Difference between revisions of "Arduino/C2/Overview-of-Arduino/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:01 || ಆರ್ಡುಯಿನೊವಿನ ಮೇಲ್ನೋಟದ ಕುರಿತ ಸ್ಪೋಕನ್ ಟ್ಯುಟ...")
 
Line 215: Line 215:
 
||07:46
 
||07:46
 
|| ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?
 
|| ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?
ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ.
+
ದಯವಿಟ್ಟು ಈ ಸೈಟ್ ಗೆ ಭೇಟಿ ನೀಡಿ.
  
 
|-
 
|-

Revision as of 10:52, 27 April 2020

Time Narration
00:01 ಆರ್ಡುಯಿನೊವಿನ ಮೇಲ್ನೋಟದ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:

ವಿವಿಧ ಎಲೆಕ್ಟ್ರಾನಿಕ್ ಘಟಕಗಳು ಮತ್ತು ಅವುಗಳ ಸಂಪರ್ಕಗಳು ಮತ್ತು ಈ ಸರಣಿಯಲ್ಲಿ ಲಭ್ಯ ವಿವಿಧ ಟ್ಯುಟೋರಿಯಲ್ ಗಳ ವಿಷಯಗಳನ್ನು ಕಲಿಯಲಿದ್ದೇವೆ.

00:19 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು ಉಬಂಟು ಲೀನಕ್ಸ್ 14.04 ಅಪರೇಟಿಂಗ್ ಸಿಸ್ಟಂ ಬಳಸುತ್ತಿದ್ದೇನೆ.
00:26 ನಾವು ಈ ಸರಣಿಯಲ್ಲಿ ಬೇಸಿಕ್ ಮತ್ತು ಇಂಟರ್ ಮೀಡಿಯೇಟ್ ಮಟ್ಟದ ಟ್ಯುಟೋರಿಯಲ್ ಗಳನ್ನು ಹೊಂದಿದ್ದೇವೆ.
00:32 ಬೇಸಿಕ್ ಮಟ್ಟದ ಸರಣಿಯನ್ನು ಅನುಸರಿಸಲು ನೀವು ಎಲೆಕ್ಟ್ರಾನಿಕ್ಸ್ ಮತ್ತು ಸರ್ಕಿಟ್ ಗಳ ಜ್ಞಾನವನ್ನು ಹೊಂದಿರಬೇಕು.
00:38 ಇಂಟರ್ ಮೀಡಿಯೇಟ್ ಲೆವೆಲ್ ಗೆ ನೀವು ಅಸೆಂಬ್ಲಿ ಮತ್ತು C ಪ್ರೋಗ್ರಾಮಿಂಗ್ ಲೆವೆಲ್ ಗಳ ಜ್ಞಾನ ಹೊಂದಿರಬೇಕು.
00:45 ಎಲೆಕ್ಟ್ರಾನಿಕ್ ಘಟಕಗಳೊಂದಿಗೆ ಪ್ರಯೋಗ ಮಾಡಲು ಇಷ್ಟ ಇರುವ ಯಾರೂ ಸಹ ಆರ್ಡುಯಿನೊವನ್ನು ಬಳಸಬಹುದು.
00:54 ಉದಾಹರಣೆಗೆ: ಕ್ರಿಯಾಶೀಲತೆಯಲ್ಲಿ ಆಸಕ್ತಿ ಇರುವ ಕಾಲೇಜು ವಿದ್ಯಾರ್ಥಿಗಳು ಅಥವಾ ಹಾರ್ಡ್ ವೇರ್ ವೃತ್ತಿಪರರು ಅಥವಾ ವ್ಯಕ್ತಿಗಳು.
01:06 ಈಗ ನಾವು ಸಂಕ್ಷಿಪ್ತವಾಗಿ ಈ ಸರಣಿಯ ಪ್ರತ್ಯೇಕ ಟ್ಯುಟೋರಿಯಲ್ ಗಳ ಮೇಲೆ ಬೆಳಕು ಹರಿಸೋಣ.
01:12 ಈ ಸರಣಿಯ ಮೊದಲ ಟ್ಯುಟೋರಿಯಲ್, ವಿವಿದ ಎಲೆಕ್ಟ್ರಾನಿಕ್ ಘಟಕಗಳು ಮತ್ತು ಸಂಪರ್ಕಗಳ ಕುರಿತು ವಿವರಿಸುತ್ತದೆ.
01:19 ನಾವಿಲ್ಲಿ ಬ್ರೆಡ್ ಬೋರ್ಡ್ ಮತ್ತು ಇದರ ಅಂತರಿಕ ಸಂಪರ್ಕಗಳು,
01:24 ಬ್ರೆಡ್ ಬೋರ್ಡ್ ನಲ್ಲಿ ಎಲ್.ಇ.ಡಿ,

ಪುಶ್ ಬಟನ್ ಮತ್ತು ಬ್ರಾಡ್ ಬ್ಯಾಂಡ್ ನಲ್ಲಿ ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಕಲಿಯಲಿದ್ದೇವೆ.

01:33 ಜೊತೆಗೆ, ಸಂಪರ್ಕ ಮಾಡಲು ಬ್ರೆಡ್ ಬೋರ್ಡ್, ಎಲ್.ಇ.ಡಿ ಮತ್ತು ಪುಶ್ ಬಟನ್ ಬಳಸುವಾಗ ಜನರು ಮಾಡುವ ಸಾಮಾನ್ಯ ತಪ್ಪುಗಳ ಕುರಿತು ನಾವು ಕಲಿಯಲಿದ್ದೇವೆ.
01:43 ಈ ಟ್ಯುಟೋರಿಯಲ್ ನ ಮಿಂಚುನೋಟ ಇಲ್ಲಿದೆ.

________@01:47, add audio of tutorial Electronic components and connections from 00:23 to 00:46 ________

02:11 ಈ ಸರಣಿಯ ಮುಂದಿನ ಟ್ಯುಟೋರಿಯಲ್:

ಆರ್ಡುಯಿನೊ ಸಾಧನ,

02:17 ಆರ್ಡುಯಿನೊ ವಿನ ಗುಣಲಕ್ಷಣಗಳು,

ಆರ್ಡುಯಿನೊ ಬೋರ್ಡ್ ನ ಘಟಕಗಳು,

02:22 ಮೈಕ್ರೋಕಂಟ್ರೋಲರ್ ಗಳು ಮತ್ತು

ಉಬಂಟು ಲೀನಕ್ಟ್ ಅಪರೇಟಿಂಗ್ ಸಿಸ್ಟಂನಲ್ಲಿ ಆರ್ಡುಯಿನೊ ಐ.ಡಿ.ಇ ಅಳವಡಿಕೆ ಕಲಿಯಲಿದ್ದೇವೆ.

02:29 ಈ ಟ್ಯುಟೋರಿಯಲ್ ನ ಮಿಂಚು ನೋಟ ಇಲ್ಲಿದೆ.

________@02:33, add audio of tutorial Introduction of Arduino from 02:35 to 02:59 __________

02:58 ಮುಂದಿನ ಟ್ಯುಟೋರಿಯಲ್, ಆರ್ಡುಯಿನೊ ಕಾಂಪೋನೆಂಟ್ ಗಳು ಮತ್ತು ಐ.ಡಿ.ಇ.
03:03 ಇದು ನಮಗೆ:

ಆರ್ಡುಯಿನೊ ಮತ್ತು ಕಂಪ್ಯೂಟರ್ ನಡುವೆ ಹೇಗೆ ಭೌತಿಕ ಸಂಪರ್ಕವನ್ನು ಏರ್ಪಡಿಸುವುದು,

03:10 ಆರ್ಡುಯಿನೊ ಬೋರ್ಡ್ ನಲ್ಲಿ ಲಭ್ಯವಿರುವ ವಿವಿಧ ಪಿನ್ ಗಳು ಮತ್ತು ಆರ್ಡುಯಿನೊ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಕಲಿಯಲು ಸಹಕರಿಸಲಿದೆ.
03:17 ಈ ಟ್ಯುಟೋರಿಯಲ್ ನ ಮೇಲೆ ನಾವು ಬೆಳಕು ಹರಿಸೋಣ.

_________@03:20, add audio of tutorial Arduino Components and IDE from 00:59 to 01:28 _________

03:50 ಮುಂದಿನ ಟ್ಯುಟೋರಿಯಲ್, ಮೊದಲ ಆರ್ಡುಯಿನೊ ಪ್ರೋಗ್ರಾಂ ಕುರಿತಾಗಿದೆ.
03:54 ಇಲ್ಲಿ ನಾವು ಸರಳ ಆರ್ಡುಯಿನೊ ಪ್ರೋಗ್ರಾಂ ಬರೆಯಲು,
03:59 ಪ್ರೋಗ್ರಾಂ ಅನ್ನು ಸಂಕಲಿಸಲು ಮತ್ತು ಅಪ್ ಲೋಡ್ ಮಾಡಲು ಮತ್ತು
04:02 ಎಲ್.ಇ.ಡಿ ಮಿನುಗಲು ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ.
04:06 ಈ ಟ್ಯುಟೋರಿಯಲ್ ನ ಮಿಂಚು ನೋಟ ಇಲ್ಲಿದೆ.

__________@04:09, Add audio of First Arduino Program tutorial from 04:04 to 04:26 ___________

04:33 ಮುಂದಿನ ಟ್ಯುಟೋರಿಯಲ್, ಟ್ರೈಕಲರ್ ಎಲ್.ಇ.ಡಿ ಮತ್ತು ಪುಶ್ ಬಟನ್ ಜೊತೆಗಿನ ಆರ್ಡುಯಿನೊ ಕುರಿತಾಗಿದೆ.
04:38 ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಬೋರ್ಡ್ ಗೆ ಟ್ರೈಕಲರ್ ಎಲ್.ಇ.ಡಿ ಸಂಪರ್ಕಿಸಲು,
04:45 ಟ್ರೈಕಲ್ ಎಲ್.ಇ.ಡಿ ಮಿನುಗಲು ಪ್ರೋಗ್ರಾಂ ಬರೆಯಲು ಮತ್ತು
04:48 ಮಿನುಗುವುದನ್ನು ನಿಯಂತ್ರಿಸಲು ಪುಶ್ ಬಟನ್ ಬಳಸುವುದುನ್ನು ಕಲಿಯಲಿದ್ದೇವೆ.
04:53 ನಾವೀಗ ಈ ಟ್ಯುಟೋರಿಯಲ್ ಅನ್ನು ಪ್ಲೇ ಮಾಡೋಣ.

____________@04:56, add audio of Arduino with Tricolor LED and Push button from 05:56 to 06:08 ________

05:10 ಮುಂದಿನ ಟ್ಯುಟೋರಿಯಲ್, ಆರ್ಡುಯಿನೊವನ್ನು ಎಲ್.ಸಿ.ಡಿ ಜೊತೆ ಇಂಟರ್ ಫೇಸಿಂಗ್ ಮಾಡುವುದು.
05:15 ಈ ಟ್ಯುಟೋರಿಯಲ್ ನಲ್ಲಿ ನಾವು: ಎಲ್.ಸಿ.ಡಿ ಯನ್ನು ಆರ್ಡುಯಿನೊ ಬೋರ್ಡ್ ಜೊತೆ ಸಂಪರ್ಕಿಸಲು ಮತ್ತು

ಎಲ್.ಸಿ.ಡಿ ಯಲ್ಲಿ ಟೆಕ್ಸ್ಟ್ ಸಂದೇಶವನ್ನು ಪ್ರದರ್ಶಿಸುವುದಕ್ಕಾಗಿ ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ.

05:27 ಈ ಟ್ಯುಟೋರಿಯಲ್ ನ ಮಿಂಚು ನೋಟ ಇಲ್ಲಿದೆ.

_________@05:30 add audio of Arduino with LCD tutorial from 01:09 to 01:28 __________


05:50 ಮುಂದಿನ ಟ್ಯುಟೋರಿಯಲ್, ಆರ್ಡುಯಿನೊ ಬಳಸಿ ಡಿಸ್ಪ್ಲೇ ಕೌಂಟರ್ ಮಾಡುವುದಾಗಿದೆ.
05:56 ಇಲ್ಲಿ ನಾವು: ಎಲ್.ಸಿ.ಡಿ ಮತ್ತು ಪುಶ್ ಬಟನ್ ಅನ್ನು ಆರ್ಡುಯಿನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು
06:04 ಮತ್ತು ಪುಶ್ ಬಟನ್ ಒತ್ತಿದಾಗ ಕೌಂಟ್ ಹೆಚ್ಚಿಸಲು ಪ್ರೋಗ್ರಾಂ ಬರೆಯಲು ಕಲಿಯಲಿದ್ದೇವೆ.
06:10 ಈ ಟ್ಯುಟೋರಿಯಲ್ ನತ್ತ ಬೆಳಕು ಹರಿಸೋಣ.

________@06:13, Add audio of Display counter using Arduino tutorial from 00:47 to 01:05_____


06:32 ಮುಂದಿನ ಟ್ಯುಟೋರಿಯಲ್, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ ಕುರಿತಾಗಿದೆ.
06:36 ಇದು, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯನ್ನು ಆರುಡಿನೊ ಬೋರ್ಡ್ ಗೆ ಸಂಪರ್ಕಿಸಲು ಮತ್ತು
06:42 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ 0 ಯಿಂದ 4ರ ತನಕ ಅಂಕಿಗಳನ್ನು ಡಿಸ್ಪ್ಲೇ ಮಾಡಲು ಪ್ರೋಗ್ರಾಂ ಬರೆಯಲು ಕಲಿಸುತ್ತದೆ.
06:50 ಈ ಟ್ಯುಟೋರಿಯಲ್ ನ ಮಿಂಚು ನೋಟ ಇಲ್ಲಿದೆ.

__________@06:53, Add audio of Seven Segment Display tutorial from 01:08 to 01:26_________


07:12 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
07:17 ಈ ಟ್ಯುಟೋರಿಯಲ್ ನಲ್ಲಿ, ವಿವಿಧ ಎಲೆಕ್ಟ್ರಾನಿಕ್ ಘಟಕಗಳು ಮತ್ತು ಅವುಗಳ ಸಂಪರ್ಕಗಳು ಮತ್ತು ಈ ಸರಣಿಯ ಟ್ಯುಟೋರಿಯಲ್ ನಲ್ಲಿ ಲಭ್ಯವಿರುವ ವಿಷಯಗಳ ಕುರಿತು ಬೆಳಕು ಹರಿಸಿದೆವು.
07:29 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
07:37 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
07:46 ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?

ದಯವಿಟ್ಟು ಈ ಸೈಟ್ ಗೆ ಭೇಟಿ ನೀಡಿ.

07:53 ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

08:00 ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ.
08:04 ಸ್ಪೋಕನ್ ಟ್ಯುಟೋರಿಯಲ್ ಫಾರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ.
08:08 ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.
08:13 ಇದು ಅಸ್ತವ್ಯಸ್ತತೆಯನ್ನು ಕಡಿಮೆ ಮಾಡಲು ಸಹಕರಿಸಲಿದೆ.

ಕಡಿಮೆ ಅಸ್ತವ್ಯಸ್ತತೆಯೊಂದಿಗೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು.

08:21 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ.


8.34 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .

ಧನ್ಯವಾದಗಳು.

Contributors and Content Editors

Melkamiyar, Sandhya.np14