Scilab/C4/File-handling/Kannada

From Script | Spoken-Tutorial
Revision as of 22:09, 6 November 2017 by Sandhya.np14 (Talk | contribs)

Jump to: navigation, search
Time Narration
00:01 ಸೈಲ್ಯಾಬ್ ನಲ್ಲಿ File Handling ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
00:08 write() ಫಂಕ್ಷನ್, read() ಫಂಕ್ಷನ್, mopen() (ಎಮ್ ಓಪನ್)
00:11 ಮತ್ತುmclose() (ಎಮ್ ಕ್ಲೋಸ್) ಈ ಫಂಕ್ಷನ್ ಗಳೊಂದಿಗೆ,
00:14 ಫೈಲ್ ಹ್ಯಾಂಡ್ಲಿಂಗ್ ನ ಬಗ್ಗೆ ಕಲಿಯುವೆವು.
00:16 ವಿವರಣೆಗಾಗಿ ನಾನು ಇಲ್ಲಿ, Scilab ಆವೃತ್ತಿ 5.3.3 ಯನ್ನು ಇನ್ಸ್ಟಾಲ್ ಮಾಡಿರುವ Ubuntu Linux 12.04 ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿದ್ದೇನೆ.
00:26 ನೀವು Scilab ಅನ್ನು ಸ್ವಲ್ಪಮಟ್ಟಿಗೆ ತಿಳಿದಿರುವುದು ಅವಶ್ಯಕ.
00:29 ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ.

spoken hyphen tutorial dot org

00:36 ಈಗ ನಾವು ಸೈಲ್ಯಾಬ್ ನಲ್ಲಿ, ಫೈಲ್ ಹ್ಯಾಂಡ್ಲಿಂಗ್ ಗೆ ಉಪಯುಕ್ತವಾದ ಕೆಲವು ಫಂಕ್ಷನ್ ಗಳನ್ನು ನೋಡುವೆವು.
00:41 ಫೈಲ್ ಹ್ಯಾಂಡ್ಲಿಂಗ್-
00:44 write() ಫಂಕ್ಷನ್ ಅನ್ನು ಬಳಸಿ ಫೈಲ್ ನಲ್ಲಿ ಬರೆಯುವುದು,
00:47 read() ಫಂಕ್ಷನ್ ಅನ್ನು ಬಳಸಿ ಫೈಲ್ ನಿಂದ ಓದುವುದು,
00:51 mopen() ಫಂಕ್ಷನ್ ಅನ್ನು ಬಳಸಿ, ಈಗಾಗಲೇ ಇರುವ ಫೈಲ್ ಅನ್ನು ಓಪನ್ ಮಾಡುವುದು ಮತ್ತು
00:55 mclose() ಫಂಕ್ಷನ್ ಅನ್ನು ಬಳಸಿ, ಈಗಾಗಲೇ ತೆರೆದಿರುವ ಫೈಲ್ ಅನ್ನು ಕ್ಲೋಸ್ ಮಾಡುವುದು- ಇವುಗಳನ್ನು ಒಳಗೊಂಡಿರುತ್ತದೆ.
01:00 ನಾವು ಫೈಲ್ ನಲ್ಲಿ ಡೇಟಾವನ್ನು ಬರೆಯುವುದರಿಂದ ಪ್ರಾರಂಭಿಸೋಣ.
01:03 ಇದಕ್ಕಾಗಿ, write() ಕಮಾಂಡ್ ಅನ್ನು ಬಳಸಲಾಗುತ್ತದೆ.
01:07 ಸೈಲ್ಯಾಬ್ ಕನ್ಸೋಲ್ ವಿಂಡೋ ಗೆ ಬದಲಾಯಿಸಿ.
01:10 ನಾವು ಮೊದಲಿಗೆ, ರಾಂಡಮ್ (random) ಸಂಖ್ಯೆಗಳ ಒಂದು ಮ್ಯಾಟ್ರಿಕ್ಸ್ ಅನ್ನು ಕ್ರಿಯೇಟ್ ಮಾಡೋಣ.
01:15 ಹೀಗೆ ಟೈಪ್ ಮಾಡಿ: random underscore matrix is equal to rand into bracket 20 comma 1 close the bracket semicolon ಮತ್ತು Enter ಅನ್ನು ಒತ್ತಿ.
01:29 ಈಗ, ’ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿ’ ಯನ್ನು ಪರೀಕ್ಷಿಸಿ.
01:32 pwd ಎಂದು ಟೈಪ್ ಮಾಡಿ.
01:34 ಈ ಸಂದರ್ಭದಲ್ಲಿ, slash home slash fossee ಇದು ’ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿ’ ಆಗಿದೆ.
01:39 ಈ ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, ನೀವು ಇರುವ ಡೈರಕ್ಟರಿಯಲ್ಲಿ, ನಿಮಗೆ read & write ಪರ್ಮಿಷನ್ ಇರುವುದನ್ನು ಖಚಿತಪಡಿಸಿಕೊಳ್ಳಿ.
01:47 ಈಗ ನಾವು write ಕಮಾಂಡ್ ಅನ್ನು ಬಳಸಿ, random underscore matrix ಎಂಬ ವೇರಿಯೇಬಲ್ ನಲ್ಲಿ ಇರುವುದನ್ನು, ಒಂದು ಟೆಕ್ಸ್ಟ್ ಫೈಲ್ ನಲ್ಲಿ ಬರೆಯುವೆವು.
01:55 ಹೀಗೆ ಟೈಪ್ ಮಾಡಿ: write into bracket into quotes random dash numbers dot txt close the quotes comma random underscore matrix close the bracket ಮತ್ತು Enter ಅನ್ನು ಒತ್ತಿ.
02:18 ಈ ಫೈಲ್ ಅನ್ನು ಕ್ರಿಯೇಟ್ ಮಾಡಲಾಗಿದೆಯೇ ಎಂದು ನಾವು ನೋಡೋಣ.
02:21 ನಾನು ಸೈಲ್ಯಾಬ್ ಕಾನ್ಸೋಲ್ ವಿಂಡೋವನ್ನು ಮಿನಿಮೈಸ್ ಮಾಡುವೆನು.
02:23 ಮತ್ತು, ನನ್ನ ಕಂಪ್ಯೂಟರ್ ನಲ್ಲಿ ಕ್ರಿಯೇಟ್ ಮಾಡಿ, fossee ಡೈರಕ್ಟರಿಯಲ್ಲಿ ಸೇವ್ ಮಾಡಿರುವ ಫೈಲ್ ಅನ್ನು ಓಪನ್ ಮಾಡುವೆನು.
02:33 random underscore matrix ಎಂಬ ವೇರಿಯೇಬಲ್ ನಲ್ಲಿರುವ ಡೇಟಾಅನ್ನು, random dash numbers dot txt ಎಂಬ ಟೆಕ್ಸ್ಟ್ ಫೈಲ್ ನಲ್ಲಿ ಬರೆದಿರುವುದನ್ನು ನೀವು ನೋಡಬಹುದು.
02:42 ನಾನು ಈ ಫೈಲ್ ಅನ್ನು ಕ್ಲೋಸ್ ಮಾಡುತ್ತೇನೆ.
02:45 ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗೋಣ.
02:47 ಒಂದು ಫೈಲ್ ನಿಂದ ಡೇಟಾವನ್ನು ಹೇಗೆ ಓದುವುದು ಎಂದು ಈಗ ನಾವು ನೋಡುವೆವು.
02:50 ಇದಕ್ಕಾಗಿ, ನಾವು read ಕಮಾಂಡ್ ಅನ್ನು ಹೀಗೆ ಬಳಸುವೆವು:
02:55 ಹೀಗೆ ಟೈಪ್ ಮಾಡಿ: new underscore vector is equal to read into bracket into quote random dash numbers dot txt close the quotes comma 20 comma 1 close the bracket ಮತ್ತು Enter ಅನ್ನು ಒತ್ತಿ.
03:18 read ಕಮಾಂಡ್, ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನಿಂದ ಎಲ್ಲಾ ಡೇಟಾವನ್ನು ಓದುತ್ತದೆ.
03:23 ಈ ಸಂದರ್ಭದಲ್ಲಿ, ಇದು random dash numbers dot txt ಎಂದು ಆಗಿದೆ.
03:27 ಮತ್ತು, new underscore vector ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ.
03:31 ಡಿಸ್ಪ್ಲೇಯನ್ನು ಮುಂದುವರಿಸಲು, Enter ಅನ್ನು ಒತ್ತಿ.
03:35 ಒಂದುವೇಳೆ. ನಾವು ಮೇಲಿನ ಕಮಾಂಡ್ ಅನ್ನು ಈ ರೀತಿಯಾಗಿ ಮಾರ್ಪಡಿಸಿದರೆ:
03:39 new underscore vector is equal to read into bracket into quotes random dash numbers dot txt comma 19 comma 1
03:49 ಆಗ, read ಕಮಾಂಡ್, ಈ ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನಿಂದ, ಎಂದರೆ, random dash numbers dot txt ನಿಂದ,
03:56 19 ಡೇಟಾ ವ್ಯಾಲ್ಯು ಗಳನ್ನು ಮಾತ್ರ ಓದುತ್ತದೆ.
03:59 ಮತ್ತು, new underscore vector ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ.
04:03 ಈ ಕಮಾಂಡ್ ಅನ್ನು ಸೈಲ್ಯಾಬ್ ಕನ್ಸೋಲ್ ನಲ್ಲಿ ಕೊಟ್ಟು ಔಟ್ಪುಟ್ ಅನ್ನು ಪರಿಶೀಲಿಸಿ.
04:08 ಈಗ ನಾವು, mopen() ಫಂಕ್ಷನ್ ನ ಬಗ್ಗೆ ನೋಡೋಣ :
04:12 fd = mopen into bracket file-name comma mode
04:17 C ನಲ್ಲಿರುವ fopen ನ ಹಾಗೇ, ಮೊದಲೇ ಇರುವ ಫೈಲ್ ಅನ್ನು ಓಪನ್ ಮಾಡಲು mopen ಕಮಾಂಡ್ ಅನ್ನು ಬಳಸಲಾಗುತ್ತದೆ.
04:25 mode- ಇದು ಒಂದು ಕ್ಯಾರೆಕ್ಟರ್ ಸ್ಟ್ರಿಂಗ್ ಆಗಿದ್ದು, ಯಾವ ಕೆಲಸಕ್ಕೆ ಫೈಲ್ ಓಪನ್ ಆಗಬೇಕು ಎನ್ನುವುದನ್ನು ನಿರ್ಧರಿಸುತ್ತದೆ:
04:30 r = ರೀಡಿಂಗ್ ಗಾಗಿ, ಒಂದು ಫೈಲ್ ಅನ್ನು ಓಪನ್ ಮಾಡುತ್ತದೆ.
04:34 rb = ರೀಡಿಂಗ್ ಗಾಗಿ, ಒಂದು ಬೈನರಿ ಫೈಲ್ ಅನ್ನು ಓಪನ್ ಮಾಡುತ್ತದೆ.
04:39 rt = ರೀಡಿಂಗ್ ಗಾಗಿ, ಒಂದು ಟೆಕ್ಸ್ಟ್ ಫೈಲ್ ಅನ್ನು ಓಪನ್ ಮಾಡುತ್ತದೆ.
04:43 w = ರೈಟಿಂಗ್ ಗಾಗಿ, ಹೊಸ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ. ಅಥವಾ, ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ.
04:50 wb, ಇದು ರೈಟಿಂಗ್ ಗಾಗಿ, ಒಂದು ಹೊಸ ಬೈನರಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ. ಅಥವಾ, ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ.
04:58 wt, ಇದು, ರೈಟಿಂಗ್ ಗಾಗಿ ಟೆಕ್ಸ್ಟ್ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಅಥವಾ ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ.
05:06 a or ab, ಇದು ಅಪೆಂಡ್ ಮಾಡುತ್ತದೆ. ಎಂದರೆ, ಒಂದು ಫೈಲ್ ಅನ್ನು ಅದರ ಕೊನೆಯಲ್ಲಿ ಬರೆಯಲು ಓಪನ್ ಮಾಡುತ್ತದೆ. ಅಥವಾ, ರೈಟಿಂಗ್ ಗಾಗಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ.
05:14 r+, r+b (r ಪ್ಲಸ್, r ಪ್ಲಸ್ b ) ಫೈಲ್ ಅನ್ನು, ಅಪ್ಡೇಟ್ ಗಾಗಿ, ರೀಡಿಂಗ್ ಮತ್ತು ರೈಟಿಂಗ್ ಎರಡೂ, ಓಪನ್ ಮಾಡುತ್ತದೆ.
05:20 ಉದಾಹರಣೆಗೆ, fd underscore r is equal to mopen('random-numbers,'rt').
05:30 ಮೇಲಿನ ಕಮಾಂಡ್, 'random-numbers' ಎಂಬ ಫೈಲ್ ಅನ್ನು 'text and read-only' (ಟೆಕ್ಸ್ಟ್ ಆಂಡ್ ರೀಡ್ ಓನ್ಲಿ) ಮೋಡ್ ನಲ್ಲಿ ಓಪನ್ ಮಾಡುತ್ತದೆ.
05:37 mclose into bracket fd:
05:40 ಇದು, mopen ಅನ್ನು ಬಳಸಿ ಓಪನ್ ಮಾಡಿದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ.
05:43 ಇಲ್ಲಿ, fd ಇದು, ಓಪನ್ ಮಾಡಿದ ಫೈಲ್ ನ 'ಫೈಲ್ ಡಿಸ್ಕ್ರಿಪ್ಟರ್' ಆಗಿರುತ್ತದೆ.
05:48 fd ಯನ್ನು ಬಿಟ್ಟುಬಿಟ್ಟರೆ, mclose(), ಕೊನೆಯಲ್ಲಿ ಓಪನ್ ಮಾಡಿದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ.
05:53 ಈ ಟ್ಯುಟೋರಿಯಲ್ ನಲ್ಲಿ ಇರುವುದು ಇಷ್ಟೆ.
05:55 ನಾವು ಈ ಕೆಳಗಿನ ಫಂಕ್ಷನ್ ಗಳೊಂದಿಗೆ, ಫೈಲ್-ಹ್ಯಾಂಡ್ಲಿಂಗ್ ಅನ್ನು ಕಲಿತಿದ್ದೇವೆ :
06:02 write() ಫಂಕ್ಷನ್, read() ಫಂಕ್ಷನ್, mopen() ಮತ್ತು mclose().
06:05 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ.
06:08 ಇದು ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
06:11 ನಿಮಗೆ ಒಳ್ಳೆಯ ಬ್ಯಾಂಡ್-ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
06:14 ಸ್ಪೋಕನ್ ಟ್ಯುಟೋರಿಯಲ್ ತಂಡವು :
06:17 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ.
06:20 ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
06:23 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.

conatct@spoken-tutorial.org.

06:30 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
06:34 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
06:41 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

http://spoken-tutorial.org/NMEICT-Intro.

06:50 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
06:54 ಧನ್ಯವಾದಗಳು.

Contributors and Content Editors

Anjana310312, Sandhya.np14