Health-and-Nutrition/C2/Basics-of-newborn-care/Kannada

From Script | Spoken-Tutorial
Revision as of 15:00, 1 November 2019 by Sandhya.np14 (Talk | contribs)

Jump to: navigation, search
Time
Narration
00:00 Basics of newborn care ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ, ನಾವು - ನವಜಾತ ಶಿಶುವನ್ನು ಹೇಗೆ ನೋಡಿಕೊಳ್ಳುವುದು,
00:11 ಹೊಕ್ಕುಳಬಳ್ಳಿಯ ಆರೈಕೆ,

ನವಜಾತ ಶಿಶುವಿನ ಅಹಾರ ಮತ್ತು ತೇಗುವುದು (burping),

00:15 ಡಯಾಪರ್ ಹಾಕುವುದು ಹಾಗೂ ಇದರಿಂದ ಆಗಬಹುದಾದ ಗಾದರಿ/ದದ್ದು (diaper rash) ಮತ್ತು
00:19 ನವಜಾತ ಶಿಶುವಿನ ಮಲಗುವ ರೀತಿ ಇವುಗಳ ಬಗ್ಗೆ ಕಲಿಯುತ್ತೇವೆ.
00:23 ಒಂದು ಶಿಶು ಜನಿಸಿದಾಗ, ಇಡೀ ಕುಟುಂಬವು ಉತ್ಸಾಹದಿಂದಿರುತ್ತದೆ. ಪ್ರತಿಯೊಬ್ಬರೂ ಮಗುವನ್ನು ನೋಡಲು ಮತ್ತು ಮಗುವನ್ನು ಹಿಡಿದುಕೊಳ್ಳಲು ಬಯಸುತ್ತಾರೆ.
00:34 ಆದ್ದರಿಂದ ನವಜಾತ ಶಿಶುವನ್ನು ಹಿಡಿಯುವಾಗ, ಕೆಲವು ನಿಯಮಗಳನ್ನು ಪಾಲಿಸುವುದು ಅವಶ್ಯಕ.
00:40 ನವಜಾತ ಶಿಶುಗಳಿಗೆ ಬಲವಾದ ರೋಗನಿರೋಧಕ ಶಕ್ತಿ ಇರುವುದಿಲ್ಲ. ಹೀಗಾಗಿ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
00:48 ಮಗುವನ್ನು ಸೋಂಕಿನಿಂದ ರಕ್ಷಿಸಲು, ಅದನ್ನು ಸ್ಪರ್ಶಿಸುವ ಅಥವಾ ಹಿಡಿಯುವ ಮೊದಲು ಸ್ವಚ್ಛವಾದ ಕೈಗಳನ್ನು ಹೊಂದಿರುವುದು ಬಹಳ ಮುಖ್ಯ.
00:57 ನವಜಾತ ಶಿಶುವನ್ನು ಹಿಡಿಯುವ ಮೊದಲು, ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆದು, ಶುಚಿಯಾದ ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಳ್ಳಿ.
01:07 ಈಗ, ಮಗುವನ್ನು ಹೇಗೆ ಹಿಡಿದುಕೊಳ್ಳುವುದು ಎಂದು ನೋಡೋಣ.
01:11 ಒಂದು ಕೈಯಿಂದ ಮಗುವಿನ ತಲೆ ಹಾಗೂ ಕುತ್ತಿಗೆಯನ್ನು ಆಧರಿಸಿ ಹಿಡಿದುಕೊಂಡು ಇನ್ನೊಂದು ಕೈಯಿಂದ ಕೆಳಭಾಗವನ್ನು ಹಿಡಿದುಕೊಳ್ಳಿ.
01:19 ಕೆಳಗೆ ಮಲಗಿಸುವಾಗ, ಯಾವಾಗಲೂ ಮಗುವಿನ ತಲೆ ಮತ್ತು ಕುತ್ತಿಗೆಯನ್ನು ಆಧರಿಸಿ ಹಿಡಿದುಕೊಂಡು, ಅವಳ ಕೆಳಭಾಗವನ್ನು ಸಹ ಹಿಡಿದುಕೊಳ್ಳಿ.
01:26 ಮಲಗಿರುವ ಮಗುವನ್ನು ಎಚ್ಚರಗೊಳಿಸಲು, ಹೀಗೆ ಮಾಡಿ:
01:31 ಮಗುವಿನ ಪಾದಗಳಿಗೆ ಕಚಗುಳಿ ಇಡಿ ಅಥವಾ ಮಗುವನ್ನು ಎತ್ತಿಕೊಂಡು ಕುಳ್ಳಿರಿಸಿ ಅಥವಾ ಮಗುವಿನ ಕಿವಿಯನ್ನು ಮೆತ್ತಗೆ ಸ್ಪರ್ಶಿಸಿ.
01:42 ಯಾವಾಗಲೂ ನೆನಪಿಡಿ, ನವಜಾತ ಶಿಶು ಸೂಕ್ಷ್ಮವಾಗಿರುತ್ತದೆ.
01:46 ನವಜಾತ ಶಿಶುವನ್ನು ನೋಡಿಕೊಳ್ಳುವಾಗ ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳು -

ನವಜಾತ ಶಿಶು ಒರಟು ಆಟಕ್ಕೆ ಸಿದ್ಧವಾಗಿಲ್ಲ.

01:55 ಆದ್ದರಿಂದ, ಮಗುವನ್ನು ಮೊಣಕಾಲಿನ ಮೇಲೆ ಜಿಗಿಸಬೇಡಿ ಅಥವಾ ಗಾಳಿಯಲ್ಲಿ ತೂರಬೇಡಿ.
02:01 ಆಟದಲ್ಲಿ ಅಥವಾ ಹತಾಶೆಯಿಂದ ನವಜಾತ ಶಿಶುವನ್ನು ಎಂದಿಗೂ ಅಲುಗಾಡಿಸಬೇಡಿ.
02:05 ಮಗುವಿನ ಕತ್ತಿನ ಹಠಾತ್ ಎಳೆತವನ್ನು ತಪ್ಪಿಸಿ.

ಇವೆಲ್ಲವೂ ಮಗುವಿಗೆ ಒಳಗಿನ ಗಾಯಗಳಿಗೆ ಕಾರಣವಾಗಬಹುದು.

02:14 ಈಗ ನಾವು ಮನೆಯಲ್ಲಿ ಹೊಕ್ಕುಳಬಳ್ಳಿಯ ಆರೈಕೆಯ ಬಗ್ಗೆ ಕಲಿಯುತ್ತೇವೆ.
02:18 ಮಗು ತಾಯಿಯ ಗರ್ಭದಲ್ಲಿದ್ದಾಗ, ಹೊಕ್ಕುಳಬಳ್ಳಿಯು ಮಗುವಿನ ಜೀವಸೆಲೆ ಆಗಿದೆ.

ಆದರೆ ಮಗು ಜನಿಸಿದ ನಂತರ ಇದರ ಅಗತ್ಯವಿಲ್ಲ.

02:30 ಹುಟ್ಟಿದ ಕೆಲವೇ ನಿಮಿಷಗಳಲ್ಲಿ, ಬಳ್ಳಿಯು ಮಿಡಿಯುವುದನ್ನು ನಿಲ್ಲಿಸಿದ ತಕ್ಷಣ, ಅದನ್ನು ಕಟ್ಟಿಡಲಾಗುತ್ತದೆ.
02:37 ಮಗು ಆಸ್ಪತ್ರೆಯಿಂದ ಮನೆಗೆ ಹೋಗುವವರೆಗೆ ಬಳ್ಳಿಯು ಒಣಗಿ ಸುಕ್ಕಾಗಲು ಆರಂಭಿಸುತ್ತದೆ.
02:45 ಸುಮಾರು ಒಂದರಿಂದ ಎರಡು ವಾರಗಳಲ್ಲಿ ಬಳ್ಳಿಯು ತಾನಾಗಿಯೇ ಬಿದ್ದುಹೋಗುತ್ತದೆ.
02:50 ದಯವಿಟ್ಟು ಗಮನಿಸಿ, ಮಗುವಿನ ದೇಹದಲ್ಲಿ ಹೊಕ್ಕುಳಬಳ್ಳಿಯ ಮೂಲಕ ಸೋಂಕು ಪ್ರವೇಶಿಸಬಹುದು.
02:57 ಆದ್ದರಿಂದ, ಅದನ್ನು ಸರಿಯಾಗಿ ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
03:02 ಅದಕ್ಕಾಗಿ, ಮಗುವಿನ ಬಳ್ಳಿಯನ್ನು ಶುಷ್ಕವಾಗಿಟ್ಟು, ಗಾಳಿಗೆ ಒಡ್ಡಿರಬೇಕು ಎಂಬುದನ್ನು ನೆನಪಿಡಿ.
03:09 ಬಳ್ಳಿಯು ಉದುರುವವರೆಗೆ ಸ್ಪಾಂಜ್ ಸ್ನಾನವನ್ನು ಮಾತ್ರ ಮಾಡಿಸಬೇಕು.
03:14 ಬಳ್ಳಿಯನ್ನು ಮಗುವಿನ ನ್ಯಾಪಿಯ ಹೊರಗೆ ಇಡಬೇಕು ಅಥವಾ ನ್ಯಾಪಿಯ ಮೇಲಿನ ಅಂಚಿನವರೆಗೆ ಮಡಚಬಹುದು.
03:24 ಹೊಕ್ಕುಳಬಳ್ಳಿಯ ತುದಿಯಿಂದ ಅಥವಾ ಚರ್ಮದ ಸಮೀಪದಲ್ಲಿ ರಕ್ತಸ್ರಾವ ಆಗುತ್ತಿದ್ದರೆ,
03:32 ಕೀವು,

ಹೊಕ್ಕುಳ ಸುತ್ತಲೂ ಊತ ಅಥವಾ ಕೆಂಪಾಗಿರುವುದು,

03:36 ಹೊಕ್ಕುಳ ಪ್ರದೇಶದಲ್ಲಿ ಮಗುವಿಗೆ ನೋವಾಗುತ್ತಿರುವ ಚಿಹ್ನೆಗಳು,
03:41 ಹಾಗೂ ಒಂದು ತಿಂಗಳ ಅವಧಿಯಲ್ಲಿ ಬಳ್ಳಿಯು ಉದುರಿಹೋಗದಿದ್ದರೆ, ದಯವಿಟ್ಟು ಮಗುವಿನ ವೈದ್ಯರನ್ನು ಸಂಪರ್ಕಿಸಿ.
03:46 ಕೆಲವೊಮ್ಮೆ ಸ್ಟಂಪ್ ಉದುರುವ ಮುನ್ನ ಮತ್ತು ಬಳ್ಳಿಯು ಉದುರಿದ ನಂತರ, ಸ್ವಲ್ಪ ರಕ್ತ ಇರಬಹುದು. ಆದರೆ ಇದನ್ನು ತ್ವರಿತವಾಗಿ ನಿಲ್ಲಿಸಬೇಕು.
04:01 ನೆನಪಿಡಿ, ಬಳ್ಳಿಯನ್ನು ಎಂದಿಗೂ ಎಳೆಯಬೇಡಿ.
04:04 ಬಳ್ಳಿಯು ಬಿದ್ದ ನಂತರ ಮಗುವಿನ ಹೊಕ್ಕುಳ ಮೇಲೆ ಯಾವುದೇ ಕ್ರೀಮ್ ಅಥವಾ
04:08 ಪೌಡರ್ ಅನ್ನು ಹಚ್ಚಬೇಡಿ. ಅಥವಾ ಯಾವುದೇ ಬ್ಯಾಂಡೇಜ್ ಅನ್ನು ಹಾಕಬೇಡಿ.
04:13 ನವಜಾತ ಶಿಶುವಿಗೆ ಪೌಷ್ಠಿಕಾಂಶ ಹಾಗೂ ಆಹಾರವನ್ನು ಹೇಗೆ ಕೊಡುವುದು ಎಂದು ನೋಡೋಣ.
04:20 ಹೆರಿಗೆಯಾದ 1 ಗಂಟೆಯೊಳಗೆ ನವಜಾತ ಶಿಶುವಿಗೆ ಸ್ತನ್ಯಪಾನ ಮಾಡಿಸಬೇಕು.
04:25 ವಿಶೇಷವಾಗಿ ಮೊದಲ 6 ತಿಂಗಳು, ಸ್ತನ್ಯಪಾನವನ್ನು ಮಾತ್ರ ಶಿಫಾರಸು ಮಾಡಲಾಗಿದೆ.
04:30 ಇದರ ಜೊತೆಗೆ, ತಾಯಿಯು ಮಗುವಿಗೆ ಸಾಕಷ್ಟು ಪರಸ್ಪರ ಚರ್ಮದ ಸಂಪರ್ಕವನ್ನು ಒದಗಿಸಬೇಕು. ಮತ್ತು ಮಗುವಿನ ಹಸಿವಿನ ಸೂಚನೆಗಳನ್ನು ಗಮನಿಸುತ್ತಿರಬೇಕು.
04:40 ಇದೇ ಸರಣಿಯ ಇತರ ಟ್ಯುಟೋರಿಯಲ್ ಗಳಲ್ಲಿ ಈ ಎಲ್ಲಾ ಅಂಶಗಳನ್ನು ಚರ್ಚಿಸಲಾಗಿದೆ.
04:46 ಕೆಲವು ಸಂದರ್ಭಗಳಲ್ಲಿ, ಸಾಕಷ್ಟು ಆಹಾರವನ್ನು ಕೊಡಲು ಶಿಶುವನ್ನು, ವಿಶೇಷವಾಗಿ ಸಣ್ಣ- ಅಕಾಲಿಕ ಶಿಶುಗಳನ್ನು, ಆಗಾಗ್ಗೆ ಎಚ್ಚರಗೊಳಿಸುವ ಅಗತ್ಯವಿದೆ.
04:57 ಆರೋಗ್ಯಕರ ಅಥವಾ ಅಕಾಲಿಕ ಮಗು, ಒಂದುವೇಳೆ ಸ್ತನ್ಯಪಾನದಲ್ಲಿ ಆಸಕ್ತಿ ತೋರದಿದ್ದರೆ ಆಗ ತಾಯಿಯು ವೈದ್ಯರು ಅಥವಾ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು.
05:09 ಸ್ತನ್ಯಪಾನ ಮಾಡುವಾಗ, ಶಿಶು ಆಗಾಗ್ಗೆ ಗಾಳಿಯನ್ನು ನುಂಗುವುದರಿಂದ ಶಿಶುವಿಗೆ ಚಡಪಡಿಕೆಯಾಗುತ್ತದೆ.
05:15 ಇದನ್ನು ತಡೆಗಟ್ಟಲು, ಪ್ರತಿಸಲ ಹಾಲುಣಿಸಿದ ನಂತರ ಮಗುವನ್ನು ಕುಳ್ಳಿರಿಸಿ ತೇಗುವಂತೆ ಮಾಡಿ.
05:20 ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ಇದನ್ನು ವಿವರಿಸಲಾಗಿದೆ.
05:25 ನಂತರ ಡಯಾಪರ್ ಹಾಕುವುದು:

ಪ್ರತಿಸಲ ಮಲವಿಸರ್ಜನೆಯ ನಂತರ ಅಥವಾ ಬಟ್ಟೆಯ ನ್ಯಾಪಿ ಒದ್ದೆಯಾಗಿದ್ದರೆ - ಮಗುವನ್ನು ಅವಳ ಬೆನ್ನಿನ ಮೇಲೆ ಮಲಗಿಸಿ ಮತ್ತು ಕೊಳಕು ನ್ಯಾಪಿಯನ್ನು ತೆಗೆಯಿರಿ.

05:37 ಮಗುವಿನ ಈ ಜಾಗವನ್ನು ಶುಚಿಗೊಳಿಸಲು ಮತ್ತು ಒರೆಸಲು, ನೀರು ಮತ್ತು ಮೃದುವಾದ ಬಟ್ಟೆಯನ್ನು ಬಳಸಿ.
05:44 ಈ ಜಾಗದಲ್ಲಿ ಸಾಬೂನನ್ನು ಹಚ್ಚಬೇಡಿ.

ಹೆಣ್ಣುಮಗುವಿದ್ದರೆ, ಒರೆಸುವಾಗ ಮೂತ್ರನಾಳದ ಸೋಂಕನ್ನು ತಪ್ಪಿಸಲು, ಮುಂಭಾಗದಿಂದ ಹಿಂಭಾಗಕ್ಕೆ ಒರೆಸಿ.

05:55 ನ್ಯಾಪಿಯನ್ನು ಬದಲಾಯಿಸುವ ಮೊದಲು ಮತ್ತು ನಂತರ, ತಾಯಿ ಅಥವಾ ಪೋಷಕರು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
06:03 ಕೆಲವೊಮ್ಮೆ ಮಗು ಡಯಾಪರ್ ರಾಶ್‌ನಿಂದ ಬಳಲುತ್ತಿರಬಹುದು.
06:08 ಡಯಾಪರ್ ರಾಶ್ (diaper rash) ಒಂದು ಸಾಮಾನ್ಯ ಸಮಸ್ಯೆಯಾಗಿದೆ.

ಸಾಮಾನ್ಯವಾಗಿ ಈ ದದ್ದು ಕೆಂಪಗೆ ಊದಿಕೊಂಡಿದ್ದು, ಬೆಚ್ಚಗಿನ ಸ್ನಾನದಿಂದ,

06:18 ಸ್ವಲ್ಪ ಡಯಾಪರ್ ಕ್ರೀಮ್ ಮತ್ತು ಕೆಲವು ಸಮಯ ಯಾವುದೇ ಡಯಾಪರ್ ಅಥವಾ ನ್ಯಾಪಿ ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ಗುಣವಾಗುತ್ತದೆ.
06:25 ಮಗುವಿನ ಚರ್ಮವು ಸೂಕ್ಷ್ಮವಾಗಿರುತ್ತದೆ. ಹೀಗಾಗಿ ದದ್ದು ಉಂಟಾಗುತ್ತದೆ ಮತ್ತು ಒದ್ದೆಯಾದ ನ್ಯಾಪಿಯಿಂದ ಇದು ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ.
06:33 ಡಯಾಪರ್ ರಾಶ್ ಅನ್ನು ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು -

ಮಗುವಿನ ನ್ಯಾಪಿಯನ್ನು ಆಗಾಗ್ಗೆ, ವಿಶೇಷವಾಗಿ ಮಲವಿಸರ್ಜನೆಯ ನಂತರ, ಬದಲಾಯಿಸಿ.

06:41 ಮೃದುವಾದ ಬಟ್ಟೆ ಮತ್ತು ನೀರಿನಿಂದ ಈ ಜಾಗವನ್ನು ಶುಚಿಗೊಳಿಸಿ.

ಟಿಶ್ಯೂ ಪೇಪರ್ ಬಳಸುವುದನ್ನು ತಪ್ಪಿಸಿ, ಕೆಲವೊಮ್ಮೆ ಅದು ಕಿರಿಕಿರಿ ಉಂಟುಮಾಡುತ್ತದೆ.

06:50 ಡಯಾಪರ್ ರಾಶ್ ಅಥವಾ ಬ್ಯಾರಿಯರ್ ಕ್ರೀಮ್ ಅನ್ನು ಸಾಕಷ್ಟು ದಪ್ಪಗೆ ಹಚ್ಚಿ.
06:55 ಇದಕ್ಕಾಗಿ, ತೇವಾಂಶವನ್ನು ತಡೆಹಿಡಿಯುವ 'ಝಿಂಕ್ ಆಕ್ಸೈಡ್' ಇರುವ ಕ್ರೀಮ್‌ಗಳನ್ನು ಶಿಫಾರಸು ಮಾಡಲಾಗುತ್ತದೆ.
07:03 ಬಣ್ಣ ಮತ್ತು ಸುಗಂಧಗಳಿಲ್ಲದ ಸಾಬೂನನ್ನು ಬಳಸಿ ಮಗುವಿನ ನ್ಯಾಪಿಗಳನ್ನು ತೊಳೆಯಿರಿ.
07:08 ದಿನದಲ್ಲಿ ಕೆಲವು ಸಮಯ ಮಗುವಿಗೆ ಡಯಾಪರ್ ಅಥವಾ ನ್ಯಾಪಿ ಹಾಕಬೇಡಿ.

ಇದು ಚರ್ಮವನ್ನು ಶುಷ್ಕವಾಗಿರಿಸಲು ಅವಕಾಶ ನೀಡುತ್ತದೆ.

07:18 ಒಂದುವೇಳೆ, ಡಯಾಪರ್ ರಾಶ್ 3 ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ ಅಥವಾ ಇನ್ನೂ ಹೆಚ್ಚಾದರೆ ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ.
07:27 ಇದು ಫಂಗಲ್ ಇನ್ಫೆಕ್ಶನ್ ನಿಂದ (ಶಿಲೀಂಧ್ರಗಳ ಸೋಂಕು) ಆಗಿರಬಹುದು. ಇದಕ್ಕೆ ವೈದ್ಯರ ಔಷಧಿಯ ಅಗತ್ಯವಿದೆ.
07:33 ಕೊನೆಯಲ್ಲಿ, ಮಗುವಿನ ಮಲಗುವ ರೀತಿಯ ಬಗ್ಗೆ ಚರ್ಚಿಸೋಣ.
07:38 ಶಿಶುಗಳು ದಿನದಲ್ಲಿ ಸುಮಾರು 14 ರಿಂದ 16 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಮಲಗುತ್ತವೆ.
07:43 ನವಜಾತ ಶಿಶುಗಳು ಸಾಮಾನ್ಯವಾಗಿ 2 ರಿಂದ 4 ಗಂಟೆಗಳ ಕಾಲ ಮಲಗುತ್ತವೆ.
07:48 ಅನೇಕ ಶಿಶುಗಳಿಗೆ ತಮ್ಮ ಹಗಲು ರಾತ್ರಿಗಳಲ್ಲಿ ವ್ಯತ್ಯಾಸ ಇರುವುದಿಲ್ಲ.
07:52 ರಾತ್ರಿಯಲ್ಲಿ ಎಚ್ಚರವಿದ್ದು ಚುರುಕಾಗಿರುತ್ತಾರೆ ಮತ್ತು ಹಗಲಿನಲ್ಲಿ ನಿದ್ರಿಸುತ್ತಾರೆ.
07:58 ರಾತ್ರಿಯಲ್ಲಿ ಅತೀ ಕಡಿಮೆ ಪ್ರಚೋದಕಗಳನ್ನು ಇಡುವುದರಿಂದ, ಶಿಶುವಿಗೆ ಹೆಚ್ಚು ನಿದ್ರೆ ಮಾಡಲು ಸಹಾಯವಾಗುತ್ತದೆ.

ಉದಾಹರಣೆಗೆ, ನೈಟ್-ಲ್ಯಾಂಪ್ ಬಳಸಿ ಮಂದ ಬೆಳಕನ್ನು ಇರಿಸಿ. ಹಗಲಿನಲ್ಲಿ ಸ್ವಲ್ಪ ಹೆಚ್ಚು ಸಮಯ ಮಾತನಾಡುವ ಮತ್ತು ಆಡುವ ಮೂಲಕ ಶಿಶುವನ್ನು ಎಚ್ಚರವಾಗಿಡಲು ಪ್ರಯತ್ನಿಸಿ.

08:17 ಮಗು ಯಾವಾಗಲೂ ಅವಳ ಬೆನ್ನಿನ ಮೇಲೆ ಮಲಗಿ ನಿದ್ದೆ ಮಾಡಬೇಕು ಎಂದು ನೆನಪಿನಲ್ಲಿಡಿ.
08:24 ಇದು sudden infant death syndrome ನ ಅಪಾಯವನ್ನು ಕಡಿಮೆ ಮಾಡುತ್ತದೆ.
08:30 ಇತರ ಸುರಕ್ಷಿತ ಮಲಗುವ ಅಭ್ಯಾಸಗಳಿಗಾಗಿ, ಮಗುವಿನ ತೊಟ್ಟಿಲಲ್ಲಿ ಕಂಬಳಿ, ಕೌದಿ/ರಜಾಯಿ, ಕುರಿ ಚರ್ಮ, ಆಟಿಕೆಗಳು (stuffed toys) ಮತ್ತು ದಿಂಬು ಇತ್ಯಾದಿಗಳನ್ನು ಬಳಸುವುದನ್ನು ತಪ್ಪಿಸಿ.
08:44 ಇವೆಲ್ಲವೂ ಮಗುವಿಗೆ ಉಸಿರುಗಟ್ಟಿಸಬಹುದು.
08:47 ಅಲ್ಲದೆ, ಪ್ರತಿ ರಾತ್ರಿ ಮಗುವಿನ ತಲೆಯ ಸ್ಥಾನವನ್ನು ಪರ್ಯಾಯವಾಗಿ ಬದಲಾಯಿಸಲು ಮರೆಯದಿರಿ - ಮೊದಲು ಬಲಗಡೆ, ನಂತರ ಎಡಗಡೆ .. ಹೀಗೆ.
08:58 ಒಂದು ಬದಿಯಲ್ಲಿ ಮಗುವಿನ ತಲೆಯು ಚಪ್ಪಟೆ ಆಗುವುದನ್ನು ಇದು ತಡೆಯುತ್ತದೆ.
09:04 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಶ್ರೀಮತಿ ನಯನಾ ಭಟ್.

ಧನ್ಯವಾದಗಳು.

Contributors and Content Editors

Debosmita, Sandhya.np14