Arduino/C2/Arduino-with-Tricolor-LED-and-Push-button/Kannada

From Script | Spoken-Tutorial
Revision as of 16:45, 29 June 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಟ್ರೈಕಲರ್ ಎಲ್.ಇ.ಡಿ ಮತ್ತು ಪುಶ್ ಬಟನ್ ಜೊತೆ ಆರ್ಡುಯಿನೊವನ್ನು ಇಂಟರ್ಫೇಸಿಂಗ್ ಮಾಡುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನಾವು: ಟ್ರೈಕಲರ್ ಎಲ್.ಇ.ಡಿ ಯನ್ನು ಆರ್ಡುಯಿನೊ ಬೋರ್ಡ್ ಗೆ ಸಂಪರ್ಕಿಸಲು,
00:17 ಟ್ರೈಕಲರ್ ಎಲ್.ಇ.ಡಿ ಮಿನುಗಿಸಲು ಪ್ರೋಗ್ರಾಂ ಬರೆಯಲು ಮತ್ತು ಮಿನುಗುವುದನ್ನು ನಿಯಂತ್ರಿಸಲು ಪುಶ್ ಬಟನ್ ಬಳಸುವುದನ್ನು ಕಲಿಯಲಿದ್ದೇವೆ.
00:27 ನಾನಿಲ್ಲಿ ಆರ್ಡುಯಿನೊ ಯು.ಎನ್.ಒ ಬೋರ್ಡ್,
00:31 ಉಬಂಟು ಲೀನಕ್ಸ್ 14.04 ಅಪರೇಟಿಂಗ್ ಸಿಸ್ಟಂ ಮತ್ತು Arduino IDE ಬಳಸುತ್ತಿದ್ದೇನೆ.
00:39 ಈ ಟ್ಯುಟೋರಿಯಲ್ ಅನುಸರಿಸಲು ನೀವು ಎಲೆಕ್ಟ್ರಾನಿಕ್ಸ್ ಮತ್ತು C ಅಥವಾ C++ ನ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
00:52 ನಮಗೆ ಬಾಹ್ಯ ಉಪಕರಣಗಳಾದ ಟ್ರೈಕಲರ್ ಎಲ್.ಇ.ಡಿ, ರೆಸಿಸ್ಟರ್, ಬ್ರೆಡ್- ಬೋರ್ಡ್, ಜಂಪರ್ ವೈರ್ ಗಳು ಮತ್ತು
01:01 ಪುಶ್ ಬಟನ್ ಮುಂತಾದ ಕೆಲವು ಬಾಹ್ಯ ಉಪಕರಣಗಳು ಬೇಕು.
01:08 ಈ ಪ್ರಯೋಗಕ್ಕೆ ಬೇಕಾಗುವ ಬಾಹ್ಯ ಉಪಕರಣಗಳ ಚಿತ್ರಗಳನ್ನು ನಾವು ನೋಡೋಣ.
01:16 ಇದನ್ನು ಕಾಮನ್ ಕ್ಯಾಥೋಡ್ ಟ್ರೈಕಲರ್ ಎಲ್.ಇ.ಡಿ ಎಂದು ಸಹ ಕರೆಯಲಾಗುತ್ತದೆ.
01:22 ಇದರಲ್ಲಿ ನಾಲ್ಕು ಪಿನ್ ಗಳಿವೆ. ಕ್ಯಾಥೋಡ್ ಅತ್ಯಂತ ಉದ್ದದ ಪಿನ್ ಆಗಿದೆ.
01:27 ಉಳಿದ ಮೂರು ಪಿನ್ ಗಳು ಕೆಂಪು, ಹಸಿರು ಮತ್ತು ನೀಲಿ ಬಣ್ಣದ ಎಲ್.ಇ.ಡಿ ಗಳಿಗಾಗಿ ಇವೆ.
01:34 ಕ್ಯಾಥೋಡ್ ಪಿನ್ ಇಲ್ಲಿ ಗ್ರೌಂಡ್ ಪಿನ್ ಆಗಿದ್ದು, ಕೆಂಪು, ಹಸಿರು ಮತ್ತು ನೀಲಿ ಎಲ್.ಇ.ಡಿ ಗಳಿಗೆ ಒಂದೇ ಆಗಿದೆ.
01:42 ರೆಸಿಸ್ಟರ್ ಎನ್ನುವುದು ಎಲೆಕ್ಟ್ರಾನಿಕ್ ಘಟಕ ಆಗಿದ್ದು ಇದು ಎಲೆಕ್ಟ್ರಾನಿಕ್ ಸರ್ಕಿಟ್ ನಲ್ಲಿ ವಿದ್ಯುತ್ ಪ್ರವಾಹದ ಹರಿವನ್ನು ಮಿತಿಗೊಳಿಸುತ್ತದೆ.
01:50 ರೆಸಿಸ್ಟರ್ ಅನ್ನು ಸಕ್ರಿಯ ಉಪಕರಣಕ್ಕೆ ನಿರ್ದಿಷ್ಟ ಮಟ್ಟದ ವೋಲ್ಟೆಜ್ ಒದಗಿಸಲು ಸಹ ಬಳಸಲಾಗುತ್ತದೆ.
01:57 ಇದು ಬ್ರೆಡ್-ಬೋರ್ಡ್ ಆಗಿದ್ದು ಇದನ್ನು ಸಾಮಾನ್ಯವಾಗಿ ಎಲೆಕ್ಟ್ರಾನಿಕ್ ಸರ್ಕಿಟ್ ಗಳನ್ನು ನಿರ್ಮಿಸಲು ಬಳಸಲಾಗುತ್ತದೆ.
02:03 ಇದು ಅನೇಕ ರಂಧ್ರಗಳನ್ನು ಹೊಂದಿದೆ. ಎಲೆಕ್ಟ್ರಾನಿಕ್ ಘಟಕಗಳನ್ನು ಈ ರಂಧ್ರಗಳಿಗೆ ತುರುಕಿಸಲಾಗುತ್ತದೆ ಮತ್ತು ತಂತಿಗಳ ಮೂಲಕ ಸಂಪರ್ಕಿಸಲಾಗುತ್ತದೆ.
02:12 ಜಂಪರ್ ವೈರ್ ಗಳು ಕಿರಿದಾದ ಎಲೆಕ್ಟ್ರಿಕಲ್ ತಂತಿಗಳಾಗಿದ್ದು, ಪ್ರತಿ ತುದಿಯಲ್ಲಿ ಗಟ್ಟಿಯಾದ ಮೊನೆಯನ್ನು ಹೊಂದಿರುತ್ತವೆ.
02:19 ಬ್ರೆಡ್ ಬೋರ್ಡ್ ನಲ್ಲಿ ಘಟಕಗಳನ್ನು ಪರಸ್ಪರ ಸಂಪರ್ಕಿಸಲು ಜಂಪರ್ ವೈರ್ ಗಳನ್ನು ಬಳಸಲಾಗುತ್ತದೆ.
02:25 ಕನೆಕ್ಷನ್ ಸರ್ಕಿಟ್ ವಿವರಗಳನ್ನು ಈಗ ನೋಡೋಣ.
02:30 ಈ ಸರ್ಕಿಟ್ ತುಂಬಾ ಸರಳವಾದುದು. ಈ ರೀತಿ ಕಪ್ಪು ತಂತಿಯನ್ನು ಬಳಸಿ ಆರ್ಡುಯಿನೊ ಬೋರ್ಡ್ ನಲ್ಲಿ ಕ್ಯಾಥೋಡ್ ಪಿನ್ ಅನ್ನು ಗ್ರೌಂಡ್ ಪಿನ್ ಗೆ ಸಂಪರ್ಕಿಸಲಾಗಿದೆ.
02:41 ಕೆಂಪು, ಹಸಿರು ಮತ್ತು ನೀಲಿ ಪಿನ್ ಗಳನ್ನು ರೆಸಿಸ್ಟರ್ ಗಳನ್ನು ಬಳಸಿ, 12, 11 ಮತ್ತು 10 ಸಂಖ್ಯೆಯ ಪಿನ್ ಗಳಿಗೆ ಸಂಪರ್ಕಿಸಲಾಗಿದೆ.
02:51 ನಮಗೆ ಇಲ್ಲಿ ರೆಸಿಸ್ಟರ್ ಗಳು ಯಾಕೆ ಬೇಕು? ಏಕೆಂದರೆ, ಎಲ್.ಇ.ಡಿ ಗೆ ಹರಿಯುವ ವೋಲ್ಟೆಜ್ ಅನ್ನು ನಿಯಂತ್ರಿಸಲು.
02:58 ಪ್ರತಿ ಬಣ್ಣಕ್ಕೆ ನಮಗೆ ವಿದ್ಯುತ್ ಪ್ರವಾಹ ಮಿತಿಗೊಳಿಸುವ ಮೂರು ರೆಸಿಸ್ಟರ್ ಗಳು ಬೇಕು. ಇಲ್ಲಿ ನಾನು 100 ohm ರೆಸಿಸ್ಟರ್ ಗಳನ್ನು ಬಳಸುತ್ತಿದ್ದೇನೆ.
03:08 ನಾನೀಗ ಇದರ ಲೈವ್ ಡೆಮೊ ತೋರಿಸುತ್ತೇನೆ.
03:11 ಇದು ಮಿನಿ ಬ್ರೆಡ್-ಬೋರ್ಡ್ ಆಗಿದ್ದು ಇಲ್ಲಿ ನಾನು ಟ್ರೈಕಲರ್ ಎಲ್.ಇ.ಡಿ ಮತ್ತು ರೆಸಿಸ್ಟರ್ ಗಳನ್ನು ಸಂಪರ್ಕಿಸಿದ್ದೇನೆ.
03:18 ಸರ್ಕಿಟ್ ಡಯಾಗ್ರಾಮ್ ನಲ್ಲಿ ನಾವು ನೋಡಿದ್ದು ಇದನ್ನೇ.
03:23 ಈ ಸರ್ಕಿಟ್ ಕೆಲಸ ಮಾಡುವಂತಾಗಲು ನಾವು ಒಂದು ಪ್ರೋಗ್ರಾಂ ಬರೆಯಬೇಕು.
03:28 ನಾವೀಗ Arduino IDE ತೆರೆಯೋಣ.
03:32 ಆರ್ಡುಯಿನೊ ಪ್ರೋಗ್ರಾಂ ಎರಡು ಮೂಲ ಫಂಕ್ಷನ್ ಗಳೊಂದಿಗೆ ಬರುತ್ತದೆ. ಅವೆಂದರೆ – void setup() ಮತ್ತು void loop().
03:41 void setup() ಫಂಕ್ಷನ್, ಮೈಕ್ರೋಕಂಟ್ರೋಲರ್ ಅನ್ನು ಸ್ಥಾಪಿಸುವುದಕ್ಕಾಗಿ ಇದೆ.
03:46 ನಮ್ಮ ಪ್ರಯೋಗದಲ್ಲಿ ಬಳಸುವ ಪಿನ್ ಗಳನ್ನು ನಾವಿಲ್ಲಿ ಸ್ಥಾಪಿಸಬೇಕು.
03:52 ನಾವೀಗ void setup() ಫಂಕ್ಷನ್ ಗೆ ಕೋಡ್ ಬರೆಯಲಿದ್ದೇವೆ.
03:57 ಸರ್ಕಿಟ್ ಡಯಾಗ್ರಾಂನಲ್ಲಿ, ಪಿನ್ ಸಂಖ್ಯೆ 10, ನೀಲಿ ಎಲ್.ಇ.ಡಿ ಗೆ ಸಂಪರ್ಕಿಸಿರುವುದನ್ನು ಗಮನಿಸಿ.
04:05 Arduino IDE ಯಲ್ಲಿ ಹೀಗೆ ಟೈಪ್ ಮಾಡಿ: pinMode open bracket 10 comma OUTPUT close bracket Semicolon.
04:16 ಇದೇ ರೀತಿ, ಇಲ್ಲಿ ತೋರಿಸಿರುವಂತೆ ಇತರ ಪಿನ್ ಗಳಿಗೆ ಕೋಡ್ ಅನ್ನು ಟೈಪ್ ಮಾಡಿ:
04:21 ಪಿನ್ ಸಂಖ್ಯೆ 11 ಮತ್ತು 12 ಅನುಕ್ರಮವಾಗಿ ಹಸಿರು ಮತ್ತು ಕೆಂಪು ಎಲ್.ಇ.ಡಿ ಯನ್ನು ಪ್ರತಿನಿಧಿಸುತ್ತವೆ.
04:32 ನಂತರ ನಾವು void loop() ಫಂಕ್ಷನ್ ಗೆ ಕೋಡ್ ಬರೆಯಲಿದ್ದೇವೆ.

void loop() ಫಂಕ್ಷನ್, ಒಂದು ಅನಿಯತ ‘while’ ಲೂಪ್ ಆಗಿದೆ.

04:42 ಈ ಕೋಡ್ ಮತ್ತು ನಾವು Blink LED ಪ್ರೋಗ್ರಾಂ ಗೆ ಬರೆದ ಕೋಡ್ ಒಂದೇ ಆಗಿದೆ. ಆದರೆ ನಾವು ಎಲ್ಲಾ ಮೂರು ಎಲ್.ಇ.ಡಿ ಗಳಿಗೆ ಇದೇ ಕೋಡ್ ನ ಸಾಲುಗಳನ್ನು ಬರೆಯಬೇಕಾಗುತ್ತದೆ.
04:54 ಈ ಕೋಡ್ ನ ನಾಲ್ಕು ಸಾಲುಗಳು, ನೀಲಿ ಎಲ್.ಇ.ಡಿ ಯನ್ನು 500 ಮಿಲಿಸೆಕೆಂಡುಗಳ ವಿಳಂಬದೊಂದಿಗೆ ಮಿನುಗಿಸುತ್ತದೆ.
05:02 ಇದೇ ಕೋಡ್ ಅನ್ನು ಇತರ ಪಿನ್ ಗಳಿಗೂ ಕಾಪಿ ಮತ್ತು ಪೇಸ್ಟ್ ಮಾಡಿ.
05:07 ಪಿನ್ ಸಂಖ್ಯೆಯನ್ನು ಹಸಿರು ಮತ್ತು ಕೆಂಪು ಎಲ್.ಇ.ಡಿ ಗೆ ಕ್ರಮವಾಗಿ 11 ಮತ್ತು 12 ಆಗಿ ಬದಲಾಯಿಸಿ.
05:16 ಈ ಪ್ರೋಗ್ರಾಂ ಅನ್ನು ಸೇವ್ ಮಾಡೋಣ.
05:19 File ಮತ್ತು Save ಮೇಲೆ ಕ್ಲಿಕ್ ಮಾಡಿ.

ಫೈಲ್ ನೇಮ್ ಅನ್ನು tricolor hyphen LED ಎಂದು ನಮೂದಿಸಿ.

05:28 ಈಗ, ಪಿನ್ ಸಂಖ್ಯೆ 10, 11 ಮತ್ತು 12ಕ್ಕೆ ಹೈ ಮತ್ತು ಲೋ ಪರ್ಯಾಯ ಸಂಕೇತಗಳನ್ನು ಕಳುಹಿಸಲು ಮೈಕ್ರೋಕಂಟ್ರೋಲರ್ ಅನ್ನು ಪ್ರೋಗ್ರಾಂ ಮಾಡಲಾಗಿದೆ.
05:40 ಮುಂದಿನ ಹಂತದಲ್ಲಿ ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಲಾಗುತ್ತದೆ.
05:44 Sketch ಮೆನುವಿನಲ್ಲಿ, Compile ಮೇಲೆ ಕ್ಲಿಕ್ ಮಾಡಿ.
05:49 ನಾವು ಕಂಪೈಲೇಶನ್ ಸ್ಟೇಟಸ್ ಅನ್ನು IDE ಯ ಕೆಳಭಾಗದಲ್ಲಿ ನೋಡಬಹುದು.
05:56 ಮೈಕ್ರೋಕಂಟ್ರೋಲರ್ ಗೆ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡಲು, Sketch ಮೆನು ಮತ್ತು Upload ಮೇಲೆ ಕ್ಲಿಕ್ ಮಾಡಿ.
06:04 ಕೆಂಪು, ನೀಲಿ ಮತ್ತು ಹಸಿರು ಎಲ್.ಇ.ಡಿ ಗಳು ಮಿನುಗುವುದನ್ನು ನಾವು ನೋಡಬಹುದು.
06:10 ಇದು ನಿರಂತರವಾಗಿ ಮಿನುಗುತ್ತದೆ.

ಏಕೆಂದರೆ, ನಮ್ಮ ಪ್ರೋಗ್ರಾಂ, void loop() ಫಂಕ್ಷನ್ ಅನ್ನು ಅನಿಯತ ಲೂಪ್ ನಲ್ಲಿ ಎಕ್ಸಿಕ್ಯೂಟ್ ಮಾಡುತ್ತದೆ.

06:20 ನಂತರ, ಮಿನುಗುವುದನ್ನು ನಿಯಂತ್ರಿಸಲು, ಅದೇ ಸರ್ಕಿಟ್ ಗೆ ಪುಶ್ ಬಟನ್ ಅನ್ನು ಹೇಗೆ ಇಂಟರ್ಫೇಸ್ ಮಾಡುವುದು ಎಂದು ನೋಡೋಣ.
06:28 ಪುಶ್ ಬಟನ್ ಒಂದು ಘಟಕವಾಗಿದ್ದು, ಇದನ್ನು ನೀವು ಒತ್ತಿದಾಗ ಇದು ಸರ್ಕಿಟ್ ನಲ್ಲಿ ಎರಡು ಬಿಂದುಗಳನ್ನು ಸಂಪರ್ಕಿಸುತ್ತದೆ.
06:35 ಒತ್ತಬಹುದಾದ ಗುಂಡಿ (button)ಯನ್ನು ನೀವು ಮೇಲ್ಗಡೆ ನೋಡಬಹುದು.

ನಮ್ಮ ಪ್ರಯೋಗದಲ್ಲಿ, ನೀವು ಗುಂಡಿಯನ್ನು ಒತ್ತಿದಾಗ ಇದು ಟ್ರೈಕಲರ್ ಎಲ್.ಇ.ಡಿ ಯನ್ನು ಆನ್ ಮಾಡುತ್ತದೆ.

06:48 ಪುಶ್ ಬಟನ್ ಜೊತೆಗಿನ ಪ್ರಯೋಗಕ್ಕೂ ನಾವು ಇದೇ ಸರ್ಕಿಟ್ ಬಳಸಲಿದ್ದೇವೆ.
06:54 ಪುಶ್ ಬಟನ್ ಅನ್ನು ಮೊಮೆಂಟರಿ ಸ್ವಿಚ್ ಎಂದು ಸಹ ಕರೆಯಲಾಗುತ್ತದೆ. ನೀವು ಇದನ್ನು ಒತ್ತಿದ ತಕ್ಷಣ ಟ್ರೈಕಲರ್ ಎಲ್.ಇ.ಡಿ ಪ್ರಕಾಶಿಸುತ್ತದೆ.
07:03 ಸ್ವಿಚ್ ಅನ್ನು ನೀವು ರಿಲೀಸ್ ಮಾಡಿದಾಗ, ಟ್ರೈಕಲರ್ ಎಲ್.ಇ.ಡಿ ಕೆಲಸ ಮಾಡುವುದಿಲ್ಲ. ನಾವು ಪುಶ್ ಬಟನ್ ಅನ್ನು ಬೋರ್ಡ್ ಗೆ ಸಂಪರ್ಕಿಸಿದ್ದೇವೆ.
07:11 ಪುಶ್ ಬಟನ್ ನ ಒಂದು ಕಾಲನ್ನು 5 ವೋಲ್ಟ್ಸ್ ಗೆ ಸಂಪರ್ಕಿಸಲಾಗಿದೆ.

ಇದನ್ನು ಇಲ್ಲಿ ಕಂದು ಬಣ್ಣದ ತಂತಿಯಲ್ಲಿ ತೋರಿಸಲಾಗಿದೆ.

07:20 ಇನ್ನೊಂದು ಕಾಲನ್ನು ಪಿನ್ ಸಂಖ್ಯೆ 4 ಕ್ಕೆ ಸಂಪರ್ಕಿಸಲಾಗಿದ್ದು ಇದನ್ನು ಇಲ್ಲಿ ಹಳದಿ ಬಣ್ಣದ ತಂತಿಯಿಂದ ತೋರಿಸಲಾಗಿದೆ.
07:27 ಇಲ್ಲಿ ನೀವು ಪುಶ್ ಬಟನ್ ಗೆ ಸಂಪರ್ಕಿಸಿರುವ ರೆಸಿಸ್ಟರ್ ಅನ್ನು ನೋಡಬಹುದು.
07:32 ನಮಗೆ ಇಲ್ಲಿ ರೆಸಿಸ್ಟರ್ ಏಕೆ ಬೇಕು?

ಪಿನ್ 4 ಅನ್ನು ಇನ್ಪುಟ್ ಆಗಿ ಕಾನ್ಫಿಗರ್ ಮಾಡಲಾಗಿದೆ. ಅಂದರೆ, ಇದು ಒಂದಷ್ಟು ಇನ್ಪುಟ್ ವೋಲ್ಟೆಜ್ ನಿರೀಕ್ಷಿಸುತ್ತದೆ.

07:42 ಪುಶ್ ಬಟನ್ ಒತ್ತಿದಾಗ ಇದು ಪಿನ್ 4 ಅನ್ನು 5 ವೋಲ್ಟ್ಸ್ ಗೆ ಸಂಪರ್ಕಿಸುತ್ತದೆ ಮತ್ತು ನಾವು ʻಹೈʼ ಅನ್ನು ನೋಡಬಹುದು.
07:50 ಈ ಹಂತದಲ್ಲಿ, ವಿದ್ಯುತ್ ಪ್ರವಾಹವು ಗ್ರೌಂಡ್ ಪಿನ್ ಗೆ ಹೋಗದಂತೆ ತಡೆಯಲು ರೆಸಿಸ್ಟರ್ ಸಹಕರಿಸುತ್ತದೆ.
07:58 ಪುಶ್ ಬಟನ್ ಒತ್ತದೆ ಇದ್ದರೂ, ನಾವು ಒಂದಷ್ಟು ವೋಲ್ಟೆಜ್ ಹರಿಸಬೇಕಾಗುತ್ತದೆ.
08:05 ಗ್ರೌಂಡ್ ಪಿನ್ ಮೂಲಕ ಸಂಪರ್ಕಿಸಲಾದ ರೆಸಿಸ್ಟರ್, ಜೀರೊ ವೋಲ್ಟ್ ಒದಗಿಸುತ್ತದೆ.
08:12 ಇದು ಮಿನಿಕಂಟ್ರೋಲರ್ ಅನ್ನು ಸಕ್ರಿಯಗೊಳಿಸುತ್ತದೆ. ಏಕೆಂದರೆ ಇದು ಒಂದಷ್ಟು ಇನ್ಪುಟ್ ಗಳಿಸುತ್ತದೆ.
08:18 ಈ ಸಂಪರ್ಕಕ್ಕಾಗಿ ನಾವು ನಮ್ಮ ಲೈವ್ ವೀಡಿಯೊ ನೋಡೋಣ.
08:22 ಪುಶ್ ಬಟನ್ ಈ ರೀತಿ ಕಾಣುತ್ತದೆ.
08:25 ನಾವು ಸರ್ಕಿಟ್ ಡಯಾಗ್ರಾಂ ನಲ್ಲಿ ವಿವರಿಸಿದಂತೆಯೇ ನೀವು ಇತರ ಸಂಪರ್ಕಗಳನ್ನು ನೋಡಬಹುದು.
08:32 ಸರ್ಕಿಟ್ ಕೆಲಸ ಮಾಡುವುದಕ್ಕಾಗಿ ನಾವೀಗ ನಮ್ಮ ಪ್ರೋಗ್ರಾಂ ಅನ್ನು ಮಾರ್ಪಡಿಸೋಣ.
08:37 Arduino IDE ಗೆ ಮರಳಿ. ಇದು ನಮ್ಮ ಹಿಂದಿನ ಪ್ರೋಗ್ರಾಂ ಆಗಿದೆ.
08:44 ಇದು ಪಿನ್ ಸಂಖ್ಯೆ 4 ಕ್ಕೆ ಹೊಸ ಸೆಟಪ್ ಅನ್ನು ಸೇರಿಸಲಿದೆ.
08:47 ನಾವು ಮೋಡ್ ಅನ್ನು INPUT ಆಗಿ ಏಕೆ ನೀಡಬೇಕು?

ಏಕೆಂದರೆ, ಪುಶ್ ಬಟನ್ ಒತ್ತಿದಾಗ ಸರ್ಕಿಟ್ ಪೂರ್ಣಗೊಳ್ಳುತ್ತದೆ ಮತ್ತು ಪಿನ್ ಸಂಖ್ಯೆ 4 ಇನ್ಪುಟ್ ಪಡೆಯುತ್ತದೆ.

09:02 ಸ್ವಿಚ್ ಅನ್ನು ಒತ್ತಲಾಗಿದೆಯೇ ಅಥವಾ ಇಲ್ಲವೇ ಎಂದು ನೋಡಲು ನಾವು ಒಂದು conditional ಸ್ಟೇಟ್ಮೆಂಟ್ ಬರೆಯಬೇಕು.
09:09 void loop() ಫಂಕ್ಷನ್ ನಲ್ಲಿ, ನಾವು 'if' ಸ್ಟೇಟ್ ಮೆಂಟ್ ಬರೆಯುತ್ತೇವೆ.
09:15 ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಟೈಪ್ ಮಾಡಿ. ಇದು ಏನೆಂದು ನಾನು ವಿವರಿಸುತ್ತೇನೆ.
09:22 ಒಂದುವೇಳೆ ಪಿನ್ ಸಂಖ್ಯೆ 4 ಇನ್ಪುಟ್ ಪಡೆದರೆ, ಸುರುಳಿಯಾಕಾರದ ಆವರಣಗಳೊಳಗೆ ನಿರೂಪಿಸಿದ ಕೋಡ್ ಅನ್ನು ಇದು ಕಾರ್ಯಗತಗೊಳಿಸುತ್ತದೆ.
09:31 ಔಟ್ಪುಟ್ ಅನ್ನು ನಾವು ತ್ವರಿತವಾಗಿ ನೋಡುವಂತಾಗಲು ನಾನು ಡಿಲೇಯನ್ನು 100 ಮಿಲಿಸೆಕೆಂಡುಗಳಿಗೆ ಇಳಿಸುತ್ತೇನೆ.
09:39 ಕೋಡಿಂಗ್ ಅನ್ನು ಈಗ ಮಾಡಲಾಗಿದೆ.
09:42 ನಮ್ಮ ಪ್ರೋಗ್ರಾಂ ಅನ್ನು ನಾವು ಕಂಪೈಲ್ ಮತ್ತು ಅಪ್ಲೋಡ್ ಮಾಡೋಣ.
09:47 ನಂತರ ನಾವು ಪುಶ್ ಬಟನ್ ಒತ್ತಿ ಅದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡಲಿದ್ದೇವೆ.
09:53 ಟ್ರೈಕಲರ್ ಎಲ್.ಇ.ಡಿ ON ಆಗಿರುವುದನ್ನು ನಾವು ನೋಡಬಹುದು.
09:58 ಇನ್ನೊಮ್ಮೆ ಇದನ್ನು ಒತ್ತಿ. ಇದು ಕೆಲಸ ಮಾಡುತ್ತದೆ.
10:02 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ನಾವೀಗ ಸಂಕ್ಷೇಪಿಸೋಣ.
10:07 ಈ ಟ್ಯುಟೋರಿಯಲ್ ನಲ್ಲಿ ನಾವು: ಟ್ರೈಕಲರ್ ಎಲ್.ಇ.ಡಿ ಯನ್ನು ಆರ್ಡುಯಿನೊ ಬೋರ್ಡ್ ಗೆ ಸಂಪರ್ಕಿಸಲು,
10:13 ಟ್ರೈಕಲರ್ ಎಲ್.ಇ.ಡಿ ಮಿನುಗಿಸಲು ಪ್ರೋಗ್ರಾಂ ಬರೆಯಲು ಮತ್ತು

ಮಿನುಗುವುದನ್ನು ನಿಯಂತ್ರಿಸಲು ಪುಶ್ ಬಟನ್ ಬಳಸಲು ಕಲಿತೆವು.

10:20 ಈ ಕೆಳಗಿನ ಅಸೈನ್ಮೆಂಟ್ ಪೂರ್ಣಗೊಳಿಸಿ.

ಇದೇ ಪ್ರೋಗ್ರಾಂ ಅನ್ನು ವಿರುದ್ಧ ರೀತಿಯಲ್ಲಿ ಮಾಡಿ.

10:28 ಬಟನ್ ಒತ್ತಿದಾಗ ಇನ್ಪುಟ್ ಅನ್ನು ʻಲೋʼ ಆಗಿ ಬರುವಂತೆ ಮಾಡಿ. ಪ್ರೋಗ್ರಾಂ ಅನ್ನು ಕಂಪೈಲ್ ಮತ್ತು ಅಪ್ಲೋಡ್ ಮಾಡಿ.
10:35 ಟ್ರೈಕಲರ್ ಎಲ್.ಇ.ಡಿ ಮಿನುಗುವುದನ್ನು ಗಮನಿಸಿ.
10:39 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
10:46 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

10:55 ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ.
10:59 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ.

11.10 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, Sandhya.np14