತೆ ಮಾಡಬಹುದು.
04:11 ನಾವೀಗ ಪ್ರೋಗ್ರಾಂ ಅನ್ನು ರನ್‌ ಮಾಡೋಣ.
04:14 ಎರರ್ ಸಂದೇಶ ಪ್ರಿಂಟ್‌ ಆಗುವುದನ್ನು ನಾವು ನೋಡಬಹುದು.
04:18 ಆದರೆ ಈ ಬಾರಿ ಮಾರ್ಕ್ಸ್‌ ಅರೇ ಯ ಪ್ರಿಂಟಿಂಗ್‌ ಸಹ ಎಕ್ಸಿಕ್ಯೂಟ್ ಮಾಡಲಾಗಿದೆ ಎಂಬುದನ್ನು ಗಮನಿಸಿ.
04:24 ಈ ರೀತಿ ನಾವು ಎಕ್ಸೆಪ್ಶನ್‌ಗಳನ್ನು ನಿರ್ವಹಿಸಬಹುದು.
04:27 ಮುಂದೆ, ಅನೇಕ ಕ್ಯಾಚ್‌ ಬ್ಲಾಕ್‌ಗಳನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ.
04:32 ಬ್ಲಾಕ್‌ ಒಂದು ಬೇರೆ ಬೇರೆ ಪ್ರಕಾರದ ಎಕ್ಸೆಪ್ಶನ್‌ಗಳನ್ನು ತೋರಿಸಿದಾಗ ನಾವು ಅವುಗಳನ್ನು ಬಳಸಬಹುದು.
04:38 ಟ್ರೈ ಬ್ಲಾಕ್‌ ಒಳಗೆ ಈ ಕೋಡ್‌ ಅನ್ನು ಟೈಪ್‌ ಮಾಡಿ.
04:42 ಈ ಕೋಡ್‌ನ ಸಾಲು ಅರೇ ಎಲಿಮೆಂಟ್‌ ಅನ್ನು ಸೊನ್ನೆಯಿಂದ ಭಾಗಿಸುತ್ತದೆ, ಏಕೆಂದರೆ a ಯ ಮೌಲ್ಯವು ಸೊನ್ನೆ ಆಗಿದೆ.
04:49 ಹೀಗೆ ಮೊದಲಿಗೆ ArithmeticException ಅನ್ನು ತೋರಿಸಲಾಗುತ್ತದೆ.
04:53 ArithmeticException ನಿರ್ವಹಿಸುವುದಕ್ಕಾಗಿ ನಾವೀಗ ಇನ್ನೊಂದು ಕ್ಯಾಚ್‌ ಬ್ಲಾಕ್‌ ಅನ್ನು ಸೇರಿಸೋಣ.
04:58 ಇದಕ್ಕಾಗಿ ಅಸ್ತಿತ್ವದಲ್ಲಿರುವ ಕ್ಯಾಚ್‌ ಬ್ಲಾಕ್‌ನ ನಂತರ ಈ ಕೋಡ್‌ ಅನ್ನು ಟೈಪ್‌ ಮಾಡಿ.
05:03 ನಾವೀಗ ಇನ್ನೊಮ್ಮೆ ಪ್ರೋಗ್ರಾಂ ಅನ್ನು ರನ್‌ ಮಾಡೋಣ.
05:06 ಈ ಬಾರಿ "Arithmetic Exception occurred" ಎರರ್‌ ಸಂದೇಶವು ಪ್ರಿಂಟ್‌ ಆಗುತ್ತದೆ, ಏಕೆಂದರೆ ನಾವಿದನ್ನು ಮೊದಲೇ ಪತ್ತೆ ಮಾಡಿದ್ದೇವೆ.
05:13 ಟ್ರೈ ಕ್ಯಾಚ್‌ ಬ್ಲಾಕ್‌ನ ಹೊರಗಿನ ಕೋಡ್‌ನ ಉಳಿದ ಭಾಗವು ಎಕ್ಸಿಕ್ಯೂಟ್ ಆಗುತ್ತದೆ.
05:19 ನಂತರ ಚೆಕ್ಡ್‌ ಎಕ್ಸೆಪ್ಶನ್‌ಗಳ ಕುರಿತು ನೋಡೋಣ.
05:23 ಚೆಕ್ಡ್‌ ಎಕ್ಸೆಪ್ಶನ್‌ಗಳನ್ನು ಕಂಪೈಲ್‌ ಟೈಂನಲ್ಲಿ ಪರೀಕ್ಷಿಸಲಾಗುತ್ತದೆ.
05:27 ಹೀಗಾಗಿ ಪ್ರೋಗ್ರಾಂ ಒಂದನ್ನು ರನ್‌ ಮಾಡುವ ಮೊದಲೇ ಇವುಗಳನ್ನು ನಿರ್ವಹಿಸಬೇಕು.
05:31 ಉದಾಹರಣೆಗೆ: ಅಸ್ತಿತ್ವದಲ್ಲಿರದ ಫೈಲ್ ಒಂದನ್ನು ಆಕ್ಸೆಸ್ ಮಾಡುವುದು ಅಥವಾ ನೆಟ್ವರ್ಕ್ ಡೌನ್ ಆಗಿರುವಾಗ ನೆಟ್ವರ್ಕ್ ಸಿಸ್ಟಂ ಅನ್ನು ಆಕ್ಸೆಸ್ ಮಾಡುವುದು.
05:41 ಈಗ ಎಕ್ಲಿಪ್ಸ್ ನತ್ತ ಸಾಗೋನ ಮತ್ತು ಹೊಸ ಕ್ಲಾಸ್ MarksFile ಅನ್ನು ರಚಿಸೋಣ.
05:47 ನಾವೀಗ ಮೇನ್ ಮೆಥಡ್ ಅನ್ನು ಸೇರಿಸೋಣ.
05:50 ನಾವೀಗ ಕಂಪ್ಯೂಟರ್ ನಲ್ಲಿರುವ ಫೈಲ್ ಒಂದನ್ನು ರೀಡ್ ಮಾಡಬೇಕು.
05:54 ಇದಕ್ಕಾಗಿ ಈ ಕೋಡ್ ಟೈಪ್ ಮಾಡಿ.
05:57 ಇಲ್ಲಿ FileReader ಅಬ್ಜೆಕ್ಟ್ fr ಅನ್ನು null ಆಗಿ ಇನಿಶಿಯಲೈಸ್ (ಅನುಸ್ಥಾಪನೆ) ಮಾಡಲಾಗಿದೆ.
06:03 FileReader ಅಬ್ಜೆಕ್ಟ್ ಅನ್ನು, ಒಂದು ನಿರ್ದಿಷ್ಟ ಫೈಲ್ ಆಕ್ಸೆಸ್ ಮತ್ತು ರೀಡ್ ಮಾಡಲು ಬಳಸಲಾಗುತ್ತದೆ.
06:08 ಎಕ್ಲಿಪ್ಸ್ ಒಂದು ಎರರ್ ತೋರಿಸುತ್ತದೆ.
06:11 ಈ ಎರರ್ ಸರಿಪಡಿಸಲು, ಇದರ ಮೇಲೆ ಕ್ಲಿಕ್ ಮಾಡಿ ಮತ್ತು import FileReader java dot io ಮೇಲೆ ಡಬಲ್ ಕ್ಲಿಕ್ ಮಾಡಿ.
06:19 FileReader ಕ್ಲಾಸ್ ಅನ್ನು java dot io package ನಿಂದ ಇಂಪೋರ್ಟ್ ಮಾಡಲಾಗುತ್ತದೆ.
06:25 ಮುಂದಿನ ಟ್ಯುಟೋರಿಯಲ್ನಲ್ಲಿ ನಾವು ಪ್ಯಾಕೇಜ್ ಮತ್ತು ಇದರ ಬಳಕೆಯ ಕುರಿತು ವಿವರವಾಗಿ ಕಲಿಯಲಿದ್ದೇವೆ.
06:31 ಹೋಂ ಫೋಲ್ಡರ್ನಲ್ಲಿರುವ Marks ಎಂಬ ಫೈಲ್ ಅನ್ನು fr ಗೆ ಆಕ್ಸೆಸ್ ಮಾಡಲು ಅವಕಾಶ ನೀಡಲು, ಈ ಕೋಡ್ ಅನ್ನು ಟೈಪ್ ಮಾಡಿ.
06:40 ಇಲ್ಲಿ ತೋರಿಸಿರುವ ಪಾತ್ ಅನ್ನು, ನಿಮ್ಮ ಸಿಸ್ಟಂನ ಹೋಂ ಫೋಲ್ಡರ್ನಲ್ಲಿ ಇರುವ ಪಾತ್ ನಿಂದ ಬದಲಾಯಿಸಬೇಕು.
06:46 ಈಗ ಎರರ್ ಕಾಣಿಸಿಕೊಳ್ಳುತ್ತದೆ. ಈ ಕೋಡ್ನ ಸಾಲು FileNotFoundException ರಚಿಸಬಹುದು ಎಂಬುದನ್ನು ಇದು ಸೂಚಿಸುತ್ತದೆ.
06:55 error ಮೇಲೆ ಕ್ಲಿಕ್ ಮಾಡಿ ಮತ್ತು Surround with try/catch ಮೇಲೆ ಡಬಲ್ ಕ್ಲಿಕ್ ಮಾಡಿ.
07:00 ಈ ಎರರ್ ಸರಿಪಡಿಸಲು ಎಕ್ಲಿಪ್ಸ್ ಸ್ವಯಂಚಾಲಿತವಾಗಿ ಟ್ರೈ ಕ್ಯಾಚ್ ಬ್ಲಾಕ್ ಅನ್ನು ಸೇರಿಸುವುದನ್ನು ನಾವು ನೋಡಬಹುದು.
07:08 ಹೀಗಾಗಿ ಇದು ಚೆಕ್ಡ್ ಎಕ್ಸೆಪ್ಶನ್ ಆಗಿದೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬಹುದು.
07:12 ನಂತರ, ಫೈನಲಿ ಬ್ಲಾಕ್ ಅನ್ನು ಬಳಸುವ ಕುರಿತು ನೋಡೋಣ.
07:16 ಈ ಕೋಡ್ ಅನ್ನು ಟೈಪ್ ಮಾಡಿ.
07:18 ಫೈನಲಿ ಬ್ಲಾಕ್ ಸಾಮಾನ್ಯವಾಗಿ ಟ್ರೈ-ಕ್ಯಾಚ್ ಬ್ಲಾಕ್ ಅನ್ನು ಅನುಸರಿಸುತ್ತದೆ.
07:22 ಎಕ್ಸೆಪ್ಶನ್ ಆಗಿದ್ದರೂ, ಆಗದೇ ಇದ್ದರೂ, ಈ ಬ್ಲಾಕ್ನ ಒಳಗೆ ಇರುವ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಇದು ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಹೊಂದಿರುತ್ತದೆ.
07:32 ನಾವೀಗ ಫೈನಲಿ ಬ್ಲಾಕ್ ಒಳಗೆ ಫೈಲ್ ರೆಫರನ್ಸ್ ಅನ್ನು ಮುಚ್ಚೋಣ.
07:37 ಇದಕ್ಕಾಗಿ fr dot close ಎಂದು ಟೈಪ್ ಮಾಡಿ.
07:40 ಈಗ ಎಕ್ಲಿಪ್ಸ್, IOException ಒಂದನ್ನು ತೋರಿಸಲಿದೆ ಎಂದು ಇದು ಸೂಚಿಸುತ್ತದೆ.
07:45 ಹೀಗಾಗಿ error ಮೇಲೆ ಕ್ಲಿಕ್ ಮಾಡಿ ಮತ್ತು Surround with try/catch ಮೇಲೆ ಡಬಲ್ ಕ್ಲಿಕ್ ಮಾಡಿ.
07:51 ಈಗ ಪ್ರೋಗ್ರಾಂ ಅನ್ನು ರನ್ ಮಾಡೋಣ.
07:54 ನಾವೀಗ FileNotFoundException ಸಂದೇಶವು ಪ್ರಿಂಟ್ ಆಗಿರುವುದನ್ನು ನೋಡಬಹುದು.
07:59 ಏಕೆಂದರೆ, ನಮ್ಮ ಹೋಂ ಫೋಲ್ಡರ್ ನಲ್ಲಿ ನಾವು Marks ಹೆಸರಿನ ಫೈಲ್ ಹೊಂದಿಲ್ಲ.
08:04 fr ಇನ್ನೂ ನಲ್ ಮೌಲ್ಯವನ್ನು ಉಲ್ಲೇಖಿಸುತ್ತಿರುವುದರಿಂದ ನಾವು NullPointerException ಅನ್ನು ನೋಡಬಹುದು.
08:12 ಆದರೆ ಫೈನಲಿ ಬ್ಲಾಕ್ ಒಳಗೆ ಪ್ರಿಂಟ್ ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗುವುದನ್ನು ಸಹ ನಾವು ನೋಡಬಹುದು.
08:18 ನಾವೀಗ Marks ಟೆಕ್ಸ್ಟ್ ಫೈಲ್ ಅನ್ನು ನಮ್ಮ ಹೋಂ ಫೋಲ್ಡರ್ ನಲ್ಲಿ ರಚಿಸೋಣ.
08:23 ನೀವು ವಿಂಡೋಸ್ ಬಳಕೆದಾರರು ಆಗಿದ್ದರೆ, ಟೆಕ್ಸ್ಟ್ ಫೈಲ್ ಒಂದನ್ನು ನಿಮ್ಮ ಲೋಕಲ್ ಡ್ರೈವ್ ನಲ್ಲಿ ರಚಿಸಿ ಮತ್ತು ಇದರ ಪಾತ್ ಅನ್ನು ಉಲ್ಲೇಖಿಸಿ.
08:29 ಉದಾಹರಣೆಗೆ ಇದನ್ನು D:\\Marks.txt ಆಗಿ ಸೂಚಿಸಬಹುದು.
08:37 ನಾವೀಗ ಪ್ರೋಗ್ರಾಂ ಅನ್ನು ಇನ್ನೊಮ್ಮೆ ರನ್ ಮಾಡೋಣ.
08:40 ಒಮ್ಮೆ Marks ಫೈಲ್ ಅನ್ನು ರಚಿಸಿದ ನಂತರ ಯಾವುದೇ ಎಕ್ಸೆಪ್ಶನ್ಗಳು ಇರುವುದಿಲ್ಲ ಎಂಬುದನ್ನು ನಾವು ದೃಢಪಡಿಸಬಹುದು.
08:46 ಮತ್ತು “Inside finally block” ಪ್ರಿಂಟ್ ಆಗುತ್ತದೆ.
08:50 ಕ್ಲೀನಪ್ ಅಪರೇಶನ್, ಅಂದರೆ FileReader ಅಬ್ಜೆಕ್ಟ್ fr ಅನ್ನು ಮುಚ್ಚುವುದನ್ನು ಯಶಸ್ವಿಯಾಗಿ ಎಕ್ಸಿಕ್ಯೂಟ್ ಮಾಡಲಾಗಿದೆ.
08:58 ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಯ ಹಂತಕ್ಕೆ ಬಂದಿದ್ದೇವೆ.
09:02 ಈಗ ಸಂಕ್ಷೇಪಿಸೋಣ.
09:04 ಈಗ ಸಂಕ್ಷೇಪಿಸೋಣ.
09:17 ಈ ಟ್ಯುಟೋರಿಯಲ್ನಲ್ಲಿ ನಾವು, ಎಕ್ಸೆಪ್ಶನ್ ಎಂದರೇನು, ಚೆಕ್ಡ್ ಮತ್ತು ಅನ್ಚೆಕ್ಡ್ ಎಕ್ಸೆಪ್ಶನ್ಗಳು, ಟ್ರೈ-ಕ್ಯಾಚ್ ಬ್ಲಾಕ್ ಮತ್ತು ಫೈನಲಿ ಬ್ಲಾಕ್ ಬಳಸಿ ಎಕ್ಸೆಪ್ಶನ್ಗಳನ್ನು ನಿರ್ವಹಿಸುವುದನ್ನು ಕಲಿತೆವು.
09:24 ಈ ಟ್ಯುಟೋರಿಯಲ್ನ ಅಸೈನ್ಮೆಂಟ್ ಲಿಂಕ್ನಲ್ಲಿ ಒದಗಿಸಿರುವ Demo.java ಎಂಬ ಹೆಸರಿನ ಜಾವಾ ಪ್ರೋಗ್ರಾಂ ಅನ್ನು ಅನುಸರಿಸಿ.
09:31 ನೀವು ಈ ಪ್ರೋಗ್ರಾಂ ಅನ್ನು ರನ್ ಮಾಡುವಾಗ ಎಕ್ಸೆಪ್ಶನ್ ಅನ್ನು ತೋರಿಸಲಾಗುತ್ತದೆ.
09:35 ಎಕ್ಸೆಪ್ಶನ್ಗೆ ಕಾರಣವಾದ ಕೋಡ್ ಅನ್ನು ಗುರುತಿಸಿ.
09:40 ಟ್ರೈ-ಕ್ಯಾಚ್ ಬ್ಲಾಕ್ ಬಳಸಿ ಇದನ್ನು ಸರಿಪಡಿಸಿ.
09:43 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
09:52 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
10:04 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
10:15 ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
10:23 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14