Difference between revisions of "DWSIM-3.4/C2/Shortcut-Distillation/Kannada"

From Script | Spoken-Tutorial
Jump to: navigation, search
m (Nancyvarkey moved page DWSIM/C2/Shorcut-Distillation/Kannada to DWSIM-3.4/C2/Shorcut-Distillation/Kannada without leaving a redirect: Archived as old version)
(No difference)

Revision as of 10:36, 8 January 2020

Time
Narration
00:01 DWSIM ನಲ್ಲಿ ಯ Shortcut distillation column ಅನ್ನು ಸಿಮುಲೇಟ್ ಮಾಡುವ ಕುರಿತು ಇರುವ ಈ spoken tutorial ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ಅನ್ನು ತಯಾರಿಸಿದವರು, ಪ್ರೊ. ಕಣ್ಣನ್ ಮೌದ್ಗಲ್ಯ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು Shortcut distillation column ಅನ್ನು (ಶಾರ್ಟ್ಕಟ್ ಡಿಸ್ಟಿಲ್ಲೇಶನ್ ಕಾಲಂ) ಸಿಮುಲೇಟ್ ಮಾಡುವೆವು.
00:13 ನಾವು ಒಂದು ನಿರ್ದಿಷ್ಟವಾದ 'ಪ್ರೊಡಕ್ಟ್ ಸ್ಪೆಸಿಫಿಕೇಷನ್' ಅನ್ನು ಪಡೆಯಲು, ಈ ಕೆಳಗಿನವುಗಳನ್ನು ಕಂಡುಹಿಡಿಯಲು ಕಲಿಯುವೆವು.
00:23 Minimum number of stages , Minimum reflux ratio,

Optimal Feed stage location ಮತ್ತು Condenser and reboiler heat duty.

00:26 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು DWSIM 3.4. ಅನ್ನು ಬಳಸುತ್ತೇನೆ.
00:30 ಈ ಟ್ಯುಟೋರಿಯಲ್ ಅನ್ನು ಅಭ್ಯಾಸಮಾಡಲು, ನಿಮಗೆ:
00:32 ಒಂದು ಫ್ಲೋ-ಶೀಟ್ ಗೆ, ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು,
00:35 ಥರ್ಮೋಡೈನಮಿಕ್ ಪ್ಯಾಕೇಜ್ ಗಳನ್ನು (thermodynamic package) ಹೇಗೆ ಆಯ್ಕೆಮಾಡುವುದು,
00:37 ಮಟೀರಿಯಲ್ ಸ್ಟ್ರೀಮ್ (material stream) ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಲಕ್ಷಣಗಳನ್ನು ಹೇಗೆ ಸೂಚಿಸುವುದು ಇವುಗಳ ಬಗ್ಗೆ ತಿಳಿದಿರಬೇಕು.
00:41 ನಮ್ಮ ವೆಬ್ಸೈಟ್ spoken tutorial dot org ನಲ್ಲಿ ಅಗತ್ಯವಿರುವ ಟ್ಯುಟೋರಿಯಲ್-ಗಳು ಲಭ್ಯವಿದೆ.
00:47 ಮುಂದಿನ ಎರಡು ಸ್ಲೈಡ್-ಗಳಲ್ಲಿ, ನಾವು ಡಿಸ್ಟಿಲೇಷನ್ ಪ್ರಾಬ್ಲಮ್ ಗಾಗಿ ಸ್ಪೆಸಿಫಿಕೇಷನ್ ಗಳನ್ನು ಕೊಡುತ್ತೇವೆ.
00:55 ಈ ಪ್ರಾಬ್ಲೆಮ್ ಸ್ಟೇಟ್ಮೆಂಟ್ ಅನ್ನು Lehigh UniversityProf. Bill Luyben ರವರು ಕೊಟ್ಟಿದ್ದಾರೆ.
01:00 ನಾನು ಈಗಾಗಲೇ DWSIM ಅನ್ನು ತೆರೆದಿದ್ದೇನೆ.
01:03 System of Units ಮೆನ್ಯುದ ಮೇಲೆ ಕ್ಲಿಕ್ ಮಾಡಿ.
01:07 Custom 1 ಅನ್ನು ಆಯ್ಕೆ ಮಾಡಿ.
01:10 ಇದು ಯೂನಿಟ್ ಗಳನ್ನು ಕಸ್ಟಮೈಸ್ ಮಾಡಲು ನಮಗೆ ಅನುಮತಿಸುತ್ತದೆ. ಇದನ್ನು ನಾವು ನಂತರ ಮಾಡುವೆವು.
01:14 ನಾವು Configure Simulation ಬಟನ್ ನ ಮೇಲೆ ಕ್ಲಿಕ್ ಮಾಡೋಣ.
01:18 ChemSep ಡೇಟಾಬೇಸ್ ನಿಂದ Benzene ಅನ್ನು ಸೇರಿಸಿ.
01:27 ಆಮೇಲೆ Toluene ಅನ್ನು ಸೇರಿಸಿ.
01:33 ಬಳಿಕ ನಾವು ಕ್ರಮವಾಗಿ Thermodynamics >> Property Packages ಗಳ ಮೇಲೆ ಕ್ಲಿಕ್ ಮಾಡುವೆವು.
01:40 ಕೆಳಗೆ ಸ್ಕ್ರೋಲ್ ಮಾಡಿ ಮತ್ತು Raoult’s Law (ರೌಲ್ಟ್ಸ್ ಲಾ) ಅನ್ನು ಆಯ್ಕೆ ಮಾಡಿ.
01:44 Thermodynamics ಆಯ್ಕೆಯ ಕೆಳಗೆ, ನೀವು Options ಮೆನು ಅನ್ನು ನೋಡುತ್ತೀರಿ. ಇದನ್ನು ಕ್ಲಿಕ್ ಮಾಡಿ.
01:49 Units System ಅನ್ನು ಕ್ಲಿಕ್ ಮಾಡಿ.
01:53 ಇದನ್ನು ನಾನು ಒಳಗೆ ತರುತ್ತೇನೆ.
01:56 ಈ ಲಿಸ್ಟ್ ನ ಮೇಲ್ಭಾಗದಲ್ಲಿ, Pressure ಮೆನು, ಕಾಣಿಸಿಕೊಳ್ಳುತ್ತದೆ.
01:58 ಅಟ್ಮಾಸ್ಫಿಯರ್ (atmosphere) ಗಾಗಿ atm ಅನ್ನು ಆಯ್ಕೆಮಾಡಿ ಮತ್ತು ಕ್ಲಿಕ್ ಮಾಡಿ.
02:04 Pressure ಮೆನುವಿನ ಕೆಳಗೆ, Molar flow rate ಮೆನು ಇದೆ.
02:08 ಅದನ್ನು ಕ್ಲಿಕ್ ಮಾಡಿ ಮತ್ತು kmol/per hour ಅನ್ನು ಆಯ್ಕೆ ಮಾಡಿ.
02:13 Back to simulation ನ ಮೇಲೆ ಕ್ಲಿಕ್ ಮಾಡಿ.
02:15 ಡಿಸ್ಟಿಲ್ ಮಾಡಬೇಕಾದ ಒಂದು ಫೀಡ್-ಸ್ಟ್ರೀಮ್ ಅನ್ನು (feed stream) ನಾವು ಸೇರಿಸೋಣ.
02:21 benzene ಗಾಗಿ 0.4 ಮತ್ತು toluene ಗಾಗಿ 0.6 ಅನ್ನು ಕೊಡಿ.
02:29 Apply , ನಂತರ Close ಗಳನ್ನು ಒತ್ತಿ.
02:32 ಈ ಸ್ಟ್ರೀಮ್-ನ ಹೆಸರನ್ನು ನಾವು Feed ಎಂದು ಬದಲಾಯಿಸೋಣ.
02:39 Properties ನ್ ಮೇಲೆ ಕ್ಲಿಕ್ ಮಾಡಿ. ಮೇಲ್ತುದಿಗೆ ಸ್ಕ್ರೋಲ್ ಮಾಡಿ.
02:43 Specification ನ್ ಮೇಲೆ ಕ್ಲಿಕ್ ಮಾಡಿ.
02:46 Pressure and Vapor Fraction ಅನ್ನು ಆಯ್ಕೆ ಮಾಡಿ.
02:50 Molar flow rate ಆಯ್ಕೆಯನ್ನು ಗುರುತಿಸಿ.
02:53 ಇದು kmol/per hour ಯುನಿಟ್ ಗಳನ್ನು ಹೊಂದಿದೆ.
02:57 ಈ ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ. 100 ಎಂದು ನಮೂದಿಸಿ.
03:02 Molar Fraction (Vapor Phase) ಅನ್ನು ಗುರುತಿಸಿ.
03:08 ಡಿಫಾಲ್ಟ್ ವ್ಯಾಲ್ಯು, 0 (ಸೊನ್ನೆ) ಆಗಿದೆ.
03:10 ಇದು ಸಂತೃಪ್ತ ದ್ರವವನ್ನು (saturated liquid) ಸೂಚಿಸುತ್ತದೆ.
03:13 ನಾವು ಇದನ್ನು ಹಾಗೆಯೆ ಇಡೋಣ.
03:16 ನಾವು Flowsheet ಗೆ, ಒಂದು Shortcut column ಅನ್ನು ಸೇರಿಸೋಣ.
03:20 Object palette ನಲ್ಲಿ ಅದನ್ನು ಗುರುತಿಸೋಣ.
03:23 Shortcut Column- ಇದು, Fenske-Underwood-Gilliland (ಫೆನ್ಸ್ಕಿ- ಅಂಡರ್ ವುಡ್- ಗಿಲಿಲ್ಯಾಂಡ್) ವಿಧಾನವನ್ನು ಆಧರಿಸಿದೆ.
03:27 ಅದನ್ನು ಕ್ಲಿಕ್ ಮಾಡಿ ಮತ್ತು ಫ್ಲೋ-ಶೀಟ್ ಗೆ ಎಳೆಯಿರಿ.
03:32 ನಾವು ಇದನ್ನು ಜೋಡಿಸೋಣ.
03:34 ಈಗ, ನಾವು ಎರಡು output stream ಗಳನ್ನು ಸೇರಿಸೋಣ.
03:37 ಅವುಗಳು distillate ಮತ್ತು Bottoms ಎಂದು ಆಗಿವೆ.
03:41 ಇದನ್ನು ಮಾಡಲು, ಎರಡು material streamಗಳನ್ನು ನಾವು ಡ್ರ್ಯಾಗ್ ಮಾಡೋಣ .
03:46 ಅವುಗಳು ಔಟ್ಪುಟ್ ಸ್ಟ್ರೀಮ್ ಗಳಾಗಿರುವುದರಿಂದ, ನಾವು ಅವುಗಳನ್ನು ಸೂಚಿಸದೇ ಹಾಗೆಯೇ ಇಡುತ್ತೇವೆ.
03:56 ಈ ಸ್ಟ್ರೀಮ್ ಗಳ ಹೆಸರನ್ನು ನಾವು Distillate ಮತ್ತು Bottoms ಎಂದು ಬದಲಾಯಿಸುವೆವು.
04:05 ಈಗ, Condenser duty ಮತ್ತು Reboiler duty ಗಳಿಗಾಗಿ, ಎರಡು Energy stream ಗಳನ್ನು ನಾವು ಸೇರಿಸೋಣ.
04:17 ಈ ಸ್ಟ್ರೀಮ್ ಗಳನ್ನು, C-Duty ಮತ್ತು R-Duty ಎಂದು ಹೆಸರಿಸೋಣ.
04:24 ಈಗ ನಾವು Shortcut distillation column ಅನ್ನು ಸೂಚಿಸಲು ಸಿದ್ಧರಾಗಿದ್ದೇವೆ.
04:27 ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಆಯ್ಕೆ ಮಾಡಿ.
04:30 Selected Object ವಿಂಡೋಗೆ ಹೋಗಿ.
04:32 Properties ಟ್ಯಾಬ್ ನ ಅಡಿಯಲ್ಲಿ, Connections ಮೆನು ಅನ್ನು ಗುರುತಿಸಿ.
04:37 ಮೊದಲನೆಯ ಆಯ್ಕೆಯು Feed ಆಗಿದೆ. Feed ಮೆನುವಿನ ಮೇಲೆ ಕ್ಲಿಕ್ ಮಾಡುತ್ತೇನೆ. ಒಂದು ಮೆನುವನ್ನು ಸೂಚಿಸುವ, ಡೌನ್-ಆರೋ ಕಾಣಿಸಿಕೊಳ್ಳುತ್ತದೆ.
04:44 ಈ ಆರೋ ಅನ್ನು ಕ್ಲಿಕ್ ಮಾಡಿ. ಇಲ್ಲಿ, ನಾವು Feed ಅನ್ನು ಆಯ್ಕೆ ಮಾಡುತ್ತೇವೆ.
04:48 ಈಗ, ಮುಂದಿನ ಆಯ್ಕೆಯಾದ Distillate ಮೇಲೆ ಕ್ಲಿಕ್ ಮಾಡಿ.
04:51 ಡ್ರಾಪ್-ಡೌನ್ ಆರೋ ಮೇಲೆ ಕ್ಲಿಕ್ ಮಾಡಿ ಮತ್ತು Distillate ಅನ್ನು ಆಯ್ಕೆ ಮಾಡಿ.
04:56 ಹೀಗೆಯೇ, Bottomsಗಾಗಿ, Bottoms ಅನ್ನು ಆಯ್ಕೆ ಮಾಡಿ.
04:59 Condenser Duty, ಮುಂದಿನ ಆಯ್ಕೆ ಆಗಿದೆ.
05:02 ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ ಮತ್ತು C-Duty ಅನ್ನು ಆಯ್ಕೆ ಮಾಡುತ್ತೇನೆ.
05:07 ಹೀಗೆಯೇ, Reboilerಗಾಗಿ, R-Duty ಅನ್ನು ಆಯ್ಕೆಮಾಡಿ.
05:12 ಇದು, ಫ್ಲೋಶೀಟ್ ನ, ಕನೆಕ್ಟಿವಿಟಿ ಯನ್ನು (ಸಂಪರ್ಕ) ಪೂರ್ಣಗೊಳಿಸುತ್ತದೆ.
05:14 Properties ಟ್ಯಾಬ್ ನ ಅಡಿಯಲ್ಲಿ , Parameters ವಿಭಾಗವನ್ನು ಗುರುತಿಸಿ.
05:19 ಈ ವಿಭಾಗವನ್ನು Shortcut Column ನ ವಿವಿಧ ಲಕ್ಷಣಗಳನ್ನು ಸೂಚಿಸಲು ಬಳಸಲಾಗುತ್ತದೆ.
05:25 ಈ ವಿಭಾಗದಲ್ಲಿ, ಮೊದಲನೆಯ ಆಯ್ಕೆಯು Condenser ಆಗಿದೆ.
05:30 ಡಿಫಾಲ್ಟ್ ಆಗಿ, ಇದು Total Condenser ಆಗಿದೆ.
05:33 ಒಂದು ವೇಳೆ partial condenser ಬೇಕಾಗಿದ್ದರೆ, ನೀವು ಇಲ್ಲಿ ಇದನ್ನು ಬದಲಾಯಿಸಬಹುದು.
05:36 ಇಲ್ಲಿ ನಾವು, ಇದನ್ನು ಇದ್ದ ಹಾಗೇ ಇಡುತ್ತೇವೆ.
05:39 ನಾವು Reflux Ratio ಅನ್ನು ನಮೂದಿಸೋಣ. ಅದರ ಮೇಲೆ ಕ್ಲಿಕ್ ಮಾಡಿ.
05:42 ಇಲ್ಲಿ , ಅದರ ಪಕ್ಕದ ಫೀಲ್ಡ್ ನಲ್ಲಿ, ವ್ಯಾಲ್ಯೂ ಅನ್ನು 2 ಎಂದು ಕೊಡುತ್ತೇವೆ.
05:49 Product composition ಅನ್ನು ಸೂಚಿಸೋಣ.
05:52 ಮೊದಲು ನಾವು, bottoms ನಲ್ಲಿ Light key ವಿವರಗಳನ್ನು ಸೂಚಿಸೋಣ.
05:57 ಇದನ್ನು ಮಾಡಲು, ನಾನು, Light key ಅನ್ನು ಕ್ಲಿಕ್ ಮಾಡುತ್ತೇನೆ.
06:01 ಆರೋ ಅನ್ನು ಕ್ಲಿಕ್ ಮಾಡಿ ಮತ್ತು Benzene ಅನ್ನು ಆಯ್ಕೆ ಮಾಡಿ.
06:04 ಕೊಟ್ಟಿರುವ ಫೀಲ್ಡ್ ನಲ್ಲಿ , ಮುಂದಿನ ಸಾಲಿನಲ್ಲಿ, 0.05ಎಂದು ನಮೂದಿಸಿ.
06:10 ಇದೇ ರೀತಿ, Heavy key ಗಾಗಿ, Toluene ಅನ್ನು ಆಯ್ಕೆಮಾಡಿ.
06:15 ಈಗ ನಾವು, Distillate ನಲ್ಲಿ, Heavy key ಯನ್ನು ಸೂಚಿಸುತ್ತೇವೆ.
06:18 ನಾವು 0.05 ಎಂದು ನಮೂದಿಸುತ್ತೇವೆ.
06:23 ಲಿಸ್ಟ್ ನಲ್ಲಿ ಮುಂದಿನದು, Condenser Pressure ಎಂದು ಇರುತ್ತದೆ.
06:26 ಡಿಫಾಲ್ಟ್ ವ್ಯಾಲ್ಯು, 0 atmosphere ಆಗಿದೆ. ಇದನ್ನು ನಾವು 1 atmosphere ಗೆ ಬದಲಾಯಿಸುವೆವು.
06:32 ಹೀಗೆಯೇ, ನಾವು reboiler pressure ಅನ್ನು 1 atmosphere ಗೆ ಬದಲಾಯಿಸೋಣ.
06:37 ಈಗ ನಾವು ಸಿಮುಲೇಷನ್ ಅನ್ನು run ಮಾಡೋಣ.
06:39 ಇದನ್ನು ಮಾಡಲು, Calculator ಆಯ್ಕೆಗಳಿಗೆ ಹೋಗಿ.
06:42 Play ಬಟನ್ ನ ಮೇಲೆ ಕ್ಲಿಕ್ ಮಾಡಿ. ಈಗ, Recalculate ಬಟನ್ ಮೇಲೆ ಕ್ಲಿಕ್ ಮಾಡಿ.
06:47 ಕ್ಯಾಲ್ಕ್ಯುಲೇಷನ್ಸ್ (calculations) ಮುಗಿದ ಮೇಲೆ, Shortcut column ನ ಮೇಲೆ ಕ್ಲಿಕ್ ಮಾಡಿ.
06:53 Properties ಟ್ಯಾಬ್ ನ ಕೆಳಗೆ, Results ಮೆನು ಅನ್ನು ಗುರುತಿಸಿ.
06:58 ನಮಗೆ ಬೇಕಾಗಿರುವ- Minimum Reflux Ratio,
07:00 Minimum Number of Stages,
07:03 Actual Number of Stages,
07:05 Optimal Feed Stage ಗಳಂತಹ
07:07 ಎಲ್ಲ ಫಲಿತಾಂಶಗಳನ್ನು ಇದು ತೋರಿಸುತ್ತದೆ:
07:10 ಈ ಫಲಿತಾಂಶಗಳನ್ನು ನಾನು ಒಂದು ಸ್ಲೈಡ್ ನಲ್ಲಿ ಪಟ್ಟಿ ಮಾಡಿದ್ದೇನೆ.
07:15 ಈ ಸಿಮುಲೇಷನ್ ಅನ್ನು ನಾನು ಸೇವ್ ಮಾಡುತ್ತೇನೆ.
07:20 ನಾನು ಇದನ್ನು shortcut end ಎಂದು ಸೇವ್ ಮಾಡಿದ್ದೇನೆ.
07:24 ಸಂಕ್ಷಿಪ್ತವಾಗಿ, ಇಲ್ಲಿ ನಾವು :
07:26 ಶಾರ್ಟ್ಕಟ್ ಡಿಸ್ಟಿಲೇಷನ್ ಕಾಲಂ ಅನ್ನು ಹೇಗೆ ಸೂಚಿಸುವುದು,
07:29 'ಕೀ ಕಂಪೋನೆಂಟ್' ಗಳು, 'ಪ್ಯೂರಿಟಿ' ಗಳು (purities) ಮತ್ತು 'ಮಿನಿಮಂ ರಿಫ್ಲೆಕ್ಸ್ ರೇಶಿಯೋ' (minimum reflux ratio) ಗಳನ್ನು ಸೂಚಿಸುವುದು,
07:34 'ಕಸ್ಟಮ್ ಯುನಿಟ್' ಗಳನ್ನು ಬಳಸುವುದು,
07:36 'ಮಿನಿಮಂ ರಿಫ್ಲಕ್ಸ್ ರೇಷಿಯೋ', 'ಆಪ್ಟಿಮಲ್ ಫೀಡ್ ಲೊಕೇಷನ್' ಮತ್ತು 'ಒಟ್ಟು ಟ್ರೇ-ಗಳ ಸಂಖ್ಯೆ' ಇವುಗಳನ್ನು ಕಂಡುಹಿಡಯಲು ಕಲಿತಿದ್ದೇವೆ.
07:43 ನಾನು ಕೆಲವು ಅಸೈನ್ಮೆಂಟ್ ಗಳನ್ನು ಕೊಡುತ್ತೇನೆ. ಈ ಸ್ಲೈಡ್ ನಲ್ಲಿರುವ ಅಸೈನ್ಮೆಂಟ್, 'ಮಾಸ್ ಬ್ಯಾಲನ್ಸ್' ಗಳಿಗೆ ಸಂಬಂಧಿಸಿದೆ.
07:48 ಸ್ಟ್ರೀಮ್ ಗಳು ಮತ್ತು ಉಪಕರಣವನ್ನು ತೋರಿಸಲು, ನಾನು ನೀಲಿ ಬಣ್ಣವನ್ನು ಬಳಸುತ್ತೇನೆ.
07:52 ಮುಂದಿನ ಅಸೈನ್ಮೆಂಟ್ ಗೆ ಹೋಗೋಣ.
07:54 ಮೊದಲು ಹೇಳಿದಂತೆ, 'ಎನರ್ಜಿ ಬ್ಯಾಲೆನ್ಸ್' ಅನ್ನು ಮಾಡಿ.
07:58 ವಿವಿಧ 'ಪ್ರಾಡಕ್ಟ್ ಪ್ಯುರಿಟಿ' ಗಳೊಂದಿಗೆ ಸಿಮುಲೇಷನ್ ಅನ್ನು ಪುನರಾವರ್ತಿಸಿ.
08:02 'ಎನರ್ಜಿ ರಿಕ್ವೈರ್ಮೆಂಟ್' ಹೇಗೆ ಬದಲಾಗುವುದು ಎಂದು ಕಂಡುಹಿಡಿಯರಿ.
08:06 ವಿವಿಧ 'ಥರ್ಮೋಡೈನಮಿಕ್ಸ್' ಗಳೊಂದಿಗೆ, ಈ ಸಿಮುಲೇಷನ್ ಅನ್ನು ಪುನರಾವರ್ತಿಸಿ.
08:08 ವಿವಿಧ 'ಫೀಡ್ ಕಂಡೀಷನ್' ಗಳೊಂದಿಗೆ, ಈ ಸಿಮುಲೇಷನ್ ಅನ್ನುಪುನರಾವರ್ತಿಸಿ.
08:12 ನಿಮ್ಮ ಫಲಿತಾಂಶಗಳನ್ನು ಅರ್ಥೈಸಿ. ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
08:16 ಈ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ.
08:20 ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:24 ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
08:31 Spoken Tutorial ನ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ?
08:33 ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ.
08:37 ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. FOSSEE ತಂಡದವರು ಅದಕ್ಕೆ ಉತ್ತರಿಸುವರು.
08:41 ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
08:44 ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ.
08:48 ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
08:52 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
08:56 FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
09:00 ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
09:04 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನೋಡಿ.
09:07 ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
09:14 ಈ ಟ್ಯುಟೋರಿಯಲ್ ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Nancyvarkey, Sandhya.np14, Udayana