Java/C3/Abstract-Classes/Kannada

From Script | Spoken-Tutorial
Revision as of 16:35, 4 April 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಅಬ್ಸ್ಟ್ರಾಕ್ಟ್ ಕ್ಲಾಸುಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು, ಅಬ್ಸ್ಟ್ರಾಕ್ಟ್ ಮೆಥಡ್ ಗಳು ಮತ್ತು ಕಾಂಕ್ರೀಟ್ ಮೆಥಡ್ ಗಳು
00:12 ಅಬ್ಸ್ಟ್ರಾಕ್ಟ್ ಕ್ಲಾಸುಗಳು ಮತ್ತು ಕಾಂಕ್ರೀಟ್ ಕ್ಲಾಸುಗಳು ಮತ್ತು
00:16 ಅಬ್ಸ್ಟ್ರಾಕ್ಟ್ ಕ್ಲಾಸುಗಳನ್ನು ಹೇಗೆ ಬಳಸುವುದು ಎಂಬುದಾಗಿ ಕಲಿಯಲಿದ್ದೇವೆ.
00:18 ಈ ಟ್ಯುಟೋರಿಯಲ್ ಗಾಗಿ ನಾನು:

ಉಬಂಟು 12.04 ಜೆ.ಡಿ.ಕೆ 1.7 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇನೆ.

00:28 ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
00:36 ನೀವು ಜಾವಾದಲ್ಲಿ ಸಬ್ ಕ್ಲಾಸಿಂಗ್ ನ ಜ್ಞಾನವನ್ನು ಸಹ ಹೊಂದಿರಬೇಕು.
00:40 ಇಲ್ಲದಿದ್ದಲ್ಲಿ ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗೆ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್‌ಗೆ ಭೇಟಿ ನೀಡಿ.
00:46 ಮೊದಲಿಗೆ ನಾವು ಅಬ್ಸ್ಟ್ರಾಕ್ಟ್ ಮೆಥಡ್ ಅನ್ನು ನೋಡೋಣ.
00:50 ಅಬ್ಸ್ಟ್ರಾಕ್ಟ್ ಮೆಥಡ್ ಎಂದರೆ ಇಂಪ್ಲೆಮೆಂಟೇಶನ್ ಇಲ್ಲದೆ ಘೋಷಿಸಿದ ಮೆಥಡ್ ಆಗಿದೆ.
00:55 ಅಬ್ಸ್ಟ್ರಾಕ್ಟ್ ಕೀವರ್ಡ್ ಗಳನ್ನು ಬಳಸಿ ಇದನ್ನು ಘೋಷಿಸಲಾಗುತ್ತದೆ.
00:59 ಈ ಮೆಥಡ್‌ಗೆ ತೆರೆಯುವ ಮತ್ತು ಮುಚ್ಚುವ ಪ್ರಕ್ಷೇಪ ಚಿಹ್ನೆ ಇರಬಾರದು.
01:04 ಅಬ್ಸ್ಟ್ರಾಕ್ಟ್ ಕ್ಲಾಸ್ ನ ಬಳಕೆಯನ್ನು ನಾವು ಮಾದರಿ ಪ್ರೋಗ್ರಾಂ ಮೂಲಕ ಕಲಿಯೋಣ.
01:09 ನಾವೀಗ ಎಕ್ಲಿಪ್ಸ್ ನತ್ತ ಸಾಗೋಣ ಮತ್ತು AbstractDemo ಎನ್ನುವ ಹೊಸ ಪ್ರಾಜೆಕ್ಟ್ ರಚಿಸೋಣ.
01:16 ಈ ಪ್ರಾಜೆಕ್ಟ್ ಒಳಗೆ, ಅಬ್ಸ್ಟ್ರಾಕ್ಟ್ ಕ್ಲಾಸಿನ ಬಳಕೆಯನ್ನು ತೋರಿಸಲು ಅಗತ್ಯ ಕ್ಲಾಸುಗಳನ್ನು ರಚಿಸೋಣ.
01:24 ಈಗ src ಫೋಲ್ಡ್ ಮೇಲೆ ರೈಟ್ ಕ್ಲಿಕ್ ಮಾಡೊ ಮತ್ತು New > Class ಮೇಲೆ ಕ್ಲಿಕ್ ಮಾಡಿ.
01:30 ಕ್ಲಾಸಿನ ಹೆಸರನ್ನು Person ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
01:35 ನಾವೀಗ ಪರ್ಸನ್ ನ ಹೆಸರು ಮತ್ತು ಪ್ರಾಯವನ್ನು ಪ್ರತಿನಿಧಿಸಲು ಫೀಲ್ಡ್ ಗಳನ್ನು ಸೇರಿಸಲಿದ್ದೇವೆ.

ಟೈಪ್ ಮಾಡಿ: String name ಅರ್ಧವಿರಾಮ ಚಿಹ್ನೆ

01:44 ಅಲ್ಲದೆ ಈ ರೀತಿಯೂ ಟೈಪ್ ಮಾಡಿ: int age ಅಲ್ಪವಿರಾಮ ಚಿಹ್ನೆ.
01:48 ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate constructor using fields ಆರಿಸಿ.
01:55 ರಚಿಸಿದ ಕೋಡ್ ನಿಂದ super ಕೀವರ್ಡ್ ಅನ್ನು ಅಳಿಸಿ.
01:59 ನೇಮ್ ಮತ್ತು ಏಜ್ ಫೀಲ್ಡ್ ಗಳ ಮೌಲ್ಯಗಳನ್ನು ಕನ್ಸ್ಟ್ರಕ್ಟರ್ ಇನಿಶಿಯಲೈಸ್ (ಅನುಸ್ಥಾಪನೆ) ಮಾಡಬಹುದು.
02:05 ನಂತರ ನಾವು ಕಾಂಕ್ರೀಟ್ ಮೆಥಡ್ ಅನ್ನು ನೋಡಬಹುದು.
02:08 ಕಾಂಕ್ರೀಟ್ ಮೆಥಡ್ ಅನ್ನು ನಾವು ಸಂಪೂರ್ಣವಾಗಿ ಸುರುಳಿಯಾಕಾರದ ಆವರಣ ಚಿಹ್ನೆಗಳೊಳಗೆ ಕಾರ್ಯಗತಗೊಳಿಸಬಹುದು.
02:14 ಹೆಸರು ಮತ್ತು ಪ್ರಾಯವನ್ನು ಪ್ರಿಂಟ್ (ಮುದ್ರಿಸು) ಮಾಡುವುದಕ್ಕಾಗಿ ಈ ಕ್ಲಾಸ್ ಗೆ ನಾವು ಕಾಂಕ್ರೀಟ್ ಮೆಥಡ್ ಸೇರಿಸಲಿದ್ದೇವೆ.
02:21 ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೋಡ್ ಅನ್ನು ಟೈಪ್ ಮಾಡಿ.
02:25 ಇಲ್ಲಿ ವಿವರಿಸಿರುವ showBasicDetails() ವಿಧಾನವು ಕಾಂಕ್ರೀಟ್ ಮೆಥಡ್‌ ಗೆ ಉದಾಹರಣೆಯಾಗಿದೆ.
02:32 ಈ ಮೆಥಡ್ ಅನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಗಿದೆ ಎಂಬುದನ್ನು ಗಮನಿಸಿ.
02:36 ನಾವೀಗ ಈ ಕ್ಲಾಸ್‌ ಗೆ ಅಬ್ಸ್ಟ್ರಾಕ್ಟ್ ಮೆಥಡ್ ಅನ್ನು ಸೇರಿಸಲಿದ್ದೇವೆ.
02:41 ಹೀಗಾಗಿ ಈ ರೀತಿ ಟೈಪ್ ಮಾಡಿ: public void showDetails( ) ಅರ್ಧವಿರಾಮ ಚಿಹ್ನೆ.
02:46 ನಾವು ಇನ್ನೂ abstract ಕೀವರ್ಡ್ ಅನ್ನು ಇನ್ನೂ ಸೇರಿಸದೆ ಇರುವುದರಿಂದ ಇಲ್ಲಿ ಎರರ್ (ದೋಷ) ಕಂಡುಬರುತ್ತದೆ.
02:51 ಹೀಗಾಗಿ ಈಗ abstract ಕೀವರ್ಡ್ ಅನ್ನು ಸೇರಿಸಿ.
02:55 ನಾವೀಗ ಇನ್ನೊಂದು ದೋಷವನ್ನು ಕಾಣಬಹುದು.
02:58 ಇದು ಏಕೆಂದರೆ ಅಬ್ಸ್ಟ್ರಾಕ್ಟ್ ಮೆಥಡ್ ಗಳನ್ನು ಅಬ್ಸ್ಟ್ರಾಕ್ಟ್ ಕ್ಲಾಸುಗಳಿಗೆ ಮಾತ್ರ ಸೇರಿಸಬಹುದು.
03:03 ಹೀಗಾಗಿ ಅಬ್ಸ್ಟ್ರಾಕ್ಟ್ ಕ್ಲಾಸ್ ಮಾಡುವುದಕ್ಕಾಗಿ ಪರ್ಸನ್ ಕ್ಲಾಸ್ ಗೆ abstract ಕೀವರ್ಡ್ ಅನ್ನು ಸೇರಿಸಿ.
03:10 ಇಲ್ಲಿ ತೋರಿಸಲಾಗಿರುವ ಕ್ಲಾಸ್ ಪರ್ಸನ್, ಅಬ್ಸ್ಟ್ರಾಕ್ಟ್ ಕ್ಲಾಸ್ ಆಗಿದೆ.
03:15 ಇದು showDetails() ಎನ್ನುವ ಅಬ್ಸ್ಟ್ರಾಕ್ಟ್ ಮೆಥಡ್ ಹೊಂದಿರುತ್ತದೆ.
03:15 ಇಲ್ಲಿರುವ ಚಿತ್ರವು ಇನ್ ಹೆರಿಟೆನ್ಸ್ ರಿಲೇಶನ್ ಅನ್ನು ಪ್ರತಿನಿಧಿಸುತ್ತದೆ.
03:20 ಇಲ್ಲಿರುವ ಚಿತ್ರವು ಇನ್ಹೆರಿಟೆನ್ಸ್ ರಿಲೇಶನ್ ಅನ್ನು ಪ್ರತಿನಿಧಿಸುತ್ತದೆ.
03:24 ಇಲ್ಲಿ ಪರ್ಸನ್ ಕ್ಲಾಸ್, ಒಂದು ಅಬ್ಸ್ಟ್ರಾಕ್ಟ್ ಕ್ಲಾಸ್ ಆಗಿದೆ.
03:29 ಎಂಪ್ಲೋಯೀ ಕ್ಲಾಸ್ ಮತ್ತು ಸ್ಟೂಡೆಂಟ್ ಕ್ಲಾಸ್ ಗಳು ಇಲ್ಲಿ ಪರ್ಸನ್ ಕ್ಲಾಸ್ ನ ಸ್ಟೂಡೆಂಟ್ ಕ್ಲಾಸ್ ಮತ್ತು ಸಬ್ ಕ್ಲಾಸ್ ಗಳು ಆಗಿವೆ.
03:35 ಈ ಸಬ್ ಕ್ಲಾಸ್ ಗಳು ತಮ್ಮದೇ ಆದ ವಿಭಿನ್ನ ಅಳವಡಿಕೆಗಳನ್ನು ಒದಗಿಸುತ್ತವೆ.
03:40 ಇವುಗಳನ್ನು ಪರ್ಸನ್ ಕ್ಲಾಸ್ ನಲ್ಲಿ ಇರುವ showDetails( ) ವಿಧಾನದ ಮೂಲಕ ಮಾಡಬಹುದು.
03:45 ಉದಾಹರಣೆಗೆ: ಎಂಪ್ಲೋಯೀ ಕ್ಲಾಸ್ ನ ShowDetails() ಮೆಥಡ್, ಎಂಪ್ಲೋಯೀ ಐ.ಡಿ ಮತ್ತು ಸ್ಯಾಲರಿಯನ್ನು ಪ್ರಿಂಟ್ ಮಾಡುತ್ತದೆ. ಇದೇ ವೇಳೆ ಸ್ಟೂಡೆಂಟ್ ಕ್ಲಾಸ್ ನ ShowDetails() ಮೆಥಡ್, ಸ್ಟೂಡೆಂಡ್ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ಅನ್ನು ಪ್ರಿಂಟ್ ಮಾಡುತ್ತದೆ.
04:01 ನಂತರ default package ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಎಂಪ್ಲೋಯೀ ಎನ್ನುವ ಇನ್ನೊಂದು ಕ್ಲಾಸ್ ಅನ್ನು ರಚಿಸಿ.
04:07 ಈಗ, ಪರ್ಸನ್ ಕ್ಲಾಸ್ ನ ಸಬ್ ಕ್ಲಾಸ್ ಮಾಡಲು ಈ ರೀತಿ ಟೈಪ್ ಮಾಡಿ: extends Person.
04:14 ಈಗ ಎಕ್ಲಿಪ್ಸ್ ಐ.ಡಿ.ಇ ಯಲ್ಲಿ ಎರರ್ ಬಂದಿರುವುದನ್ನು ನಾವು ಕಾಣಬಹುದು.
04:19 ನಾವು ಅಬ್ಸ್ಟ್ರಾಕ್ಟ್ ಮೆಥಡ್ showDetails( ) ಗೆ ಇಂಪ್ಲೆಮೆಂಟೇಷನ್ ಒದಗಿಸಬೇಕು ಎಂಬುದನ್ನು ಇದು ಸೂಚಿಸುತ್ತದೆ.
04:26 ನಾವಿದನ್ನು ಸ್ವಲ್ಪ ನಂತರ ಮಾಡಲಿದ್ದೇವೆ.
04:28 ಈಗ ಎಂಪ್ಲೋಯೀ ಐ.ಡಿ ಮತ್ತು ಎಂಪ್ಲೋಯೀ ಸ್ಯಾಲರಿಯನ್ನು ಪ್ರತಿನಿಧಿಸಲು ಎರಡು ಫೀಲ್ಡ್ ಗಳನ್ನು ರಚಿಸಿ.
04:34 ಹೀಗೆ ಟೈಪ್ ಮಾಡಿ: String empid ಅರ್ಧವಿರಾಮ ಮತ್ತು int salary ಅರ್ಧವಿರಾಮ.
04:42 ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate constructor using fields ಅನ್ನು ಆರಿಸಿ.
04:49 ಈ ಕಂನ್ಸ್ಟ್ರಕ್ಟರ್ ಇಲ್ಲಿ ನೇಮ್, ಏಜ್, empid ಮತ್ತು ಸ್ಯಾಲರಿ ಯ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲಿದೆ.
04:56 ನಾವೀಗ showDetails ಮೆಥಡ್ ಅನ್ನು ನಿರೂಪಿಸೋಣ. ಇದಕ್ಕಾಗಿ ಈ ರೀತಿ ಟೈಪ್ ಮಾಡಿ: public void showDetails( )
05:04 ಈ ಮೆಥಡ್ ಒಳಗೆ ನಾವು ಉದ್ಯೋಗಿಯ ವಿವರಗಳನ್ನು ಪ್ರಿಂಟ್ ಮಾಡಬೇಕಿದೆ.
05:09 ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಇಲ್ಲಿ ನೀಡಿರುವ ಕೋಡ್ ಅನ್ನು ಟೈಪ್ ಮಾಡಿ.
05:13 ಗಮನಿಸಿ, showDetails() ಮೆಥಡ್ ಅನ್ನು ಕಾರ್ಯಗತಗೊಳಿಸಿದ ನಂತರ ಎರರ್ ಕಾಣೆಯಾಗುತ್ತದೆ.
05:19 ನಂತರ ನಾವು ಪ್ರಾಜೆಕ್ಟ್ ನ ಸ್ಟೂಡೆಂಟ್ ಕ್ಲಾಸ್ ಅನ್ನು ನೋಡಲಿದ್ದೇವೆ.
05:23 ನಾನು ಈಗಲೇ ಸ್ಟೂಡೆಂಟ್ ಎನ್ನುವ ಸಬ್ ಕ್ಲಾಸ್ ಅನ್ನು ರಚಿಸಿದ್ದೇನೆ.
05:28 ಸ್ಟೂಡೆಂಟ್ ಕ್ಲಾಸ್ ನಲ್ಲಿ ಎರಡು ಫೀಲ್ಡ್ ಗಳಿವೆ, ಅವೆಂದರೆ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್. ಇವು ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮತ್ತು ಗ್ರೇಡ್ ಅನ್ನು ಪ್ರತಿನಿಧಿಸುತ್ತದೆ.
05:37 ಈ ಕ್ಲಾಸ್ ನ ಒಳಗೆ ಕನ್ಸ್ಟ್ರಕ್ಟರ್ ಒಂದನ್ನು ಸಹ ರಚಿಸಲಾಗಿದೆ.
05:42 ನೇಮ್, ಏಜ್, ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ನ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲು ಈ ಕನ್ಸ್ಟ್ರಕ್ಟರ್ ಅನ್ನು ಸಹ ಬಳಸಬಹುದು.
05:50 showDetails ಮೆಥಡ್ ಅನ್ನು ಈ ಕ್ಲಾಸ್ ನಲ್ಲಿ ಸಹ ಕಾರ್ಯಗತಗೊಳಿಸಬಹುದು.
05:56 ಇದು ಸ್ಟೂಡೆಂಟ್ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ನ ಮೌಲ್ಯಗಳನ್ನು ಪ್ರಿಂಟ್ ಮಾಡುತ್ತದೆ.
06:00 ಎಂಪ್ಲೋಯೀ ಕ್ಲಾಸ್, showDetails() ನ ತನ್ನದೇ ಆದ ಕಾರ್ಯಗತಗೊಳಿಸುವಿಕೆಯನ್ನು ಹೊಂದಿದೆ ಮತ್ತು,
06:08 ಸ್ಟೂಡೆಂಟ್ ಕ್ಲಾಸ್, showDetails() ನ ತನ್ನದೇ ಆದ ಕಾರ್ಯಗತಗೊಳಿಸುವಿಕೆಯನ್ನು ಹೊಂದಿದೆ ಎಂಬುದನ್ನು ಗಮನಿಸಿ.
06:14 ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ.
06:17 New > Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ.
06:23 ಈ ಕ್ಲಾಸ್ ಒಳಗೆ, ನಾವು ಮೇನ್ ಮೆಥಡ್ ಅನ್ನು ಹೊಂದಲಿದ್ದೇವೆ.
06:27 ಈಗ main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ಅನ್ನು ರಚಿಸಲು ctrl+space ಒತ್ತಿ.
06:33 ಈ ಮೂಲಕ Person p equals new Person ಎಂದು ಟೈಪ್ ಮಾಡಿ ಪರ್ಸನ್ ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ (ದೃಷ್ಟಾಂತೀಕರಣ) ಮಾಡಲು ಪ್ರಯತ್ನಿಸೋಣ.
06:42 ಆವರಣ ಚಿಹ್ನೆ ಮತ್ತು ಡಬಲ್ ಕೋಟ್ ಗಳ ಒಳಗಡೆ John ಎಂದು ಟೈಪ್ ಮಾಡಿ ಮತ್ತು ಅರ್ಧವಿರಾಮ ಚಿಹ್ನೆಯನ್ನು ಹಾಕಿ.
06:48 ನಾವೀಗ ಇಲ್ಲಿ ಎರರ್ ಒಂದನ್ನು ಕಾಣಬಹುದು. ಏಕೆಂದರೆ ಇಲ್ಲಿ ಪರ್ಸನ್ ಕ್ಲಾಸ್ ಎನ್ನುವುದು ಅಬ್ಸ್ಟ್ರಾಕ್ಟ್ ಆಗಿದೆ ಹಾಗೂ ಇದನ್ನು ಇನ್ಸ್ಟಾಂಶಿಯೇಟ್ ಮಾಡಲಾಗದು.
06:58 ಈ ಸಾಲನ್ನು ನಾವೀಗ ತೆಗೆಯೋಣ.
07:00 ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೋಡ್ ಅನ್ನು ನಾವು ಟೈಪ್ ಮಾಡೋಣ.
07:04 ಈಗ, ಎಂಪ್ಲೋಯೀ ಕ್ಲಾಸ್ ಅನ್ನು Person p1 equals new Employee ಎಂಬುದಾಗಿ ಬಳಸಿ ಪರ್ಸನ್ ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡೋಣ.
07:14 ಮೊದಲ ಸಾಲಿನಲ್ಲಿ ನಾವು ವಿವಿಧ ಆರ್ಗ್ಯುಮೆಂಟ್ ಗಳ ಮೌಲ್ಯಗಳನ್ನು ತೆಗೆದುಕೊಳ್ಳುತ್ತೇವೆ.
07:19 ಜಾನ್ ಅನ್ನು ಎಂಪ್ಲೋಯೀ ನೇಮ್ ಆಗಿ ಮತ್ತು,
07:22 40 ಅನ್ನು ಏಜ್ ನ ಮೌಲ್ಯವಾಗಿ,
07:25 E267 ಅನ್ನು ಎಂಪ್ಲೋಯೀ ಐ.ಡಿ ಯ ಮೌಲ್ಯವಾಗಿ ಮತ್ತು 10000 ವನ್ನು ಎಂಪ್ಲೋಯೀ ಸ್ಯಾಲರಿಯ ಮೌಲ್ಯವಾಗಿ ತೆಗೆದುಕೊಳ್ಳಲಾಗುತ್ತದೆ.
07:33 ನಾವೀಗ ಪರ್ಸನ್ ಕ್ಲಾಸ್ ನಲ್ಲಿ ಕಾಂಕ್ರೀಟ್ ಮೆಥಡ್ ಅನ್ನು p1.showBasicDetails() ಎಂದು ಇನ್ವೋಕ್ (ಜಾರಿ) ಮಾಡಬಹುದು.
07:41 ಅಲ್ಲದೆ, bject p1 ಅನ್ನು p1.showDetails() ಎಂದು ಬಳಸಿ ನಾವು showDetails() ಮೆಥಡ್ ಅನ್ನು ಸಹ ಆಮಂತ್ರಿಸಬಹುದು.
07:50 ಇದೇ ರೀತಿ, ಸ್ಟೂಡೆಂಟ್ ಕ್ಲಾಸ್ ಅನ್ನು ಬಳಸಿ, ಪರ್ಸನ್ ಕ್ಲಾಸ್ ಅನ್ನು ದೃಷ್ಟಾಂತೀಕರಿಸಿ.
08:01 ಇದನ್ನು, Person p2 equals new Student ಎಂಬುದಾಗಿ ಪ್ರತಿನಿಧಿಸಬಹುದು.
08:06 ಇದೇ ರೀತಿ, ಇಲ್ಲಿ ತೋರಿಸಿರುವಂತೆ ಅಬ್ಜೆಕ್ಟ್ ಅನ್ನು ಬಳಸಿ ನಾವು showBasicDetails() method ಮತ್ತು showDetails() ಮೆಥಡ್ ಅನ್ನು ಇನ್ವೋಕ್ ಮಾಡಬಹುದು.
08:15 ನಾವೀಗ ಈ ಡೆಮೋ ಪ್ರೋಗ್ರಾಂ ಅನ್ನು ರನ್ ಮಾಡೋಣ.
08:18 ಇದಕ್ಕಾಗಿ class Demo ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Run as > Java Application ಆರಿಸಿ.
08:25 ನಾವೀಗ ನೇಮ್ ಮತ್ತು ಏಜ್ ಮುಂತಾದ, ಉದ್ಯೋಗಿಯ ಅಗತ್ಯ ವಿವರಗಳೊಂದಿಗೆ ಔಟ್ಪುಟ್ ಅನ್ನು ನೋಡಬಹುದು.
08:31 ಇವುಗಳನ್ನು showBasicDetails() ವಿಧಾನದ ಮೂಲಕ ಪ್ರಿಂಟ್ ಮಾಡಬಹುದು.
08:35 ಎಂಪ್ಲೋಯಿ ಐ.ಡಿ ಮತ್ತು ಸ್ಯಾಲರಿಯಂತಹ ಉದ್ಯೋಗಿಯ ಇತರ ವಿವರಗಳನ್ನು showDetails() ವಿಧಾನದ ಮೂಲಕ ಪ್ರಿಂಟ್ ಮಾಡಬಹುದು.
08:43 ಇದೇ ರೀತಿ, ನೇಮ್ ಮತ್ತು ಏಜ್ ನಂತಹ ವಿದ್ಯಾರ್ಥಿಯ ಅಗತ್ಯ ವಿವರಗಳನ್ನು showBasicDetails() ವಿಧಾನದ ಮೂಲಕ ಪ್ರಿಂಟ್ ಮಾಡಬಹುದು.
08:52 ಸ್ಟೂಡೆಂಟ್ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ನಂತಹ ವಿದ್ಯಾರ್ಥಿಯ ಇತರ ವಿವರಗಳನ್ನು showDetails() ವಿಧಾನದ ಮೂಲಕ ಪ್ರಿಂಟ್ ಮಾಡಬಹುದು.
09:01 ಈ ಮೂಲಕ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ತಲುಪಿದ್ದೇವೆ. ಈಗ ನಾವು ಸಂಕ್ಷೇಪಿಸೋಣ.
09:07 ಈ ಟ್ಯುಟೋರಿಯಲ್ ನಲ್ಲಿ ನಾವು ಅಬ್ಸ್ಟ್ರಾಕ್ಟ್ ಮೆಥಡ್ ಗಳು ಮತ್ತು ಕಾಂಕ್ರೀಟ್ ಮೆಥಡ್ ಗಳು,
09:14 ಅಬ್ಸ್ಟ್ರಾಕ್ಟ್ ಕ್ಲಾಸುಗಳು ಮತ್ತು ಕಾಂಕ್ರೀಟ್ ಕ್ಲಾಸುಗಳು ಮತ್ತು ಅಬ್ಸ್ಟ್ರಾಕ್ಟ್ ಕ್ಲಾಸುಗಳನ್ನು ರಚಿಸುವುದು ಮತ್ತು ಬಳಸುವುದನ್ನು ಕಲಿತೆವು.
09:21 ಅಸೈನ್ ಮೆಂಟ್ ಆಗಿ, ಒಂದು abstract method run() ಹೊಂದಿರುವ ಅಬ್ಸ್ಟ್ರಾಕ್ಟ್ ಕ್ಲಾಸ್ ವೆಹಿಕಲ್ ಅನ್ನು ರಚಿಸಿ.
09:29 ವೆಹಿಕಲ್ ಕ್ಲಾಸ್ ಅನ್ನು ವಿಸ್ತರಿಸುವ ಮತ್ತು ʻʻCar is running on 4 wheels’’ ಅನ್ನು ಪ್ರಿಂಟ್ ಮಾಡುವ ರನ್ ಮೆಥಡ್ ಅನ್ನು ಕಾರ್ಯಗತಗೊಳಿಸುವ ಸಬ್ ಕ್ಲಾಸ್ ಕಾರ್ ಒಂದನ್ನು ರಚಿಸಿ.
09:39 ಅಲ್ಲದೆ ವೆಹಿಕಲ್ ಕ್ಲಾಸ್ ಅನ್ನು ಇನ್ನೊಮ್ಮೆ ವಿಸ್ತರಿಸುವ ಮತ್ತು “Bike is running on 2 wheels” ಎಂದು ಪ್ರಿಂಟ್ ಮಾಡುವ ರನ್ ಮೆಥಡ್ ಅನ್ನು ಕಾರ್ಯಗತಗೊಳಿಸುವ ಸಬ್ ಕ್ಲಾಸ್ ಒಂದನ್ನು ರಚಿಸಿ.
09:50 ಇದರ ಜೊತೆಗೆ, ಫಲಿತಾಂಶಗಳನ್ನು ದೃಢೀಕರಿಸಲು, ಮೇನ್ ಮೆಥಡ್ ಹೊಂದಿರುವ ಡೆಮೋ ಕ್ಲಾಸ್ ಅನ್ನು ಸಹ ರಚಿಸಿ.
09:56 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
10:03 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು,
10:09 ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
10:13 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
10:16 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
10:23 ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
10:28 ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
10:35 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .

ಧನ್ಯವಾದಗಳು.

Contributors and Content Editors

Sandhya.np14