Health-and-Nutrition/C2/Football-hold-for-breastfeeding/Kannada

From Script | Spoken-Tutorial
Revision as of 21:03, 14 January 2019 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Football hold for breastfeeding ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ: ತಾಯಿಯು ಹಾಲುಣಿಸುವಾಗ ಮಗುವನ್ನು ಹಿಡಿದುಕೊಳ್ಳುವ ಸರಿಯಾದ ವಿಧಾನವನ್ನು ಆರಿಸಿಕೊಳ್ಳುವುದು,
00:15 ಸ್ತನ್ಯಪಾನದ ಮೊದಲು ತಾಯಿಯ ತಯಾರಿ ಮತ್ತು ಹಂತ ಹಂತವಾಗಿ 'ಫುಟ್-ಬಾಲ್ ಹೋಲ್ಡ್' ಕಾರ್ಯವಿಧಾನದ ಬಗ್ಗೆ ನಾವು ಕಲಿಯುವೆವು.
00:23 ನಾವು ಈಗ ಆರಂಭಿಸೋಣ.
00:24 ಪ್ರಪಂಚದಾದ್ಯಂತ, ತಾಯಂದಿರು ತಮ್ಮ ಮಗುವನ್ನು ವಿವಿಧ ರೀತಿಯಲ್ಲಿ ಹಿಡಿದುಕೊಂಡು ಸ್ತನ್ಯಪಾನ ಮಾಡಿಸುತ್ತಾರೆ.
00:31 ಮುಂಚಿನ ಟ್ಯುಟೋರಿಯಲ್ ನಲ್ಲಿ ವಿವರಿಸಿದಂತೆ, ತಾಯಿ ಮತ್ತು ಅವಳ ಮಗುವಿಗಾಗಿ ಅತ್ಯುತ್ತಮ ಹಾಲುಣಿಸುವ ಹಿಡಿತವು ಈ ಕೆಳಗಿನಂತೆ ಇರುತ್ತದೆ:
00:41 ಹಾಲುಣಿಸುವ ಸಂಪೂರ್ಣ ಅವಧಿಯವರೆಗೆ ತಾಯಿ ಮತ್ತು ಮಗು ಇಬ್ಬರೂ ಆರಾಮವಾಗಿರುತ್ತಾರೆ.
00:48 ಮಗು ತಾಯಿಯ ಸ್ತನಕ್ಕೆ ಗಟ್ಟಿಯಾಗಿ ಜೋಡಿಸಿಕೊಳ್ಳಲು ಸಾಧ್ಯವಾಗಿರುತ್ತದೆ ಮತ್ತು ಸಾಕಷ್ಟು ಹಾಲು ಸಿಗುತ್ತದೆ.
00:56 'ಫುಟ್-ಬಾಲ್ ಹೋಲ್ಡ್' ಎಂಬ ಹಿಡಿತದ ಬಗ್ಗೆ ನಾವು ತಿಳಿಯೋಣ.
01:01 'ಫುಟ್-ಬಾಲ್ ಹೋಲ್ಡ್' ಇದು : ತಾಯಿಯ ಸಿ-ಸೆಕ್ಷನ್ ಹೆರಿಗೆಯಾಗಿದ್ದರೆ,
01:08 ದೊಡ್ಡ ಸ್ತನಗಳನ್ನು ಹೊಂದಿದ್ದರೆ,
01:10 ಸಣ್ಣ ಅಥವಾ ಅಕಾಲಿಕ ಮಗುವನ್ನು ಹೊಂದಿದ್ದರೆ ಅಥವಾ
01:14 ಅವಳಿ ಶಿಶುಗಳನ್ನು ಹೊಂದಿದ್ದರೆ, ಅಂತಹ ಸಂದರ್ಭಗಳಲ್ಲಿ ವಿಶೇಷವಾಗಿ ಉಪಯುಕ್ತವಾಗಿದೆ.
01:15 ಯಾವಾಗಲೂ ನೆನಪಿಡಿ: ಮಗುವಿಗೆ ಹಾಲೂಡಿಸುವ ಮೊದಲು ತಾಯಿಯು ತನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಂಡು ಒಣಗಿಸಬೇಕು.
01:22 ನಂತರ ಅವಳು ಒಂದು ಲೋಟ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು.
01:27 ಹಾಲುಣಿಸುವ ತಾಯಂದಿರು ದಿನದಲ್ಲಿ ಸರಾಸರಿ 750 ರಿಂದ 850 ಮಿಲಿಲೀಟರ್ ಹಾಲನ್ನು ಉತ್ಪಾದಿಸುತ್ತಾರೆ.
01:34 ಆದ್ದರಿಂದ, ಅವರು ತಮ್ಮ ದೈನಂದಿನ ನೀರಿನ ಸೇವನೆಯನ್ನು ಹೆಚ್ಚಿಸಿಕೊಳ್ಳಬೇಕು.
01:38 ನಂತರ, ನಾವು ತಾಯಿಯ ಸ್ಥಾನದ ಬಗ್ಗೆ ಚರ್ಚಿಸೋಣ.
01:43 ತಾಯಿಯು ನೆಲದ ಮೇಲೆ ಅಥವಾ ಹಾಸಿಗೆಯ ಮೇಲೆ ಕಾಲುಗಳನ್ನು ಮಡಿಚಿಕೊಂಡು
01:48 ಅಥವಾ, ನೆಲದ ಮೇಲೆ ತನ್ನ ಪಾದಗಳನ್ನು ಇಟ್ಟುಕೊಂಡು ಕುರ್ಚಿಯಲ್ಲಿ ಕುಳಿತುಕೊಳ್ಳಬೇಕು.
01:51 ಕುರ್ಚಿ ತುಂಬಾ ಎತ್ತರವಾಗಿದ್ದರೆ ಮತ್ತು ಅವಳ ಪಾದಗಳು ನೆಲಕ್ಕೆ ತಾಗದಿದ್ದರೆ, ಆಗ ಆಕೆಯು ತನ್ನ ಪಾದಗಳನ್ನು ಒಂದು ಸಣ್ಣ ಸ್ಟೂಲ್ ಅಥವಾ ನೆಲದ ಮೇಲೆ ಇರಿಸಿದ ದಿಂಬುಗಳ ಮೇಲೆ ಇಡಬಹುದು.
02:02 ಕುಳಿತುಕೊಳ್ಳುವಾಗ, ಬೆನ್ನಿನ ನೋವನ್ನು ತಪ್ಪಿಸಲು ತನ್ನ ಬೆನ್ನು ನೇರವಾಗಿರುವುದನ್ನು ಅವಳು ಖಚಿತಪಡಿಸಿಕೊಳ್ಳಬೇಕು.
02:09 ಅವಳ ಭುಜಗಳು ವಿಶ್ರಾಂತಿ ಪಡೆಯುತ್ತಿದ್ದು ಎತ್ತರಿಸಿ ಅಥವಾ ಬಾಗಿಸಿರುವುದಿಲ್ಲ.
02:13 ಮತ್ತು, ಈ ವಿಶ್ರಾಂತ ಸ್ಥಿತಿಯನ್ನು ಹಾಲೂಡಿಸುವ ಅವಧಿಯ ಉದ್ದಕ್ಕೂ ಮುಂದುವರೆಸಲಾಗುತ್ತದೆ.
02:19 ತಾಯಿಯು ಹಾಲೂಡಿಸುವ ಸ್ತನದ ಬದಿಯಲ್ಲಿ 3 ರಿಂದ 4 ದಿಂಬುಗಳನ್ನು ಇಟ್ಟುಕೊಳ್ಳಬೇಕು.
02:26 ಎಲ್ಲಕ್ಕಿಂತ ಮೇಲಿರುವ ದಿಂಬನ್ನು, ಇತರ ದಿಂಬುಗಳ ಮತ್ತು ತಾಯಿಯ ತೊಡೆಯ ಮೇಲೆ ಅಡ್ಡಲಾಗಿ (ಚಿತ್ರದಲ್ಲಿ ತೋರಿಸಿದಂತೆ) ಇಡಬೇಕು.
02:32 ನಂತರ, ತಾಯಿಯು ಮಗುವಿಗೆ ಹಾಲುಣಿಸುವ ಸ್ತನವನ್ನು ಮಾತ್ರ ಹೊರಗೆ ತೆಗೆಯಬೇಕು.
02:38 ಅವಳು ಸ್ತನದ ಮೇಲೆ ತನ್ನ ಬ್ರಾ ಅಥವಾ ಕುಪ್ಪಸದ ಒತ್ತಡವು ಬಾರದಂತೆ ನೋಡಿಕೊಳ್ಳಬೇಕು.
02:45 ಆರಾಮವಾಗಿ ಕುಳಿತುಕೊಂಡ ನಂತರ, ಶಿಶುವನ್ನು ತಾಯಿಯ ಬಳಿಗೆ ತರಬೇಕು.
02:49 ತಾಯಿಯು ತನ್ನ ಶಿಶುವಿನ ಬೆನ್ನನ್ನು ದಿಂಬುಗಳ ಮೇಲೆ ಇಡಬೇಕು.
02:53 ಅವಳು ಹಾಲುಣಿಸುವ ಸ್ತನದ ಬದಿಯ ಕೈಯನ್ನು ಬಳಸಿ ತನ್ನ ಮಗುವಿನ ತಲೆಯನ್ನು ಹಿಡಿದಿರಬೇಕು.
03:01 ಮಗುವಿನ ಕಾಲುಗಳು, ತಾಯಿಯ ಅದೇ ಬದಿಯ ಕಂಕುಳಿನ ಮೂಲಕ ದಿಂಬಿನ ಮೇಲಕ್ಕೆ ಹೋಗಬೇಕು.
03:08 ತಾಯಿಯು ತನ್ನ ಈ ಕೈಯನ್ನು ಮತ್ತು ಅವಳ ಮಗುವಿನ ಕಾಲುಗಳನ್ನು ದಿಂಬುಗಳ ಮೇಲೆ ಇಡಬೇಕು.
03:13 ಈ ಚಿತ್ರದಲ್ಲಿರುವ ತಾಯಿಯು, ಮಗುವಿಗೆ ತನ್ನ ಬಲಗಡೆಯ ಸ್ತನದಿಂದ ಮೊಲೆಯೂಡಿಸುತ್ತಾಳೆ.
03:18 ಆದ್ದರಿಂದ, ಮಗುವಿನ ಕಾಲುಗಳು ತಾಯಿಯ ಬಲ ಕಂಕುಳದ ಮೂಲಕ ಹಾದು ಹೋಗುತ್ತವೆ.
03:23 ಅವಳು ಮಗುವಿನ ತಲೆಯ ಕೆಳಭಾಗವನ್ನು ಹಿಡಿದುಕೊಳ್ಳಲು, ತನ್ನ ಬಲಗೈಯ ಹೆಬ್ಬೆರಳು ಮತ್ತು ಬೆರಳುಗಳನ್ನು ಬಳಸುತ್ತಿದ್ದಾಳೆ.
03:31 ನೆನಪಿಡಿ, ತಾಯಿಯು ಯಾವಾಗಲೂ ತನ್ನ ಬೆನ್ನನ್ನು ಬಗ್ಗಿಸಿ ಸ್ತನವನ್ನು ಮಗುವಿನ ಹತ್ತಿರ ತರಬಾರದು.
03:37 ಇದರಿಂದ ಅವಳಿಗೆ ತೊಂದರೆಯಾಗುತ್ತದೆ ಮತ್ತು ಬೆನ್ನು ನೋವು ಬರುತ್ತದೆ.
03:42 ಅವಳು ಯಾವಾಗಲೂ ಬೆನ್ನನ್ನು ನೇರವಾಗಿ ಇಟ್ಟುಕೊಳ್ಳಬೇಕು ಮತ್ತು ತನ್ನ ಎದೆಗೆ ತಲುಪುವಂತೆ ಮಗುವನ್ನು ಎತ್ತಿಕೊಳ್ಳಬೇಕು.
03:48 ನಂತರ, ಮಗುವಿನ ತಲೆಯನ್ನು ಹಿಡಿದುಕೊಳ್ಳಲು, ತಾಯಿಯ ಹೆಬ್ಬೆರಳು ಮತ್ತು ಬೆರಳುಗಳ ಸರಿಯಾದ ಸ್ಥಾನವನ್ನು ನಾವು ನೋಡೋಣ.
03:56 ತಾಯಿಯ ಹೆಬ್ಬೆರಳು, ಮಗುವಿನ ಒಂದು ಕಿವಿಯ ಹಿಂದೆ ಮತ್ತು ಉಳಿದ ಬೆರಳುಗಳು ಇನ್ನೊಂದು ಕಿವಿಯ ಹಿಂದೆ ಇರಬೇಕು.
04:03 ಅವಳು ಬೆರಳುಗಳನ್ನು ಅಥವಾ ಹೆಬ್ಬೆರಳನ್ನು, ಕಿವಿಯ ಹಿಂದಿನಿಂದ ಮಗುವಿನ ಕುತ್ತಿಗೆಗೆ ಸರಿಸಬಾರದು.
04:09 ಅವಳ ಮಣಿಕಟ್ಟು ಮಗುವಿನ ಭುಜಗಳ ನಡುವೆ (shoulder blades) ಇರಬೇಕು.
04:13 ಮಗುವಿನ ತಲೆಯ ಹಿಂಭಾಗದಲ್ಲಿ ಅವಳು ತನ್ನ ಕೈಯಿಂದ ಒತ್ತಡವನ್ನು ಹಾಕಬಾರದು. ಇದರಿಂದ, ಹಾಲೂಡಿಸುವಾಗ ಮಗು ಆರಾಮವಾಗಿ ಇರುವುದು.
04:23 ನಂತರ, ಮಗುವನ್ನು ಸರಿಯಾಗಿ ಹೇಗೆ ಹಿಡಿದುಕೊಳ್ಳುವುದು ಎಂಬುದನ್ನು ಕಲಿಯೋಣ.
04:27 ಮಗುವಿನ ಮುಖವು ತಾಯಿಗೆ ಎದುರಾಗಿ ಇರಬೇಕು.
04:31 ಮಗುವಿನ ದೇಹವು, ತಾಯಿಯ ದೇಹಕ್ಕೆ ಮೃದುವಾಗಿ ಒತ್ತಿರಬೇಕು.
04:36 ಅವರಿಬ್ಬರ ದೇಹಗಳ ನಡುವಿನ ಅಂತರವು ಕಡಿಮೆಯಾದರೆ, ಸ್ತನವನ್ನು ತಲುಪುವ ಮಗುವಿನ ಪ್ರಯತ್ನವು ಸಹ ಕಡಿಮೆ ಆಗುತ್ತದೆ.
04:41 ಮತ್ತು, ಮಗು ತಾಯಿಯ ಸ್ತನಕ್ಕೆ ಸರಿಯಾಗಿ ಅಂಟಿಕೊಳ್ಳಲು ಸುಲಭವಾಗುತ್ತದೆ.
04:47 ಎರಡನೆಯ ಹಂತವು, ಮಗುವಿನ ದೇಹವನ್ನು ಹೊಂದಿಸುವುದು ಆಗಿದೆ.
04:51 ನಾವು ಆಹಾರ ಸೇವಿಸುವಾಗ ನಮ್ಮ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇ ದಿಕ್ಕಿನಲ್ಲಿ ಇರುತ್ತವೆ.
04:57 ಹೀಗೆಯೇ, ಸ್ತನ್ಯಪಾನ ಮಾಡಿಸುವಾಗ ಮಗುವಿನ ತಲೆ, ಕುತ್ತಿಗೆ ಮತ್ತು ದೇಹವು ಒಂದೇ ದಿಕ್ಕಿನಲ್ಲಿರಬೇಕು.
05:06 ಇದರಿಂದ ಮಗುವಿಗೆ ಹಾಲನ್ನು ನುಂಗಲು ಸುಲಭವಾಗುತ್ತದೆ.
05:10 ಮಗುವಿನ ದೇಹವನ್ನು ಹೊಂದಿಸುವ ಬಗ್ಗೆ, ಈಗ ನಾವು ಮೂರನೆಯ ಅಂಶಕ್ಕೆ ಬರುತ್ತೇವೆ.
05:16 ತಾಯಿಯು ತನ್ನ ಮಗುವಿನ ಪೂರ್ತಿ ಶರೀರವನ್ನು ಹಿಡಿದುಕೊಳ್ಳಬೇಕು.
05:22 ಇಲ್ಲದಿದ್ದರೆ, ಮಗುವು ತಾಯಿಯ ಸ್ತನಕ್ಕೆ ಗಟ್ಟಿಯಾಗಿ ಅಂಟಿಕೊಳ್ಳಲು (attach) ಬಹಳ ಪ್ರಯತ್ನಿಸಬೇಕಾಗುವುದು.
05:30 ನಂತರ, ನಾವು ಮಗುವಿನ ಮೂಗು ಮತ್ತು ಗದ್ದಗಳ ಸ್ಥಾನವನ್ನು ನೋಡೋಣ.
05:34 ಶಿಶುವಿನ ಮೂಗು ಹಾಗೂ ತಾಯಿಯ ಮೊಲೆಯ ತೊಟ್ಟು ಯಾವಾಗಲೂ ಒಂದೇ ಸಾಲಿನಲ್ಲಿರಬೇಕು.
05:39 ಮತ್ತು, ಗದ್ದವು ಮುಂದೆ ಬಂದಿದ್ದು ಸ್ತನಕ್ಕೆ ಅತೀ ಹತ್ತಿರದಲ್ಲಿರಬೇಕು.
05:44 ಲ್ಯಾಚಿಂಗ್ ಸಮಯದಲ್ಲಿ ಶಿಶು, ಅರಿಯೋಲಾದ ಕೆಳಭಾಗವನ್ನು ಹೆಚ್ಚಾಗಿ ತೆಗೆದುಕೊಳ್ಳುವುದನ್ನು ಇದು ಖಚಿತಪಡಿಸುತ್ತದೆ. ಹೀಗಾಗಿ, ಹೆಚ್ಚು ಹಾಲನ್ನು ಕುಡಿಯಲು ಕೆಳದವಡೆಯನ್ನು ಬಳಸುತ್ತದೆ.
05:55 ದಯವಿಟ್ಟು ಗಮನಿಸಿ: ಅರಿಯೋಲಾ, ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ.
06:00 ಈಗ ಮಗುವನ್ನು ಸರಿಯಾಗಿ ಹಿಡಿದುಕೊಂಡಿರುವುದರಿಂದ, ಸ್ತನವನ್ನು ಹೇಗೆ ಹಿಡಿದುಕೊಳ್ಳಬೇಕು ಎಂದು ನಾವು ಕಲಿಯೋಣ.
06:07 ತಾಯಿಯು ತನ್ನ ಇನ್ನೊಂದು ಕೈಯ ಬೆರಳುಗಳನ್ನು ಬಳಸಿ, C ಆಕಾರದಲ್ಲಿ ಇರುವಂತೆ ಬದಿಯಿಂದ ತನ್ನ ಸ್ತನವನ್ನು ಹಿಡಿಯಬೇಕು.
06:15 ಈ ಚಿತ್ರದಲ್ಲಿ ತಾಯಿಯು, ಬಲಗಡೆಯ ಸ್ತನವನ್ನು ಹಿಡಿದುಕೊಳ್ಳಲು ತನ್ನ ಎಡಗೈಯನ್ನು ಬಳಸುತ್ತಾಳೆ.
06:21 ಹೆಬ್ಬೆರಳು ಮತ್ತು ಬೆರಳುಗಳ ಸರಿಯಾದ ಸ್ಥಾನವನ್ನು ತಿಳಿದುಕೊಳ್ಳಲು, ತಾಯಿಯ ಬಲ ಮೊಲೆಯಲ್ಲಿ, ಮೊಲೆತೊಟ್ಟನ್ನು ಗಡಿಯಾರದ ಕೇಂದ್ರ ಎಂದು ಊಹಿಸಿ.
06:30 ತಾಯಿಯು ತನ್ನ ಎಡಗೈ ಹೆಬ್ಬೆರಳನ್ನು, ಈ ಗಡಿಯಾರದಲ್ಲಿ ಗಂಟೆ 12 ಆದ ಹಾಗೆ ಇಡಬೇಕು.
06:35 ಹಾಗೂ, ಅವಳ ಎಡಗೈ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಗಂಟೆ 6 ಆದಂತೆ ಇಡಬೇಕು.
06:42 ಬೆರಳುಗಳು ಯಾವಾಗಲೂ ಮಗುವಿನ ತುಟಿಗಳ ದಿಕ್ಕಿನಲ್ಲಿ ಇರಬೇಕು.
06:47 ಯಾಕೆ? ಸರಳವಾದ ಒಂದು ಉದಾಹರಣೆಯನ್ನು ಬಳಸಿ, ನಾವು ಇದನ್ನು ತಿಳಿದುಕೊಳ್ಳೋಣ.
06:52 ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ತಿನ್ನುವಾಗ, ನಮ್ಮ ಬಾಯಿ ಮತ್ತು ತುಟಿಗಳು ಅಡ್ಡಲಾಗಿ ತೆರೆದುಕೊಳ್ಳುತ್ತವೆ.
06:58 ದೊಡ್ಡ ತುತ್ತನ್ನು ತೆಗೆದುಕೊಳ್ಳಲು, ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ಅಡ್ಡಲಾಗಿ ಹಿಡಿದುಕೊಳ್ಳುತ್ತೇವೆ.
07:03 ಇಲ್ಲಿ, ಹೆಬ್ಬೆರಳು ಮತ್ತು ಬೆರಳುಗಳನ್ನು ತುಟಿಗಳ ದಿಕ್ಕಿನಲ್ಲಿ ಇರಿಸಲಾಗುತ್ತದೆ.
07:10 ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ಲಂಬವಾಗಿ ಹಿಡಿದಿದ್ದರೆ, ದೊಡ್ಡ ತುತ್ತನ್ನು ತೆಗೆದುಕೊಳ್ಳಲು ನಮಗೆ ಸಾಧ್ಯವಾಗುವುದಿಲ್ಲ.
07:16 ಹಾಗೆಯೇ, ಮಗುವಿನ ತುಟಿಗಳ ದಿಕ್ಕನ್ನು ಗಮನಿಸಿ.
07:21 ತುಟಿಗಳು ಇಲ್ಲಿ ಅಡ್ಡಲಾಗಿವೆ (horizontal).
07:24 ಆದ್ದರಿಂದ, ಬೆರಳುಗಳು ಮತ್ತು ಹೆಬ್ಬೆರಳನ್ನು ಕೂಡ ಸ್ತನದ ಮೇಲೆ ಅಡ್ಡಲಾಗಿ ಇಡಬೇಕು.
07:32 ಇದು, ಮಗುವಿಗೆ ತನ್ನ ಬಾಯಿಯಲ್ಲಿ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
07:39 ಮಗುವಿನ ತುಟಿಗಳ ದಿಕ್ಕಿನಲ್ಲಿ ಇರುವುದರ ಜೊತೆಗೆ, ತಾಯಿಯ ಹೆಬ್ಬೆರಳು ಮತ್ತು ಬೆರಳುಗಳು ಯಾವಾಗಲೂ ಮೊಲೆತೊಟ್ಟಿನಿಂದ 3 ಬೆರಳುಗಳ ದೂರದಲ್ಲಿರಬೇಕು.
07:50 ಮತ್ತೆ, ವಡಾ-ಪಾವ್ ಅಥವಾ ಬರ್ಗರ್ ಅನ್ನು ತಿನ್ನುವಾಗ, ನಾವು ಅದನ್ನು ಬಹಳ ಹತ್ತಿರದಲ್ಲಿ ಹಿಡಿದುಕೊಂಡರೆ, ದೊಡ್ಡ ತುತ್ತನ್ನು ತೆಗೆದುಕೊಳ್ಳದಂತೆ ನಮ್ಮ ಬೆರಳುಗಳು ಬಾಯಿಗೆ ಅಡ್ಡಬರುತ್ತವೆ.
08:00 ನಾವು ಅದನ್ನು ತುಂಬಾ ದೂರದಲ್ಲಿ ಹಿಡಿದರೆ, ಅದು ನಮ್ಮ ಬಾಯಿಯಲ್ಲಿ ಹೋಗಲು ಯೋಗ್ಯವಾದ ಆಕಾರದಲ್ಲಿ ಇರುವುದಿಲ್ಲ.
08:07 ಆದ್ದರಿಂದ, ದೊಡ್ಡ ತುತ್ತನ್ನು ತೆಗೆದುಕೊಳ್ಳಲು, ನಾವು ಅದನ್ನು ಸರಿಯಾದ ದೂರದಲ್ಲಿ ಹಿಡಿದುಕೊಳ್ಳುತ್ತೇವೆ.
08:13 ಹೀಗೆಯೇ, ಈ ಚಿತ್ರದಲ್ಲಿ ತೋರಿಸಿರುವಂತೆ, ಮಗುವಿಗಾಗಿ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರವು ಸರಿಯಾಗಿದೆ.
08:21 ಮಗುವು ತನ್ನ ಬಾಯಿಯಲ್ಲಿ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳುವಾಗ ತಾಯಿಯ ಬೆರಳುಗಳು ಅಡ್ಡಬರುವುದಿಲ್ಲ,
08:31 ತಾಯಿಯು ಕೇವಲ ಮೊಲೆತೊಟ್ಟನ್ನು ಮಾತ್ರ ಒತ್ತುವುದಿಲ್ಲ. ಏಕೆಂದರೆ, ಇದರಿಂದ ತುಂಬಾ ಕಡಿಮೆ ಹಾಲು ಸಿಗುತ್ತದೆ.
08:36 ಹೆಚ್ಚು ಹಾಲು ಹೊರಬರುವಂತೆ, ಅರಿಯೋಲಾದ ಕೆಳಗಿನ ಹಾಲಿನ ದೊಡ್ಡ ನಾಳಗಳನ್ನು ತಾಯಿಯು ಒತ್ತುತ್ತಾಳೆ.
08:42 ಮತ್ತು, ಮಗು ಗಟ್ಟಿಯಾಗಿ ಜೋಡಿಸಿಕೊಳ್ಳುವಂತೆ ಸ್ತನವನ್ನು ಸರಿಯಾಗಿ ಹಿಡಿಯಲಾಗಿದೆ ಎಂದು ಈ ದೂರವು ಖಚಿತಪಡಿಸುತ್ತದೆ.
08:50 ನೆನಪಿಡಿ: ಈ ಚಿತ್ರದಲ್ಲಿ ತೋರಿಸಿದಂತೆ, ತಾಯಿಯ ಹೆಬ್ಬೆರಳು ಸ್ತನದ ಮೇಲ್ಭಾಗದಲ್ಲಿ ಇರಬೇಕು
08:55 ಮತ್ತು ಅವಳ 2 ಬೆರಳುಗಳು ಸ್ತನದ ಕೆಳಭಾಗದಲ್ಲಿ ಇರಬೇಕು.
09:01 ನಾವು ವಡಾ- ಪಾವ್ ಅಥವಾ ಬರ್ಗರ್ ನ ಉದಾಹರಣೆಗೆ ಹಿಂತಿರುಗೋಣ.
09:06 ವಡಾ-ಪಾವ್ ಅಥವಾ ಬರ್ಗರ್ ಅನ್ನು ಸರಿಯಾಗಿ ಹಿಡಿದ ನಂತರ, ದೊಡ್ಡ ತುತ್ತು (bite) ತೆಗೆದುಕೊಳ್ಳಲು ನಾವು ಅದನ್ನು ಅದುಮಿ ಹಿಡಿಯುತ್ತೇವೆ.
09:12 ಹೀಗೆಯೇ, ಬದಿಯಿಂದ C ಆಕಾರದಲ್ಲಿ ಒತ್ತಿ, ತಾಯಿಯು ತನ್ನ ಸ್ತನವನ್ನು ಮೆತ್ತಗೆ ಕುಗ್ಗಿಸಬೇಕು.
09:18 ಇದು, ಮಗುವಿಗೆ ಸ್ತನದ ದೊಡ್ಡ ಭಾಗವನ್ನು ತನ್ನ ಬಾಯಿಯಲ್ಲಿ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
09:23 ಆದರೆ ನೆನಪಿಡಿ, ತಾಯಿಯು ತನ್ನ ಸ್ತನವನ್ನು ಕತ್ತರಿಯ ಆಕಾರದಲ್ಲಿ ಅದುಮಬಾರದು.
09:30 ಕತ್ತರಿಯ ಆಕಾರದ ಒತ್ತುವಿಕೆಯು ಸ್ತನವನ್ನು ಹಿಸುಕುತ್ತದೆ ಮತ್ತು ನಿಪ್ಪಲ್ ಫೀಡಿಂಗ್ ಅನ್ನು ಉಂಟುಮಾಡುತ್ತದೆ.
09:36 ಅಲ್ಲದೆ, ಹೆಬ್ಬೆರಳು ಮತ್ತು ಬೆರಳುಗಳಿಂದ ಸ್ತನವನ್ನು ಸಮನಾಗಿ ಒತ್ತಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಿ.
09:43 ಇಲ್ಲದಿದ್ದರೆ, ಮೊಲೆತೊಟ್ಟು ಮೇಲೆ ಅಥವಾ ಕೆಳಗಿನ ದಿಕ್ಕಿನಲ್ಲಿ ಸರಿಯುತ್ತದೆ ಮತ್ತು ಜೋಡಣೆಯು ಸರಿಯಾಗುವುದಿಲ್ಲ.
09:51 ಕೆಲವೊಮ್ಮೆ, ತಾಯಿಯು ತನ್ನ ಮಗುವನ್ನು ಬೇರೆ ವಿಧದಲ್ಲಿ ಹಿಡಿದುಕೊಳ್ಳಲು ಬಯಸಬಹುದು.
09:56 ಈ ಚಿತ್ರದಲ್ಲಿ, ಮಗು ತಾಯಿಗೆ ಎದುರಾಗಿಲ್ಲ.
10:00 ಮಗುವಿನ ತಲೆಯನ್ನು ಬದಿಯಿಂದ ಸ್ತನದೆಡೆಗೆ ತರಲಾಗಿದೆ, ಕೆಳಗಿನಿಂದ ಅಲ್ಲ.
10:07 ಮಗುವಿನ ತುಟಿಗಳು ಇಲ್ಲಿ ಲಂಬವಾಗಿರುತ್ತವೆ. ಆದ್ದರಿಂದ, ತಾಯಿಯು ಸ್ತನದ ಮೇಲೆ ತನ್ನ ಬೆರಳುಗಳನ್ನು ಲಂಬವಾಗಿ, U ಆಕಾರದ ಹಿಡಿತದಲ್ಲಿ ಇಟ್ಟುಕೊಳ್ಳಬೇಕು.
10:17 ನೆನಪಿನಲ್ಲಿಡಿ, ಯಾವುದೇ ಸ್ತನ್ಯಪಾನ ಸ್ಥಿತಿಗಾಗಿ, ಸ್ತನವನ್ನು ಹಿಡಿದಿರುವ ತಾಯಿಯ ಬೆರಳುಗಳು ಮತ್ತು ಹೆಬ್ಬೆರಳು, ಯಾವಾಗಲೂ ಮಗುವಿನ ತುಟಿಗಳ ದಿಕ್ಕಿನಲ್ಲಿ ಇರಬೇಕು.
10:28 ಈಗ ಮಗು 'ಫುಟ್-ಬಾಲ್ ಹೋಲ್ಡ್' ನಲ್ಲಿದೆ ಮತ್ತು ಸ್ತನ್ಯಪಾನಕ್ಕಾಗಿ ಲ್ಯಾಚ್ ಆಗಲು ಸಿದ್ಧವಾಗಿದೆ.
10:34 ಸರಿಯಾದ ಲ್ಯಾಚಿಂಗ್ ತಂತ್ರವನ್ನು, ಇದೇ ಸರಣಿಯ ಇನ್ನೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
10:41 ಒಮ್ಮೆ ಮಗು ಸರಿಯಾಗಿ ಲ್ಯಾಚ್ ಮಾಡಿಕೊಂಡ ನಂತರ ಹಾಗೂ ಸ್ತನವು ತುಂಬಾ ದೊಡ್ಡದು ಮತ್ತು ಭಾರವಾಗಿರದಿದ್ದರೆ, ಆಗ ತಾಯಿಯು ತನ್ನ ಸ್ತನವನ್ನು ಕೈಯಿಂದ ಬಿಡಬಹುದು ಮತ್ತು ಆ ಕೈಯನ್ನು ಮುಕ್ತಗೊಳಿಸಬಹುದು.
10:53 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
10:57 ನಾವು ಈ ಟ್ಯುಟೋರಿಯಲ್ ನಲ್ಲಿ : ಸ್ತನ್ಯಪಾನಕ್ಕಾಗಿ ತಾಯಿಯು ಮಗುವನ್ನು ಹಿಡಿದುಕೊಳ್ಳುವ ಸರಿಯಾದ ವಿಧಾನವನ್ನು ಆರಿಸಿಕೊಳ್ಳುವುದು,
11:04 ಮಗುವಿಗೆ ಸ್ತನ್ಯಪಾನ ಮಾಡಿಸುವ ಮೊದಲು ತಾಯಿಯು ಮಾಡಿಕೊಳ್ಳಬೇಕಾದ ತಯಾರಿ ಮತ್ತು “ಫುಟ್-ಬಾಲ್ ಹೋಲ್ಡ್” ವಿಧಾನದಲ್ಲಿಯ ಹಂತಗಳು ಇವುಗಳ ಬಗ್ಗೆ ಕಲಿತಿದ್ದೇವೆ.
11:12 ಈ ಟ್ಯುಟೋರಿಯಲ್, Spoken Tutorial Project, IIT Bombay ಇವರ ಕೊಡುಗೆಯಾಗಿದೆ.
11:18 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD ಮೂಲಕ ಭಾರತ ಸರಕಾರದ ಅನುದಾನವನ್ನು ಪಡೆದಿದೆ.
11:26 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
11:30 ಈ ಟ್ಯುಟೋರಿಯಲ್, WHEELS Global Foundation ನ ಉದಾರ ಕೊಡುಗೆಯಿಂದ ಭಾಗಶಃ ಅನುದಾನವನ್ನು ಪಡೆದಿದ್ದು
11:38 Maa aur Shishu Poshan (ಮಾ ಔರ್ ಶಿಶು ಪೋಷಣ್) ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
11:44 ಈ ಟ್ಯುಟೋರಿಯಲ್ ನ ಡೊಮೇನ್ ರಿವ್ಯೂ ಮಾಡಿದವರು Dr. ರೂಪಲ್ ದಲಾಲ್, MD ಪೀಡಿಯಾಟ್ರಿಕ್ಸ್.
11:50 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Debosmita, Sandhya.np14