Arduino/C3/Interfacing-LCD-through-AVR-GCC-programming/Kannada

From Script | Spoken-Tutorial
Revision as of 18:17, 8 July 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 AVR-GCC ಪ್ರೋಗ್ರಾಮಿಂಗ್ ಮೂಲಕ ಎಲ್.ಸಿ.ಡಿ ಯನ್ನು ಇಂಟರ್ಫೇಸಿಂಗ್ ಮಾಡುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನಾವು: ಎಲ್.ಸಿ.ಡಿ ಯನ್ನು ಆರ್ಡುಯಿನೊ ಬೋರ್ಡ್ ಗೆ ಇಂಟರ್ಫೇಸ್ ಮಾಡಲು,

ಮತ್ತು ಎಲ್.ಸಿ.ಡಿ ಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು AVR-GCC ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ.

00:22 ಈ ಟ್ಯುಟೋರಿಯಲ್ ಅನುಸರಿಸಲು ನೀವು ಎಲೆಕ್ಟ್ರಾನಿಕ್ಸ್, C ಪ್ರೋಗ್ರಾಮಿಂಗ್ ಮತ್ತು AVR-GCC ಯ ಮೂಲಜ್ಞಾನ ಹೊಂದಿರಬೇಕು.
00:34 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು:

ಆರ್ಡುಯಿನೊ ಯು.ಎನ್.ಒ ಬೋರ್ಡ್ ಮತ್ತು ಉಬಂಟು ಲೈನಕ್ಸ್ ಅಪರೇಟಿಂಗ್ ಸಿಸ್ಟಂ ವರ್ಶನ್ 14.04 ಬಳಸುತ್ತಿದ್ದೇನೆ.

00:47 ನಮಗೆ ಈ ಕೆಳಗಿನ ಬಾಹ್ಯ ಸಾಧನಗಳು ಸಹ ಬೇಕು:

ಅವೆಂದರೆ ಬ್ರೆಡ್ ಬೋರ್ಡ್, ಎಲ್.ಸಿ.ಡಿ 16 by 2, ಆರ್ಡುಯಿನೊ ಯು.ಎನ್.ಒ ಬೋರ್ಡ್,

01:00 ಪೊಟೆಂಶಿಯೋಮೀಟರ್, ಜಂಪರ್ ವೈರ್ ಗಳು ಮತ್ತು ಪಿನ್ ಹೆಡರ್ ಗಳು.
01:07 ಈ ಪ್ರಯೋಗದಲ್ಲಿ ನಾವು 16 by 2 ಎಲ್.ಸಿ.ಡಿ ಬಳಸಲಿದ್ದೇವೆ.

ಎಲ್.ಸಿ.ಡಿ ಕುರಿತು ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಈ ಸರಣಿಯ ಬೇಸಿಕ್ ಲೆವೆಲ್ ಟ್ಯುಟೋರಿಯಲ್ ಗಳನ್ನು ನೋಡಿ.

01:20 ಆರ್ಡುಯಿನೊ ಪಿನ್ ಗಳನ್ನು ಎಲ್.ಸಿ.ಡಿ ಗೆ ಜೋಡಿಸಲು ನೀಡಿರುವ ಕೋಷ್ಠಕವನ್ನು ಬಳಸಿ.
01:26 ಈ ಕೋಷ್ಠಕವು, ಈ ಟ್ಯುಟೋರಿಯಲ್ ನ Additional reading material ಲಿಂಕ್ ನಲ್ಲಿ ಲಭ್ಯ.
01:32 ಇದು ಸರ್ಕಿಟ್ ಜೋಡಣೆಯಾಗಿದೆ.
01:35 ಪೊಟೆಂಶಿಯೋಮೀಟರ್ ನ ಒಂದು ತುತ್ತ ತುದಿಯನ್ನು ಎಲ್.ಸಿ.ಡಿ ಯ ಪಿನ್ 1 ಕ್ಕೆ ಜೋಡಿಸಿ.
01:42 ಇನ್ನೊಂದು ತುತ್ತ ತುದಿಯನ್ನು ಎಲ್.ಸಿ.ಡಿ ಯ ಪಿನ್ 2 ಕ್ಕೆ ಜೋಡಿಸಲಾಗುತ್ತದೆ.

ನಡುವಿನ ಪಿನ್ ಅನ್ನು ಎಲ್.ಸಿ.ಡಿ ಯ ಪಿನ್ 3 ಕ್ಕೆ ಜೋಡಿಸಲಾಗುತ್ತದೆ.

01:53 ಇದು ಜೋಡಣೆಯ ಲೈವ್ ಸೆಟಪ್ ಆಗಿದೆ.
01:58 ಈಗ, ಎಲ್.ಸಿ.ಡಿ ಯಲ್ಲಿ 5 ಅಂಕಿಯನ್ನು ಡಿಸ್ಪ್ಲೇ ಮಾಡಲು AVR-GCC ಪ್ರೋಗ್ರಾಂ ಅನ್ನು ನಾವು ಬರೆಯಲಿದ್ದೇವೆ.
02:05 ಯಾವುದೇ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಇಲ್ಲಿರುವುದನ್ನು ಟೈಪ್ ಮಾಡಿ.
02:09 ಇನ್ಪುಟ್ ಮತ್ತು ಔಟ್ಪುಟ್ ಅಪರೇಶನ್ ಗಳನ್ನು ನಿರ್ವಹಿಸಲು ಬೇಕಾಗುವ ಎಲ್ಲಾ ಅಗತ್ಯ ಲೈಬ್ರರಿಗಳನ್ನು avr/io.h ಹೊಂದಿರುತ್ತದೆ.
02:19 ಡಿಲೇ ಫಂಕ್ಷನ್ ಗಾಗಿ ಬೇಕಾಗುವ ಲೈಬ್ರರಿಗಳನ್ನು Util slash delay.h ಹೊಂದಿರುತ್ತದೆ.
02:26 ವೇರಿಯೇಬಲ್ ಟೈಪ್ ಗಳು ಮತ್ತು ಇತರ ಸಾಮಾನ್ಯವಾಗಿ ಬಳಸಲಾಗುವ ಫಂಕ್ಷನ್ ಗಳನ್ನು ನಿರೂಪಿಸಲು stdlib.h ಲೈಬ್ರರಿಗಳನ್ನು ಹೊಂದಿರುತ್ತದೆ.
02:36 ClearBit(x comma y) ಯು cbi(x comma y) ಗೆ ಸಮ. PORTxyth ಬಿಟ್ ಅನ್ನು ತೆರವುಗೊಳಿಸಲು ಇದನ್ನು ಬಳಸಲಾಗುತ್ತದೆ.
02:47 SetBit(x comma y) ಯು sbi(x comma y) ಗೆ ಸಮ. PORTxyth ಬಿಟ್ ಅನ್ನು ಸೆಟ್ ಮಾಡಲು ಇದನ್ನು ಬಳಸಲಾಗುತ್ತದೆ.
02:58 ಎಲ್.ಸಿ.ಡಿ ಯ ಎಲ್ಲಾ ಸಂಖ್ಯಾತ್ಮಕ ಪಿನ್ ಗಳನ್ನು, ಹ್ಯಾಶ್ define ಬಳಸಿ ಹೆಸರುಗಳಿಂದ ಬದಲಾಯಿಸಲಾಗುತ್ತದೆ.
03:05 ಪ್ರೋಗ್ರಾಂ ಅನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಇದನ್ನು ಮಾಡಲಾಗುತ್ತದೆ.
03:10 ಎಲ್.ಸಿ.ಡಿ ಯ ಎನೇಬಲ್ ಪಿನ್ ಅನ್ನು ಟಾಗಲ್ ಮಾಡಲು PulseEnableLine ಫಂಕ್ಷನ್ ಅನ್ನು ಬಳಸಲಾಗುತ್ತದೆ.
03:17 ನಡುವೆ ʻಡಿಲೇʼಯನ್ನು ಹೊಂದಿಸಿ, SetBit ಅನ್ನು ʻಹೈʼ ಗೆ ಮತ್ತು Clearbit ಅನ್ನು ʻಲೋʼ ಗೆ ಸೆಟ್ ಮಾಡಲಾಗುತ್ತದೆ.
03:25 SendNibble() ಫಂಕ್ಷನ್ ಅನ್ನು, ಒಂದು ನಿಬ್ಬಲ್ ನಿಂದ PORTB ಗೆ ಡೇಟಾವನ್ನು ಕಳುಹಿಸಲು ಬಳಸಲಾಗುತ್ತದೆ.
03:33 SendByte() ಫಂಕ್ಷನ್ ಅನ್ನು, ಒಂದು ಬೈಟ್ ನಿಂದ PORTB ಗೆ ಡೇಟಾವನ್ನು ಕಳುಹಿಸಲು ಬಳಸಲಾಗುತ್ತದೆ.
03:40 LCD underscore Cmd ಫಂಕ್ಷನ್ ಅನ್ನು, ಎಲ್.ಸಿ.ಡಿ ಗೆ ಕಮಾಂಡ್ ಕಳುಹಿಸಲು ಬಳಸಲಾಗುತ್ತದೆ.
03:47 LCD underscore Char ಫಂಕ್ಷನ್ ಅನ್ನು, ಎಲ್.ಸಿ.ಡಿ ಗೆ ಕ್ಯಾರಕ್ಟರ್ ಡೇಟಾವನ್ನು ಕಳುಹಿಸಲು ಬಳಸಲಾಗುತ್ತದೆ.
03:55 LCD underscore Init ಫಂಕ್ಷನ್ ಅನ್ನು, ಎಲ್.ಸಿ.ಡಿಯನ್ನು ಇನಿಶಿಯಲೈಸ್ ಮಾಡಲು ಬಳಸಲಾಗುತ್ತದೆ.
04:02 LCD underscore Clear ಫಂಕ್ಷನ್ ಅನ್ನು, ಡಿಸ್ಪ್ಲೇಯನ್ನು ತೆರವುಗೊಳಿಸಲು ಬಳಸಲಾಗುತ್ತದೆ.
04:09 LCD underscore Message ಅನ್ನು, ಎಲ್.ಸಿ.ಡಿ ಯಲ್ಲಿ ಡಿಸ್ಪ್ಲೇ ಆಗಬೇಕಿರುವ ಡೇಟಾದ ಸ್ಟ್ರಿಂಗ್ ಅನ್ನು ಕಳುಹಿಸಲು ಬಳಸಲಾಗುತ್ತದೆ.
04:18 LCD underscore Integer ಫಂಕ್ಷನ್ ಅನ್ನು, ಎಲ್.ಸಿ.ಡಿ ಯ ಇಂಟೆಜರ್ ಡೇಟಾವನ್ನು ಕಳುಹಿಸಲು ಬಳಸಲಾಗುತ್ತದೆ.
04:27 ಇದು main ಫಂಕ್ಷನ್ ಆಗಿದ್ದು, ಇಲ್ಲಿ ನಾವು 5 ಮೌಲ್ಯವನ್ನು ಡಿಸ್ಪ್ಲೇಗೆ ವರ್ಗಾಯಿಸುತ್ತೇವೆ.
04:33 ಈ ಟ್ಯುಟೋರಿಯಲ್ ನ Code files ಲಿಂಕ್ ನಲ್ಲಿ ಈ ಕೋಡ್ ಲಭ್ಯ. ನೀವು ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು.
04:41 ನಾನು ಈ ಕೋಡ್ ಅನ್ನು Downloads ಫೋಲ್ಡರ್ ನಲ್ಲಿ lcd.c ಫೈಲ್ ಆಗಿ ಸೇವ್ ಮಾಡುತ್ತೇನೆ.

ಅದೇ ಫೋಲ್ಡರ್ ನಲ್ಲಿ Makefile ಸಹ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

04:53 terminal ಗೆ ಮರಳಿ.
04:56 lcd.c ಫೈಲ್ ಸೇವ್ ಮಾಡಿರುವ ಫೋಲ್ಡರ್ ಗೆ ಹೋಗಿ.

make space FNAME in capital = lcd ಎಂದು ಟೈಪ್ ಮಾಡಿ Enter ಒತ್ತಿ.

05:12 ಈ ಕಮಾಂಡ್, .hex ಫೈಲ್ ಅನ್ನು ರಚಿಸುತ್ತದೆ ಮತ್ತು ಇದನ್ನು ಆರ್ಡುಯಿನೊಗೆ ಅಪ್ಲೋಡ್ ಮಾಡುತ್ತದೆ.
05:18 ಈಗ 5 ಅಂಕಿಯು ಎಲ್.ಸಿ.ಡಿ ಯಲ್ಲಿ ಡಿಸ್ಪ್ಲೇ ಆಗಿರುವುದನ್ನು ನೀವು ನೋಡಬಹುದು.
05:25 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
05:31 ಈ ಟ್ಯುಟೋರಿಯಲ್ ನಲ್ಲಿ ನಾವು:

ಎಲ್.ಸಿ.ಡಿ ಯನ್ನು ಆರ್ಡುಯಿನೊ ಬೋರ್ಡ್ ಜೊತೆ ಇಂಟರ್ಫೇಸ್ ಮಾಡಲು ಮತ್ತು ಎಲ್.ಸಿ.ಡಿ ಯಲ್ಲಿ ಅಂಕಿಯನ್ನು ಡಿಸ್ಪ್ಲೇ ಮಾಡಲು AVR-GCC ಪ್ರೋಗ್ರಾಂ ಬರೆಯಲು ಕಲಿತೆವು.

05:43 ಅಸೈನ್ಮೆಂಟ್ ಆಗಿ,

0 ಯಿಂದ 9 ರ ನಡುವೆ ಯಾವುದೇ ಅಂಕಿಯನ್ನು ಡಿಸ್ಪ್ಲೇ ಮಾಡಲು ಮೇಲಿನ ಕೋಡ್ ಅನ್ನು ಮಾರ್ಪಡಿಸಿ. 0 ಯಿಂದ 9 ರ ತನಕ ಎಣಿಸುವ ಕೌಂಟರ್ ಅನ್ನು ನಿರ್ಮಿಸಲು ಮೇಲಿನ ಕೋಡ್ ಅನ್ನು ಮಾರ್ಪಡಿಸಿ.

05:57 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
06:05 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ.
06:15 ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ.
06:19 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯ.

06.29 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, Sandhya.np14