Health-and-Nutrition/C2/Physical-methods-to-increase-the-amount-of-breastmilk/Kannada

From Script | Spoken-Tutorial
Revision as of 13:00, 27 August 2020 by Debosmita (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:02 Physical Methods to Increase the Amount of Breast Milk ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ, ಟ್ಯುಟೋರಿಯಲ್ ನಲ್ಲಿ, ವಿವಿಧ ದೈಹಿಕ ವಿಧಾನಗಳನ್ನು ಬಳಸಿ ಎದೆಹಾಲಿನ ಪ್ರಮಾಣವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ನಾವು ಕಲಿಯುವೆವು.
00:17 ಮೊದಲು, ನಾವು Kangaroo mother care ನೊಂದಿಗೆ ಆರಂಭಿಸೋಣ.
00:20 ಈ ವಿಧಾನದಲ್ಲಿ, ಮಗು ತಾಯಿಯೊಂದಿಗೆ ಸಾಧ್ಯವಿದ್ದಷ್ಟು ವೇಳೆ ಪರಸ್ಪರ ಚರ್ಮದ ಸ್ಪರ್ಶವನ್ನು ಹೊಂದಿರಬೇಕು.
00:27 ಗಮನಿಸಿ, Kangaroo mother care ಗಾಗಿ ವಿಧಾನವನ್ನು ಇದೇ ಸರಣಿಯ ಬೇರೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
00:34 ನಂತರ, ನಾವು Let down reflex ಅಥವಾ Oxytocin reflex ಅನ್ನು ಹೇಗೆ ಸುಧಾರಿಸುವುದು ಎಂಬುದನ್ನು ಕಲಿಯುವೆವು.

ಅದಕ್ಕೂ ಮೊದಲು, 'ಆಕ್ಸೀಟೋಸಿನ್' (Oxytocin) ಎಂದರೇನು ಅದನ್ನು ತಿಳಿದುಕೊಳ್ಳಬೇಕು.

00:44 'ಆಕ್ಸೀಟೋಸಿನ್', Let down reflex ಅನ್ನು ಪ್ರೋತ್ಸಾಹಿಸುವ ಒಂದು ಹಾರ್ಮೋನ್ ಆಗಿದೆ. ಇದರಿಂದ, ಕೇವಲ ಮಗುವಿನ ಬಗ್ಗೆ ವಿಚಾರ ಮಾಡುವುದರಿಂದ ಹಾಲು ಹೊರಗೆ ನೂಕಲ್ಪಡುತ್ತದೆ.
00:54 ಆದ್ದರಿಂದ, ಹಾಲನ್ನು ಹೊರಗೆ ನೂಕಲು - ಮೊದಲು, ತಾಯಿಯು ವಿಶ್ರಾಂತಿ ಪಡೆಯಬೇಕು ಮತ್ತು ನಂತರ ಅವಳ ನೆಮ್ಮದಿಯಿಂದಿರುವ ಮಗುವನ್ನು ನೋಡಬೇಕು.
01:01 ಅವಳು ತನ್ನ ಮಗುವಿನ ತೊಳೆಯದ ಬಟ್ಟೆಗಳ ವಾಸನೆ ಸಹ ನೋಡಬಹುದು ಹಾಗೂ ಹಿತವಾದ ಸಂಗೀತವನ್ನು ಸಹ ಆಲಿಸಿಬಹುದು.
01:09 ಪರ್ಯಾಯವಾಗಿ, ಹಾಲನ್ನು ಹೊರಗೆ ತಳ್ಳಲು ಸಹಾಯ ಮಾಡುವ ಇತರ ವಿಧಾನಗಳು -

ಬಿಸಿ ನೀರಿನಿಂದ ಕಾವು ಕೊಡುವುದು (ಹಾಟ್ ವಾಟರ್ ಫೊಮೆಂಟೇಶನ್),

01:16 ಬೆನ್ನಿನ ಮೆಲ್ಭಾಗದ ಮತ್ತು ಸ್ತನದ ಮಾಲೀಸು ಮಾಡುವುದು.
01:20 ಬಿಸಿ ನೀರಿನಿಂದ ಕಾವು ಕೊಡುವುದು ಹೇಗೆ ಎಂದು ನಾವು ನೋಡೋಣ.
01:24 ತಾಯಿಯು ಬೆಚ್ಚನೆಯ ನೀರಿನಿಂದ ಸ್ನಾನ ಮಾಡಬೇಕು ಅಥವಾ ತನ್ನ ಎದೆಯ ಮೇಲೆ ಒಂದು ಬೆಚ್ಚಗಿನ ಬಟ್ಟೆಯನ್ನು ಇಡಬೇಕು.
01:30 ಈ ಎರಡೂ ವಿಧಾನಗಳು, ಸ್ತನಗಳಲ್ಲಿ ಹಾಲಿನ ಪರಿಚಲನೆಗೆ ಸಹಾಯ ಮಾಡುತ್ತವೆ ಮತ್ತು ಹಾಲನ್ನು ಹೊರಗೆ ತಳ್ಳುತ್ತವೆ.
01:36 ನಂತರ, ನಾವು ಮಾಲೀಸು ಮಾಡುವುದರ ಬಗ್ಗೆ ಕಲಿಯೋಣ.
01:40 ಬೆನ್ನಿನ ಮೆಲ್ಭಾಗದ ಮತ್ತು ಕುತ್ತಿಗೆಯ ಮಾಲೀಸು ಮಾಡುವುದರಿಂದ, ಹಾಲು ಸರಾಗವಾಗಿ ಹರಿಯಲು ಸಹಾಯವಾಗುವುದು. ಏಕೆಂದರೆ, ಬೆನ್ನಿನ ಮೆಲ್ಭಾಗಕ್ಕೆ ಮತ್ತು ಎದೆಗೆ ಒಂದೇ ನರವು ಹೊಗುತ್ತದೆ.
01:49 ಹಾಲುಣಿಸುವ ಮೊದಲು ಸ್ತನವನ್ನು ಮಾಲೀಸು ಮಾಡುವುದರಿಂದ ಹಾಲಿನ ನಾಳಗಳು ತೆರೆದುಕೊಳ್ಳುತ್ತವೆ.
01:53 ಆದ್ದರಿಂದ, ಹಾಲು ಸರಾಗವಾಗಿ ಹರಿಯುವುದು ಮತ್ತು ಸ್ತನವನ್ನು ಪೂರ್ತಿಯಾಗಿ ಖಾಲಿ ಮಾಡಲಾಗುವುದು. ಇದು ಹೆಚ್ಚಿನ ಹಾಲು ಉತ್ಪಾದನೆಗೆ ಕಾರಣವಾಗುವುದು.
02:01 ಎದೆ ಹಾಲಿನ ಪ್ರಮಾಣವನ್ನು ಹೆಚ್ಚಿಸುವ ಇನ್ನೊಂದು ವಿಧಾನವೆಂದರೆ, ಮಗುವನ್ನು ಸರಿಯಾಗಿ ಲ್ಯಾಚ್ ಮಾಡಲು ಪ್ರೋತ್ಸಾಹಿಸುವುದು.
02:09 ಅದನ್ನು ಹೇಗೆ ಮಾಡುವುದೆಂದು ನಾವು ನೋಡೋಣ.
02:12 ಮೊಲೆತೊಟ್ಟನ್ನು ಮಗುವಿನ ಮೇಲಿನ ತುಟಿಯ ಮೇಲೆ ಉಜ್ಜಿ. ಇದು ಮಗುವಿಗೆ ಬಾಯಿಯನ್ನು ಅಗಲವಾಗಿ ತೆರೆಯಲು ಸಹಾಯ ಮಾಡುವುದು. ಅಲ್ಲದೇ, ಸರಿಯಾದ ಲ್ಯಾಚ್ ನೊಂದಿಗೆ ಸಹಾಯ ಮಾಡುವುದು ಹಾಗೂ ಮಗುವಿಗೆ ಸಾಕಷ್ಟು ಹಾಲನ್ನು ಕೊಡುವುದು.
02:24 ಮೊಲೆಯೂಡಿಸುವ ಸಮಯದಲ್ಲಿ ಇವುಗಳನ್ನು ಖಚಿತಪಡಿಸಿಕೊಳ್ಳಿ -
02:27 ತಾಯಿಯು ಮಗುವಿನ ಸಂಪೂರ್ಣ ದೇಹವನ್ನು ಹಿಡಿದಿರುತ್ತಾಳೆ.
02:30 ಮಗುವಿನ ಹೊಟ್ಟೆಯು ತಾಯಿಯ ಹೊಟ್ಟೆಯನ್ನು ಸ್ಪರ್ಶಿಸಿರಬೇಕು.
02:34 ಮಗುವಿನ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇ ಸಾಲಿನಲ್ಲಿರುತ್ತವೆ.
02:39 ಮಗುವಿನ ಮೂಗು ಮತ್ತು ತಾಯಿಯ ಮೊಲೆತೊಟ್ಟು ಒಂದೇ ಸಾಲಿನಲ್ಲಿರುತ್ತವೆ.
02:43 ಗದ್ದವನ್ನು ಮುಂದೆ ತರಬೇಕು ಹಾಗೂ ತಾಯಿಯ ಎದೆಯಲ್ಲಿ ಹುದುಗಿಸಬೇಕು. ಕೆಳಗಿನ ತುಟಿಯು ಹೊರಮುಖವಾಗಿ ತೆರೆದಿದೆ.
02:50 ಲ್ಯಾಚ್ ಮಾಡುವಾಗ, ಮಗುವು ಕೆಳಗಿನ ಅರಿಯೋಲಾದ ಹೆಚ್ಚಿನ ಭಾಗವನ್ನು ಒಳಗೆ ತೆಗೆದುಕೊಳ್ಳುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹೀಗಾಗಿ ಕೆಳಗಿನ ಅರಿಯೋಲಾಗಿಂತ ಮೇಲಿನ ಅರಿಯೋಲಾ ಹೆಚ್ಚು ಗೋಚರಿಸುತ್ತದೆ.
03:01 ದಯವಿಟ್ಟು ಗಮನಿಸಿ- ಅರಿಯೋಲಾ, ಮೊಲೆತೊಟ್ಟಿನ ಸುತ್ತಲು ಇರುವ ಕಪ್ಪು ಜಾಗ ಆಗಿದೆ.
03:05 ನಂತರ, ನಾವು ಇನ್ನೊಂದು ದೈಹಿಕ ವಿಧಾನವನ್ನು ನೊಡೋಣ. ಇದು ಸ್ತನವನ್ನು ಮೆತ್ತಗೆ ಒತ್ತುವುದು ಆಗಿದೆ.
03:12 ಇದನ್ನು ಮಾಡಲು, ಹಾಲುಣಿಸುವಾಗ ಸ್ತನವನ್ನು ಮೆತ್ತಗೆ ಹಿಡಿದುಕೊಂಡು ಒತ್ತಿ.
03:17 ಹಾಲಿನ ಗ್ರಂಥಿಗಳ ಮೇಲಿನ ಮೆತ್ತನೆಯ ಒತ್ತಡವು, ಹೆಚ್ಚು ಹಾಲನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.
03:22 ಮಗು ಪ್ರತಿಯೊಂದು ಸಲ ಹೀರಿದಾಗ, ಇದು ಹೆಚ್ಚು ಹಾಲು ಕೊಡಲು ಸಹಾಯ ಮಾಡುತ್ತದೆ.
03:27 ಸ್ತನವನ್ನು ಮೆತ್ತಗೆ ಒತ್ತುವುದರ ಬಗ್ಗೆ ಇದೇ ಸರಣಿಯ ಇನ್ನೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
03:33 ಒಂದು ಆಸಕ್ತಿದಾಯಕ ಸಂಗತಿಯೆಂದರೆ, ರಾತ್ರಿಯ ಸಮಯದಲ್ಲಿ ಹಾಲುಣಿಸುವುದು ಮುಖ್ಯವಾಗಿದೆ. ಹೀಗೇಕೆ ಎಂಬುದನ್ನು ನಾವು ತಿಳಿದುಕೊಳ್ಳೋಣ.
03:41 ಎದೆಹಾಲಿನಲ್ಲಿರುವ Prolactin (ಪ್ರೊಲ್ಯಾಕ್ಟಿನ್) ಎಂಬ ಹಾರ್ಮೋನ್ ನ ಪ್ರಮಾಣವು ರಾತ್ರಿಯ ಸಮಯದಲ್ಲಿ ಹೆಚ್ಚಾಗಿರುತ್ತದೆ.
03:46 ಮಗು ರಾತ್ರಿಯಲ್ಲಿ ಹೆಚ್ಚು ಸ್ತನ್ಯಪಾನ ಮಾಡುವಾಗ - ಹಾಲುಣಿಸುವ ಸಮಯದಲ್ಲಿ ಇದು ಹಾಲಿನ ಪ್ರಮಾಣವನ್ನು ಸುಧಾರಿಸುತ್ತದೆ. ಇದರಿಂದಾಗಿ ಮಗುವಿನ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ.
03:56 ಎದೆಹಾಲಿನ ಪ್ರಮಾಣವನ್ನು ಹೆಚ್ಚಿಸುವ ಮತ್ತೊಂದು ಪ್ರಮುಖ ಅಂಶವೆಂದರೆ, ಹಾಲುಣಿಸುವ ಆವರ್ತನ ಆಗಿದೆ.
04:04 ಮಗುವಿಗೆ 24 ಗಂಟೆಗಳಲ್ಲಿ ಕನಿಷ್ಠ 10 ರಿಂದ 12 ಸಲ ಹಾಲುಣಿಸಬೇಕು. ಮತ್ತು, ರಾತ್ರಿಯಲ್ಲಿ ಕನಿಷ್ಠ 2 ರಿಂದ 3 ಸಲ ಹಾಲುಣಿಸುವುದು ಸಹ ಅತಿ ಮುಖ್ಯವಾಗಿದೆ.
04:15 ಮಗುವನ್ನು ಹಸಿದುಕೊಂಡಿರಲು ಬಿಡಬೇಡಿ.
04:17 ಮಗುವಿನ ಮೊದಲಿನ ಹಸಿವಿನ ಸಂಕೇತಗಳನ್ನು ನೋಡುತ್ತಿರಿ. ಮಗು ತನ್ನ ತೋಳುಗಳನ್ನು ಮತ್ತು ಕಾಲುಗಳನ್ನು ಚಲಿಸುತ್ತದೆ.
04:24 ತನ್ನ ಕೆನ್ನೆಗೆ ಸ್ಪರ್ಶಿಸಲಾದ ಎಲ್ಲದರ ಕಡೆಗೆ ಮಗು ತಿರುಗುತ್ತದೆ ಮತ್ತು ತನ್ನ ಬಾಯಿಯನ್ನು ತೆರೆಯುತ್ತದೆ.
04:30 ನೆನಪಿನಲ್ಲಿಡಿ, ಮಗುವಿನ ಅಳುವಿಕೆ ಹಸಿವಿನ ತಡವಾದ ಸಂಕೇತವಾಗಿದೆ. ಆದ್ದರಿಂದ, ಆರಂಭಿಕ ಹಸಿವಿನ ಚಿಹ್ನೆಗಳು ಬಂದ ತಕ್ಷಣ ಮಗುವಿಗೆ ಆಹಾರವನ್ನು ಕೊಡಿ.
04:39 ಹೈಂಡ್-ಮಿಲ್ಕ್ ಅನ್ನು ತೆಗೆಯುವುದು ಸಹ ಮುಖ್ಯವಾಗಿದೆ. ಹೈಂಡ್-ಮಿಲ್ಕ್ ಎಂದರೆ ಸ್ತನದ ಹಿಂಭಾಗದಲ್ಲಿ ಇರುವ ಹಾಲು ಆಗಿದೆ.
04:49 ಇದು ಕೊಬ್ಬಿನಿಂದ ಮಾಡಲ್ಪಟ್ಟಿದೆ ಹಾಗೂ ಸ್ವಲ್ಪ ಗಟ್ಟಿಯಾಗಿರುತ್ತದೆ.
04:53 ಆದ್ದರಿಂದ, ತಾಯಿಯು ತನ್ನ ಒಂದು ಸ್ತನವು ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ಖಚಿತಪಡಿಸಿಕೊಂಡ ನಂತರವೇ ಇನ್ನೊಂದು ಸ್ತನವನ್ನು ಕೊಡಬೇಕು.
05:00 ಈಗ, ಮಗುವಿಗೆ ಹಾಲುಣಿಸಿದ ನಂತರ ಹಾಲನ್ನು ಸ್ತನದಿಂದ ಹೊರಗೆ ತೆಗೆಯುವುದರ ಬಗ್ಗೆ ನಾವು ಚರ್ಚಿಸೋಣ.
05:06 ತಾಯಿಯ ಸ್ವಂತ ಕೈಗಳಿಂದ ಹಾಲನ್ನು ಹೊರಗೆ ತೆಗೆಯುವುದು (expressing) -
05:11 ಇದನ್ನು ಮಾಡಲು, ತಾಯಿಯು ತನ್ನ ಬೆರಳುಗಳು ಮತ್ತು ಹೆಬ್ಬೆರಳನ್ನು ಅರಿಯೋಲಾದ ಅಂಚಿನಲ್ಲಿ, ಸ್ತನದ ಚರ್ಮದ ಮೇಲೆ ಇಟ್ಟುಕೊಳ್ಳುತ್ತಾಳೆ.
05:19 ನಂತರ, ಮೃದುವಾಗಿ ಅರಿಯೋಲಾವನ್ನು ಎದೆಯ ಕಡೆಗೆ ಒಳಮುಖವಾಗಿ ಒತ್ತಿ, ಕುಗ್ಗಿಸುವುದು ನಂತರ ಬಿಡುವುದು ಹೀಗೆ ಮಾಡುತ್ತಾಳೆ.
05:26 ಮಗು ಸಂಪೂರ್ಣವಾಗಿ ಹೀರಿದ್ದರೂ ಸಹ ಇದನ್ನು ಮಾಡಲಾಗುತ್ತದೆ.
05:31 ತಾಯಿಯು ಎರಡು ಸ್ತನ್ಯಪಾನಗಳ ನಡುವೆ ಸಹ ಹಾಲನ್ನು ತೆಗೆಯಬೇಕು.
05:35 ಆಗಾಗ್ಗೆ ಹಾಲು ತೆಗೆಯುವುದರಿಂದ, ಎದೆಹಾಲಿನ ಪ್ರಮಾಣವನ್ನು ಸುಧಾರಿಸುತ್ತದೆ.
05:40 ಕೆಳಗಿನವುಗಳನ್ನು ಯಾವಾಗಲೂ ನೆನಪಿನಲ್ಲಿಡಿ: ಕೃತಕ ಮೊಲೆತೊಟ್ಟುಗಳ ಮತ್ತು ಫಾರ್ಮುಲಾ ಹಾಲಿನ ಬಳಕೆಯನ್ನು ತಪ್ಪಿಸಿ. ಏಕೆಂದರೆ ಇವು ತಾಯಿಯ ಹಾಲನ್ನು ಕಡಿಮೆ ಮಾದುತ್ತವೆ.
05:50 ಆಕಳ ಅಥವಾ ಆಡಿನ ಹಾಲನ್ನು ಅಥವಾ ಫಾರ್ಮುಲಾ ಹಾಲನ್ನು ಕುಡಿಸಬೇಡಿ.
05:54 ನಿಪ್ಪಲ್ ಶೀಲ್ಡ್ ಗಳನ್ನು ತಪ್ಪಿಸಿ. ಏಕೆಂದರೆ, ಅದು ಮಗುವಿಗೆ ಮೊಲೆತೊಟ್ಟಿನ ಬಗ್ಗೆ ಗೊಂದಲವನ್ನು ಉಂಟುಮಾಡುತ್ತದೆ.
05:59 ನೆನಪಿಡಿ, ಹಸಿವಿನ ಸೂಚನೆಗಳನ್ನು ಕೊಟ್ಟಾಗಲೆಲ್ಲ ಮಗುವಿಗೆ ಹಾಲುಣಿಸಬೇಕು.
06:06 ಆರೋಗ್ಯ ಕಾರ್ಯಕರ್ತನು, ತಾಯಿಯಾದವಳಿಗೆ ಸರಿಯಾದ ಲ್ಯಾಚಿಂಗ್ ತಂತ್ರದ ಬಗ್ಗೆ ವಿವರಿಸಿ, ಅವಳ ಆತ್ಮವಿಶ್ವಾಸವನ್ನು ಬೆಳೆಸಬೇಕು.
06:12 ಮಗುವಿನ ತೂಕವು ಪ್ರತಿದಿನ 25 ರಿಂದ 30 ಗ್ರಾಂ ನಷ್ಟು ಹೆಚ್ಚುತ್ತಿದೆ ಎಂದು ಖಚಿತಪಡಿಸಿಕೊಳ್ಳಲು, ಪ್ರತಿದಿನವೂ ತೂಕವನ್ನು ನೋಡಿ.
06:22 ಇಲ್ಲಿಗೆ ನಾವು Physical Methods to Increase the Amount of Breastmilk ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಧನ್ಯವಾದಗಳು.

Contributors and Content Editors

Debosmita, Sandhya.np14