DWSIM-3.4/C2/Rigorous-Distillation/Kannada

From Script | Spoken-Tutorial
Revision as of 10:42, 8 January 2020 by Nancyvarkey (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:00 DWSIM ನಲ್ಲಿ, Simulating a Rigorous distillation column ಬಗ್ಗೆ ಇರುವ ಈ spoken tutorialಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್, ಪ್ರೊಫೆಸರ್. ಕಣ್ಣನ್ ಮೌದ್ಗಲ್ಯ ಅವರ ಕೊಡುಗೆ ಆಗಿದೆ.
00:10 ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು 'ಡಿಸ್ಟಿಲ್ಲೇಶನ್ ಕಾಲಂ' ನ (Distillation column) ರಿಗರಸ್ ಸಿಮುಲೇಷನ್ (rigorous simulation) ಅನ್ನು ಮಾಡುವೆವು.
00:15 column pressure profile ಅನ್ನು (ಕಾಲಂ ಪ್ರೆಶರ್ ಪ್ರೊಫೈಲ್) ಸೂಚಿಸಲು ಕಲಿಯುವೆವು.
00:20 tray efficiencies ಅನ್ನು (ಟ್ರೇ ಎಫಿಶಿಯೆನ್ಸೀಸ್) ಎಲ್ಲಿ ಸ್ಪೆಸಿಫೈ ಮಾಡಬೇಕೆಂದು ನೋಡುವೆವು.
00:23 ‘ಪ್ರಾಡಕ್ಟ್ ಕಂಪೋಸಿಷನ್ ಗಳು’ ನಮಗೆ ಬೇಕಾದ ಹಾಗೆ ಇವೆಯೇ ಎಂದು ಪರೀಕ್ಷಿಸುವೆವು.
00:29 column profiles ಗಳನ್ನು ಹೇಗೆ ನೋಡಬೇಕೆಂದು ಸಹ ನಾವು ಕಲಿಯುವೆವು.
00:34 ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು, ನಾನು DWSIM 3.4 ಅನ್ನು ಬಳಸುತ್ತಿದ್ದೇನೆ.
00:39 ಈ ಟ್ಯುಟೋರಿಯಲ್ ಅನ್ನು ಅಭ್ಯಾಸಮಾಡಲು, ನಿಮಗೆ:
00:41 DWSIM ನಲ್ಲಿ, ‘ಸಿಮ್ಯುಲೇಶನ್ ಫೈಲ್’ ಅನ್ನು ಹೇಗೆ ತೆರೆಯುವುದು,
00:45 flowsheetಗೆ, ಕಂಪೋನೆಂಟ್ ಗಳನ್ನು ಹೇಗೆ ಸೇರಿಸುವುದು,
00:47 thermodynamic packages ಗಳನ್ನು ಹೇಗೆ ಆಯ್ಕೆ ಮಾಡುವುದು,
00:51 material ಮತ್ತು energy streams ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಲಕ್ಷಣಗಳನ್ನು ಹೇಗೆ ಸೂಚಿಸುವುದು, ಇತ್ಯಾದಿಗಳು ತಿಳಿದಿರಬೇಕು.
00:57 ನಮ್ಮ ವೆಬ್ಸೈಟ್- spoken tutorial dot org ನಲ್ಲಿ, ಅಗತ್ಯವಿರುವ ಟ್ಯುಟೋರಿಯಲ್-ಗಳ ವಿವರಗಳು ಲಭ್ಯವಿದೆ.
01:05 ಈ ಟ್ಯುಟೋರಿಯಲ್ ಗಳನ್ನು ಮತ್ತು ಅವುಗಳಿಗೆ ಸಂಬಂಧಿತ ಫೈಲ್ಗಳನ್ನು ನೀವು ಈ ಸೈಟ್ ನಿಂದ ಪಡೆಯಬಹುದು.
01:12 ಈ ಸ್ಲೈಡ್, ಹಿಂದಿನ ಟ್ಯುಟೋರಿಯಲ್ ಒಂದರಲ್ಲಿ ಸಾಲ್ವ್ ಮಾಡಲಾದ ಒಂದು ಸಮಸ್ಯೆಯನ್ನು ತೋರಿಸುತ್ತದೆ.
01:17 'ಶಾರ್ಟ್ಕಟ್ ಡಿಸ್ಟಿಲ್ಲೇಶನ್' (shortcut distillation) ಅನ್ನು ಬಳಸಿ ಇದನ್ನು ಬಗೆಹರಿಸಲಾಗಿತ್ತು.
01:23 DWSIM ನಲ್ಲಿ, ಇದಕ್ಕೆ ಸಂಬಂಧಿಸಿದ ಫೈಲ್ ಅನ್ನು ನಾವು ತೆರೆಯೋಣ.
01:28 ನಾನು ಈಗಾಗಲೇ DWSIM ಅನ್ನು ತೆರೆದಿದ್ದೇನೆ.
01:31 ಮತ್ತು shortcut dash end dot dwxml (ಶಾರ್ಟ್ಕಟ್ ಡ್ಯಾಶ್ ಎಂಡ್ ಡಾಟ್ d w x m l) ಫೈಲ್ ಅನ್ನು ಲೋಡ್ ಮಾಡಿದ್ದೇನೆ.
01:38 ನಮ್ಮ ವೆಬ್ಸೈಟ್ spoken tutorial dot org ನಲ್ಲಿ ಡೌನ್ಲೋಡ್ ಮಾಡಲು ಈ ಫೈಲ್, ನಿಮಗೆ ಲಭ್ಯವಿದೆ.
01:45 ನಾನು ಇದನ್ನು "rigorous" ಎಂದು ಸೇವ್ ಮಾಡುತ್ತೇನೆ.
01:58 ಈ ಫೈಲ್ ನ ಹೆಸರು, ಈಗ "rigorous" ಎಂದು ಬದಲಾಗಿರುವುದನ್ನು ನೀವು ನೋಡಬಹುದು.
02:03 Configure Simulation ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
02:06 Thermodynamics ಟ್ಯಾಬ್ ನ ಅಡಿಯಲ್ಲಿ, Options ಮೆನು ಅನ್ನು ಗುರುತಿಸಿ.
02:13 ನಾನು ಇದನ್ನು ಕ್ಲಿಕ್ ಮಾಡುತ್ತೇನೆ.
02:15 ಅದರ ಮೇಲಿರುವ ಬಿಳಿಯ ಜಾಗದಲ್ಲಿ, ನಿಮಗೆ Units System ಎಂಬ ಒಂದು ಆಯ್ಕೆಯು ಸಿಗುತ್ತದೆ. ನಾನಿದರ ಮೇಲೆ ಕ್ಲಿಕ್ ಮಾಡುತ್ತೇನೆ.
02:22 ಬಲಗಡೆಯ ಕಾಲಂನಲ್ಲಿ, Pressure ಅನ್ನು ಗುರುತಿಸಿ.
02:26 ಅದನ್ನು ನೋಡಲು, ನಾನು ಇದನ್ನು ಇಲ್ಲಿಗೆ ತರುತ್ತೇನೆ.
02:30 ಅದರ ಯುನಿಟ್ ಗಳನ್ನು atmosphere ಎಂದು ಬದಲಾಯಿಸುತ್ತೇನೆ.
02:35 ಹೀಗೆಯೇ, Delta_P ಯ ಯುನಿಟ್-ಗಳನ್ನು ಸಹ atmosphere ಎಂದು ಬದಲಾಯಿಸೋಣ.
02:42 Molar flow rateನ ಯುನಿಟ್ ಗಳನ್ನು ಸಹ kilo moles per hour ಗೆ ಬದಲಾಯಿಸಿ.
02:50 Back to simulation ನ ಮೇಲೆ ಕ್ಲಿಕ್ ಮಾಡಿ.
02:53 ನಾವು ಸ್ಲೈಡ್ ಗಳಿಗೆ ಬದಲಾಯಿಸೋಣ.
02:56 ಈಗಷ್ಟೆ DWSIM ನಲ್ಲಿ ನಾವು ತೆರೆದ ಫೈಲ್, ಈ ಸ್ಲೈಡ್-ನಲ್ಲಿರುವ ಸಮಸ್ಯೆಯನ್ನು ಬಗೆಹರಿಸುತ್ತದೆ.
03:02 ಮುಂದಿನ ಸ್ಲೈಡ್-ನಲ್ಲಿ ಇದರ ಉತ್ತರವನ್ನು ಕೊಡಲಾಗಿದೆ.
03:05 ಈ ಸಮಸ್ಯೆಯನ್ನು shortcut distillation ನ ಬಗ್ಗೆ ಇರುವ 'ಸ್ಪೋಕನ್-ಟ್ಯುಟೋರಿಯಲ್' ನಲ್ಲಿ ಬಗೆಹರಿಸಲಾಗಿತ್ತು.
03:11 ಈ ವ್ಯಾಲ್ಯುಗಳು, rigorous distillation column ಸಮಸ್ಯೆಗೆ ಆಧಾರವಾಗಿವೆ.
03:17 ಬೇಕಾದರೆ ನೀವು ಈ ವ್ಯಾಲ್ಯುಗಳನ್ನು, ಒಂದು ಕಾಗದದಲ್ಲಿ ಬರೆದು ಇಡಬಹುದು.
03:20 ಸದ್ಯದಲ್ಲಿಯೇ ಈ ವ್ಯಾಲ್ಯುಗಳನ್ನು ನಾವು ಬಳಸಲಿದ್ದೇವೆ.
03:24 Shortcut columnಅನ್ನು, rigorous distillation column ನಿಂದ ಬದಲಾಯಿಸುವ ಮೂಲಕ ನಾವು ಆರಂಭಿಸೋಣ.
03:31 ನಾನು simulationಗೆ ಹಿಂತಿರುಗುತ್ತೇನೆ.
03:33 Shortcut column ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ಅದನ್ನು delete ಮಾಡಿ.
03:40 ಪ್ರಾಂಪ್ಟ್- ನಲ್ಲಿ yes ಎಂದು ಉತ್ತರಿಸಿ.
03:43 Object Palette ನಲ್ಲಿ, Distillation column ಅನ್ನು ಗುರುತಿಸಿ.
03:46 ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು shortcut distillation column ಇರುವಲ್ಲಿ ತಂದಿರಿಸಿ.
03:52 ನೀವು ಅದರ ಸ್ಥಾನವನ್ನು ಸರಿಹೊಂದಿಸಬೇಕಾಗಬಹುದು.
03:55 column ಅನ್ನು ಕ್ಲಿಕ್ ಮಾಡಿ ಅದನ್ನು ಆಯ್ಕೆಮಾಡಿ.
03:59 Selected Object ಎಂಬ ವಿಂಡೋಗೆ ಹೋಗಿ.
04:02 Properties ಟ್ಯಾಬ್-ನ ಅಡಿಯಲ್ಲಿ, Connections ಮೆನುವನ್ನು ಗುರುತಿಸಿ.
04:05 ಅದು ಮೂರನೆಯ ಐಟಮ್ ಆಗಿದೆ.
04:08 ಇದರಲ್ಲಿ, ನಾವು Edit Connections ಅನ್ನು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ.
04:13 ಅದನ್ನು ಕ್ಲಿಕ್ ಮಾಡಿದ ಕೂಡಲೇ, ಬಲತುದಿಯಲ್ಲಿ ಒಂದು ಬಟನ್ ಕಾಣಿಸಿಕೊಳ್ಳುತ್ತದೆ;
04:16 ಈ ಬಟನ್, ಮೂರು ಡಾಟ್-ಗಳನ್ನು ಹೊಂದಿದೆ. ಅದನ್ನು ಕ್ಲಿಕ್ ಮಾಡಿ.
04:21 ಈಗ, ಇಲ್ಲಿ ಒಂದು ಪಾಪ್-ಅಪ್ ವಿಂಡೋ ಇದೆ.
04:23 Feeds ಮೆನ್ಯುದ ಅಡಿಯಲ್ಲಿ, + (ಪ್ಲಸ್) ಬಟನ್ ಮೇಲೆ ಕ್ಲಿಕ್ ಮಾಡಿ. ಇದು Add ಬಟನ್ ಆಗಿದೆ.
04:29 To Stage ಕಾಲಂ ನ ಅಡಿಯಲ್ಲಿ, ಡಿಫಾಲ್ಟ್ ಆಗಿ, Condenser ಆಯ್ಕೆಯಾಗಿದೆ.
04:36 ಇಲ್ಲಿ, ನಾವು feed ಪ್ರವೇಶಿಸುವ ಸ್ಟೇಜ್ ಅನ್ನು ಸೂಚಿಸಬೇಕು.
04:41 Condenser ಪಕ್ಕದಲ್ಲಿರುವ ಆರೊ ಮೇಲೆ ಕ್ಲಿಕ್ ಮಾಡಿ.
04:44 ನಾನು ಬಳಸುವ DWSIM ನ ಆವೃತ್ತಿಯಲ್ಲಿ, ನಾನು ಎರಡನೇ ಬಾರಿ ಕ್ಲಿಕ್ ಮಾಡಬೇಕು.
04:49 ನಾವು stages ಗಳ ಪಟ್ಟಿಯನ್ನು ಕಾಣಬಹುದು.
04:51 Distillation columnನಲ್ಲಿ, feed ಪ್ರವೇಶಿಸಬೇಕಾದ stage ಅನ್ನು ಆಯ್ಕೆ ಮಾಡಿ.
04:57 ಇಲ್ಲಿ, ನಾವು Stage_6 ಅನ್ನು ಆಯ್ಕೆಮಾಡುತ್ತೇವೆ.
05:00 ಈಗ, ನಾವು material stream ಅನ್ನು ಆಯ್ಕೆಮಾಡುವೆವು.
05:03 Stream ಮೆನುವಿನ ಕೆಳಗಿರುವ ಡೌನ್- ಆರೋ ಅನ್ನು ಕ್ಲಿಕ್ ಮಾಡಿ.
05:08 ನೀವು ಇದನ್ನು ಕೂಡ ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
05:10 Feed ಮೇಲೆ ಕ್ಲಿಕ್ ಮಾಡಿ.
05:12 Feed, Stage_6ಗೆ ಹೋಗುವಂತೆ ನಾವು ಜೋಡಣೆ ಮಾಡಿದ್ದೇವೆ.
05:17 ನಂತರ flowsheetನಲ್ಲಿ ನಿಜವಾದ ಜೋಡಣೆಯನ್ನು ಮಾಡಲಾಗುತ್ತದೆ.
05:22 ಇದು shortcut distillation column ನಲ್ಲಿ ನಾವು ಪಡೆದ ಸೊಲ್ಯೂಷನ್ ಪ್ರಕಾರ ಇದೆ.
05:27 ನಾವು ಅದನ್ನು ಸ್ಲೈಡ್-ನಲ್ಲಿ ನೋಡೋಣ. optimal feed location, ಆರು (6) ಎಂದು ಇದೆ.
05:31 ನಾವು DWSIM ಗೆ ಹಿಂದಿರುಗೋಣ.
05:35 ಹೀಗೆಯೇ, ನಾವು product streams ಗಳನ್ನು ಜೋಡಿಸಬೇಕು.
05:39 Condenser ಅನ್ನು Distillateಗೆ ಜೋಡಿಸಿ.
05:42 Reboiler ಅನ್ನು Bottomsಗೆ ಜೋಡಿಸಿ.
05:46 ಈಗ, ನಾವು heat duties ಅನ್ನು reboiler ಮತ್ತು condenserಗೆ ಸೇರಿಸುವೆವು.
05:50 C-Duty ಅನ್ನು Condenser ಜೊತೆಗೆ ಮತ್ತು R-Duty ಅನ್ನು Reboiler ಜೊತೆಗೆ ಜೋಡಿ ಮಾಡಿ.
05:58 ಈಗ ನಾವು ಎಲ್ಲ ಪೇರಿಂಗ್-ಗಳನ್ನು, ಕನೆಕ್ಷನ್-ಗಳನ್ನಾಗಿ ಬದಲಾಯಿಸುವೆವು.
06:02 Feed ಅಥವಾ Condenser ಆಥವಾ Reboiler ಇವುಗಳಲ್ಲಿ ಯಾವುದೇ ಒಂದರ ಮೇಲೆ ಕ್ಲಿಕ್ ಮಾಡಿ.
06:09 ಪೇರಿಂಗ್-ನಿಂದ ಸೂಚಿಸಲಾದ ಕನೆಕ್ಷನ್-ಗಳು ಇಲ್ಲಿಗೆ ಮುಗಿದಿರುತ್ತವೆ.
06:14 ಇದನ್ನು ನಾವು ಜರುಗಿಸಿ ಪರೀಕ್ಷಿಸಬಹುದು.
06:17 ಕನೆಕ್ಷನ್-ಗಳನ್ನು ಮಾಡಲಾಗಿದೆ ಎಂಬುದನ್ನು ನೀವು ನೋಡಬಹುದು.
06:21 ಇದನ್ನು ನಾನು close ಮಾಡುತ್ತೇನೆ.
06:24 ಇದು ಚೆನ್ನಾಗಿ ಕಾಣಲು, ನಾನು ಕೆಲವು ಸ್ಟ್ರೀಮ್-ಗಳನ್ನು ಸರಿಸುತ್ತೇನೆ.
06:35 Column ಅನ್ನು ಕ್ಲಿಕ್ ಮಾಡಿ, ಅದನ್ನು ಆಯ್ಕೆ ಮಾಡಿ.
06:37 Properties ಟ್ಯಾಬ್-ನ ಕೆಳಗೆ, Column Properties ವಿಭಾಗವನ್ನು ಹುಡುಕಿ.
06:43 ಇದು ಮೊದಲನೆಯ ಆಯ್ಕೆ ಆಗಿದೆ. Distillation Columnನ ವಿವಿಧ ಆಟ್ರಿಬ್ಯೂಟ್ಸ್-ಗಳನ್ನು ಸೂಚಿಸಲು ಈ ವಿಭಾಗವನ್ನು ಬಳಸಲಾಗುತ್ತದೆ.
06:51 ಈ ವಿಭಾಗದಲ್ಲಿ, Condenser Pressure ಮೊದಲನೆಯ ಆಯ್ಕೆ ಆಗಿದೆ.
06:55 ಡಿಫಾಲ್ಟ್ ಆಗಿ, ಇದು 1 atmosphere ಆಗಿದೆ.
06:59 ನಾವು ಅದನ್ನು ಹಾಗೆಯೇ ಇಡುತ್ತೇವೆ. ಮುಂದಿನದು Reboiler Pressure ಆಗಿದೆ.
07:04 ನಾನು ಇದರ ವ್ಯಾಲ್ಯು ಅನ್ನು 1.1 atmosphereಗೆ ಬದಲಾಯಿಸುತ್ತೇನೆ.
07:09 ಇದನ್ನು ಬಳಸಿ, columnನಲ್ಲಿ, linear profile ಅನ್ನು ಹೇಗೆ ಸ್ಥಾಪಿಸಬೇಕೆಂದು ನಾನು ತೋರಿಸುತ್ತೇನೆ.
07:16 ಮುಂದಿರುವ Number of Stages ಆಯ್ಕೆಯನ್ನು ಹುಡುಕಿ.
07:20 ಇಲ್ಲಿ, ನೀವು ಒಟ್ಟು trayಗಳ ಸಂಖ್ಯೆಯನ್ನು ಕೊಡಬೇಕು.
07:24 ಇಲ್ಲಿ 15 ಅನ್ನು ಕೊಡಿ.
07:27 ಏಕೆಂದರೆ, DWSIM ನಲ್ಲಿ, ಈ ಸಂಖ್ಯೆಯು ಕಂಡೆನ್ಸರ್ ಅನ್ನು ಕೂಡ ಒಳಗೊಂಡಿರುತ್ತದೆ.
07:32 ನಾವು ಒಂದು total condenserಅನ್ನು ಬಳಸಬೇಕೆಂದಿದ್ದೇವೆ. ಆದ್ದರಿಂದ, ಈ ಸಂಖ್ಯೆಯು, ಶಾರ್ಟ್ಕಟ್ ವಿಧಾನದಲ್ಲಿನ “ಈಕ್ವಿಲಿಬ್ರಿಯಂ ಸ್ಟೇಜ್” ಗಳಿಗಿಂತ ಒಂದು ಹೆಚ್ಚಾಗಿರಬೇಕು.
07:41 ನಮಗೆ ಶಾರ್ಟ್ಕಟ್ ವಿಧಾನದಲ್ಲಿ, ಇಕ್ವಿಲಿಬ್ರಿಯಂ ಸ್ಟೇಜ್ ಗಳು (equilibrium stage) 14 ಎಂದು ಸಿಕ್ಕಿದೆ.
07:47 ನಾವು ಅದನ್ನು ಸ್ಲೈಡ್-ನಲ್ಲಿ ನೋಡಬಹುದು.
07:50 ನಾವು ಹಿಂದಿರುಗೋಣ. ಮುಂದಿನ ಆಯ್ಕೆಯು Edit Stages ಆಗಿದೆ. ಅದರ ಮೇಲೆ ಕ್ಲಿಕ್ ಮಾಡೋಣ.
07:57 ಬಲತುದಿಯಲ್ಲಿರುವ ಬಟನ್ ಅನ್ನು ಒತ್ತಿ.
08:01 ಅದು condenser ಮತ್ತು reboiler pressures ಗಳನ್ನು 1 ಮತ್ತು 1.1 atmosphere ಎಂದು ತೋರಿಸುತ್ತದೆ.
08:08 ಇವು, ನಾವು ಈಗಷ್ಟೇ ನಮೂದಿಸಿದ ವ್ಯಾಲ್ಯುಗಳಾಗಿವೆ.
08:12 ಸೇರಿಸಲಾದ ಈ ಹೊಸ ಸ್ಟೇಜ್-ಗಳಿಗೆ, ಪ್ರೆಷರ್ ವ್ಯಾಲ್ಯೂ ಗಳನ್ನು ಸೊನ್ನೆ ಎಂದು ಅಸೈನ್ ಮಾಡಲಾಗಿದೆ, ಅದು ತಪ್ಪು.
08:20 ವಾಸ್ತವವಾಗಿ, ಎಲ್ಲ ಮಧ್ಯಂತರ ಸ್ಟೇಜ್ ಪ್ರೆಶರ್-ಗಳು ಇಂಟರ್ಪೊಲೇಟೆಡ್ ವ್ಯಾಲ್ಯುಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ಬಯಸುತ್ತೇವೆ.
08:28 ಎಡಗಡೆಯ ಕಾಲಂಗೆ ಹೋಗಿ ಮತ್ತು ಕೆಳಗಿರುವ interpolation ಸಿಂಬಲ್ ಅನ್ನು ಕ್ಲಿಕ್ ಮಾಡಿ.
08:35 ತಕ್ಷಣ, ಪ್ರತಿಯೊಂದು ಸ್ಟೇಜ್ ಗೆ, ಲೀನಿಯರ್ ಇಂಟರ್-ಪೊಲೇಟೆಡ್ ವ್ಯಾಲ್ಯುಗಳು ಅಸೈನ್ ಆಗುತ್ತವೆ.
08:41 ಒಂದರಿಂದ ಹದಿಮೂರರವರೆಗಿನ, ಯಾವುದೇ ಸ್ಟೇಜ್ ನಲ್ಲಿಯ ಪ್ರೆಶರ್-ಅನ್ನು ಸಹ ನಾವು ಬದಲಾಯಿಸಬಹುದು.
08:47 ಉದಾಹರಣೆಗೆ, ನಾನು ಈ ಪ್ರೆಶರ್ ಅನ್ನು ಕ್ಲಿಕ್ ಮಾಡುತ್ತೇನೆ ಮತ್ತು ಅದನ್ನು 1 atmosphere ಗೆ ಬದಲಾಯಿಸುತ್ತೇನೆ.
08:56 interpolated values ಅನ್ನು ಮತ್ತೆ ಒತ್ತಿ, ಇದನ್ನು ನಾನು undo ಮಾಡುತ್ತೇನೆ.
09:02 ಇದು ಒಂದು ಬಹಳ ಉಪಯುಕ್ತ ಹಾಗೂ ಮುಖ್ಯವಾದ ವಿಧಾನವಾಗಿದೆ.
09:05 trays ಗಳ ಸಂಖ್ಯೆಯು ಬದಲಾದಾಗಲೆಲ್ಲ, ನೀವು interpolate ಬಟನ್ ಅನ್ನು ಒತ್ತುತ್ತಿರಬೇಕು.
09:10 ನೀವು ಇದನ್ನು ಮರೆತರೆ, ಅನೇಕ ಸಮಸ್ಯೆಗಳು ಎದುರಾಗಬಹುದು.
09:14 ಉದಾಹರಣೆಗೆ, ಋಣಾತ್ಮಕ flow rates ಇರುವ ಸಾಧ್ಯತೆ ಇದೆ.
09:18 ಈ ಟ್ಯುಟೋರಿಯಲ್-ನ ಕೊನೆಯಲ್ಲಿರುವ Assignment 3 ರಲ್ಲಿ ಇದನ್ನು ಮಾಡಲು ಮರೆಯದಿರಿ.
09:22 ಇಲ್ಲಿ ತೋರಿಸಿದಂತೆ, ಒಂದು ಅಥವಾ ಇನ್ನೂ ಹೆಚ್ಚಿನ ಸ್ಟೇಜ್ ಗಳಲ್ಲಿ efficiency ಅನ್ನು ಸಹ ಬದಲಾಯಿಸಬಹುದು.
09:30 ಈ ಪಾಪ್-ಅಪ್ ಅನ್ನು Closeಮಾಡಿ.
09:32 ನಂತರ, ಇಲ್ಲಿ Condenser type ಇದೆ.
09:35 ಅದಕ್ಕಾಗಿ, ನಾವು ಮೇಲೆ ಹೋಗಬೇಕು.
09:38 ಡಿಫಾಲ್ಟ್ ಆಗಿ, ಅದು Total condenser ಆಗಿದೆ.
09:41 ಅದನ್ನು ನಾವು ಹಾಗೆಯೇ ಇಡುತ್ತೇವೆ.
09:44 ನಂತರ, Condenser Pressure drop ಎಂದು ಇದ್ದು, ಇದು atmosphere ನಲ್ಲಿ ಇದೆ. ಅದು ಡಿಫಾಲ್ಟ್ ಆಗಿ, 0 (ಸೊನ್ನೆ) ಆಗಿದೆ.
09:49 ಅದನ್ನು ನಾವು ಹಾಗೆಯೇ ಇಡೋಣ.
09:53 ಮುಂದಿನದು Condenser Specifications ಆಗಿದೆ.
09:56 ಈ ಮೆನುವಿನ ಅಡಿಯಲ್ಲಿ, Type ಇದು, ಡಿಫಾಲ್ಟ್ ಆಗಿ Stream_Ratio ಆಗಿದೆ.
10:03 ಇದರ ಕೆಳಗೆ, ನಾವು Value ಮೆನು ಅನ್ನು ನೋಡಬಹುದು.
10:07 ಅದರ ಪಕ್ಕದ ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ.
10:10 ಬೇಕಾಗಿರುವ Reflux ratio ಅನ್ನು ನಮೂದಿಸಿ.
10:13 ಇಲ್ಲಿ ನಾವು ಅದನ್ನು 2 ಎಂದು ಕೊಡುತ್ತೇವೆ.
10:16 shortcut distillation ನಲ್ಲಿ, ಮಿನಿಮಂ ರಿಫ್ಲಕ್ಸ್ ರೇಷಿಯೋ 1.47 ಆಗಿತ್ತೆಂಬುದನ್ನು ನೆನಪಿಸಿಕೊಳ್ಳಿ.
10:26 1.47 ಅನ್ನು 1.3 ರಿಂದ ಗುಣಿಸಿ, ರೌಂಡ್ ಆಫ್ ಮಾಡಿದರೆ, ನಮಗೆ 2 ಸಿಗುತ್ತದೆ.
10:33 ಮುಂದಿನದು, Reboiler Specifications ಆಗಿದೆ.
10:38 ಈ ಮೆನುವಿನ ಅಡಿಯಲ್ಲಿ, type ಇದು, ಡಿಫಾಲ್ಟ್ ಆಗಿ Product Molar Flow Rate ಆಗಿದೆ.
10:47 ಅಗತ್ಯವಿದ್ದರೆ, ಯುನಿಟ್-ಗಳನ್ನು kmol/per hour ಗೆ ಬದಲಾಯಿಸಿ.
10:55 ನಾವು Value ಮೆನು ಅನ್ನು ನೋಡುತ್ತೇವೆ.
10:58 ಅವಶ್ಯಕವಿರುವ Molar flow rate ಅನ್ನು ನಮೂದಿಸಿ. ಇಲ್ಲಿ, ನಾವು 61.1 ಎಂದು ನಮೂದಿಸುತ್ತೇವೆ.
11:05 ಶಾರ್ಟ್-ಕಟ್ ಸೊಲ್ಯುಷನ್-ನಿಂದ ಈ ಸಲಹೆಯನ್ನು ಪಡೆಯಲಾಗಿದೆ.
11:09 ಅದನ್ನು ನಾವು ಸ್ಲೈಡ್-ನಲ್ಲಿ ನೋಡಬಹುದು.
11:13 ಈಗ ನಾವು ಸೊಲ್ಯುಷನ್ ವಿಧಾನವನ್ನು ಆಯ್ಕೆಮಾಡುವೆವು.
11:17 Properties ಟ್ಯಾಬ್-ನಿಂದ, Solving Method ಎಂಬ ಆಯ್ಕೆಯನ್ನು ಗುರುತಿಸಿ; ಅದು 7 ನೆಯ ಐಟಂ ಆಗಿದೆ.
11:26 ಅದರ ಪಕ್ಕದಲ್ಲಿರುವ ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ.
11:30 ಬಲತುದಿಯಲ್ಲಿರುವ ಆರೋ ದ ಮೇಲೆ ಕ್ಲಿಕ್ ಮಾಡಿ.
11:33 solving methods ಗಳ ಒಂದು ಪಟ್ಟಿಯನ್ನು ನಾವು ನೋಡಬಹುದು.
11:36 WangHenke_BubblePoint ಅನ್ನು ಆಯ್ಕೆ ಮಾಡಿ.
11:41 ಈಗ ನಾವು ಸಿಮುಲೇಶನ್ ಅನ್ನು ರನ್ ಮಾಡುವೆವು .
11:43 ಇದನ್ನು ಮಾಡಲು, calculator ಎಂಬ ಆಯ್ಕೆಗಳಿಗೆ ಹೋಗಿ.
11:47 Play ಬಟನ್ ನ ಮೇಲೆ ಕ್ಲಿಕ್ ಮಾಡಿ.
11:50 ಈಗ Recalculate All ಬಟನ್ ಮೇಲೆ ಕ್ಲಿಕ್ ಮಾಡಿ.
11:55 ಕ್ಯಾಲ್ಕ್ಯುಲೇಶನ್ ಗಳು (calculation) ಮುಗಿದ ಮೇಲೆ, ಪ್ರೊಡಕ್ಟ್ ಕಂಪೋಸಿಷನ್ಸ್ (product compositions) ಮೇಲೆ ಕ್ಲಿಕ್ ಮಾಡಿ.
12:01 ಒಂದು stream ಅನ್ನು ಆಯ್ಕೆ ಮಾಡಿ. ಉದಾಹರಣೆಗೆ, distillate.
12:05 molar compositions ಆಯ್ಕೆಯ ಮೂಲಕ, 'ಪ್ರಾಡಕ್ಟ್ ಕಂಪೋಸಿಷನ್ಸ' ಅನ್ನು ಹೇಗೆ ತಿಳಿದುಕೊಳ್ಳುವುದು ಎಂದು ನಿಮಗೆ ತಿಳಿದಿದೆ.
12:15 ಈಗ, Distillation column ಮೇಲೆ ಕ್ಲಿಕ್ ಮಾಡಿ.
12:19 Properties ಟ್ಯಾಬ್-ನ ಅಡಿಯಲ್ಲಿ, Results ಮೆನು ಅನ್ನು ಗುರುತಿಸಿ. ಅದು 8 ನೆಯ ಐಟಂ ಆಗಿದೆ.
12:27 ಇದು, Condenser Duty, Reboiler Duty ಮತ್ತು Column Profiles ನಂತಹ ಅಗತ್ಯವಿರುವ ಎಲ್ಲ ಫಲಿತಾಂಶಗಳನ್ನು ತೋರಿಸುತ್ತದೆ.
12:34 Column profiles ಅನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ.
12:39 ಬಲತುದಿಯಲ್ಲಿ ಒಂದು ಬಟನ್ ಕಾಣಿಸಿಕೊಳ್ಳುವುದನ್ನು ನಾವು ನೋಡಬಹುದು; ಅದರ ಮೇಲೆ ಕ್ಲಿಕ್ ಮಾಡಿ.
12:44 ಈಗ ನಾವು ಈ ಪಾಪ್-ಅಪ್ ವಿಂಡೋ ಅನ್ನು ನೋಡಬಹುದು.
12:46 ನಾವು- temperature ಮತ್ತು pressure ಪ್ರೊಫೈಲ್-ಗಳು,
12:51 Flows ಪ್ರೊಫೈಲ್-ಗಳು,
12:53 Component flows ಮತ್ತು Component fractions ಇವುಗಳನ್ನು ನೋಡಬಹುದು.
12:58 ನಿಮಗೆ ಸರಿಯಾದ ಸಂಖ್ಯೆಗಳನ್ನು ತಿಳಿಯಬೇಕಾಗಿದ್ದರೆ, Graph ಟ್ಯಾಬ್-ನ ಬಲಗಡೆಯಿರುವ Table ಟ್ಯಾಬ್-ಅನ್ನು ಬಳಸಿ.
13:07 ಇದನ್ನು ನಾನು close ಮಾಡುತ್ತೇನೆ.
13:10 ನಾವು ಈ ಫೈಲ್ ಅನ್ನು ಸೇವ್ ಮಾಡೋಣ.
13:15 ಸಂಕ್ಷಿಪ್ತವಾಗಿ, ಇಲ್ಲಿ ನಾವು :
13:17 ಒಂದು 'ರಿಗರಸ್ ಡಿಸ್ಟಿಲೇಷನ್ ಕಾಲಂ' ಅನ್ನು ಹೇಗೆ ಸಿಮುಲೇಟ್ ಮಾಡುವುದು ಎಂದು ಕಲಿತೆವು.
13:21 ಪ್ರೆಶರ್ ಪ್ರೊಫೈಲ್ ಅನ್ನು ಸೂಚಿಸಿದೆವು.
13:23 ಟ್ರೇ ಎಫಿಷಿಯನ್ಸಿ-ಗಳನ್ನು ಎಲ್ಲಿ ಕೊಡಬೇಕೆಂದು ತಿಳಿದುಕೊಂಡೆವು.
13:26 ಕಾಲಂ ಪ್ರೊಫೈಲ್-ಗಳನ್ನು ಪರಿಶೀಲಿಸಿದೆವು.
13:30 ನಾನು ಕೆಲವು ಅಸೈನ್ಮೆಂಟ್-ಗಳನ್ನು ಕೊಡುತ್ತೇನೆ.
13:33 1 ಅಟ್ಮಾಸ್ಫಿಯರ್ ನ 'ಕಾಂನ್ಸ್ಟೆಂಟ್ ಕಾಲಂ ಪ್ರೆಷರ್' ನೊಂದಿಗೆ, ಎಂದರೆ, reboiler pressure = 1 atmosphere ನೊಂದಿಗೆ ಈ ಲೆಕ್ಕಾಚಾರಗಳನ್ನು ಪುನರಾವರ್ತಿಸಿ.
13:42 ನೀವು ಫಲಿತಾಂಶದಲ್ಲಿ ಮುಖ್ಯ ಬದಲಾವಣೆಗಳನ್ನು ನೋಡಿದಿರೋ ಹೇಗೆ?
13:46 ನಂತರ, 1 ಅಟ್ಮಾಸ್ಫಿಯರ್ ನ ಕಾಂನ್ಸ್ಟೆಂಟ್ ಪ್ರೆಶರ್ ನೊಂದಿಗೆ, ಎಂದರೆ, ರಿಬಾಯ್ಲರ್ ಪ್ರೆಶರ್ ಕೂಡ 1 ಅಟ್ಮಾಸ್ಫಿಯರ್ ಇದ್ದಾಗ, distillation column ಅನ್ನು ಸಿಮುಲೇಟ್ ಮಾಡಿ.
13:55 ಒಂದು ವೇಳೆ reflux ratio ಅನ್ನು 2 ಕ್ಕಿಂತ ಹೆಚ್ಚು ಮಾಡಿದರೆ, ಪ್ಯುರಿಟಿ ಸುಧಾರಿಸುತ್ತದೆಯೇ ?
14:01 ಪ್ಯುರಿಟಿ ನಿಮಗೆ ಬೇಕಾದಂತೆ ಇರಲು, ಯಾವ ರಿಫ್ಲಕ್ಸ್ ರೇಷಿಯೋ ಅನ್ನು ನೀವು ಬಳಸಬೇಕು?
14:07 ಸುಲಭವಾಗಿ ಇದನ್ನು ಮಾಡಲು, sensitivity analysis ಹೇಗೆ ಸಹಾಯಮಾಡುವುದೆಂದು ಮುಂದಿನ ಟ್ಯುಟೋರಿಯಲ್ ನಲ್ಲಿ ನಾವು ತೋರಿಸುವೆವು.
14:16 ಮುಂದಿನ ಅಸೈನ್ಮೆಂಟ್ ನಲ್ಲಿ, reflux ratio 2 ನ್ನು ಹೊಂದಿರುವ ಕಾಲಂ ಅನ್ನು ನಾವು ಸಿಮುಲೇಟ್ ಮಾಡುತ್ತೇವೆ.
14:22 column pressure ಅನ್ನು, ಸ್ಥಿರವಾಗಿ 1 ಅಟ್ಮಾಸ್ಫಿಯರ್ ಎಂದು ಇರಿಸಿ.
14:24 ಒಟ್ಟು ಟ್ರೇಗಳ ಸಂಖ್ಯೆಯನ್ನು 1 ರಿಂದ, ಎಂದರೆ 15 ರಿಂದ 16 ಕ್ಕೆ ಹೆಚ್ಚಿಸಿ.
14:31 ಟ್ರೇಗಳ ಸಂಖ್ಯೆಯು ಬದಲಾಗಿರುವ ಕಾರಣ, ನೀವು interpolate ಆಯ್ಕೆಯನ್ನು ಬಳಸಬೇಕು.
14:36 ಇದನ್ನು ಹಿಂದೆಯೂ ಹೇಳಲಾಗಿತ್ತು.
14:38 ಟ್ರೇಗಳ ಸಂಖ್ಯೆಯು ಹೆಚ್ಚಾಗಿದ್ದರಿಂದ, ಪ್ಯುರಿಟಿ ಹೆಚ್ಚಾಗಿದೆಯೇ?
14:44 ಮುಂದಿನ ಅಸೈನ್ಮೆಂಟ್ ನಲ್ಲಿ, ಈ ಕೆಳಗಿನ ಹೇಳಿಕೆಯನ್ನು ಪರೀಕ್ಷಿಸಿ:
14:48 Composition of vapour flow to the condenser = distillate product composition.
14:54 ಈ ಸಮೀಕರಣವು ಏಕೆ ನಿಜವಾಗಿರಬೇಕೆಂಬುದನ್ನು ವಿವರಿಸಿ.
14:58 ಮುಂದಿನ ಅಸೈನ್ಮೆಂಟ್ ನಲ್ಲಿ, ರಿಬಾಯ್ಲರ್ ನ ವೇರಿಯಬಲ್ ಗಳ ಸ್ಥಿರತೆಯನ್ನು ಪರೀಕ್ಷಿಸಿ.
15:03 ಈ ಉದ್ದೇಶಕ್ಕಾಗಿ, ರಿಬಾಯ್ಲರ್ ನ ಕಂಪೋಸಿಷನ್ಸ್, ಟೆಂಪರೇಚರ್ ಮತ್ತು ಪ್ರೆಶರ್ ಗಳನ್ನು ಬಳಸಿ.
15:10 ಇದನ್ನು ಒಂದು ‘ಇಕ್ವಿವ್ಯಾಲೆಂಟ್ ಫ್ಲ್ಯಾಶ್ ಕ್ಯಾಲ್ಕುಲೇಷನ್’ ಮೂಲಕ ಮಾಡಿ.
15:15 ಕೊನೆಯ ಅಸೈನ್ಮೆಂಟ್ ನಲ್ಲಿ , ವಿವಿಧ Solving Methods ಮುಖಾಂತರ ಸಮಸ್ಯೆಗೆ ಉತ್ತರವನ್ನು ಕಂಡುಹಿಡಿಯಿರಿ.
15:20 ಫಲಿತಾಂಶಗಳನ್ನು ಹೋಲಿಸಿ. ಕಂಪ್ಯುಟೇಷನ್ ಸಮಯಗಳನ್ನು ಹೋಲಿಸಿ.
15:25 ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
15:27 ಈ ವೀಡಿಯೋ, Spoken Tutorial ಪ್ರೋಜೆಕ್ಟ್ ನ ಸಾರಾಂಶವಾಗಿದೆ.
15:31 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
15:36 ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ ಹಾಗೂ ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
15:42 ಈ ಸ್ಪೋಕನ್-ಟ್ಯುಟೋರಿಯಲ್ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ?
15:45 ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ.
15:49 ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ.
15:51 FOSSEE ತಂಡದವರು ಅವುಗಳಿಗೆ ಉತ್ತರಿಸುತ್ತಾರೆ.
15:54 ದಯವಿಟ್ಟು ಈ ವೆಬ್ಸೈಟ್ ಅನ್ನು ನೋಡಿ.
15:56 ಜನಪ್ರಿಯ ಪುಸ್ತಕಗಳಿಂದ ಆಯ್ದ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್ ಅನ್ನು FOSSEE ತಂಡವು ಸಂಯೋಜನೆ ಮಾಡುತ್ತದೆ.
16:02 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
16:06 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
16:10 FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್ ಗಳನ್ನು DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
16:16 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
16:20 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
16:24 ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರೊಜೆಕ್ಟ್ಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
16:31 ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ IIT Bombay ಯಿಂದ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Nancyvarkey, Sandhya.np14, Udayana