Netbeans/C2/Introduction-to-Netbeans/Kannada

From Script | Spoken-Tutorial
Jump to: navigation, search
Time Narration
00:01 ನಮಸ್ಕಾರ.
00:02 Introduction to Netbeans IDE ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:06 ಈ ‘ಟ್ಯುಟೋರಿಯಲ್’ನಲ್ಲಿ, ನಾನು 'Netbeans' (ನೆಟ್ಬೀನ್ಸ್) ಜೊತೆಗೆ ಕೆಲಸ ಮಾಡುವುದರ ಬಗ್ಗೆ ನಿಮಗೆ ಪರಿಚಯಿಸುತ್ತೇನೆ.
00:13 Netbeans- ಇದು, ಒಂದು ಉಚಿತ ಮತ್ತು ಓಪನ್ ಸೋರ್ಸ್ 'ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಎನ್ವಿರಾನ್ಮೆಂಟ್' (Integrated Developement Environment) ಆಗಿದ್ದು, www.netbeans.org ನಲ್ಲಿ ಲಭ್ಯವಿದೆ.
00:23 ಇದು ವಿವಿಧ ಘಟಕಗಳನ್ನು ಒಟ್ಟುಗೂಡಿಸುವುದನ್ನು ಅನುಮತಿಸುತ್ತದೆ.
00:27 ವಿವಿಧ ಸ್ಕ್ರಿಪ್ಟಿಂಗ್ ಭಾಷೆಗಳನ್ನು ಮತ್ತು ಆಧುನಿಕ ಟೆಕ್ಸ್ಟ್ ಎಡಿಟರ್ ಗಳನ್ನು ಬೆಂಬಲಿಸುತ್ತದೆ.
00:31 ಇದು 'GUI' ಅನ್ನು ಸಹ ಒದಗಿಸುತ್ತದೆ. ಪ್ರೊಜೆಕ್ಟ್ ಗಳನ್ನು ತಯಾರಿಸಲು ಮತ್ತು ಡಿಸೈನ್ ಮಾಡಲು ಮತ್ತು ಡೇಟಾ ಬೇಸ್ ಗಳನ್ನು ಸಹ ಬೆಂಬಲಿಸುತ್ತದೆ.
00:39 ಈ ‘ಟ್ಯುಟೋರಿಯಲ್’ಅನ್ನು ಮಾಡಲು, ನಿಮಗೆ Java ಪ್ರೊಗ್ರಾಮಿಂಗ್ ಭಾಷೆಯು ತಿಳಿದಿರುವುದು ಅವಶ್ಯಕ.
00:47 ಈ ‘ಟ್ಯುಟೋರಿಯಲ್’ನಲ್ಲಿ ಪ್ರಮಾಣಿತ ಪ್ರೋಗ್ರಾಮಿಂಗ್ ಪರಿಭಾಷೆಯನ್ನು ಬಳಸಲಾಗಿದೆ.
00:52 Netbeans ಅನ್ನು ಆರಂಭಿಸಲು-
00:55 ನಾನು ಇಲ್ಲಿ Linux ಆಪರೇಟಿಂಗ್ ಸಿಸ್ಟಂ Ubuntu (ಉಬಂಟು), ಆವೃತ್ತಿ 11.04
01:00 ಮತ್ತು Netbeans IDE, ಆವೃತ್ತಿ 7.1.1 ಇವುಗಳನ್ನು ಬಳಸುತ್ತಿದ್ದೇನೆ.
01:05 ಈ ‘ಟ್ಯುಟೋರಿಯಲ್’ನಲ್ಲಿ , ನಾವು: * Netbeans ನ ಇನ್ಸ್ಟಾಲೇಶನ್ ಬಗ್ಗೆ ನೋಡುವೆವು.
01:11 * Netbeans ನ ಇಂಟರ್ಫೇಸ್ ನ ಬಗ್ಗೆ ತಿಳಿದುಕೊಳ್ಳುವೆವು ಮತ್ತು
01:16 * ಸರಳವಾದ ಒಂದು ಜಾವಾ ಪ್ರೊಜೆಕ್ಟ್ ಅನ್ನು ತಯಾರಿಸುವೆವು.
01:19 ಮೊದಲು ನಾವು 'IDE'ಯನ್ನು ಇನ್ಸ್ಟಾಲ್ ಮಾಡುವುದನ್ನು ನೋಡೋಣ.
01:22 Netbeans ಅನ್ನು netbeans.org ನಿಂದ ಡೌನ್ಲೋಡ್ ಮಾಡಬಹುದು.
01:27 ಇದು ಅಧಿಕೃತವಾದ ಮುಖ್ಯ ಸೈಟ್ ಆಗಿದೆ.
01:31 ಸೈಟ್ ನ main ಪೇಜ್ ನಲ್ಲಿ, “Download” ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
01:36 ಲೋಡ್ ಆಗುವ ಮುಂದಿನ ಪೇಜ್ ನಲ್ಲಿ,
01:39 ಕೊನೆಯ ಕಾಲಂನಲ್ಲಿರುವ “Download” ಲಿಂಕ್ ನ ಮೇಲೆ ಕ್ಲಿಕ್ ಮಾಡಿ. ಇದು, IDE ಗೆ ಅಗತ್ಯವಿರುವ 'Glassfish Server' ಹಾಗೂ ಎಲ್ಲ ಬೆಂಬಲಿತ ತಂತ್ರಜ್ಞಾನಗಳ ಡೌನ್ಲೋಡ್ ಅನ್ನು ಸಹ ಒಳಗೊಂಡಿದೆ.
01:53 'Netbeans' ನ ಇನ್ಸ್ಟಾಲೇಶನ್ ಗೆ, Java Development Kit (JDK) ನ ಇನ್ಸ್ಟಾಲೇಶನ್ ಸಹ ಅಗತ್ಯವಿದೆ. ಇದನ್ನು java.sun.com ನಿಂದ ಡೌನ್ಲೋಡ್ ಮಾಡಬಹುದು.
02:05 ಇಲ್ಲಿ, Get Java ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಮತ್ತು Netbeans ಹಾಗೂ JDK Bundle ಎರಡನ್ನೂ ಡೌನ್ಲೋಡ್ ಮಾಡಲು ಈ ಲಿಂಕ್ ಅನ್ನು ಆಯ್ಕೆಮಾಡಿ.
02:15 ಲೋಡ್ ಆಗುವ ಮುಂದಿನ ಪೇಜ್ ನಲ್ಲಿ,
02:19 ನಿಮ್ಮ ಆಪರೇಟಿಂಗ್ ಸಿಸ್ಟಂನೊಂದಿಗೆ ಹೊಂದಾಣಿಕೆಯಾಗುವ 'setup' (ಸೆಟ್-ಅಪ್) ಫೈಲ್ ಅನ್ನು ಆಯ್ಕೆಮಾಡಿ.
02:24 Ubuntu ನ ಮೇಲೆ, ಸೆಟ್-ಅಪ್ ಫೈಲ್ ಅನ್ನು .sh (ಡಾಟ್ sh) ಫೈಲ್ ಎಂದು,
02:29 ಅರ್ಥಾತ್, shell script ಫೈಲ್ ಎಂದು ಡೌನ್ಲೋಡ್ ಮಾಡಲಾಗಿದೆ.
02:33 ಟರ್ಮಿನಲ್ ಗೆ ಹೋಗಿ ಈ ಫೈಲ್ ಅನ್ನು ರನ್ ಮಾಡಿ.
02:38 ಡೌನ್ಲೋಡ್ ಮಾಡಲಾದ ಸೆಟ್-ಅಪ್ ಫೈಲ್ ಅನ್ನು ಒಳಗೊಂಡಿರುವ ವಿಂಡೋ ಅಥವಾ ಡಿರೆಕ್ಟರೀಗೆ ನೇವಿಗೇಟ್ ಮಾಡಿ (ಹೋಗಿ). ಮತ್ತು ಪ್ರಾಂಪ್ಟ್ ಇರುವಲ್ಲಿ,
02:46 "sh", ಆನಂತರ ಡೌನ್ಲೋಡ್ ಮಾಡಲಾದ ಫೈಲ್ ನ ಹೆಸರನ್ನು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
02:54 ಇದು installer ಅನ್ನು (ಇನ್ಸ್ಟಾಲರ್) ಆರಂಭಿಸುವುದು ಮತ್ತು ಇದಕ್ಕೆ ಕೆಲವು ಕ್ಷಣಗಳು ಬೇಕಾಗಬಹುದು.
03:04 ಸ್ಕ್ರೀನ್ ನ ಮೇಲೆ installer ಕಾಣಿಸಿಕೊಳ್ಳುತ್ತದೆ.
03:06 ನಿಮ್ಮ ಸಿಸ್ಟಂ ನ ಮೇಲೆ IDE ಯನ್ನು ಇನ್ಸ್ಟಾಲ್ ಮಾಡಲು, ನೀವು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಬಹುದು.
03:13 ನಾನು ಈಗ ಇನ್ಸ್ಟಾಲರ್ ನಿಂದ ಹೊರಗೆ ಬರುವೆನು.
03:17 ಈಗ ನಾವು Netbeans ವಿಂಡೋದತ್ತ ನೋಡೋಣ.
03:21 ನಿಮ್ಮ ಉಬಂಟು (Ubuntu) ಆಪರೇಟಿಂಗ್ ಸಿಸ್ಟಂನ ಮೇಲೆ Netbeans ಅನ್ನು ತೆರೆಯಲು ಅಥವಾ ಲಾಂಚ್ ಮಾಡಲು -
03:25 ಮೆನ್ಯು ಐಟಂ Applications >> Programming ಗಳಿಗೆ ಹೋಗಿ ಮತ್ತು Netbeans IDE ಐಕಾನ್ ನ ಮೇಲೆ ಕ್ಲಿಕ್ ಮಾಡಿ.
03:34 ನೀವು IDE ಯನ್ನು ಲಾಂಚ್ ಮಾಡಿದಾಗ, ಮೊದಲು ಅದು Netbeans start page ಅನ್ನು ತೆರೆಯುತ್ತದೆ.
03:41 IDE ವಿಂಡೋ-
03:43 ಮೆನ್ಯು ಬಾರ್ ನಲ್ಲಿ ಮೆನ್ಯುಗಳನ್ನು,
03:46 ಟೂಲ್-ಬಾರ್ ಗಳನ್ನು ಮತ್ತು
03:48 file ಸಿಸ್ಟಂ ವಿಂಡೋ ಗಳಂತಹ workspaceಗಳನ್ನು,
03:52 run time ವಿಂಡೋ ಹಾಗೂ
03:53 output ವಿಂಡೋ ಇವುಗಳನ್ನು ಒಳಗೊಂಡಿದೆ.
03:57 ನಿಮ್ಮ ಪ್ರೊಜೆಕ್ಟ್ ಗಳನ್ನು creat, edit, compile, run ಹಾಗೂ debug ಮಾಡಲು Netbeans ಜೊತೆಗೆ ಬಳಸುವುದಕ್ಕೆ ನಿಮಗೆ ಅಗತ್ಯವಿರುವ
04:03 ಸುಮಾರು ಎಲ್ಲ ಕಮಾಂಡ್ ಗಳನ್ನು main ಮೆನ್ಯು ಒದಗಿಸುತ್ತದೆ.
04:10 ಮೆನ್ಯು-ಬಾರ್ ನ ಕೆಳಗೆ ಇರುವ ಟೂಲ್-ಬಾರ್, ಮೆನ್ಯು ಬಾರ್ ನ ಮೇಲಿರುವ, ಆಗಾಗ್ಗೆ ಬಳಸಲಾಗುವ ಹಲವು ಕಮಾಂಡ್ ಗಳಿಗಾಗಿ ಬಟನ್ ಗಳನ್ನು ಒದಗಿಸುತ್ತದೆ.
04:18 Workspace- ಇದು, ವರ್ಕ್-ಸ್ಪೇಸ್ ವಿಂಡೋದಲ್ಲಿ ಎಡಿಟ್ ಮಾಡುವುದು, ಎಕ್ಸೀಕ್ಯೂಶನ್,
04:23 ವರ್ಕ್-ಸ್ಪೇಸ್ ನ ಕೆಳಗೆ ಇರುವ ಔಟ್ಪುಟ್ ಅಥವಾ ಡೀಬಗ್ ಮಾಡುವುದರಂತಹ ಹಲವು ಬಗೆಯ ಆಪರೇಶನ್ ಗಳನ್ನು ನಡೆಸಲು ಬಳಸಲಾಗುವ ವಿಂಡೋಗಳ ಒಂದು ಸಂಗ್ರಹವಾಗಿದೆ.
04:35 ಆಮೇಲೆ ನಾವು ಒಂದು ಸ್ಯಾಂಪಲ್ ಜಾವಾ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡೋಣ.
04:40 ಒಂದು ಜಾವಾ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಲು, File ಮೆನ್ಯು ಗೆ ಹೋಗಿ. New Project ನ ಮೇಲೆ ಕ್ಲಿಕ್ ಮಾಡಿ.
04:47 'New project' ವಿಝಾರ್ಡ್ ಬಾಕ್ಸ್ ನಲ್ಲಿ, Categories ನ ಅಡಿಯಲ್ಲಿ,
04:51 Java ಅನ್ನು ಆಯ್ಕೆಮಾಡಿ. Projects ನ ಅಡಿಯಲ್ಲಿ, Java Applications ಅನ್ನು ಆಯ್ಕೆಮಾಡಿ ಮತ್ತು Next ನ ಮೇಲೆ ಕ್ಲಿಕ್ ಮಾಡಿ.
04:58 ವಿಝಾರ್ಡ್ ನ Name and Location ಪೇಜ್ ನಲ್ಲಿ,
05:02 ನಿಮ್ಮ Project Name ಅನ್ನು "KeyboardReader" ಎಂದು ಕೊಡಿ.
05:08 Set as Main Project ಎಂಬ ಚೆಕ್-ಬಾಕ್ಸ್ ಅನ್ನು ಆಯ್ಕೆಮಾಡಿದೆ ಎಂದು ಗುರುತು ಹಾಕಿ ಮತ್ತು
05:12 Finish ನ ಮೇಲೆ ಕ್ಲಿಕ್ ಮಾಡಿ.
05:15 ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಲಾಗಿದೆ ಮತ್ತು IDE ಯಲ್ಲಿ ಅದನ್ನು ತೆರೆಯಲಾಗಿದೆ.
05:20 ಒಂದುಸಲ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಿತೆಂದರೆ, ನಿಮಗೆ IDE ವಿಂಡೋಗಳ ಎಡಭಾಗದಲ್ಲಿ, Projects ವಿಂಡೋವನ್ನು ನೋಡಲು ಸಾಧ್ಯವಾಗಬೇಕು.
05:27 ಇದು ಸೋರ್ಸ್ ಫೈಲ್ ಗಳು, ಲೈಬ್ರರೀಗಳು ಸೇರಿದಂತೆ ಪ್ರೊಜೆಕ್ಟ್ ನ ಘಟಕಗಳ ಒಂದು “ಟ್ರೀ ವ್ಯೂ” ಅನ್ನು ಒಳಗೊಂಡಿರುತ್ತದೆ. ನಿಮ್ಮ ಕೋಡ್ ಇವುಗಳನ್ನು ಅವಲಂಬಿಸಿದೆ.
05:36 ಬಲಬದಿಯಲ್ಲಿKeyboardReader.java ಎಂಬ ಒಂದು ತೆರೆದ ಫೈಲ್ ನೊಂದಿಗೆ Source Editor ಇದೆ.
05:43 ಮಾದರಿಗಾಗಿ ಈಗ, main class ನಲ್ಲಿ ನಾವು ಒಂದು ಜಾವಾ ಕೋಡ್ ಅನ್ನು ಸೇರಿಸೋಣ.
05:49 ಈ ಕೋಡ್, ಕೀಬೋರ್ಡ್ ನಿಂದ ಇನ್ಪುಟ್ ಅನ್ನು ರೀಡ್ ಮಾಡುತ್ತದೆ. ಮತ್ತು ಇನ್ಪುಟ್ ಒಂದು ಪೂರ್ಣ ಸಂಖ್ಯೆಯಾಗಿದೆಯೇ ಅಥವಾ ಫ್ಲೋಟಿಂಗ್ ಪಾಯಿಂಟ್ ಸಂಖ್ಯೆಯಾಗಿದೆಯೇ ಎಂದು ಹೇಳುವ ಔಟ್ಪುಟ್ ಅನ್ನು ಕೊಡುತ್ತದೆ.
05:58 ಈಗ, ನಾನು ಈ ಕೋಡ್ ಅನ್ನು ನನ್ನ ಕ್ಲಿಪ್-ಬೋರ್ಡ್ ನ ಮೇಲೆ ಕಾಪಿ ಮಾಡಿ, ಅದನ್ನು IDE workspace ನಲ್ಲಿ ಈಗಿರುವ ಕೋಡ್ ನ ಮೇಲೆ ಪೇಸ್ಟ್ ಮಾಡುತ್ತಿದ್ದೇನೆ.
06:11 ಮುಂದಿನ ಹಂತವು ನಮ್ಮ ಪ್ರೊಜೆಕ್ಟ್ ಅನ್ನು ರನ್ ಮಾಡುವುದಾಗಿದೆ.
06:14 Netbeans IDE ಮೇಲೆ ಯಾವುದೇ ಪ್ರೊಜೆಕ್ಟ್ ಅನ್ನು ರನ್ ಮಾಡಲು, ಮೂರು ವಿಧಾನಗಳಿವೆ.
06:20 ಮೊದಲನೆಯ ವಿಧಾನ- ನೀವು Projects window ನಲ್ಲಿ, project ನೋಡ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಕಾಂಟೆಕ್ಸ್ಚುಅಲ್ (contextual) ಮೆನ್ಯುನಿಂದ Run ಅನ್ನು ಆಯ್ಕೆಮಾಡಬಹುದು.
06:29 ಅಥವಾ, ನೀವು ಟೂಲ್-ಬಾರ್ ಗೆ ಹೋಗಿ Run Project ಬಟನ್ ನ ಮೇಲೆ ಕ್ಲಿಕ್ ಮಾಡಿ.
06:34 ಅಥವಾ, ಪ್ರೊಜೆಕ್ಟ್ ಅನ್ನು ರನ್ ಮಾಡಲು, ನೀವು ನಿಮ್ಮ ಕೀಬೋರ್ಡ್ ಮೇಲಿನ F6 ಕೀಯನ್ನು ಸಹ ಒತ್ತಬಹುದು.
06:40 ನಾನು Project ನೋಡ್ ನ ಮೇಲೆ ರೈಟ್- ಕ್ಲಿಕ್ ಮಾಡಿ, Run ಎಂಬ ಆಯ್ಕೆಯನ್ನು ಆರಿಸಿಕೊಳ್ಳುತ್ತೇನೆ.
06:45 ನೀವು ಒಂದು 'ಜಾವಾ ಅಪ್ಲಿಕೇಶನ್' ಅನ್ನು ರನ್ ಮಾಡಿದಾಗ, 'IDE', ಅಪ್ಲಿಕೇಶನ್ ಕೋಡ್ ಅನ್ನು ಬಿಲ್ಡ್ ಮಾಡಿ ಕಂಪೈಲ್ ಮಾಡುತ್ತದೆ. ಮತ್ತು, ಪ್ರೊಗ್ರಾಂಅನ್ನು Workspace ನ ಕೆಳಗೆ ಕಾಣಿಸಿಕೊಳ್ಳುವ output ವಿಂಡೋದಲ್ಲಿ ರನ್ ಮಾಡುತ್ತದೆ.
06:57 ಈಗ IDE ನನಗೆ "Enter any Number"ಎಂದು ಹೇಳುತ್ತಿದೆ.
07:01 ನಾನು ಯಾವುದೋ ಒಂದು ಸಂಖ್ಯೆಯನ್ನು ನಮೂದಿಸುತ್ತೇನೆ ಮತ್ತು 'Enter' ಅನ್ನು ಒತ್ತುತ್ತೇನೆ.
07:06 ಇನ್ಪುಟ್, ಒಂದು ಪೂರ್ಣ ಸಂಖ್ಯೆಯಾಗಿದೆಯೇ ಅಥವಾ ಫ್ಲೋಟಿಂಗ್ ಪಾಯಿಂಟ್ ಸಂಖ್ಯೆಯಾಗಿದೆಯೇ ಎಂದು ಇದು ಹೇಳುತ್ತಿದೆ.
07:11 ಈಗ ಒಂದು ಅಸೈನ್ಮೆಂಟ್ -
07:15 "KeyboardInputReader" ಪ್ರೊಜೆಕ್ಟ್ ನ ವಿಸ್ತರಣೆಯಂತೆ,
07:19 ಇನ್ನೊಂದು ಪ್ರೊಜೆಕ್ಟ್ ಅನ್ನು ಪರಿವರ್ತಿಸಿ. ಅರ್ಥಾತ್, temperatures converter application. ಇದು ಇನ್ಪುಟ್ ಟೆಂಪರೇಚರ್ ಅನ್ನು (ತಾಪಮಾನ) ತೆಗೆದುಕೊಂಡು,
07:27 ಅದನ್ನು Fahrenheit ನಿಂದ Celsius ಗೆ ಮತ್ತು ತದ್ವಿರುದ್ದವಾಗಿ ಪರಿವರ್ತಿಸುತ್ತದೆ
07:31 ಮತ್ತು ಪರಿವರ್ತಿತ ತಾಪಮಾನವನ್ನು ಔಟ್ಪುಟ್ ವಿಂಡೋದಲ್ಲಿ ತೋರಿಸುತ್ತದೆ.
07:36 ನಾನು ಈಗಾಗಲೇ ಅಸೈನ್ಮೆಂಟ್ ಅನ್ನು ತಯಾರಿಸಿದ್ದೇನೆ.
07:40 ನಾವು ಈ ಅಸೈನ್ಮೆಂಟ್ ಅನ್ನು ರನ್ ಮಾಡೋಣ.
07:47 ಈ ಪ್ರೊಗ್ರಾಂ, 'output' ವಿಂಡೋದಲ್ಲಿ ಇನ್ಪುಟ್ ಟೆಂಪರೇಚರ್ ಅನ್ನು ನಮೂದಿಸಲು ನನಗೆ ಹೇಳುತ್ತಿದೆ.
07:52 ನಾನು -40 (ಮೈನಸ್ ನಾಲ್ವತ್ತು) ಅನ್ನು ಒಂದು ಸ್ಯಾಂಪಲ್ ಟೆಂಪರೇಚರ್ ಎಂದು Fahrenheit ಗಳಲ್ಲಿ ನಮೂದಿಸುತ್ತೇನೆ. ಮತ್ತು ಇದು ಪರಿವರ್ತಿಸಲಾದ ಟೆಂಪರೇಚರ್ ಅನ್ನು ಸೆಲ್ಸಿಯಸ್ ಗಳಲ್ಲಿ ನನಗೆ ತೋರಿಸುತ್ತದೆ.
08:07 ಸ್ಕ್ರೀನ್ ಮೇಲೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ.
08:10 ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
08:14 ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:20 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: * ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
08:27 * ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:31 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:

contact@spoken-tutorial.org

08:38 'Spoken Tutorial' ಪ್ರಕಲ್ಪವು 'Talk to a Teacher' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
08:43 ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
08:49 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken-tutorial.org/NMEICT-Intro

09:00 ಈ ಟ್ಯುಟೋರಿಯಲ್, IT for Change ಅವರ ಕೊಡುಗೆಯಾಗಿದೆ. IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
09:05 Netbeans ಕಲಿಯುವುದನ್ನು ಆನಂದಿಸಿ. ವಂದನೆಗಳು.

Contributors and Content Editors

Sandhya.np14