https://script.spoken-tutorial.org/index.php?title=Health-and-Nutrition/C2/Powder-recipes-for-6-to-24-months-old-children/Kannada&feed=atom&action=historyHealth-and-Nutrition/C2/Powder-recipes-for-6-to-24-months-old-children/Kannada - Revision history2024-03-28T23:00:26ZRevision history for this page on the wikiMediaWiki 1.23.17https://script.spoken-tutorial.org/index.php?title=Health-and-Nutrition/C2/Powder-recipes-for-6-to-24-months-old-children/Kannada&diff=50711&oldid=prevNayana at 15:19, 19 January 20202020-01-19T15:19:13Z

<col class='diff-marker' />
<col class='diff-content' />
<col class='diff-marker' />
<col class='diff-content' />

← Older revision

Revision as of 15:19, 19 January 2020

Line 464:

Line 464:

| 12:46

| 12:46

| ಈ ಸ್ಕ್ರಿಪ್ಟ್ ನ ಅನುವಾದಕಿ '''IIT Bombay''' ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.

| ಈ ಸ್ಕ್ರಿಪ್ಟ್ ನ ಅನುವಾದಕಿ '''IIT Bombay''' ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್ಟ್.

ಧನ್ಯವಾದಗಳು.

ಧನ್ಯವಾದಗಳು.

Nayanahttps://script.spoken-tutorial.org/index.php?title=Health-and-Nutrition/C2/Powder-recipes-for-6-to-24-months-old-children/Kannada&diff=45578&oldid=prevSandhya.np14: Created page with " {| border=1 | Time | Narration |- | 00:00 | '''Nutritious powder recipes for 6 to 24 months old children''' ಎಂಬ ಈ ಸ್ಪೋಕನ್ ಟ್ಯುಟೋರಿಯ..."2019-01-23T05:59:18Z
Created page with " {| border=1 | Time | Narration |- | 00:00 | '''Nutritious powder recipes for 6 to 24 months old children''' ಎಂಬ ಈ ಸ್ಪೋಕನ್ ಟ್ಯುಟೋರಿಯ..."

New page

{| border=1

| Time

| Narration

| 00:00

| '''Nutritious powder recipes for 6 to 24 months old children''' ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.

| 00:08

| ಈ ಟ್ಯುಟೋರಿಯಲ್ ನಲ್ಲಿ ನಾವು, ಕೆಳಗೆ ಹೇಳಿದ ವಿವಿಧ ಪೌಷ್ಟಿಕ ಪುಡಿಗಳ ಪಾಕವಿಧಾನವನ್ನು ಕಲಿಯುವೆವು.

| 00:15

| ಅಮೈಲೇಸ್ (Amylase) ಪುಡಿ,

|00:17

| ಕಾಳುಗಳ ಪುಡಿ,

|00:18

| ಎಣ್ಣೆಬೀಜಗಳ ಪುಡಿ,

|00:20

| ದ್ವಿದಳ ಧಾನ್ಯಗಳ ಪುಡಿ,

|00:22

| ಕರಿಬೇವಿನ ಎಲೆಗಳ ಪುಡಿ ಮತ್ತು

|00:24

| ನುಗ್ಗೆ ಎಲೆಗಳ ಪುಡಿ.

|00:27

| ಹೆಚ್ಚು ಪ್ರಯತ್ನವಿಲ್ಲದೆ, ಮನೆಯಲ್ಲಿಯೇ ತಯಾರಿಸಬಹುದಾದ ಅನೇಕ ಪೌಷ್ಟಿಕ ಪುಡಿಗಳು ಇರುತ್ತವೆ.

| 00:33

| ಈ ಪೌಷ್ಟಿಕ ಪುಡಿಗಳನ್ನು ಹೇಗೆ ತಯಾರಿಸುವುದೆಂದು ನಾವು ಕಲಿಯೋಣ.

| 00:38

| ಈ ಪುಡಿಗಳು ಶಿಶುಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಹಾಯ ಮಾಡುವ ಪೋಷಕಾಂಶಗಳನ್ನು ಹೊಂದಿವೆ.

| 00:44

| ಮಗುವಿನ ವಯಸ್ಸು 6 ತಿಂಗಳು ಆದ ನಂತರ, ಈ ಪುಡಿಗಳನ್ನು ಮಗುವಿಗೆ ಕೊಡಲು ಶಿಫಾರಸು ಮಾಡಲಾಗುತ್ತದೆ.

| 00:52

| ಮಗುವಿಗೆ ಒಂದು ಹೊಸ ಆಹಾರವನ್ನು ಆರಂಭಿಸಿದಾಗಲೆಲ್ಲ, ಅದನ್ನು ೩ - ೪ ದಿನಗಳವರೆಗೆ ಸತತವಾಗಿ ಕೊಡಬೇಕು.

| 01:00

| ೩ ಅಥವಾ ೪ ದಿನಗಳ ನಂತರ, ಮಗುವಿಗೆ ಹೊಸ ಆಹಾರವನ್ನು ಆರಂಭಿಸಿ.

| 01:05

| ಈ ಎರಡೂ ಆಹಾರಗಳನ್ನು ಒಟ್ಟಿಗೆ ಸೇರಿಸಬಹುದು ಆದರೆ ಎರಡನ್ನೂ ಪ್ರತ್ಯೇಕವಾಗಿ ಪ್ರಯತ್ನಿಸಿರಬೇಕು. ಮತ್ತು, ಮಗುವಿನ ಮುಖ ಮತ್ತು ದೇಹದ ಮೇಲೆ ದದ್ದುಗಳು (rashes) ಅಥವಾ ಊತದಂತಹ (swelling) ಯಾವುದೇ ಅಲರ್ಜೀ ಆಗಿರಬಾರದು.

|01:20

| ಬೀಜಗಳಂತಹ (nuts) ಅಲರ್ಜೆನ್ ಗಳನ್ನು ಹೊಂದಿರುವ ಹೊಸ ಆಹಾರವನ್ನು ಮಗುವಿಗೆ ಪರಿಚಯಿಸಿದಾಗಲೆಲ್ಲ, ಟೀಚಮಚದ ತುದಿಯಷ್ಟು ಸಣ್ಣ ಪ್ರಮಾಣದೊಂದಿಗೆ ಪ್ರಾರಂಭಿಸಿ.

| 01:30

| 10 ನಿಮಿಷಗಳವರೆಗೆ ಕಾಯ್ದು ನಂತರ ಅದನ್ನು ನಿಧಾನವಾಗಿ ಮಗುವಿಗೆ ತಿನ್ನಿಸಬೇಕು.

| 01:35

| ಮಗುವಿಗೆ ಒಂದು ವರ್ಷ ಆಗುವವರೆಗೆ, ದಯವಿಟ್ಟು, ಅದರ ಆಹಾರದಲ್ಲಿ ಸಕ್ಕರೆ, ಉಪ್ಪು ಅಥವಾ ಯಾವುದೇ ರೀತಿಯ ಮಸಾಲೆಗಳನ್ನು ಸೇರಿಸಬೇಡಿ.

| 01:44

| ಈಗ ನಮ್ಮ ಮೊದಲನೆಯ ಪಾಕವಿಧಾನದೊಂದಿಗೆ ನಾವು ಆರಂಭಿಸೋಣ – ಅಮೈಲೇಸ್ (Amylase) ಪುಡಿ.

| 01:49

| ಆದರೆ, ಮೊದಲು ನಾವು ಅದರ ಪ್ರಯೋಜನಗಳನ್ನು ಚರ್ಚಿಸೋಣ.

| 01:53

| ಅಮೈಲೇಸ್ - ಇದು ಆಹಾರದ ಜೀರ್ಣಕ್ರಿಯೆಗೆ ಅಗತ್ಯವಾದ ಒಂದು ಕಿಣ್ವ (enzyme) ಅಥವಾ ರಾಸಾಯನಿಕ ಆಗಿದೆ.

| 01:59

| ಮಗುವಿನ ದೇಹದಲ್ಲಿ ಇದು ಸೀಮಿತ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ.

| 02:03

| ಈ ಪುಡಿಯು ಹೆಚ್ಚಿನ 'ಅಮೈಲೇಸ್' ಅನ್ನು ಒದಗಿಸುತ್ತದೆ. ಮತ್ತು, ಪೌಷ್ಟಿಕಾಂಶ ಹಾಗೂ ಆಹಾರದಿಂದ ಹೀರುವಿಕೆಯನ್ನು ಹೆಚ್ಚಿಸುತ್ತದೆ.

| 02:12

| ಆದ್ದರಿಂದ, ಮಗುವಿಗೆ 'ಅಮೈಲೇಸ್' ಹೆಚ್ಚಾಗಿರುವ ಹಿಟ್ಟು ಅಥವಾ 'ಅಮೈಲೇಸ್' ಪುಡಿಯನ್ನು ಕೊಡಬೇಕು.

| 02:18

| 'ಅಮೈಲೇಸ್' ಪುಡಿಯನ್ನು ತಯಾರಿಸುವ ವಿಧಾನವನ್ನು ತಿಳಿದುಕೊಳ್ಳೋಣ.

| 02:22

| 'ಅಮೈಲೇಸ್' ಪುಡಿಯನ್ನು ತಯಾರಿಸಲು ಬೇಕಾಗುವ ಪದಾರ್ಥಗಳು –

ಅರ್ಧ ಕಪ್ ಗೋಧಿ,

| 02:27

| ಅರ್ಧ ಕಪ್ ಹೆಸರುಕಾಳು ಮತ್ತು

| 02:29

| ಅರ್ಧ ಕಪ್ ರಾಗಿ.

| 02:32

| ತಯಾರಿಸುವ ವಿಧಾನ: ಮೊದಲು, ಎಲ್ಲ ಕಾಳುಗಳನ್ನು ಪ್ರತ್ಯೇಕವಾಗಿ 10 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.

| 02:39

| ನೆನೆಸಿಡುವುದರಿಂದ ಕಾಳುಗಳಲ್ಲಿಯ ತೇವಾಂಶವು ಸುಧಾರಿಸುತ್ತದೆ.

| 02:42

| 10 ಗಂಟೆಗಳ ನಂತರ ಎಲ್ಲ ಕಾಳುಗಳನ್ನು ಹೊರತೆಗೆಯಿರಿ.

| 02:46

| ಮತ್ತು, ನೀರೆಲ್ಲ ಬಸಿದು ಹೋಗುವಂತೆ ಒಂದು ಜರಡಿಯಲ್ಲಿರಿಸಿ.

| 02:50

| ನಂತರ, ಒಂದೊಂದಾಗಿ ಎಲ್ಲಾ ಪದಾರ್ಥಗಳನ್ನು ಒಂದು ಶುದ್ಧ ಮತ್ತು ಒಣ ಹತ್ತಿ ಬಟ್ಟೆಯಲ್ಲಿ ಹಾಕಿ ಕಟ್ಟಿಡಿ.

| 02:55

| ಅವು ಮೊಳಕೆಯೊಡೆಯುವ ತನಕ ಹಾಗೇ ಬಿಡಿ.

| 02:58

| ಈ ಕ್ರಿಯೆಯನ್ನು ಮೊಳಕೆಯೊಡೆಯುವುದು ಎನ್ನುತ್ತಾರೆ.

| 03:01

| ಮೊಳಕೆಯೊಡೆಯಲು ಕೆಲವೊಂದು ಪದಾರ್ಥಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ ಮತ್ತು ಕೆಲವು ಸ್ವಲ್ಪ ಕಡಿಮೆ ಸಮಯ ತೆಗೆದುಕೊಳ್ಳುತ್ತವೆ ಎಂಬುದನ್ನು ಗಮನಿಸಿ.

| 03:08

| ಇಲ್ಲಿ, ರಾಗಿಗೆ ಉಳಿದ ಕಾಳುಗಳಿಗಿಂತ ಹೆಚ್ಚು ಸಮಯ ಬೇಕು.

| 03:14

| ಮೊಳಕೆಯೊಡೆದ ನಂತರ, ಒಂದು ಅಥವಾ ಎರಡು ದಿನಗಳವರೆಗೆ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ.

| 03:19

| ಆಮೇಲೆ, ಎಲ್ಲ ಪದಾರ್ಥಗಳನ್ನು ಪೂರ್ತಿಯಾಗಿ ಒಣಗುವವರೆಗೆ ಸಣ್ಣ ಉರಿಯ ಮೇಲೆ ಹುರಿಯಿರಿ.

| 03:25

| ನೆನಪಿಡಿ, ಹುರಿಯುವಾಗ ನಿರಂತರವಾಗಿ ಮಗುಚುತ್ತಿರಬೇಕು.

| 03:30

| ಆಮೇಲೆ, ಶುಚಿಯಾದ ಕೈಗಳ ನಡುವೆ ಉಜ್ಜುವ ಮೂಲಕ ಎಲ್ಲಾ ಪದಾರ್ಥಗಳ ಹೊರಗಿನ ಸಿಪ್ಪೆಯನ್ನು ಪ್ರತ್ಯೇಕಿಸಿ.

| 03:36

| ಹೊರಗಿನ ಸಿಪ್ಪೆಯನ್ನು ತೆಗೆದ ನಂತರ ಎಲ್ಲ ಪದಾರ್ಥಗಳನ್ನು ಮಿಶ್ರಣ ಮಾಡಿ.

| 03:41

| ಈಗ, ಗ್ರೈಂಡರ್ ಅನ್ನು ಬಳಸಿ ಈ ಮಿಶ್ರಣದ ಪುಡಿಯನ್ನು ಮಾಡಿ.

| 03:45

| ಮತ್ತು, 'ಅಮೈಲೇಸ್' ಪುಡಿ ತಯಾರಾಗಿದೆ.

| 03:48

| ಈ 'ಅಮೈಲೇಸ್' ಪುಡಿಯನ್ನು ಗಾಳಿತೂರದ ಜಾಡಿಯಲ್ಲಿ ಸಂಗ್ರಹಿಸಿಡಿ.

| 03:52

| ಮಗುವಿನ ಆಹಾರವನ್ನು ತಯಾರಿಸುವಾಗ, ೧ ಟೀಚಮಚದಷ್ಟು 'ಅಮೈಲೇಸ್' ಪುಡಿಯನ್ನು ಸೇರಿಸಬಹುದು.

| 03:59

| ಅಥವಾ, 'ಅಮೈಲೇಸ್' ಪುಡಿಯ ಗಂಜಿಯನ್ನು ಕೂಡ ಮಾಡಬಹುದು.

| 04:03

| ೧ ಟೀಚಮಚ 'ಅಮೈಲೇಸ್' ಪುಡಿಯು, ಸುಮಾರು 18 ಕ್ಯಾಲೊರಿ ಮತ್ತು 0.6 ಗ್ರಾಂ ಪ್ರೋಟೀನ್ ಗಳನ್ನು ಕೊಡುತ್ತದೆ.

| 04:10

| 100 ಗ್ರಾಂ 'ಅಮೈಲೇಸ್' ಪುಡಿಯು, ಸುಮಾರು 360 ಕ್ಯಾಲೊರಿ ಮತ್ತು 12 ಗ್ರಾಂ ಪ್ರೋಟೀನ್ ಗಳನ್ನು ಕೊಡುತ್ತದೆ.

| 04:17

| 'ಅಮೈಲೇಸ್' ಪುಡಿಯು, ಕೆಲವು ವಿಶಿಷ್ಟ ಗುಣಗಳನ್ನು ಹೊಂದಿದೆ. ಆದ್ದರಿಂದ ಇದು ಮಗುವಿಗಾಗಿ ವಿಶೇಷವಾಗಿದೆ.

| 04:23

| ಇದು ಆಹಾರದ ಗಾಢತೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಗುವಿಗಾಗಿ ಇದು ಹೆಚ್ಚು ರುಚಿಕರವಾಗಿಸುತ್ತದೆ.

| 04:28

| ಅಲ್ಲದೆ, ಆಹಾರದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಮಗುವಿನ ಆಹಾರದ ಶಕ್ತಿಯ ಸಾಂದ್ರತೆಯನ್ನು ಹೆಚ್ಚಿಸುತ್ತದೆ.

| 04:34

| ಆಮೇಲೆ, ನಾವು ಕಾಳುಗಳ ಪುಡಿಯನ್ನು ತಯಾರಿಸುವ ವಿಧಾನವನ್ನು ಕಲಿಯುವೆವು.

| 04:38

| ಈ ಪುಡಿಯಲ್ಲಿ ಸತುವು (Zinc), ನಾರು (fiber), ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಗಳು ಸಮೃದ್ಧವಾಗಿವೆ.

| 04:44

| ಈ ಪೋಷಕಾಂಶಗಳು ಮೂಳೆಯ ಬೆಳವಣಿಗೆಗೆ ಸಹಾಯ ಮಾಡುತ್ತವೆ ಮತ್ತು ಮಗುವಿನ ಶಕ್ತಿಯನ್ನು ಸುಧಾರಿಸುತ್ತದೆ.

| 04:50

| ಅಲ್ಲದೆ, ಈ ಪುಡಿಯು ಉತ್ತಮ ಕೊಬ್ಬಿನ ಮೂಲವಾಗಿದ್ದು ಮಕ್ಕಳ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

| 04:57

| ಈ ಪುಡಿಯನ್ನು ತಯಾರಿಸಲು ಬೇಕಾಗಿರುವ 3 ವಿಧದ ಬೀಜಗಳು-

ಅರ್ಧ ಕಪ್ ಕರಿಎಳ್ಳು,

| 05:03

| ಅರ್ಧ ಕಪ್ ಅಗಸೆ ಬೀಜಗಳು ಮತ್ತು

| 05:05

| ಅರ್ಧ ಕಪ್ ಕುಂಬಳಕಾಯಿಯ ಕಚ್ಚಾ ಬೀಜಗಳು.

| 05:08

| ತಯಾರಿಸುವ ವಿಧಾನ: ಒಂದೊಂದಾಗಿ ಎಲ್ಲ ಬೀಜಗಳನ್ನು 4 ರಿಂದ 5 ನಿಮಿಷಗಳವರೆಗೆ ಸಣ್ಣ ಉರಿಯ ಮೇಲೆ ಒಣದಾಗಿ ಹುರಿಯಿರಿ.

| 05:16

| ತಣ್ಣಗಾದ ನಂತರ, ಎಲ್ಲ ಹುರಿದ ಪದಾರ್ಥಗಳ ಪುಡಿಯನ್ನು ತಯಾರಿಸಿ.

| 05:20

| ಈ ಪುಡಿಯನ್ನು ಗಾಳಿತೂರದ ಜಾಡಿಯಲ್ಲಿ ಶೇಖರಿಸಿಡಿ.

| 05:23

| ಮಗುವಿಗೆ ತಿನ್ನಿಸುವ ಮುನ್ನ, ೧ ಟೀಚಮಚದಷ್ಟು ಈ ಪುಡಿಯನ್ನು ಅದರ ಆಹಾರದಲ್ಲಿ ಸೇರಿಸಬೇಕು.

| 05:29

| ಇದು ಸುಮಾರು 30 ಕ್ಯಾಲೊರಿ ಮತ್ತು 2.7 ಗ್ರಾಂ ಪ್ರೋಟೀನ್ ಗಳನ್ನು ಒದಗಿಸುತ್ತದೆ.

| 05:36

| 100 ಗ್ರಾಂ ಬೀಜಗಳ ಈ ಪುಡಿಯು, ಸುಮಾರು 600 ಕ್ಯಾಲೊರಿ ಮತ್ತು 55 ಗ್ರಾಂ ಪ್ರೋಟೀನ್ ಗಳನ್ನು ಕೊಡುತ್ತದೆ.

| 05:43

| ನಮ್ಮ ಮುಂದಿನ ಪಾಕವಿಧಾನವು ಎಣ್ಣೆಬೀಜಗಳ ಪುಡಿಯಾಗಿದೆ.

| 05:47

| ಈ ಪುಡಿಯಲ್ಲಿ ಸತುವು (Zinc), ಮೆಗ್ನೀಸಿಯಮ್ ಮತ್ತು ಕಬ್ಬಿಣ ಮುಂತಾದ ಖನಿಜಾಂಶಗಳು ಸಮೃದ್ಧವಾಗಿವೆ.

| 05:53

| ಈ ಖನಿಜಾಂಶಗಳು, ಕೆಂಪು ರಕ್ತಕಣಗಳನ್ನು ಉತ್ಪಾದಿಸುವಲ್ಲಿ ಮುಖ್ಯ ಪಾತ್ರವಹಿಸುತ್ತವೆ.

| 05:57

| ಅಲ್ಲದೆ, ಈ ಪುಡಿಯು ಉತ್ತಮ ಕೊಬ್ಬಿನ ಮೂಲವಾಗಿದ್ದು ಮಕ್ಕಳ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

| 06:04

| ಎಣ್ಣೆಬೀಜಗಳ ಈ ಪುಡಿಯನ್ನು ತಯಾರಿಸಲು ಬೇಕಾಗಿರುವ ಪದಾರ್ಥಗಳು -

| 06:08

| ಅರ್ಧ ಕಪ್ ಕಡಲೆಕಾಯಿ,

| 06:10

| ಅರ್ಧ ಕಪ್ ತುರಿದ ಒಣ ಕೊಬ್ಬರಿ,

| 06:12

| ಅರ್ಧ ಕಪ್ ಅಗಸೆ ಬೀಜಗಳು ಮತ್ತು

| 06:15

| ಅರ್ಧ ಕಪ್ ಕರಿ ಎಳ್ಳು.

| 06:18

| ತಯಾರಿಸುವ ವಿಧಾನ: ಒಂದೊಂದಾಗಿ ಎಲ್ಲ ಎಣ್ಣೆಬೀಜಗಳನ್ನು 4 ರಿಂದ 6 ನಿಮಿಷಗಳವರೆಗೆ ಮಧ್ಯಮ ಉರಿಯ ಮೇಲೆ ಒಣದಾಗಿ ಹುರಿಯಿರಿ.

| 06:26

| ನಂತರ, ಕಲ್ಲಿನ ಗ್ರೈಂಡರ್ ಅಥವಾ ಮಿಕ್ಸರ್ ಗ್ರೈಂಡರ್ ಅನ್ನು ಬಳಸಿ, ಎಲ್ಲ ಹುರಿದ ಬೀಜಗಳ ಪುಡಿಯನ್ನು ತಯಾರಿಸಿ.

| 06:33

| ಈ ಪುಡಿಯನ್ನು ಗಾಳಿತೂರದ ಜಾಡಿಯಲ್ಲಿ ಶೇಖರಿಸಿಡಿ.

| 06:36

| ಮಗುವಿಗೆ ತಿನ್ನಿಸುವ ಮುನ್ನ, ೧ ಟೀಚಮಚದಷ್ಟು ಈ ಪುಡಿಯನ್ನು ಆಹಾರದಲ್ಲಿ ಸೇರಿಸಬಹುದು.

| 06:42

| ಇದು ಸುಮಾರು 28 ಕ್ಯಾಲೊರಿ ಮತ್ತು 0.9 ಗ್ರಾಂ ಪ್ರೋಟೀನ್ ಗಳನ್ನು ಒದಗಿಸುತ್ತದೆ.

| 06:48

| ಈ ಪುಡಿಯ 100 ಗ್ರಾಂ, ಸುಮಾರು 600 ಕ್ಯಾಲೊರಿ ಮತ್ತು 19 ಗ್ರಾಂ ಪ್ರೋಟೀನ್ ಗಳನ್ನು ಒದಗಿಸುತ್ತದೆ.

| 06:56

| ಈಗ, ದ್ವಿದಳ ಧಾನ್ಯಗಳ ಪುಡಿಯನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

| 06:59

| ಈ ಪುಡಿಯು ಪೊಟ್ಯಾಸಿಯಮ್, ಪ್ರೋಟೀನ್, ಫೋಲೇಟ್, ಮೆಗ್ನೀಸಿಯಮ್ ಇತ್ಯಾದಿಗಳನ್ನು ಸಮೃದ್ಧವಾಗಿ ಹೊಂದಿದೆ.

| 07:05

| ಈ ಪೋಷಕಾಂಶಗಳು ಮೂಳೆಯ ಬೆಳವಣಿಗೆಗೆ ಸಹಾಯ ಮಾಡುತ್ತವೆ ಮತ್ತು ಮಗುವಿನ ಶಕ್ತಿಯನ್ನು ಸುಧಾರಿಸುತ್ತವೆ.

| 07:11

| ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹ ಅವು ಅಗತ್ಯವಾಗಿವೆ.

| 07:16

| ದ್ವಿದಳ ಧಾನ್ಯಗಳ ಪುಡಿಯನ್ನು ತಯಾರಿಸಲು ಬೇಕಾದ ಪದಾರ್ಥಗಳು:

ಅರ್ಧ ಕಪ್ ಹೆಸರುಕಾಳು,

| 07:22

| ಅರ್ಧ ಕಪ್ ಒಣಗಿದ ಹಸಿರು ವಟಾಣಿ,

| 07:24

| ಅರ್ಧ ಕಪ್ ಕಡಲೆಕಾಳು ಮತ್ತು

| 07:27

| ಅರ್ಧ ಕಪ್ ಮಡಿಕೆ ಕಾಳು.

| 07:30

| ತಯಾರಿಸುವ ವಿಧಾನ: ಮೊದಲು, ಎಲ್ಲ ಕಾಳುಗಳನ್ನು ಪ್ರತ್ಯೇಕವಾಗಿ 10 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.

| 07:35

| ನೆನೆಸಿಡುವುದರಿಂದ ಕಾಳುಗಳಲ್ಲಿಯ ತೇವಾಂಶವು ಸುಧಾರಿಸುತ್ತದೆ.

| 07:40

| 10 ಗಂಟೆಗಳ ನಂತರ, ಎಲ್ಲ ಕಾಳುಗಳನ್ನು ಹೊರತೆಗೆಯಿರಿ.

| 07:43

| ಮತ್ತು, ನೀರೆಲ್ಲ ಬಸಿದು ಹೋಗುವಂತೆ ಕಾಳುಗಳನ್ನು ಒಂದು ಜರಡಿಯಲ್ಲಿರಿಸಿ.

| 07:47

| ನಂತರ, ಒಂದೊಂದಾಗಿ, ಎಲ್ಲಾ ಕಾಳುಗಳನ್ನು ಒಂದು ಶುದ್ಧ ಮತ್ತು ಒಣ ಹತ್ತಿ ಬಟ್ಟೆಯಲ್ಲಿ ಹಾಕಿ ಕಟ್ಟಿಡಿ.

| 07:52

| ಅವು ಮೊಳಕೆಯೊಡೆಯುವ ತನಕ ಹಾಗೇ ಬಿಡಿ.

| 07:55

| ಈ ಸಂಪೂರ್ಣ ಕ್ರಿಯೆಯನ್ನು ಮೊಳಕೆಯೊಡೆಯುವುದು ಎನ್ನುತ್ತಾರೆ.

| 07:59

| ದಯವಿಟ್ಟು ಗಮನಿಸಿ – ಈಮೊದಲೇ ನಾವು ಚರ್ಚಿಸಿದಂತೆ, ಮೊಳಕೆಯೊಡೆಯುವ ಅವಧಿಯು ಪ್ರತಿಯೊಂದು ವಿಧದ ಕಾಳುಗಳಿಗೆ ಬೇರೆಬೇರೆ ಆಗಿರುತ್ತದೆ.

| 08:06

| ಮೊಳಕೆಯೊಡೆದ ನಂತರ, ಒಂದು ಅಥವಾ ಎರಡು ದಿನಗಳವರೆಗೆ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ.

| 08:11

| ನಂತರ, ಎಲ್ಲ ಕಾಳುಗಳನ್ನು ಪೂರ್ತಿಯಾಗಿ ಒಣಗುವವರೆಗೆ ಮಧ್ಯಮ ಉರಿಯ ಮೇಲೆ ಹುರಿಯಿರಿ.

| 08:17

| ಹುರಿಯುವಾಗ ನಿರಂತರವಾಗಿ ಮಗುಚುತ್ತಿರಬೇಕು.

| 08:20

| ಇದು ಕಾಳುಗಳು ಸುಟ್ಟುಹೋಗದಂತೆ ತಡೆಯುತ್ತದೆ.

| 08:24

| ಹುರಿದ ನಂತರ, ಶುಚಿಯಾದ ಕೈಗಳ ನಡುವೆ ಉಜ್ಜುವ ಮೂಲಕ, ಎಲ್ಲಾ ಒಣಗಿಸಿದ ಕಾಳುಗಳ ಹೊರಗಿನ ಸಿಪ್ಪೆಯನ್ನು ಪ್ರತ್ಯೇಕಿಸಿ.

| 08:30

| ಈಗ, ಎಲ್ಲ ಕಾಳುಗಳನ್ನು ಒಟ್ಟಿಗೆ ಸೇರಿಸಿ ಪುಡಿಮಾಡಿ.

| 08:34

| ಮತ್ತು, ಈ ಪುಡಿಯನ್ನು ಗಾಳಿತೂರದ ಜಾಡಿಯಲ್ಲಿ ಶೇಖರಿಸಿಡಿ.

| 08:38

| ಮಗುವಿನ ಆಹಾರವನ್ನು ತಯಾರಿಸುವಾಗ, ಎರಡು ಟೀಚಮಚದಷ್ಟು ಈ ಪುಡಿಯನ್ನು ಸೇರಿಸಬೇಕು.

| 08:43

| ಈ ಪುಡಿಯ ಎರಡು ಟೀಚಮಚಗಳು, ಸುಮಾರು 33 ಕ್ಯಾಲೊರಿ ಮತ್ತು 1.8 ಗ್ರಾಂ ಪ್ರೋಟೀನ್ ಗಳನ್ನು ಒದಗಿಸುತ್ತದೆ.

| 08:49

| ಈ ಪುಡಿಯ 100 ಗ್ರಾಂ, ಸುಮಾರು 250 ಕ್ಯಾಲೊರಿ ಮತ್ತು 15 ಗ್ರಾಂ ಪ್ರೋಟೀನ್ ಗಳನ್ನು ಒದಗಿಸುತ್ತದೆ.

| 08:57

| ಆಮೇಲೆ, ನಾವು ಕರಿಬೇವಿನ ಎಲೆಗಳ ಪುಡಿಯನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳುವೆವು.

| 09:00

| ಕರಿಬೇವಿನ ಎಲೆಗಳು ನಾರು (fibre), ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ C ಗಳನ್ನು ಸಮೃದ್ಧವಾಗಿ ಹೊಂದಿವೆ.

| 09:06

| ಈ ಎಲ್ಲಾ ಪೋಷಕಾಂಶಗಳು, ಜೀರ್ಣಕ್ರಿಯೆ ಮತ್ತು ಹಲ್ಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ.

| 09:12

| ಅಲ್ಲದೆ, ಇವುಗಳು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

| 09:16

| ಈ ಪುಡಿಯನ್ನು ತಯಾರಿಸಲು ನಮಗೆ ಕರಿಬೇವಿನ ಎಲೆಗಳು ಬೇಕಾಗುವುದು.

| 09:19

| ತಯಾರಿಸುವ ವಿಧಾನ – ಕರಿಬೇವಿನ ಎಲೆಗಳನ್ನು ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.

| 09:23

| ಅವುಗಳನ್ನು ನೆರಳಿನಲ್ಲಿ ಒಣಗಲು ಬಿಡಿ.

| 09:26

| ಈಗ, ಈ ಎಲ್ಲ ಒಣಗಿದ ಕರಿಬೇವಿನ ಎಲೆಗಳ ಪುಡಿಯನ್ನು ತಯಾರಿಸಿ ಮತ್ತು ಈ ಪುಡಿಯನ್ನು ಗಾಳಿತೂರದ ಜಾಡಿಯಲ್ಲಿ ಶೇಖರಿಸಿಡಿ.

| 09:33

| ಮಗುವಿಗೆ ತಿನ್ನಿಸುವ ಮುನ್ನ, ಕಾಲು ಟೀಚಮಚದಷ್ಟು ಈ ಪುಡಿಯನ್ನು ಆಹಾರದಲ್ಲಿ ಸೇರಿಸಬಹುದು.

| 09:39

| ಇದು ಸುಮಾರು 9 ಮಿಲಿಗ್ರಾಂ ನಷ್ಟು ಕ್ಯಾಲ್ಶಿಯಂ ಅನ್ನು ಒದಗಿಸುತ್ತದೆ.

| 09:42

| 100 ಗ್ರಾಂ ನಷ್ಟು ಈ ಪುಡಿಯು, ಸುಮಾರು 700 ಮಿಲಿಗ್ರಾಂ ನಷ್ಟು ಕ್ಯಾಲ್ಶಿಯಂ ಅನ್ನು ಒದಗಿಸುತ್ತದೆ.

| 09:48

| ನಂತರ, ನಾವು ನುಗ್ಗೆ ಎಲೆಗಳ ಪುಡಿಯನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.

| 09:53

| ಈ ಪುಡಿಯು ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ C, ವಿಟಮಿನ್ A, ಪ್ರೋಟೀನ್ ಮತ್ತು ಸಲ್ಫರ್ ಗಳನ್ನು (ಗಂಧಕ) ಸಾಕಷ್ಟು ಪ್ರಮಾಣದಲ್ಲಿ ಹೊಂದಿರುತ್ತದೆ.

| 10:01

| ಈ ಪೋಷಕಾಂಶಗಳು ವಸಡುಗಳ ಬೆಳವಣಿಗೆಗೆ ಮತ್ತು ಮಗುವಿನ ಆರೋಗ್ಯಕರ ಕಣ್ಣುಗಳಿಗೆ ಅಗತ್ಯವಾಗಿರುತ್ತದೆ.

| 10:07

| ಇವುಗಳು ಸೋಂಕಿನ ವಿರುದ್ಧ ಹೋರಾಡುತ್ತವೆ ಮತ್ತು ಮಗುವಿನ ಶಕ್ತಿಯನ್ನು ಸುಧಾರಿಸುತ್ತವೆ.

| 10:12

| ಈ ಪುಡಿಯನ್ನು ತಯಾರಿಸಲು ನಮಗೆ ನುಗ್ಗೆ ಎಲೆಗಳು ಬೇಕಾಗುತ್ತದೆ.

| 10:17

| ತಯಾರಿಸುವ ವಿಧಾನ – ಮೊದಲು ಎಲ್ಲ ನುಗ್ಗೆ ಎಲೆಗಳನ್ನು ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.

| 10:22

| ಈ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ.

|10:25

| ಈಗ, ಎಲ್ಲ ಒಣಗಿದ ಎಲೆಗಳ ಪುಡಿಯನ್ನು ತಯಾರಿಸಿ. ನುಗ್ಗೆ ಎಲೆಗಳ ಪುಡಿಯು ಸಿದ್ಧವಾಗಿದೆ.

| 10:31

| ಈ ಪುಡಿಯನ್ನು ಗಾಳಿತೂರದ ಜಾಡಿಯಲ್ಲಿ ಶೇಖರಿಸಿಡಿ.

| 10:33

| ಮಗುವಿಗೆ ತಿನ್ನಿಸುವ ಮುನ್ನ, ಕಾಲು ಟೀಚಮಚದಷ್ಟು ಈ ಪುಡಿಯನ್ನು ಆಹಾರದಲ್ಲಿ ಸೇರಿಸಬಹುದು.

| 10:40

| ಇದು ಸುಮಾರು 5 ಮಿಲಿಗ್ರಾಂ ನಷ್ಟು ಕ್ಯಾಲ್ಶಿಯಂ ಅನ್ನು ಒದಗಿಸುತ್ತದೆ.

| 10:44

| ಈ ಪುಡಿಯ 100 ಗ್ರಾಂ, ಸುಮಾರು 350 ಮಿಲಿಗ್ರಾಂ ನಷ್ಟು ಕ್ಯಾಲ್ಶಿಯಂ ಅನ್ನು ಒದಗಿಸುತ್ತದೆ.

| 10:50

| ಯಾವಾಗಲೂ ಇವುಗಳನ್ನು ನೆನಪಿನಲ್ಲಿಡಿ: ಈ ಪುಡಿಗಳನ್ನು ತಯಾರಿಸಲು ಸ್ಥಳೀಯ ಮತ್ತು ಕಾಲೋಚಿತ ಎಣ್ಣೆಬೀಜಗಳು, ಕಾಳುಗಳು ಮತ್ತು ದ್ವಿದಳ ಧಾನ್ಯಗಳನ್ನು ಬಳಸಿ.

| 10:58

| ಪ್ರತಿಯೊಂದು ಊಟದಲ್ಲಿ ಒಂದು ಬೇರೆಯ ಪುಡಿ ಇರಬೇಕು.

| 11:01

| ಉದಾಹರಣೆಗೆ, ಒಂದು ಟೀಚಮಚದಷ್ಟು ಎಣ್ಣೆಬೀಜಗಳ ಪುಡಿಯನ್ನು ಬೇಯಿಸಿದ ಆಹಾರದಲ್ಲಿ ಸೇರಿಸಬಹುದು.

| 11:08

| ಅಥವಾ, ಕಾಲು ಟೀಚಮಚದಷ್ಟು ಕರಿಬೇವಿನ ಎಲೆಗಳ ಪುಡಿ ಅಥವಾ ನುಗ್ಗೆ ಎಲೆಗಳ ಪುಡಿಯನ್ನು ಬೇಯಿಸಿದ ಆಹಾರದಲ್ಲಿ ಸೇರಿಸಬಹುದು.

| 11:14

| ಅಥವಾ 2 ಟೀಚಮಚದಷ್ಟು ದ್ವಿದಳ ಧಾನ್ಯಗಳ ಪುಡಿಯನ್ನು ಸೇರಿಸಬಹುದು. ಇದನ್ನು ಆಹಾರದ ಜೊತೆಗೇ ಬೇಯಿಸಬೇಕು.

| 11:21

| ಗಮನಿಸಿ, ಈ ಟ್ಯುಟೋರಿಯಲ್ ನಲ್ಲಿಯ ಪುಡಿಗಳನ್ನು

| 11:26

| ನೆನೆಸುವುದು, ಹುರಿಯುವುದು ಮತ್ತು

| 11:28

| ಮೊಳಕೆ ಬರಿಸುವುದು ಮುಂತಾದ ವಿಧಾನಗಳನ್ನು ಬಳಸಿ ತಯಾರಿಸಲಾಗಿದೆ.

| 11:30

| ಈ ಎಲ್ಲ ವಿಧಾನಗಳು, ಆಹಾರದಿಂದ ಖನಿಜಾಂಶಗಳ ಹೀರುವಿಕೆಯನ್ನು ತಡೆಗಟ್ಟುವ 'ಫೈಟಿಕ್ ಆಸಿಡ್' ಅನ್ನು (Phytic acid) ಕಡಿಮೆ ಮಾಡುತ್ತವೆ.

| 11:38

| ಮತ್ತು, ಆಹಾರದಿಂದ ಪೌಷ್ಟಿಕಾಂಶದ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತವೆ.

| 11:42

| ಇಲ್ಲಿಗೆ, ನಾವು '''Nutritious powder recipes for 6 to 24 months old children''' ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

| 11:51

| ಈ ಟ್ಯುಟೋರಿಯಲ್ ನಲ್ಲಿ ನಾವು, ವಿವಿಧ ಪೌಷ್ಟಿಕಾಂಶದ ಪುಡಿಗಳ ಪಾಕವಿಧಾನಗಳನ್ನು ಕಲಿತಿದ್ದೇವೆ. ಇವುಗಳು ಹೀಗಿವೆ:

| 11:57

| ಅಮೈಲೇಸ್ ಪುಡಿ,

ಕಾಳುಗಳ ಪುಡಿ,

| 12:00

| ಎಣ್ಣೆಬೀಜಗಳ ಪುಡಿ,

| 12:02

| ದ್ವಿದಳ ಧಾನ್ಯಗಳ ಪುಡಿ,

| 12:04

| ಕರಿಬೇವಿನ ಎಲೆಗಳ ಪುಡಿ ಮತ್ತು

| 12:06

| ನುಗ್ಗೆ ಎಲೆಗಳ ಪುಡಿ.

| 12:08

| ಈ ಟ್ಯುಟೋರಿಯಲ್, '''Spoken Tutorial Project, IIT Bombay''' ಇವರ ಕೊಡುಗೆಯಾಗಿದೆ.

| 12:14

| ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, '''NMEICT, MHRD''' ಮೂಲಕ ಭಾರತ ಸರಕಾರದ ಅನುದಾನವನ್ನು ಪಡೆದಿದೆ.

ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

| 12:25

| ಈ ಟ್ಯುಟೋರಿಯಲ್, '''WHEELS Global Foundation''' ನ ಉದಾರ ಕೊಡುಗೆಯಿಂದ ಭಾಗಶಃ ಅನುದಾನವನ್ನು ಪಡೆದಿದ್ದು,

| 12:32

| '''Maa aur Shishu Poshan''' (ಮಾ ಔರ್ ಶಿಶು ಪೋಷಣ್) ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.

| 12:36

| ಈ ಟ್ಯುಟೋರಿಯಲ್ ನ ಡೊಮೇನ್ ರಿವ್ಯೂ ಮಾಡಿದವರು, Dr. ರೂಪಲ್ ದಲಾಲ್, MD ಪೀಡಿಯಾಟ್ರಿಕ್ಸ್ ಮತ್ತು Ms. ದೀಪಾಲಿ ಫಾರ್ಗಡೆ, ನ್ಯೂಟ್ರಿಶನಿಸ್ಟ್.

| 12:46

| ಈ ಸ್ಕ್ರಿಪ್ಟ್ ನ ಅನುವಾದಕಿ '''IIT Bombay''' ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.

ಧನ್ಯವಾದಗಳು.

Sandhya.np14