Difference between revisions of "Netbeans/C2/Designing-GUI-for-Sample-Java-Application/Kannada"

From Script | Spoken-Tutorial
Jump to: navigation, search
(Created page with "{| Border=1 || '''Time''' || '''Narration''' |- | 00:01 | ನಮಸ್ಕಾರ. |- | 00:02 | '''Netbeans''' (ನೆಟ್ಬೀನ್ಸ್) ಅನ್ನು ಬಳಸಿ, GU...")
 
Line 16: Line 16:
 
|-
 
|-
 
| 00:16
 
| 00:16
| ನಿಮ್ಮ GUI ಅನ್ನು ಕ್ರಿಯೇಟ್ ಮಾಡಲು ಅದು ನಿಮಗೆ 'What You See Is What You Get' ಎಂಬ ಒಂದು ಡಿಸೈನರ್ ಅನ್ನು ಕೊಡುತ್ತದೆ.  
+
| ನಿಮ್ಮ GUI ಅನ್ನು ಕ್ರಿಯೇಟ್ ಮಾಡಲು ಅದು ನಿಮಗೆ 'What You See Is What You Get' ಒಂದು ಡಿಸೈನರ್ ಅನ್ನು ಕೊಡುತ್ತದೆ.  
 
|-
 
|-
 
|00:21
 
|00:21

Revision as of 17:00, 17 October 2017

Time Narration
00:01 ನಮಸ್ಕಾರ.
00:02 Netbeans (ನೆಟ್ಬೀನ್ಸ್) ಅನ್ನು ಬಳಸಿ, GUI ಗಳನ್ನು ಬಿಲ್ಡ್ ಮಾಡುವ ಬಗ್ಗೆ ಇರುವ ಈ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು Netbeans ನ ಅತ್ಯಂತ ಆಕರ್ಷಕ ವೈಶಿಷ್ಟ್ಯಗಳಲ್ಲಿ ಒಂದಾದ 'GUI Builder' ಅನ್ನು ನೋಡುವೆವು.
00:13 GUI ಅನ್ನು ಬಿಲ್ಡ್ ಮಾಡಲು Netbeans ಏನನ್ನು ಒದಗಿಸುತ್ತದೆ?
00:16 ನಿಮ್ಮ GUI ಅನ್ನು ಕ್ರಿಯೇಟ್ ಮಾಡಲು ಅದು ನಿಮಗೆ 'What You See Is What You Get' ಒಂದು ಡಿಸೈನರ್ ಅನ್ನು ಕೊಡುತ್ತದೆ.
00:21 ಅಲ್ಲದೆ, ನಿಮ್ಮ ಲೇ-ಔಟ್ ಅನ್ನು ರಚಿಸಲು ಘಟಕಗಳನ್ನು ಡ್ರ್ಯಾಗ್ ಆಂಡ್ ಡ್ರಾಪ್ ಮಾಡಲು ಒಂದು ಸುಲಭವಾದ ಇಂಟರ್ಫೇಸ್ ಅನ್ನು ಅದು ನಿಮಗೆ ಕೊಡುತ್ತದೆ.
00:27 ಇದು, 'Palette' (ಪ್ಯಾಲೆಟ್) ನೊಂದಿಗೆ ಮೊದಲೇ ಇನ್ಸ್ಟಾಲ್ ಮಾಡಲಾದ AWT ಮತ್ತು 'Swing' ಘಟಕಗಳೊಂದಿಗೆ ಬರುತ್ತದೆ.
00:33 ಕೆಲವೇ ಕ್ಷಣಗಳಲ್ಲಿ ಒಂದು ಸಂಪೂರ್ಣ 'GUI ಅಪ್ಲಿಕೇಶನ್' ಅನ್ನು ಬಿಲ್ಡ್ ಮಾಡಲು, ನಾವು ಈ ಪ್ರಬಲ ವಿಜುವಲ್ ಎಡಿಟರ್ ನ ಬಳಕೆಯನ್ನು ಮಾಡುವವರಿದ್ದೇವೆ.
00:39 ಇದನ್ನು ಮಾಡಿತೋರಿಸಲು, ನಾನು:
00:43 * Linux ಆಪರೇಟಿಂಗ್ ಸಿಸ್ಟಂ Ubuntu, ಆವೃತ್ತಿ 11.04 ಹಾಗೂ
00:46 * Netbeans IDE ಆವೃತ್ತಿ 7.1.1

ಇವುಗಳನ್ನು ಬಳಸುತ್ತಿದ್ದೇನೆ.

00:50 ಇನ್ಸ್ಟಾಲ್ಲೇಶನ್ ಮತ್ತು ಅವಶ್ಯಕತೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಹಿಂದಿನ ಟ್ಯುಟೋರಿಯಲ್ ಅನ್ನು ನೋಡಿ.
00:56 ಈ ಟ್ಯುಟೋರಿಯಲ್ ನಲ್ಲಿ, ನಾವು:
00:58 * 'Form Editor' (ಫಾರ್ಮ್ ಎಡಿಟರ್) ಅನ್ನು ಬಳಸುವುದು
01:00 * 'Source Editor' (ಸೋರ್ಸ್ ಎಡಿಟರ್)
01:02 * 'Palette' (ಪ್ಯಾಲೆಟ್), 'Inspector' (ಇನ್ಸ್ಪೆಕ್ಟರ್) ಮತ್ತು 'Properties' ಈ ವೈಶಿಷ್ಟ್ಯಗಳು
01:05 * 'ಇವೆಂಟ್ ಹ್ಯಾಂಡ್ಲರ್' ಗಳನ್ನು (event handler) ಸೇರಿಸುವುದು ಮತ್ತು
01:07 * ನಮ್ಮ ಅಪ್ಲಿಕೇಶನ್ ಅನ್ನು ಕಂಪೈಲ್ ಮಾಡಿ ಅದನ್ನು ರನ್ ಸಹ ಮಾಡುವುದು ಇತ್ಯಾದಿಗಳನ್ನು ಕಲಿಯುವೆವು.
01:10 ನಾವು ಈಗ ಆರಂಭಿಸೋಣ. ಈ ಟ್ಯುಟೋರಿಯಲ್ ನಲ್ಲಿ ಒಂದು ಸರಳವಾದ 'Account balance application' ಅನ್ನು ಬಿಲ್ಡ್ ಮಾಡೋಣ.
01:15 ಈ ಅಪ್ಲಿಕೇಶನ್ ಗಾಗಿ, ನಮಗೆ -
01:18 * ಖಾತೆಗೆ (ಅಕೌಂಟ್ ಗೆ) ಜಮಾ (credit) ಮಾಡಲಾದ ಮೊತ್ತವನ್ನು ಇನ್ಪುಟ್ ಮಾಡಲು
01:21 * ಖಾತೆಯಿಂದ (ಅಕೌಂಟ್ ನಿಂದ) ಪಡೆಯಲಾದ (debit) ಮೊತ್ತ
01:24 * ಮತ್ತು ಕೊನೆಗೆ ಉಳಿಯುವ ಬಾಕಿಯನ್ನು (balance) ಕಂಡುಹಿಡಿಯುವುದು ಇವುಗಳನ್ನು ಮಾಡಲು ಸಾಧ್ಯವಾಗಬೇಕು.
01:26 ನಮ್ಮ ಅಪ್ಲಿಕೆಶನ್ ಹೆಚ್ಚು ಆಕರ್ಷಕವಾಗಿ ಕಾಣಲು ಒಂದು ಚಿತ್ರವನ್ನು ಸಹ ನಾವು ಸೇರಿಸುವೆವು.
01:31 ಸುಲಭ ಮತ್ತು ತ್ವರಿತವಾದ ನ್ಯಾವಿಗೇಶನ್ ಗಾಗಿ ಮೇಲ್ತುದಿಯಲ್ಲಿ ಒಂದು ಮೆನ್ಯುಬಾರ್ ಅನ್ನು ಸಹ ನಾವು ಸೇರಿಸೋಣ.
01:35 ಈಗ ನಾವು 'netbeans' ಗೆ ಹೋಗೋಣ ಮತ್ತು ಒಂದು ಹೊಸ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡುವುದರ ಮೂಲಕ ಆರಂಭಿಸೋಣ.
01:40 'File' ಮೆನ್ಯುವಿನಿಂದ, 'New Project' ಅನ್ನು ಆರಿಸಿಕೊಳ್ಳಿ >> ಇಲ್ಲಿ ಒಂದು 'Java Application' ಅನ್ನು ಆರಿಸಿಕೊಳ್ಳಿ. 'Next' ಅನ್ನು ಒತ್ತಿ
01:49 ಮತ್ತು ನಿಮ್ಮ ಪ್ರೊಜೆಕ್ಟ್ ಗೆ ಒಂದು ಹೆಸರನ್ನು ಕೊಡಿ.
01:51 ನಾನು ನನ್ನ ಪ್ರೊಜೆಕ್ಟ್ ಅನ್ನು "Account balance" ಎಂದು ಹೆಸರಿಸುವೆನು.
01:58 'Main Class' ಅನ್ನು ಕ್ರಿಯೇಟ್ ಮಾಡಬೇಡಿ ಆದರೆ ಅದನ್ನು 'Main Project' ಎಂದು ಸೆಟ್ ಮಾಡಿ.
02:02 'Finish' ಅನ್ನು ಒತ್ತಿ. ಇದು ನಿಮ್ಮ IDE ಯಲ್ಲಿ ಒಂದು ಹೊಸ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಬೇಕು.
02:07 ಈಗ 'File' ಮೆನ್ಯುನಲ್ಲಿ 'File' ಗೆ ಹಿಂದಿರುಗಿ ಮತ್ತು 'New File' ಅನ್ನು ಆಯ್ಕೆಮಾಡಿ.
02:15 'Categories' ನ ಅಡಿಯಲ್ಲಿ 'Swing GUI Forms' ಅನ್ನು
02:18 ಮತ್ತು, 'File Type' ನಡಿಯಲ್ಲಿ 'Jframe Form' (ಜೆ ಫ್ರೇಮ್ ಫಾರ್ಮ್) ಅನ್ನು ಆರಿಸಿಕೊಳ್ಳಿ.
02:21 'Next' ಅನ್ನು ಒತ್ತಿ.
02:24 ನಾನು ಇದನ್ನೂ "AccountBalance" ಎಂದೇ ಕರೆಯುತ್ತೇನೆ.
02:29 ಆದರೆ ನೀವು ನಿಮಗೆ ಬೇಕಾದ ಹೆಸರನ್ನು ಇದಕ್ಕೆ ಕೊಡಬಹುದು.
02:33 ನೀವು 'Finish' ಅನ್ನು ಒತ್ತಿದ ತಕ್ಷಣ ಇದು ನಿಮ್ಮನ್ನು ಮುಖ್ಯವಾದ 'Design' ಜಾಗಕ್ಕೆ ಕರೆದೊಯ್ಯುತ್ತದೆ.
02:39 ನಾವು ಈಗ 'GUI builder' ನ ಬಗ್ಗೆ ತಿಳಿದುಕೊಳ್ಳೋಣ.
02:43 ಬಲಗಡೆಯಲ್ಲಿ, ಇಲ್ಲಿ, 'Palette' ಇದೆ.
02:45 ಇದು, ಮೊದಲೇ ಇನ್ಸ್ಟಾಲ್ ಮಾಡಲಾದ 'Swing' ಮತ್ತು 'AWT' ಘಟಕಗಳನ್ನು ಒಳಗೊಂಡಿದೆ.
02:49 ಇಲ್ಲಿ, ಪ್ಯಾಲೆಟ್ ನ ಕೆಳಗೆ ಇರುವುದು 'Properties' ವಿಂಡೋ ಆಗಿದೆ.
02:53 ಇದು, ನೀವು ಕಾಂಪೋನೆಂಟ್ ಗಳನ್ನು ಆಯ್ಕೆಮಾಡಿದಾಗ ಅವುಗಳ ಗುಣಲಕ್ಷಣಗಳನ್ನು ನಿಮಗೆ ತೋರಿಸುತ್ತದೆ.
02:58 ಎಡಗಡೆಯಲ್ಲಿ, ಇಲ್ಲಿರುವುದು 'Navigator' ಅಥವಾ 'inspector' ಆಗಿದೆ.
03:01 ಇದು ಇಲ್ಲಿ, ವರ್ಕ್-ಸ್ಪೇಸ್ ನಲ್ಲಿ, 'Design' ಮೋಡ್ ನಲ್ಲಿ 'frame' ಗೆ ಸೇರಿಸಲಾದ ಘಟಕಗಳನ್ನು
03:05 ನಿಮಗೆ ತೋರಿಸುತ್ತದೆ.
03:08 ಮೇಲ್ಗಡೆ, ಇಲ್ಲಿ ಇರುವುದು 'Source' ಬಟನ್ ಆಗಿದೆ.
03:11 ನೀವು ಇದರ ಮೇಲೆ ಕ್ಲಿಕ್ ಮಾಡಿದಾಗ, ಇದು ನಿಮ್ಮನ್ನು 'ಸೋರ್ಸ್ ಕೋಡ್' ಗೆ ಕರೆದೊಯ್ಯುತ್ತದೆ.
03:15 ನೀವು ಡಿಸೈನ್ ಗೆ ಘಟಕಗಳನ್ನು ಸೇರಿಸಿದಾಗ ಇದು
03:18 ಅದಕ್ಕೆ ಅನುಗುಣವಾದ ಸೋರ್ಸ್ ಕೋಡನ್ನು ತೆಗೆದುಕೊಂಡು ಅದನ್ನು ಇಲ್ಲಿ ಸೋರ್ಸ್ ಗೆ ಸೇರಿಸುತ್ತದೆ.
03:23 ನಾವು 'Design' ಮೋಡ್ ಗೆ ಹಿಂದಿರುಗೋಣ ಮತ್ತು ಈಗ ನಾವು ಬಳಸಲಿರುವ ಘಟಕಗಳನ್ನು ನೋಡೋಣ.
03:28 ನಮ್ಮ ಅಪ್ಲಿಕೇಶನ್ ಅನ್ನು ಕ್ರಿಯೇಟ್ ಮಾಡಲು, ಪ್ಯಾಲೆಟ್ ನಲ್ಲಿಯ 'Buttons, Labels, Panels, Tabbed pane' ಗಳಂತಹ
03:31 ಕೆಲವು ಘಟಕಗಳನ್ನು ನಾವು ಬಳಸಲಿದ್ದೇವೆ.
03:38 ಈಗ, 'Palette' ನಿಂದ 'swing Containers' ನ ಅಡಿಯಲ್ಲಿ 'Tabbed Pane' ಅನ್ನು ನಾವು ಆರಿಸಿಕೊಳ್ಳೋಣ.
03:45 'Tabbed Pane' ಅನ್ನು ಆಯ್ಕೆಮಾಡಿ ಮತ್ತು 'form' ನ ಮೇಲೆ ಕ್ಲಿಕ್ ಮಾಡಿ.
03:50 ಇದು ನಿಮಗೆ ಒಂದು 'Tabbed frame' ಅನ್ನು ಕೊಡಬೇಕು. ನಿಮ್ಮ ಮೌಸ್ ಅನ್ನು ಬಳಸಿಕೊಂಡು ನೀವು ಇದನ್ನು ರಿಸೈಜ್ ಮಾಡಬಹುದು.
03:58 ಈಗ 'Palette' ಗೆ ಹಿಂದಿರುಗಿ ಮತ್ತು ಒಂದು 'Panel' ಅನ್ನು ಆಯ್ಕೆಮಾಡಿ.
04:02 ಮತ್ತು ನಿಮ್ಮ 'frame' ನ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ.
04:06 ಅದು ನಿಮಗೆ ಒಂದು tab (ಟ್ಯಾಬ್) ಅನ್ನು ಕೊಡಬೇಕು.
04:09 ಈಗ ಹಿಂದಿರುಗಿ, ಇನ್ನೊಂದು 'Panel' ಅನ್ನು ಆಯ್ಕೆಮಾಡಿ ಮತ್ತು 'form' ನ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ.
04:14 ಇದು ನಿಮಗೆ ಒಟ್ಟು 2 ಟ್ಯಾಬ್ ಗಳನ್ನು ಕೊಡುತ್ತದೆ.
04:17 ಈಗ, ಟ್ಯಾಬ್ ನ ಮೇಲೆ ಡಬಲ್-ಕ್ಲಿಕ್ ಅಥವಾ ರೈಟ್-ಕ್ಲಿಕ್ ಮಾಡಿ. 'Edit Text' ಅನ್ನು ಆಯ್ಕೆ ಮಾಡುವುದರ ಮೂಲಕ ನೀವು ಅದನ್ನು 'rename' ಮಾಡಬಹುದು.
04:29 ನಾನು ಮೊದಲನೆಯ ಟ್ಯಾಬ್ ಅನ್ನು "Image" ಹಾಗೂ ಎರಡನೆಯದನ್ನು "Balance" ಎಂದು ರೀ-ನೇಮ್ ಮಾಡುವೆನು.
04:37 ಈಗ, ನಾವು 'Palette' ಗೆ ಹಿಂದಿರುಗೋಣ ಮತ್ತು 'Swing Controls' ಮೆನ್ಯುನಿಂದ 'label' ಗಳನ್ನು ಸೇರಿಸೋಣ.
04:43 'Swing Controls' ನಿಂದ 'Label' ಅನ್ನು ಆರಿಸಿಕೊಳ್ಳಿ ಮತ್ತು ಇದನ್ನು ಇಲ್ಲಿ ನಿಮ್ಮ ಫಾರ್ಮ್ ಗೆ (form) ಸೇರಿಸಿ.
04:48 ನಮ್ಮ ಅಪ್ಲಿಕೇಶನ್ ಗಾಗಿ ನಮಗೆ ಒಟ್ಟು 6 ಲೇಬಲ್ ಗಳ ಅಗತ್ಯವಿದೆ.
04:54 ಈಗ ನಾನು ನನ್ನ ಫಾರ್ಮ್ ಗೆ ಆರು ಲೇಬಲ್ ಗಳನ್ನು ಸೇರಿಸಿದ್ದೇನೆ.
04:58 ನೀವು ಅವುಗಳನ್ನು ಕ್ಲಿಕ್ ಮಾಡಿ ಸಾಲಾಗಿ ಹೊಂದಿಸಬಹುದು.
05:02 ಮತ್ತೆ ಅವುಗಳ ಸ್ಥಾನವನ್ನು ಹೊಂದಿಸಲು ಅಥವಾ ಸಾಲಾಗಿರಿಸಲು ಮೌಸ್ ಅನ್ನು ಸಹ ಬಳಸಬಹುದು.
05:06 ಈಗ, ಲೇಬಲ್ ನ ಮೇಲಿನ ಟೆಕ್ಸ್ಟ್ ಅನ್ನು ಬದಲಾಯಿಸಲು -
05:08 ನೀವು ಅದರ ಮೇಲೆ ಡಬಲ್-ಕ್ಲಿಕ್ ಅಥವಾ ರೈಟ್-ಕ್ಲಿಕ್ ಮಾಡಬಹುದು
05:12 ಮತ್ತು 'Edit Text' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
05:14 ಈಗ ನಾವು ಈ ಲೇಬಲ್ ಗಳನ್ನು 'rename' ಮಾಡೋಣ.
05:16 ನಾನು ಮೊದಲನೆಯದನ್ನು "Initial Amount" ಎಂದು,
05:22 ಎರಡನೆಯ ಲೇಬಲ್ ಅನ್ನು "Credit Amount",
05:30 ಮೂರನೆಯದನ್ನು "Debit Amount"
05:35 ಮತ್ತು ನಾಲ್ಕನೆಯದನ್ನು "Balance" ಎಂದು ಕರೆಯುತ್ತೇನೆ.
05:41 ಆರಂಭದಲ್ಲಿ ನಾವು 'Initial Amount' ಅನ್ನು Rs 5000 ಗೆ ಸೆಟ್ ಮಾಡುವೆವು.
05:48 'balance' ಅನ್ನು ಕಂಡುಹಿಡಿದ ನಂತರ, ನಾವು ಅದನ್ನು ಈ ಲೇಬಲ್ ನಲ್ಲಿ ಹಾಕಬಹುದು.
05:53 ಆದರೆ ಸಧ್ಯಕ್ಕೆ ನಾವು ಇದನ್ನು ಬರೀ ಸ್ಟಾರ್ ಗಳನ್ನಾಗಿ ಇಡೋಣ.
06:01 ಈಗ 'Palette' ಗೆ ಹಿಂದಿರುಗಿ 'Text Field' ಅನ್ನು ಆಯ್ಕೆಮಾಡುವೆವು. ನಾವು 'Credit Amount' ನ ಹತ್ತಿರ ಒಂದು ಹಾಗೂ 'Debit Amount' ನ ಹತ್ತಿರ ಒಂದು, ಹೀಗೆ ಒಟ್ಟಿನಲ್ಲಿ ಎರಡು ಟೆಕ್ಸ್ಟ್ ಫೀಲ್ಡ್ ಗಳನ್ನು ಸೇರಿಸುವೆವು.
06:16 ನಾವು 'Text field' ಸ್ಥಳಗಳನ್ನು ಖಾಲಿ ಬಿಡಬೇಕು.
06:20 ನಾನು ಟೆಕ್ಸ್ಟ್ ಅನ್ನು ಎಡಿಟ್ ಮಾಡುತ್ತೇನೆ ಮತ್ತು ಇಲ್ಲಿ ಇರುವ ಟೆಕ್ಸ್ಟ್ ಅನ್ನು ತೆಗೆದುಹಾಕುತ್ತೇನೆ.
06:27 ಮೌಸ್ ಅನ್ನು ಉಪಯೋಗಿಸಿ ನಾವು ಇದನ್ನು ರಿ-ಸೈಜ್ (resize) ಮಾಡೋಣ.
06:35 ಇದನ್ನು ಮಾಡಿದ ಮೇಲೆ ಈಗ ನೀವು Palette ಗೆ ಹಿಂದಿರುಗಬಹುದು ಮತ್ತು 'Button' ಅನ್ನು ಆಯ್ಕೆಮಾಡಬಹುದು.
06:42 ನಿಮ್ಮ 'frame' ನ ಕೆಳಗೆ ಬಟನ್ ಅನ್ನು ಸೇರಿಸಿ ಮತ್ತು
06:48 ಅದರ ಮೇಲೆ ರೈಟ್-ಕ್ಲಿಕ್ ಮಾಡುವುದರ ಮೂಲಕ ನೀವು ಲೇಬಲ್ ಅನ್ನು ಬದಲಾಯಿಸಬಹುದು.
06:53 'Edit Text' ಆಯ್ಕೆಯನ್ನು ಆರಿಸಿಕೊಳ್ಳಿ ಮತ್ತು ಅದನ್ನು "Get Balance" ಎಂದು ಹೆಸರಿಸಿ.
06:58 ಇದೋ, ಈಗ ನಮ್ಮ GUI ಸಿದ್ಧವಾಗಿದೆ.
07:01 ಈಗ ನಾವು 'Image' ಟ್ಯಾಬ್ ಗೆ (tab1) ಹೋಗೋಣ ಮತ್ತು ಒಂದು ಇಮೇಜನ್ನು ಸೇರಿಸೋಣ.
07:05 ಇದನ್ನು ಮಾಡಲು ನಾವು 'Palette' ಗೆ ಹಿಂದಿರುಗೋಣ
07:08 ಮತ್ತು ಇನ್ನೊಂದು 'Label' ಅನ್ನು ಆಯ್ಕೆಮಾಡಿ ಅದನ್ನು ಪ್ಯಾನೆಲ್ ನ ಮೇಲೆ ತಂದು ಇಡೋಣ.
07:13 ಈಗ, palette ನ ಕೆಳಗೆ ಇರುವ 'Properties' ವಿಂಡೋದಿಂದ 'icon' ಪ್ರಾಪರ್ಟೀಗಾಗಿ ಹುಡುಕಿ ಮತ್ತು ಇಲ್ಲಿ ಬಲಬದಿಗೆ ಇರುವ 3 ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
07:26 'icon properties' ವಿಂಡೋ ತೆರೆದುಕೊಳ್ಳುತ್ತದೆ.
07:28 ಇಲ್ಲಿ, 'External Image' ಎಂಬ ಆಯ್ಕೆಯನ್ನು ಆರಿಸಿಕೊಂಡು ಬಲಗಡೆಯ 3 ಚುಕ್ಕೆಗಳ (...) ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ.
07:35 ಮತ್ತು, ನಿಮ್ಮ ಅಪ್ಲಿಕೇಶನ್ ನಲ್ಲಿ ನಿಮಗೆ ಸೇರಿಸಬೇಕಾಗಿರುವ ಇಮೇಜ್ ಗಾಗಿ ಹುಡುಕಿ.
07:41 ನಾನು ಇಲ್ಲಿ ಇಮೇಜನ್ನು ಆಯ್ಕೆಮಾಡಿದ್ದೇನೆ. 'OK' ಮೇಲೆ ಕ್ಲಿಕ್ ಮಾಡಿ.
07:48 ಮೌಸ್ ಅನ್ನು ಬಳಸಿ ನಾವು ಇದನ್ನು ಸ್ಥಳಾಂತರ ಮಾಡೋಣ.
07:51 ನೀವು ಇಲ್ಲಿ ಲೇಬಲ್ ನ ಮೇಲೆ ಡಬಲ್-ಕ್ಲಿಕ್ ಮಾಡಿ, ಅದರ ಮೇಲಿರುವ ಟೆಕ್ಸ್ಟ್ ಅನ್ನು ತೆಗೆದುಹಾಕಬಹುದು.
07:59 ಈಗ ನಾವು ಇಮೇಜನ್ನು ಸೇರಿಸಿದ್ದೇವೆ.
08:02 ನಂತರ ನಾವು ನಮ್ಮ GUI ಗೆ ಒಂದು ಮೆನ್ಯುಅನ್ನು ಸೇರಿಸೋಣ.
08:05 'palette' ಗೆ ಹೋಗಿ ಮತ್ತು 'swing menus' ನ ಕೆಳಗೆ ಇರುವ 'Menu bar' ಆಯ್ಕೆಯನ್ನು ಆರಿಸಿಕೊಳ್ಳಿ.
08:12 'Menu Bar' ಅನ್ನು ಆಯ್ಕೆಮಾಡಿ ಮತ್ತು ಇಲ್ಲಿ, ಪ್ಯಾನೆಲ್ ನ ಮೇಲೆ ಕ್ಲಿಕ್ ಮಾಡಿ.
08:17 ಡೀಫಾಲ್ಟ್ ಆಗಿ, ಇದು ಈಗಾಗಲೇ 'File' ಮತ್ತು 'Edit' ಎಂಬ ಎರಡು ಮೆನ್ಯು ಲೇಬಲ್ ಗಳನ್ನು ಹೊಂದಿದೆ.
08:22 'Edit Text' ನ ಮೇಲೆ ಡಬಲ್-ಕ್ಲಿಕ್ ಮಾಡಿ ಮತ್ತು ಅದನ್ನು 'Help' ಎಂದು ರೀ-ನೇಮ್ (rename) ಮಾಡಿ.
08:28 ನೀವು 'File' ನ ಅಡಿಯಲ್ಲಿ ಒಂದು ಸಬ್-ಮೆನ್ಯುಅನ್ನು ಸಹ ಸೇರಿಸಬಹುದು.
08:32 ಈಗ, ಎಡಭಾಗದಲ್ಲಿರುವ 'Inspector' ಅಥವಾ 'Navigator' ನಲ್ಲಿ 'JMenu1' ನ ಮೇಲೆ ರೈಟ್-ಕ್ಲಿಕ್ ಮಾಡಿ.
08:39 'Add From Palette' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ ಮತ್ತು 'Menu Item' ಅನ್ನು ಆಯ್ಕೆಮಾಡಿ.
08:45 ಇದು ಒಂದು 'Menu Item' ಅನ್ನು ಸೇರಿಸಬೇಕು.
08:47 ನೀವು ಇದನ್ನು 'Exit' ಎಂದು ಸಹ ರೀ-ನೇಮ್ (rename) ಮಾಡಬಹುದು.
08:54 ಈಗ, ನಾವು 'File' ಮೆನ್ಯುದ ಅಡಿಯಲ್ಲಿ ಒಂದು ಸಬ್-ಮೆನ್ಯುಅನ್ನು ಸೇರಿಸಿದ್ದೇವೆ ಮತ್ತು ಆ ಮೆನ್ಯು ಐಟಂಅನ್ನು ರೀ-ನೇಮ್ ಸಹ ಮಾಡಿದ್ದೇವೆ.
09:00 ಈಗ, ನಮ್ಮ GUI ಹೆಚ್ಚು ಕಡಿಮೆ ಪೂರ್ಣಗೊಂಡಿದೆ.
09:03 ನಾವು ಈಗ ಒಂದು 'preview' ಅನ್ನು ನೋಡೋಣ.
09:05 ಮೇಲ್ಗಡೆಯ 'Preview Design' ಬಟನ್ ನ ಮೇಲೆ ಕ್ಲಿಕ್ ಮಾಡಿ.
09:09 ಇದು ನೀವು ಇಲ್ಲಿಯವರೆಗೆ ಮಾಡಿರುವುದರ ಪ್ರಿವ್ಯೂಅನ್ನು ತೋರಿಸುತ್ತದೆ.
09:12 ಇಲ್ಲಿಯ ಬಟನ್ ಗಳು ಸಧ್ಯಕ್ಕೆ ಕೆಲಸ ಮಾಡುತ್ತಿಲ್ಲ.
09:16 ಆದರೆ ಒಮ್ಮೆ ನೀವು ಕೋಡ್ ನಲ್ಲಿ ಸೇರಿಸಿದರೆ ಎಲ್ಲವೂ ಕೆಲಸ ಮಾಡತೊಡಗುತ್ತವೆ.
09:20 ನಾವು ಪ್ರಿವ್ಯೂಅನ್ನು ಮುಚ್ಚೋಣ (ಕ್ಲೋಸ್).
09:22 ಈಗ, ಕೋಡ್ ಅನ್ನು ಸೇರಿಸುವ ಮೊದಲು, ನಾವು ಇನ್ಪುಟ್ ಟೆಕ್ಸ್ಟ್ ಫೀಲ್ಡ್ ಗಳಿಗೆ ಸರಿಯಾದ ವೇರಿಯೇಬಲ್ ನೇಮ್ ಗಳನ್ನು ಕೊಡೋಣ.
09:28 'Balance' ಟ್ಯಾಬ್ ಗೆ ಹೋಗಿ. ನಾವು ಇಲ್ಲಿ ಈ ಟೆಕ್ಸ್ಟ್ ಫೀಲ್ಡ್ ಗಳಿಗೆ ಸರಿಯಾದ ವೇರಿಯೇಬಲ್ ನೇಮ್ ಗಳನ್ನು ಕೊಡೋಣ.
09:34 'inspector' ನಲ್ಲಿ, 'JTextfield1' ನ ಮೇಲೆ ರೈಟ್-ಕ್ಲಿಕ್ ಮಾಡಿ.
09:40 'Change Variable Name' ಅನ್ನು ಆಯ್ಕೆಮಾಡಿ.
09:43 ನಾವು ವೇರಿಯೇಬಲ್ ನೇಮ್ ಅನ್ನು "creditAmount" ಎಂದು ಬದಲಾಯಿಸೋಣ.
09:50 'OK' ಯ ಮೇಲೆ ಕ್ಲಿಕ್ ಮಾಡಿ.
09:53 ನೀವು ಇಲ್ಲಿ, 'Design' ಮೋಡ್ ನಲ್ಲಿ, ಟೆಕ್ಸ್ಟ್ ಫೀಲ್ಡ್ ನ ಮೇಲೆ ಸಹ ರೈಟ್-ಕ್ಲಿಕ್ ಮಾಡಬಹುದು.
09:56 'Change Variable Name' ಅನ್ನು ಆಯ್ಕೆಮಾಡಿ
10:00 ಮತ್ತು ವೇರಿಯೇಬಲ್ ನೇಮ್ ಅನ್ನು "debitAmount" ಎಂದು ಬದಲಾಯಿಸಿ.
10:04 'OK' ಯ ಮೇಲೆ ಕ್ಲಿಕ್ ಮಾಡಿ.
10:08 ನಾನು ಈ ಕೊನೆಯ ಲೇಬಲ್ ಅನ್ನು ಸಹ ಎಂದರೆ ಸ್ಟಾರ್ ಗಳಿರುವ ಟೆಕ್ಸ್ಟ್ ಫೀಲ್ಡ್ ಅನ್ನು "resultBalance" ಎಂದು ಕರೆಯುತ್ತೇನೆ.
10:16 ಮತ್ತೊಮ್ಮೆ 'Change Variable Name' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ ಮತ್ತು ವೆರಿಯೇಬಲ್ ಅನ್ನು "resultBalance" ಎಂದು ಬದಲಾಯಿಸಿ.
10:23 'OK' ಯ ಮೇಲೆ ಕ್ಲಿಕ್ ಮಾಡಿ.
10:25 ಈಗ ನಾವು ಈ ಅಪ್ಲಿಕೇಶನ್ ಅನ್ನು ಕಾರ್ಯಗತ ಮಾಡಲು ಕೋಡ್ ಅನ್ನು ನೋಡೋಣ.
10:30 ಈಗ, ಇದು ನನ್ನ ಸ್ಯಾಂಪಲ್ ಕೋಡ್ ಆಗಿದೆ.
10:32 ನನಗೆ ಇಲ್ಲಿ ಬೇಕಾಗಿರುವುದು "creditAmount" ನಿಂದ 'getText()' ;
10:37 "debitAmount" ನಿಂದ 'getText()',
10:39 ಬ್ಯಾಲನ್ಸ್ (ಬಾಕಿ) ಅನ್ನು ಕಂಡುಹಿಡಿಯುವುದು ಮತ್ತು ಕೊನೆಯದಾಗಿ "resultBalance" ನಲ್ಲಿ ಒಟ್ಟು ಮೊತ್ತವನ್ನು ಸೇರಿಸುವುದು.
10:44 ನಾವು ಇಲ್ಲಿ ಕೋಡ್ ಅನ್ನು ಕಾಪಿ ಮಾಡೋಣ ಮತ್ತು IDE ಗೆ ಹಿಂದಿರುಗೋಣ.
10:51 ಈಗ, 'Get Balance' ಬಟನ್ ನ ಮೇಲೆ ರೈಟ್-ಕ್ಲಿಕ್ ಮಾಡಿ.
10:55 'Events >> Action' ಮತ್ತು 'Action Performed' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
11:00 ಇದು, ನೀವು ಬಟನ್ ಅನ್ನು ಒತ್ತಿದ ಕೂಡಲೇ ಆಗಬೇಕಾಗಿರುವ ಕ್ರಿಯೆಯ ಸಲುವಾಗಿ ಇರುವ ಕೋಡನ್ನು ಬರೆಯಬಹುದಾದ
11:03 ಅಥವಾ ಪೇಸ್ಟ್ ಮಾಡಬೇಕಾದ ಕೋಡ್ ನ ಭಾಗಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.
11:10 ನಾನು ಕಾಪಿ ಮಾಡಿದ ಕೋಡನ್ನು ಇಲ್ಲಿ ಪೇಸ್ಟ್ ಮಾಡುತ್ತೇನೆ.
11:17 ನಾವು ಈ ಕೋಡನ್ನು ಸೇವ್ ಮಾಡೋಣ ಮತ್ತು 'Design' ಮೋಡ್ ಗೆ ಹಿಂದಿರುಗೋಣ.
11:22 ಈಗ, ನಾವು ಕೋಡ್ ನಲ್ಲಿ ಅಪ್ಲಿಕೇಶನ್ ನಿಂದ ಹೊರಗೆ ಹೋಗುವುದನ್ನು ಸೇರಿಸೋಣ.
11:25 'Menu Item >> Exit' ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'Events >> Action' ಹಾಗೂ 'Action Performed' ಅನ್ನು ಆರಿಸಿಕೊಳ್ಳಿ.
11:40 ಇದು 'Source' ಮೋಡ್ ಗೆ ಬದಲಾಯಿಸುತ್ತದೆ ಮತ್ತು ಈಗ ನಾವು ಅಪ್ಲಿಕೇಶನ್ ನಿಂದ ಯಶಸ್ವಿಯಾಗಿ ಹೊರಬರಲು ಕೋಡ್ ಅನ್ನು ಬರೆಯಬೇಕು.
11:46 ಅದು 'System.exit(1)' ಎಂದು ಆಗಿರುತ್ತದೆ.
11:53 ಈಗ ಕೋಡನ್ನು ಸೇವ್ ಮಾಡಿ ಮತ್ತು 'Design' ಮೋಡ್ ಗೆ ಹಿಂದಿರುಗಿ.
11:57 ನಾವು 'Exit' ಮೆನ್ಯು ಐಟಂಗೆ ಒಂದು ಶಾರ್ಟ್ಕಟ್ ಅನ್ನು ಸಹ ಸೇರಿಸೋಣ.
12:02 ಇಲ್ಲಿ ತೆರೆದುಕೊಂಡ ವಿಂಡೋದಲ್ಲಿ 'shortcut' ಆಯ್ಕೆಯ ಮೇಲೆ ಡಬಲ್-ಕ್ಲಿಕ್ ಮಾಡಿ.
12:07 'Q' ಹಾಗೂ 'Ctrl' ಗಳನ್ನು ಒತ್ತಿ ಮತ್ತು 'OK' ಯ ಮೇಲೆ ಕ್ಲಿಕ್ ಮಾಡಿ.
12:14 ಈಗ, ಅಪ್ಲಿಕೇಶನ್ ಅನ್ನು ಬಿಟ್ಟು ಹೊರಬರಲು 'Ctrl Q' ಅನ್ನು ನಾವು ಕೀಬೋರ್ಡ್ ಶಾರ್ಟ್ಕಟ್ ಎಂದು ಸೆಟ್ ಮಾಡಿದ್ದೇವೆ.
12:20 ಸರಿ, ನಮ್ಮ ಅಪ್ಲಿಕೇಶನ್ ಈಗ ಪೂರ್ಣಗೊಂಡಿದೆ.
12:23 ನಾವು ಈಗ ಕೀಬೋರ್ಡ್ ಮೇಲಿನ F6 ಅನ್ನು ಒತ್ತುವುದರ ಮೂಲಕ ಅಪ್ಲಿಕೇಶನ್ ಅನ್ನು 'run' ಮಾಡೋಣ.
12:30 ಇದು 'run' ಆಗಬೇಕಾಗಿರುವ 'main class' ಅನ್ನು ಈಗಾಗಲೇ ಆಯ್ಕೆಮಾಡಿದೆ.
12:33 'OK' ಯ ಮೇಲೆ ಕ್ಲಿಕ್ ಮಾಡಿ.
12:37 ಮತ್ತು, ಇದೋ ಇಲ್ಲಿದೆ ನೋಡಿ. ಇದು ನಮ್ಮ 'GUI' ಆಗಿದೆ.
12:40 ಈಗ, ನಾವು ಒಂದು ಸಲ ರನ್ ಮಾಡಿ ನೋಡೋಣ.
12:43 'Balance' ಟ್ಯಾಬ್ ಗೆ ಹೋಗಿ, 'Credit Amount' ಅನ್ನು Rs. 300/-
12:47 ಮತ್ತು 'Debit Amount' ಅನ್ನು Rs. 200 ಎಂದು ನಮೂದಿಸಿ. 'Get Balance' ಅನ್ನು ಒತ್ತಿ.
12:53 ಇದು 'Balance' ನಲ್ಲಿ ನಮಗೆ ಸರಿಯಾದ ಮೊತ್ತವನ್ನು ಕೊಡುತ್ತದೆ.
12:56 ಈಗ ಅಪ್ಲಿಕೇಶನ್ ನಿಂದ ನಾವು ಹೊರಗೆ ಹೋಗೋಣ.
12:58 ನಾನು 'File' ಮೆನ್ಯುಗೆ ಹೋಗಿ 'Exit' ನ ಮೇಲೆ ಕ್ಲಿಕ್ ಮಾಡುವೆನು.
13:02 ಕೀಬೋರ್ಡ್ ಮೇಲಿನ 'Ctrl Q' ಅನ್ನು ಒತ್ತಿ ಸಹ ನಾವು ಅಪ್ಲಿಕೇಶನ್ ಅನ್ನು ಬಿಟ್ಟುಬರಲು ಸಾಧ್ಯವಿತ್ತು.
13:08 ಈಗ, ಅಪ್ಲಿಕೇಶನ್ ಪೂರ್ಣಗೊಂಡಿದ್ದರಿಂದ ಅಸೈನ್ಮೆಂಟ್ ಅನ್ನು ನೋಡುವಾ.
13:14 ನಮ್ಮ ಕೆಲಸ 'Temperature convertor' ಎಂಬ ಅಪ್ಲಿಕೇಶನ್ ಅನ್ನು ತಯಾರಿಸುವುದು ಆಗಿದೆ.
13:18 ಹಿಂದಿನಂತೆ ಇದು -
13:21 ಒಂದು Celsius ನಿಂದ Fahrenheit ಗೆ ಮತ್ತು ಇನ್ನೊಂದು Fahrenheit ನಿಂದ Celsius ಗೆ ಪರಿವರ್ತಿಸಲು, ಹೀಗೆ ಎರಡು ಟ್ಯಾಬ್ ಗಳನ್ನು ಹೊಂದಿರಬೇಕು.
13:27 ಇದು ಒಂದು ಇನ್ಪುಟ್ ತಾಪಮಾನವನ್ನು ತೆಗೆದುಕೊಳ್ಳಬೇಕು ಮತ್ತು
13:30 ಪರಿವರ್ತಿತ ತಾಪಮಾನವನ್ನು ಪ್ರದರ್ಶಿಸಬೇಕು.
13:33 ಇದು ಮೇಲ್ಗಡೆ 'File' ಮತ್ತು 'Help' ಆಯ್ಕೆಗಳನ್ನು ತೋರಿಸುವ ಒಂದು ಮೆನ್ಯು ಬಾರ್ ಅನ್ನು ಸಹ ಹೊಂದಿರಬೇಕು.
13:38 ಮತ್ತು ಅಪ್ಲಿಕೇಶನ್ ನಿಂದ ಹೊರಹೋಗಲು, 'File' ಮೆನ್ಯುದ ಅಡಿಯಲ್ಲಿ ಕೀಬೋರ್ಡ್ ಶಾರ್ಟ್ಕಟ್ ನೊಂದಿಗೆ ಒಂದು 'Exit' ಐಟಮ್ ಇರಬೇಕು.
13:46 ನಾನು ಈಗಾಗಲೇ ಅಸೈನ್ಮೆಂಟ್ ಅನ್ನು ಮಾಡಿ ಮುಗಿಸಿದ್ದೇನೆ.
13:48 ಇದು ಹೇಗೆ ಕಾಣಬೇಕು ಎಂಬುದನ್ನು ನಾವು ನೋಡೋಣ.
13:50 ನಾನು ನನ್ನ ಅಸೈನ್ಮೆಂಟ್ ಅನ್ನು Run ಮಾಡುತ್ತೇನೆ ಮತ್ತು ಇದು ನನ್ನ GUI ಆಗಿದೆ.
13:56 ಈಗ, ನಾವು ಇನ್ಪುಟ್ temperature ಅನ್ನು '-40 Celcius' ಎಂದು ಕೊಡೋಣ ಮತ್ತು 'Get Fahrenheit' ದ ಮೇಲೆ ಕ್ಲಿಕ್ ಮಾಡೋಣ.
14:05 ಈ ಅಪ್ಲಿಕೇಶನ್, ಸರಿಯಾದ ಪರಿವರ್ತಿತ ಔಟ್ಪುಟ್ ಟೆಂಪರೇಚರ್ ಅನ್ನು ಕೊಡಬೇಕು.
14:10 ಈಗ, ನಾವು 'Exit' ಗೆ ಎಂದರೆ ಅಪ್ಲಿಕೇಶನ್ ನಿಂದ ಹೊರಗೆ ಹೋಗಲು 'Ctrl X' ಶಾರ್ಟ್ಕಟ್ ಕೀಯನ್ನು ಪ್ರಯತ್ನಿಸೋಣ.
14:18 ಹೀಗೆ, ಕೀಬೋರ್ಡ್ ಶಾರ್ಟ್ಕಟ್ ಬಳಸಿ ನಾವು ಅಪ್ಲಿಕೇಶನ್ ನಿಂದ ಯಶಸ್ವಿಯಾಗಿ ಹೊರಗೆ ಬಂದಿದ್ದೇವೆ.
14:25 ಸ್ಕ್ರೀನ್ ಮೇಲೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ.
14:29 ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
14:32 ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ವೀಡಿಯೋಅನ್ನು ಡೌನ್ಲೋಡ್ ಮಾಡಿ ನೋಡಬಹುದು.
14:37 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: * ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
14:42 * ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
14:46 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:

contact@spoken-tutorial.org

14:52 Spoken Tutorial ಪ್ರಕಲ್ಪವು Talk to a Teacher ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
14:56 ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
15:03 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken-tutorial.org/NMEICT-Intro.

15:13 ಈ ಟ್ಯುಟೋರಿಯಲ್, IT for Change ಅವರ ಕೊಡುಗೆಯಾಗಿದೆ.
15:17 ವಂದನೆಗಳು.

Contributors and Content Editors

Sandhya.np14