Difference between revisions of "Arduino/C2/Arduino-components-and-IDE/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:01 || ಆರ್ಡುಯಿನೊ ಕಾಂಪೋನೆಂಟ್ ಗಳು ಮತ್ತು ಐ.ಡಿ.ಇ ಕುರಿತ...")
 
Line 96: Line 96:
 
|-
 
|-
 
||02:55
 
||02:55
|| ಈ reset ಬಟನ್ ನೀವು ಒತ್ತಿದಾಗ, ಪ್ರೋಗ್ರಾಂ ನಿಲ್ಲುತ್ತದೆ ಮತ್ತು ರೀಸ್ಟಾರ್ಟ್ ಆಗುತ್ತದೆ.
+
|| ಈ '''reset''' ಬಟನ್ ನೀವು ಒತ್ತಿದಾಗ, ಪ್ರೋಗ್ರಾಂ ನಿಲ್ಲುತ್ತದೆ ಮತ್ತು ರೀಸ್ಟಾರ್ಟ್ ಆಗುತ್ತದೆ.
  
 
|-
 
|-

Revision as of 11:36, 6 May 2020

Time Narration


00:01 ಆರ್ಡುಯಿನೊ ಕಾಂಪೋನೆಂಟ್ ಗಳು ಮತ್ತು ಐ.ಡಿ.ಇ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಮತ್ತು ಕಂಪ್ಯೂಟರ್ ನಡುವೆ ಭೌತಿಕ ಸಂಪರ್ಕ ಏರ್ಪಡಿಸಲು,
00:16 ಆರ್ಡುಯಿನೊ ಹಾರ್ಡ್ ವೇರ್ ಮತ್ತು ಆರ್ಡುಯಿನೊ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಕಲಿಯಲಿದ್ದೇವೆ.
00:21 ಇಲ್ಲಿ ನಾನು:

ಆರ್ಡುಯಿನೊ ಯು.ಎನ್.ಒ ಬೋರ್ಡ್, ಉಬಂಟು ಲೀನಕ್ಸ್ 14.04 ಅಪರೇಟಿಂಗ್ ಸಿಸ್ಟಂ ಮತ್ತು Arduino IDE ಬಳಸುತ್ತಿದ್ದೇನೆ.

00:31 ಈ ಟ್ಯುಟೋರಿಯಲ್ ಅನುಸರಿಸಲು ನೀವು: ಎಲೆಕ್ಟ್ರಾನಿಕ್ಸ್,

ಆರ್ಡುಯಿನೊ ಯು.ಎನ್.ಒ ಬೋರ್ಡ್, ಯು.ಎಸ್.ಬಿ ಪವರ್ ಕೇಬಲ್ ಮತ್ತು ಕಂಪ್ಯೂಟರ್ ನ ಜ್ಞಾನ ಹೊಂದಿರಬೇಕು.

00:43 ಮೊದಲಿಗೆ, ಇಲ್ಲಿ ತೋರಿಸಿರುವಂತೆ, ಯು.ಎಸ್.ಬಿ ಕೇಬಲ್ ಬಳಸಿ ಆರ್ಡುಯಿನೊ ಬೋರ್ಡ್ ಅನ್ನು ಕಂಪ್ಯೂಟರ್ ಗೆ ಸಂಪರ್ಕಿಸಬೇಕು.
00:51 ಹಸಿರು ಬಣ್ಣದ ಪವರ್ ಎಲ್.ಇ.ಡಿ ಆನ್ ಆಗುತ್ತದೆ. ಸಂಪರ್ಕವು ಕೆಲಸ ಮಾಡುತ್ತಿದೆ ಎಂಬುದನ್ನು ಇದು ತೋರಿಸುತ್ತದೆ.
00:59 ಈಗ, ಆರ್ಡುಯಿನೊ ಹಾರ್ಡ್ವೇರ್ ನಲ್ಲಿ ಇರುವ ವಿವಿಧ ಘಟಕಗಳನ್ನು ನೋಡೋಣ.
01:06 ಇಲ್ಲಿನ ಅತ್ಯಂತ ಪ್ರಮುಖ ಘಟಕವೆಂದರೆ ATMEGA 328 ಮೈಕ್ರೋಕಂಟ್ರೋಲರ್ ಚಿಪ್.
01:13 ಇದು ಆರ್ಡುಯಿನೊವಿನ ಹೃದಯವಾಗಿದ್ದು, ಇದು ವಿಭಿನ್ನ ಕಾರ್ಯಗಳನ್ನು ಮಾಡಲು ನೀವು ಇಲ್ಲಿ ಪ್ರೋಗ್ರಾಂ ಮಾಡಬಹುದು.
01:20 ಈ ಮೈಕ್ರೋಕಂಟ್ರೋಲರ್, ಆಂತರಿಕ ROM, RAM ಮತ್ತು ಆರ್ಡುಯಿನೊ BootLoader ಹೊಂದಿರುತ್ತದೆ.
01:29 ಆರ್ಡುಯಿನೊ BootLoader ಎಂದರೇನು?

ಇದು ಮೊದಲ ಪ್ರೋಗ್ರಾಂ ಆಗಿದ್ದು, ಉಪಕರಣವನ್ನು ಪವರ್ ಸಪ್ಲೈಗೆ ಸಂಪರ್ಕಿಸಿದಾಗ ಇದು ಕಾರ್ಯರೂಪಕ್ಕೆ ಬರುತ್ತದೆ.

01:40 ಇವು ಡಿಜಿಟಲ್ ಪಿನ್ ಗಳು. ಇವೆಲ್ಲವುಗಳನ್ನು ಇನ್ಪುಟ್ ಅಥವಾ ಔಟ್ಪುಟ್ ಆಗಿ ಪ್ರೋಗ್ರಾಂ ಮಾಡಬಹುದು.
01:49 ಡಿಜಿಟಲ್ ಎಂದರೆ ಅವು ʻಆನ್ʼ ಅಥವಾ ʻಆಫ್ʼ, ʻಹೈʼ ಅಥವಾ ʻಲೋʼ ಆಗಬಹುದು.
01:55 ಉದಾಹರಣೆಗೆ, ಎಲ್.ಇ.ಡಿ ಯನ್ನು ಮಬ್ಬುಗೊಳಿಸಲು ಅಥವಾ ಆಡಿಯೋ ಸಿಗ್ನಲ್ ಗಳನ್ನು ರೂಪಿಸಲು, ಇತ್ಯಾದಿ.
02:02 ಇತರ ಉಪಕರಣಗಳೊಂದಿಗೆ ಸೀರಿಯಲ್ ಕಮ್ಯುನಿಕೇಶನ್ ಮಾಡಲು ಪಿನ್ ಸಂಖ್ಯೆ 0 ಅಥವಾ 1 ಬಳಸಬಹುದು.
02:10 ಇಲ್ಲಿ, 0-RX ಎಂದರೆ ಸ್ವೀಕರಿಸುವುದು,

1-TX ಎಂದರೆ ಪ್ರಸರಣ.

02:20 ಇವು ಅನಲಾಗ್ ಪಿನ್ ಗಳಾಗಿದ್ದು, ಇವುಗಳನ್ನು A0 ದಿಂದ A5 ಎಂದು ಗುರುತಿಸಲಾಗಿದೆ. ಇವುಗಳನ್ನು ಇನ್ಪುಟ್ ಗಳಿಗೆ ಮಾತ್ರ ಬಳಸಲಾಗುತ್ತದೆ.
02:31 ಇವು ಅನಲಾಗ್ ಸಿಗ್ನಲ್ ಗಳನ್ನು ಪಡೆಯುತ್ತವೆ ಮತ್ತು ಕಂಪ್ಯೂಟರ್ ಅರ್ಥೈಸಬಲ್ಲ ಡಿಜಿಟಲ್ ಸಿಗ್ನಲ್ ಗಳಾಗಿ ಪರಿವರ್ತಿಸುತ್ತವೆ.
02:40 ಇವು, ಬೋರ್ಡ್ ಗೆ ಎಂಬೆಡ್ ಮಾಡಲಾಗಿರುವ ಎಲ್.ಇ.ಡಿ ಗಳ ಪ್ರಸರಣ ಮತ್ತು ಸ್ವೀಕಾರ ಮಾಡುತ್ತವೆ.

ಡೇಟಾ ಕಳುಹಿಸುವಾಗ ಅಥವಾ ಸ್ವೀಕರಿಸುವಾಗ ಇವು ಮಿನುಗುತ್ತವೆ.

02:51 ಇವು ಟ್ರಬಲ್ ಶೂಟಿಂಗ್ ಗೆ ತುಂಬಾ ಅತ್ಯತಗ್ಯ.
02:55 reset ಬಟನ್ ನೀವು ಒತ್ತಿದಾಗ, ಪ್ರೋಗ್ರಾಂ ನಿಲ್ಲುತ್ತದೆ ಮತ್ತು ರೀಸ್ಟಾರ್ಟ್ ಆಗುತ್ತದೆ.
03:03 ಇದು ಬೋರ್ಡ್ ನಿಂದ ಏನನ್ನೂ ಅಳಿಸುವುದಿಲ್ಲ.
03:08 ಹೊರಗಿನ ವಿದ್ಯುಚ್ಛಕ್ತಿ ಮೂಲವನ್ನು ಬಳಸಿದಾಗ ಇದು ಆರ್ಡುಯಿನೊ ಬೋರ್ಡ್ ಗೆ ಇನ್ಪುಟ್ ವೋಲ್ಟೆಜ್ ಆಗಿರುತ್ತದೆ.
03:16 ಇವು ಗ್ರೌಂಡ್ ಪಿನ್ ಗಳಾಗಿದ್ದು, ಬೋರ್ಡ್ ನಲ್ಲಿ ಅತ್ಯಂತ ಕಡಿಮೆ ವೋಲ್ಟೆಜ್ ಗೆ ಆಕ್ಸೆಸ್ ನೀಡುತ್ತವೆ.
03:23 ಬೋರ್ಡ್ ನ ಪ್ರೋಗ್ರಾಮಿಂಗ್ ಗಾಗಿ ಯು.ಎಸ್.ಬಿ ಇಂಟರ್ ಫೇಸ್ ಬಳಸಬಹುದು.

ಅಲ್ಲದೆ, ಬೋರ್ಡ್ ಮತ್ತು ಕಂಪ್ಯೂಟರ್ ನಡುವೆ ಸೀರಿಯಲ್ ಕಮ್ಯುನಿಕೇಶನ್ ಗಾಗಿ ಇದನ್ನು ಬಳಸಬಹುದು.

03:35 ಬೋರ್ಡ್ ಗೆ ಪವರ್ ನೀಡಲು ನಾವು ಈ ಬಾಹ್ಯ ಪವರ್ ಅಡಾಪ್ಟರ್ ಹೊಂದಿದ್ದೇವೆ.
03:41 ನಂತರ, ಆರ್ಡುಯಿನೊ ಪ್ರೋಗ್ರಾಮಿಂಗ್ ಅನ್ನು ನಾವು ನೋಡೋಣ.
03:46 ಆರ್ಡುಯಿನೊ ಪ್ರೋಗ್ರಾಂಗಳನ್ನು ಮೂರು ಮುಖ್ಯ ಭಾಗಗಳಾಗಿ ವಿಂಗಡಿಸಬಹುದು.

ಅವೆಂದರೆ ಕಂಟ್ರೋಲ್ ಸ್ಟ್ರಕ್ಚರ್ ಸ್ಟೇಟ್ ಮೆಂಟ್ ಗಳು, ಅಪರೇಟರ್ ಗಳು, ವೇರಿಯೇಬಲ್ ಗಳು ಮತ್ತು ಕಾನ್ಸ್ಟಂಟ್ ಗಳು,

03:57 ಮತ್ತು ಫಂಕ್ಷನ್ ಗಳು.
04:00 ಕಂಟ್ರೋಲ್ ಸ್ಟೇಟ್ ಮೆಂಟ್ ಗಳು: if, if..else, for, while, do..while, switch case ಇತ್ಯಾದಿ.
04:11 ಇವು ಇತರ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಗಳಂತೆಯೇ ಇರುತ್ತವೆ.
04:16 ಜೊತೆಗೆ ನಾವು ಅರಿತ್ ಮೆಟಿಕ್ ಅಪರೇಟರ್ ಗಳು, ಕಂಪಾರಿಸನ್ ಅಪರೇಟರ್ ಗಳು ಮತ್ತು ಬೂಲಿಯನ್ ಅಪರೇಟರ್ ಗಳನ್ನು ಹೊಂದಿದ್ದೇವೆ.
04:24 ನಾವು ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನಲ್ಲಿ ವೇರಿಯೇಬಲ್ ಗಳು ಮತ್ತು ಕಾನ್ಸ್ಟಂಟ್ ಗಳನ್ನು ಹೊಂದಿದ್ದೇವೆ.
04:31 ಇವು, pinMode(), digitalWrite(), digitalRead(), delay(), analogRead(), analogWrite() ಇತ್ಯಾದಿ ಬಿಲ್ಟ್-ಇನ್ ಫಂಕ್ಷನ್ ಗಳಾಗಿವೆ.
04:46 ಇವು ಪ್ರಮುಖ ಫಂಕ್ಷನ್ ಗಳಾಗಿದ್ದು, ಹೆಚ್ಚಾಗಿ ಇವುಗಳನ್ನು ಆರ್ಡುಯಿನೊ ಪ್ರಾಜೆಕ್ಟ್ ಗಳಲ್ಲಿ ಬಳಸಲಾಗುತ್ತದೆ.
04:52 Arduino IDE ಯ ಈ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಹೇಗೆ ಉಲ್ಲೇಖಿಸಬೇಕು ಎಂದು ನಾನೀಗ ತೋರಿಸುತ್ತೇನೆ.
04:58 ನಾವೀಗ Arduino IDE ತೆರೆಯೋಣ.
05:01 Arduino IDE ಯಲ್ಲಿ Help ಮೆನುವಿನ ಮೇಲೆ ಕ್ಲಿಕ್ ಮಾಡಿ. ನಂತರ Reference ಮೇಲೆ ಕ್ಲಿಕ್ ಮಾಡಿ.
05:08 ಇದು ನಿಮ್ಮ ಬ್ರೌಸರ್ ನಲ್ಲಿ offline page ತೆರೆಯುತ್ತದೆ.
05:12 ಉದಾಹರಣೆಗೆ, ನೀವು 'digitalWrite()' ಬಿಲ್ಟ್ ಇನ್ ಫಂಕ್ಷನ್ ಉಲ್ಲೇಖಿಸಲು ಇಚ್ಛಿಸಿದ್ದಲ್ಲಿ, function ಹೆಸರಿನ ಮೇಲೆ ಕ್ಲಿಕ್ ಮಾಡಿ.
05:22 ಇಲ್ಲಿ ನೀವು digitalWrite() ಫಂಕ್ಷನ್ ನ ವಿವರಣೆ, ಜೋಡಣೆ, ಮತ್ತು ಮಾದರಿ ಪ್ರೋಗ್ರಾಂ ನೋಡಬಹುದು.
05:31 ಇಲ್ಲಿ ಅನೇಕ ಬಿಲ್ಟ್ ಇನ್ ಫಂಕ್ಷನ್ ಗಳಿವೆ ಮತ್ತು ನಮ್ಮ ಅಗತ್ಯತೆಗೆ ತಕ್ಕುದಾಗಿ ಈ ಕೈಪಿಡಿಯನ್ನು ನಾವು ಉಲ್ಲೇಖಿಸಬಹುದು.
05:39 ನಂತರದ ಟ್ಯುಟೋರಿಯಲ್ ಗಳಲ್ಲಿ ನಾವು ಕೆಲವು ಪ್ರಮುಖ ಬಿಲ್ಟ್-ಇನ್ ಫಂಕ್ಷನ್ ಗಳನ್ನು ಕಲಿಯಲಿದ್ದೇವೆ.
05:47 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ನಾವೀಗ ಸಂಕ್ಷೇಪಿಸೋಣ.

05:52 ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಮತ್ತು ಕಂಪ್ಯೂಟರ್ ನಡುವೆ ಭೌತಿಕ ಸಂಪರ್ಕವನ್ನು ಏರ್ಪಡಿಸಲು,
06:00 ಆರ್ಡುಯಿನೊ ಹಾರ್ಡ್ ವೇರ್ ಮತ್ತು ಆರ್ಡುಯಿನೊ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಕಲಿತೆವು.
06:05 ಅಸೈನ್ ಮೆಂಟ್ ಆಗಿ Arduino IDE ತೆರೆಯಿರಿ.
06:09 Help ಮೆನು ಮೇಲೆ ಕ್ಲಿಕ್ ಮಾಡಿ Reference ಆರಿಸಿ.
06:14 delay(), pinMode() and digitalRead() ಮುಂತಾದ ಬಿಲ್ಟ್-ಇನ್ ಫಂಕ್ಷನ್ ಗಳ ಮೇಲೆ ಕಣ್ಣಾಡಿಸಿ.
06:22 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
6:30 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆ ತೇರ್ಗಡೆಯಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
06:42 ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?

ದಯವಿಟ್ಟು ಈ ಸೈಟ್ ಗೆ ಭೇಟಿ ನೀಡಿ.

06:47 ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ.

06:57 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ.

07.07 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .

ಧನ್ಯವಾದಗಳು.

Contributors and Content Editors

Melkamiyar, Sandhya.np14