Health-and-Nutrition/C2/Non-vegetarian-recipes-for-pregnant-women/Kannada

From Script | Spoken-Tutorial
Revision as of 20:48, 2 December 2019 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:01 Non-vegetarian recipes for pregnant women ಎಂಬ ಸ್ಪೋಕನ್-ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ಗರ್ಭಿಣಿ ಮಹಿಳೆಯರಿಗಾಗಿ ಮಾಂಸಾಹಾರದ ಮಹತ್ವ ಮತ್ತು ಕೆಲವು ಮಾಂಸಾಹಾರಿ ಪದಾರ್ಥಗಳ ಬಗ್ಗೆ ಕಲಿಯುತ್ತೇವೆ.
00:15 ಮೊದಲು ವಿವಿಧ ಮಾಂಸಾಹಾರಿ ಆಹಾರಗಳ ಮಹತ್ವವನ್ನು ತಿಳಿಯೋಣ.
00:20 ಕೋಳಿ, ಮಾಂಸ, ಮೀನು, ಸೀಗಡಿ, ಆರ್ಗನ್-ಮೀಟ್ ಇವುಗಳು ಪ್ರೋಟೀನ್, ಸತು, ಕೋಲಿನ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಗಳಲ್ಲಿ ಸಮೃದ್ಧವಾಗಿವೆ.
00:30 ಭ್ರೂಣದ ಬೆಳವಣಿಗೆಗೆ ಈ ಪೋಷಕಾಂಶಗಳು ಅವಶ್ಯಕ.
00:35 ಇವು ಮಗುವಿನ ಮೆದುಳಿನ ಬೆಳವಣಿಗೆಗೆ ಮತ್ತು ತಾಯಿಯ ಆರೋಗ್ಯಕ್ಕಾಗಿ ಅವಶ್ಯವಾಗಿವೆ.
00:41 ಗರ್ಭಾವಸ್ಥೆಯಲ್ಲಿ ಈ ಪೋಷಕಾಂಶಗಳನ್ನು ಪಡೆಯಲು ಮಾಂಸಾಹಾರವನ್ನು ಸೇವಿಸಬಹುದು.
00:46 ಈಗ, ನಾವು ಕೆಲವು ಮಾಂಸಾಹಾರಿ ಪಾಕವಿಧಾನಗಳನ್ನು ನೋಡೋಣ.
00:50 “ಕೇರಳ ಶೈಲಿಯ ಮೊಟ್ಟೆಯ ಕರಿ” ಯೊಂದಿಗೆ ಪ್ರಾರಂಭಿಸೋಣ.
00:55 ಇದಕ್ಕಾಗಿ, ನಮಗೆ:

2 ಬೇಯಿಸಿದ ಮೊಟ್ಟೆಗಳು, 1 ಮಧ್ಯಮ ಗಾತ್ರದ ಹೆಚ್ಚಿದ ಈರುಳ್ಳಿ,

01:02 1 ಹೆಚ್ಚಿದ ಟೊಮೆಟೊ,

2 ಬೆಳ್ಳುಳ್ಳಿಯ ಎಸಳು,

01:06 ½ ಇಂಚು ಶುಂಠಿ,

ಸ್ವಲ್ಪ ಕರಿಬೇವಿನ ಎಲೆಗಳು,

01:11 ¼ ಟೀಚಮಚ ಗರಂ ಮಸಾಲ ಪುಡಿ,

¼ ಟೀಚಮಚ ಮೆಣಸಿನ ಪುಡಿ,

01:14 ¼ ಟೀಚಮಚ ಕಾಶ್ಮೀರಿ ಕೆಂಪು ಮೆಣಸಿನ ಪುಡಿ,
01:18 ಅರಿಶಿನ ಪುಡಿ,

1 ಟೇಬಲ್-ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು,

01:22 1 ಟೇಬಲ್-ಚಮಚ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಇವುಗಳು ಬೇಕು.
01:26 ಮೊದಲು ನಾವು ಬೇಯಿಸಿದ ಮೊಟ್ಟೆಗಳನ್ನು ತಯಾರಿಸೋಣ.
01:29 ಒಂದು ಪಾತ್ರೆಯಲ್ಲಿ, ಅಂಗುಲ ಎತ್ತರ ನೀರಿನಲ್ಲಿ ಮೊಟ್ಟೆಗಳನ್ನು ಇರಿಸಿ ಪಾತ್ರೆಯನ್ನು ಮುಚ್ಚಿ.
01:36 ಹೆಚ್ಚಿನ ಶಾಖದಲ್ಲಿ ನೀರು ಕುದಿಯಲಿ. ಸರಿಯಾಗಿ ಬೇಯಿಸಿದ ಮೊಟ್ಟೆಗಳಿಗಾಗಿ, ಮಧ್ಯಮ ಶಾಖದಲ್ಲಿ 6 ರಿಂದ 7 ನಿಮಿಷ ಬೇಯಿಸಿ.
01:44 ಈಗ ಚಿಪ್ಪನ್ನು ತೆಗೆದು ಮೊಟ್ಟೆಗಳನ್ನು ಪಕ್ಕಕ್ಕೆ ಇರಿಸಿ.
01:48 ನಂತರ, ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ. ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ.
01:54 ಈಗ ಮಧ್ಯಮ ಉರಿಯಲ್ಲಿ ಈರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ.
01:59 ಆಮೇಲೆ ಎಲ್ಲಾ ಒಣ ಮಸಾಲೆಗಳನ್ನು ಸೇರಿಸಿ ಸುವಾಸನೆ ಬರುವವರೆಗೆ ಮತ್ತೆ ಹುರಿಯಿರಿ.
02:04 ಈಗ ಹೆಚ್ಚಿಟ್ಟ ಟೊಮೆಟೊ ಮತ್ತು ಉಪ್ಪು ಸೇರಿಸಿ.
02:07 1 ಕಪ್ ನೀರು ಸೇರಿಸಿ ಈ ಮಿಶ್ರಣವನ್ನು ಕುದಿಸಿ.
02:12 ಟೊಮ್ಯಾಟೊ ಕುದಿಯುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ, ಬೇಯಿಸಿದ ಮೊಟ್ಟೆಗಳನ್ನು ಅದರಲ್ಲಿ ಸೇರಿಸಿ.
02:18 ಬಾಣಲೆಯನ್ನು ಮುಚ್ಚಿ. ಮೊಟ್ಟೆಗಳನ್ನು 10 ರಿಂದ 15 ನಿಮಿಷಗಳ ಕಾಲ ಬೇಯಿಸಿ.
02:23 ಒಲೆಯಿಂದ ಕೆಳಗಿಳಿಸಿ, ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
02:26 ಮೊಟ್ಟೆಗಳು ತುಂಡಾಗದಂತೆ ಗ್ರೇವಿಯನ್ನು ನಿಧಾನವಾಗಿ ಕಲಕಿ.

ಈಗ ತಿನ್ನಲು ಬಡಿಸಿ.

02:32 ಈಗ ಎರಡನೇ ಪಾಕವಿಧಾನ ‘ಚಿಕನ್ ಚೆಟ್ಟಿನಾಡ್’ ಅನ್ನು ನೋಡೋಣ.
02:37 ಇದಕ್ಕಾಗಿ, ನಮಗೆ:

100 ಗ್ರಾಂ ಚಿಕನ್-ಬ್ರೆಸ್ಟ್,

02:42 1 ಟೇಬಲ್-ಚಮಚ ಎಣ್ಣೆ,

1 ಸಣ್ಣಗೆ ಹೆಚ್ಚಿದ ದೊಡ್ಡ ಈರುಳ್ಳಿ,

02:46 1 ಮಧ್ಯಮ ಟೊಮೆಟೊ,
02:48 1 ರಿಂದ 2 ಕಡ್ಡಿ ಕರಿಬೇವು ಮತ್ತು 1 ಪಲಾವ್ ಎಲೆ ಇವುಗಳು ಬೇಕು.
02:52 ಮ್ಯಾರಿನೇಷನ್ ಗಾಗಿ, ನಮಗೆ:

¼ ಟೀಚಮಚ ಅರಿಶಿನ ಪುಡಿ,

02:56 ¼ ಟೀಚಮಚ ಮೆಣಸಿನ ಪುಡಿ,
02:58 1 ಟೇಬಲ್-ಚಮಚ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಇವುಗಳು ಬೇಕು.
03:03 ಗ್ರೇವಿಗಾಗಿ ನಮಗೆ:

½ ಟೇಬಲ್-ಚಮಚ ಕೊತ್ತಂಬರಿ ಬೀಜ, ½ ಟೀಚಮಚ ಸೋಂಪು ಕಾಳು,

03:10 1 ಟೀಸ್ಪೂನ್ ಕಾಳುಮೆಣಸು,

1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ,

03:14 2 ಏಲಕ್ಕಿ, 2 ಲವಂಗ,
03:17 ½ ಇಂಚು ದಾಲ್ಚಿನ್ನಿ ಮತ್ತು

2 ಟೇಬಲ್-ಚಮಚ ಕಾಯಿತುರಿ ಇಷ್ಟು ಬೇಕಾಗುತ್ತದೆ.

03:22 ಚಿಕನ್ ಅನ್ನು ಮ್ಯಾರಿನೇಟ್ ಮಾಡಲು, ಒಂದು ಪಾತ್ರೆಯಲ್ಲಿ ಚಿಕನ್, ಅರಿಶಿನ, ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಉಪ್ಪು ಇವುಗಳನ್ನು ಬೆರೆಸಿ.
03:31 30 ರಿಂದ 45 ನಿಮಿಷಗಳ ಕಾಲ ಹಾಗೇ ಇರಿಸಿ.
03:34 ಕಡಿಮೆ ಶಾಖದಲ್ಲಿ ಕೊತ್ತಂಬರಿ ಬೀಜಗಳನ್ನು ಹುರಿಯಿರಿ.
03:38 2 - 3 ನಿಮಿಷಗಳ ನಂತರ ಉಳಿದ ಮಸಾಲೆಗಳನ್ನು ಸೇರಿಸಿ.
03:42 ಮಸಾಲೆಯ ಸುವಾಸನೆ ಬರುವವರೆಗೆ ಹುರಿದು ಅದನ್ನು ಬದಿಗೆ ಇರಿಸಿ.
03:47 ನಂತರ ಕಾಯಿತುರಿಯನ್ನು ಕೆಲವು ನಿಮಿಷ ಹುರಿಯಿರಿ.
03:50 ಹುರಿದ ಮಸಾಲೆ ಮತ್ತು ಕಾಯಿತುರಿಯನ್ನು ತಣ್ಣಗಾಗಲು ಬಿಡಿ.
03:53 1 ಟೇಬಲ್-ಚಮಚ ನೀರನ್ನು ಸೇರಿಸಿ ಮಿಕ್ಸರ್ ನಲ್ಲಿ ಇವುಗಳನ್ನು ಪೇಸ್ಟ್ ಮಾಡಿ.
04:00 ಈ ಪೇಸ್ಟ್ ಅನ್ನು ಬದಿಯಲ್ಲಿರಿಸಿ. ಈಗ ಬ್ಲೆಂಡರ್ ನಲ್ಲಿ ಟೊಮ್ಯಾಟೊ ಪ್ಯೂರೀಯನ್ನು ತಯಾರಿಸಿ.
04:06 ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ. ಇದರಲ್ಲಿ ಈರುಳ್ಳಿಯನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
04:12 ಇದರಲ್ಲಿ ಚಿಕನ್ ಸೇರಿಸಿ. ಮಧ್ಯಮ ಉರಿಯಲ್ಲಿ 4 ರಿಂದ 5 ನಿಮಿಷಗಳ ಕಾಲ ಮತ್ತೆ ಹುರಿಯಿರಿ.
04:16 ಟೊಮೆಟೊ ಪ್ಯೂರೀ, ಅರಿಶಿನ, ಉಪ್ಪು ಮತ್ತು ಮೆಣಸಿನ ಪುಡಿಯನ್ನು ಸೇರಿಸಿ.
04:21 ಚೆನ್ನಾಗಿ ಬೆರೆಸಿ, ಎಣ್ಣೆ ಬಿಡುವವರೆಗೆ ಬೇಯಿಸಿ.

ಇದರ ನಂತರ, ರುಬ್ಬಿದ ಪೇಸ್ಟ್ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ.

04:27 ಈ ಮಿಶ್ರಣವನ್ನು 2 - 3 ನಿಮಿಷ ಬೇಯಿಸಿ.
04:30 ¼ ಕಪ್ ನೀರು ಸೇರಿಸಿ. ಚಿಕನ್ ಮೃದುವಾಗುವವರೆಗೆ ಮುಚ್ಚಳ ಹಾಕಿ ಬೇಯಿಸಿ.
04:37 ಗ್ರೇವಿ ಗಟ್ಟಿಯಾಗುವವರೆಗೆ ಅದನ್ನು ಕುದಿಸುತ್ತಿರಿ.

ಕರಿಬೇವಿನ ಎಲೆಗಳಿಂದ ಅಲಂಕರಿಸಿ ಬಡಿಸಿ.

04:42 ನೆನಪಿಡಿ: ಮಟನ್, ಆರ್ಗನ್ ಮೀಟ್, ಸೀಗಡಿ ಮತ್ತು ಮೀನು ಇವುಗಳಲ್ಲಿ ಯಾವುದೇ ಒಂದನ್ನು ಬಳಸಿ ಈ ಪದಾರ್ಥವನ್ನು ತಯಾರಿಸಬಹುದು.
04:52 ಈಗ, ‘ಚಿಕನ್ ಲಿವರ್ ಸುಕ್ಕಾ’ ತಯಾರಿಸುವ ವಿಧಾನವನ್ನು ನೋಡೋಣ.
04:56 ಇದಕ್ಕಾಗಿ ಬೇಕಾದ ಪದಾರ್ಥಗಳು:

100 ಗ್ರಾಂ ಚಿಕನ್ ಲಿವರ್, 1 ಸಣ್ಣಗೆ ಹೆಚ್ಚಿದ ಈರುಳ್ಳಿ,

05:03 1 ಸಣ್ಣಗೆ ಹೆಚ್ಚಿದ ಟೊಮೆಟೊ,

6 ಬೆಳ್ಳುಳ್ಳಿ ಎಸಳು,

05:07 ¼ ಇಂಚು ಶುಂಠಿ,

2 ಟೇಬಲ್-ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು,

05:12 1 ಟೇಬಲ್-ಚಮಚ ಎಣ್ಣೆ,

ರುಚಿಗೆ ತಕ್ಕಷ್ಟು ಉಪ್ಪು ಮತ್ತು 1 ಟೇಬಲ್-ಚಮಚ ನಿಂಬೆ ರಸ.

05:18 ಬ್ಲೆಂಡರ್ ನಲ್ಲಿ ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿ, ಶುಂಠಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಒಟ್ಟಿಗೆ ಪೇಸ್ಟ್ ಮಾಡಿಕೊಳ್ಳಿ.
05:25 ಈ ಪೇಸ್ಟ್ ಅನ್ನು ಚಿಕನ್ ಲಿವರ್ ಮೇಲೆ ಹಚ್ಚಿ. ಇದನ್ನು 10 ರಿಂದ 15 ನಿಮಿಷಗಳ ಕಾಲ ಹಾಗೇ ಇರಿಸಿ.
05:34 ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ. ಅದರಲ್ಲಿ ಮ್ಯಾರಿನೇಷನ್ ಪೇಸ್ಟ್ ನೊಂದಿಗೆ ಲಿವರ್ ಅನ್ನು ಸೇರಿಸಿ ಚೆನ್ನಾಗಿ ಕಲಕಿ.
05:40 1/4 ಕಪ್ ನೀರು ಸೇರಿಸಿ. ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ. ನಂತರ, ಹೆಚ್ಚಿನ ಉರಿಯಲ್ಲಿ ಚೆನ್ನಾಗಿ ಬೇಯಿಸಿ.
05:49 ಚೆನ್ನಾಗಿ ಬೇಯಿಸಿ. ತಣ್ಣಗಾದ ನಂತರ ನಿಂಬೆ ರಸವನ್ನು ಸೇರಿಸಿ. ತೊಳೆದು ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಡಿಸಿ.
05:57 ಈ ಪದಾರ್ಥಕ್ಕಾಗಿ ನೀವು ಮಟನ್ ಲಿವರ್ ಅನ್ನು ಸಹ ಬಳಸಬಹುದು.
06:00 ಮುಂದಿನ ಪಾಕವಿಧಾನ - ಪಾಲಕ ಹಾಗೂ ಮೀನು ಪಲ್ಯ.
06:04 ಇದಕ್ಕಾಗಿ, ನಮಗೆ:

ಮ್ಯಾಕೆರೆಲ್ ಮೀನಿನ 2 ಸಣ್ಣ ತುಂಡುಗಳು,

06:08 1 ಕಪ್ ಪಾಲಕ ಸೊಪ್ಪು,

1 ಹೆಚ್ಚಿದ ಈರುಳ್ಳಿ,

06:12 1 ಸಣ್ಣಗೆ ಹೆಚ್ಚಿದ ಟೊಮೆಟೊ,

1 ಟೀಚಮಚ ಜೀರಿಗೆ,

06:16 2 - 3 ಬೆಳ್ಳುಳ್ಳಿ ಎಸಳು,
06:18 ¼ ಟೀಚಮಚ ಅರಿಶಿನ ಪುಡಿ,

1 ಟೀಚಮಚ ಕೆಂಪು ಮೆಣಸಿನ ಪುಡಿ,

06:23 1 ಟೀಚಮಚ ಜೀರಿಗೆ ಪುಡಿ,

¼ ಟೀಚಮಚ ಕರಿಮೆಣಸು ಪುಡಿ,

06:28 ½ ಟೀಚಮಚ ಕೊತ್ತಂಬರಿ ಬೀಜದ ಪುಡಿ,

1 ಟೇಬಲ್-ಚಮಚ ಬಿಳಿ ಎಳ್ಳು,

06:33 1 ಟೀಚಮಚ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಇಷ್ಟು ಬೇಕು.
06:37 ಮೆಕೆರೆಲ್ ಅನ್ನು ತೊಳೆದು ಶುಚಿಗೊಳಿಸಿ ಎರಡು ಭಾಗಗಳಾಗಿ ಕತ್ತರಿಸಿ ಬದಿಯಲ್ಲಿಡಿ.
06:43 ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಇದಕ್ಕೆ ಜೀರಿಗೆಯನ್ನು ಸೇರಿಸಿ.
06:46 ಅದು ಸಿಡಿದ ನಂತರ, ಪಾಲಕ ಸೊಪ್ಪನ್ನು ಸೇರಿಸಿ ಒಂದು ನಿಮಿಷ ಬೇಯಿಸಿ.
06:51 ಅದನ್ನು ತಣ್ಣಗಾಗಲು ಬಿಡಿ.
06:53 ನಂತರ, ಬೇಯಿಸಿದ ಪಾಲಕ, ಟೊಮೆಟೊ ಮತ್ತು ಎಳ್ಳು ಸೇರಿಸಿ ಗ್ರೈಂಡರ್ ನಲ್ಲಿ ಪ್ಯೂರೇ ಮಾಡಿ.
06:59 ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ಹೆಚ್ಚಿದ ಈರುಳ್ಳಿಯನ್ನು ಸೇರಿಸಿ.
07:03 ಈ ಈರುಳ್ಳಿ ಗುಲಾಬಿ ಬಣ್ಣಕ್ಕೆ ಬಂದಾಗ, ಬೆಳ್ಳುಳ್ಳಿಯನ್ನು ಸೇರಿಸಿ ಮತ್ತೆ ಹುರಿಯಿರಿ.
07:09 ಎಲ್ಲಾ ಒಣ ಮಸಾಲೆಗಳನ್ನು ಸೇರಿಸಿ ಸುವಾಸನೆ ಬರುವವವರೆಗೆ ಹುರಿಯಿರಿ.
07:14 ಈಗ ಪಾಲಕ ಪ್ಯೂರೇಯನ್ನು ಸೇರಿಸಿ ಕೆಲವು ನಿಮಿಷ ಬೇಯಿಸಿ.
07:17 ನಂತರ, ಮೀನಿನ ತುಂಡುಗಳನ್ನು ಸೇರಿಸಿ ಚೆನ್ನಾಗಿ ಬೇಯಿಸಿ.
07:20 ಈಗ, ¼ ಕಪ್ ನೀರು ಮತ್ತು ಉಪ್ಪು ಸೇರಿಸಿ. 5 ರಿಂದ 7 ನಿಮಿಷಗಳ ಕಾಲ ಮುಚ್ಚಳ ಹಾಕಿ ಬೇಯಿಸಿ.
07:28 ಮುಚ್ಚಳ ತೆಗೆದು 15 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ.

ಬಿಸಿಯಾಗಿ ಬಡಿಸಿ.

07:35 ನೆನಪಿಡಿ, ಸ್ಥಳೀಯವಾಗಿ ಲಭ್ಯವಿರುವ ಯಾವುದೇ ಮೀನನ್ನು ಇಲ್ಲಿ ಬಳಸಬಹುದು.
07:40 ಕೊನೆಯಲ್ಲಿ, ‘ಮೀಟ್-ಬಾಲ್ ಕರಿ’ ತಯಾರಿಸುವುದನ್ನು ನೋಡೋಣ.
07:44 ಇದನ್ನು ತಯಾರಿಸಲು, ನಮಗೆ:

100 ಗ್ರಾಂ ಕೊಚ್ಚಿದ ಮಾಂಸ, 1 ಸಣ್ಣಗೆ ಹೆಚ್ಚಿದ ಈರುಳ್ಳಿ,

07:51 1 ಹೆಚ್ಚಿದ ಟೊಮೆಟೊ,

½ ಟೇಬಲ್-ಚಮಚ ಶುಂಠಿ ಪೇಸ್ಟ್,

07:55 1 ಟೇಬಲ್-ಚಮಚ ಬೆಳ್ಳುಳ್ಳಿ ಪೇಸ್ಟ್,

1 ಟೇಬಲ್-ಚಮಚ ಗರಂ ಮಸಾಲ,

07:59 ¼ ಕಪ್ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು

ರುಚಿಗೆ ತಕ್ಕಷ್ಟು ಉಪ್ಪು ಬೇಕು.

08:04 ಗ್ರೇವಿಗಾಗಿ -

1 ಟೇಬಲ್-ಚಮಚ ಎಣ್ಣೆ, 1 ಸಣ್ಣಗೆ ಹೆಚ್ಚಿದ ಈರುಳ್ಳಿ,

08:10 1 ಟೇಬಲ್-ಚಮಚ ಬೆಳ್ಳುಳ್ಳಿ ಪೇಸ್ಟ್,

½ ಟೇಬಲ್-ಚಮಚ ಶುಂಠಿ ಪೇಸ್ಟ್,

08:14 ½ ಟೀಚಮಚ ಜೀರಿಗೆ ಪುಡಿ,
08:16 ¼ ಟೀಚಮಚ ಅರಿಶಿನ ಪುಡಿ,
08:19 ಮೆಣಸಿನ ಪುಡಿ, ಗರಂ ಮಸಾಲ ಮತ್ತು ಕೊತ್ತಂಬರಿ ಬೀಜದ ಪುಡಿ, ಪ್ರತಿಯೊಂದು ಅರ್ಧ ಟೀಚಮಚ,
08:25 1 ದೊಡ್ಡ ಹೆಚ್ಚಿದ ಟೊಮೆಟೊ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಇವುಗಳು ಬೇಕು.
08:29 ಈಗ ಮಸ್ಲಿನ್ ಬಟ್ಟೆಯನ್ನು ಬಳಸಿ, ಕೊಚ್ಚಿದ ಮಾಂಸವನ್ನು ತೊಳೆದು ಚೊಕ್ಕಟಗೊಳಿಸಿ.
08:34 ಒಂದು ಪಾತ್ರೆಯಲ್ಲಿ ಕೊಚ್ಚಿದ ಮಾಂಸ ಮತ್ತು ಹೆಚ್ಚಿದ ಈರುಳ್ಳಿಯನ್ನು ಬೆರೆಸಿ.
08:38 ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ.
08:44 ಈ ಮಿಶ್ರಣದಲ್ಲಿ ಒಂದೇ ಗಾತ್ರದ ಆರು ಉಂಡೆಗಳನ್ನು ರೂಪಿಸಿ.
08:48 ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ. ಉಳಿದ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ.
08:52 ತಿಳಿ ಕಂದು ಬಣ್ಣ ಬರುವವರೆಗೆ ಇದನ್ನು ಹುರಿಯಿರಿ.
08:56 ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಮತ್ತೆ ಕೆಲವು ನಿಮಿಷ ಹುರಿಯಿರಿ.
08:59 ಇದಕ್ಕೆ ಕೊತ್ತಂಬರಿ ಬೀಜದ ಪುಡಿ, ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲ ಮತ್ತು ಅರಿಶಿನ ಎಲ್ಲವನ್ನೂ ಸೇರಿಸಿ.
09:08 ಈಗ, ಇದನ್ನು 2 ರಿಂದ 3 ನಿಮಿಷಗಳ ಕಾಲ ಹುರಿಯಿರಿ.
09:11 ಟೊಮ್ಯಾಟೊ ಸೇರಿಸಿ 2 - 3 ನಿಮಿಷ ಹುರಿಯಿರಿ.

ನಂತರ, ಈ ಮಸಾಲೆಯಲ್ಲಿ ½ ಕಪ್ ನೀರು ಮತ್ತು ಉಪ್ಪು ಸೇರಿಸಿ.

09:18 ಈ ಹಂತದಲ್ಲಿ, ನಿಧಾನವಾಗಿ ಮೀಟ್-ಬಾಲ್ ಗಳನ್ನು ಸೇರಿಸಿ, ಸಣ್ಣ ಉರಿಯಲ್ಲಿ ಬೇಯಿಸಿ.
09:23 5 ನಿಮಿಷಗಳ ನಂತರ ನಿಧಾನವಾಗಿ ಕಲಕಿ ಮತ್ತು ಮೀಟ್-ಬಾಲ್ ಗಳು ಆಗುವವರೆಗೆ ಬೇಯಿಸಿ.

ಬಿಸಿಯಾಗಿ ಬಡಿಸಿ.

09:30 ಈ ಪಾಕವಿಧಾನವನ್ನು ತಯಾರಿಸಲು ನೀವು ಕೊಚ್ಚಿದ ಚಿಕನ್ ಅನ್ನು ಸಹ ಬಳಸಬಹುದು.
09:34 ಈ ಎಲ್ಲಾ ಪದಾರ್ಥಗಳು ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಾಮಿನ್ A, ವಿಟಾಮಿನ್ B12, ಫೋಲಿಕ್ ಆಸಿಡ್, ಕಬ್ಬಿಣ, ಸತು, ಮೆಗ್ನೀಸಿಯಮ್,
09:45 ಗಂಧಕ ಮತ್ತು ಕೋಲಿನ್ ಇವುಗಳಲ್ಲಿ ಸಮೃದ್ಧವಾಗಿವೆ ಎಂಬುದನ್ನು ನೆನಪಿನಲ್ಲಿಡಿ.
09:52 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್. ಧನ್ಯವಾದಗಳು.

Contributors and Content Editors

Sandhya.np14