Difference between revisions of "Arduino/C2/First-Arduino-Program/Kannada"

From Script | Spoken-Tutorial
Jump to: navigation, search
 
Line 16: Line 16:
 
||00:19
 
||00:19
 
|| ಇಲ್ಲಿ ನಾನು:
 
|| ಇಲ್ಲಿ ನಾನು:
ಆರ್ಡುಯಿನೊ ಯು.ಎನ್ ಬೋರ್ಡ್,
+
ಆರ್ಡುಯಿನೊ '''UNO''' ಬೋರ್ಡ್,
  
 
|-
 
|-

Latest revision as of 16:06, 29 June 2020

Time Narration
00:01 First Arduino Program ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:

ಆರ್ಡುಯಿನೊ ಪ್ರೋಗ್ರಾಂ ಬರೆಯಲು, ಪ್ರೋಗ್ರಾಂ ಕಂಪೈಲ್ ಮತ್ತು ಅಪ್ಲೋಡ್ ಮಾಡಲು ಮತ್ತು ಎಲ್.ಇ.ಡಿ ಮಿನುಗಿಸಲು ಕಲಿಯಲಿದ್ದೇವೆ.

00:19 ಇಲ್ಲಿ ನಾನು:

ಆರ್ಡುಯಿನೊ UNO ಬೋರ್ಡ್,

00:23 ಉಬಂಟು ಲೀನಕ್ಸ್ 14.04 ಅಪರೇಟಿಂಗ್ ಸಿಸ್ಟಂ ಮತ್ತು

Arduino IDE ಬಳಸುತ್ತಿದ್ದೇನೆ.

00:30 ಈ ಟ್ಯುಟೋರಿಯಲ್ ಅನುಸರಿಸಲು ನೀವು: ಎಲೆಕ್ಟ್ರಾನಿಕ್ಸ್ ನ ಮೂಲಜ್ಞಾನ,
00:36 C ಅಥವಾ C++ ಪ್ರೋಗ್ರಾಂ ಬರೆಯುವ ಕುರಿತ ಮೂಲಜ್ಞಾನ
00:41 ಮತ್ತು ಆರ್ಡುಯಿನೊ ಯು.ಎನ್ ಬೋರ್ಡ್ ಮತ್ತು ಯು.ಎಸ್.ಬಿ ಪವರ್ ಕೇಬಲ್ ಕುರಿತು ತಿಳಿದಿರಬೇಕು.
00:46 ನಮ್ಮ ಮೊದಲ ಪ್ರೋಗ್ರಾಂ ಬರೆಯಲು Arduino IDE ತೆರೆಯೋಣ.
00:52 ಇಲ್ಲಿ ನಾವು Menu ಬಾರ್ ನ ಅಡಿಯಲ್ಲಿ ವಿವಿಧ ಮೆನುಗಳನ್ನು ನೋಡಬಹುದು.
00:57 Arduino ಎನ್ವಾಯರನ್ಮೆಂಟ್ ನಲ್ಲಿ ಪ್ರತಿ ಪ್ರೋಗ್ರಾಂ ಅನ್ನುSketch ಎಂದು ಸೇವ್ ಮಾಡಲಾಗುತ್ತದೆ.
01:03 ಡೀಫಾಲ್ಟ್ ಆಗಿ ಇದು Sketch underscore ಎಂದು ಹೆಸರನ್ನು ಮತ್ತು ಇನ್ನೊಂದು ಹೆಸರನ್ನು ರಚಿಸುತ್ತದೆ.
01:11 ನೀವು File ಮೇಲೆ ಹಾಗೂ ನಂತರ Save ಮೇಲೆ ಕ್ಲಿಕ್ ಮಾಡಿ ಹೆಸರನ್ನು ಬದಲಾಯಿಸಬಹುದು.
01:18 ಫೈಲ್ ಹೆಸರನ್ನು BlinkLed ಎಂದು ಟೈಪ್ ಮಾಡಿ.

ಈಗ Save ಬಟನ್ ಮೇಲೆ ಕ್ಲಿಕ್ ಮಾಡಿ.

01:26 ಇದು ಎರಡು ಎಂಪ್ಟಿ ಫಂಕ್ಷನ್ ಗಳೊಂದಿಗೆ ಡೀಫಾಲ್ಟ್ ಪ್ರೋಗ್ರಾಂ ಎನ್ವಾಯರನ್ಮೆಂಟ್ ಆಗಿದೆ. ಅವೆಂದರೆ void setup() ಮತ್ತು void loop().
01:35 ನಾವೀಗ ಎಲ್.ಇ.ಡಿ ಮಿನುಗಿಸಲು ಆರ್ಡುಯಿನೊ ಪ್ರೋಗ್ರಾಂ ಬರೆಯೋಣ.
01:41 ನಾನು ನನ್ನ ಐ.ಡಿ.ಇ ಮತ್ತು ಆರ್ಡುಯಿನೊ ಬೋರ್ಡ್ ಅಕ್ಕಪಕ್ಕಕ್ಕೆ ಇಟ್ಟಿದ್ದೇನೆ.
01:47 ಇದು, ಪ್ರೋಗ್ರಾಂನ ಎಕ್ಸಿಕ್ಯೂಶನ್ ಮತ್ತು ಬೋರ್ಡ್ ನಲ್ಲಿ ಔಟ್ಪುಟ್ ನೋಡಲು ನಮಗೆ ಸಹಕರಿಸುತ್ತದೆ.
01:54 ಈ ಎಲ್.ಇ.ಡಿ ಪ್ರೋಗ್ರಾಂಗೆ, ನನಗೆ ಪಿನ್ ಸಂಖ್ಯೆ 13 ಅನ್ನು ಮಿನುಗಿಸಬೇಕು.
02:00 ಇದು ಈ ಎಲ್.ಇ.ಡಿ ಗೆ ಆಂತರಿಕವಾಗಿ ಸಂಪರ್ಕಿಸಲಾಗಿರುವ ಡಿಜಿಟಲ್ ಇನ್ಪುಟ್/ಔಟ್ಪುಟ್ ಪಿನ್ ಆಗಿದೆ.
02:07 ಮಾರ್ಕರ್ ಜೊತೆ ಹೈಲೈಟ್ ಮಾಡಿರುವುದನ್ನು ಗಮನಿಸಿ.
02:10 ನಾವೀಗ ನಮ್ಮ ಕೋಡ್ ಬರೆಯಬೇಕು.
02:13 void setup() ಫಂಕ್ಷನ್, ಮೈಕ್ರೋಕಂಟ್ರೋಲರ್ ಸ್ಥಾಪನೆಗಾಗಿ ಇರುತ್ತದೆ.
02:18 ನಮ್ಮ ವಿಚಾರದಲ್ಲಿ, ಪಿನ್ ಸಂಖ್ಯೆ 13 ನ್ನು ಮೊದಲಿಗೆ ಸ್ಥಾಪಿಸಬೇಕು.
02:24 ಇದನ್ನು ಮಾಡಲು, ನಾವು pinMode ಎಂಬ ಇನ್-ಬಿಲ್ಟ್ ಫಂಕ್ಷನ್ ಬಳಸಲಿದ್ದೇವೆ.
02:31 ಇದು ಎರಡು ಪ್ಯಾರಾಮೀಟರ್ ಗಳನ್ನು ಹೊಂದಿದೆ - pin number comma mode.
02:36 ಹೀಗೆ ಟೈಪ್ ಮಾಡಿ: pinMode open brackets 13 comma output close brackets semicolon.
02:48 ನಾವು ಮೋಡ್ ಅನ್ನು ಔಟ್ಪುಟ್ ಆಗಿ ಏಕೆ ಇಡಬೇಕು?
02:51 ಇದು ಏಕೆಂದರೆ, ಪಿನ್ ಸಂಖ್ಯೆ 13 ಆಂತರಿಕವಾಗಿ ಎಲ್.ಇ.ಡಿ ಗೆ ಸಂಪರ್ಕಿತವಾಗಿದೆ.
02:58 ವೋಲ್ಟೆಜ್ ಅಧಿಕವಾಗಿರುವಾಗ ಇದು ಮಿನುಗುತ್ತದೆ, ಆದರೆ ವೋಲ್ಟೆಜ್ ಶೂನ್ಯವಾಗಿರುವಾಗ ಇದು ಮಿನುಗುವುದಿಲ್ಲ.
03:05 ಎಲ್.ಇ.ಡಿ ಗೆ ವೋಲ್ಟೆಜ್ ಒದಗಿಸಲು ನಾವು ಮೋಡ್ ಅನ್ನು ‘output’ ಎಂದು ಕಾನ್ಫಿಗರ್ ಮಾಡಬೇಕು.
03:12 ನಂತರ ನಾವು void loop() ಫಂಕ್ಷನ್ ಗೆ ಕೋಡ್ ಬರೆಯಲಿದ್ದೇವೆ.
03:17 ಎಲ್.ಇ.ಡಿ ಯನ್ನು ಮಿನುಗಿಸುವ ಮೊದಲು ನಾವು ಒಂದು ಎಲ್.ಇ.ಡಿ ಯನ್ನು ಪ್ರಕಾಶಿಸೋಣ.
03:22 digitalWrite ಎಂಬ ಫಂಕ್ಷನ್ ಇದ್ದು ಇದು ಡಿಜಿಟಲ್ ಪಿನ್ ಗೆ ರೈಟ್ ಮಾಡುತ್ತದೆ.
03:29 ಇದು pin number ಮತ್ತು value ಅಥವಾ state ಎಂಬ ಎರಡು ಪ್ಯಾರಾಮೀಟರ್ ಗಳನ್ನು ಹೊಂದಿದೆ.
03:36 ಈಗಾಗಲೇ ನಮಗೆ ಪಿನ್ ಸಂಖ್ಯೆಯು 13 ಎಂದು ತಿಳಿದಿದೆ. ಮೌಲ್ಯವು ‌ʻHIGHʼ ಅಥವಾ ʻLOWʼ ಆಗಿರಬೇಕು.
03:44 ಹೀಗೆ ಟೈಪ್ ಮಾಡಿ: digitalWrite open brackets 13 comma HIGH close brackets semicolon.
03:55 ನಾವು ಎಲ್.ಇ.ಡಿ ಯನ್ನು ಬೆಳಗಿಸಬೇಕು. ಹೀಗಾಗಿ ವೋಲ್ಟೇಜ್ ʻHIGHʼ ಇರಬೇಕು.
04:00 ಅಷ್ಟೇ. ಕೋಡ್ ತುಂಬಾ ಸರಳವಾಗಿದೆ.
04:04 ಮುಂದಿನ ಹಂತ, ಪ್ರೋಗ್ರಾಂ ಅನ್ನು ಕಂಪೈಲ್ ಮಾಡುವುದು.
04:08 ಪ್ರೋಗ್ರಾಂ ಅನ್ನು ದೃಢೀಕರಿಸಲು ಮೆನು ಬಾರ್ ನಲ್ಲಿ Tick icon ಮೇಲೆ ಕ್ಲಿಕ್ ಮಾಡಿ.
04:14 ಇದು ನಮ್ಮ ಪ್ರೋಗ್ರಾಂ ಅನ್ನು, ಮೈಕ್ರೋಕಂಟ್ರೋಲರ್ ಅರ್ಥೈಸಿಕೊಳ್ಳಬಲ್ಲ ಬೈನರಿ ಫಾರ್ಮ್ಯಾಟ್ ಗೆ ಕಂಪೈಲ್ ಮಾಡುತ್ತದೆ.
04:22 IDE ಯ ಕೆಳಗಡೆ ನೀವು ಕಂಪೈಲೇಶನ್ ಸ್ಟೇಟಸ್ ಅನ್ನು ನೋಡಬಹುದು.
04:27 ನಂತರ ನಾವು ಪ್ರೋಗ್ರಾಂ ಅನ್ನು ಮೈಕ್ರೋಕಂಟ್ರೋಲರ್ ಗೆ ಅಪ್ಲೋಡ್ ಮಾಡಬೇಕು.
04:32 ಅಪ್ಲೋಡ್ ಮಾಡಲು ಮೆನು ಬಾರ್ ನಲ್ಲಿ ರೈಟ್ ಆರೋ ಬಟನ್ ಮೇಲೆ ಕ್ಲಿಕ್ ಮಾಡಿ.

ಬದಲಾಗಿ ನೀವು Sketch ಮೆನು ಆರಿಸಿ ಅಪ್ಲೋಡ್ ಮಾಡಬಹುದು.

04:48 TX RX ಸ್ವಲ್ಪ ಕಾಲ ಮಿನುಗುವುದನ್ನು ನೀವು ನೋಡಬಹುದು. ಟ್ರಾನ್ಸ್ಮಿಶನ್ ON ಆಗಿದೆ ಎಂಬುದನ್ನು ಇದು ಸೂಚಿಸುತ್ತದೆ.
04:57 ಎಲ್.ಇ.ಡಿ ಬೆಳಗುತ್ತಿರುವುದನ್ನು ನೀವು ನೋಡಬಹುದು.
05:01 ಎಲ್.ಇ.ಡಿ ಯನ್ನು ಟರ್ನ್ ಆಫ್ ಮಾಡುವುದು ಹೇಗೆ?

ಎರಡನೇ ಪ್ಯಾರಾಮೀಟರ್ ಮೌಲ್ಯವು ʻಲೋʼ ಇರುವಂತೆ ನಾವು ಈ ಪ್ರೋಗ್ರಾಂ ಅನ್ನು ಮಾರ್ಪಡಿಸಬೇಕು.

05:11 ನಾವೀಗ ಈ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡೋಣ.
05:16 ಎಲ್.ಇ.ಡಿ ಆಫ್ ಆಗಿರುವುದನ್ನು ನೀವೀಗ ನೋಡಬಹುದು.
05:20 ಎಲ್.ಇ.ಡಿ ಯನ್ನು ಆನ್ ಮತ್ತು ಆಫ್ ಮಾಡಲು ನಮಗೀಗ ತಿಳಿದಿದೆ.
05:25 ನಂತರ, ಎಲ್.ಇ.ಡಿ ಮಿನುಗಲು ನಾವು ಪ್ರೋಗ್ರಾಂ ಅನ್ನು ಮಾರ್ಪಡಿಸಲಿದ್ದೇವೆ.
05:31 ಅಂದರೆ ಒಂದು ಸೆಕೆಂಡಿನ ಅಂತರದಲ್ಲಿ ಆನ್ ಮತ್ತು ಆಫ್ ಆಗಲು.
05:36 ಇಲ್ಲಿ ತೋರಿಸಿರುವಂತೆ ನಾವು ಪ್ರೋಗ್ರಾಂ ಅನ್ನು ಬದಲಿಸಲಿದ್ದೇವೆ. delay() ಎನ್ನುವುದು ಬಿಲ್ಟ್-ಇನ್ ಫಂಕ್ಷನ್ ಆಗಿದ್ದು, ನಿರ್ದಿಷ್ಟ ಸಮಯಕ್ಕೆ ಪ್ರೋಗ್ರಾಂ ಅನ್ನು ಪಾಜ್ (pause) ಮಾಡುತ್ತದೆ.
05:46 ನಾನು ಹೀಗೆ ಟೈಪ್ ಮಾಡುತ್ತೇನೆ: delay open brackets 500 close brackets semicolon.

ಇಲ್ಲಿ 500 ಎಂದರೆ 500 ಮಿಲಿಸೆಕೆಂಡ್ ಗಳು, ಅಂದರೆ ಅರ್ಧ ಸೆಕೆಂಡಿನ ವಿಳಂಬ.

06:01 ನಂತರ digitalWrite open brackets 13 comma LOW close brackets semicolon ಎಂದು ಟೈಪ್ ಮಾಡಿ.
06:12 ಇದು ಡಿಜಿಟಲ್ ಪಿನ್ 13 ಅನ್ನು ಆಫ್ ಮೋಡ್ ಗೆ ಕೊಂಡೊಯ್ಯುತ್ತದೆ.
06:17 ಇದನ್ನು ನಾವು ಎಷ್ಟು ಹೊತ್ತು ಟರ್ನ್ ಆಫ್ ಮಾಡಬೇಕು?

delay open brackets 500 close brackets semicolon ಎಂದು ಟೈಪ್ ಮಾಡಿ.

06:28 ಇನ್ನೊಮ್ಮೆ ನಾವು ಇದನ್ನು 500 ಮಿಲಿಸೆಕೆಂಡುಗಳ ಕಾಲ ಆಫ್ ಮಾಡಬೇಕು.
06:34 ನಾನು void loop() ಅನ್ನು ಹಂತ ಹಂತವಾಗಿ ವಿವರಿಸುತ್ತೇನೆ.
06:40 void loop() ಎನ್ನುವುದು infinite ಲೂಪ್ ಆಗಿದ್ದು, ಇದು ನಿರಂತರವಾಗಿ ಎಕ್ಸಿಕ್ಯೂಟ್ ಮಾಡುತ್ತದೆ.
06:45 ಎಲ್.ಇ.ಡಿ ಗೆ ಸಂಪರ್ಕಿಸಲಾಗಿರುವ ಪಿನ್ ಸಂಖ್ಯೆ 13, 500 ಮಿಲಿಸೆಕೆಂಡುಗಳ ಕಾಲ ʻಹೈʼ ಸ್ಥಿತಿಯಲ್ಲಿರುತ್ತದೆ. ನಂತರ 500 ಮಿಲಿಸೆಕೆಂಡುಗಳ ಕಾಲ ʻಲೋʼ ಸ್ಥಿತಿಯಲ್ಲಿರುತ್ತದೆ.
06:57 ಈ ಪ್ರೋಗ್ರಾಂ ಅನ್ನು ಲೂಪ್ ನಲ್ಲಿ ನಿರಂತರವಾಗಿ ಎಕ್ಸಿಕ್ಯೂಟ್ ಮಾಡಲಾಗುತ್ತದೆ.
07:02 ಈ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡೋಣ.
07:05 ನಮ್ಮ ಎಲ್.ಇ.ಡಿ ಮಿನುಗುವುದನ್ನು ನಾವು ನೋಡಬಹುದು.
07:10 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ನಾವೀಗ ಸಂಕ್ಷೇಪಿಸೋಣ.
07:16 ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಪ್ರೋಗ್ರಾಂ ಬರೆಯಲು,
07:21 ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಲು ಮತ್ತು ಎಲ್.ಇ.ಡಿ ಮಿನುಗಿಸಲು ಕಲಿತೆವು.
07:27 ಈ ಅಸೈನ್ಮೆಂಟ್ ಪೂರ್ಣಗೊಳಿಸಿ. ಮೇಲಿನ Blink LED ಪ್ರೋಗ್ರಾಂನಲ್ಲಿ ವಿಳಂಬದ ಟೈಮಿಂಗ್ ಅನ್ನು 1500 ಕ್ಕೆ ಬದಲಾಯಿಸಿ.
07:37 ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಿ ಮತ್ತು ಎಲ್.ಇ.ಡಿ ಮಿನುಗುವುದನ್ನು ಗಮನಿಸಿ.
07:45 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
7:53 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆ ತೇರ್ಗಡೆಯಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

08:06 ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ? ದಯವಿಟ್ಟು ಈ ಸೈಟ್ ಗೆ ಭೇಟಿ ನೀಡಿ.
08:13 ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ.

08:24 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ.

08.35 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, Sandhya.np14