Difference between revisions of "Scilab/C2/Scripts-and-Functions/Kannada"

From Script | Spoken-Tutorial
Jump to: navigation, search
Line 69: Line 69:
 
|-
 
|-
 
|02:49
 
|02:49
|ಈಗ a ಯ ಬೆಲೆಯನ್ನು  1 ಎಂದು ಬದಲಿಸೋಣ.  
+
|ಈಗ a ಯ ವ್ಯಾಲ್ಯೂವನ್ನು 1 ಎಂದು ಬದಲಿಸೋಣ.  
 
|-
 
|-
 
|02:55
 
|02:55

Revision as of 11:53, 27 October 2017

Time Narration
00:01 ಸೈಲ್ಯಾಬ್ ನ Scripts and Functions ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ.
00:06 ಈಗ ಸೈಲ್ಯಾಬ್ ನಲ್ಲಿರುವ file format ಗಳ ಪರಿಚಯದಿಂದ ಪ್ರಾರಂಭಿಸೋಣ.
00:12 ಹಲವಾರು ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡಬೇಕಾದಾಗ, ಈ ಸ್ಟೇಟ್ಮೆಂಟ್ ಗಳನ್ನು ಸೈಲ್ಯಾಬ್ ಎಡಿಟರ್ ನ ಮೂಲಕ ಫೈಲ್ ನಲ್ಲಿ ಬರೆದುಕೊಳ್ಳುವುದು ಸುಲಭ ಮಾರ್ಗ.
00:21 ಇವುಗಳನ್ನು SCRIPT ಫೈಲ್ ಗಳು ಎಂದು ಕರೆಯುತ್ತಾರೆ.
00:24 ಇಂತಹ ಸ್ಕ್ರಿಪ್ಟ್ ಫೈಲ್ ಗಳಲ್ಲಿ ಬರೆದ ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡಲು, exec ಫಂಕ್ಷನ್ ನ ನಂತರ ಸ್ಕ್ರಿಪ್ಟ್ ಫೈಲ್ ನೇಮ್ ಅನ್ನು ಬಳಸಬೇಕು.
00:34 ಈ ಫೈಲ್ ಗಳು ಅದರ ಕಂಟೆಂಟ್ ಗಳ ಆಧಾರದ ಮೇಲೆ .sce ಅಥವಾ .sci, ಎಕ್ಸ್ಟೆನ್ಷನ್ ಅನ್ನು ಹೊಂದಿರುತ್ತವೆ.
00:42 .sci ಎಕ್ಸ್ಟೆನ್ಷನ್ ಅನ್ನು ಹೊಂದಿದ ಫೈಲ್ ಗಳು ಸೈಲ್ಯಾಬ್ ಫಂಕ್ಷನ್ ಮತ್ತು ಯೂಸರ್ ಡಿಫೈನ್ಡ್ ಫಂಕ್ಷನ್ ಗಳನ್ನು ಹೊಂದಿರುತ್ತವೆ.
00:51 ಈ ಫೈಲ್ ಗಳನ್ನು ಎಕ್ಸಿಕ್ಯೂಟ್ ಮಾಡಿದಾಗ, ಇವು ಫಂಕ್ಷನ್ ಗಳನ್ನು ಸೈಲ್ಯಾಬ್ ಎನ್ವಿರೋನ್ಮೆಂಟ್ ಗೆ ಲೋಡ್ ಮಾಡುತ್ತವೆ. (ಆದರೆ ಅವುಗಳನ್ನು ಎಕ್ಸಿಕ್ಯೂಟ್ ಮಾಡುವುದಿಲ್ಲ), ಆದರೆ,
01:00 .sce ಎಕ್ಸ್ಟೆನ್ಷನ್ ಅನ್ನು ಹೊಂದಿದ ಫೈಲ್ ಗಳು ಸೈಲ್ಯಾಬ್ ಫಂಕ್ಷನ್ ಮತ್ತು ಯೂಸರ್ ಡಿಫೈನ್ಡ್ ಫಂಕ್ಷನ್ ಗಳನ್ನು ಹೊಂದಿರುತ್ತವೆ.
01:08 .sce ಮತ್ತು .sci ಎಂದು ಹೆಸರಿಸುವುದು ನಿಯಮವಲ್ಲ ಆದರೆ ಸೈಲ್ಯಾಬ್ ಸಮುದಾಯದವರು ಈ ನಿಯಮವನ್ನು ಪಾಲಿಸುತ್ತಾರೆ.
01:21 ಕಂಪ್ಯೂಟರ್ ನಲ್ಲಿ ಸೈಲ್ಯಾಬ್ ವಿಂಡೋ ವನ್ನು ಓಪನ್ ಮಾಡೋಣ.
01:27 ಕಮಾಂಡ್ ಪ್ರಾಮ್ಟ್ ನಲ್ಲಿ pwd ಕಮಾಂಡ್ ಅನ್ನು ಟೈಪ್ ಮಾಡಿ ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿಯನ್ನು ಕಂಡುಹಿಡಿಯಿರಿ.
01:35 ಸೈಲ್ಯಾಬ್ ಎಡಿಟರ್ ಅನ್ನು ತೆರೆಯಲು, ಸೈಲ್ಯಾಬ್ ಕನ್ಸೋಲ್ ವಿಂಡೋ ನ ಟಾಸ್ಕ್ ಬಾರ್ ಗೆ ಹೋಗಿ ಮತ್ತು Editor ಆಪ್ಷನ್ ಅನ್ನು ಕ್ಲಿಕ್ ಮಾಡಿ.
01:49 ನಾನು ಈ ಫೈಲ್ ನಲ್ಲಿ ಈಗಾಗಲೇ ಕಮಾಂಡ್ ಗಳನ್ನು ಟೈಪ್ ಮಾಡಿದ್ದೇನೆ ಮತ್ತು ಅದನ್ನು helloworld.sce ಎಂದು ಸೇವ್ ಮಾಡಿದ್ದೇನೆ, ಹಾಗಾಗಿ ನಾನು ಆ ಫೈಲ್ ಅನ್ನು Open ಷಾರ್ಟ್ ಕಟ್ ಐಕಾನ್ ಅನ್ನು ಒತ್ತಿ ಓಪನ್ ಮಾಡುತ್ತೇನೆ.
02:03 helloworld.sce ಫೈಲ್ ಅನ್ನು ಆರಿಸಿಕೊಂಡು 'Open' ನ ಮೇಲೆ ಕ್ಲಿಕ್ ಮಾಡಿ.
02:10 ನೀವು ಕಮಾಂಡ್ ಗಳನ್ನು ಹೊಸ ಫೈಲ್ ನಲ್ಲಿ ಬರೆದು, 'File' ಮೆನ್ಯುವಿನ ಮೂಲಕ ಕರೆಂಟ್ ವರ್ಕಿಂಗ್ ಡೈರಕ್ಟರಿಯಲ್ಲಿ helloworld.sce ಎಂದು ಸೇವ್ ಮಾಡಬಹುದು.
02:20 ಸೈಲ್ಯಾಬ್ ಎಡಿಟರ್ ನ ಮೆನ್ಯು ಬಾರ್ ನಲ್ಲಿ Execute ಬಟನ್ ಗೆ ಹೋಗಿ ಮತ್ತು Load into Scilab ಆಯ್ಕೆಯನ್ನು ಆರಿಸಿಕೊಳ್ಳಿ.
02:29 ಇದು ಫೈಲ್ ಅನ್ನು ಸೈಲ್ಯಾಬ್ ಕನ್ಸೋಲ್ ಗೆ ಲೋಡ್ ಮಾಡುತ್ತದೆ.
02:34 ಫೈಲ್ ಅನ್ನು ಕನ್ಸೋಲ್ ಗೆ ಲೋಡ್ ಮಾಡಿಯಾದ ನಂತರ ಸ್ಕ್ರಿಪ್ತ್ ಔಟ್ಪುಟ್ ಅನ್ನು ಈ ರೀತಿ ಕೊಡುತ್ತದೆ.
02:43 ಇದು ಕಮಾಂಡ್ ಗಳು ಮತ್ತು ಅವಕ್ಕೆ ಸಂಬಂಧಿತ ಔಟ್ಪುಟ್ ಗಳನ್ನು ಹೊಂದಿದೆ.
02:49 ಈಗ a ಯ ವ್ಯಾಲ್ಯೂವನ್ನು 1 ಎಂದು ಬದಲಿಸೋಣ.
02:55 ಎಡಿಟರ್ ನಲ್ಲಿ File ಮೆನ್ಯುಗೆ ಹೋಗಿ Save ಅನ್ನು ಕ್ಲಿಕ್ ಮಾಡಿ.
03:02 ನಾವು ಸ್ಕ್ರಿಪ್ಟ್ ಅನ್ನು ಸೈಲ್ಯಾಬ್ ಇಂಟರ್-ಪ್ರಿಟರ್ ನ ಮೂಲಕ exec ಕಮಾಂಡ್ ಅನ್ನು ಬಳಸಿ ನೇರವಾಗಿ ಎಕ್ಸಿಕ್ಯೂಟ್ ಮಾಡಬಹುಉದು ಮತ್ತು ಸ್ಕ್ರಿಪ್ಟ್ ಫೈಲ್ ಗೆ ಪಾಥ್ ಅನ್ನು ಈ ರೀತಿಯಾಗಿ ಕೊಡಬೇಕು:
03:12 exec into brackets into double quotes helloworld.sce , ಅಂದರೆ ಫೈಲ್ ನೇಮ್, ನಂತರ Enter ಅನ್ನು ಒತ್ತಿ.
03:31 ಸ್ಕ್ರಿಪ್ಟ್ ಫೈಲ್ exec ಫಂಕ್ಷನ್ ನ ಔಟ್ಪುಟ್ ನಂತೆಯೆ ಔಟ್ಪುಟ್ ಅನ್ನು ಕೊಡುತ್ತದೆ.
03:37 ಈಗ function ಗಳ ಕುರಿತು ಮಾತನಾಡೋಣ.
03:39 ಫಂಕ್ಷನ್ ನ ಡೆಫಿನೇಶನ್ function ಕೀವರ್ಡ್ ನೊಂದಿಗೆ ಪ್ರಾರಂಭವಾಗಿ endfunction ಕೀವರ್ಡ್ ನೊಂದಿಗೆ ಕೊನೆಗೊಳ್ಳುತ್ತದೆ.
03:46 ನಾನು ಫಂಕ್ಷನ್ ಫೈಲ್ function.sci ಯನ್ನು ಸೈಲ್ಯಾಬ್ ಎಡಿಟರ್ ಅನ್ನು ಬಳಸಿ ಈಗಾಗಲೇ ಸೇವ್ ಮಾಡಿದ್ದೇನೆ.
03:57 ನಾನು ಆ ಫೈಲ್ ಅನ್ನು ಓಪನ್ ಮಾಡುತ್ತೇನೆ.
04:03 ಫಂಕ್ಷನ್ ಅನ್ನು ಡಿಫೈನ್ ಮಾಡಿದ್ದನ್ನು ನೀವು ಇಲ್ಲಿ ನೋಡಬಹುದು.
04:08 ಇವುಗಳಲ್ಲಿ, degrees ಇದು ಔಟ್ಪುಟ್ ಪ್ಯಾರಾಮೀಟರ್ ಮತ್ತು radians ಇದು ಇನ್ಪುಟ್ ಪ್ಯಾರಾಮೀಟರ್.
04:21 ಫಂಕ್ಷನ್ ನ ಹೆಸರು radians2degrees.
04:26 ನಾನು ಈ ಫಂಕ್ಷನ್ ಅನ್ನು Execute ಮೆನು ಆಪ್ಷನ್ ಅನ್ನು ಬಳಸಿ ಸೈಲ್ಯಾಬ್ ನಲ್ಲಿ ಲೋಡ್ ಮಾಡುತ್ತೇನೆ.
04:40 ಸೈಲ್ಯಾಬ್ ಕನ್ಸೋಲ್ ನಲ್ಲಿ ಈಗ ಫಂಕ್ಷನ್ ಲೋಡ್ ಆಗಿದೆ.
04:44 ಇದನ್ನು exec ಕಮಾಂಡ್ ಅನ್ನು ಬಳಸಿ ಕೂಡ ಲೋಡ್ ಮಾಡಬಹುದು.
04:47 ಒಮ್ಮೆ ಫಂಕ್ಷನ್ ಲೋಡ್ ಆದರೆ, ನಂತರ ಇದನ್ನು ಬೇರೆ ಸೈಲ್ಯಾಬ್ ಫಂಕ್ಷನ್ ಗಳಂತೆ, ನಿರ್ದಿಷ್ಟವಾದ ಆರ್ಗ್ಯುಮೆಂಟ್ ಗಳನ್ನು ಪಾಸ್ ಮಾಡುವುದರ ಮೂಲಕ ಕಾಲ್ ಮಾಡಬಹುದು.
04:56 ಪರ್ಸಂಟ್ ಚಿಹ್ನೆಯನ್ನು (%) ಮಾನಸಿಕವಾಗಿ ನೆನಪಿಸಿಕೊಳ್ಳಿ ಮತ್ತು ಅದರ ಬಳಕೆಯ ಕಾರಣವನ್ನು ನೆನಪಿಸಿಕೊಳ್ಳಿ.
05:02 ಈಗ ನಾವು radians2degrees of %pi/2 ಮತ್ತು radians2degrees of (%pi/4) ಗಳ ವ್ಯಾಲ್ಯೂ ಗಳನ್ನು ಕಂಡುಹಿಡಿಯೋಣ.
05:17 percent pi/2 ಮತ್ತು radians2degrees percent pi by 4 (%pi/4).
05:28 ಈಗ ನಾವು ಒಂದಕ್ಕಿಂತ ಹೆಚ್ಚು ಇನ್ಪುಟ್ ಮತ್ತು ಔಟ್ಪುಟ್ ಆರ್ಗ್ಯುಮೆಂಟ್ ಗಳಿರುವ ಫಂಕ್ಷನ್ ಗಳನ್ನು ನೋಡೋಣ.
05:33 ಈ ಫಂಕ್ಷನ್ polar coordinates ಗಳನ್ನು ಇನ್ಪುಟ್ ಆಗಿ ಪಡೆದುಕೊಂಡು, rectangular coordinates ಗಳನ್ನು ಔಟ್ಪುಟ್ ಆಗಿ ಕೊಡುತ್ತದೆ.
05:44 ನಾನು ಈಗಾಗಲೇ ಟೈಪ್ ಮಾಡಿಟ್ಟಿರುವ ಫೈಲ್ ಅನ್ನು ಓಪನ್ ಮಾಡುತ್ತೇನೆ.
05:51 ಇಲ್ಲಿ , polar2rect ಫಂಕ್ಷನ್ ಗೆ x ಮತ್ತು y ಗಳು ಔಟ್ಪುಟ್ ಪ್ಯಾರಾಮೀಟರ್ ಗಳು ಮತ್ತು r ಮತ್ತು theta ಗಳು ಇನ್ಪುಟ್ ಪ್ಯಾರಾಮೀಟರ್ ಗಳು.
06:06 exec ಆಯ್ಕೆಯ ಮೂಲಕ ಈಗ ಇದನ್ನು ಲೋಡ್ ಮಾಡೋಣ.
06:21 ಒಮ್ಮೆ ಫಂಕ್ಷನ್ ಲೋಡ್ ಆದರೆ, ನಾವು ಫಂಕ್ಷನ್ ಅನ್ನು ಕಾಲ್ ಮಾಡಬೇಕು. ಈ ಫಂಕ್ಷನ್ ಗೆ ಎರಡು ಇನ್ಪುಟ್ ಆರ್ಗ್ಯುಮೆಂಟ್ ಗಳು ಮತ್ತು ಔಟ್ಪುಟ್ ಆರ್ಗ್ಯುಮೆಂಟ್ ಗಳು ಬೇಕು.
06:31 ಆದ್ದರಿಂದ r = 2,
06:37 theta = 45;
06:44 ಮತ್ತು ಈಗ ನಾವು ಇದನ್ನು ಕಾಲ್ ಮಾಡೋಣ, x1 comma y1, ಔಟ್ಪುಟ್ ಪ್ಯಾರಾಮೀಟರ್ ಗಳು, is equal to ಫಂಕ್ಷನ್ ನ ಹೆಸರು polar2rect into bracket r comma theta ಮತ್ತು Enter ಅನ್ನು ಒತ್ತಿ.
07:25 ನೀವು x1 ಮತ್ತು y1 ಗಳ ವ್ಯಾಲ್ಯು ವನ್ನು ನೋಡಬಹುದು.
07:29 ಸೈಲ್ಯಾಬ್ ನ ಒಂದು ಆಸಕ್ತಿಕರವಾದ ವಿಶೇಷತೆಯೆಂದರೆ, ಒಂದೇ .sci ಫೈಲ್ ನಲ್ಲಿ ನೀವು ಎಷ್ಟು ಬೇಕಾದರೂ ಫಂಕ್ಷನ್ ಗಳನ್ನು ಡಿಫೈನ್ ಮಾಡಬಹುದು.
07:38 ಇದನ್ನು ಮಾಡುವಾಗ ನೆನಪಿಡಿ, ಡಿಫಾಲ್ಟ್ ಆಗಿ ಫಂಕ್ಷನ್ ನಲ್ಲಿ ಡಿಫೈನ್ ಮಾಡಿದ ಎಲ್ಲಾ ವೇರಿಯೇಬಲ್ ಗಳೂ ಲೋಕಲ್ ಆಗಿರುತ್ತವೆ, ಈ ವೇರಿಯೇಬಲ್ ಗಳ ಸ್ಕೋಪ್, ಫಂಕ್ಷನ್ ಡೆಫಿನೇಷನ್ ನ endfunction ಕೀ ವರ್ಡ್ ನೊಂದಿಗೆ ಕೊನೆಗೊಳ್ಳುತ್ತದೆ.
07:55 ಇದರ ಮುಖ್ಯ ಪ್ರಯೋಜನವೆಂದರೆ, ನಾವು ಒಂದೇ ವೇರಿಯೇಬಲ್ ನ ಹೆಸರನ್ನು ಬೇರೆ ಬೇರೆ ಫಂಕ್ಷನ್ ಗಳಲ್ಲಿ ಉಪಯೋಗಿಸಬಹುದು.
08:05 ನಾವು 'global' ಆಯ್ಕೆಯನ್ನು ಬಳಸುವವರೆಗೂ ಈ ವೇರಿಯೇಬಲ್ ಗಳು ಮಿಶ್ರಗೊಳ್ಳುವುದಿಲ್ಲ.
08:10 ಗ್ಲೋಬಲ್ ವೇರಿಯೇಬಲ್ ಗಳ ಕುರಿತು ತಿಳಿಯಲು help global ಎಂದು ಟೈಪ್ ಮಾಡಿ.
08:18 ಗಮನಿಸಿ ಯಾವುದಾದರೂ ವೇರಿಯೇಬಲ್ ಅನ್ನು "watch" ಮಾಡಬೇಕಾದರೆ ಅಥವಾ ಫಂಕ್ಷನ್ ನಲ್ಲಿ ಮೊನಿಟರ್ ಮಾಡಬೇಕಿದ್ದಲ್ಲಿ, disp ಅವಶ್ಯಕ.
08:26 ಫಂಕ್ಷನ್ ಫೈಲ್ ನಲ್ಲಿ, ಸ್ಟೇಟ್ಮೆಂಟ್ ನ ಕೊನೆಯಲ್ಲಿ ಸೆಮಿಕಾಲನ್( ; ) ಅನ್ನು ಹಾಕುವುದರಿಂದ ಆಗುವ ಪರಿಣಾಮವನ್ನು ನೀವೇ ಪರೀಕ್ಷಿಸಿಕೊಳ್ಳಿ.
08:34 ಇದನ್ನುdisp ಸ್ಟೇಟ್ಮೆಂಟ್ ಗಳಿಗೂ ಪರೀಕ್ಷಿಸಿ.
08:38 Inline Functions: ಫಂಕ್ಷನ್ ಗಳು ಚೆನ್ನಾಗಿ ಡಿಫೈನ್ ಮಾಡಿದ ಇನ್ಪುಟ್, ಔಟ್ಪುಟ್ ಗಳನ್ನು ಮತ್ತು ಲೋಕಲ್ ವೇರಿಯೇಬಲ್ ಗಳನ್ನು ಹೊಂದಿದ ಕೋಡ್ ನ ಸೀಗ್ಮೆಂಟ್ ಆಗಿವೆ.
08:46 ಫಂಕ್ಷನ್ ಅನ್ನು ಡಿಫೈನ್ ಮಾಡುವ ಸರಳ ವಿಧಾನವೆಂದರೆ,deff ಕಮಾಂಡ್ ಅನ್ನು ಬಳಸುವುದು.
08:53 ಸೈಲ್ಯಾಬ್ ಅನ್ನು ಇನ್ಲೈನ್ ಫಂಕ್ಷನ್ ಗಳನ್ನು ರಚಿಸಲು ಬಿಡುತ್ತದೆ ಮತ್ತು ಇವು ಫಂಕ್ಷನ್ ನ ಬಾಡಿಯು ಚಿಕ್ಕದಾಗಿದ್ದಾಗ ಉಪಯುಕ್ತವಾಗಿದೆ.
09:02 ಇದನ್ನು deff() ಫಂಕ್ಷನ್ ನ ಸಹಾಯದಿಂದ ಮಾಡಬಹುದು.
09:07 ಇದು ಎರಡು ಸ್ಟ್ರಿಂಗ್ ಪ್ಯಾರಾಮೀಟರ್ ಗಳನ್ನು ತೆಗೆದುಕೊಳ್ಳುತ್ತದೆ.
09:10 ಮೊದಲನೆಯ ಸ್ಟ್ರಿಂಗ್ ಫಂಕ್ಷನ್ ಗೆ ಇಂಟರ್ಫೇಸ್ ಅನ್ನು ಡಿಫೈನ್ ಮಾಡುತ್ತದೆ ಮತ್ತು ಎರಡನೆಯ ಸ್ಟ್ರಿಂಗ್ ಫಂಕ್ಷನ್ ನ ಸ್ಟೇಟ್ಮೆಂಟ್ ಅನ್ನು ಡಿಫೈನ್ ಮಾಡುತ್ತದೆ.
09:19 deff ಕಮಾಂಡ್ ಸೈಲ್ಯಾಬ್ ನಲ್ಲಿ ಫಂಕ್ಷನ್ ಅನ್ನು ಡಿಫೈನ್ ಮಾಡುತ್ತದೆ ಮತ್ತು ಅದನ್ನು ಲೋಡ್ ಮಾಡುತ್ತದೆ.
09:26 deff ಕಮಾಂಡ್ ಅನ್ನು ಬಳಸಿ ಡಿಫೈನ್ ಮಾಡಿದ ಫಂಕ್ಷನ್ ಗಳನ್ನು ಎಕ್ಸಿಕ್ಯೂಟ್ ಮೆನ್ಯು ಆಪ್ಷನ್ ಅನ್ನು ಬಳಸಿ ಲೋಡ್ ಮಾಡುವ ಅವಶ್ಯಕತೆಯಿಲ್ಲ.
09:34 ಇದನ್ನು ವಿವರಿಸುವ ಒಂದು ಉದಾಹರಣೆಯನ್ನು ನೋಡೋಣ:
09:41 ನಾನು ನನ್ನ ಇನ್ಲೈನ್ ಫಂಕ್ಷನ್ ಅನ್ನು ಬರೆದಿರುವ inline.sci ಫೈಲ್ ಅನ್ನು ಓಪನ್ ಮಾಡುತ್ತೇನೆ.
09:51 ನಾನು ಎಡಿಟರ್ ವಿಂಡೋ ವನ್ನು ರಿಸೈಜ್ ಮಾಡುತ್ತೇನೆ.
09:57 ಮೊದಲೇ ಹೇಳಿದಂತೆ, ಮೊದಲನೆಯ ಸ್ಟ್ರಿಂಗ್ ಫಂಕ್ಷನ್ ಗೆ ಇಂಟರ್ಫೇಸ್ ಅನ್ನು ಡಿಫೈನ್ ಮಾಡುತ್ತದೆ ಮತ್ತು ಎರಡನೆಯ ಸ್ಟ್ರಿಂಗ್ ಫಂಕ್ಷನ್ ನ ಸ್ಟೇಟ್ಮೆಂಟ್ ಅನ್ನು ಡಿಫೈನ್ ಮಾಡುತ್ತದೆ.
10:13 ನಾವು ಸೈಲ್ಯಾಬ್ ಎಡಿಟರ್ ನಲ್ಲಿ ಈ ಫಂಕ್ಷನ್ ಅನ್ನು ಲೋಡ್ ಮಾಡೋಣ ಮತ್ತು ಇದನ್ನು degrees2radians of 90 ಮತ್ತು degrees2radians of 45 ಗಳನ್ನು ಕಂಡುಹಿಡಿಯಲು ಬಳಸೋಣ.
10:54 ಒಂದು ಫಂಕ್ಷನ್ ಇತರ ಫಂಕ್ಷನ್ ಗಳನ್ನು ಕಾಲ್ ಮಾಡುವುದರ ಜತೆಗೆ ತನ್ನನ್ನೇ ತಾನು ಕಾಲ್ ಮಾಡಿಕೊಳ್ಳಬೇಕು.
11:00 ಇದನ್ನು ಒಂದು ಫಂಕ್ಷನ್ ನ recursive ಕಾಲಿಂಗ್ ಎಂದು ಕರೆಯುತ್ತಾರೆ.
11:03 ಉದಾಹರಣೆಗೆ ಒಂದು ಇಂಟೀಜರ್ ನ ಫ್ಯಾಕ್ಟೋರಿಯಲ್ ಅನ್ನು ಕಂಡುಹಿಡಿಯಲು ಇದು ಅವಶ್ಯಕ.
11:10 ಈಗ ನಮ್ಮ ಚರ್ಚೆಯನ್ನು ಸೈಲ್ಯಾಬ್ ನ ಫೈಲ್ ಫಾರ್ಮ್ಯಾಟ್ ಗಳ ಕುರಿತು ಮುಂದುವರಿಸೋಣ.
11:14 ಮೊದಲೇ ಹೇಳಿದಂತೆ, ಸೈಲ್ಯಾಬ್ ಎರಡು ರೀತಿಯ ಫೈಲ್ ಫಾರ್ಮ್ಯಾಟ್ ಅನ್ನು ಬಳಸುತ್ತದೆ, .sce ಫೈಲ್ ಫಾರ್ಮ್ಯಾಟ್ ಮತ್ತು .sci ಫೈಲ್ ಫಾರ್ಮ್ಯಾಟ್.
11:23 .sce ಫೈಲ್ ಎಕ್ಸ್ಟೆನ್ಷನ್ ಅನ್ನು ಹೊಂದಿದ ಫೈಲ್ ಗಳು, ಇಂಟರ್ ಆಕ್ಟಿವ್ ಸೈಲ್ಯಾಬ್ ಸೆಶನ್ ನಲ್ಲಿ ನಮೂದಿಸಿದ ಸೈಲ್ಯಾಬ್ ಕಮಾಂಡ್ ಗಳನ್ನು ಹೊಂದಿರುತ್ತವೆ.
11:35 ಅವುಗಳು ಫಂಕ್ಷನ್ ಅನ್ನು ಡಾಕ್ಯುಮೆಂಟ್ ಮಾಡುವಾಗ ಬಳಸಿದ ಕಮೆಂಟ್ ಗಳನ್ನು ಹೊಂದಿರಬಹುದು ಮತ್ತು ಅವು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಲು exec ಕಮಾಂಡ್ ಅನ್ನು ಬಳಸಬಹುದು.
11:52 .sci ಫೈಲ್ ಎಕ್ಸ್ಟೆನ್ಷನ್ ಅನ್ನು ಹೊಂದಿದ ಫೈಲ್ ಗಳು, ಫಂಕ್ಷನ್ ಸ್ಟೇಟ್ಮೆಂಟ್ ನಿಂದ ಪ್ರಾರಂಭವಾಗುವ ಫಂಕ್ಷನ್ ಫೈಲ್ ಗಳಾಗಿವೆ.
12:00 ಒಂದು .sci ಫೈಲ್ ಅನೇಕ ಫಂಕ್ಷನ್ ಡೆಫಿನೇಷನ್ ಗಳನ್ನು ಹೊಂದಿರಬಹುದು ಮತ್ತು ಅವು ಬೇಕಾದಷ್ಟು ಸೈಲ್ಯಾಬ್ ಸ್ಟೇಟ್ಮೆಂಟ್ ಗಳನ್ನು ಹೊಂದಿರಬಹುದು, ಮತ್ತು ಈ ಸ್ಟೇಟ್ಮೆಂಟ್ ಗಳು ಫಂಕ್ಷನ್ ಆರ್ಗ್ಯುಮೆಂಟ್ ಗಳ ಮೇಲೆ ಅಥವಾ ಔಟ್ಪುಟ್ ವೇರಿಯೇಬಲ್ ಗಳ ಮೇಲೆ ,ಅವು ಎವೇಲ್ಯುಯೇಟ್ ಆದ ಮೇಲೆ , ಅನೇಕ ಕ್ರಿಯೆಗಳನ್ನು ಮಾಡುತ್ತವೆ.
12:20 ಇಲ್ಲಿಗೆ ಸೈಲ್ಯಾಬ್ ನ Scripts and Functions ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
12:25 ಸೈಲ್ಯಾಬ್ ನಲ್ಲಿ ಇನ್ನೂ ಅನೇಕ ಆಪರೇಶನ್ ಗಳಿವೆ ಅವುಗಳನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡೋಣ.
12:31 ಸೈಲ್ಯಾಬ್ ಲಿಂಕ್ ಅನ್ನು ವೀಕ್ಷಿಸುತ್ತಿರಿ.
12:33 ಈ ಟ್ಯುಟೋರಿಯಲ್ ಅನ್ನು Free and Open Source Software in Science and Engineering Education(FOSSEE) ರಚಿಸಿದ್ದಾರೆ.
12:40 FOSSEE ನ ಕುರಿತಾದ ಹೆಚ್ಚಿನ ಮಾಹಿತಿಗಳನ್ನು http://fossee.in ಅಥವಾ http://scilab.in ಜಾಲತಾಣಗಳಲ್ಲಿ ಪಡೆಯಬಹುದು
12:50 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ.
12:56 ಇದರ ಕುರಿತು ಹೆಚ್ಚಿನ ವಿವರಗಳು http://spoken-tutorial.org/NMEICT-Intro ನಲ್ಲಿ ದೊರೆಯುತ್ತದೆ.
13:06 ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
13:10 ಧನ್ಯವಾದಗಳು

Contributors and Content Editors

Anjana310312, Sandhya.np14