Health-and-Nutrition/C2/General-guidelines-for-Complementary-feeding/Kannada

From Script | Spoken-Tutorial
Revision as of 19:38, 9 August 2020 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:02 ಪೂರಕ ಆಹಾರಗಳನ್ನು ನೀಡಲು ಸಾಮಾನ್ಯ ನಿಯಮಗಳನ್ನು ತಿಳಿಸುವ ಈ ಸ್ಪೊಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನಾವು,
00:14 ೬ ತಿಂಗಳ ಶಿಶುವಿಗೆ ಪೂರಕ ಆಹಾರವನ್ನು ಪ್ರಾರಂಭಿಸುವ ಪ್ರಾಮುಖ್ಯತೆ
00:19 ಮತ್ತು ೬ ರಿಂದ ೨೪ ತಿಂಗಳ ಮಕ್ಕಳಿಗೆ ಪೂರಕ ಆಹಾರವನ್ನು ಕೊಡುವ ನಿಯಮಾವಳಿಗಳ ಬಗ್ಗೆ ಕಲಿಯುವೆವು.
00:27 ಈಗ ಪ್ರಾರಂಭಿಸೋಣ.
00:29 ಒಂದು ಶಿಶುವಿಗೆ ಜನ್ಮದಿಂದ ೬ ತಿಂಗಳವರೆಗೆ ಕೇವಲ ಎದೆಹಾಲನ್ನು ಮಾತ್ರ ಕೊಡಬೇಕು.
00:37 ೬ ತಿಂಗಳು ಎಂದರೆ ಮಗುವಿನ ಜೀವನದ ೬ ನೇ ತಿಂಗಳು ಎಂದರ್ಥವಲ್ಲ.
00:45 ಮಗುವಿನ ವಯಸ್ಸು ೬ ತಿಂಗಳನ್ನು ಪೂರೈಸಿ ೭ ನೇ ತಿಂಗಳಿಗೆ ಪ್ರವೇಶಿಸಿರಬೇಕು.
00:52 ಈ ವಯಸ್ಸಿನಲ್ಲಿ, ಮಗುವಿಗೆ ಕೇವಲ ಎದೆಹಾಲು ಸಾಕಾಗುವದಿಲ್ಲ.
00:59 ಎದೆಹಾಲಿನ ಜೊತೆಗೆ ಮಗುವಿಗೆ ಮನೆಯಲ್ಲಿಯೇ ಸಿದ್ಧಪಡಿಸಿದ ಪೌಷ್ಟಿಕ ಆಹಾರವನ್ನು ಕೊಡುವುದು ಅತ್ಯಗತ್ಯ.
01:06 ಇಂತಹ ಆಹಾರವನ್ನು ಪೂರಕ ಆಹಾರ ಎಂದು ಕರೆಯುತ್ತಾರೆ.
01:11 ಇದನ್ನು ಮಗುವಿಗೆ ೬ ತಿಂಗಳಿಂದ ೨೪ ತಿಂಗಳವರೆಗೆ ಕೊಡಬೇಕು.
01:18 ಇದು ಮಗುವಿನ ಎತ್ತರ, ಆರೋಗ್ಯ ಮತ್ತು ಬುದ್ಧಿಮತ್ತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
01:26 ೬ ತಿಂಗಳಿನಲ್ಲಿ ಪೂರಕ ಆಹಾರವನ್ನು ಕೊಡುವುದು ತುಂಬಾ ಮುಖ್ಯವಾಗಿದೆ.
01:33 ಇಲ್ಲದಿದ್ದರೆ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ.
01:39 ಮಗುವು ಬೆಳೆದ ನಂತರ ಘನ ಆಹಾರವನ್ನು ತಿರಸ್ಕರಿಸುವ ಸಾಧ್ಯತೆಯೂ ಇರುತ್ತದೆ.
01:47 ನೆನಪಿಡಿ, ಪೂರಕ ಆಹಾರವು ಸ್ತನ್ಯಪಾನಕ್ಕೆ ಪೂರಕವಾಗಿರುತ್ತದೆ.
01:53 ಹಾಗಾಗಿ, ಹಾಲುಣಿಸುವಿಕೆಯನ್ನು ಕನಿಷ್ಠ ೨ ವರ್ಷದವರೆಗೆ ಮುಂದುವರೆಸಬೇಕು.
02:00 ಪೂರಕ ಆಹಾರದ ಪ್ರಕಾರ,
02:02 ಸ್ಥಿರತೆ
02:04 ಮತ್ತು ಪ್ರಮಾಣಗಳು ಮಗುವಿನ ವಯಸ್ಸಿನೊಂದಿಗೆ ಬದಲಾಗುತ್ತದೆ.
02:10 ಪ್ರತಿಯೊಂದು ವಯಸ್ಸಿಗೂ ಪ್ರತ್ಯೇಕವಾದ ಶಿಫಾರಸುಗಳಿವೆ.
02:16 ಅವುಗಳನ್ನು ಇದೇ ಸರಣಿಯ ಇನ್ನೊಂದು ಟ್ಯುಟೊರಿಯಲ್ ನಲ್ಲಿ ವಿವರಿಸಲಾಗಿದೆ.
02:23 ಈಗ ನಾವು, ಎಲ್ಲಾ ವಯಸ್ಸಿಗೆ ಉಪಯುಕ್ತವಾದ ಪೂರಕ ಆಹಾರದ ನಿಯಮಗಳನ್ನು ನೋಡೋಣ.
02:31 ಯಾವುದೇ ಹೊಸ ಆಹಾರವನ್ನು ಮಗುವಿಗೆ ಮೊದಲು ಕೊಡುವಾಗ ಪ್ರತ್ಯೆಕವಾಗಿ ಕೊಡಬೇಕು.
02:37 ನಂತರ ಅದನ್ನು ಬೇರೆ ಆಹಾರದ ಜೊತೆ ಬೆರೆಸಬಹುದು.
02:42 ಇದು ಮಗುವಿಗೆ ಯಾವುದೇ ಆಹಾರ ಹೊಂದುವದಿಲ್ಲವೋ ಎಂದು ತಿಳಿಯಲು ಸಹಾಯ ಮಾಡುತ್ತದೆ.
02:48 ಉತ್ತಮ ಪೋಷಕಾಂಶಕ್ಕಾಗಿ ನಾನಾ ಆಹಾರಗಳನ್ನು ಸೇವಿಸುವುದು ಅಗತ್ಯವಾಗಿದೆ.
02:54 ಪ್ರತಿ ೪ ದಿನಗಳಿಗೊಮ್ಮೆ, ಮಗುವಿನ ಆಹಾರಕ್ರಮದಲ್ಲಿ ಹೊಸದನ್ನು ಸೇರಿಸಿ.
03:01 ಮೊದಲು ಕೊಡುತ್ತಿದ್ದ ಆಹಾರದ ಜೊತೆ ಒಂದು ಚಮಚ ಹೊಸ ಆಹಾರವನ್ನು ಕೊಡಿ.
03:08 ನಿಧಾನವಾಗಿ ಪ್ರತಿದಿನ ಅದರ ಪ್ರಮಾಣವನ್ನು ಹೆಚ್ಚಿಸಿ.
03:12 ಎಲ್ಲಾ ೮ ಆಹಾರಸಮೂಹಗಳಿಂದ ಪೌಷ್ಟಿಕ ಘನ ಆಹಾರವನ್ನು ನಿಧಾನವಾಗಿ ಸೇರಿಸಬೇಕು.
03:20 ಮೊದಲ ಆಹಾರದ ಸಮೂಹದಲ್ಲಿ ಧಾನ್ಯಗಳು, ಗಡ್ಡೆ ಗೆಣಸುಗಳು ಬರುತ್ತವೆ.
03:27 ದ್ವಿದಳ ಧಾನ್ಯಗಳು,ಬೀಜಗಳು ಮತ್ತು ಕಾಯಿಗಳು ಎರಡನೇ ಸಮೂಹವಾಗಿವೆ.
03:32 ಮೂರನೆಯದು ಹಾಲಿನ ಉತ್ಪನ್ನಗಳಾಗಿವೆ.
03:37 ನಾಲ್ಕನೆಯದು ಮಾಂಸ, ಮೀನು ಮತ್ತು ಕೋಳಿಮಾಂಸ ವಾಗಿವೆ.
03:42 ಮೊಟ್ಟೆ ೫ನೇ ಸಮೂಹವಾಗಿದೆ.
03:46 ವಿಟಾಮಿನ್ A ಯನ್ನು ಸಮ್ರುದ್ಧವಾಗಿ ಹೊಂದಿರುವ ತರಕಾರಿಗಳು ೬ ನೇ ಸಮೂಹವಾಗಿವೆ.
03:52 ಏಳನೆಯದು ಹಣ್ಣು ಮತ್ತು ತರಕಾರಿಗಳು.
03:57 ಕೊನೆಯದಾಗಿ, ಎದೆಹಾಲು ಎಂಟನೇ ಸಮೂಹವಾಗಿದೆ ಮತ್ತು ಅತ್ಯಂತ ಮುಖ್ಯವಾಗಿದೆ.
04:04 ಇದನ್ನು ಬೇರೆ ಆಹಾರಗಳ ಜೊತೆಗೆ ಕೊಡಲೇಬೇಕು.
04:11 ಹಾಗಾಗಿ ಮಗುವಿನ ಆಹಾರಕ್ರಮವು ಈ ೮ ಸಮೂಹಗಳನ್ನು ಹೊಂದಿರಬೇಕು.
04:17 ಒಂದು ವೇಳೆ ಅದು ೫ ಸಮೂಹಕ್ಕಿಂತ ಕಡಿಮೆಯಿದ್ದರೆ ತುಂಬಾ ಸಮಸ್ಯೆಗೆ ಕಾರಣವಾಗುತ್ತದೆ.
04:24 ಅದನ್ನು ತಕ್ಷಣವೇ ಸರಿಪಡಿಸಿಕೊಳ್ಳಬೇಕು.
04:28 ಕೆಲವು ಶಿಶುಗಳಿಗೆ ಎದೆಹಾಲು ದೊರೆಯುವದೇ ಇಲ್ಲ.
04:33 ಆಗ ಉಳಿದ ೭ ಸಮೂಹದ ಆಹಾರವನ್ನು ಪ್ರತಿದಿನ ಯೋಜಿಸಿಕೊಳ್ಳಿ.
04:40 ಮತ್ತು, 500 ml ಪ್ರಾಣಿಮೂಲದ ಹಾಲನ್ನು ಪ್ರತಿದಿನ ೨ ಬಾರಿ ಅಧಿಕವಾಗಿ ಕೊಡಿ.
04:49 ಪ್ರಾಣಿ ಮೂಲದ ಹಾಲನ್ನು ಕೊಡುವ ಮೊದಲು ಕಾಯಿಸಿ ಕೊಡಿ.
04:55 ಈಗ ನಾವು, ಮಗುವಿನ ಆಹಾರಕ್ರಮದಲ್ಲಿ ಹೊಸ ಆಹಾರದ ಸಮೂಹವನ್ನು ಸೇರಿಸುವ ಕುರಿತು ಚರ್ಚಿಸೋಣ.
05:02 ಎದೆಹಾಲಿನ ಜೊತೆ, ಮೊದಲ ೫ ಸಮೂಹದಲ್ಲಿನ ಪೂರಕ ಆಹಾರವನ್ನು ಕೊಡಲು ಪ್ರಾರಂಭಿಸಿ.
05:09 ಮಗುವಿಗೆ ೬ ತಿಂಗಳ ನಂತರ ಹೆಚ್ಚಿನ ಪೋಷಕಾಂಶ ಬೇಕಾಗುತ್ತದೆ.
05:16 ಆಹಾರದ ಪ್ರಮಾಣ ಪ್ರಾರಂಭಿಕ ದಿನಗಳಲ್ಲಿ ಕಡಿಮೆ ಇರಬಹುದು.
05:24 ಹಾಗಾಗಿ, ೫ ಸಮೂಹಗಳಲ್ಲಿನ ಪೊಷಕಾಂಶಯುಕ್ತ ಘನ ಆಹಾರವನ್ನು ಕೊಡಬಹುದು.
05:31 ಈ ಆಹಾರಗಳು ಪ್ರೋಟೀನ್, ಕೊಬ್ಬು ಮೊದಲಾದ ಪೊಷಕಾಂಶಗಳನ್ನು ಹೆಚ್ಚಾಗಿ ಹೊಂದಿವೆ.
05:38 ಇವುಗಳು ಮಗುವಿನ ಎತ್ತರ ಮತ್ತು ನರಗಳ ಬೆಳವಣಿಗೆಗೆ ತುಂಬಾ ಮುಖ್ಯವಾಗಿವೆ.
05:45 ಉತ್ತಮ ಕೊಬ್ಬು ಮಗುವಿನ ಮೆದುಳಿನ ಬೆಳವಣಿಗೆಗೆ ಮುಖ್ಯವಾಗಿದೆ.
05:50 ಈ ಆಹಾರಗಳ ನಂತರ, ತರಕಾರಿ ಮತ್ತು ಹಣ್ಣುಗಳನ್ನು ಕೊಡಲು ಪ್ರಾರಂಭಿಸಿ.
05:57 ತರಕಾರಿ ಮತ್ತು ಹಣ್ಣುಗಳು ವಿಟಾಮಿನ್ ಮತ್ತು ಖನಿಜಗಳನ್ನು ಹೆಚ್ಚು ಹೊಂದಿರುತ್ತವೆ.
06:03 ಆದರೆ ಅವು, ಪ್ರೋಟೀನ್ ಮತ್ತು ಕೊಬ್ಬುಗಳ ವಿಚಾರದಲ್ಲಿ ಮೊದಲ ೫ ಸಮೂಹಗಳಷ್ಟು ಶ್ರೀಮಂತವಾಗಿಲ್ಲ.
06:11 ಹಾಗಾಗಿ, ತೂಕದ ನಷ್ಟವನ್ನು ತಡೆಯಲು ಅವುಗಳನ್ನು ನಂತರ ಪ್ರಾರಂಭಿಸಲಾಗುತ್ತದೆ.
06:18 ಮತ್ತು ಹಣ್ಣುಗಳು ಸಿಹಿಯಾಗಿರುತ್ತವೆ.
06:23 ಮಗುವು ಸಿಹಿಗಿಂತ ಮೊದಲು ಬೇರೆ ಬೇರೆ ರುಚಿಯನ್ನು ನೊಡುವುದು ಮುಖ್ಯವಾಗಿದೆ.
06:31 ಬೇರೆ ಬೇರೆ ರುಚಿಗಳನ್ನು ಅಭ್ಯಾಸ ಮಾಡುವದರಿಂದ ಮಗುವು ಹಲವು ಆಹಾರಗಳನ್ನು ಸ್ವೀಕರಿಸಲು ಸಹಾಯವಾಗುತ್ತದೆ.
06:37 ಇದರಿಂದ ಮಗುವು ಐಚ್ಛಿಕವಾಗಿ ತಿನ್ನುವುದು ತಪ್ಪುತ್ತದೆ.
06:44 ಹಾಗಾಗಿ ಮಗುವಿನ ಆಹಾರಕ್ರಮದಲ್ಲಿ ಉಳಿದೆಲ್ಲಾ ಆಹಾರಗಳ ನಂತರ ಹಣ್ಣನ್ನು ಸೇರಿಸಲಾಗುತ್ತದೆ.
06:51 ತಾಜಾ ಮತ್ತು ಆಯಾ ಕಾಲದ ಮತ್ತು ಪ್ರದೆಶದ ಹಣ್ಣನ್ನು ದಿನಕ್ಕೆರಡು ಬಾರಿ ನೀಡುವುದು ಉತ್ತಮವಾಗಿದೆ.
06:59 ಹಣ್ಣುಗಳನ್ನು ಊಟದ ನಂತರ ಆಹಾರವಾಗಿ ಕೊಡಬಹುದು.
07:05 ಹಣ್ಣಿನ ಪ್ಯೂರಿಯನ್ನು ಮಗುವಿನ ನಿತ್ಯದ ಊಟದ ಜೊತೆ ಬೆರೆಸಬಾರದು.
07:11 ಈ ವಯಸ್ಸಿಗೆ ಹಣ್ಣಿನ ರಸ ಸೂಕ್ತವಲ್ಲ.
07:16 ಅದು ಮನೆಯಲ್ಲಿ ತಯಾರಿಸಿದ ಅಥವಾ ಸಿದ್ಧ ಹಣ್ಣಿನ ರಸವಾಗಿರಬಹುದು.
07:23 ನೆನಪಿಡಿ, ಎದೆಹಾಲುಣಿಸುವದನ್ನು ೨ ವರ್ಷದ ವರೆಗೆ ಮುಂದುವರೆಸಿ.
07:28 ಗಟ್ಟಿಯಾದ ಹಣ್ಣುಗಳು ಮಗುವಿಗೆ ಉಸಿರುಗಟ್ಟಿಸುವದರಿಂದ ಅವುಗಳನ್ನು ತ್ಯಜಿಸಿ.
07:34 ಕಾಯಿಗಳು, ದ್ರಾಕ್ಷಿ, ಕಡಲೆಕಾಳು ಮತ್ತು ಹಸಿ ಗಜ್ಜರಿ ಅಂತಹ ಆಹಾರಗಳಿಗೆ ಉದಾಹರಣೆ.
07:44 ಮಗುವಿಗೆ ತಾಜಾ ಮನೆಯಲ್ಲೇ ಬೇಯಿಸಿ ಶುದ್ಧವಾಗಿ ತಯಾರಿಸಿದ ಆಹಾರ ಸೂಕ್ತವಾಗಿದೆ.
07:51 ಮಗುವಿನ ಆಹಾರವನ್ನು ಸಂಗ್ರಹಿಸುವದಾದರೆ, ಅದಕ್ಕೆ ಸಂಬಂಧಿಸಿದ ನಮ್ಮ ಟ್ಯುಟೋರಿಯಲ್ ಅನ್ನು ನೋಡಿ.
07:57 ಸುರಕ್ಷಿತವಾಗಿ ಮಗುವಿಗೆ ಆಹಾರ ಸಿದ್ಧಪಡಿಸಿ ಬಡಸುವ ವಿಧಾನವನ್ನೂ ಅದೇ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
08:06 ಹೆಚ್ಚಿನ ವಿವರಗಳಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡಿ.
08:10 ೬ ತಿಂಗಳ ಮಗುವಿಗೆ ಆಹಾರದ ಜೊತೆಗೆ ಕುದಿಸಿ ಆರಿಸಿದ ನೀರನ್ನು ಕೊಡಬಹುದು.
08:18 ದಿನಕ್ಕೆರಡು ಬಾರಿ 30 ರಿಂದ 60 ml ನೀರಿನೊಂದಿಗೆ ಪ್ರಾರಂಭಿಸಿ.
08:25 ಬಿಸಿ ವಾತಾವರಣದಲ್ಲಿ ಮಗುವಿನ ಅಗತ್ಯಕ್ಕೆ ತಕ್ಕಂತೆ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕು.
08:31 ಎದೆ ಹಾಲು ಮತ್ತು ನೀರು ಮಗುವಿಗೆ ಅತ್ಯುತ್ತಮ ಪೇಯಗಳಾಗಿವೆ.
08:37 ಆದರೆ ಅದನ್ನು ಸರಿಯಾದ ಸಮಯಕ್ಕೆ ನೀಡಬೇಕು.
08:42 ಮಗುವಿಗೆ ಊಟಕ್ಕಿಂತ ಮೊದಲು ಎದೆಹಾಲು ಅಥವಾ ನೀರನ್ನು ಕೊಡಬೇಡಿ.
08:48 ಹಸಿದ ಮಗುವು ಹೊಸ ಆಹಾರಗಳನ್ನು ಸ್ವೀಕರಿಸುತ್ತದೆ.
08:54 ಮಗುವಿಗೆ ೨೦ ರಿಂದ ೩೦ ನಿಮಿಷ ಮೊದಲು ಅಥವಾ ನಂತರ , ಎದೆಹಾಲನ್ನು ಅಥವಾ ನೀರನ್ನು ಕೊಡಬಹುದು.
09:02 ಮಗುವಿನ ಸರಿಯಾದ ಬೆಳವಣಿಗೆಗೆ, ಸಾಕಷ್ಟು ಪೂರಕ ಆಹಾರಗಳೂ ಬೇಕು.
09:08 ನಾವು ಟ್ಯುಟೋರಿಯಲ್ ನ ಕೊನೆಯಲ್ಲಿದ್ದೇವೆ. ಅನುವಾದ ಮತ್ತು ಧ್ವನಿ ಶ್ರೀಮತಿ ನಯನಾ ಭಟ್ಟ.

ಧನ್ಯವಾದಗಳು.

Contributors and Content Editors

Debosmita, NaveenBhat