Health-and-Nutrition/C2/Breast-crawl/Kannada

From Script | Spoken-Tutorial
Revision as of 12:51, 27 August 2020 by Debosmita (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 Breast crawl (ಬ್ರೆಸ್ಟ್ ಕ್ರಾಲ್) ಎಂಬ ಈ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ, ನಾವು: 'ಬ್ರೆಸ್ಟ್ ಕ್ರಾಲ್' ಎಂದರೇನು,
00:10 'ಬ್ರೆಸ್ಟ್ ಕ್ರಾಲ್' ನ ವಿಧಾನ ಮತ್ತು
00:13 ಅದರ ಮಹತ್ವ ಇವುಗಳ ಬಗ್ಗೆ ಕಲಿಯುತ್ತೇವೆ.
00:18 'ಬ್ರೆಸ್ಟ್ ಕ್ರಾಲ್' ಎಂದರೇನು ಇದನ್ನು ನಾವು ಮೊದಲು ತಿಳಿದುಕೊಳ್ಳೋಣ.
00:23 ಮಗು, ಸಹಜವಾದ ಆಹಾರದ ನಡವಳಿಕೆಯೊಂದಿಗೆ ಜನಿಸುತ್ತದೆ.
00:28 ಹೆರಿಗೆಯಾದ ಕೂಡಲೇ ತಾಯಿಯ ಹೊಟ್ಟೆಯ ಮೇಲೆ ಶಿಶುವನ್ನು ಇರಿಸಿದಾಗ, ಅದು ತಾಯಿಯ ಸ್ತನವನ್ನು ಹುಡುಕಿ ಸ್ತನ್ಯಪಾನವನ್ನು ಆರಂಭಿಸುವುದು.
00:40 ಈ ಸಂಪೂರ್ಣ ಪ್ರಕ್ರಿಯೆಯನ್ನು 'ಬ್ರೆಸ್ಟ್ ಕ್ರಾಲ್' ಎಂದು ಕರೆಯುತ್ತೇವೆ.
00:46 ಗಮನಿಸಿ: ಪೂರ್ಣ ಅವಧಿಯ ನಂತರ, ನೈಸರ್ಗಿಕ ಅಥವಾ ಸಿಸೇರಿಯನ್ ಹೆರಿಗೆಯಲ್ಲಿ ಜನಿಸಿದ ಮತ್ತು
00:58 ಜನಿಸಿದ ಕೂಡಲೇ ಚೆನ್ನಾಗಿ ಅತ್ತಿರುವ ಸಾಮಾನ್ಯ ಶಿಶುಗಳಿಗೆ 'ಬ್ರೆಸ್ಟ್ ಕ್ರಾಲ್' ಅನ್ನು ಮಾಡಬಹುದು.
01:03 ಉಸಿರುಗಟ್ಟುವಂತಹ ಉಸಿರಾಟದ ತೊಂದರೆಗಳಿಂದ ಬಳಲಬಹುದಾದ ಕಾರಣ, ಕಡಿಮೆ ಜನನ ತೂಕ ಹೊಂದಿರುವ, ಅಸ್ಥಿರ ಆರೋಗ್ಯವನ್ನು ಹೊಂದಿರುವ ಶಿಶುಗಳಲ್ಲಿ 'ಬ್ರೆಸ್ಟ್ ಕ್ರಾಲ್' ಅನ್ನು ಮಾಡಲಾಗುವುದಿಲ್ಲ.
01:15 ಈಗ ನಾವು 'ಬ್ರೆಸ್ಟ್ ಕ್ರಾಲ್' ನ ವಿಧಾನವನ್ನು, ಆನಂತರ ಅದರ ಮಹತ್ವವನ್ನು ಕಲಿಯುವೆವು.
01:22 ಮೊದಲು, ಹೆರಿಗೆ ಕೊಠಡಿಯ ತಾಪಮಾನವು ಸುಮಾರು 26 ಡಿಗ್ರಿ ಸೆಲ್ಸಿಯಸ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.
01:29 ನಂತರ, ಶಿಶುವನ್ನು ತಾಯಿಯ ಹೊಟ್ಟೆಯ ಮೇಲೆ ಇರಿಸಿ ಶುಚಿಗೊಳಿಸುವುದು.
01:35 ಕೈಗಳ ಹೊರತಾಗಿ ಶಿಶುವಿನ ಪೂರ್ತಿ ಶರೀರವನ್ನು ಒಂದು ಸ್ವಚ್ಛವಾದ ಶುಷ್ಕ ಬಟ್ಟೆಯಿಂದ ಚೆನ್ನಾಗಿ ಶುಚಿಗೊಳಿಸಿ.
01:42 ನೆನಪಿಡಿ, ಶಿಶುವಿನ ಕೈಗಳನ್ನು ತೇವವಾಗಿರಿಸಿ.
01:46 ಶುಚಿಗೊಳಿಸುವಾಗ ಶಿಶುವಿನ ಚರ್ಮದ ಮೇಲಿರುವ ರಕ್ಷಣಾತ್ಮಕ ಬಿಳಿ ಲೇಪನವನ್ನು ತೆಗೆಯಬೇಡಿ.
01:53 ಅದು ಶಿಶುವನ್ನು ತಂಪಾದ ವಾತಾವರಣದಿಂದ ರಕ್ಷಿಸುತ್ತದೆ.
01:56 ಶಿಶುವನ್ನು ಶುಚಿಗೊಳಿಸಿದ ನಂತರ ಹಸಿ ಬಟ್ಟೆಯನ್ನು ತೆಗೆದುಬಿಡಿ.
02:01 ಶಿಶುವನ್ನು ಒರೆಸಿದ ನಂತರ, ಹೆರಿಗೆ ಸಮಯದಲ್ಲಿರುವ ಸಹಾಯಕಿಯು (birth attendant) ಬಳ್ಳಿಯ ನಾಡಿಬಡಿತವನ್ನು ನೋಡಬೇಕು.
02:08 ನಾಡಿಬಡಿತವು ನಿಂತಾಗ, ಅವಳು ಬಳ್ಳಿಯನ್ನು ಕತ್ತರಿಸಬೇಕು.
02:13 ನಂತರ, ಮಗುವಿನ ಹೊಟ್ಟೆಯು ತಾಯಿಯ ಹೊಟ್ಟೆಯನ್ನು ಸ್ಪರ್ಶಿಸುವಂತೆ, ತಾಯಿಯ ಮೇಲೆ ಮಗುವನ್ನು ಸರಿಯಾಗಿರಿಸಿ.
02:22 ತಾಯಿಯ ತೊಳೆಯದ ಸ್ತನಗಳ ನಡುವೆ ಶಿಶುವಿನ ತಲೆಯನ್ನು ಇರಿಸಬೇಕು.
02:26 ಶಿಶುವಿನ ಬಾಯಿಯು ತಾಯಿಯ ಸ್ತನದ ಕೆಳಗೆ ಇರಬೇಕು.
02:30 ಈಗ 'ಬ್ರೆಸ್ಟ್ ಕ್ರಾಲ್' ಗಾಗಿ ಮಗುವನ್ನು ಸರಿಯಾಗಿ ಇರಿಸಲಾಗಿದೆ.
02:37 ನವಜಾತ ಶಿಶುವಿಗೆ ಮುಂದಕ್ಕೆ ಸರಿಯುವುದು ಬಹಳ ಸ್ವಾಭಾವಿಕ ಆಗಿರುವುದರಿಂದ, ಮಗು ಸುಲಭವಾಗಿ ಮುಂದಕ್ಕೆ ತಾಯಿಯ ಸ್ತನದೆಡೆಗೆ ತೆವಳಬಹುದು.
02:46 ಆನಂತರ, ಮಗು ಮತ್ತು ತಾಯಿಯನ್ನು ಬೆಚ್ಚಗಿಡಲು ಅವರಿಗೆ ಒಂದು ಸ್ವಚ್ಛವಾದ, ಶುಷ್ಕ ಹೊದಿಕೆಯನ್ನು ಹೊದಿಸಿ.
02:54 ಮಗುವಿನ ತಲೆಯ ಮೇಲೆ ಒಂದು ಟೋಪಿ ಹಾಕಿ.
02:57 ದಯವಿಟ್ಟು ಗಮನಿಸಿ- ಇನ್ನು ಮುಂದಿನ ಚಿತ್ರಗಳಲ್ಲಿ ನಾವು ಟೋಪಿ ಮತ್ತು ಬಟ್ಟೆಯನ್ನು ತೋರಿಸಿಲ್ಲ.
03:04 'ಬ್ರೆಸ್ಟ್ ಕ್ರಾಲ್' ಸಮಯದಲ್ಲಿ ಮಗುವಿನ ಸ್ಥಿತಿಯನ್ನು ಸರಿಯಾಗಿ ಗಮನಿಸಲು ಇದು ನಮಗೆ ಸಹಾಯ ಮಾಡುತ್ತದೆ.
03:10 ಮಗುವಿಗೆ ಬಟ್ಟೆಯನ್ನು ಹೊದಿಸಿದ ನಂತರ, ತಾಯಿಯು ಮಗುವಿನ ಬೆನ್ನನ್ನು ತನ್ನ ಕೈಯಿಂದ ಹಿಡಿದುಕೊಳ್ಳುವಂತೆ ಮಾಡಿ.
03:18 'ಬ್ರೆಸ್ಟ್ ಕ್ರಾಲ್' ಗೆ ಸಹಾಯ ಮಾಡುವ ಮಗುವಿನ ಸಾಮರ್ಥ್ಯಗಳನ್ನು ನಾವು ಚರ್ಚಿಸೋಣ.
03:24 ಹೆರಿಗೆಯ ನಂತರ ಶಿಶುವು ಬಹಳ ಜಾಗರೂಕವಾಗಿದ್ದು, ಸಹಜ ಪ್ರವೃತ್ತಿಯನ್ನು ಹೊಂದಿರುತ್ತದೆ.
03:29 ಶಿಶುವಿನ ಅಶುಚಿಯಿರುವ ಕೈಗಳ ವಾಸನೆಯು ಅದಕ್ಕೆ ಜೊಲ್ಲು ಸುರಿಸಲು ಪ್ರಚೋದಿಸುತ್ತದೆ.
03:35 ಅಲ್ಲದೆ, ಮಗು ತನ್ನ ಸೀಮಿತ ದೃಷ್ಟಿಯೊಂದಿಗೆ, ತನ್ನ ತಾಯಿಯ ಮುಖ ಮತ್ತು ಅರಿಯೋಲಾವನ್ನು ನೋಡಲು ಸಾಧ್ಯವಿದೆ.
03:43 ಅರಿಯೋಲಾ, ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ.
03:47 ಕೊನೆಗೆ, ಮಗು ತನ್ನ ಕೈ- ಕಾಲುಗಳನ್ನು ಬಳಸಿ ಚಲಿಸಲು ಆರಂಭಿಸುತ್ತದೆ. ನಿಧಾನವಾಗಿ ತನ್ನ ತಾಯಿಯ ಸ್ತನಗಳೆಡೆಗೆ ತೆವಳುತ್ತದೆ.
03:57 ಆದಾಗ್ಯೂ, ಕೆಲವು ಶಿಶುಗಳು ತಕ್ಷಣವೇ ತೆವಳಲು ಪ್ರಾರಂಭಿಸುತ್ತವೆ ಮತ್ತು ಕೆಲವು ಶಿಶುಗಳು ಸಮಯ ತೆಗೆದುಕೊಳ್ಳುತ್ತವೆ.
04:04 ಸ್ತನವನ್ನು ತಲುಪಿದ ನಂತರ, ಮಗು ಮೊದಲು ತನ್ನ ಕೈಗಳಿಂದ ಸ್ತನವನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತದೆ.
04:12 ಈ ಸಮಯದಲ್ಲಿ, ಮಗು ತನ್ನ ಮೊದಲ ಸ್ತನ್ಯಪಾನ ಮಾಡುವ ತನಕ, ಮಗು ಮತ್ತು ತಾಯಿಗೆ ತೊಂದರೆಕೊಡಬೇಡಿ.
04:20 ಈ ಕ್ರಿಯೆ ನಡೆಯುವಾಗ, ತಾಯಿ ಮತ್ತು ಅವಳ ಸಹಾಯಕಿ ಇಬ್ಬರಿಗೂ ತಾಳ್ಮೆ ಇರಬೇಕು.
04:27 ತನ್ನ ಮೊದಲ ಸ್ತನ್ಯಪಾನಕ್ಕಾಗಿ ತಾಯಿಯ ಸ್ತನದವರೆಗೆ ತಲುಪಲು ಮಗು 30 ರಿಂದ 60 ನಿಮಿಷಗಳನ್ನು ತೆಗೆದುಕೊಳ್ಳಬಹುದು.
04:35 ಹಾಲುಣಿಸುವ ಆರಂಭದಲ್ಲಿ, ಮಗು ತನ್ನ ಬಾಯಿಯನ್ನು ಅಗಲವಾಗಿ ತೆರೆಯುತ್ತದೆ ಮತ್ತು ತಾಯಿಯ ಸ್ತನಕ್ಕೆ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ.
04:45 ಮೊಲೆಯೂಡಿಸುವುದು ಮುಗಿದ ನಂತರ, ಮಗು ಸುಮಾರು ಒಂದು ಘಂಟೆಯವರೆಗೆ ಅದೇ ಸ್ಥಾನದಲ್ಲಿ ಇರಲಿ.
04:52 ಹೀಗೆ ಮಾಡುವುದರಿಂದ, ತಾಯಿ ಮತ್ತು ಮಗುವಿನ ನಡುವಿನ ಬಂಧವನ್ನು ಸುಧಾರಿಸಲು ಸಹಾಯವಾಗುತ್ತದೆ.
04:58 ಆದಾಗ್ಯೂ, ತಾಯಿಯು ಯಾವುದೇ ಔಷಧಿಗಳನ್ನು ತೆಗೆದುಕೊಂಡಿದ್ದರೆ ದಯವಿಟ್ಟು ಅವಳ ವೈದ್ಯರನ್ನು ಸಂಪರ್ಕಿಸಿ.
05:05 ಕೆಲವೊಮ್ಮೆ, ಹೆರಿಗೆಯ ನಂತರ, ತಾಯಿಯು ಹೆರಿಗೆಯ ಕೋಣೆಯಿಂದ ಮತ್ತೊಂದು ಕೋಣೆಗೆ ಹೋಗಬೇಕಾಗಬಹುದು.
05:13 ಅಂತಹ ಸಂದರ್ಭಗಳಲ್ಲಿ, ತಾಯಿಯನ್ನು ಮತ್ತೊಂದು ಕೋಣೆಗೆ ವರ್ಗಾಯಿಸಿದ ನಂತರ, ಈಮೊದಲು ಹೇಳಿದಂತೆ ತಾಯಿಯ ಹೊಟ್ಟೆಯ ಮೇಲೆ ಮಗುವನ್ನು ಇರಿಸಿ, ತಾಯಿ ಮತ್ತು ಮಗುವಿಗೆ ಪರಸ್ಪರ ಚರ್ಮದ ಸ್ಪರ್ಶವು ಸಿಗುವಂತೆ ನೋಡಿಕೊಳ್ಳಿ.
05:29 'ಸಿಸೇರಿಯನ್ ಸೆಕ್ಷನ್' ಹೆರಿಗೆಯಲ್ಲಿ ಜನಿಸಿದ ಶಿಶುಗಳಿಗಾಗಿ, ಈಗ ನಾವು ‘ಬ್ರೆಸ್ಟ್ ಕ್ರಾಲ್’ ಅನ್ನು ಚರ್ಚಿಸೋಣ.
05:35 ಇದನ್ನು ಮಾಡಲು, ಮಗುವಿನ ಕಾಲುಗಳು ತಾಯಿಯ ತಲೆಯ ಕಡೆಗೆ ಇರುವಂತೆ, ಹೊಟ್ಟೆಯ ಬದಲಾಗಿ ಶಿಶುವನ್ನು ತಾಯಿಯ ಎದೆಯ ಮೇಲೆ ಇಡಬೇಕು.
05:47 ಎದೆ ಮತ್ತು ಹೊಟ್ಟೆಯು ತಾಯಿಯ ಭುಜದ ಮೇಲೆ ಮತ್ತು ಬಾಯಿಯು ಸ್ತನದ ಮೇಲೆ ಇರಬೇಕು.
05:54 ಆಪರೇಷನ್ ಥಿಯೇಟರ್ ನಲ್ಲಿ, ಸಾಧ್ಯವಾದಷ್ಟು ವೇಳೆ ಮಗುವಿಗೆ ಮೊಲೆಯೂಡಿಸಲು ಅನುಮತಿಸಿ.
05:59 ಹೆರಿಗೆಯಾದ ತಕ್ಷಣ, ಪರಸ್ಪರ ಚರ್ಮದ ಸ್ಪರ್ಶವು ಇತರ ಯಾವುದೇ ನವಜಾತ ಆರೈಕೆಗಳಿಗಿಂತ ಅತೀ ಮುಖ್ಯವಾಗಿದೆ ಎಂದು ನೆನಪಿಡಿ.
06:09 ಗಮನಿಸಿ, ‘ಬ್ರೆಸ್ಟ್ ಕ್ರಾಲ್’ ಮುಗಿದ ಮೇಲೆಯೇ, ಹೆರಿಗೆಯ ನಂತರದ ನವಜಾತ ಶಿಶುವಿನ ಆರೈಕೆಯನ್ನು ನೀಡಬೇಕು.
06:17 ಈಗ, ನವಜಾತ ಶಿಶುವಿಗಾಗಿ ‘ಬ್ರೆಸ್ಟ್ ಕ್ರಾಲ್’ ನ ಮಹತ್ವವನ್ನು ನಾವು ಚರ್ಚಿಸೋಣ.
06:23 ಮಗು, ಕೊಲೊಸ್ಟ್ರಮ್ ಎಂದು ಕರೆಯಲಾಗುವ ತಾಯಿಯ ಮೊಟ್ಟಮೊದಲ ಹಾಲನ್ನು ಪಡೆಯಲು ‘ಬ್ರೆಸ್ಟ್ ಕ್ರಾಲ್’ ಸಾಧ್ಯವಾಗಿಸುತ್ತದೆ.
06:29 ಇದು ಹಳದಿ ಬಣ್ಣ ಹೊಂದಿದ್ದು, ಸ್ವಲ್ಪ ಗಟ್ಟಿಯಾಗಿದೆ.
06:33 ಹೆರಿಗೆಯ ನಂತರ, ಪ್ರತಿ ಸ್ತನ್ಯಪಾನ ಸಮಯದಲ್ಲಿ ಮಗುವಿನ ಕೊಲೊಸ್ಟ್ರಮ್ ಸೇವನೆಯ ಪ್ರಮಾಣವು ನಿಧಾನವಾಗಿ ಹೆಚ್ಚಾಗುತ್ತದೆ ಎಂಬುದನ್ನು ಗಮನಿಸಿ.
06:43 ಪ್ರತಿ ಸ್ತನ್ಯಪಾನ ಸಮಯದಲ್ಲಿ ಮಗು ಪ್ರತಿಯೊಂದು ಸ್ತನದಿಂದ - ಮೊದಲನೆಯ ದಿನ 5 ಮಿಲಿಲೀಟರ್ ಗಳು,
06:47 ಎರಡನೆಯ ದಿನ 10 ಮಿಲಿಲೀಟರ್ ಗಳು,
06:50 ಮೂರನೆಯ ದಿನ 25 ಮಿಲಿಲೀಟರ್ ಗಳು,
06:53 ನಾಲ್ಕನೇ ದಿನ 40 ಮಿಲಿಲೀಟರ್ ಗಳು ಮತ್ತು ಐದನೇ ದಿನದಂದು 55 ಮಿಲಿಲೀಟರ್ ಗಳಷ್ಟು ತೆಗೆದುಕೊಳ್ಳುವುದು.
07:05 ನವಜಾತ ಮಗುವಿಗೆ ಇಷ್ಟು ಸಾಕಾಗುತ್ತದೆ.
07:09 ಆದ್ದರಿಂದ, ಕೊಲೊಸ್ಟ್ರಮ್ ಅನ್ನು ಹೊರತುಪಡಿಸಿ ಮಗುವಿಗೆ ಬೇರೆ ಯಾವುದೇ ಆಹಾರವನ್ನು ಕೊಡಬಾರದು.
07:15 'ಕೋಲೋಸ್ಟ್ರಮ್' ಅನ್ನು ಮಗುವಿನ ಮೊದಲ ವ್ಯಾಕ್ಸಿನೇಷನ್ ಎಂದು ಪರಿಗಣಿಸಲಾಗುತ್ತದೆ. ಇದು ಸೋಂಕಿನ ಜೊತೆಗೆ ಹೋರಾಡುವ ಪ್ರೋಟೀನ್ ಗಳನ್ನು ಹೊಂದಿದ್ದು, ಮಗುವಿನ ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ.
07:27 ತಾಯಿಯ ಹೆರಿಗೆಯ ನಂತರ, ಮಗುವಿಗಾಗಿ ಇದು ಶಕ್ತಿಯ ಮೊದಲ ಮೂಲವಾಗಿದೆ.
07:33 'ಕೋಲೋಸ್ಟ್ರಮ್', ರಕ್ತದಲ್ಲಿ ಕಡಿಮೆ ಗ್ಲೂಕೋಸ್ ಮಟ್ಟವನ್ನು ಸಹ ತಡೆಯುತ್ತದೆ.
07:37 ಮಗುವಿನ ದೇಹದ ಇತರ ಪ್ರಕ್ರಿಯೆಗಳನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ.
07:42 ಮತ್ತು ಆರೋಗ್ಯಕರ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
07:46 ಮಗುವಿಗೆ ಮೊದಲ ಸಲ ಮಲವಿಸರ್ಜನೆ ಮಾಡಲು ಇದು ಸಹಾಯ ಮಾಡುತ್ತದೆ.
07:50 ತಾಯಿಯ ಚರ್ಮದ ಸ್ಪರ್ಶ ಇರುವುದರಿಂದ, ‘ಬ್ರೆಸ್ಟ್ ಕ್ರಾಲ್’ ಮಗುವನ್ನು ಬೆಚ್ಚಗೆ ಸಹ ಇಡುತ್ತದೆ.
07:57 ತಾಯಿಯ ಸ್ತನಕ್ಕೆ ಆಳವಾಗಿ ಅಂಟಿಕೊಳ್ಳುವುದು ಹೇಗೆ ಎಂದು ಶಿಶು ಸ್ವತಃ ತಾನೇ ಕಲಿಯುತ್ತದೆ.
08:04 ‘ಬ್ರೆಸ್ಟ್ ಕ್ರಾಲ್’, ತಾಯಿಯ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಅವಳ ಮಗುವಿಗೆ ದಾಟಿಸುತ್ತದೆ.
08:08 ಈ ಬ್ಯಾಕ್ಟೀರಿಯಾಗಳು ಮಗುವಿನ ಕರುಳಿನಲ್ಲಿ ಪ್ರವೇಶಿಸುತ್ತವೆ ಮತ್ತು ಸೋಂಕುಗಳ ವಿರುದ್ಧ ಹೋರಾಡುತ್ತವೆ.
08:13 ಒಟ್ಟಿನಲ್ಲಿ, ಇದು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
08:18 ‘ಬ್ರೆಸ್ಟ್ ಕ್ರಾಲ್’, ಮಗುವಿಗೆ ಪ್ರೀತಿ ಹಾಗೂ ಭದ್ರತೆಯ ಭಾವನೆಯನ್ನು ಸಹ ನೀಡುತ್ತದೆ. ಅಲ್ಲದೇ ತಾಯಿ ಮತ್ತು ಅವಳ ಮಗುವಿನ ನಡುವಿನ ಬಂಧವನ್ನು ಪ್ರಾರಂಭಿಸುತ್ತದೆ.
08:29 ‘ಬ್ರೆಸ್ಟ್ ಕ್ರಾಲ್’ ನ ಪ್ರಯೋಜನಗಳು ತಾಯಿಗೆ ಸಹ ಸಿಗುತ್ತವೆ.
08:34 ಮಗುವಿನ ಕಾಲಿನ ಚಲನೆಗಳು, ತಾಯಿಯ ಗರ್ಭದ ಮೇಲೆ ಒತ್ತಡವನ್ನು ಹಾಕುತ್ತವೆ. ಈ ಒತ್ತಡವು, ಗರ್ಭಾಶಯದ ಸಂಕೋಚನ ಮತ್ತು ಮಾಸುಚೀಲವನ್ನು (placenta) ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ.
08:45 ಸ್ತನ್ಯಪಾನದ ಆರಂಭವು ತಾಯಿಯ ದೇಹದಲ್ಲಿ 'ಆಕ್ಸಿಟೋಸಿನ್' ಅನ್ನು (oxytocin) ಹೆಚ್ಚಿಸುತ್ತದೆ.
08:51 'ಆಕ್ಸಿಟೋಸಿನ್' ನಲ್ಲಿಯ ಹೆಚ್ಚಳವು ಮಾಸುಚೀಲವನ್ನು (placenta) ಹೊರಗೆಹಾಕಲು ಕೂಡ ಸಹಾಯ ಮಾಡುತ್ತದೆ.
08:56 ಹೀಗೆ, ‘ಬ್ರೆಸ್ಟ್ ಕ್ರಾಲ್’ ರಕ್ತವ್ಯಯವನ್ನು ಕಡಿಮೆಮಾಡುತ್ತದೆ ಮತ್ತು ತಾಯಂದಿರಲ್ಲಿ ರಕ್ತಹೀನತೆಯನ್ನು ತಡೆಗಟ್ಟುತ್ತದೆ.
09:03 ರಕ್ತಹೀನತೆಯು (Anaemia) ಕೆಂಪು ರಕ್ತಕಣಗಳ ಸಂಖ್ಯೆಯು ಕಡಿಮೆಯಾಗುವ ಒಂದು ಸ್ಥಿತಿಯಾಗಿದೆ.
09:08 ಅದು ತಾಯಿಯಲ್ಲಿ ಆಯಾಸ ಮತ್ತು ದೌರ್ಬಲ್ಯಗಳನ್ನು ಉಂಟುಮಾಡಬಹುದು.
09:13 ಆದ್ದರಿಂದ ‘ಬ್ರೆಸ್ಟ್ ಕ್ರಾಲ್’, ತಾಯಿ ಮತ್ತು ಮಗುವಿಗೆ ಬಹಳ ಪ್ರಯೋಜನಕಾರಿ ಆಗಿರುವ ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದೆ.
09:21 ಇಲ್ಲಿಗೆ ನಾವು Breast crawl ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
09:24 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Debosmita, Sandhya.np14