Digital-Divide/C2/How-to-use-FOSSEE-Netbook/Kannada

From Script | Spoken-Tutorial
Revision as of 15:19, 12 September 2017 by Glorianandihal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
0:01 IIT Bombay ಯಲ್ಲಿ ಆರಂಭಿಸಲಾದ, ಕಡಿಮೆ ಬೆಲೆಯ FOSSEE Netbook (ಫೊಸೀ ನೆಟ್ಬುಕ್) ಅನ್ನು ಉಪಯೋಗಿಸುವ ವಿಧಾನದ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
0:09 ಈ ಟ್ಯುಟೋರಿಯಲ್ ನಲ್ಲಿ, ನಾವು:
0:12 * FOSSEE Netbook (ಫೊಸೀ ನೆಟ್ಬುಕ್) ನ ಡೆಸ್ಕ್ಟಾಪ್,
0:14 * ಇದರೊಂದಿಗೆ ಬರುವ ಕೆಲವು ಪ್ರೊಗ್ರಾಂಗಳು ಮತ್ತು
0:17 * ಇದರ ‘ಆಪರೇಟಿಂಗ್ ಸಿಸ್ಟಂ’ಅನ್ನು ಹೇಗೆ ಅಪ್ಡೇಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.
0:22 ನಾವು ಇದನ್ನು 'FOSSEE Netbook' (ಫೊಸೀ ನೆಟ್ಬುಕ್) ಎಂದು ಕರೆಯುತ್ತೇವೆ. ಏಕೆಂದರೆ,
0:26 FOSSEE (ಫೊಸೀ) ತಂಡವು: * ಇದಕ್ಕಾಗಿ ಸೂಕ್ತ ವಿಶೇಷಣಗಳನ್ನು ಕಂಡುಹಿಡಿದಿದೆ.
0:30 * ‘ಆಪರೇಟಿಂಗ್ ಸಿಸ್ಟಂ’ಅನ್ನು ಮೊಟಕುಗೊಳಿಸಿದೆ.
0:32 * ‘ಸಾಫ್ಟ್ವೇರ್ ಡಿಸ್ಟ್ಟ್ರೀಬ್ಯೂಶನ್’ (ವಿತರಣೆ) ಅನ್ನು ಪಡೆದಿದೆ ಮತ್ತು
0:35 * ಅಪ್ಡೇಟ್ ಗಳನ್ನು ಹಾಗೂ ತರಬೇತಿಯನ್ನು ಒದಗಿಸುತ್ತದೆ.
0:38 ‘ಆಪರೇಟಿಂಗ್ ಸಿಸ್ಟಂ’ಅನ್ನು, 'Ubuntu Linux' ನ ಇತ್ತೀಚಿನ ಬಿಡುಗಡೆಯಿಂದ ಪಡೆಯಲಾಗಿದೆ.
0:43 * 'FOSSEE Netbook'- ಇದು ಒಂದು ಕಡಿಮೆ ಬೆಲೆಯ, IIT Bombay ಯಲ್ಲಿ ಪರೀಕ್ಷಿಸಲಾದ ಲ್ಯಾಪ್ಟಾಪ್ ಆಗಿದೆ.
0:49 * ಅದರ ವಿಶಿಷ್ಟತೆಗಳೊಂದಿಗೆ, Basics Comtech Pvt. Ltd. ಅವರಿಂದ ತಯಾರಿಸಲ್ಪಟಿದೆ.
0:55 * ಶಿಕ್ಷಣ ಮತ್ತು ಸಂಶೋಧನೆಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ
0:58 * ಮತ್ತು ಇದರ ಬೆಲೆ Rs. 5,000 ಹಾಗೂ ಕಸ್ಟಮ್ಸ್, ತೆರಿಗೆ ಇತ್ಯಾದಿ.
1:03 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
  • 'FOSSEE Netbook'
1:08
  • GNU/Linux ಆಪರೇಟಿಂಗ್ ಸಿಸ್ಟಂ ನ FOSSEE distribution ಮತ್ತು
1:12
  • Kazam screen recorder, ಆವೃತ್ತಿ 1.4.5

ಇವುಗಳನ್ನು ಬಳಸುತ್ತಿದ್ದೇನೆ.

1:17 ಈಗ ನಾವು FOSSEE Netbook ಅನ್ನು ನೋಡೋಣ.
1:20 'FOSSEE ನೆಟ್ಬುಕ್' ಹೀಗೆ ಕಾಣುತ್ತದೆ.
1:24 ಇದರ ತೂಕ ಸುಮಾರು 700 ಗ್ರಾಂ ಇರುತ್ತದೆ.
1:28 ಇದು: * 10 ಇಂಚುಗಳ ಒಂದು 'ಡಿಸ್ಪ್ಲೇ' ಹಾಗೂ ಒಂದು 'ಟಚ್ ಪ್ಯಾಡ್'
1:31 * ಒಂದು ಫ್ರಂಟ್ ಕ್ಯಾಮರಾ (front camera) ಹಾಗೂ ಎರಡು ಬಿಲ್ಟ್-ಇನ್ 'ಸ್ಪೀಕರ್'ಗಳು
1:35 * 2 ಸಾಮಾನ್ಯ USB ಪೋರ್ಟ್ ಗಳು, 1 mini HDMI ಪೋರ್ಟ್, 1 Lan ಪೋರ್ಟ್
1:43 * 'ಆಡಿಯೋ' ಸಪೋರ್ಟ್ ಗಾಗಿ ಒಂದು ಪ್ರತ್ಯೇಕ 'ಹೆಡ್ ಫೋನ್' (headphone) ಹಾಗೂ 'ಮಿಕ್ ಜ್ಯಾಕ್' ಗಳು (mic jacks)
1:49 * ಇದರಲ್ಲಿ, 32GB ಗಳ ವರೆಗೆ ಸಪೋರ್ಟ್ ಮಾಡಲು ಸಾಧ್ಯವಿರುವ ಒಂದು 'SD card' ಸ್ಲಾಟ್ ಇದೆ.
1:56 *ಒಂದು 5000 mAH ಬ್ಯಾಟರಿ.
1:59 ಇದು, ಬಳಸಲಾದ ಪ್ರೊಗ್ರಾಂಅನ್ನು ಅವಲಂಬಿಸಿ 4 ರಿಂದ 8 ಗಂಟೆಗಳ ಬ್ಯಾಕ್-ಅಪ್ ಅನ್ನು ಕೊಡುತ್ತದೆ.
2:04 1GB RAM ಹಾಗೂ 8GB ROM,
2:07 ಅಲ್ಲದೇ wi-fi ಮತ್ತು 'bluetooth' ಗಳ ಆಧಾರವನ್ನು ಸಹ ಪಡೆದಿದೆ.
2:11 ‘ಹಾರ್ಡ್ವೇರ್ ಸ್ಪೆಸಿಫಿಕೇಶನ್’ ಗಳ (hardware specifications) ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ.

http://netbook.fossee.in

2:19 FOSSEE OS ನ ರಿಕವರೀ/ಅಪ್ಡೇಟ್/ರಿ-ಇನ್ಸ್ಟಾಲೇಶನ್ ಗಳಿಗಾಗಿ, ಯೂಸರ್ ನು ಈ ಕೆಳಗೆ ಹೇಳಿದಂತೆ ಮಾಡಬೇಕು.
2:25 'netbook.fossee.in/recovery' ಯಲ್ಲಿ ಕೊಟ್ಟಿರುವ ಸೂಚನೆಗಳಿಗೆ ಅನುಸಾರವಾಗಿ 'sdcard' ಅನ್ನು ತಯಾರಿಸಿ.
2:33 FOSSEE ನೆಟ್ಬುಕ್ ನ Power Off ಮಾಡಿ.
2:35 'sdcard' ಅನ್ನು 'ಸ್ಲಾಟ್' ನಲ್ಲಿ (slot) ಸೇರಿಸಿ. ಆಮೇಲೆ 'Power key' (ಪವರ್ ಕೀ) ಯನ್ನು ಸ್ವಲ್ಪ ಹೆಚ್ಚು ಹೊತ್ತು ಒತ್ತಿ.
2:41 ಈಗ ಸ್ಕ್ರೀನ್, "Entering recovery mode..." ಎಂಬ ಟೆಕ್ಸ್ಟ್ ಮೆಸೇಜನ್ನು ತೋರಿಸಬೇಕು.
2:46 ಮುಂದಿನ ಸ್ಕ್ರೀನ್ ನಲ್ಲಿ ತೋರಿಸಲಾದ ಸೂಕ್ತವಾದ ಆಯ್ಕೆಯನ್ನು ಆರಿಸಿಕೊಳ್ಳಿ.
2:51 ನೀವು ಇಲ್ಲಿ ನೋಡುತ್ತಿರುವುದು 'FOSSEE OS' ನೊಂದಿಗೆ 'FOSSEE Netbook' ನ ಡೆಸ್ಕ್ಟಾಪ್ ಆಗಿದೆ.
2:57 ನೀವು ಡೆಸ್ಕ್ಟಾಪ್ ನ ಮೇಲೆ, ಡೀಫಾಲ್ಟ್ ಆಗಿ ಕೆಲವು ಐಕಾನ್ ಗಳನ್ನು ನೋಡುವಿರಿ.
3:01 ಎಲ್ಲ ಕಂಪ್ಯೂಟರ್ ಗಳಲ್ಲಿ ಇರುವಂತೆ, ಇದರಲ್ಲಿಯೂ ಸಹ ಯಾವುದೇ ಐಕಾನ್ ನ ಮೇಲೆ ಡಬಲ್-ಕ್ಲಿಕ್ ಮಾಡಿದಾಗ ಸಂಬಂಧಿತ ಅಪ್ಲಿಕೇಶನ್ ಓಪನ್ ಆಗುತ್ತದೆ.
3:09 ಇಲ್ಲಿ, ಕೆಳಗೆ ಬಲತುದಿಯಲ್ಲಿ, 'Network connection' (ನೆಟ್ವರ್ಕ್ ಕನೆಕ್ಷನ್) ಎಂಬ ಐಕಾನ್ ಇದೆ.
3:15 ಈಗ ಸದ್ಯಕ್ಕೆ, ಇದು “No network connection" ಎಂದು ಹೇಳುತ್ತಿದೆ.
3:18 ನಾವು ನೆಟ್ವರ್ಕ್ ಅನ್ನು ಸಂಪರ್ಕಿಸುವುದರ ಬಗ್ಗೆ ಕಲಿಯೋಣ.
3:21 wi-fi ಕನೆಕ್ಷನ್ ಗಳಿಗಾಗಿ, ಐಕಾನ್ ನ ಮೇಲೆ ಕ್ಲಿಕ್ ಮಾಡಿ.
3:25 ಈಗಾಗಲೇ ಲಭ್ಯವಿರುವ ಕನೆಕ್ಷನ್ ಗಳ ಒಂದು ಪಟ್ಟಿಯನ್ನು ತೋರಿಸಲಾಗುವುದು.
3:30 ಪಾಸ್ವರ್ಡ್ ಗೊತ್ತಿದ್ದರೆ, ನೀವು ಇವುಗಳಲ್ಲಿ ಯಾವುದೇ ಒಂದು wi-fi ನೆಟ್ವರ್ಕ್ ನ ಜೊತೆಗೆ ಸಂಪರ್ಕವನ್ನು ಪಡೆಯಬಹುದು.
3:35 ನನ್ನ ಮಷಿನ್ ನಲ್ಲಿ ಲಭ್ಯವಿರುವ ನೆಟ್ವರ್ಕ್ ಗಳಲ್ಲಿ ಒಂದನ್ನು ನಾನು ಆರಿಸಿಕೊಳ್ಳುವೆನು.
3:40 ಆಮೇಲೆ, ಪಾಸ್ವರ್ಡ್ ಅನ್ನು ಟೈಪ್ ಮಾಡಿ ನಂತರ 'Connect' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
3:46 'System Tray' ಯಲ್ಲಿ, 'Network' ಎಂಬ ಐಕಾನ್ ಅನ್ನು ಗಮನಿಸಿ.
3:50 ಐಕಾನ್ ಈಗ ಬದಲಾಗಿದೆ.
3:52 ಇದು, ನಾನು ಈಗ ಸಂಪರ್ಕವನ್ನು ಹೊಂದಿರುವ ನೆಟ್ವರ್ಕ್ ನ ಹೆಸರನ್ನು ಸೂಚಿಸುತ್ತದೆ.
3:57 ಈಗ ನಾವು ಡೆಸ್ಕ್ಟಾಪ್ ನ ಕೆಳಗಿನ ಎಡಮೂಲೆಯತ್ತ ನೋಡೋಣ.
4:03 ಇಲ್ಲಿ ನಮಗೆ 'Start' ಮೆನ್ಯು ಕಂಡುಬರುತ್ತದೆ. ಇದು main (ಮುಖ್ಯ) ಮೆನ್ಯು ಆಗಿದೆ.
4:07 'Start' ಮೆನ್ಯು, ಲಭ್ಯವಿರುವ ಎಲ್ಲ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ವರ್ಗೀಕರಿಸಲಾದ ರೀತಿಯಲ್ಲಿ ಪಟ್ಟಿಮಾಡುತ್ತದೆ.
4:14 ಯಾವ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ಪಟ್ಟಿ ಮಾಡಲಾಗಿದೆ ಎಂಬುದನ್ನು ತಿಳಿಯಲು ಪ್ರತಿಯೊಂದು ವರ್ಗವನ್ನು ಕ್ಲಿಕ್ ಮಾಡಿನೋಡಿ.
4:21 ಇವುಗಳಲ್ಲಿ ಕೆಲವನ್ನು ನಾವು ನೋಡೋಣ.
4:24 'Education' ವರ್ಗದಲ್ಲಿ, ಈ ಎಲ್ಲ ಅಪ್ಲಿಕೇಶನ್ ಗಳನ್ನು ಲಿಸ್ಟ್ ಮಾಡಲಾಗಿದೆ.
4:28 ಇಲ್ಲಿ 'Geogebra' ಇದೆ.
4:31 ಬೀಜಗಣಿತ ಮತ್ತು ರೇಖಾಗಣಿತದ ಸಂಗತಿಗಳನ್ನು ತಿಳಿದುಕೊಳ್ಳಲು ಇದೊಂದು ಅತ್ಯುತ್ತಮ ಹಾಗೂ ಉಚಿತ ಸಾಫ್ಟ್ವೇರ್ ಆಗಿದೆ.
4:37 ವಿಶೇಷವಾಗಿ, ಇದು 6ನೇ ವರ್ಗದ ನಂತರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ.
4:41 ಸ್ಪೋಕನ್ ಟ್ಯುಟೊರಿಯಲ್ ಪ್ರೊಜೆಕ್ಟ್, 'Geogebra' ಅನ್ನು ಕಲಿಯಲು ಅತ್ಯುತ್ತಮ ಟ್ಯುಟೋರಿಯಲ್ ಗಳನ್ನುತಯಾರಿಸಿದೆ.
4:47 ಇವುಗಳು http://spoken-tutorial.org ಲಿಂಕ್ ನ ಮೂಲಕ ಉಚಿತವಾಗಿ ಲಭ್ಯವಿರುತ್ತವೆ.
4:53 ಈ ಲಿಂಕ್, ಬ್ರೌಸರ್ ವಿಂಡೋದಲ್ಲಿ ಹೇಗೆ ಕಾಣುತ್ತದೆ ಎಂದು ನೀವು ನೋಡಬಹುದು
4:57 ಮತ್ತು, ಈ ಟ್ಯುಟೋರಿಯಲ್ ಗಳು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುವುದನ್ನು ಸಹ ನೀವು ನೋಡಬಹುದು.
5:03 ನೆಟ್ಬುಕ್ ನ ಈ ಪೇಜ್ ನ ಮೇಲೆ, ಸ್ಪೋಕನ್ ಟ್ಯುಟೋರಿಯಲ್ ಗಳೊಂದಿಗೆ ಇಂತಹ ಇನ್ನೂ ಅನೇಕ ಉಚಿತ ಸಾಫ್ಟ್ವೇರ್ ಗಳು ಇರುತ್ತವೆ.
5:10 ನಾನು ಬೇಗನೆ ಅವುಗಳನ್ನು ನಿಮಗೆ ತೋರಿಸುತ್ತೇನೆ.
5:13 ನಾವು Start' ಮೆನ್ಯುಗೆ ಹಿಂದಿರುಗೋಣ.
5:15 ಈಗ 'Jmol' ಎಂಬ ಇನ್ನೊಂದು ಸಾಫ್ಟ್ವೇರ್ ಅನ್ನು ನೋಡೋಣ.
5:19 ಅಣುಗಳು, ಬಾಂಡ್ ಗಳಂತಹ ರಾಸಾಯನಿಕ ರಚನೆಗಳನ್ನು 3D ಯಲ್ಲಿ ನೋಡಲು ಇದು ಬಹಳ ಉಪಯುಕ್ತವಾಗಿದೆ.
5:26 “Spoken Tutorial” ವೆಬ್ಸೈಟ್, 'Jmol' ನ ಟ್ಯುಟೋರಿಯಲ್ ಗಳನ್ನು ಅನೇಕ ಭಾಷೆಗಳಲ್ಲಿ ಹೊಂದಿದೆ.
5:33 'Start' ಮೆನ್ಯುನಲ್ಲಿ, ನಾವು 'Graphics' ಎಂಬ ಇನ್ನೊಂದು ವರ್ಗವನ್ನು ನೋಡೋಣ.
5:40 'GIMP, Inkscape' ಹಾಗೂ 'XFig' ಗಳನ್ನು ಇಲ್ಲಿ ನೀವು ನೋಡಬಹುದು.
5:46 ‘Spoken Tutorial’ ವೆಬ್ಸೈಟ್ ನಲ್ಲಿ, 'GIMP, Inkscape' ಹಾಗೂ 'XFig' ನ ಕುರಿತು ಅನೇಕ ಟ್ಯುಟೋರಿಯಲ್ ಗಳು ಇರುತ್ತವೆ.
5:54 ಈ ‘ಗ್ರಾಫಿಕ್ ಸಾಫ್ಟ್ವೇರ್’ ಅನ್ನು ಬಳಸುವುದನ್ನು ಕಲಿಯಲು ನೀವು ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಬಹುದು.
6:01 ನಾವು ಈಗ 'Internet' ವರ್ಗದತ್ತ ನೋಡೋಣ. ಇವುಗಳು, ಇಲ್ಲಿ ಲಭ್ಯವಿರುವ ಆಯ್ಕೆಗಳಾಗಿವೆ.
6:07 ಇಲ್ಲಿ, ಇದು 'Firefox Web Browser' ಆಗಿದೆ.
6:10 ಮತ್ತು, ಇಲ್ಲಿ 'Firefox' ಅನ್ನು ಬಳಸುವ ವಿಧಾನವನ್ನು ಕಲಿಯಲು ಸ್ಪೋಕನ್ ಟ್ಯುಟೋರಿಯಲ್ ಗಳಿರುತ್ತವೆ.
6:15 ಮತ್ತೆ, ಇವು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ.
6:20 'Office' ವರ್ಗದಡಿಯಲ್ಲಿ, ನಾವು 'LibreOffice Suite' -

'Writer, Calc, Impress, Base, Draw' ಹಾಗೂ 'Math' ಎಲ್ಲ ಪಡೆದಿದ್ದೇವೆ.

6:31 ನಾವು ‘Spoken Tutorial’ ವೆಬ್ಸೈಟ್ ನ ಮೇಲೆ, ಪೂರ್ತಿ 'LibreOffice Suite' ಅನ್ನು ಕಲಿಯಲು ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ.
6:37 ಈಗ ನಾವು 'Programming' ವರ್ಗಕ್ಕೆ ನಡೆಯೋಣ.
6:40 ಇಲ್ಲಿ, ನಾವು 'iPython' ಅನ್ನು ನೋಡಬಹುದು.
6:43 ‘Spoken Tutorial’ ವೆಬ್ಸೈಟ್ ನ ಮೇಲೆ 'Python' ಎಂಬ ಒಂದು ಸರಣಿಯು ಇದೆ.
6:47 ಇಲ್ಲಿ ನಾವು 'Scilab' ಅನ್ನು ಸಹ ಪಡೆದಿದ್ದೇವೆ.
6:50 ಮತ್ತೆ, ‘Spoken Tutorial’ ವೆಬ್ಸೈಟ್ ಮೇಲೆ, 'Scilab' ಅನ್ನು ಹೇಗೆ ಕಲಿಯುವುದು ಎಂಬುದರ ಬಗ್ಗೆ ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ.
6:56 ನಾವು 'Code Blocks' ಹಾಗೂ 'Geany' ಗಳಂತಹ ಕೆಲವು 'IDE'ಗಳನ್ನು ಸಹ ಪಡೆದಿದ್ದೇವೆ.
7:01 ಇವುಗಳಿಗಾಗಿ ಸ್ಪೋಕನ್ ಟ್ಯುಟೋರಿಯಲ್ ಗಳು ಸಧ್ಯಕ್ಕೆ ಲಭ್ಯವಿಲ್ಲ.
7:05 ಆದರೆ ನೀವು ಇಂಟರ್ನೆಟ್ ನಲ್ಲಿ ಶೋಧಿಸಿದರೆ, ಇವುಗಳನ್ನು ಕಲಿಯಲು ಸಹ ಉಪಯುಕ್ತ ಮಾಹಿತಿಯು ನಿಮಗೆ ಸಿಗುವುದು.
7:12 ನಾವು 'Sound & Video' ದ ಅಡಿಯಲ್ಲಿ ಲಭ್ಯವಿರುವ ಅಪ್ಲಿಕೇಶನ್ ಗಳನ್ನು ನೋಡೋಣ.
7:17 'audio tracks' (ಆಡಿಯೋ ಟ್ರಾಕ್ಸ್) ಗಳನ್ನು ರೆಕಾರ್ಡ್ ಮಾಡಲು ಬಳಸಲಾಗುವ 'Audacity' (ಓಡಾಸಿಟೀ) ಯನ್ನು ಪಡೆದಿದ್ದೇವೆ.
7:22 ಮತ್ತು, ಇಲ್ಲಿ ಅದನ್ನು ಬಳಸುವುದನ್ನು ಕಲಿಯಲು ಬೇಕಾಗುವ ಟ್ಯುಟೋರಿಯಲ್ ಗಳು ಇರುತ್ತವೆ.
7:26 'Preferences' (ಪ್ರಿಫರನ್ಸಸ್): ಇದು, 'Desktop, Keyboard, Monitor, Network' ಇತ್ಯಾದಿಗಳನ್ನು ಕಸ್ಟಮೈಜ್ ಮಾಡಲು ಆಯ್ಕೆಗಳನ್ನು ಹೊಂದಿದೆ.
7:33 ನಾವು 'Customize Look and Feel' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ.
7:37 ಡೀಫಾಲ್ಟ್ ಆಗಿ, ನಾವು 'Widget' ಎಂಬ ಟ್ಯಾಬ್ ನಲ್ಲಿದ್ದೇವೆ.
7:40 ಇಲ್ಲಿ, ಪ್ರದರ್ಶಿಸಲಾದ ವಿಂಡೋಗಳ ಡೀಫಾಲ್ಟ್ 'Theme' (ಥೀಮ್) ಅನ್ನು ಬದಲಾಯಿಸಬಹುದು.
7:45 ಕೊಟ್ಟಿರುವ ಲಿಸ್ಟ್ ನಿಂದ ನಿಮಗೆ ಇಷ್ಟವಾದ 'theme' (ಥೀಮ್) ಅನ್ನು ಆರಿಸಿಕೊಳ್ಳಿ.
7:51 ಇತರ ಟ್ಯಾಬ್ ಗಳು ಮತ್ತು ಅವುಗಳ ಆಯ್ಕೆಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ವಿವರವಾಗಿ ಕಲಿಯುವೆವು.
7:57 'Logout': ಇದು, ಸ್ಕ್ರೀನ್ ಅನ್ನು ಲಾಕ್ ಮಾಡಲು, ‘ಶಟ್-ಡೌನ್’ ಅಥವಾ ಲಾಗ್-ಔಟ್ ಮಾಡಲು ಬಳಸುವ ಆಯ್ಕೆಯಾಗಿದೆ.
8:03 ನಾನು 'Cancel' ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
8:05 'Start' ಮೆನ್ಯುದ ಪಕ್ಕದಲ್ಲಿರುವ ಐಕಾನ್, ಡೆಸ್ಕ್ಟಾಪ್ ಗೆ ಶಾರ್ಟ್ಕಟ್ ಆಗಿದೆ.
8:10 ನಾವು ಇದರ ಮೇಲೆ ಕ್ಲಿಕ್ ಮಾಡೋಣ.
8:12 ಇದು ತೆರೆಯಲಾದ ಎಲ್ಲ ವಿಂಡೋಗಳನ್ನು ಐಕಾನ್ ಗಳೊಂದಿಗೆ ತೋರಿಸುತ್ತದೆ ಹಾಗೂ ಕೇವಲ ಡೆಸ್ಕ್ಟಾಪ್ ಅನ್ನು ಮಾತ್ರ ಪ್ರದರ್ಶಿಸುತ್ತದೆ.
8:18 ಈಗ, ಡೆಸ್ಕ್ಟಾಪ್ ನ ಮೇಲೆ ನಾವು ಕೆಲವು ಐಕಾನ್ ಗಳನ್ನು ನೋಡೋಣ.
8:23 ಇಲ್ಲಿ ಟರ್ಮಿನಲ್ ಇದೆ.
8:25 ಇದು 'command line interface' (ಕಮಾಂಡ್ ಲೈನ್ ಇಂಟರ್ಫೇಸ್) ಆಗಿದೆ.
8:28 ಟರ್ಮಿನಲ್ ಅನ್ನು ಉಪಯೋಗಿಸುವುದನ್ನು ಕಲಿಯಲು, ದಯವಿಟ್ಟು 'BOSS Linux, Spoken Tutorial' ಸರಣಿಯನ್ನು ನೋಡಿ.
8:34 'File Manager' (ಫೈಲ್ ಮೆನೇಜರ್), 'Windows OS' ನಲ್ಲಿಯ 'My Computer' ಆಯ್ಕೆಯಂತೆ ಕೆಲಸಮಾಡುತ್ತದೆ.
8:39 ಈ ವಿಂಡೋದಿಂದ ನೀವು ಯಾವುದೇ ಫೈಲ್ ಅಥವಾ ಫೋಲ್ಡರ್ ಗೆ ಹೋಗಬಹುದು.
8:47 'Software Center' ( ಸಾಫ್ಟ್ವೇರ್ ಸೆಂಟರ್), ನಮಗೆ ಬೇಕಾಗಿರುವ ಎಲ್ಲ ಸಾಫ್ಟ್ವೇರ್ ಗಳನ್ನು ಇನ್ಸ್ಟಾಲ್ ಮಾಡಲು ಸಹಾಯಮಾಡುತ್ತದೆ.
8:58 'Language Support', 'FOSSEE OS' ನಿಂದ ಬೆಂಬಲಿಸಲ್ಪಟ್ಟ ಎಲ್ಲ ಭಾಷೆಗಳನ್ನು ಪಟ್ಟಿ ಮಾಡುತ್ತದೆ.
9:05 ಡೆಸ್ಕ್ಟಾಪ್ ಮೇಲಿನ 'Readme' ಎಂಬ ಹೆಸರಿನ pdf ಅನ್ನು ಗಮನಿಸಿ.
9:10 ದಯವಿಟ್ಟು ಈ pdf ಅನ್ನು ಓಪನ್ ಮಾಡಿ ಓದಿ.
9:17 ಇದು, 'Netbook' ನ ಬಗ್ಗೆ ನಿಮಗೆ ಸಂಕ್ಷಿಪ್ತ ಮಾಹಿತಿಯನ್ನು ಕೊಡುತ್ತದೆ.
9:27 ಇದರೊಂದಿಗೆ, ನಾವು How to use the FOSSEE Netbook ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
9:33 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ವೀಕ್ಷಿಸಿ.
9:40 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
  • ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು
  • ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
9:48 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
9:51 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
9:57 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.
10:04 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Glorianandihal, Sandhya.np14